Tag: Gym trainer

  • ಆನೇಕಲ್‌ | ಸಿನಿಮಾ ಸ್ಟೈಲ್‌ನಲ್ಲಿ ಜಿಮ್ ಟ್ರೈನರ್ ಮೇಲೆ ಡೆಡ್ಲಿ ಅಟ್ಯಾಕ್

    ಆನೇಕಲ್‌ | ಸಿನಿಮಾ ಸ್ಟೈಲ್‌ನಲ್ಲಿ ಜಿಮ್ ಟ್ರೈನರ್ ಮೇಲೆ ಡೆಡ್ಲಿ ಅಟ್ಯಾಕ್

    ಆನೇಕಲ್: ಜಿಮ್‌ಗೆ (Gym) ನುಗ್ಗಿ ಟ್ರೈನರ್ ಮೇಲೆ ಐವರು ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ (Anekal) ಬಳಿ ಸೆ.23 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆನೇಕಲ್ ಪಟ್ಟಣ ನಿವಾಸಿ ಸಂದೀಪ್ ಹಲ್ಲೆಗೊಳಗಾದ ಜಿಮ್ ಟ್ರೈನರ್. ಅರುಣ್, ಗೌತಮ್, ಅನುಷಾ, ಮೇಘನಾ ಸೇರಿದಂತೆ ಇತರರು ಹಲ್ಲೆ ಮಾಡಿದ ಆರೋಪಿಗಳು ಎನ್ನಲಾಗಿದೆ. ಇದನ್ನೂ ಓದಿ: ಫಿಲಿಪಿನ್ಸ್‌ನಲ್ಲಿ ಪ್ರಬಲ ಭೂಕಂಪ – 31 ಮಂದಿ ಸಾವು

    ಸಂದೀಪ್, ಹೆಬ್ಬಗೋಡಿಯ ಅನಂತನಗರದ ರಿಪ್ಡ್ ಜಿಮ್‌ನಲ್ಲಿ ಟ್ರೈನರ್ ಆಗಿದ್ದ. ಅನುಷಾ ಎಂಬ ಯುವತಿಯು ಜಿಮ್‌ನಲ್ಲಿ ಸಂದೀಪ್ ಕ್ಲೈಂಟ್‌ ಆಗಿದ್ದಳು. ಇಬ್ಬರು ಸ್ನೇಹಿತರಾಗಿ ವಾಟ್ಸಾಪ್‌ನಲ್ಲಿ ಚಾಟಿಂಗ್ ಕೂಡ ಮಾಡುತ್ತಿದ್ದರು.

    ಯುವತಿಯ ಸಹೋದರರಾದ ಗೌತಮ್, ಅರುಣ್ ಆಕೆಯ ಮೊಬೈಲ್ ಚೆಕ್ ಮಾಡಿದ್ದರು. ಈ ವೇಳೆ ಯುವತಿಯ ಮೊಬೈಲನ್ನು ಹ್ಯಾಕ್ ಮಾಡಲಾಗಿದೆ ಎಂದಿದ್ದರು. ಬಳಿಕ ಜಿಮ್‌ಗೆ ನುಗ್ಗಿದ ಅರುಣ್, ಗೌತಮ್, ಅನುಷಾ, ಮೇಘನಾ ಸೇರಿ ಇತರರು ಸಂದೀಪ್ ಮೇಲೆ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

    ಗಂಭೀರ ಗಾಯಗೊಂಡ ಸಂದೀಪ್‌ನನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಹಲ್ಲೆಯ ದೃಶ್ಯವು ಜಿಮ್‌ನ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

  • ವೀಡಿಯೋ ಕಾಲ್‍ನಲ್ಲಿ ಪತ್ನಿಗೆ ಹೆದರಿಸಲು ಹೋಗಿ ನೇಣಿಗೆ ಬಲಿಯಾದ ಜಿಮ್ ಟ್ರೈನರ್

    ವೀಡಿಯೋ ಕಾಲ್‍ನಲ್ಲಿ ಪತ್ನಿಗೆ ಹೆದರಿಸಲು ಹೋಗಿ ನೇಣಿಗೆ ಬಲಿಯಾದ ಜಿಮ್ ಟ್ರೈನರ್

    ಬೆಂಗಳೂರು: ಪತ್ನಿಗೆ ವೀಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಲು ಯತ್ನಿಸಿದ ಜಿಮ್ ಟ್ರೈನರ್ (Gym Trainer) ಸಾವಿಗೀಡಾದ ಘಟನೆ ನಗರದ ಬಾಗಲಗುಂಟೆಯಲ್ಲಿ (Bagalakunte) ನಡೆದಿದೆ.

    ಮೃತನನ್ನು ಬಿಹಾರ (Bihar) ಮೂಲದ ಅಮಿತ್ ಕುಮಾರ್ (28) ಎಂದು ಗುರುತಿಸಲಾಗಿದೆ. ಸುಮಾರು ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದ ಅಮಿತ್, ಹಾಸನ ಮೂಲದ ಯುವತಿಯನ್ನ ಮದುವೆಯಾಗಿದ್ದ. ಇತ್ತೀಚೆಗೆ ಪತ್ನಿ ಹಾಗೂ ಅಮಿತ್ ನಡುವೆ ಗಲಾಟೆ ನಡೆದು, ಆಕೆ ತವರು ಮನೆ ಸೇರಿದ್ದಳು. ಇದರಿಂದ ಬೇಸತ್ತ ಅಮಿತ್ ಆಕೆಗೆ ವೀಡಿಯೋ ಕಾಲ್ ಮಾಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಲು ಮುಂದಾಗಿದ್ದಾನೆ. ಈ ವೇಳೆ ಮೊಬೈಲ್ ಕೆಳಗೆ ಬಿದ್ದಿದ್ದು, ನೇಣು ಬಿಗಿದುಕೊಂಡಿದೆ. ಇದರಿಂದ ಆತ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮನೆಯ ಬಾತ್‌ ರೂಂನಲ್ಲಿ ಯುವತಿ ಅನುಮಾನಾಸ್ಪದ ಸಾವು

    ಕಳೆದ ಮೂರು ವರ್ಷಗಳ ಹಿಂದೆ ಅಮಿತ್ ಯುವತಿಯನ್ನು ಮದುವೆಯಾಗಿದ್ದ. ಮೂರು ತಿಂಗಳ ಹಿಂದೆ ಅಮಿತ್ ಪತ್ನಿ ನಸಿರ್ಂಗ್ ಕೆಲಸಕ್ಕೆ ಸೇರಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಈ ಹಿಂದೆ ಜಗಳ ನಡೆದಿತ್ತು. ಇದಾದ ಬಳಿ ಆಕೆ ತವರು ಮನೆ ಸೇರಿದ್ದಳು. ಕಳೆದ ವಾರ ಆಕೆಯನ್ನು ಕರೆದುಕೊಂಡು ಬಂದಿದ್ದ ಅಮಿತ್ ಮತ್ತೆ ಇದೇ ವಿಚಾರಕ್ಕೆ ಗಲಾಟೆ ಮಾಡಿದ್ದ. ಇದರಿಂದ ಮನನೊಂದ ಮಹಿಳೆ ಮರಳಿ ತವರು ಮನೆಗೆ ಹೋಗಿದ್ದಳು.

    ಘಟನಾ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಉಗ್ರ ಕೃತ್ಯಕ್ಕೆ ಸಹಕಾರ – ನಾಪತ್ತೆಯಾಗಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್‌

  • ಕುರ್ಚಿಯಲ್ಲಿ ಕುಳಿತಿದ್ದ ಜಿಮ್ ಟ್ರೈನರ್ ಕುಸಿದು ಬಿದ್ದು ಸಾವು

    ಕುರ್ಚಿಯಲ್ಲಿ ಕುಳಿತಿದ್ದ ಜಿಮ್ ಟ್ರೈನರ್ ಕುಸಿದು ಬಿದ್ದು ಸಾವು

    ಲಕ್ನೋ: ಜಿಮ್ ಟ್ರೈನರ್‌ಗೆ (Gym Trainer) ಕುರ್ಚಿಯ (Chair) ಮೇಲೆ ಕುಳಿತಿದ್ದಾಗ ಹೃದಯಾಘಾತವಾಗಿ (Heart Attack) ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಆದಿಲ್ (33) ಮೃತ ವ್ಯಕ್ತಿ. ಈತ ಗಾಜಿಯಾಬಾದ್‍ನ ಶಾಲಿಮಾರ್ ಗಾರ್ಡನ್ ಪ್ರದೇಶದಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಪ್ರತಿದಿನ ವ್ಯಾಯಾಮ ಹಾಗೂ ಜಿಮ್‍ನಲ್ಲಿ ಅನೇಕ ಕಸರತ್ತುಗಳನ್ನು ಮಾಡುತ್ತಿದ್ದ. ಆದರೆ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಆದರೂ ಆದಿಲ್ ಜಿಮ್‍ಗೆ ಹೋಗುವುದನ್ನು ನಿಲ್ಲಿಸಿರಲಿಲ್ಲ. ಇದನ್ನೂ ಓದಿ: ಹಲಾಲ್ ಮುಕ್ತ ದೀಪಾವಳಿ ಅಭಿಯಾನ – ಮೆಕ್ಡೊನಾಲ್ಡ್, ಕೆಎಫ್‌ಸಿ, ಪಿಜ್ಜಾ ಹಟ್‌ಗೆ ಬಾಯ್ಕಾಟ್

    crime

    ಇತ್ತೀಚೆಗಷ್ಟೇ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಮುಂದಾಗಿದ್ದ ಆತ, ಶಾಲಿಮಾರ್ ಗಾರ್ಡನ್‍ನಲ್ಲಿ ಕಚೇರಿ ತೆರೆದಿದ್ದ. ಕಚೇರಿಯಲ್ಲಿ ಕುಳಿತಿದ್ದಾಗಲೇ ಆದಿಲ್‍ಗೆ ಹೃದಯಾಘಾತವಾಗಿತ್ತು. ತಕ್ಷಣ ಆತನ ಸಹಾಯಕರು ಆದಿಲ್‍ನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದರೂ, ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಈ ಘಟನೆ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:  ದಾಂಡಿಯಾ ನೃತ್ಯ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ವ್ಯಕ್ತಿ ಸಾವು

    Live Tv
    [brid partner=56869869 player=32851 video=960834 autoplay=true]

  • ಜಿಮ್‍ನಲ್ಲೇ ಜಿಮ್ ಟ್ರೈನರ್ ಆತ್ಮಹತ್ಯೆ

    ಜಿಮ್‍ನಲ್ಲೇ ಜಿಮ್ ಟ್ರೈನರ್ ಆತ್ಮಹತ್ಯೆ

    – ಮಿಸ್ಟರ್ ಕೊಪ್ಪ ದೇಹದಾಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

    ಚಿಕ್ಕಮಗಳೂರು: 26 ವರ್ಷದ ಜಿಮ್ ಟ್ರೈನರ್ ಜಿಮ್‍ನಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.

    ಮೃತನನ್ನ ಜಯಪುರ ಸಮೀಪದ ದೂಬ್ಳ ಗ್ರಾಮದ ಸುನಿಲ್ ಎಂದು ಗುರುತಿಸಲಾಗಿದೆ. ಮೃತ ಸುನಿಲ್ ಜಯಪುರದಲ್ಲಿ ಜಿಮ್ ಇಟ್ಟುಕೊಂಡು, 30 ರಿಂದ 40 ಜನ ಯುವಕರಿಗೆ ಜಿಮ್ ಬಗ್ಗೆ ಟ್ರೈನಿಂಗ್ ಕೊಡುತ್ತಿದ್ದ. ಕಳೆದ ನಾಲ್ಕೈದು ತಿಂಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಜಿಮ್ ಕ್ಲೋಸ್ ಮಾಡಲಾಗಿತ್ತು. ಆದರೆ ಸುನೀಲ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಎಂದು ಹೇಳಲಾಗುತ್ತಿದೆ.

    ಅಷ್ಟೇ ಅಲ್ಲದೇ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸಲು ಜಿಮ್ ಟ್ರೈನರ್ ಸುನಿಲ್ ಕಳೆದ ಮೂರು ತಿಂಗಳಿಂದ ಆಟೋ ಓಡಿಸುತ್ತಿದ್ದನು. ಆರ್ಥಿಕ ನಷ್ಟ ಹಾಗೂ ಕಷ್ಟದಿಂದ ಮಾನಸಿಕವಾಗಿ ಕುಗ್ಗಿದ್ದರಿಂದ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.

    ಜಿಮ್ ಟ್ರೈನರ್ ಸುನಿಲ್ ಆರೋಗ್ಯವಾಗಿ ಕಟ್ಟುಮಸ್ತಾಗಿದ್ದ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ದೇಹದಾಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದನು. ಕಳೆದ ವರ್ಷ ಮಿಸ್ಟರ್ ಕೊಪ್ಪ ದೇಹದಾಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಮಿಸ್ಟರ್ ಕೊಪ್ಪ ಎಂಬ ಕೀರ್ತಿಗೂ ಪಾತ್ರನಾಗಿದ್ದನು. ಇದೀಗ 26ನೇ ವರ್ಷಕ್ಕೆ ಆತ್ಮಹತ್ಯೆಗೆ ಶರಣಾಗಿರೋದು ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ.

    ಘಟನೆ ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

  • ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‌ನನ್ನು ಕೊಲೆಗೈದಿದ್ದ ಆರೋಪಿಗಳು ಅಂದರ್

    ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‌ನನ್ನು ಕೊಲೆಗೈದಿದ್ದ ಆರೋಪಿಗಳು ಅಂದರ್

    ಬೆಂಗಳೂರು: ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‌ನನ್ನು ಬರ್ಬರ ಹತ್ಯೆಗೈದಿದ್ದ ಆರೋಪಿಗಳನ್ನು ಆನೇಕಲ್ ತಾಲೂಕಿನ ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.

    ಕಲ್ಕೆರೆಯ ಪವನ್, ಪ್ರವೀಣ್, ಮನೋಜ್, ಅಕ್ಷಯ್, ಯೋಗೇಶ್, ಗೋವಿಂದ್, ವೆಂಕಟೇಶ್, ರಾಜಶೇಖರ್ ಬಂಧಿತ ಆರೋಪಿಗಳು. ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ನಿವಾಸಿ ಕಿರಣ್ ಅಲಿಯಾಸ್ ಪುಟ್ಟ (27) ಕೊಲೆಯಾದ ಜಿಮ್ ಟ್ರೈನರ್. ಕಿರಣ್ ರಾಮಸಂದ್ರದಲ್ಲಿ ಜಿಮ್ ಟ್ರೈನರ್ ಆಗಿದ್ದ.

    ಯುವತಿಯ ವಿಚಾರದಲ್ಲಿ ಕಿರಿಕ್ ಉಂಟಾಗಿತ್ತು. ಇತ್ತ ಕಲ್ಕೆರೆಯ ಪವನ್, ಪ್ರವೀಣ್ ಹಾಗೂ ಅವರ ಸ್ನೇಹಿತರು ಕಿರಣ್ ಹತ್ಯೆಗೆ ಪ್ಲಾನ್ ನಡೆಸಿತ್ತು. ಇದೇ ಸಂದರ್ಭದಲ್ಲಿ ಯುವತಿಯು ಪವನ್ ಗುಂಪಿನ ಮೊರೆ ಹೋಗಿದ್ದಳು. ಹೀಗಾಗಿ ಜಗಳ ಬಗೆ ಹರಿಸಬೇಕು ನೀನು ಬಾ ಎಂದು ಆರೋಪಿಗಳು ಕಿರಣ್‍ನನ್ನು ಕರೆದಿದ್ದರು.

    ಕಿರಣ್ ಜೂನ್ 18ರಂದು ನ್ಯಾಯ ಪಂಚಾಯ್ತಿಗೆ ಹೋಗಿದ್ದಾಗ ಮಾತಿಗೆ ಮಾತು ಬೆಳೆದಿತ್ತು. ಇದರಿಂದ ಕೋಪಗೊಂಡ ಗುಂಪು ಕಿರಣ್ ಮೇಲೆ ಲಾಗು ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಆರೋಪಿಗಳು ಸ್ಕೂಟರ್ ಹಾಗೂ ಆಟೋದಲ್ಲಿ ಬಂದು ಕೃತ್ಯ ಎಸಗಿರುವ ಮಾಹಿತಿ ಲಭಿಸಿತ್ತು. ಬಳಿಕ ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು ಇಂದು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಎರಡು ಆಟೋ ಹಾಗೂ ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ.

  • ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‌ನ ಬರ್ಬರ ಹತ್ಯೆ

    ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‌ನ ಬರ್ಬರ ಹತ್ಯೆ

    ಬೆಂಗಳೂರು: ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‍ನನ್ನು ಬರ್ಬರ ಹತ್ಯೆಗೈದ ಘಟನೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಬಳಿಯ ರಾಮಸಂದ್ರದಲ್ಲಿ ನಡೆದಿದೆ.

    ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ನಿವಾಸಿ ಕಿರಣ್ ಅಲಿಯಾಸ್ ಪುಟ್ಟ (27) ಕೊಲೆಯಾದ ವ್ಯಕ್ತಿ ಜಿಮ್ ಟ್ರೈನರ್. ಕಿರಣ್ ರಾಮಸಂದ್ರದಲ್ಲಿ ಜಿಮ್ ಟ್ರೈನರ್ ಆಗಿದ್ದ.

    ಪ್ರೇಮಿಗಳಿಬ್ಬರ ವಿಚಾರದಲ್ಲಿ ಕಿರಿಕ್ ಉಂಟಾಗಿತ್ತು. ಇತ್ತ ಕಲ್ಕೆರೆ ಭಾಗದ ಯುವಕರ ಗುಂಪೊಂದು ಕಿರಣ್ ಹತ್ಯೆಗೆ ಪ್ಲಾನ್ ನಡೆಸಿತ್ತು. ಇದೇ ಸಂದರ್ಭದಲ್ಲಿ ಪ್ರೇಮಿಗಳು ಆ ಗುಂಪಿನವರ ಮೊರೆ ಹೋಗಿದ್ದರು. ಹೀಗಾಗಿ ಪ್ರೇಮಿಗಳ ಜಗಳ ಬಗೆ ಹರಿಸಬೇಕು ನೀನು ಬಾ ಎಂದು ದುಷ್ಕರ್ಮಿಗಳು ಕಿರಣ್‍ನನ್ನು ಕರೆದಿದ್ದರು.

    ಕಿರಣ್ ಇಂದು ನ್ಯಾಯ ಪಂಚಾಯ್ತಿಗೆ ಹೋಗಿದ್ದಾಗ ಮಾತಿಗೆ ಮಾತು ಬೆಳೆದೆ. ಇದರಿಂದ ಕೋಪಗೊಂಡ ಗುಂಪು ಕಿರಣ್ ಮೇಲೆ ಲಾಗು ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಪ್ರೇಮಿಗಳನ್ನು ವಶಕ್ಕೆ ಪಡೆದು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಫಿಲಂ ಡೈಲಾಗ್ ಹೇಳುತ್ತಲೇ ತಂದೆಯ ಮರ್ಮಾಂಗ ಕತ್ತರಿಸಿ, ಕೊಚ್ಚಿ ಕೊಲೆಗೈದ ಮಗ

    ಫಿಲಂ ಡೈಲಾಗ್ ಹೇಳುತ್ತಲೇ ತಂದೆಯ ಮರ್ಮಾಂಗ ಕತ್ತರಿಸಿ, ಕೊಚ್ಚಿ ಕೊಲೆಗೈದ ಮಗ

    ಮುಂಬೈ: ಜಿಮ್ ಟ್ರೈನರ್ ಒಬ್ಬ ಫಿಲಂ ಡೈಲಾಗ್ ಹೇಳುತ್ತಲೇ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

    ನಾಗ್ಪುರದ ಹುಡ್ಕೇಶ್ವರ ಪ್ರದೇಶದ ನಿವಾಸಿ ವಿಜಯ್ (55) ಕೊಲೆಯಾದ ತಂದೆ. ವಿಕ್ರಾಂತ್ ಪಿಲ್ಲೆವಾರ್ (25) ಕೊಲೆಗೈದ ಆರೋಪಿ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ನಾಗ್ಪುರದ ಜನರನ್ನು ಬೆಚ್ಚಿಬೀಳಿಸಿದೆ.

    ಆರೋಪಿ ಕುಟುಂಬದ ಹೇಳಿಕೆ ಪ್ರಕಾರ, “ವಿಕ್ರಾಂತ್ ವಿನಾಕಾರಣ ಏಕಾಏಕಿ ಕೋಪಗೊಂಡು ತಂದೆ ವಿಜಯ್ ಕುತ್ತಿಯನ್ನು ಬಲವಾಗಿ ಕಚ್ಚಿದ್ದರಿಂದ ರಕ್ತಸ್ರಾವ ಆರಂಭವಾಯಿತು. ನಂತರ ತಂದೆಯನ್ನು ಮನೆಯ ಮೇಲೆ ಎಳೆದುಕೊಂಡು ಹೋಗಿ ಮರ್ಮಾಂಗವನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ಅಷ್ಟಕ್ಕೆ ಬಿಡದೇ ಕೊಚ್ಚಿ ಕೊಚ್ಚಿ ಕೊಲೆಗೈದಿದ್ದಾನೆ” ಎಂದು ನಾಗ್ಪುರ ಪೊಲೀಸರು ತಿಳಿಸಿದ್ದಾರೆ.

    “ಜಿಮ್ ತರಬೇತುದಾರ ವಿಕ್ರಾಂತ್ ತಂದೆಯನ್ನು ಕೊಲೆ ಮಾಡುವಾಗ ಹಿಂದಿ ಸಿನಿಮಾದ ಟೈಲಾಗ್ ಹೇಳುತ್ತಲೇ ಇದ್ದ. ಆ ಸಮಯದಲ್ಲಿ ವಿಕ್ರಾಂತ್ ಕ್ರೌರ್ಯವು ಹೇಳಲು ಸಾಧ್ಯವಾಗದ ರೀತಿಯಲ್ಲಿತ್ತು. ಈ ವೇಳೆ ನಾವು ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದಕ್ಕೆ ನಮ್ಮನ್ನೇ ಬೆದರಿಸಿದ್ದ” ಎಂದು ಆರೋಪಿಯ ತಾಯಿ ಮತ್ತು ಸಹೋದರಿ ಪೊಲೀಸರಿಗೆ ದೂರಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆತನನ್ನು ಬಂಧಿಸಲು ಹರಸಾಹಸಪಟ್ಟರು. ಆತನನ್ನು ಮನೆಯಿಂದ ಕೆಳಗಿಳಿಸಲು ಮತ್ತು ಬಂಧಿಸಲು ಐದು ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿ ಕೊನೆಗೆ ಬಂಧಿಸಿದ್ದಾರೆ ಎಂದು ಹುಡ್ಕೇಶ್ವರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜ್‍ಕಮಲ್ ವಾಘಮರೆ ಹೇಳಿದ್ದಾರೆ.

  • ತೂಕ ಇಳಿಸಲು ನಿಷೇಧಿತ ಮಾತ್ರೆ ಸೇವನೆ – 22 ವರ್ಷದ ಡ್ಯಾನ್ಸರ್ ಸಾವು

    ತೂಕ ಇಳಿಸಲು ನಿಷೇಧಿತ ಮಾತ್ರೆ ಸೇವನೆ – 22 ವರ್ಷದ ಡ್ಯಾನ್ಸರ್ ಸಾವು

    – ಮಾತ್ರೆ ಸೇವಿಸಿದ ಕೆಲ ಕ್ಷಣದಲ್ಲೇ ವಾಂತಿ

    ಮುಂಬೈ: ತೂಕ ಇಳಿಸಲು ನಿಷೇಧಿತ ಮಾತ್ರೆ ಸೇವನೆ ಮಾಡಿ 22 ವರ್ಷದ ಡ್ಯಾನ್ಸರ್, ಜಿಮ್ ಟ್ರೈನರ್ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಮೃತ ಡ್ಯಾನ್ಸರನ್ನು ಮೇಘನಾ ದೇವಗಡ್ಕರ್ (22) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಡ್ಯಾನ್ಸರ್ ಮತ್ತು ಜಿಮ್ ಟ್ರೈನರ್ ಆಗಿದ್ದ ಈಕೆ ತೂಕ ಇಳಿಸಲು ನಿಷೇಧಿತ ಡೈನಿಟ್ರೋಫೆನಾಲ್ ಎಂಬ ಮಾತ್ರೆ ಸೇವಿಸಿದ್ದಾರೆ. ಮಾತ್ರೆ ಸೇವಿಸಿದ ಕೆಲ ಗಂಟೆಯೊಳಗೆ ಸಾವನ್ನಪ್ಪಿದ್ದಾರೆ.

    ಮೇಘನಾ ಇಂದು ಬೆಳಗ್ಗೆ ಎಂದಿನಂತೆ ತಾನು ಹೊಸದಾಗಿ ಟ್ರೈನರ್ ಆಗಿ ಸೇರಿದ್ದ ಜಿಮ್‍ಗೆ ಬಂದು ವರ್ಕೌಟ್ ಆರಂಭಿಸುವ ಮೊದಲು ಈ ಮಾತ್ರೆಯನ್ನು ತೆಗೆದುಕೊಂಡಿದ್ದಾರೆ. ಅದನ್ನು ಸೇವಿಸಿದ ಕೆಲ ಕ್ಷಣದಲ್ಲಿ ಅವರು ವಾಂತಿ ಮಾಡಲು ಶುರು ಮಾಡಿದ್ದಾರೆ. ಇದಾದ ನಂತರ ಆಕೆಯನ್ನು ಜಿಮ್ ನಲ್ಲಿ ಇದ್ದ ಕೆಲವರು ಅಲ್ಲಿಯೇ ಸ್ಥಳೀಯ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ.

    ಮೇಘನಾಳನ್ನು ಪರೀಕ್ಷಿಸಿದ ವೈದ್ಯರು ನಂತರ ಲೈಫ್‍ಲೈನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಆದರೆ ಅಲ್ಲಿನ ವೈದ್ಯರು ಇಲ್ಲಿ ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದು ಸಿಯಾನ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸಿಯಾನ್ ಆಸ್ಪತ್ರೆ ವೈದ್ಯರು ಆಕೆಯನ್ನು ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಿದ್ದಾರೆ. ಆದರೆ ಸ್ವಲ್ಪ ಸಮಯದ ಕಾಲ ಐಸಿಯುವಿನಲ್ಲಿ ಇದ್ದ ಮೇಘನಾ ಅಲ್ಲೇ ಅಧಿಕ ರಕ್ತದೊತ್ತಡದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯರು, ನಿಷೇಧಿತ ಮಾತ್ರೆ ಸೇವಿಸಿದ ನಂತರ ಮೇಘನಾ ಹೈಪರ್ಥರ್ಮಿಯಾದಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ. ಈ ಮಾತ್ರೆ ಸೇವನೆಯಿಂದ ಅವರ ದೇಹದ ಉಷ್ಣತೆಯನ್ನು ಸಾಮಾನ್ಯಕ್ಕಿಂತ ಜಾಸ್ತಿ ಮಾಡಿದೆ. ಹೀಗಾಗಿ ಅವರ ದೇಹದಲ್ಲಿ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ತೀವ್ರವಾಗಿ ಹೆಚ್ಚಾಗಿದ್ದು, ಮೇಘನಾ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

    ಸಾಯುವುದಕ್ಕೂ ಮುನ್ನ ಮೇಘನಾ ಆಸ್ಪತ್ರೆಗೆ ಬಂದ ಪೊಲೀಸರಿಗೆ ನಾನು ತೂಕ ಕಮ್ಮಿ ಮಾಡಿಕೊಳ್ಳಲು ಡೈನಿಟ್ರೋಫೆನಾಲ್ ಮಾತ್ರೆಯನ್ನು ಸೇವಿಸಿದ್ದೆ ಎಂದು ಮಾಹಿತಿ ನೀಡಿದ್ದಾಳೆ. ಸದ್ಯ ಈ ಬಗ್ಗೆ ನೌಪಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಷೇಧಿತ ಮಾತ್ರೆ ಮೇಘನಾ ಅವರಿಗೆ ಹೇಗೆ ದೊರಕಿದೆ ಎಂದು ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ಜಿಮ್ ಟ್ರೈನರ್‌ನಿಂದ  ಮೂವರು ಹುಡುಗಿಯರ ಬಾಳು ಹಾಳು!

    ಜಿಮ್ ಟ್ರೈನರ್‌ನಿಂದ ಮೂವರು ಹುಡುಗಿಯರ ಬಾಳು ಹಾಳು!

    – ಜಿಮ್ ತರಬೇತಿಗೆ ಬಂದವಳನ್ನ ಗರ್ಭಿಣಿ ಮಾಡಿ, ಮತ್ತೊಬ್ಬಳನ್ನ ಮದುವೆಯಾದ

    ಚಿಕ್ಕಬಳ್ಳಾಪುರ: ಜಿಮ್‍ಗೆ ಬರುತ್ತಿದ್ದ ಯುವತಿಯನ್ನು ಪ್ರೀತಿಸಿ, ಮೋಸ ಮಾಡಿ ಜೈಲು ಸೇರಿದ್ದ ಜಿಮ್ ಟ್ರೈನರ್ ಕಂ ಮಾಲೀಕನ ಕೃತ್ಯಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಅವನ ಮೋಸಕ್ಕೆ ಓರ್ವ ಯುವತಿ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಬುಲೆಟ್ ಜಿಮ್ ಮಾಲೀಕ ಗೌತಮ್ ಜೈಲು ಸೇರಿದ ಆರೋಪಿ. ದೈಹಿಕ ಫಿಟ್‍ನೆಸ್‍ಗಾಗಿ ಜಿಮ್‍ಗೆ ಬರುತ್ತಿದ್ದ ಶ್ರೀಮಂತ ಮನೆತನದ ಚೆಂದದ ಯುವತಿಯರನ್ನು ಗೌತಮ್ ಟಾರ್ಗೆಟ್ ಮಾಡುತ್ತಿದ್ದ. ಪ್ರೀತಿ, ಪ್ರೇಮ ಅಂತ ಅವರೊಂದಿಗೆ ಜೊತೆ ಚಕ್ಕಂದವಾಡುತ್ತಿದ್ದ. ಜಿಮ್ ಟ್ರೈನರ್ ಕೃತ್ಯಕ್ಕೆ ಒಬ್ಬರಲ್ಲ, ಇಬ್ಬರಲ್ಲ ಮೂವರು ಹುಡುಗಿಯರ ಬಾಳು ಈಗ ಹಾಳಾಗಿದೆ.

    ಜಿಮ್‍ಗೆ ಬರುತ್ತಿದ್ದ ಯುವತಿಯನ್ನೇ ಪ್ರೀತಿ ಪ್ರೇಮ ಅಂತ ನಾಟಕವಾಡಿ, ಆವರ ಜೊತೆ ಕಾಮದಾಟ ನಡೆಸಿದ್ದಾನೆ. ಇದರಿಂದ ಜಿಮ್ ತರಬೇತಿಗೆ ಬರುತ್ತಿದ್ದ ಯುವತಿಯೊರ್ವಳು ಗರ್ಭಿಣಿ ಆಗಿದ್ದು, ಗೌತಮ್ ವಿರುದ್ಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಕಳೆದ ವಾರವಷ್ಟೇ ದೂರು ನೀಡಿದ್ದಾಳೆ.

    ಗೌತಮ್ ನನ್ನನ್ನು ಪ್ರೀತಿಸುವುದಾಗಿ ಹೇಳಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿ ಮಾಡಿದ್ದಾನೆ. ಆದರೆ ಈಗ ಜಿಮ್‍ಗೆ ಬರುತ್ತಿದ್ದ ಮತ್ತೋರ್ವ ಯುವತಿ ಜೊತೆ ಮದುವೆ ಆಗುತ್ತಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.

    ಯುವತಿ ದೂರು ದಾಖಲಿಸಿಕೊಂಡ ಪೊಲೀಸರು ಗೌತಮ್‍ನನ್ನು ಬಂಧಿಸಿ ಜೈಲುಗಟ್ಟಿ ಹಾಕಿದ್ದಾರೆ. ಆದರೆ ಅದಕ್ಕೂ ಮುನ್ನವೇ ಗೌತಮ್ ಆಕೆಯನ್ನ ಕದ್ದು ಮುಚ್ಚಿ ಮದುವೆಯಾಗಿಬಿಟ್ಟಿದ್ದ ಎನ್ನುವ ವಿಷಯ ಈಗ ಬೆಳಕಿಗೆ ಬಂದಿದೆ. ಗೌತಮ್ ಜೈಲುಪಾಲದ ನಂತರ ಮತ್ತೋರ್ವ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡುವುದಕ್ಕೂ ಮುನ್ನ ಗೌತಮ್ ಹಾಗೂ ಆತನ ಮತ್ತೋರ್ವ ಪ್ರಿಯತಮೆ ಕಾನ್ಫರೆನ್ಸ್ ಕಾಲ್ ಮಾಡಿದ್ದರು. ಈ ವೇಳೆ ಅವಾಚ್ಯ ಪದಗಳಿಂದ ಮನಬಂದಂತೆ ನಿಂದಿಸಿದ್ದಾರೆ. ಈ ಆಡಿಯೋ ಗೌತಮ್ ಜೈಲುಪಾಲಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ.

    ಇದರಿಂದಾಗಿ ತನ್ನ ಮಾರ್ಯದೆ ಹೋಯಿತು, ಮನೆಯಲ್ಲಿ ವಿಷಯ ಗೊತ್ತಾಯಿತು ಅಂತ ಯುವತಿ ಮನನೊಂಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಮೂಲಕ ಜಿಮ್ ಟ್ರೈನರ್ ಕೃತ್ಯಕ್ಕೆ ಓರ್ವ ಯುವತಿ ಗರ್ಭಿಣಿಯಾಗಿದ್ದಾಳೆ. ಮತ್ತೊಬ್ಬಳು ಕದ್ದು ಮುಚ್ಚಿ ಮದುವೆಯಾಗಿ ಮೋಸ ಹೋಗಿದ್ದಾಳೆ. ಗೌತಮ್ ಜೈಲುಪಾಲಾದ ನಂತರ ಮೂರನೇಯ ಯುವತಿ ಆತ್ಮಹತ್ಯೆ ಶರಣಾಗಿದ್ದಾಳೆ.

  • ಜಿಮ್ ಟ್ರೈನರ್ ಕಿಡ್ನಾಪ್, ಹಲ್ಲೆ ಕೇಸ್ – ವಿಜಿ ವಿಚಾರಣೆ ಡಿ.12ಕ್ಕೆ ಮುಂದೂಡಿಕೆ

    ಜಿಮ್ ಟ್ರೈನರ್ ಕಿಡ್ನಾಪ್, ಹಲ್ಲೆ ಕೇಸ್ – ವಿಜಿ ವಿಚಾರಣೆ ಡಿ.12ಕ್ಕೆ ಮುಂದೂಡಿಕೆ

    ಬೆಂಗಳೂರು: ನಟ ದುನಿಯಾ ವಿಜಿ ಮೇಲೆ ದಾಖಲಾಗಿರುವ ಹಲ್ಲೆ ಪ್ರಕರಣದ ವಿಚಾರಣೆ ಡಿಸೆಂಬರ್ 12ಕ್ಕೆ ಮುಂದೂಡಿಕೆಯಾಗಿದೆ.

    ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಿ ಇಂದು 8 ನೇ ಎಸಿಎಂಎಂ ಕೋರ್ಟ್ ಗೆ ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಜಿಗೆ ಷರತ್ತುಬದ್ಧ ಜಾಮೀನು ದೊರೆತಿದ್ದು, ಜಾಮೀನಿನ ನಂತರದ ಮೊದಲ ವಿಚಾರಣೆ ಇಂದು ನಡೆದಿತ್ತು. ಹೀಗಾಗಿ ವಿಜಿ ಇಂದು ನ್ಯಾ.ಮಹೇಶ್ ಬಾಬು ಮುಂದೆ ಹಾಜರಾಗಿದ್ದರು.

    ಖುದ್ದು ಹಾಜರಿಗೆ ಸೂಚನೆ ಇಲ್ಲದಿದ್ದರೂ ಕೋರ್ಟ್ ಗೆ ಹಾಜರಾಗಿದ್ದು, ವಿಜಿ ಪರ ವಕೀಲರು ಚಾರ್ಜ್ ಶೀಟ್ ಹಾಕುವವರೆಗೂ ಕೋರ್ಟ್ ಗೆ ಖುದ್ದು ಹಾಜರಾತಿಗೆ ವಿನಾಯಿತಿ ಕೇಳಿದ್ದಾರೆ. ಆದ್ರೆ ನ್ಯಾ. ಮಹೇಶ್ ಬಾಬು ಅವರು ವಕೀಲರ ಮನವಿಯನ್ನು ತಿರಸ್ಕರಿಸಿದ್ದಾರೆ. ಅಲ್ಲದೇ ಡಿಸೆಂಬರ್ 12 ಕ್ಕೆ ಅರ್ಜಿ ವಿಚಾರಣೆ ಮುಂದೂಡಿ, ಮುಂದಿನ ವಿಚಾರಣೆ ವೇಳೆ ಹಾಜರಾಗಲು ಸೂಚನೆ ನೀಡಿದ್ದಾರೆ.

    ಕಾನೂನಿನ ಮೇಲೆ ತಮಗಿರುವ ಗೌರವ ವ್ಯಕ್ತಪಡಿಸಲು ವಿಜಿ ಇಂದು ಕೋರ್ಟ್ ಮುಂದೆ ಹಾಜರಾಗಿದ್ದರು. ದುನಿಯಾ ವಿಜಿ ಜೊತೆ ಇತರೆ ಮೂವರು ಆರೋಪಿಗಳು ಕೂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕೋರ್ಟ್ ನಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ವಿಜಿ ನಿರಾಕರಿಸಿದರು.

    ಏನಿದು ಪ್ರಕರಣ?
    ಸೆಪ್ಟೆಂಬರ್ 22ರ ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿದ್ದರು. ದುನಿಯಾ ವಿಜಿ, ಮಣಿ ಮತ್ತು ಪ್ರಸಾದ್ ಸಹಚರರಿಂದ ಈ ಕೃತ್ಯ ನಡೆದಿದೆ ಆರೋಪ ಕೇಳಿ ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv