Tag: gwaliyar

  • ಆಸ್ಪತ್ರೆಯಲ್ಲಿ ಸ್ಟ್ರೆಚರ್ ಇಲ್ಲದೆ ಬಟ್ಟೆಯಲ್ಲಿಯೇ ವೃದ್ಧ ರೋಗಿಯನ್ನು ಎಳೆದೊಯ್ದರು!

    ಆಸ್ಪತ್ರೆಯಲ್ಲಿ ಸ್ಟ್ರೆಚರ್ ಇಲ್ಲದೆ ಬಟ್ಟೆಯಲ್ಲಿಯೇ ವೃದ್ಧ ರೋಗಿಯನ್ನು ಎಳೆದೊಯ್ದರು!

    ಭೋಪಾಲ್: ಅದು ಸಾವಿರ ಬೆಡ್‍ಗಳಿರುವ ಜಿಲ್ಲೆಯ ಅತ್ಯಂತ ದೊಡ್ಡ ಆಸ್ಪತ್ರೆ. ಆದರೆ ಇಂತಹ ಆಸ್ಪತ್ರೆಯಲ್ಲಿ ವೃದ್ದರೊಬ್ಬರನ್ನು ಸ್ಟ್ರೆಚರ್ (Stretcher) ಇಲ್ಲದೆ ಬಟ್ಟೆಯಲ್ಲಿಯೇ ಎಳೆದುಕೊಂಡು ಹೋಗಿರುವ ಮನಕಲಕುವ ಘಟನೆ ನಡೆದಿದೆ.

    ಹೌದು. ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿರುವ ಆಸ್ಪತ್ರೆ ಸದ್ಯ ಸುದ್ದಿಯಲ್ಲಿದೆ. ಎರಡೂ ಕಾಲುಗಳು ಗಾಯಗೊಂಡಿರುವ ವೃದ್ದರೊಬ್ಬರು ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಇಲ್ಲದೆ ಸಂಬಂಧಿಕರೊಬ್ಬರು ಬಟ್ಟೆಯಲ್ಲಿ ಕುಳಿತುಕೊಳ್ಳುವಂತೆ ಹೇಳಿ ಎಳೆದುಕೊಂಡು ಹೋಗಿದ್ದಾರೆ. ಇದರ ವೀಡಿಯೋವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಈ ಸಂಬಂಧ ರೋಗಿ ಮತ್ತು ಆತನ ಸಂಬಂಧಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 400 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಯಲ್ಲಿ ಬೇಕಾದಷ್ಟು ಸ್ಟ್ರೆಚರ್ ಇಲ್ಲ. ಇನ್ನೂ ಇದ್ದ ಸ್ಟ್ರೆಚರ್ ಗಳಲ್ಲಿ ಚಕ್ರ ಸರಿ ಇಲ್ಲ ಎಂದು ಕಿಡಿಕಾರಿದ್ದಾರೆ.

    ವೃದ್ಧ ಸೈಕಲ್‍ನಿಂದ ಬಿದ್ದಿದ್ದಾರೆ. ಗ್ವಾಲಿಯರ್ ನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಭಿಂಡ್ ಜಿಲ್ಲೆಯಿಂದ ಬಂದಿರುವುದಾಗಿ ರೋಗಿಯ ಸಂಬಂಧಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಹೆತ್ತ ಮಕ್ಕಳನ್ನೇ ಕೊಂದ ತಾಯಿ

    ಸದ್ಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ.

  • ಸಂಭ್ರಮಾಚರಣೆಯ ವೇಳೆ ಗುಂಡೇಟಿಗೆ 7ರ ಬಾಲಕಿ ಬಲಿ

    ಸಂಭ್ರಮಾಚರಣೆಯ ವೇಳೆ ಗುಂಡೇಟಿಗೆ 7ರ ಬಾಲಕಿ ಬಲಿ

    ಭೋಪಾಲ್: ಇತ್ತೀಚಿನ ದಿನಗಳಲ್ಲಿ ಮದುವೆ ಮನೆಯಲ್ಲಿ ನಡೆಯುವ ಗುಂಡು ಹಾರಿಸಿ ಸಂಭ್ರಮಾಚರಿಸುವುದಕ್ಕೆ ಹಲವಾರು ಮಂದಿ ಬಲಿಯಾಗುತ್ತಿದ್ದಾರೆ. ಇಂತಹದ್ದೇ ಘಟನೆಯೊಂದು ಇದೀಗ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

    ಹೌದು. ಮದುವೆ ಸಂಭ್ರಮಾಚರಣೆಯ ವೇಳೆ ನಡೆಸಿದ ಗುಂಡೇಟಿಗೆ 7 ವರ್ಷದ ಬಾಲಕಿ ಸೆಜಲ್ ಜಾದೌನ್ ಎಂಬಾಕೆ ಬಲಿಯಾಗಿದ್ದಾಳೆ. ಇದನ್ನೂ ಓದಿ: ವಧುವಿನ ತಂದೆ ಹಾರಿಸಿದ ಗುಂಡಿಗೆ ಟೆರೇಸ್ ಮೇಲಿದ್ದ ನೆರೆಮನೆಯ ಯುವತಿ ಬಲಿ!

    ಸಂಬಂಧಿಕರ ಮನೆಯಲ್ಲಿನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಾಲಕಿ ತನ್ನ ತಂದೆಯ ಜೊತೆ ತೆರಳಿದ್ದಳು. ಎಲ್ಲರೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಬಾಲಕಿ ತನ್ನ ತಂದೆ ಸತೇಂದ್ರ ಜಾದೌನ್ ಜೊತೆ ನಿಂತಿದ್ದಳು. ಸಂಭ್ರಮಚಾಚರಣೆಯಲ್ಲಿ ಭಾಗಿಯಾಗಿದ್ದವರು ಸಂಭ್ರಮವನ್ನು ಇಮ್ಮಡಿಗೊಳಿಸಲು ಗುಂಡು ಹಾರಿಸಿದ್ದಾರೆ. ಈ ವೇಳೆ ಅವುಗಳಲ್ಲಿ ಒಂದು ಗುಂಡು ಬಾಲಕಿ ಹೊಟ್ಟೆಗೆ ಬಂದು ಬಿದ್ದಿದೆ.

    ಘಟನೆ ನಡೆದ ಕೂಡಲೇ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ಕುರಿತು ಸೊಂಡ ಕೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!


    ಕೆಲ ದಿನಗಳ ಹಿಂದೆಯಷ್ಟೇ 28 ವರ್ಷದ ಯೋಧರೊಬ್ಬರು ತನ್ನ ಗೆಳೆಯನ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಗುಂಡೇಟು ತಗುಲಿ ಗಂಭೀರ ಗಾಯಗೊಂಡಿದ್ದರು.

  • ಹಸ್ತಾಕ್ಷರವಿರೋ ಸಾವಿರ ಸ್ಯಾನಿಟರಿ ಪ್ಯಾಡ್‍ಗಳನ್ನು ಮೋದಿಗೆ ರವಾನಿಸಲಿದ್ದಾರೆ ವಿದ್ಯಾರ್ಥಿಗಳು!

    ಹಸ್ತಾಕ್ಷರವಿರೋ ಸಾವಿರ ಸ್ಯಾನಿಟರಿ ಪ್ಯಾಡ್‍ಗಳನ್ನು ಮೋದಿಗೆ ರವಾನಿಸಲಿದ್ದಾರೆ ವಿದ್ಯಾರ್ಥಿಗಳು!

    ಭೋಪಾಲ್: ಸ್ಯಾನಿಟರಿ ಪ್ಯಾಡ್ ಮೇಲೆ 12% ಜಿಎಸ್‍ಟಿ ತೆರಿಗೆಯನ್ನು ಹಿಂಪಡೆಯುವಂತೆ ವಿದ್ಯಾರ್ಥಿಗಳು ಮೋದಿ ವಿರುದ್ಧ ವಿಶಿಷ್ಠವಾಗಿ ಪ್ರತಿಭಟನೆ ಆರಂಭಿಸಿದ್ದಾರೆ.

    ಹೌದು, ಮಹಿಳೆಯರಿಗೆ ಅತ್ಯವಶ್ಯಕವಾಗಿರೋ ಸ್ಯಾನಿಟರಿ ಪ್ಯಾಡ್ ಇದೀಗ ಜಿಎಸ್‍ಟಿ ವ್ಯಾಪ್ತಿಗೆ ಬರುತ್ತಿದೆ. ಹೀಗಾಗಿ ಜಿಎಸ್‍ಟಿ ತೆರಿಗೆಯನ್ನು ಪೂರ್ಣವಾಗಿ ತೆಗೆದು ಹಾಕುವಂತೆ ಮಧ್ಯಪ್ರದೇಶ ಗ್ವಾಲಿಯಾರ್ ವಿದ್ಯಾರ್ಥಿಗಳು ಹಸ್ತಾಕ್ಷರವಿರುವ ಸುಮಾರು 1 ಸಾವಿರ ಸ್ಯಾನಿಟರಿ ಪ್ಯಾಡ್ ಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳಹಿಸಲು ನಿರ್ಧರಿಸಿದ್ದಾರೆ.

    ಈ ಕುರಿತು ವಿದ್ಯಾರ್ಥಿನಿಯರು ಜನವರಿ 4 ರಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭ ಮಾಡಿದ್ದು, ಇದಕ್ಕೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಹಾಗೂ ಅವರ ಶ್ರೇಯೋಭಿವೃದ್ಧಿಯ ಸಲುವಾಗಿ ವಿದ್ಯಾರ್ಥಿಗಳು ಈ ಅಭಿಯಾನ ಆರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸ್ಯಾನಿಟರಿ ಪ್ಯಾಡ್ ಮೇಲೆ ಜಿಎಸ್‍ಟಿ ಯಾಕೆ?: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್

    ಆದರೆ ಈ ಅಭಿಯಾನ ಕೇವಲ ಗ್ವಾಲಿಯಾರ್ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಇಡೀ ದೇಶದ ಮಹಿಳೆಯರಿಗೂ ಇದರ ಅಗತ್ಯತೆ ಇದೆ. ಹೀಗಾಗಿ ಸ್ಯಾನಿಟರಿ ಪ್ಯಾಡ್ ಮೇಲೆ ವಿಧಿಸಿರೋ ಜಿಎಸ್‍ಟಿ ತೆರಿಗೆಯನ್ನು ಹಿಂಪಡೆಯಲು ನಾಯಕ ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಸಮಾಜದ ಮಹಿಳೆಯರ ಹಿತ ಕಾಯುವ ದೃಷ್ಟಿಯಿಂದ ಪ್ಯಾಡ್ ಮೇಲೆ ಬರೆದು ಕಳುಹಿಸಲಾಗುವುದು ಎಂಬುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ.

    ಹಳ್ಳಿಪ್ರದೇಶದ ಮಹಿಳೆಯರು ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸದೇ ತಮ್ಮ ಸಂಪ್ರದಾಯದಂತೆ ಪ್ಯಾಡ್ ಬದಲು ಪರ್ಯಾಯ ಮಾರ್ಗ ಕಂಡುಕೊಂಡಿರುತ್ತಾರೆ. ಇದರಿಂದ ಅವರು ಕೆಲ ರೋಗಗಳಿಗೆ ತುತ್ತಾಗುತ್ತಾರೆ. ಈ ಹಿನ್ನೆಲೆಯಲ್ಲಿ ಹಳ್ಳಿಗಾಡಿನ ಮಹಿಳೆಯರು ಕೂಡ ಸ್ಯಾನಿಟರಿ ಪ್ಯಾಡ್ ಗಳನ್ನು ಖರೀದಿಸುವಂತೆ ಅವುಗಳ ಮೇಲೆ ಹೇರಿರುವ ಜಿಎಸ್‍ಟಿ ತೆರಿಗೆಯನ್ನು ಹಿಂಪಡೆಯುವ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ನಾವು ಈ ಅಭಿಯಾನ ಆರಂಭ ಮಾಡಿದ್ದೇವೆ ಅಂತ ವಿದ್ಯಾರ್ಥಿ ಮೋಹನ್ ಹೇಳಿದ್ದಾರೆ.

    ಒಟ್ಟಿನಲ್ಲಿ ಸ್ವಚ್ಛ ಭಾರತದ ಹೆಸರು ಹೇಳುತ್ತಿರೋ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರ ಸ್ವಚ್ಛತೆಯ ಕಡೆ ಹಾಗೂ ಅವರ ಆರೋಗ್ಯದ ಕಡೆ ಗಮನ ಹರಿಸಬೇಕಾಗಿದೆ. ಮಾರ್ಚ್ 3 ರೊಳಗೆ ಸುಮಾರು 1 ಸಾವಿರ ಪ್ಯಾಡ್‍ಗಳನ್ನು ಪ್ರಧಾನಿಗೆ ಕಳುಹಿಸಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.