Tag: gwalior

  • ಮಧ್ಯಪ್ರದೇಶ | ಸರ್ಕಾರಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – 190 ರೋಗಿಗಳ ರಕ್ಷಣೆ

    ಮಧ್ಯಪ್ರದೇಶ | ಸರ್ಕಾರಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – 190 ರೋಗಿಗಳ ರಕ್ಷಣೆ

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ (Gwalior) ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. 190ಕ್ಕೂ ಹೆಚ್ಚು ರೋಗಿಗಳನ್ನು ರಕ್ಷಿಸಲಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗಜ್ರಾ ರಾಜ ವೈದ್ಯಕೀಯ ಕಾಲೇಜಿನ ಭಾಗವಾಗಿರುವ ಕಮಲ ರಾಜ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ತೀವ್ರ ನಿಗಾ ಘಟಕದಲ್ಲಿ ಇಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು ಎಂದು ಗ್ವಾಲಿಯರ್‌ನ ಜಿಲ್ಲಾಧಿಕಾರಿ ರುಚಿಕಾ ಚೌಹಾಣ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಾರು ಬಿಟ್ಟು ಬಸ್‍ನಲ್ಲಿ ಸಂಚರಿಸಿ ಮಲೆನಾಡ ಸೌಂದರ್ಯ ಸವಿದ ತೇಜಸ್ವಿ ಸೂರ್ಯ ದಂಪತಿ

    ಆಸ್ಪತ್ರೆಯ ಸಿಬ್ಬಂದಿ ತಕ್ಷಣ ಕಿಟಕಿಗಳನ್ನು ಒಡೆದು ಐಸಿಯುನಲ್ಲಿದ್ದ 13 ರೋಗಿಗಳೂ ಸೇರಿದಂತೆ ಆಸ್ಪತ್ರೆಯಲ್ಲಿದ್ದ 190ಕ್ಕೂ ಹೆಚ್ಚು ರೋಗಿಗಳನ್ನು ಸುರಕ್ಷಿತವಾಗಿ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹೌತಿ ಉಗ್ರರ ಮೇಲೆ ಅಮೆರಿಕ ಏರ್‌ಸ್ಟ್ರೈಕ್‌, 31 ಬಲಿ – ನರಕ ತೋರಿಸ್ತೀವಿ ಎಂದು ಗುಡುಗಿದ ಟ್ರಂಪ್‌

    ಶಾರ್ಟ್ ಸರ್ಕ್ಯೂಟ್‌ನಿಂದ ಕಮಲ ರಾಜ ಆಸ್ಪತ್ರೆಯ ಸ್ತ್ರೀರೋಗ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಸ್ಪತ್ರೆಯಲ್ಲಿದ್ದ 190 ರೋಗಿಗಳನ್ನು ಸುರಕ್ಷಿತವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆ ತಿಳಿಸಿದೆ.

  • 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ದೈಹಿಕ ಹಲ್ಲೆ ನಡೆಸಿ ವಿಕೃತಿ – ಅಪ್ರಾಪ್ತೆ ಜನನಾಂಗಕ್ಕೆ 28 ಹೊಲಿಗೆ

    5 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ದೈಹಿಕ ಹಲ್ಲೆ ನಡೆಸಿ ವಿಕೃತಿ – ಅಪ್ರಾಪ್ತೆ ಜನನಾಂಗಕ್ಕೆ 28 ಹೊಲಿಗೆ

    ಭೋಪಾಲ್:‌‌ 17 ವರ್ಷದ ಅಪ್ರಾಪ್ತನೊಬ್ಬ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಬಳಿಕ ದೈಹಿಕ ಹಲ್ಲೆ (Physical Assaults) ನಡೆಸಿ ವಿಕೃತಿ ಮೆರೆದಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ (Gwalior) ನಡೆದಿದೆ.

    ವಿಕೃತ ಕಾಮಿ ಅತ್ಯಾಚಾರ ಎಸಗಿದ್ದಲ್ಲದೇ ಬಾಲಕಿಯ ತಲೆಯನ್ನ ನೆಲಕ್ಕೆ ಗುದ್ದಿಸಿದ್ದಾನೆ. ಬಳಿಕ ಆಕೆಯ ಖಾಸಗಿ ಭಾಗವನ್ನು ಘಾಸಿಗೊಳಿಸಿದ್ದಾನೆ. ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಫಡ್ನವಿಸ್ ಕಚೇರಿ ಮೇಲೆ ದಾಳಿ ನಡೆಸುವ ಬೆದರಿಕೆ – ಪಾಕ್‌ ಮೂಲದ ಸಂಖ್ಯೆಯಿಂದ ಕರೆ

    ಸದ್ಯ ಸಂತ್ರಸ್ತೆಯನ್ನ ಆಸ್ಪತ್ರೆಗೆ (Gwalior hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಲಕಿಯ ಖಾಸಗಿ ಭಾಗಗಳು ತೀವ್ರ ಹಾನಿಗೊಳಗಾಗಿವೆ. ಅಲ್ಲದೇ ಪ್ರಮುಖ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಬಾಲಕಿಯ ಜನನಾಂಗಗಳಿಗೆ 28 ಹೊಲಿಗೆ ಹಾಕಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | 3 ವರ್ಷದಲ್ಲಿ 100 ಬೈಕ್ ಕಳ್ಳತನ – ಆರೋಪಿ ಅರೆಸ್ಟ್ 

    ಘಟನೆ ನಡೆದಿದ್ದು ಯಾವಾಗ?
    ಫೆ.22ರಂದು ಅಪ್ರಾಪ್ತ ಯುವಕ ಬಾಲಕಿಯನ್ನ ಮನೆಯ ಮೇಲ್ಛಾವಣಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನ ಹತ್ಯೆ ಮಾಡುವ ಉದ್ದೇಶದಿಂದ ದೈಹಿಕ ಹಲ್ಲೆ ನಡೆಸಿದ್ದಾನೆ. ಆಕೆಯ ಖಾಸಗಿ ಭಾಗಗಳನ್ನ ಘಾಸಿಗೊಳಿಸಿದ್ದಾನೆ. ಇದರಿಂದ ಬಾಲಕಿ ಪ್ರಜ್ಞೆ ತಪ್ಪಿದ್ದಾಳೆ. ಮರಳಿ ಪ್ರಜ್ಞೆ ಬಂದ ಬಳಿಕ ಪೋಷಕರ ಮುಂದೆ ಘಟನೆ ವಿವರಿಸಿದ್ದಾಳೆ. ಬಳಿಕ ಪೊಷಕರು ದೂರು ದಾಖಲಿಸಿದ್ದ ಆರೋಪಿಯನ್ನು ಅಪ್ರಾಪ್ತ ಎಂದು ಪರಿಗಣಿಸದಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಿದ್ದಾರೆ.

    ಈ ಬೆನ್ನಲ್ಲೇ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಇದನ್ನೂ ಓದಿ: ಮತ್ತೆರಡು ವಿಧೇಯಕ ವಾಪಸ್ – ರಾಜ್ಯಪಾಲರು vs ರಾಜ್ಯ ಸರ್ಕಾರದ ನಡುವೆ ಮುಂದುವರಿದ ಜಟಾಪಟಿ

  • ಮದುವೆಗೆ 4 ದಿನ ಬಾಕಿಯಿರುವಾಗಲೇ ಪೊಲೀಸರ ಮುಂದೆ ಮಗಳನ್ನ ಗುಂಡಿಕ್ಕಿ ಕೊಂದ ತಂದೆ

    ಮದುವೆಗೆ 4 ದಿನ ಬಾಕಿಯಿರುವಾಗಲೇ ಪೊಲೀಸರ ಮುಂದೆ ಮಗಳನ್ನ ಗುಂಡಿಕ್ಕಿ ಕೊಂದ ತಂದೆ

    – ತಾನಿಷ್ಟಪಟ್ಟ ಹುಡುಗನನ್ನ ಮದುವೆಯಾಗಲು ಮುಂದಾಗಿದ್ದಕ್ಕೆ ಹತ್ಯೆ

    ಗ್ವಾಲಿಯರ್‌: ಖುಷಿಯಾಗಿ ಹಸೆಮಣೆ ಏರಬೇಕಿದ್ದ ಮಗಳನ್ನ ಸ್ವತಃ ಅಪ್ಪನೇ ಮಸಣಕ್ಕೆ ಕಳುಹಿಸಿದ್ದಾನೆ. ಮದುವೆಗೆ (Marriage) ಇನ್ನೂ ನಾಲ್ಕು ದಿನ ಬಾಕಿಯಿರುವಾಗಲೇ 20 ವರ್ಷದ ಸ್ವಂತ ಮಗಳನ್ನು ಪೊಲೀಸರ ಮುಂದೆಯೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ (Gwalior) ನಡೆದಿದೆ.

    ಮಗಳು ತಾವು ನೋಡಿದ ಹುಡುಗನನ್ನು ಮದುವೆಯಾಗುವುದಕ್ಕೆ ಒಪ್ಪದೇ, ಬಹಿರಂಗವಾಗಿ ವಿರೋಧಿಸಿದ್ದಳು. ತಾನು ಇಷ್ಟಪಟ್ಟ ಬೇರೆ ಹುಡುಗನನ್ನು ಮದುವೆಯಾಗಲು ಮುಂದಾಗಿದ್ದರಿಂದ ಕೋಪದ ಕೈಗೆ ಬುದ್ಧಿಕೊಟ್ಟ ಅಪ್ಪ ತನ್ನ ಮಗಳನ್ನು ಹತ್ಯೆ ಮಾಡಿದ್ದಾನೆ. ತನು ಗುರ್ಜರ್‌ (20) ಕೊಲೆಯಾದ ಮಗಳು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ತಲೆ ಎಣಿಕೆ ಪಾಲಿಟಿಕ್ಸ್ – ಸಿಎಂ ಸ್ಥಾನಕ್ಕಲ್ಲ.. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ?

    ಮಂಗಳವಾರ ಸಂಜೆ 9 ಗಂಟೆ ಸುಮಾರಿಗೆ ನಗರದ ಗೋಲಾ ಕಾ ಮಂದಿರ ಪ್ರದೇಶದಲ್ಲಿ ಈ ಕೊಲೆ ನಡೆದಿದೆ. ಅದೇ ದಿನ ಬೆಳಗ್ಗೆ ತನ್ನ ಮಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ಪೋಸ್ಟ್ ಮಾಡಿದ ವೀಡಿಯೊದಿಂದ ಕೋಪಗೊಂಡ ತಂದೆ ಮಹೇಶ್ ಗುರ್ಜರ್ ದೇಶಿ ಬಂದೂಕಿನಿಂದ ಆಕೆಗೆ ಹತ್ತಿರದಿಂದ ಗುಂಡು ಹಾರಿಸಿದ್ದಾನೆ. ಈ ವೇಳೆ ತನುವಿನ ಸೋದರ ಸಂಬಂಧಿ ರಾಹುಲ್ ಮಹೇಶ್ ಗುರ್ಜರ್‌ನ ಈ ಕೆಲಸಕ್ಕೆ ಸಹಚರನಾಗಿ ಕಾರ್ಯನಿರ್ವಹಿಸಿದ್ದು, ಹೆಚ್ಚುವರಿ ಗುಂಡುಗಳನ್ನು ಹಾರಿಸಿ ಆಕೆಯ ಸಾವನ್ನು ಖಚಿತಪಡಿಸಿದ್ದಾನೆ.

    ತನ್ನ ಹತ್ಯೆಗೆ ಕೆಲವೇ ಗಂಟೆಗಳ ಮೊದಲು, ತನು ಗುರ್ಜರ್‌ ತನ್ನ ಕುಟುಂಬದವರು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಗೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿ ವೀಡಿಯೊ ರೆಕಾರ್ಡ್ ಮಾಡಿ ಅದನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. 52 ಸೆಕೆಂಡುಗಳ ವೀಡಿಯೊದಲ್ಲಿ, ತನ್ನ ತಂದೆ ಮಹೇಶ್ ಮತ್ತು ಇತರ ಕುಟುಂಬ ಸದಸ್ಯರು ತನ್ನ ಸಂಕಷ್ಟಕ್ಕೆ ಕಾರಣರೆಂದು ಹೇಳಿದ್ದು, ತನಗೆ ಜೀವಭಯವಿದೆ ಎಂದು ಹೇಳಿಕೊಂಡಿದ್ದಳು. ನಾನು ವಿಕ್ಕಿ ಎಂಬಾತನನ್ನ ಮದುವೆಯಾಗಲು ಬಯಸಿದ್ದೇನೆ. ನನ್ನ ಮನೆಯವರು ಆರಂಭದಲ್ಲಿ ಇದಕ್ಕೆ ಒಪ್ಪಿದ್ದರು, ನಂತರ ನಿರಾಕರಿಸಿದರು. ಅವರು ಪ್ರತಿದಿನ ನನ್ನನ್ನ ಹೊಡೆಯುತ್ತಾರೆ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ನನಗೆ ಏನಾದರೂ ಸಂಭವಿಸಿದರೆ, ನನ್ನ ಕುಟುಂಬವೇ ಜವಾಬ್ದಾರವಾಗಿರುತ್ತದೆ ಎಂದು ತನು ವಿಡಿಯೋನಲ್ಲಿ ಹೇಳಿಕೊಂಡಿದ್ದಳು.

    ಈಕೆ ವೀಡಿಯೋದಲ್ಲಿ ಉಲ್ಲೇಖಿಸಿದ ವಿಕ್ಕಿ ಎಂಬಾತ ಉತ್ತರ ಪ್ರದೇಶದ ಆಗ್ರಾ ನಿವಾಸಿಯಾಗಿದ್ದು, 6 ವರ್ಷಗಳಿಂದ ತನು ಜೊತೆ ಸಂಬಂಧ ಹೊಂದಿದ್ದ. ತನು ಗುರ್ಜರ್‌ನ ವೀಡಿಯೋ ವೈರಲ್ ಆದ ನಂತರ, ವರಿಷ್ಠಾಧಿಕಾರಿ ಧರ್ಮವೀರ್ ಸಿಂಗ್ ನೇತೃತ್ವದ ಪೊಲೀಸ್ ಅಧಿಕಾರಿಗಳು ತನುವಿನ ಪೋಷಕರು ಹಾಗೂ ಆಕೆಯೊಂದಿಗೆ ಮಧ್ಯಸ್ಥಿಕೆ ವಹಿಸಲು ತನು ಅವರ ಮನೆಗೆ ಧಾವಿಸಿದರು. ಸಮುದಾಯದ ಪಂಚಾಯತ್ ಕೂಡ ನಡೆಯುತ್ತಿದ್ದು, ವಿಷಯವನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದರು, ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಗುಂಡು ಹಾರಿಸಿದ್ದಾನೆ.. ಇದನ್ನೂ ಓದಿ: ಮಂಗಳೂರು| ಹಳೆ ನಾಣ್ಯ ಖರೀದಿಸುವುದಾಗಿ ಹೇಳಿ ವ್ಯಕ್ತಿಗೆ 58 ಲಕ್ಷ ವಂಚನೆ

    ಇದೇ ಜನವರಿ 18ರಂದು ಮಗಳ ಮದುವೆ ನಡೆಯಬೇಕಿತ್ತು. ಅದಕ್ಕಾಗಿ ಸಕಲ ಸಿದ್ಧತೆಯೂ ಮಾಡಿಕೊಳ್ಳಲಾಗಿತ್ತು. ಸದ್ಯ ಗುಂಡಿಕ್ಕಿ ಹತ್ಯೆಗೈದ ತಂದೆ ಮಹೇಶ್‌ ಗುರ್ಜರ್‌ನನ್ನ ಪೊಲೀಸರು ಬಂಧಿಸಿದ್ದು, ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ರಾಹುಲ್‌ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ – ಹರಿಯಾಣದ ಬಿಜೆಪಿ ಅಧ್ಯಕ್ಷ, ಗಾಯಕನ ವಿರುದ್ಧ ಎಫ್‌ಐಆರ್‌

  • ಹಾಡಹಗಲೇ ಬೈಕ್‍ನಲ್ಲಿ ಯುವತಿಯ ಅಪಹರಣ – ಸಿಸಿಟಿವಿಯಲ್ಲಿ ಕೃತ್ಯ ಸೆರೆ

    ಹಾಡಹಗಲೇ ಬೈಕ್‍ನಲ್ಲಿ ಯುವತಿಯ ಅಪಹರಣ – ಸಿಸಿಟಿವಿಯಲ್ಲಿ ಕೃತ್ಯ ಸೆರೆ

    ಭೋಪಾಲ್: ಹಾಡಹಗಲೇ ಜನನಿಬೀಡ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಇಬ್ಬರು ಮುಸುಕುಧಾರಿಗಳು ಅಪಹರಿಸಿದ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ (Gwalior) ನಡೆದಿದೆ.

    ಯುವತಿ ಬಸ್‍ನಲ್ಲಿ ಬಂದು, ಆಕೆಯ ಸಹೋದರನಿಗಾಗಿ ಪೆಟ್ರೋಲ್ ಬಂಕ್ ಒಂದರ ಬಳಿ ಕಾಯುತ್ತಿದ್ದಾಗ ಆಕೆಯ ಅಪಹರಣವಾಗಿದೆ. ಅಪಹರಣಕಾರರಲ್ಲಿ ಓರ್ವ ಹೆಲ್ಮೆಟ್ ಧರಿಸಿದ್ದರೆ, ಮತ್ತೋರ್ವ ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡಿದ್ದ. ಯುವತಿಯನ್ನು ಅಪಹರಿಸುತ್ತಿರುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಅಧಿಕಾರಿ, ಕಚೇರಿಗೆ ಜೀವ ಬೆದರಿಕೆ- ಭದ್ರತೆ ಹೆಚ್ಚಿಸಿದ ಪೊಲೀಸರು

    ಅಪಹರಣಕ್ಕೊಳಗಾದ ಯುವತಿ ಬಿಎ ವ್ಯಾಸಂಗ ಮಾಡುತ್ತಿದ್ದು, ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ನಿವಾಸಿಯಾಗಿದ್ದಾಳೆ. ತನ್ನ ಕುಟುಂಬದೊಂದಿಗೆ ದೀಪಾವಳಿ ಆಚರಿಸಲು ಊರಿಗೆ ತೆರಳಿದ್ದಳು. ಈ ವೇಳೆ ಯುವತಿಯ ಅಪಹರಿಸಲಾಗಿದೆ.

    ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆಟ್ರೋಲ್ ಬಂಕ್ ಸೇರಿದಂತೆ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ. ಅಪಹರಣಕ್ಕೆ ಕಾರಣ ತಿಳಿದು ಬಂದಿಲ್ಲ. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಣಕಾಸು ಕೊರತೆಯ ನೆಪ ಬೇಡ; 6 ಮತ್ತು 7ನೇ ವೇತನ ಆಯೋಗ ಶಿಫಾರಸಿನನ್ವಯ ಶಿಕ್ಷಕರಿಗೆ ವೇತನ ನೀಡಿ: ಹೈಕೋರ್ಟ್‌ ಆದೇಶ

  • ಸುಗಂಧ ದ್ರವ್ಯ ಹಾಕಿದ್ದಕ್ಕೆ ಹೆಂಡತಿಗೆ ಗುಂಡು ಹಾರಿಸಿದ ಪತಿ

    ಸುಗಂಧ ದ್ರವ್ಯ ಹಾಕಿದ್ದಕ್ಕೆ ಹೆಂಡತಿಗೆ ಗುಂಡು ಹಾರಿಸಿದ ಪತಿ

    – ಘಟನೆಯ ಬಳಿಕ ಗಂಡ ಎಸ್ಕೇಪ್

    ಭೋಪಾಲ್: ಮನೆಯಿಂದ ಆಚೆ ಹೋಗುವ ಸಂದರ್ಭ ಹೆಂಡತಿ ಸುಗಂಧ ದ್ರವ್ಯ (Perfume) ಹಾಕಿದ್ದಕ್ಕಾಗಿ ಪತಿ ಆಕೆಯ ಮೇಲೆ ಗುಂಡು (Shoot) ಹಾರಿಸಿದ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ (Gwalior) ನಡೆದಿದೆ.

    ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಗುಂಡು ಹಾರಿಸಿದ ಬಳಿಕ ಆಕೆಯ ಪತಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಬಿಜೋಯಿಲಿ (Bijoili) ಠಾಣಾ ವ್ಯಾಪ್ತಿಯ ಗಣೇಶಪುರ ನಿವಾಸಿ ನೀಲಂ ಜಾತವ್ ಎಂಬಾಕೆ 8 ವರ್ಷಗಳ ಹಿಂದೆ ಮಹೇಂದ್ರ ಜಾತವ್ ಎಂಬಾತನನ್ನು ವಿವಾಹವಾಗಿದ್ದಳು. ಮಹೇಂದ್ರ ಜಾತವ್ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಯಾಗಿದ್ದು, ಕಳ್ಳತನ ಪ್ರಕರಣದಲ್ಲಿ ಜೈಲುಪಾಲಾಗಿದ್ದ. ಇದನ್ನೂ ಓದಿ: ಮುತ್ತು ಕೊಡುವ ವೇಳೆ ನೆನಪಾದ ಸೇಡು – ಗಂಡನ ನಾಲಿಗೆಗೆ ಹಲ್ಲಿನಲ್ಲೇ ಕತ್ತರಿ

    ಗಂಡ ಜೈಲು ಸೇರಿದ ಬಳಿಕ ನೀಲಂ ತನ್ನ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದಳು. ಮಹೇಂದ್ರ ಜಾತವ್ ನಾಲ್ಕು ವರ್ಷಗಳ ಜೈಲುವಾಸ ಮುಗಿಸಿ ಒಂದು ವರ್ಷದ ಹಿಂದಷ್ಟೇ ಜೈಲಿನಿಂದ ಹೊರಬಂದು ತನ್ನ ಹೆಂಡತಿಯೊಂದಿಗೆ ಆಕೆಯ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದ. ಇದನ್ನೂ ಓದಿ: ಬೆಂಗ್ಳೂರಲ್ಲಿ ಕದ್ರು, ಚೆನ್ನೈನಲ್ಲಿ ಮಾರಿದ್ರು- ಕೊನೆಗೂ ಸಿಕ್ಕಿಬಿದ್ದ ಟೊಮೆಟೋ ಕಳ್ಳರು

    ಶನಿವಾರ ನೀಲಂ ಮನೆಯಿಂದ ಹೊರಗಡೆ ಹೋಗುವ ಸಂದರ್ಭ ಸುಗಂಧ ದ್ರವ್ಯವನ್ನು ಹಾಕಿದ್ದು, ಇದರ ಬಗ್ಗೆ ಪತಿ ಮಹೇಂದ್ರ ಆಕೆಯನ್ನು ಪ್ರಶ್ನಿಸಿದ್ದಾನೆ. ಇದರಿಂದಾಗಿ ದಂಪತಿ ನಡುವೆ ವಾಗ್ವಾದ ಶುರುವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಕೋಪದ ಭರದಲ್ಲಿ ಪತಿ ಗನ್ (Gun) ತೆಗೆದು ಪತ್ನಿಯ ಎದೆಗೆ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲ ಧ್ವಂಸ- ಆರೋಪಿಯ ಬಂಧನ

    ಎದೆಗೆ ಗುಂಡು ತಗುಲಿದ ಬಳಿಕ ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ. ಘಟನೆ ನಡೆದ ತಕ್ಷಣ ನೀಲಂ ಅವರ ಸಹೋದರ ದಿನೇಶ್ ಜಾತವ್ ತನ್ನ ಸಂಬಂಧಿಕರಿಗೆ ಕರೆ ಮಾಡಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ನೀಲಂ ಕುಟುಂಬಸ್ಥರು ದೂರು ನೀಡಿದ್ದು, ಮಹೇಂದ್ರನ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆತನ ಪತ್ತೆಗಾಗಿ ಬಲೆಬೀಸಿದ್ದಾರೆ.  ಇದನ್ನೂ ಓದಿ: ತಂಗಿಯ ಶಿರಚ್ಛೇದ ಮಾಡಿ ರುಂಡ ಹಿಡಿದು ಹೋಗ್ತಿದ್ದ ಅಣ್ಣನ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 4 ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ

    4 ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ (Gwalior) ಜಿಲ್ಲೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

    ಸಿಕಂದರ್ ಕಂಪೂ ಪ್ರದೇಶದ ಆರತಿ ಕುಶ್ವಾಹ ಅವರು ಕಮಲರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಣ್ಣು ಮಗುವಿನ ತೂಕ 2.3 ಕೆಜಿ ಇದೆ. ಗ್ವಾಲಿಯರ್‌ನ ಜಯರೋಗ ಆಸ್ಪತ್ರೆಯ ಅಧೀಕ್ಷಕರೊಂದಿಗೆ ವೈದ್ಯರ ತಂಡವು ಶಿಶುವನ್ನು ಪರೀಕ್ಷೆಗೊಳಪಡಿಸಿತು. ಇದನ್ನೂ ಓದಿ: 100 ದಿನ ಪೂರೈಸಿದ ಭಾರತ್ ಜೋಡೋ ಯಾತ್ರೆ – ಇದು ಮಹಾಸಾಧನೆ ಅಂದ್ರು ಕಾಂಗ್ರೆಸ್ ನಾಯಕರು

    ಜಯರೋಗ್ಯ ಆಸ್ಪತ್ರೆ ಸೂಪರಿಂಟೆಂಡೆಂಟ್ ಡಾ. ಆರ್.ಕೆ.ಎಸ್.ಧಕಡ್ ಮಾತನಾಡಿ, ನಾಲ್ಕು ಕಾಲಿರುವ ಮಗು ಜನಿಸಿದೆ. ಆ ಮಗುವಿಕೆ ಅಂಗ ವಿಕಲತೆ ಇದೆ. ಈ ರೀತಿಯ ಹೆಚ್ಚಿನ ಅಂಗಗಳೊಂದಿಗೆ ಜನಿಸುವ ಶಿಶುಗಳಿಗೆ ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಈ ಹೆಣ್ಣು ಮಗುವಿನ ಸೊಂಟದ ಕೆಳಗಿನ ಭಾಗವು ಎರಡು ಹೆಚ್ಚುವರಿ ಕಾಲುಗಳೊಂದಿಗೆ ಅಭಿವೃದ್ಧಿಗೊಂಡಿದೆ. ಆದರೆ ಆ ಕಾಲುಗಳು ನಿಷ್ಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.

    ಮಕ್ಕಳ ವಿಭಾಗದ ವೈದ್ಯರು ದೇಹದ ಯಾವುದೇ ಭಾಗದಲ್ಲಿ ಬೇರೆ ಯಾವುದೇ ವಿಕಾರವಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಮಗುವಿಗೆ ಯಾವುದೇ ಅಪಾಯವಿಲ್ಲ ಎಂದರೆ, ನಂತರ ಆ ಕಾಲುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಗುತ್ತದೆ. ಇದರಿಂದ ಮಗು ಮುಂದೆ ಸಹಜ ಜೀವನ ನಡೆಸಬಹುದು ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಝಿಕಾ ವೈರಸ್‌ ಭೀತಿ – ಚಿಕಿತ್ಸಾ ಕ್ರಮ ಪಟ್ಟಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

    ಈ ವರ್ಷದ ಮಾರ್ಚ್‌ನಲ್ಲಿ ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಮಹಿಳೆಯೊಬ್ಬರು ಎರಡು ತಲೆ, ಮೂರು ಕೈಗಳು ಮತ್ತು ಎರಡು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕುಡಿದ ಅಮಲಿನಲ್ಲಿ ಸೇನಾ ವಾಹನಕ್ಕೆ ಒದ್ದು ಯುವತಿ ರಂಪಾಟ – ವೀಡಿಯೋ ವೈರಲ್

    ಕುಡಿದ ಅಮಲಿನಲ್ಲಿ ಸೇನಾ ವಾಹನಕ್ಕೆ ಒದ್ದು ಯುವತಿ ರಂಪಾಟ – ವೀಡಿಯೋ ವೈರಲ್

    ಗ್ವಾಲಿಯರ್: ಕುಡಿದ ಅಮಲಿನಲ್ಲಿ 22 ವರ್ಷದ ಮಾಡೆಲ್ ಒಬ್ಬಳು ಸೇನಾ ವಾಹನದ ಮೇಲೆ ದಾಳಿ ನಡೆಸಿ ರಂಪಾಟ ಮಾಡಿರುವ ಘಟನೆ ಬುಧವಾರ ರಾತ್ರಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

    delhi model

    ಯುವತಿ ದೆಹಲಿ ಮೂಲದ ಮಾಡೆಲ್ ಆಗಿದ್ದು, ಮದ್ಯದ ಅಮಲಿನಲ್ಲಿ ರಸ್ತೆಯಲ್ಲಿ ಗಲಾಟೆ ಸೃಷ್ಟಿಸಿ, ಸೇನಾ ವಾಹನವನ್ನು ನಿಲ್ಲಿಸಿ ಅದರ ಮೇಲೆ ದಾಳಿ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: 10 ವರ್ಷದಲ್ಲಿ 25 ಬಾರಿ ಅನ್ಯ ಪುರುಷರೊಂದಿಗೆ ಓಡಿಹೋದಳು – ಗಂಡನಿಗೆ ಮಾತ್ರ ಅವಳೇ ಬೇಕಂತೆ

    delhi model

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯುವತಿ ಸೇನೆಯ ವಾಹನವನ್ನು ನಿಲ್ಲಿಸಿ ಹೆಡ್‍ಲೈಟ್‍ಗೆ ಪದೇ, ಪದೇ ಒದ್ದು, ಹಾನಿಗೊಳಿಸಿದ್ದಾಳೆ. ಅಲ್ಲದೇ ಆಕೆಯನ್ನು ತಡೆಯಲು ಬಂದ ಸೇನಾಧಿಕಾರಿಯನ್ನು ಹಿಂದಕ್ಕೆ ತಳ್ಳಿದ್ದಾಳೆ ಮತ್ತು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸಿದ್ದಾಳೆ. ಇನ್ನೂ ಈ ಘಟನೆ ಪಡವ್ ಪೊಲೀಸ್ ಠಾಣೆಗೆ ವರದಿಯಾಗುತ್ತಿದ್ದಂತೆಯೇ, ಮಹಿಳಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವತಿಯನ್ನು ಕರೆದೊಯ್ದಿದ್ದಾರೆ.  ಇದನ್ನೂ ಓದಿ: ‘ಧಾರವಾಡಿ ಎಮ್ಮೆ’ ತಳಿಗೆ ದೊರೆತಿದೆ ರಾಷ್ಟ್ರಮಟ್ಟದ ಮಾನ್ಯತೆ!

    ಈ ಕುರಿತಂತೆ ಪಡವ್ ಪೊಲೀಸ್ ಠಾಣೆಯ ಉಸ್ತುವಾರಿ ವಿವೇಕ್, ಯುವತಿ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ದಾಳೆ. ಸೇನೆಯ ಕಡೆಯಿಂದ ಯಾವುದೇ ದೂರುಗಳಿಲ್ಲ. ಇದೀಗ ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಆಕೆಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದೆಹಲಿಯಿಂದ ಗ್ವಾಲಿಯರ್‌ಗೆ ಯುವತಿ ಮತ್ತು ಆಕೆಯ ಇಬ್ಬರು ಸ್ನೇಹಿತೆಯರು ಬಂದಿದ್ದು, ನಗರದ ಹೋಟೆಲ್‍ನಲ್ಲಿ ತಂಗಿರುವುದಾಗಿ ತಿಳಿಸಿದ್ದಾರೆ.

  • ಬಸ್‍ಗೆ ಡಿಕ್ಕಿ ಹೊಡೆದ ಆಟೋ- 14 ಮಂದಿ ಸಾವು

    ಬಸ್‍ಗೆ ಡಿಕ್ಕಿ ಹೊಡೆದ ಆಟೋ- 14 ಮಂದಿ ಸಾವು

    ಭೋಪಾಲ್: ಆಟೋವೊಂದು ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ಗ್ವಾಲಿಯರ್‍ನ ಪುರಾನಿ ಚೌವಾನಿ ಪ್ರದೇಶಲ್ಲಿ ನಡೆದಿದೆ.

    ಘಟನೆಯಲ್ಲಿ 12 ಮಂದಿ ಮಹಿಳೆಯರು ಅಂಗನವಾಡಿ ಕಾರ್ಮಿಕರಾಗಿದ್ದು, ಒಬ್ಬ ಆಟೋ ಚಾಲಕನಾಗಿದ್ದಾನೆ. ಒಂಬತ್ತು ಮಂದಿ ಮಹಿಳೆಯರು ಹಾಗೂ ಆಟೋ ಚಾಲಕ ಅಪಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ನಾಲ್ವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಈ ಬಗ್ಗೆ ಮಾತನಾಡಿದ ಗ್ವಾಲಿಯರ್ ಎಸ್‍ಪಿ ಅಮಿತ್ ಸಿಂಗ್, ಅಪಘಾತ ಬೆಳಗ್ಗೆ ಸುಮಾರು 7 ಗಂಟೆಗೆ ಜರುಗಿದ್ದು, ಮಹಿಳೆಯರು ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಮಾಡಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

    ಈ ಕುರಿತಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

  • ಸಾರ್ವಜನಿಕ ಸಭೆಯಲ್ಲೇ ಸರ್ಕಾರಿ ಅಧಿಕಾರಿಗೆ ಮಹಿಳೆಯಿಂದ ಚಪ್ಪಲಿ ಏಟು

    ಸಾರ್ವಜನಿಕ ಸಭೆಯಲ್ಲೇ ಸರ್ಕಾರಿ ಅಧಿಕಾರಿಗೆ ಮಹಿಳೆಯಿಂದ ಚಪ್ಪಲಿ ಏಟು

    ಭೋಪಾಲ್: ಸಾರ್ವಜನಿಕ ಸಭೆಯಲ್ಲೇ ಮಹಿಳೆಯೊಬ್ಬಳು ಸರ್ಕಾರಿ ಅಧಿಕಾರಿಗೆ ಚಪ್ಪಲಿ ಏಟು ಕೊಟ್ಟ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

    ಗ್ವಾಲಿಯರ್ ನಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿ ಫಲಾನುಭವಿಗಳಿಗೆ ಮನೆ ಹಂಚಿಕೆ ನಡೆದಿತ್ತು. ಸಾರ್ವಜನಿಕ ಸಭೆಗೆ ಆಗಮಿಸಿದ್ದ ಫಲಾನುಭವಿ ಮಹಿಳೆ, ತನಗೆ ಸಿಗಬೇಕಾದ ಮನೆಯನ್ನು ಅಧಿಕಾರಿಗಳು ಬೇರೆಯವರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ಅಧಿಕಾರಿಗಳ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಳು. ಈ ವೇಳೆ ಕೈಯಲ್ಲಿ ಚಪ್ಪಲಿ ಹಿಡಿದು ಅಧಿಕಾರಿಗೆ ಹೊಡೆದಿದ್ದಾಳೆ.

    ಸಭೆಯಲ್ಲಿ ಸೇರಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮಹಿಳೆಯನ್ನು ತಡೆಯಲು ಪ್ರಯತ್ನಿಸಿದರು. ಆದರೆ ಮಹಿಳೆ ಮಾತ್ರ ಎಲ್ಲರನ್ನೂ ತಳ್ಳಿ ನಾಲ್ಕೈದು ಬಾರಿ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಅಷ್ಟೇ ಅಲ್ಲದೆ ಅಧಿಕಾರಿ ಮೇಲಿನ ಹಲ್ಲೆಯನ್ನು ತಡೆಯಲು ಬಂದ ವ್ಯಕ್ತಿಯನ್ನು ಎಳೆದಾಡಿದ್ದಾಳೆ.

    ಘಟನೆಯಿಂದಾಗಿ ಸಭೆಯಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಈ ದೃಶ್ಯವನ್ನು ಸಭೆಯಲ್ಲಿ ಸೇರಿದ್ದ ಸ್ಥಳೀಯ ಮಾಧ್ಯಮಗಳು ಹಾಗೂ ಸಾರ್ವಜನಿಕರು ತಮ್ಮ ಕ್ಯಾಮೆರಾ, ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

  • ಮತ್ತೊಂದು ಮಿಗ್ ವಿಮಾನ ಪತನ – ಇಬ್ಬರು ಪೈಲಟ್ ಪ್ರಾಣಾಪಾಯದಿಂದ ಪಾರು

    ಮತ್ತೊಂದು ಮಿಗ್ ವಿಮಾನ ಪತನ – ಇಬ್ಬರು ಪೈಲಟ್ ಪ್ರಾಣಾಪಾಯದಿಂದ ಪಾರು

    ಗ್ವಾಲಿಯಾರ್: ಭಾರತೀಯ ವಾಯು ಸೇನೆಯ ತರಬೇತಿ ನಿರತ ಮಿಗ್ 21 ವಿಮಾನ ಮಧ್ಯಪ್ರದೇಶದ ಗ್ವಾಲಿಯಾರ್‌ನಲ್ಲಿ ಪತನಗೊಂಡಿದೆ.

    ಪತನಗೊಳ್ಳುತ್ತಿದ್ದಂತೆ ಗ್ರೂಪ್ ಕ್ಯಾಪ್ಟನ್ ಮತ್ತು ಸ್ಕ್ವಾಡ್ರನ್‌ ಲೀಡರ್ ವಿಮಾನದಿಂದ ಹೊರಕ್ಕೆ ಜಿಗಿದು ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಯ ವೇಳೆ ವಿಮಾನ ಖಾಲಿ ಜಾಗದಲ್ಲಿ ಬಿದ್ದಿರುವುದಾಗಿ ವರದಿಯಾಗಿದೆ. ಈ ವರ್ಷದ ಮಾರ್ಚ್ 31 ರಂದು ರಾಜಸ್ಥಾನದ ಬಾರ್ಮರ್ ವಾಯುನೆಲೆಯಲ್ಲಿ ಮಿಗ್ ವಿಮಾನ ಪತನಗೊಂಡಿತ್ತು.

    ರಷ್ಯಾದ ಮಿಕೋಯಾನ್ ಗುರೇವಿಚ್(ಮಿಗ್) 21 ಬೈಸನ್ 1959 ರಲ್ಲಿ ತಯಾರಾಗಿದ್ದು, 1963 ರಲ್ಲಿ ಮಿಗ್ 21 ವಿವಿಧ ಆವೃತ್ತಿ ಒಟ್ಟು  874 ವಿಮಾನಗಳು ಭಾರತದ ವಾಯುಸೇನೆಗೆ ಸೇರ್ಪಡೆಯಾಗಿತ್ತು. 1971 ರಲ್ಲಿ ಬಾಂಗ್ಲಾ ಕದನದ ವೇಳೆ ಪ್ರಮುಖ ಪಾತ್ರವಾಹಿಸಿದ್ದ ಮಿಗ್ ಪಾಕಿಸ್ತಾನ 9 ವಿಮಾನಗಳನ್ನು ಹೊಡೆದು ಹಾಕಿತ್ತು. ಉಳಿದ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಈ ವಿಮಾನಗಳ ಸಾಮರ್ಥ್ಯ ಕಡಿಮೆ ಎಂದು ಗೊತ್ತಾದ ಬಳಿಕ 1990 ರಲ್ಲಿ ಇವುಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಇದನ್ನೂ ಓದಿ: 44 ವರ್ಷ ಹಳೆಯ ಕಾರನ್ನು ಯಾರೂ ಬಳಸಲಾರರು – ಮಿಗ್ ಬಳಕೆ ಕುರಿತು ಧನೋವಾ ಮಾತು

    ಸದ್ಯ ಭಾರತದಲ್ಲಿ ಈಗ 100ಕ್ಕೂ ಅಧಿಕ ಮಿಗ್ ವಿಮಾನಗಳಿವೆ. ಖರೀದಿಸಿದ ಪೈಕಿ 500ಕ್ಕೂ ಹೆಚ್ಚು ವಿಮಾನಗಳು ಪತನಗೊಂಡಿದೆ. ಹೀಗಾಗಿ ವಾಯುಪಡೆಯಲ್ಲಿ ಈ ವಿಮಾನಗಳು ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿವೆ. ಹಾರಾಟದ ಸಮಯದಲ್ಲಿ ಎಂಜಿನ್ ವೈಫಲ್ಯಗೊಂಡು ಪತನದ ಸೂಚನೆ ಸಿಕ್ಕಿದ ಕೂಡಲೇ ಹಲವು ಪೈಲಟ್ ಗಳು ಎಜೆಕ್ಟ್ ಆಗದೇ ವಿಮಾನವನ್ನು ಜನವಸತಿ ಇಲ್ಲದ ಕಡೆಗೆ ತಿರುಗಿಸಿ ಪ್ರಾಣಬಿಟ್ಟಿದ್ದಾರೆ.

    ಹಾರುವ ಶವಪೆಟ್ಟಿಗೆ ಎಂಬ ಕುಖ್ಯಾತಿ, ಎಫ್ 16 ಮುಂದೆ ಏನು ಅಲ್ಲ ಎಂದು ಭಾವಿಸಿದ್ದರೂ ಅಭಿನಂದನ್ ಈ ವಿಮಾನ ಮೂಲಕವೇ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಒಂದು ವಿಮಾನವನ್ನು ಉರುಳಿಸಿದ್ದರು. 2016 ರಲ್ಲಿ 110 ಮಿಗ್ 21 ಜೆಟ್ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಈ ಸಂದರ್ಭದಲ್ಲಿ ಮಲ್ಟಿ ಮೋಡ್ ರೇಡಾರ್, ಉತ್ತಮ ಏವಿಯಾನಿಕ್ಸ್, ಸಂವಹನ ವ್ಯವಸ್ಥೆಯನ್ನು ನೀಡಲಾಗಿತ್ತು. ಇದನ್ನೂ ಓದಿ: ಆರ್ 73 ಸೆಲೆಕ್ಟ್ ಮಾಡಿದ್ದೇನೆ : ಅಭಿನಂದನ್ ಕೊನೆಯ ರೇಡಿಯೋ ಸಂದೇಶ – ಡಾಗ್ ಫೈಟ್ ಹೇಗೆ ನಡೆಯಿತು?