Tag: GV Sriramareddy

  • ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ಇನ್ನಿಲ್ಲ

    ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ಇನ್ನಿಲ್ಲ

    ಚಿಕ್ಕಬಳ್ಳಾಪುರ: ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ಇಂದು ನಿಧನರಾಗಿದ್ದಾರೆ. ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ ವಿ ಶ್ರೀರಾಮರೆಡ್ಡಿಯವರು ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಇವರು ಸಿಪಿಐಎಂ ಪಕ್ಷದಿಂದ ಶಾಸಕರಾಗಿದ್ದರು. ಸಿಪಿಐಎಂ ಪಕ್ಷದಿಂದ ಉಚ್ಛಾಟಿತರಾದ ನಂತರ ಪ್ರಜಾ ಸಂಘರ್ಷ ಸಮಿತಿ ಪಕ್ಷ ಸ್ಥಾಪನೆ ಮಾಡಿದ್ದರು. ಸದ್ಯ ಶ್ರೀರಾಮರೆಡ್ಡಿ ನಿಧನಕ್ಕೆ ಅಪಾರ ಪ್ರಮಾಣದ ಬೆಂಬಲಿಗರ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: RSS ಆಸ್ಪತ್ರೆ ಹಿಂದೂಗಳಿಗೆ ಮಾತ್ರವೇ ಎಂಬ ರತನ್ ಟಾಟಾ ಪ್ರಶ್ನೆಗೆ ಗಡ್ಕರಿ ಉತ್ತರ ಹೀಗಿತ್ತು

    ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಸುಧಾಕರ್, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಜಿ.ವಿ.ಶ್ರೀರಾಮರೆಡ್ಡಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಭಗವಂತ ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬ ಸದಸ್ಯರು ಹಾಗೂ ಬಂಧು-ಬಳಗಕ್ಕೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

  • ಮತದಾರರೇ ವೋಟು ಕೊಡಿ, ಜೊತೆಗೆ ನೋಟು ಕೊಡಿ – ಸಿಪಿಐಎಂ ಅಭ್ಯರ್ಥಿ ಜಿವಿ ಶ್ರೀರಾಮರೆಡ್ಡಿ

    ಮತದಾರರೇ ವೋಟು ಕೊಡಿ, ಜೊತೆಗೆ ನೋಟು ಕೊಡಿ – ಸಿಪಿಐಎಂ ಅಭ್ಯರ್ಥಿ ಜಿವಿ ಶ್ರೀರಾಮರೆಡ್ಡಿ

    ಚಿಕ್ಕಬಳ್ಳಾಪುರ: ಚುನಾವಣೆಗೆ ನಿಲ್ಲಬೇಕು ಎಂದರೆ ಕೈಯಲ್ಲಿ ಕೋಟಿ-ಕೋಟಿ ದುಡ್ಡು ಇರಬೇಕು ಎನ್ನುವ ದುಸ್ಥಿತಿಯಲ್ಲಿ ಇಲ್ಲೊಬ್ಬ ಅಭ್ಯರ್ಥಿ ಚುನಾವಣೆಗೆ ಬೇಕಾದ ಹಣವನ್ನು ಮತದಾರರಿಂದಲೇ ಪಡೆದು ಎಂಎಲ್‍ಎ ಆಗಲು ಹೊರಟಿದ್ದಾರೆ.

    ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಗೆ ಚುನಾವಣಾ ಪ್ರಚಾರದ ಮತಯಾಚನೆ ವೇಳೆ ಮತದಾರರೇ ಸ್ವಯಂಪ್ರೇರಿತವಾಗಿ ದುಡ್ಡು ಕೊಟ್ಟು ಬೆಂಬಲ ಸೂಚಿಸುತ್ತಿದ್ದಾರೆ. ಕ್ಷೇತ್ರಾದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಜಿವಿ ಶ್ರೀರಾಮರೆಡ್ಡಿ ಅವರಿಗೆ ಜನರೇ ಹಣ ನೀಡುವ ಮೂಲಕ ಚುನಾವಣೆಯಲ್ಲಿ ಗೆದ್ದು ಬರುವಂತೆ ಆರ್ಶೀವಾದ ಮಾಡುತ್ತಿದ್ದಾರೆ.

    ಸಿಪಿಐಎಂ ಪಕ್ಷವನ್ನ ಬೆಂಬಲಿಸುತ್ತಿರುವ ಜನರು 100, 200, 500 ರಿಂದ 1 ಸಾವಿರ ರೂ, ವರೆಗೂ ಸ್ವಯಂಪ್ರೇರಿತವಾಗಿ ತಮ್ಮ ಕೈಲಾದಷ್ಟು ಹಣ ಸಹಾಯ ಮಾಡುತ್ತಿದ್ದಾರೆ. ಈ ಮೂಲಕ ಚುನಾವಣೆಗೆ ಬೇಕಾದ ಖರ್ಚಿನ ಹಣ ದೇಣಿಗೆ ರೂಪದಲ್ಲಿ ನೀಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಜಿವಿ ಶ್ರೀರಾಮರೆಡ್ಡಿಯವರಿಗೆ ಈಗಾಗಲೇ ಎರಡು ಲಕ್ಷ ರೂ.ಗಿಂತಲೂ ಅಧಿಕ ಮೊತ್ತದ ಹಣ ದೇಣಿಗೆ ರೂಪದಲ್ಲಿ ದೊರಕಿದೆ ಎನ್ನಲಾಗಿದೆ.

    ಸಿಪಿಐಎಂ ಪಕ್ಷ ರಾಜ್ಯದ ಕರಾವಳಿ ಭಾಗ ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸದೃಢವಾಗಿದ್ದು, ಹೀಗಾಗಿ ಈ ಹಿಂದೆ ಇದೇ ಕ್ಷೇತ್ರದಿಂದ ಜಿವಿ ಶ್ರೀರಾಮರೆಡ್ಡಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ಎನ್ನುವುದು ಈ ಕ್ಷೇತ್ರದ ವಿಶೇಷ.