Tag: Guwahati

  • ಗಮನಿಸಿ, ಇಲಿಗಳು 12 ಲಕ್ಷ ರೂ. ನೋಟು ತಿಂದಿದ್ದು ಅಸ್ಸಾಂ ಎಟಿಎಂನಲ್ಲಿ!

    ಗಮನಿಸಿ, ಇಲಿಗಳು 12 ಲಕ್ಷ ರೂ. ನೋಟು ತಿಂದಿದ್ದು ಅಸ್ಸಾಂ ಎಟಿಎಂನಲ್ಲಿ!

    ಗುವಾಹಟಿ: “ಬೆಂಗಳೂರಿನ ಮತ್ತಿಕೆರೆಯ ಎಟಿಎಂ ನಲ್ಲಿ ಇಲಿಗಳು 12.38 ಲಕ್ಷ ರೂ. ಮೌಲ್ಯದ ನೋಟುಗಳನ್ನು ತಿಂದುಹಾಕಿವೆ” ಹೀಗೊಂದು ಬರಹದೊಂದಿಗೆ ಎಟಿಎಂನಲ್ಲಿ ಹರಿದ ನೋಟುಗಳಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ನಿಜವಾಗಿ ಈ ಘಟನೆ ಮತ್ತಿಕೇರೆಯಲ್ಲಿ ನಡೆದಿಲ್ಲ. ಅಸ್ಸಾಂನ ತಿನ್ಸುಕೀಯಾ ಜಿಲ್ಲೆಯಲ್ಲಿರುವ ಎಟಿಎಂನಲ್ಲಿ ಘಟನೆ ನಡೆದಿದ್ದು ಬೆಂಗಳೂರು ಎಂದು ಬರೆದು ವೈರಲ್ ಆಗಿದೆ.

    ಗುವಾಹಟಿಯ ಗ್ಲೋಬಲ್ ಬಿಸನೆಸ್ ಸೊಲ್ಯುಶನ್ಸ್ ಕಂಪನಿ ಈ ಎಟಿಎಂನ್ನು ನಿರ್ವಹಣೆ ಮಾಡುತಿತ್ತು. ಮೇ 19 ರಂದು ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಸೇರಿದ ಈ ಎಟಿಎಂ ಮಶಿನ್ ಗೆ 29 ಲಕ್ಷ ರೂಪಾಯಿ ತುಂಬಿಸಿತ್ತು. ಆದರೆ ತಾಂತ್ರಿಕ ತೊಂದರೆಯಿಂದಾಗಿ ಎಟಿಎಂ ಮೇ 20 ರಂದು ಬಂದ್ ಆಗಿತ್ತು. ಈ ಸಮಯದಲ್ಲಿ ಇಲಿಗಳ ಗುಂಪೊಂದು ಅದು ಹೇಗೋ ಎಟಿಎಂ ಮಶಿನ್ ಒಳಗಡೆ ನುಗ್ಗಿದೆ. ಅದರಲ್ಲಿದ್ದ 29 ಲಕ್ಷ ರೂ ಗಳ ಪೈಕಿ 12.38 ಕ್ಷ ರೂ ಮೌಲ್ಯದ ನೋಟುಗಳನ್ನು ಹರಿದು ಚಿಂದಿ ಮಾಡಿವೆ.

     

    ಜೂನ್ 11ರಂದು ಮಶಿನ್ ರಿಪೇರಿ ಮಾಡಲು ಹೋದಾಗ ಇಲಿಗಳ ಈ ಕೃತ್ಯ ಬೆಳಕಿಗೆ ಬಂದಿದೆ. ರೂ. 500 ಹಾಗೂ 2000 ರೂ. ನೋಟುಗಳು ಚಿಂದಿಯಾಗಿ ಬಿದ್ದಿದ್ದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

    ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ಅಧಿಕಾರಿಯೊಬ್ಬರು ಗುವಾಹಟಿ ಮೂಲದ ಗ್ಲೋಬಲ್ ಬಿಸಿನೆಸ್ ಸೊಲ್ಯುಶನ್ಸ್ ಕಂಪನಿ ಮೇ 19 ರಂದು ಎಟಿಎಂ ಗೆ 29 ಲಕ್ಷ ರೂ. ಮೌಲ್ಯದ 2000 ರೂ. ಹಾಗೂ 500 ರೂ. ಮೌಲ್ಯದ ನೋಟುಗಳನ್ನು ತುಂಬಿಸಿತ್ತು. ಅದರಲ್ಲಿ 12,38,000 ರೂ. ಮೌಲ್ಯದ ನೋಟುಗಳನ್ನು ಇಲಿಗಳು ಚಿಂದಿ ಮಾಡಿವೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಘಟನೆ ಕುರಿತಂತೆ ಹಲವರಲ್ಲಿ ಈ ಸಂಶಯ ವ್ಯಕ್ತವಾಗಿದೆ. ಈ ಕುರಿತಂತೆ ತನಿಖೆ ನಡೆಸುವಂತೆ ತಿನ್ಸುಕಿಯಾ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಮೇ 20 ರಿಂದ ಜೂನ್ 11 ರ ವರೆಗೆ ಸಾಕಷ್ಟು ಸಮಯಾವಕಾಶ ಇದ್ದು ಯಾಕೆ ಎಟಿಎಂ ರಿಪೇರಿಗೆ ಇಷ್ಟು ಕಾಲವಲಾಶ ಬೇಕಾಯಿತು ಎಂದು ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ.

     

  • ಕೋರ್ಟ್ ಆವರಣದಲ್ಲೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಅತ್ಯಾಚಾರ ಆರೋಪಿ

    ಕೋರ್ಟ್ ಆವರಣದಲ್ಲೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಅತ್ಯಾಚಾರ ಆರೋಪಿ

    ಗುವಾಹಟಿ: ಮಗಳ ಮೇಲೆ ಆತ್ಯಾಚಾರ ಆರೋಪಕ್ಕೊಳಗಾಗಿದ್ದ ಆರೋಪಿಯು ತನ್ನ ಪತ್ನಿಯನ್ನು ಕೋರ್ಟ್ ಆವರಣದಲ್ಲೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಅಸ್ಸಾಂನ ದಿಬ್ರುಗರ್ ಜಿಲ್ಲೆಯಲ್ಲಿ ನಡೆದಿದೆ.

    ಪತ್ನಿ ರೀಟಾ ನೇಹಾರ್ ದೇಕಾ ಕೊಲೆಯಾದ ದುರ್ದೈವಿ. ಆರೋಪಿ ಪತಿ ಪೂರ್ಣ ನೇಹಾರ್ ದೇಕಾನು ಇಂದು ಬೆಳಗ್ಗೆ 10.30ರಲ್ಲಿ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ 9 ತಿಂಗಳ ಹಿಂದೆ ಆರೋಪಿಯ ವಿರುದ್ಧ ಪತ್ನಿಯು ಮಗಳ ಮೇಲೆ ಅತ್ಯಾಚಾರ ಮಾಡಿದ ದೂರು ದಾಖಲಿಸಿದ್ದಳು. ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಆರೋಪಿಯು ಸೆರೆವಾಸ ಅನುಭವಿಸಿ, ಕೆಲವು ದಿನಗಳ ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ. ಪ್ರಕರಣ ಕುರಿತಂತೆ ಇಂದು ಕೋರ್ಟ್ ನಲ್ಲಿ ವಿಚಾರಣೆಗೆ ಇಬ್ಬರೂ ಆಗಮಿಸಿದ್ದಾರೆ. ದಂಪತಿ ಕೋರ್ಟ್ ಆವರಣದ ಬೆಂಚ್ ಮೇಲೆ ಕುಳಿತಿದ್ದಾಗ ಆರೋಪಿಯು ಏಕಾಏಕಿ ಹರಿತವಾದ ಆಯುಧಗಳಿಂದ ಪತ್ನಿಯ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸಿದೆಸ್ವರ್ ಬೋಹ್ರಾ ಹೇಳಿಕೆ ನೀಡಿದ್ದಾರೆ.

    ಕೂಡಲೇ ಮಹಿಳೆಯನ್ನು ದಿಬ್ರುಗರ್‍ನ ಅಸ್ಸಾಂ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗ ಮಧ್ಯೆಯೇ ಮೃತ ಪಟ್ಟಿದ್ದಾಳೆಂದು ವೈದ್ಯರು ದೃಢಪಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಆರೋಪಿ ಪೂರ್ಣ ನೇಹಾರ್ ದೇಕಾನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ಘಟನೆ ಕುರಿತು ಆರೋಪಿಯು ಮಾಧ್ಯಮಗಳ ಮುಂದೆ, ನಾನು ಅಮಾಯಕ, ಆಕೆ ನನ್ನ ವಿರುದ್ಧ ಮಗಳ ಮೇಲೆ ಅತ್ಯಾಚಾರ ಆರೋಪದ ಸುಳ್ಳು ದೂರು ದಾಖಲಿಸಿದ್ದಳು. ನಾನು ಜಾಮೀನು ಪಡೆದು ಮನೆಗೆ ಬಂದಾಗ ನನ್ನನ್ನು ಮನೆಯ ಒಳಗೆ ಸೇರಿಸಿಕೊಳ್ಳಲಿಲ್ಲ ಆದ್ದರಿಂದ ಆಕೆಯನ್ನು ಹತ್ಯೆ ಮಾಡಿದ್ದಾಗಿ ತಿಳಿಸಿದ್ದಾನೆ.

  • ಮದ್ವೆಯಾದ 6 ತಿಂಗ್ಳಿಗೇ ಪತಿಯ ಮರ್ಮಾಂಗವನ್ನೇ ಕತ್ತರಿಸಿದ್ಳು!

    ಮದ್ವೆಯಾದ 6 ತಿಂಗ್ಳಿಗೇ ಪತಿಯ ಮರ್ಮಾಂಗವನ್ನೇ ಕತ್ತರಿಸಿದ್ಳು!

    ಗುವಾಹಟಿ: ತನ್ನ ಜೊತೆ ಹೆಚ್ಚು ಸಮಯ ಕಳೆಯದ್ದಕ್ಕೆ ಎರಡನೇ ಪತ್ನಿ ರೊಚ್ಚಿಗೆದ್ದು ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ಅಸ್ಸಾಂನ ದುಬ್ರಿದಲ್ಲಿ ನಡೆದಿದೆ.

    ಮೋಮಿನಾ ಕತೌನ್ ತನ್ನ ಪತಿ ರೆಹಮಾನ್ ಮಾರ್ಮಾಂಗವನ್ನು ಕತ್ತಿರಿಸಿದ ಪತ್ನಿ. ಆರು ತಿಂಗಳ ಹಿಂದೆ ರೆಹಮಾನ್ ಮೋಮಿನಾಳನ್ನು ಮದುವೆಯಾಗಿದ್ದನು. ಮದುವೆ ಆಗಿ ರೆಹಮಾನ್ ಮೋಮಿನಾಳನ್ನು ಬೇರೆ ಮನೆಯಲ್ಲಿ ಇಟ್ಟಿದ್ದನು ಎಂದು ವರದಿಯಾಗಿದೆ.

    ರೆಹಮಾನ್ ತನ್ನ ಮೊದಲ ಪತ್ನಿ ಜೊತೆ ವಾಸಿಸುತ್ತಿದ್ದ. ಅಷ್ಟೇ ಅಲ್ಲದೇ ನನ್ನನ್ನು ನೋಡಲು ಅಪರೂಪಕ್ಕೆ ಬರುತ್ತಿದ್ದ. ಇದರಿಂದ ನನಗೆ ಬೇಸರವಾಗಿತ್ತು. ಅಲ್ಲದೇ ವ್ಯವಸಾಯ ಕೆಲಸ ಕೂಡ ಮಾಡಲು ಹೇಳುತ್ತಿದ್ದ. ನನ್ನನ್ನು ಸರಿಯಾಗಿ ನೋಡಿಕೊಳ್ಳದ್ದಕ್ಕೆ ಈ ಕೃತ್ಯವನ್ನು ಎಸಗಿರುವುದಾಗಿ ಮೋಮಿನಾ ಪೊಲೀಸರ ಬಳಿ ತಿಳಿಸಿದ್ದಾಳೆ.

    ಶುಕ್ರವಾರ ಮೋಮಿನಾ ತನ್ನ ಪತಿ ರೆಹಮಾನ್‍ನನ್ನು ತನ್ನ ಮನೆಯಲ್ಲೇ ರಾತ್ರಿ ಕಳೆಯಲು ಹೇಳಿದ್ದಳು. ಮೋಮಿನಾ ಮಾತನ್ನು ಒಪ್ಪಿದ ರೆಹಮಾನ್ ರಾತ್ರಿ ಆಕೆಯ ಮನೆಯಲ್ಲೇ ಇದ್ದನು. ರೆಹಮಾನ್ ರಾತ್ರಿ ಗಾಢ ನಿದ್ದೆಯಲ್ಲಿದ್ದಾಗ ಮೋಮಿನಾ ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ.

    ಈ ಘಟನೆ ನಡೆದ ನಂತರ ಮೋಮಿನ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಳು. ಆದರೆ ರೆಹಮಾನ್ ಕಿರುಚಾಟದ ಧ್ವನಿ ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದು ಆಕೆಯನ್ನು ಹಿಡಿದಿದ್ದಾರೆ. ನಂತರ ಮೋಮಿನಳನ್ನು ನಮಗೆ ಒಪ್ಪಿಸಿದ್ದರು ಎಂದು ಪೊಲೀಸ್ ಅಧಿಕಾರಿ ಅಜಿತ್ ಕುಮಾರ್ ರೈ ಹೇಳಿದ್ದಾರೆ. ಸದ್ಯ ರೆಹಮಾನ್ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

  • ಗೆಳೆಯನ ಜೊತೆ ಆಸ್ಪತ್ರೆಗೆ ಹೋಗುವಾಗ ಯುವತಿಗೆ ಥಳಿತ: ವಿಡಿಯೋ ವೈರಲ್

    ಗೆಳೆಯನ ಜೊತೆ ಆಸ್ಪತ್ರೆಗೆ ಹೋಗುವಾಗ ಯುವತಿಗೆ ಥಳಿತ: ವಿಡಿಯೋ ವೈರಲ್

    ಗುವಾಹಟಿ: ಯುವತಿ ತನ್ನ ಗೆಳೆಯನ ಜೊತೆಗೆ ಆಸ್ಪತ್ರೆಗೆ ಹೋಗುವಾಗ ಯುವಕರ ಗುಂಪೊಂದು ನೈತಿಕಗಿರಿ ನಡೆಸಿ ಆಕೆಯ ಮೇಲೆ ಹಲ್ಲೆ ನಡೆಸಿದ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.

    ಈ ಘಟನೆಯಲ್ಲಿ ಯುವತಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಆಕೆ ಬೇರೊಬ್ಬ ಯುವಕನ ಜೊತೆ ಹೋಗುತ್ತಿರುವುದ್ದನ್ನು ಕಂಡು ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ. ಆ ಯುವಕರು ಯುವತಿಯನ್ನೇ ಗುರಿಯಾಗಿಸಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ತನ್ನ ಗೆಳೆಯನ ಜೊತೆ ಕಾಣಿಸಿಕೊಂಡಿದ್ದಕ್ಕೆ ಸ್ಥಳೀಯರು 22 ವರ್ಷದ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯುವತಿಗೆ ಯುವಕರ ಗುಂಪು ಥಳಿಸುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದಾರೆ.

    ಸದ್ಯ ಯುವಕರ ಗುಂಪು ವಿರುದ್ಧ ಎಫ್‍ಐಆರ್ ದಾಖಲಿಸಿ ಒಟ್ಟು 12 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಯುವತಿ ಆಕೆಯ ಗೆಳೆಯನ ಜೊತೆ ಆಸ್ಪತ್ರೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಗೋಲ್‍ಪಾರಾ ಎಸ್‍ಪಿ ಅಮೀತ್ವ ಸಿನ್ಹಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಇದೀಗ ಯುವತಿ ಮೇಲೆ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಯುವತಿಗೆ ಆಕೆಯ ಮುಖಕ್ಕೆ ಹೊಡೆದು, ಕೂದಲು ಎಳೆದಾಡಿ ಆಕೆಗೆ ಥಳಿಸುವ ದೃಶ್ಯ ಮನಕಲಕುವಂತಿದೆ.

  • ಟಿ20 ಮ್ಯಾಚ್ ಗೆಲುವಿನ ಬಳಿಕ ಆಸೀಸ್ ತಂಡದ ಬಸ್‍ಗೆ ಕಲ್ಲು

    ಟಿ20 ಮ್ಯಾಚ್ ಗೆಲುವಿನ ಬಳಿಕ ಆಸೀಸ್ ತಂಡದ ಬಸ್‍ಗೆ ಕಲ್ಲು

    ಗುವಾಹಟಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ.

    ಮಂಗಳವಾರದಂದು ಭಾರತದ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್ ಗಳಿಂದ ಜಯ ಸಾಧಿಸಿದ ಬಳಿಕ ಆಸೀಸ್ ಪಡೆ ಹೋಟೆಲ್ ಗೆ ಹೋಗುವ ವೇಳೆಯಲ್ಲಿ ಅವರ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ.

    ಆಸ್ಟ್ರೇಲಿಯಾದ ಎಲ್ಲ ಕ್ರಿಕೆಟಿಗರು ಬರ್ಸಪರ ಸ್ಟೇಡಿಯಂ ನಿಂದ ಹೋಟೆಲ್ ನತ್ತ ತಮ್ಮ ಪ್ರಯಾಣ ಬೆಳೆಸಿದ್ದರು. ಈ ವೇಳೆ ಬಸ್ ಮೇಲೆ ಕಲ್ಲು ಎಸೆಯಲಾಗಿದ್ದು, ಬಸ್ ನ ಕಿಟಕಿಯ ಗಾಜು ಒಡೆದು ಹೋಗಿದೆ. ಘಟನೆಯಲ್ಲಿ ಯಾವುದೇ ಆಟಗಾರರಿಗೂ ಗಾಯವಾಗಿಲ್ಲ. ಕಲ್ಲು ಬಿದ್ದಾಗ ಒಂದು ಕ್ಷಣ ಎಲ್ಲರೂ ವಿಚಲಿತರಾದ್ರು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

    ಪಂದ್ಯದ ಬಳಿಕ ಬಸ್‍ನ ಕಿಟಕಿಗೆ ಕಲ್ಲು ಎಸೆದಿದ್ದು ನಿಜಕ್ಕೂ ಭಯ ತರಿಸುವಂತಿತ್ತು ಎಂದು ಬ್ಯಾಟ್ಸ್‍ಮನ್ ಅರೋನ್ ಫಿಂಚ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಈ ರೀತಿ ಆಸ್ಟ್ರೇಲಿಯಾ ಆಟಗಾರರ ಬಸ್ ಮೇಲೆ ಕಲ್ಲು ಬಿದ್ದ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ ಚಿತ್ತಗಾಂಗ್ ನಲ್ಲಿ ಆಸ್ಟ್ರೇಲಿಯಾ ಆಟಗಾರರು ಬಾಂಗ್ಲಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಜಯಿಸಿ ಹೋಟೆಲ್ ನತ್ತ ತೆರಳುವಾಗ ದುಷ್ಕರ್ಮಿಗಳು ಕಲ್ಲು ಎಸೆದಿದ್ದರು.

    ಎರಡನೇ ಟಿ 20 ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಳ್ಳುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಜೀವಂತವಾಗಿಟ್ಟುಕೊಂಡಿದೆ. ಮೊದಲ ಪಂದ್ಯಕ್ಕೆ ಮಳೆ ಬಂದ ಕಾರಣ ಡಕ್‍ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತ ಜಯಗಳಿಸಿತ್ತು. ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಗಳಿಸಿದ್ದು, ಮೂರನೇ ಟಿ20 ಶುಕ್ರವಾರ ಹೈದರಾಬಾದ್ ನಲ್ಲಿ ನಡೆಯಲಿದೆ.

    ಇದನ್ನೂ ಓದಿ: ಟಿ20ಯಲ್ಲಿ ಮೊದಲ ಬಾರಿಗೆ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ!

     

  • ಇಂದು ಗೆದ್ದರೆ ಟಿ20ಯಲ್ಲಿ ಟೀಂ ಇಂಡಿಯಾ ನಂ.3!

    ಇಂದು ಗೆದ್ದರೆ ಟಿ20ಯಲ್ಲಿ ಟೀಂ ಇಂಡಿಯಾ ನಂ.3!

    ಬೆಂಗಳೂರು: ಗುವಾಹಟಿಯ ಬರ್ಸಪಾರಾ ಕ್ರೀಡಾಂಗಣದಲ್ಲಿ ಇಂದು ಆಸೀಸ್ ವಿರುದ್ಧ ನಡೆಯಲಿರುವ 2ನೇ ಪಂದ್ಯದಲ್ಲಿ ಗೆದ್ದರೆ ಟೀಂ ಇಂಡಿಯಾ ಟಿ20 ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಲಿದೆ. ಇಂದಿನ ಪಂದ್ಯವನ್ನೂ ಸೋತರೆ ಆಸ್ಟ್ರೇಲಿಯಾ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕೊನೆಯ ಪಂದ್ಯವನ್ನು ಆಡಿ ವಾಪಸ್ ಸ್ವದೇಶಕ್ಕೆ ವಾಪಾಸಾಗಬೇಕಾಗುತ್ತದೆ.

    ಇಂದಿನ ಪಂದ್ಯಕ್ಕೂ ಮಳೆ ಭೀತಿಯಿದ್ದು ನಿನ್ನೆ ಗುವಾಹಟಿಯಲ್ಲಿ ಮೋಡ ಕವಿದ ವಾತಾವರಣವಿತ್ತು. ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದರೆ 51ನೇ ಟಿ20 ಗೆಲುವು ಸಾಧಿಸಿದಂತಾಗುತ್ತದೆ. ಶ್ರೀಲಂಕಾವೂ ಇಷ್ಟೇ ಪಂದ್ಯವನ್ನು ಟಿ20ಯಲ್ಲಿ ಗೆದ್ದಿದೆ. ಆದರೆ ಭಾರತದ ಗೆಲುವಿನ ಸರಾಸರಿ ಶ್ರೀಲಂಕಾ ತಂಡಕ್ಕಿಂತ ಉತ್ತಮವಾಗಿದೆ. ಹೀಗಾಗಿ ಭಾರತ 3ನೇ ಸ್ಥಾನವನ್ನು ತಲುಪುವುದು ಖಚಿತ.

    84 ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ ಇದುವರೆಗೆ 50 ಪಂದ್ಯದಲ್ಲಿ ಗೆದ್ದಿದ್ದು 31ರಲ್ಲಿ ಸೋತಿದೆ. ಇಲ್ಲಿ ಗೆಲುವಿನ ಪ್ರಮಾಣ ಶೇ.62ರಷ್ಟಿದೆ. ಮತ್ತೊಂದೆಡೆ ಸಿಂಹಳೀಯರು ಇದುವರೆಗೆ 96 ಟಿ20 ಪಂದ್ಯಗಳನ್ನಾಡಿದ್ದು 51ರಲ್ಲಿ ಗೆದ್ದು, 43 ಪಂದ್ಯಗಳಲ್ಲಿ ಸೋತಿದ್ದಾರೆ. ಶ್ರೀಲಂಕಾ ಗೆಲುವಿನ ಪ್ರಮಾಣ ಶೇ.54ರಷ್ಟಾಗುತ್ತದೆ.

    ಆಸೀಸ್ ಗೆ ಸ್ಪಿನ್ನರ್ ಗಳ ಕಾಟ: ಸದ್ಯ ಆಸೀಸ್ ತಂಡಕ್ಕೆ ತಲೆನೋವಾಗಿರೋದು ಭಾರತದ ಸ್ಪಿನ್ನರ್ ಗಳು. ಅದರಲ್ಲೂ ಕುಲದೀಪ್ ಯಾದವ್ ಹಾಗೂ ಚಾಹಲ್ ಆಸೀಸ್ ತಂಡಕ್ಕೆ ಭಾರೀ ಸವಾಲಾಗಿ ಪರಿಣಮಿಸಿದ್ದಾರೆ. ಎಷ್ಟೇ ಜಾಗ್ರತೆಯಿಂದ ಆಟವಾಡಿದರೂ ಇವರಿಬ್ಬರಿಗೆ ವಿಕೆಟ್ ಒಪ್ಪಿಸುತ್ತಿದ್ದಾರೆ.

     

    ಚಾಹಲ್ ಹಾಗೂ ಕುಲದೀಪ್ ಯಾದವ್ ಇದುವರೆಗೆ ಈ ಪ್ರವಾಸದಲ್ಲಿ 4 ಏಕದಿನ ಹಾಗೂ 1 ಟಿ20 ಪಂದ್ಯದಿಂದ ಒಟ್ಟು 16 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಕುಲದೀಪ್ 9 ಹಾಗೂ ಚಾಹಲ್ 7 ವಿಕೆಟ್ ಹಂಚಿಕೊಂಡಿದ್ದಾರೆ. ಗ್ಲೆನ್ ಮ್ಯಾಕ್ಸ್ ವೆಲ್ ಅಂತಾ ಚಾಹಲ್ ದಾಳಿಗೆ ಕಕ್ಕಾಬಿಕ್ಕಿಯಾಗಿದ್ದಾರೆ. ಯಾಕೆಂದರೆ ಇದುವರೆಗೆ ಒಟ್ಟು 4 ಬಾರಿ ಚಾಹಲ್ ಗೆ ವಿಕೆಟ್ ಒಪ್ಪಿಸಿ ಮ್ಯಾಕ್ಸ್ ವೆಲ್ ಪೆವಿಲಿಯನ್ ನತ್ತ ಮುಖ ಮಾಡಿದ್ದಾರೆ.