Tag: Guwahati

  • ಕಾರು ಅಪಘಾತ- 7 ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ

    ಕಾರು ಅಪಘಾತ- 7 ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ

    ದಿಸ್ಪುರ್: ಸ್ಕಾರ್ಪಿಯೋ ಕಾರ್ (Scorpio SUV) ಹಾಗೂ ಬೊಲೆರೊ ಟ್ರಕ್ (Truck) ನಡುವೆ ನಡೆದ ಅಪಘಾತದಲ್ಲಿ 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಅಸ್ಸಾಂನ (Assam) ಗುವಾಹಟಿಯಲ್ಲಿ (Guwahati) ಸೋಮವಾರ ನಡೆದಿದೆ.

    ನಗರದ ಜಲುಕಬಾರಿ ಮೇಲ್ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಸ್ಕಾರ್ಪಿಯೋ ರಸ್ತೆ ವಿಭಜಕವನ್ನು ದಾಟಿ ಎದುರಿನಿಂದ ಬರುತ್ತಿದ್ದ ಪಿಕ್ ಅಪ್ ಟ್ರಕ್‍ಗೆ ಡಿಕ್ಕಿ ಹೊಡೆದಿದೆ. ಮಿತಿ ಮೀರಿದ ವೇಗದ ಪರಿಣಾಮದಿಂದಾಗಿ ಈ ಅವಘಡ ಸಂಭವಿಸಿದೆ. ಇದರಿಂದಾಗಿ ಸ್ಥಳದಲ್ಲಿಯೇ 7 ಜನ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಐಡಿ ಪ್ರೂಫ್ ಇಲ್ಲದೆ 2,000 ರೂ. ನೋಟು ವಿನಿಮಯ ವಿರುದ್ಧ ಮನವಿ- ದೆಹಲಿ ಹೈಕೋರ್ಟ್‌ನಿಂದ ಅರ್ಜಿ ವಜಾ

    ಕಾರಿನಲ್ಲಿ 10 ಮಂದಿ ಪ್ರಯಾಣಿಕರಿದ್ದರು. ಅದರಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರೆಲ್ಲ ಅಸ್ಸಾಂನ ಕಾಲೇಜೊಂದರ ವಿದ್ಯಾರ್ಥಿಗಳಾಗಿದ್ದರು. ಅವರೆಲ್ಲರು ಹಾಸ್ಟೆಲ್‍ನಲ್ಲಿದ್ದುಕೊಂಡು ವ್ಯಾಸಾಂಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಿದ್ಯಾರ್ಥಿಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡವರಿಗೆ ಸಾಧ್ಯವಿರುವ ಎಲ್ಲ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿನ್ನದ ಸರ ನುಂಗಿದ- ಗಂಟಲಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ನರಳಾಡಿದ!

  • 12 ವರ್ಷದ ಹಿಂದಿನ ಕೇಸ್: ಐವರು ನಕ್ಸಲರನ್ನು ಅಪರಾಧಿಗಳೆಂದು ಘೋಷಿಸಿದ ಎನ್‍ಐಎ ಕೋರ್ಟ್

    12 ವರ್ಷದ ಹಿಂದಿನ ಕೇಸ್: ಐವರು ನಕ್ಸಲರನ್ನು ಅಪರಾಧಿಗಳೆಂದು ಘೋಷಿಸಿದ ಎನ್‍ಐಎ ಕೋರ್ಟ್

    ದಿಸ್ಪುರ್: 12 ವರ್ಷಗಳ ಹಿಂದಿನ ಪ್ರಕರಣದಲ್ಲಿ ಐವರು ನಕ್ಸಲರನ್ನು ದೋಷಿಗಳೆಂದು ಗುವಾಹಟಿಯ (Guwahati) ಎನ್‍ಐಎ ವಿಶೇಷ ಕೋರ್ಟ್ (Special NIA court) ಬುಧವಾರ ತೀರ್ಪು ಪ್ರಕಟಿಸಿದೆ.

    ಮಣಿಪುರದ ದಿಲೀಪ್ ಸಿಂಗ್, ಅಸ್ಸಾಂನ (Assam) ಸೆಂಜಮ್ ಧೀರೇನ್ ಸಿಂಗ್, ಅರ್ನಾಲ್ಡ್ ಸಿಂಗ್, ಪಶ್ಚಿಮ ಬಂಗಾಳದ ಇಂದ್ರನೀಲ್ ಚಂದಾ ಮತ್ತು ಅಮಿತ್ ಬಾಗ್ಚಿ ಶಿಕ್ಷೆಗೊಳಗಾದ ಅಪರಾಧಿಗಳು. ಇದನ್ನೂ ಓದಿ: ಬಾಡಿಗೆ ವಾಹನದಲ್ಲಿ ಬರುತ್ತಿದ್ದ ಯೋಧರು – ದಾಳಿಗೆ ನಕ್ಸಲರಿಂದ 50 ಕೆಜಿ ಸುಧಾರಿತ IED ಬಳಕೆ

    ಪೀಪಲ್ಸ್ ಲಿಬರೇಶನ್ ಆರ್ಮಿ ನಕ್ಸಲ್ ಸಂಘಟನೆ ಸಂಬಂಧದ ಪ್ರಕರಣದಲ್ಲಿ ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಕ್ರಿಮಿನಲ್ ಪಿತೂರಿಯಲ್ಲಿ ತೊಡಗಿದ್ದರು ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ಐಪಿಸಿ ಸೆಕ್ಷನ್ (Indian Penal Code) 121 ಎ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ (Unlawful Activities Prevention) ಕಾಯಿದೆ 1967 ರ ಸೆಕ್ಷನ್ 18, 18 ಎ ಮತ್ತು 39 ರ ಆರೋಪದಡಿಯಲ್ಲಿ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯ ಶಿಕ್ಷೆಯನ್ನು ಘೋಷಿಸಿದೆ.

    ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಪಿಎಲ್‍ಎ (PLA) ಸಹಾಯದಿಂದ ಸಿಪಿಐ (ಮಾವೋವಾದಿ) ನಕ್ಸಲರು ದೇಶವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿದೆ ಎಂಬ ಮಾಹಿತಿ ಮೇರೆಗೆ 2011ರ ಜು. 1ರಂದು ಎನ್‍ಐಎ (NIA) ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿತ್ತು.

    ತನಿಖೆಯ ವೇಳೆ ಕೋಲ್ಕತ್ತಾದಲ್ಲಿ ಪಿಎಲ್‍ಎ ಕಚೇರಿ ತೆರೆದಿರುವುದು ಬೆಳಕಿಗೆ ಬಂದಿತ್ತು. ಅಲ್ಲದೇ 2010 ರಲ್ಲಿ 76 ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹತ್ಯೆಗೈದಿದ್ದಕ್ಕಾಗಿ ಪಿಎಲ್‍ಎನ ಅಧ್ಯಕ್ಷ ಸಿಪಿಐ (Maoist) ಪ್ರಧಾನ ಕಾರ್ಯದರ್ಶಿಯನ್ನು ಅಭಿನಂದಿಸಿದ್ದಾರೆ ಎಂಬುದು ತಿಳಿದು ಬಂದಿತ್ತು.

    ಪಿಎಲ್‍ಎ, ಮಾವೋವಾದಿ ಕಾರ್ಯಕರ್ತರಿಗೆ ಬೆಂಬಲ ನೀಡಿದೆ. ನಿರಂತರವಾಗಿ ಇಮೇಲ್ ಮೂಲಕ ಸಂಪರ್ಕದಲ್ಲಿವೆ ಎಂದು ತನಿಖೆ ವೇಳೆ ತಿಳಿದು ಬಂದಿತ್ತು. ಅಲ್ಲದೆ ಅಪರಾಧಿಗಳು ಭಾರತದ ಒಳಗೆ ಮತ್ತು ಹೊರಗೆ ವಿವಿಧ ಸ್ಥಳಗಳಿಗೆ ನಕಲಿ ಗುರುತಿನ ಚೀಟಿಗಳನ್ನು ಬಳಸಿ ಪ್ರಯಾಣಿಸಿದ್ದಾರೆ. ಅಲ್ಲದೆ ಅವುಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆ ತೆರೆದಿದ್ದಾರೆ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

    ಮಾಹಿತಿ ಕಲೆ ಹಾಕಿ ತನಿಖೆ ನಡೆಸಿದ್ದ ಎನ್‍ಐಎ 2012 ರ ಮೇ 21 ಮತ್ತು ನವೆಂಬರ್ 16 ರಂದು ಹಾಗೂ ಜುಲೈ 31, 2014 ರಂದು ಗುವಾಹಟಿಯ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ಪ್ರಕರಣದ ಆರೋಪ ಪಟ್ಟಿಗಳನ್ನು ಸಲ್ಲಿಸಿತ್ತು. ಇದನ್ನೂ ಓದಿ: ಗೋಧ್ರಾ ರೈಲು ಬೋಗಿ ಸುಟ್ಟ ಪ್ರಕರಣ – 8 ದೋಷಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು

  • IND vs SA 2nd T20I: ಟಿಕೆಟ್ ಸೋಲ್ಡ್ ಔಟ್ – ಪಂದ್ಯ ನಡೆಯೋದೆ ಡೌಟ್

    IND vs SA 2nd T20I: ಟಿಕೆಟ್ ಸೋಲ್ಡ್ ಔಟ್ – ಪಂದ್ಯ ನಡೆಯೋದೆ ಡೌಟ್

    ಗುವಾಹಟಿ: ಭಾರತ (India) ಹಾಗೂ ದಕ್ಷಿಣ ಆಫ್ರಿಕಾ (South Africa) ನಡುವಿನ 2ನೇ ಟಿ20 ಪಂದ್ಯ ಗುವಾಹಟಿಯಲ್ಲಿ ಇಂದು ನಡೆಯಲಿದ್ದು, ಈಗಾಗಲೇ ಪಂದ್ಯದ ಟಿಕೆಟ್ ಸೋಲ್ಡ್ ಔಟ್ (Tickets Sold out) ಆಗಿದೆ. ಆದರೆ ಇತ್ತ ಪಂದ್ಯಕ್ಕೆ ಮಳೆ ಅಡಚಣೆಯಾಗುವ ಸಾಧ್ಯತೆ ಇದೆ.

    ಕೇರಳದಲ್ಲಿ ನಡೆದ ಮೊದಲ ಪಂದ್ಯ ಗೆದ್ದಿದ್ದ ಭಾರತ ಇದೀಗ ಎರಡನೇ ಪಂದ್ಯ ಗೆದ್ದು ಸರಣಿ ಗೆಲ್ಲುವ ತವಕದಲ್ಲಿದೆ. ಇತ್ತ ಮೊದಲ ಟಿ20 ಪಂದ್ಯದ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಆಫ್ರಿಕಾ ಪುಟಿದೇಳುವ ಹುಮ್ಮಸ್ಸಿನಲ್ಲಿದೆ. ಇಂದು ಎರಡನೇ ಟಿ20 ಪಂದ್ಯಕ್ಕೆ ಅಸ್ಸಾಂನ ಬರಾಸ್‍ಪುರ ಕ್ರಿಕೆಟ್ ಸ್ಟೇಡಿಯಂ (Barsapara Cricket Stadium) ಸಜ್ಜಾಗಿದೆ. ಪಂದ್ಯಕ್ಕೆ ವರುಣನ (Rain) ಕಾಟ ಎದುರಾಗುವ ಸಾಧ್ಯತೆ ಹೆಚ್ಚಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಹಾಗಾಗಿ ಇಂದು ಕೂಡ ಮಳೆ ಸುರಿಯುವ ಸೂಚನೆ ಇದೆ. ಇದನ್ನೂ ಓದಿ: ಲೆಜೆಂಡ್ಸ್‌ಗಳ ಲೆಜೆಂಡರಿ ಆಟ – ಲಂಕನ್ನರಿಗೆ ಸೋಲುಣಿಸಿ ಚಾಂಪಿಯನ್ ಆದ ಭಾರತ

    ಹವಾಮಾನ ವೈಪರೀತ್ಯದಿಂದಾಗಿ ಕಳೆದೆರಡು ದಿನಗಳಿಂದ ಅಸ್ಸಾಂನಲ್ಲಿ ಹೆಚ್ಚಿನ ಮಳೆ ಸುರಿಯುತ್ತಿದೆ. ಇಂದು ಕೂಡ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ವೈಪರಿತ್ಯ ಎದುರಿಸಲು ತಮ್ಮ ತಂಡ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ Assam Cricket Association (ACA) ಭರವಸೆ ನೀಡಿದ್ದು, ಮಳೆ ನಿಂತ ಕೂಡಲೇ ಆಟಕ್ಕೆ ಮೈದಾನ ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಇದನ್ನೂ ಓದಿ: ಟೀಂ ಇಂಡಿಯಾ ಜೊತೆ ಆಸ್ಟ್ರೇಲಿಯಾಗೆ ಬುಮ್ರಾ – ಮೆಡಿಕಲ್ ಟೀಂನಿಂದ ಶುಭ ಸುದ್ದಿ

    ಮಳೆಯ ನಡುವೆಯೇ ಪಂದ್ಯದ ಟಿಕೆಟ್ ಸೋಲ್ಡ್ ಔಟ್ ಆಗಿದೆ. 39,000 ಪ್ರೇಕ್ಷಕರು ವೀಕ್ಷಿಸಬಹುದಾದ ಸಾಮರ್ಥ್ಯದ ಸ್ಟೇಡಿಯಂ ಭರ್ತಿಯಾಗಿದ್ದು, ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ವರುಣ ಕೃಪೆ ತೋರಿದರೆ ಮಾತ್ರ ಪಂದ್ಯ ನಡೆಯಲಿದೆ.

    ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಗೆಲುವು ಸಾಧಿಸಿದ್ದು, ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದೀಗ 2ನೇ ಪಂದ್ಯವನ್ನೂ ಗೆದ್ದು ಅಂತಿಮ ಪಂದ್ಯಕ್ಕೂ ಮುನ್ನವೇ ಸರಣಿ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿ ಟೀಂ ಇಂಡಿಯಾ ಇದೆ. ತಂಡಕ್ಕೆ ಬುಮ್ರಾ ಬದಲು ಸಿರಾಜ್ ಆಗಮನವಾಗಿದೆ. ಅತ್ತ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಕೈಕೊಟ್ಟ ಆಫ್ರಿಕಾ ತಂಡಕ್ಕೆ ಬ್ಯಾಟ್ಸ್‌ಮ್ಯಾನ್‌ಗಳು ಕೈಹಿಡಿಯಬೇಕಾಗಿದೆ. ಎರಡು ತಂಡಗಳು ಕೂಡ ಬಲಿಷ್ಠವಾಗಿದ್ದು, ಮಳೆ ಬಿಟ್ಟರೆ, ರೋಚಕ ಹಣಾಹಣಿಗೆ ಗುವಾಹಟಿ ಸಾಕ್ಷಿಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಎಷ್ಟು ದಿನ ಗುವಾಹಟಿಯಲ್ಲೇ ಅಡಗಿರುತ್ತೀರಿ?: ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಟಾಂಗ್

    ಎಷ್ಟು ದಿನ ಗುವಾಹಟಿಯಲ್ಲೇ ಅಡಗಿರುತ್ತೀರಿ?: ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಟಾಂಗ್

    ಮುಂಬೈ: ಮಹಾರಾಷ್ಟ್ರದ ರಾಜಕೀಯ ಸ್ಥಿತಿ ನಾಟಕೀಯವಾಗಿ ತಿರುವು ಮುರುವುಗಳನ್ನು ಪಡೆದುಕೊಳ್ಳುತ್ತಿರುವುದರ ನಡುವೆಯೇ ಶಿವಸೇನೆಯ ನಾಯಕ ಸಂಜಯ್ ರಾವತ್ ಅವರು ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುವಾಹಟಿಯಲ್ಲಿ ಎಷ್ಟು ದಿನ ಅಡಗಿಕೊಳ್ಳುತ್ತೀರಿ ಎಂದು ಟಾಂಗ್ ನೀಡಿದ್ದಾರೆ.

    ಬಂಡಾಯ ಶಾಸಕರ ಕುರಿತು ಟ್ವೀಟ್ ಮಾಡಿರುವ ಸಂಜಯ್ ರಾವತ್, ಎಷ್ಟು ದಿನ ನೀವು ಗುವಾಹಟಿಯಲ್ಲೇ ಅಡಗುತ್ತೀರಿ? ನೀವು ಚೌಪಾಟಿಗೆ ಮರಳಲೇ ಬೇಕು ಎಂದು ಟಾಂಗ್ ನೀಡಿದ್ದಾರೆ.

    ಏಕನಾಥ್ ಶಿಂಧೆ ಅವರು ಭಾನುವಾರ ಮಧ್ಯಾಹ್ನ ಶಾಸಕರ ಸಭೆ ಕರೆದಿದ್ದಾರೆ. ಅವರ ಮುಂದಿನ ನಡೆಯ ಬಗ್ಗೆ ಚರ್ಚಿಸಲು ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹಟಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

    ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದಿರುವ ಶಿವಸೇನೆಯ 16 ಶಾಸಕರಿಗೆ ವಿಧಾನಸಭಾ ಕಾರ್ಯಲಯ ನೋಟಿಸ್ ನೀಡಿದೆ. ಸೋಮವಾರ ಸಂಜೆ ಒಳಗೆ ಲಿಖಿತ ಪ್ರತಿಕ್ರಿಯೆ ನೀಡಬೇಕು ಎಂದು ನೋಟಿಸ್‌ನಲ್ಲಿ ಹೇಳಲಾಗಿದ್ದು, ಈ ಹಿನ್ನೆಲೆ ಏಕನಾಥ್ ಶಿಂಧೆ ಶಾಸಕರೊಂದಿಗೆ ಚರ್ಚಿಸಲಿದ್ದರೆ. ಇದನ್ನೂ ಓದಿ: ನಿಮಗೆ ತಾಕತ್ ಇದ್ರೆ ಚುನಾವಣೆಗೆ ಬನ್ನಿ: ರೆಬೆಲ್ ಶಾಸಕರಿಗೆ ಸವಾಲೆಸೆದ ಆದಿತ್ಯ ಠಾಕ್ರೆ

    ಮಹಾರಾಷ್ಟ್ರದ ಶಾಸಕಾಂಗ ಕಾರ್ಯದರ್ಶಿ ಬಂಡಾಯ ಶಾಸಕರಿಗೆ ಜೂನ್ 27ರ ಸಂಜೆಯ ಒಳಗಾಗಿ ಲಿಖಿತ ಉತ್ತರವನ್ನು ಕೋರಿ ಸಮನ್ಸ್ ಜಾರಿ ಮಾಡಿದೆ. ಮಹಾರಾಷ್ಟ್ರದ ವಿಧಾನ ಭವನದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಸಮನ್ಸ್ ಜಾರಿಗೊಳಿಸಿದ್ದಾರೆ. ಕೆಂದ್ರ ಸರ್ಕಾರ 15 ಬಂಡಾಯ ಶಾಸಕರಿಗೆ ವೈ ಪ್ಲಸ್ ವರ್ಗದ ಶಸ್ತ್ರಾಸ್ತ್ರ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಭದ್ರತೆ ಒದಗಿಸಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರೆಬೆಲ್ ಶಾಸಕರಿಗೆ ಕೇಂದ್ರದಿಂದ Y+ ಭದ್ರತೆ

    ಈ ನಡುವೆ ಶಿವಸೇನಾ ಹೆಸರಿಗಾಗಿ ಮೂಲ ಶಿವಸೇನೆ ನಾಯಕರು ಹಾಗೂ ಬಂಡಾಯ ಶಾಸಕರ ನಡುವೆ ಫೈಟ್ ಜೋರಾಗಿದ್ದು, ಶಿವಸೇನೆ ಮತ್ತು ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಕೆ ಮಾಡದಂತೆ ಸಿಎಂ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದ ಶಿವಸೇನೆ ನಾಯಕರು ಬಂಡಾಯ ಶಾಸಕರಿಗೆ ಪಕ್ಷದ ಹೆಸರು ಮತ್ತು ಅದರ ನಾಯಕರ ಹೆಸರು ಬಳಸಿಕೊಳ್ಳುವ ಅವಕಾಶ ಇಲ್ಲ, ಮತ್ತು ಪಕ್ಷದ್ರೋಹ ಮಾಡಿದ ಏಕನಾಥ್ ಶಿಂಧೆ ವಿರುದ್ಧ ಕ್ರಮಕ್ಕೆ ತಿರ್ಮಾನ ಮಾಡಲಾಗಿತ್ತು. ಬಂಡಾಯ ಶಾಸಕರು ಶಿವಸೇನೆ ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಕೆ ಮಾಡದಿರಲು ಸೂಚಿಸುವಂತೆ ಮೂಲ ಶಿವಸೇನೆ ನಾಯಕರು ಚುನಾವಣೆ ಆಯೋಗದ ಮೊರೆ ಕೂಡಾ ಹೋಗಿದ್ದಾರೆ.

    Live Tv

  • ಅಸ್ಸಾಂನಲ್ಲಿ ಭೀಕರ ಪ್ರವಾಹ – 14ಕ್ಕೇರಿದ ಸಾವಿನ ಸಂಖ್ಯೆ

    ಅಸ್ಸಾಂನಲ್ಲಿ ಭೀಕರ ಪ್ರವಾಹ – 14ಕ್ಕೇರಿದ ಸಾವಿನ ಸಂಖ್ಯೆ

    ಗುವಾಹಟಿ: ಭೀಕರ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಇದುವರೆಗೆ ಅಸ್ಸಾಂನಲ್ಲಿ 14 ಮಂದಿ ಪ್ರಾಣ ಕಳೆದುಕೊಂಡಿದ್ದು, ಲಕ್ಷಾಂತರ ಜನರ ಬದುಕು ಅಸ್ತವ್ಯಸ್ತಗೊಂಡಿದೆ.

    ಭಾರೀ ಮಳೆಯಿಂದಾಗಿ ಅಸ್ಸಾಂನಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ರಾಜ್ಯದ 29 ಜಿಲ್ಲೆಗಳು ಮಳೆಗಾಹುತಿಯಾಗಿವೆ. ಭೀಕರ ಪ್ರವಾಹದಿಂದಾಗಿ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು, 7 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಇದುವರೆಗೆ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಗಡಾಯಿಸಿತೇ ಬಿಡದಿ ನಿತ್ಯಾನಂದನ ಆರೋಗ್ಯ..?

    ಈ ಕುರಿತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದರ ನಡುವೆ ಗುವಾಹಟಿಯ ಪ್ರಾದೇಶಿಕ ಹವಾಮಾನ ಕೇಂದ್ರವು ಅಸ್ಸಾಂ ಮತ್ತು ಮೇಘಾಲಯದಲ್ಲಿ ಮೇ 21 ರವರೆಗೆ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಇದನ್ನೂ ಓದಿ: ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್‌ – ಪೆಟ್ರೋಲ್‌, ಡೀಸೆಲ್‌ ಅಬಕಾರಿ ಸುಂಕ ಇಳಿಕೆ

    ನೈರುತ್ಯ ಮಾರುತದಿಂದಾಗಿ ಬಂಗಾಳಕೊಲ್ಲಿಯಿಂದ ಒತ್ತಡ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಈಶಾನ್ಯ ಭಾಗದಲ್ಲಿ ಭಾರೀ ಮಳೆ ಮುಂದುವರಿಯುವ ನಿರೀಕ್ಷೆ ಇದೆ.

  • ಗುವಾಹಟಿ ಪಾಲಿಕೆ ಚುನಾವಣೆ – 60ಕ್ಕೆ 58 ವಾರ್ಡ್‌ಗಳಲ್ಲಿ ಬಿಜೆಪಿ ಮೈತ್ರಿಗೆ ಜಯಭೇರಿ, ಕಾಂಗ್ರೆಸ್‌ ಶೂನ್ಯ

    ಗುವಾಹಟಿ ಪಾಲಿಕೆ ಚುನಾವಣೆ – 60ಕ್ಕೆ 58 ವಾರ್ಡ್‌ಗಳಲ್ಲಿ ಬಿಜೆಪಿ ಮೈತ್ರಿಗೆ ಜಯಭೇರಿ, ಕಾಂಗ್ರೆಸ್‌ ಶೂನ್ಯ

    ದಿಸ್ಪುರ: ಅಸ್ಸಾಂನ ಗುವಾಹಟಿ ಪಾಲಿಕೆ ಚುನಾವಣೆಯ ಮತ ಎಣಿಕೆ ನಡೆದಿದ್ದು, ಬಿಜೆಪಿ ಮತ್ತು ಮಿತ್ರಪಕ್ಷ ಅಸೊಮ್‌ ಗಾನ ಪರಿಷದ್‌ (ಎಜಿಪಿ) ಕ್ಲೀನ್‌ ಸ್ವೀಪ್‌ ಸಾಧಿಸಿದೆ. 60ರ ಪೈಕಿ 58 ವಾರ್ಡ್‌ಗಳಲ್ಲಿ ಭರ್ಜರಿ ಜಯ ಸಾಧಿಸಿದೆ.

    ಅಸ್ಸಾಂನ ಅತಿದೊಡ್ಡ ನಗರ ಮತ್ತು ಈಶಾನ್ಯ ಭಾಗದ ಗುವಾಹಟಿಯಲ್ಲಿ ಬಿಜೆಪಿ 52 ಸ್ಥಾನಗಳನ್ನು ಗಳಿಸಿದರೆ, ಎಜಿಪಿ 6 ಸ್ಥಾನಗಳನ್ನು ಗೆದ್ದಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷವು ಈ ಹಿಂದೆ ಕಳೆದ ತಿಂಗಳು ನಡೆದ ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಇದನ್ನೂ ಓದಿ: ಟಿಕ್‍ಟಾಕ್, ಪಬ್‍ಜಿ ಯುವಕರ ದಾರಿ ತಪ್ಪಿಸುತ್ತೆ – ಬ್ಯಾನ್ ಮಾಡಿದ ತಾಲಿಬಾನ್

    ಬಿಜೆಪಿಯ ನಂತರ ರಾಜ್ಯ ವಿಧಾನಸಭೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾದ ವಿರೋಧ ಪಕ್ಷ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ ಆಮ್ ಆದ್ಮಿ ಪಕ್ಷ (ಎಎಪಿ) ಗುವಾಹಟಿಯಲ್ಲಿ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ಖಾತೆ ತೆರೆದಿದೆ. ಅಸ್ಸಾಂ ಜಾತಿಯ ಪಕ್ಷ (ಎಜೆಪಿ) ಕೂಡ ಒಂದು ಸ್ಥಾನ ಗೆದ್ದಿದೆ.

    ಈ ಬಾರಿ ಒಟ್ಟು ವಾರ್ಡ್‌ಗಳ ಸಂಖ್ಯೆಯನ್ನು 60ಕ್ಕೆ ಹೆಚ್ಚಿಸಲಾಗಿದ್ದು, ಶೇ.50ರಷ್ಟು ಸ್ಥಾನ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿದೆ. 60 ವಾರ್ಡ್‌ಗಳಿಗೆ ಒಟ್ಟು 200 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿಯ ಮೂವರು ಅಭ್ಯರ್ಥಿಗಳು (ವಾರ್ಡ್ 5, 6 ಮತ್ತು 22) ಅವಿರೋಧವಾಗಿ ಗೆದ್ದಿದ್ದಾರೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ವಿಚಾರಕ್ಕೆ ಗದ್ದಲ ಸೃಷ್ಟಿ- 6 ಮಂದಿ ಶಿವಸೇನಾ ಕಾರ್ಯಕರ್ತರು ಅರೆಸ್ಟ್

    ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಐತಿಹಾಸಿಕ ಗೆಲುವು ನೀಡಿದ್ದಕ್ಕಾಗಿ ನಾನು ಗುವಾಹಟಿಯ ಜನರಿಗೆ ತಲೆಬಾಗುತ್ತೇನೆ. ಈ ಬೃಹತ್ ಜನಾದೇಶದೊಂದಿಗೆ, ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ನಮ್ಮ ಅಭಿವೃದ್ಧಿ ಪಯಣದಲ್ಲಿ ಜನರು ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಟ್ವೀಟ್‌ ಮಾಡಿದ್ದಾರೆ.

  • 2 ವರ್ಷಗಳ ನಂತರ ಕೋವಿಡ್ ಮುಕ್ತ ‘ಬಿಹು’ ನಡೆಸಲು ಸಜ್ಜಾದ ಅಸ್ಸಾಂ

    2 ವರ್ಷಗಳ ನಂತರ ಕೋವಿಡ್ ಮುಕ್ತ ‘ಬಿಹು’ ನಡೆಸಲು ಸಜ್ಜಾದ ಅಸ್ಸಾಂ

    ಗುವಾಹಟಿ: 2 ವರ್ಷಗಳ ನಂತರ ಕೋವಿಡ್-19 ಮುಕ್ತ ಬಿಹುವನ್ನು ಆಚರಿಸಲು ಅಸ್ಸಾಂ ಸಜ್ಜಾಗಿದೆ.

    ಅಸ್ಸಾಮಿನ ಹೊಸ ವರ್ಷ ಗುರುತಿಸಲು ‘ರೊಂಗಾಲಿ ಬಿಹು’ವನ್ನು ಆಚರಿಸಲಾಗುತ್ತೆ. ಇದು ಶುಕ್ರವಾರ(ನಾಳೆ)ದಿಂದ ಪ್ರಾರಂಭವಾಗುತ್ತಿದ್ದು, ಅಸ್ಸಾಂನ ಅತಿದೊಡ್ಡ ಹಬ್ಬವಾಗಿದೆ. ಆದರೆ ಕಳೆದ 2 ವರ್ಷಗಳಿಂದ ಕೊರೊನಾ ಕಾರಣ ರೊಂಗಾಲಿ ಬಿಹುವನ್ನು ಅದ್ದೂರಿಯಾಗಿ ಆಚರಿಸಿರಲಿಲ್ಲ. ಆದರೆ ಈಗ ಸರ್ಕಾರ ಯಾವುದೇ ನಿರ್ಬಂಧಗಳಿಲ್ಲದೆ ಹಬ್ಬ ಆಚರಿಸಲು ಅನುಮತಿಯನ್ನು ಕೊಟ್ಟಿದೆ. ಈ ಆಚರಣೆಯಲ್ಲಿ ಅಸ್ಸಾಂ ಸಾಂಪ್ರದಾಯಿಕ ಸಂಗೀತ ವಾದ್ಯವಾದ ಧೋಲ್ ಮತ್ತು ಪೇಪಾಯನ್ನು ಬಾರಿಸಿ ಹಬ್ಬವನ್ನು ಪ್ರಾರಂಭ ಮಾಡಲಾಗುತ್ತದೆ. ಇದನ್ನೂ ಓದಿ: ರಂಗೋಲಿಯಲ್ಲಿ ಮೂಡಿಬಂದ 20 ಅಡಿ ಯಶ್ ಭಾವಚಿತ್ರ 

    ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಬಿಹು ಆಚರಣೆ ಮಾಡಲು ನಿರ್ಬಂಧವನ್ನು ಹಾಕಲಾಗಿತ್ತು. ಆದರೆ ಈ ಬಾರಿ ಸರ್ಕಾರದ ಯಾವುದೇ ನಿರ್ಬಂಧವಿಲ್ಲದೆ ಅದ್ದೂರಿ ಆಚರಣೆಗೆ ಅವಕಾಶ ನೀಡಲಾಗಿದೆ. ಈ ಹಬ್ಬವು ವಾರ ಪೂರ್ತಿ ನಡೆಯುತ್ತೆ. ಇದರಲ್ಲಿ ಸಂಗೀತ, ನೃತ್ಯ ಮತ್ತು ಬಿಹು ಸಾಂಪ್ರದಾಯಿಕ ಉಡುಪು ತೊಟ್ಟುಕೊಂಡು ಆಚರಿಸಲಾಗುತ್ತದೆ.

    ಈ ಬಾರಿಯೂ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಬೆಲೆ ಏರಿಕೆ ಎದುರಾಗಿದೆ. ರಾಜ್ಯದ ಮಾರುಕಟ್ಟೆಗಳಲ್ಲಿ ದೊಡ್ಡ ಚಿಂತೆಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗುವಾಹಟಿ ನಿವಾಸಿ ವಿನೋದ್, ಬಿಹು ಹಬ್ಬಕ್ಕೆ ಅನುಮತಿ ಸಿಕ್ಕಿರುವುದು ನಮಗೆ ಸಂತೋಷ. ಆದರೆ ನಾವು ಬಳಸುವ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇದರಿಂದ ನಮಗೆ ಅದ್ದೂರಿ ಆಚರಣೆ ಮಾಡಬೇಕು ಎಂದು ಮನಸ್ಸಿದ್ದರೂ, ಹಣದ ಸಮಸ್ಯೆಯಿಂದ ಸಾಧ್ಯವಾಗುತ್ತಿಲ್ಲ. ವಾಸ್ತವವಾಗಿ, ಸ್ಥಳೀಯ ಬಟ್ಟೆ ನೇಕಾರರು ತಮ್ಮ ಬಿಹು ನೇಯ್ಗೆಗಳಿಗೆ ಇನ್ನೂ ಉತ್ತಮ ಬೆಲೆಯನ್ನು ಪಡೆಯುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಲಡ್ಡು ತಿನ್ನಿಸುವ ಮೂಲಕ ವೈವಾಹಿಕ ವಿವಾದ ಕೊನೆಗೊಳಿಸಿದ 70ರ ಹರೆಯ ದಂಪತಿ

    ಬಿಹುದಲ್ಲಿ ಡ್ಯಾನ್ಸ್ ತುಂಬಾ ಮುಖ್ಯವಾಗಿದೆ. ಈ ಹಬ್ಬದಲ್ಲಿ ಡ್ಯಾನ್ಸ್ ಮಾಡಬೇಕು ಎಂದು ಹಲವು ಜನರು ತರಬೇತಿ ಪಡೆದುಕೊಳ್ಳುತ್ತಾರೆ. ಈ ಕುರಿತು ಗುವಾಹಟಿ ತರಬೇತುದಾರ ಬೋಲಿನ್ ಚಂದ್ರ ಬೋರಾ ಮಾತನಾಡಿದ್ದು, ಕಳೆದ ಎರಡು ವರ್ಷಗಳಿಂದ ಬಿಹು ಸಂಭ್ರಮ ಸ್ಥಗಿತಗೊಂಡಿತ್ತು. ಆದರೆ ಈ ಬಾರಿ ಅದ್ದೂರಿಯಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇವೆ. 400 ಹುಡುಗಿಯರು, ಹುಡುಗರು ಬಿಹು ತರಬೇತಿಗೆ ನೋಂದಾಯಿಸಿಕೊಂಡಿದ್ದಾರೆ. ನಾವು ಅವರಿಗೆ ಸಾಂಪ್ರದಾಯಿಕ ವಾದ್ಯಗಳಾದ ಢೋಲ್, ಪೇಪಾ ಮತ್ತು ಗಗೋನಾದಲ್ಲಿ ತರಬೇತಿ ನೀಡುತ್ತಿದ್ದೇವೆ ಎಂದು ವಿವರಿಸಿದರು.

  • ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ

    ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ

    ಗುವಾಹಟಿ: ಅಸ್ಸಾಂನ ಹೈಲಕಂಡಿ ಜಿಲ್ಲೆಯ ನ್ಯಾಯಾಲಯವೊಂದು 11 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

    ಹೈಲಕಂಡಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ವಿಶೇಷ ನ್ಯಾಯಾಧೀಶ) ಸಂಜೋಯ್ ಹಜಾರಿಕಾ ಅವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅನೈಸರ್ಗಿಕ ಅತ್ಯಾಚಾರ) ಅಡಿಯಲ್ಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20,000 ರೂ. ದಂಡವನ್ನು ವಿಧಿಸಿದ್ದಾರೆ. ಇದನ್ನೂ ಓದಿ: ಉಡದ ಮೇಲೆ ಅತ್ಯಾಚಾರಗೈದ ನಾಲ್ವರು ಅರೆಸ್ಟ್

    BRIBE

    ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ ಅಪರಾಧಿ ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ. ಇದನ್ನೂ ಓದಿ: ಐಎನ್‌ಎಸ್ ದೇಣಿಗೆ ವಂಚನೆ: ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ, ಪುತ್ರನ ವಿರುದ್ಧ ಪ್ರಕರಣ ದಾಖಲು

    2018ರ ಜೂನ್ 5ರಂದು ಲಾಲಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅಪರಾಧಿ ಆಗ 21 ವರ್ಷ ವಯಸ್ಸಿನವನಾಗಿದ್ದನು. ಅವನು ಇಬ್ಬರು ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಒಬ್ಬ ಬಾಲಕನನ್ನು ಲಾಲಾ ರೂರಲ್ ಕಾಲೇಜು ಆವರಣದಲ್ಲಿರುವ ಶೌಚಾಲಯಕ್ಕೆ ಬಲವಂತವಾಗಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದನು.

    ನಂತರ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪೊಲೀಸರು ಕಳೆದ ವರ್ಷ ಚಾರ್ಜ್ ಶೀಟ್ ಸಲ್ಲಿಸಿದ್ದರು.

  • ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ: ಅಸ್ಸಾಂ ಸಿಎಂ

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ: ಅಸ್ಸಾಂ ಸಿಎಂ

    ಡಿಸ್ಪುರ್: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆಯನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಘೋಷಣೆ ಮಾಡಿದ್ದಾರೆ.

    1990ರ ದಶಕದಲ್ಲಿ ಕಾಶ್ಮೀರಿ ಪಂಡಿತರನ್ನು ಬಲವಂತವಾಗಿ ಹೇಗೆ ಕಾಶ್ಮೀರದಿಂದ ಕಳುಹಿಸಲಾಯಿತು ಎಂಬ ಸತ್ಯವನ್ನು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಹಿನ್ನೆಲೆ ಹಿಮಂತ ಬಿಸ್ವಾ ಶರ್ಮಾ ಅವರು, ನಮ್ಮ ಸರ್ಕಾರಿ ನೌಕರರು ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾವನ್ನು ವೀಕ್ಷಿಸಲು ಅರ್ಧ ದಿನದ ವಿಶೇಷ ರಜೆಗೆ ಕೊಡಲಾಗುತ್ತಿದೆ. ಈ ಘೋಷಣೆಯನ್ನು ಮಾಡಲು ತುಂಬಾ ಸಂತೋಷವಾಗಿದೆ. ಈ ಬಗ್ಗೆ ಅವರು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಬೇಕು. ಸಿನಿಮಾಗೆ ಹೋಗಿದ್ದ ಟೀಕೆಟ್‍ಗಳನ್ನು ಮರುದಿನ ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ ಫೈಲ್ಸ್ ಚಿತ್ರ ವಿಕ್ಷಣೆ ಮಾಡಿದ ಮಠಾಧೀಶರು

    ಶರ್ಮಾ ಅವರು ಸಹ ಸೋಮವಾರ ತಮ್ಮ ಸಂಪುಟದೊಂದಿಗೆ ಗುವಾಹಟಿಯ ಚಿತ್ರಮಂದಿರದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ವೀಕ್ಷಿಸಿದರು. ಕಾಶ್ಮೀರಿ ಪಂಡಿತರ ಮೇಲೆ ನಡೆದಿರುವ ದೌರ್ಜನ್ಯವೂ ಮಾನವೀಯತೆಯ ಮೇಲೆ ದೊಡ್ಡ ಕಳಂಕವಾಗಿದೆ ಎಂದು ಹೇಳಿದರು.

    ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಅವರನ್ನು ಓಡಿಸಿರುವ ರೀತಿ ಮಾನವೀಯತೆಯ ಮೇಲೆ ಕಳಂಕವಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಜನರ ದುಸ್ಥಿತಿಯನ್ನು ಹೃದಯಕ್ಕೆ ಮುಟ್ಟುವಂತೆ ಚಿತ್ರೀಸಲಾಗಿದೆ. ಇದನ್ನು ನಾನು ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳು ಮತ್ತು @BJP4Assam ಮತ್ತು ಮಿತ್ರಪಕ್ಷಗಳ ಶಾಸಕರೊಂದಿಗೆ ವೀಕ್ಷಿಸಿದ್ದೇನೆ ಎಂದು ಸಿನಿಮಾ ವೀಕ್ಷಿಸಿದ ನಂತರ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿದ್ದ ನನ್ನ ಪೂರ್ವಜರು ನೋವು ತಿಂದೆ ಕಾಶ್ಮೀರ ಬಿಟ್ಟರು : ಅನಂತ್ ನಾಗ್ ಬಿಚ್ಚಿಟ್ಟ ಕಾಶ್ಮೀರಿ ಕ್ರೌರ್ಯ 

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಿಲೀಸ್ ಆದ ದಿನದಿಂದ ಬಾರಿ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿರುವ ನೈಜತೆಯನ್ನು ಅರಿತ ರಾಜಕಾರಣಿಗಳು ಮತ್ತು ಗಣ್ಯರು ಸಿನಿಮಾವನ್ನು ಭಾರತ ಪ್ರಜೆಗಳು  ನೋಡುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸಲು ಹಲವು ರಿಯಾಯಿತಿಗಳನ್ನು ಕೊಡುತ್ತಿದ್ದಾರೆ

  • ಮಹಿಳೆಯರೇ ಎಚ್ಚರ- ಚಿನ್ನ ಸ್ವಚ್ಛ ಮಾಡೋದಾಗಿ ಹೇಳಿ ಮೋಸ ಮಾಡ್ತಾರೆ!

    ಮಹಿಳೆಯರೇ ಎಚ್ಚರ- ಚಿನ್ನ ಸ್ವಚ್ಛ ಮಾಡೋದಾಗಿ ಹೇಳಿ ಮೋಸ ಮಾಡ್ತಾರೆ!

    ದಿಸ್ಪುರ್: ಇಬ್ಬರು ವಂಚಕರು ಮನೆ ಮನೆಗೆ ತೆರಳಿ ಚಿನ್ನವನ್ನು ಸ್ವಚ್ಛಮಾಡಿ ಕೊಡುವುದಾಗಿ ತಿಳಿಸಿ ಮಹಿಳೆಯೊಬ್ಬರಿಂದ ಚಿನ್ನದ ಬಳೆಗಳನ್ನು ವಂಚಿಸಿರುವ ಘಟನೆ ಗುವಾಹಟಿಯ ಪನ್‍ಬಜಾರ್‍ನಲ್ಲಿ ನಡೆದಿದೆ.

    ಮಂಗಳವಾರ ಮನೆ ಬಾಗಿಲಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳು ಮಹಿಳೆಯೊಬ್ಬರ ಚಿನ್ನದ ಬಳೆಗಳನ್ನು ಪತಂಜಲಿ ಕ್ಲೀನಿಂಗ್ ಪೌಡರ್‍ನಿಂದ ಸ್ವಚ್ಛಮಾಡಿ ಕೊಡುವುದಾಗಿ ತಿಳಿಸಿದ್ದಾರೆ. ಮಹಿಳೆ ಇದನ್ನು ನಂಬಿ ತನ್ನ ಚಿನ್ನದ ಬಳೆಗಳನ್ನು ನೀಡಿದ್ದಾಳೆ. ಸ್ವಲ್ಪ ಸಮಯದಲ್ಲಿ ಪೌಡರ್ ತುಂಬಿದ ಬಳೆಗಳನ್ನು ವಂಚಕರು ಮಹಿಳೆಯ ಕೈಗೆ ನೀಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಧ್ವಜಗಳನ್ನು ಮುದ್ರಿಸಿದ ಉತ್ಪನ್ನಗಳ ಮಾರಾಟ – ಅಮೆಜಾನ್ ವಿರುದ್ಧ ಎಫ್‍ಐಆರ್

    ಪೌಡರ್ ಕೊಳೆಯನ್ನು ತೆಗೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿ, ಕೆಲವು ಗಂಟೆಗಳವರೆಗೆ ಹಾಗೆಯೇ ಇಡುವಂತೆ ತಿಳಿಸಿ ಪರಾರಿಯಾಗಿದ್ದಾರೆ. ಆದರೆ ಮಹಿಳೆ ಸ್ವಲ್ಪ ಸಮಯ ಬಟ್ಟು ಬಳೆಯನ್ನು ಪರೀಕ್ಷಿಸಲು ಬಂದಾಗ ಆಘಾತ ಕಾದಿತ್ತು. ಆಕೆಯ ಚಿನ್ನದ ಬಳೆಯ ಬದಲಿಗೆ ವಂಚಕರು ಪ್ಲಾಸ್ಟಿಕ್ ಬಳೆ ನೀಡಿ ಪರಾರಿಯಾಗಿರುವ ವಿಚಾರ ಮಹಿಳೆಗೆ ತಡವಾಗಿ ತಿಳಿದಿದೆ.

    ಸಂತ್ರಸ್ತೆ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ದೂರು ದಾಖಲಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಈ ರೀತಿಯಾಗಿ ಅಪರಿಚಿತರನ್ನು ನಂಬುವುದು ತಪ್ಪು ಎಂದು ಆಕೆಗೆ ತಿಳಿಸಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹಿಸಲು, ಮರುಬಳಕೆ ಮಾಡಲು ನೋಯ್ಡಾದಲ್ಲಿ ಹೊಸ ಅಭಿಯಾನ

    POLICE JEEP

    ಪಾನ್‍ಬಜಾರ್ ಪೊಲೀಸ್ ಠಾಣೆಯ ಅಧಿಕಾರಿ ರುಸ್ತಮ್ ರಾಜಬ್ರಹ್ಮ ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗುವುದು ಎಂದಿದ್ದಾರೆ.