Tag: Guwahati

  • ಅಸ್ಸಾಂನ ಗುವಾಹಟಿಯಲ್ಲಿ 5.8 ತೀವ್ರತೆಯ ಭೂಕಂಪ – ಉತ್ತರ ಬಂಗಾಳ, ಭೂತಾನ್‌ನಲ್ಲೂ ಕಂಪನ

    ಅಸ್ಸಾಂನ ಗುವಾಹಟಿಯಲ್ಲಿ 5.8 ತೀವ್ರತೆಯ ಭೂಕಂಪ – ಉತ್ತರ ಬಂಗಾಳ, ಭೂತಾನ್‌ನಲ್ಲೂ ಕಂಪನ

    ದಿಸ್ಪುರ: ಅಸ್ಸಾಂನ (Assam) ಗುವಾಹಟಿಯಲ್ಲಿ 5.8 ತೀವ್ರತೆಯ ಭೂಕಂಪ (Earthquake) ಸಂಭವಿಸಿದ್ದು, ಉತ್ತರ ಬಂಗಾಳ ಮತ್ತು ನೆರೆಯ ಭೂತಾನ್‌ನಲ್ಲೂ ಕಂಪನದ ಅನುಭವವಾಗಿದೆ.

    ಭೂಕಂಪದ ಕೇಂದ್ರವು 5 ಕಿಲೋಮೀಟರ್ ಆಳದಲ್ಲಿದ್ದು, ಉದಲ್ಗುರಿ ಪಟ್ಟಣದಲ್ಲಿತ್ತು ಎಂದು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಇದನ್ನೂ ಓದಿ: ಪಾಕ್‌ ವಿರುದ್ಧ ಟೀಂ ಇಂಡಿಯಾ ಗೆಲುವಿಗೆ ವಿಶ್ವ ಹಿಂದೂ ರಕ್ಷಾ ಪರಿಷತ್‌ನಿಂದ ಹೋಮ-ಹವನ

    ಗುವಾಹಟಿಯಲ್ಲಿ ಭಯಭೀತರಾದ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿಹೋದರು. ಇಲ್ಲಿಯವರೆಗೆ ಯಾವುದೇ ಗಾಯ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ವರದಿಗಳಾಗಿಲ್ಲ. ಈಶಾನ್ಯವು ಹೆಚ್ಚಿನ ಭೂಕಂಪನ ವಲಯದಲ್ಲಿ ಬರುವುದರಿಂದ ಈ ಪ್ರದೇಶದಲ್ಲಿ ಭೂಕಂಪಗಳು ಆಗಾಗ್ಗೆ ಸಂಭವಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಯಾವುದೇ ದೊಡ್ಡ ಹಾನಿ ಅಥವಾ ಜೀವಹಾನಿ ವರದಿಯಾಗಿಲ್ಲ. ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹಿಮಂತ ಶರ್ಮಾ ತಿಳಿಸಿದ್ದಾರೆ. ಕೇಂದ್ರ ಬಂದರು ಸಚಿವರೂ ಆಗಿರುವ ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್, ಜನರು ಜಾಗರೂಕರಾಗಿರಲು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ತಮಾಷೆಗಾಗಿ ಹಾಸ್ಟೆಲ್‌ನಲ್ಲಿ ಸ್ನೇಹಿತರಿಂದ ವಿದ್ಯಾರ್ಥಿಗಳ ಕಣ್ಣಿಗೆ ಫೆವಿಕ್ವಿಕ್ ಗಮ್ – 7 ಮಕ್ಕಳಿಗೆ ಮುಂದುವರಿದ ಚಿಕಿತ್ಸೆ

    ಸೆಪ್ಟೆಂಬರ್ 2 ರಂದು ಅಸ್ಸಾಂನ ಸೋನಿತ್‌ಪುರದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದಾದ ಕೆಲವು ದಿನಗಳ ನಂತರ ಈ ಭೂಕಂಪ ಸಂಭವಿಸಿದೆ.

  • ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ – ಕೈ ಕೊಯ್ದುಕೊಂಡ ಲಿವ್‌-ಇನ್‌ ಪಾರ್ಟ್ನರ್‌

    ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ – ಕೈ ಕೊಯ್ದುಕೊಂಡ ಲಿವ್‌-ಇನ್‌ ಪಾರ್ಟ್ನರ್‌

    ಗುವಾಹಟಿ: ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುವಾಹಟಿಯಲ್ಲಿ (Guwahati) ನಡೆದಿದೆ. ಆತನ ಲಿವ್‌ ಇನ್‌ ಗೆಳತಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಗಾಯಗೊಂಡಿದ್ದಾರೆ.

    ನವಜ್ಯೋತಿ ತಾಲ್ಲೂಕುದಾರ್ ಎಂದು ಗುರುತಿಸಲಾದ ವ್ಯಕ್ತಿ ಒಂದು ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಆತನ ಸಂಗಾತಿ ಸುಷ್ಮಿತಾ ದಾಸ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹಯಾತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ | ರಕ್ತದ ಕಲೆ ಕಂಡುಬಂದಿದ್ದಕ್ಕೆ ಬಲವಂತವಾಗಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಪ್ರಿನ್ಸಿಪಾಲ್‌

    ಕಳೆದ ಒಂದು ವರ್ಷದಿಂದ ಇಬ್ಬರೂ ವ್ಯಕ್ತಿಗಳು ಲಿವ್-ಇನ್ ಸಂಬಂಧದಲ್ಲಿದ್ದರು. ಆದರೆ, ಇತ್ತೀಚೆಗೆ ಅವರ ನಡುವಿನ ಜಗಳ ಹೆಚ್ಚಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ನಡುವೆ ಆಗಾಗ್ಗೆ ಜಗಳ, ತಪ್ಪುಗ್ರಹಿಕೆಗಳು ಹೆಚ್ಚಾಗಿತ್ತು.

    ಆ ವ್ಯಕ್ತಿ ಸುಶ್ಮಿತಾಳನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಶ್ಮಿತಾ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡು ಶಾಲಾ ವಾಹನ ದುರಂತ – ರೈಲ್ವೇ ಕ್ರಾಸಿಂಗ್ ಸುರಕ್ಷತೆ ಹೆಚ್ಚಿಸಲು ಮುಂದಾದ ಇಲಾಖೆ

    ಆ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಹಿಳೆ ತುರ್ತು ಕರೆ ಮಾಡಿದರು. ನಾವು ತಕ್ಷಣ ಸ್ಥಳಕ್ಕೆ ಧಾವಿಸಿದೆವು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸುಷ್ಮಿತಾ ದಾಸ್ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವು ನಮ್ಮ ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಗುವಾಹಟಿ ಪೊಲೀಸರು ತಿಳಿಸಿದ್ದಾರೆ.

  • ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು-ಗುವಾಹಟಿ ಕಾಮಾಕ್ಯ ಎಕ್ಸ್‌ಪ್ರೆಸ್‌

    ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು-ಗುವಾಹಟಿ ಕಾಮಾಕ್ಯ ಎಕ್ಸ್‌ಪ್ರೆಸ್‌

    ಭುವನೇಶ್ವರ: ಬೆಂಗಳೂರಿನಿಂದ (Bengaluru)  ಅಸ್ಸಾಂನ ಗುವಾಹಟಿಗೆ (Guwahati) ಸಂಚರಿಸುತ್ತಿದ್ದ ಕಾಮಾಕ್ಯ ಎಕ್ಸ್‌ಪ್ರೆಸ್‌ (Kamakhya Express) ರೈಲು ಒಡಿಶಾದಲ್ಲಿ ಹಳಿ ತಪ್ಪಿದೆ.

    ಚೌದ್ವಾರ ಪ್ರದೇಶದ ಮಂಗೂಲಿಯ ಪ್ಯಾಸೆಂಜರ್ ನಿಲ್ದಾಣದ ಬಳಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದೆ. ರೈಲಿನ ಕನಿಷ್ಠ 11 ಬೋಗಿಗಳು ಹಳಿ ತಪ್ಪಿವೆ.

    ಬೆಳಿಗ್ಗೆ 11:54 ಕ್ಕೆ ಹಳಿ ತಪ್ಪಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಅಂಬುಲೆನ್ಸ್‌ನಲ್ಲೇ 14ನೇ ಮಗುವಿಗೆ ಜನ್ಮ- 50ರ ಬಾಣಂತಿ ತಾಯಿ ಜೊತೆ ಇದ್ದ 22ರ ಮಗ

    ಬಿ -6 ರಿಂದ ಬಿ -14 ವರೆಗಿನ ಬೋಗಿಗಳು ಹಳಿ ತಪ್ಪಿವೆ. ರೈಲಿನ ಬೋಗಿಗಳು ಹಳಿ ತಪ್ಪಿ ಹೊಲದಲ್ಲಿ ಇಳಿದಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರು ರೈಲಿನಿಂದ ಜಿಗಿದಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಇತರ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಭೂಕಂಪದಿಂದಾಗಿ ಆಸ್ಪತ್ರೆ ನಾಮಾವಶೇಷ – ಬ್ಯಾಂಕಾಕ್‌ನ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

    ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಟಿದ್ದ ಕಾಮಾಕ್ಯ ಎಕ್ಸ್‌ಪ್ರೆಸ್‌ ರೈಲು ತಮಿಳುನಾಡು, ಆಧ್ರಪ್ರದೇಶ, ಒಡಿಶಾ, ಬಿಹಾರ, ಪಶ್ಚಿಮ ಬಂಗಾಳದ ಮೂಲಕ ಅಸ್ಸಾಂ ಗುವಾಹಟಿಗೆ ತೆರಳುತ್ತಿತ್ತು.

  • ಚಾಕು ಇರಿದು ಗೆಳತಿಯ ಹತ್ಯೆ – ಕೊಲೆ ಬಳಿಕ ತಾನು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪಾಗಲ್‌ ಪ್ರೇಮಿ

    ಚಾಕು ಇರಿದು ಗೆಳತಿಯ ಹತ್ಯೆ – ಕೊಲೆ ಬಳಿಕ ತಾನು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪಾಗಲ್‌ ಪ್ರೇಮಿ

    ದಿಸ್ಪುರ್‌: ಮಹಿಳೆಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಅಸ್ಸಾಂನ (Assam) ಗುವಾಹಟಿಯಲ್ಲಿ ನಡೆದಿದೆ. ಕೊಲೆಯ ಬಳಿಕ ಆತ ತಾನೇ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಹತ್ಯೆಗೀಡಾದ ಮಹಿಳೆಯನ್ನು ಮೌಸುಮಿ ಗೊಗೊಯ್ ಎಂದು ಗುರುತಿಸಲಾಗಿದೆ. ಚಾಕು ಇರಿದ ಆರೋಪಿಯನ್ನು ಭೂಪೇನ್ ದಾಸ್ ಎಂದು ಗುರುತಿಸಲಾಗಿದೆ. ಲೇಟ್ ಗೇಟ್ ಪ್ರದೇಶದ ಮಹಿಳೆಯ ನಿವಾಸದ ಹೊರಗೆ ಕೊಲೆ ನಡೆದಿದ್ದು, ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಆರೋಪಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನನ್ನು ಶೀಘ್ರದಲ್ಲೇ ಕಸ್ಟಡಿಗೆ ಪಡೆಯಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗೊಗೊಯ್ ಆ್ಯಪ್ ಮೂಲಕ ಬುಕ್ ಮಾಡಿದ್ದ ವಾಹನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಆರೋಪಿ ಭೂಪೇನ್ ದಾಸ್ ತನ್ನ ಕಾರಿನಲ್ಲಿ ಬಂದು ಆಕೆಗೆ ಇರಿದಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಆದರೂ ಯಾವುದೇ ಪ್ರಯೋಜನವಾಗಿಲ್ಲ.

    ಗೊಗೊಯ್ ಅವರು ಈ ಹಿಂದೆ ಪಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ತನಗೆ ಜೀವ ಬೆದರಿಕೆ ಹಾಕಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

  • ರೈಲು ವಿಳಂಬ – ಸರಿಯಾದ ಸಮಯಕ್ಕೆ ವರನನ್ನು ಮದುವೆಗೆ ಕರೆದೊಯ್ದ ರೈಲ್ವೇ ಇಲಾಖೆ

    ರೈಲು ವಿಳಂಬ – ಸರಿಯಾದ ಸಮಯಕ್ಕೆ ವರನನ್ನು ಮದುವೆಗೆ ಕರೆದೊಯ್ದ ರೈಲ್ವೇ ಇಲಾಖೆ

    ಮುಂಬೈ: ರೈಲು ಬರಲು ತಡವಾದ ಹಿನ್ನೆಲೆ ನಿಗದಿ ಪಡಿಸಿದ ಮೂಹೂರ್ತದಲ್ಲಿ ಮಂಟಪಕ್ಕೆ ತಲುಪಬೇಕಿದ್ದ ವರನನ್ನು ರೈಲ್ವೆ ಇಲಾಖೆ (Railway Department) ಸರಿಯಾದ ಸಮಯಕ್ಕೆ ತಲುಪಿಸಿರುವ ಘಟನೆ ನಡೆದಿದೆ.

    ಮುಂಬೈ (Mumbai) ಮೂಲದ ವರ ಚಂದ್ರಶೇಖರ್ ವಾಘ್ ಹಾಗೂ ಅವರ ಕುಟುಂಬಸ್ಥರು ಗುವಾಹಟಿಯಲ್ಲಿ (Guwahati) ನಿಗದಿಯಾಗಿದ್ದ ಮದುವೆಗಾಗಿ ಮುಂಬೈನ ಕಲ್ಯಾಣ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆದರೆ ಮುಂಬೈನಿಂದ ಗುವಾಹಟಿಗೆ ಹೊರಟಿದ್ದ ಗೀತಾಂಜಲಿ ಎಕ್ಸಪ್ರೆಸ್‌ (Geetanjali Express) ಪಶ್ಚಿಮ ಬಂಗಾಳದ (West Bengal) ಹೌರಾ ಬಳಿ ಇರುವ ಸಾಂತರಗಾಭಿ ನಿಲ್ದಾಣಕ್ಕೆ 4 ಗಂಟೆ ತಡವಾಗಿ ತಲುಪಿದೆ.ಇದನ್ನೂ ಓದಿ: ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ – ಆಯ್ದ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ

    ಇದರಿಂದ ಆತಂಕಗೊಂಡ ವರ ಕೂಡಲೇ ತನ್ನ ಎಕ್ಸ್ (X) ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ರೈಲ್ವೇ ಇಲಾಖೆಗೆ ಮನವಿ ಮಾಡಿಕೊಂಡಿದ್ದು, ಕೂಡಲೇ ಇಲಾಖೆ ಆತನ ಮನವಿಗೆ ಸ್ಪಂದಿಸಿ, ಮುಹೂರ್ತದ ಸಮಯಕ್ಕೆ ಸರಿಯಾಗಿ ಮಂಟಪಕ್ಕೆ ತಲುಪುವಂತೆ ಸಹಾಯ ಮಾಡಿದೆ.

    ಘಟನೆ ಏನು?
    ನ.14ರಂದು ಚಂದ್ರಶೇಖರ್ ವಾಘ 35 ಜನ ಕುಟುಂಬಸ್ಥರೊಂದಿಗೆ ಮುಂಬೈನ ಕಲ್ಯಾಣ ನಿಲ್ದಾಣದಿಂದ (Kalyan Railway Station) ಗುವಾಹಟಿಗೆ ಹೋಗಬೇಕಿತ್ತು. ಕಲ್ಯಾಣ ರೈಲು ನಿಲ್ದಾಣದಿಂದ ಬೆಳಿಗ್ಗೆ 6:55ಕ್ಕೆ ಗೀತಾಂಜಲಿ ಎಕ್ಸಪ್ರೆಸ್‌ ರೈಲು ಹತ್ತಿ, ನ.15ರ ಮಧ್ಯಾಹ್ನ 1:05ಕ್ಕೆ ಪಶ್ಚಿಮ ಬಂಗಾಳದ ಹೌರಾ ಜಂಕ್ಷನ್ (Howrah Juntion) ತಲುಪಬೇಕಿತ್ತು. ಅಲ್ಲಿಂದ ಸಂಜೆ 4.05ಕ್ಕೆ ಇರುವ ಸರೈಘಾಟ್ ಎಕ್ಸಪ್ರೆಸ್‌ ರೈಲು ಹತ್ತಿ ಗುವಾಹಟಿ ತಲುಪುವ ಯೋಜನೆ ಅವರದಾಗಿತ್ತು. ಆದರೆ ಗೀತಾಂಜಲಿ ಎಕ್ಸಪ್ರೆಸ್‌ ರೈಲು ಹೌರಾ ನಿಲ್ದಾಣದಿಂದ 15 ಕಿ.ಮೀ ದೂರದಲ್ಲಿರುವ ಸಾಂತರಗಾಛಿ ರೈಲು ನಿಲ್ದಾಣಕ್ಕೆ ತಲುಪಬೇಕಾಗಿದ್ದ ಸಮಯಕ್ಕಿಂತ 4 ಗಂಟೆ ತಡವಾಗಿ ಬಂದಿತ್ತು. ಇದರಿಂದ ವಿಚಲಿತರಾದ ವರ ಕೂಡಲೇ `ಎಕ್ಸ್’ನಲ್ಲಿ ತಮ್ಮ ಪರಿಸ್ಥಿತಿಯನ್ನು ವಿವರಿಸಿ, ನೆರವು ನೀಡುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದರು.

    ಮನವಿಗೆ ಸ್ಪಂದಿಸಿದ ರೈಲ್ವೆ ಅಧಿಕಾರಿಗಳು ಗೀತಾಂಜಲಿ ಎಕ್ಸ್ಪ್ರೆಸ್ ರೈಲು ಬರುವವರೆಗೂ ಸರೈಘಾಟ್ ಎಕ್ಸಪ್ರೆಸ್‌ ರೈಲನ್ನು ಹೌರಾ ಜಂಕ್ಷನ್‌ನಲ್ಲಿಯೇ ನಿಲ್ಲಿಸಿದರು. ಲೋಕೊ ಪೈಲಟ್ ಗೀತಾಂಜಲಿ ಎಕ್ಸಪ್ರೆಸ್‌ ರೈಲಿನ ವೇಗವನ್ನು ಹೆಚ್ಚಿಸಿದರು.

    ರೈಲು ತಲುಪಿದ ತಕ್ಷಣ ರೈಲ್ವೆ ಸಿಬ್ಬಂದಿಗಳು ತಕ್ಷಣವೇ ವರನ ಕುಟುಂಬ ಮತ್ತು ಅವರ ಬ್ಯಾಗುಗಳನ್ನು ಇನ್ನೊಂದು ಪ್ಲಾಟ್‌ಫಾರ್ಮ್ಗೆ ಸಾಗಿಸಲು ನೆರವಾದರು. ವಯೋವೃದ್ಧರಿಗಾಗಿ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ರೈಲು ಸಂಜೆ 4:08 ನಿಮಿಷಕ್ಕೆ ಹೌರಾ ನಿಲ್ದಾಣ ತಲುಪಿತು. ಸರೈಘಾಟ್ ಎಕ್ಸಪ್ರೆಸ್‌ ಸಂಜೆ 4.19ಕ್ಕೆ ಹೊರಟು ಶನಿವಾರ ಬೆಳಿಗ್ಗೆ 10.05ಕ್ಕೆ ಸರಿಯಾಗಿ ಗುವಾಹಟಿ ತಲುಪಿತು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

    ಸರಿಯಾಗಿ ಸಮಯಕ್ಕೆ ತಲುಪಲು ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ಸಹಾಯ ಮಾಡಿದ ರೈಲ್ವೆ ಇಲಾಖೆ ಹಾಗೂ ಅಧಿಕಾರಿಗಳಿಗೆ ಚಂದ್ರಶೇಖರ್ ಧನ್ಯವಾದ ತಿಳಿಸಿದ್ದಾರೆ.ಇದನ್ನೂ ಓದಿ: ಪಿಡಿಓ ಪ್ರಶ್ನೆ ಪತ್ರಿಕೆ ಸೋರಿಕೆ? – ರಾಯಚೂರಿನಲ್ಲಿ ರಸ್ತೆ ಬಂದ್ ಮಾಡಿ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

  • ಯುವಕರನ್ನು ಉಗ್ರ ಸಂಘಟನೆಗೆ ಸೇರಿಸುತ್ತಿದ್ದ ಇಬ್ಬರು ಶಂಕಿತರ ಅರೆಸ್ಟ್

    ಯುವಕರನ್ನು ಉಗ್ರ ಸಂಘಟನೆಗೆ ಸೇರಿಸುತ್ತಿದ್ದ ಇಬ್ಬರು ಶಂಕಿತರ ಅರೆಸ್ಟ್

    ದಿಸ್ಪುರ್‌: ಬಾಂಗ್ಲಾದೇಶದ (Bangladesh) ಇಬ್ಬರು ಶಂಕಿತ ಭಯೋತ್ಪಾದಕರನ್ನು ಗುವಾಹಟಿಯಲ್ಲಿ (Guwahati) ಪೊಲೀಸರು ಬಂಧಿಸಿದ್ದಾರೆ. ಬಂಧಿತರು ನಿಷೇಧಿತ ಅಲ್ ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತ ಶಂಕಿತರನ್ನು ಬಹರ್ ಮಿಯಾ (30) ಮತ್ತು ರಾಸೆಲ್ ಮಿಯಾ (40) ಎಂದು ಗುರುತಿಸಲಾಗಿದೆ. ಆರೋಪಿಗಳು ಅನ್ಸರುಲ್ಲಾ ಬಾಂಗ್ಲಾ ತಂಡ (ಎಬಿಟಿ)ಗೆ ಸೇರಿದವರು. ಅವರು ಭಾರತದಲ್ಲಿ ನಿಷೇಧಿತ ಅಲ್ ಖೈದಾದೊಂದಿಗೆ (ಎಕ್ಯೂಐಎಸ್) ಸಂಪರ್ಕ ಹೊಂದಿದ್ದು, ಯುವಕರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸುವ ಸಲುವಾಗಿ ಬಾಂಗ್ಲಾ ದೇಶದಿಂದ ಗುವಾಹಟಿಗೆ ಬಂದು ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಧರೆಗುರುಳಿದ ಬೃಹತ್ ಬಿಲ್ ಬೋರ್ಡ್- ಸಾವಿನ ಸಂಖ್ಯೆ 14ಕ್ಕೆ ಏರಿಕೆ

    ಆರೋಪಿಗಳು ಪಾಸ್‍ಪೋರ್ಟ್ ಇಲ್ಲದೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದಾರೆ. ಅಲ್ಲದೇ ಅಸ್ಸಾಂನಲ್ಲಿ ಭಯೋತ್ಪಾದನಾ ಜಾಲವನ್ನು ಹರಡಲು ಭಾರತೀಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ನಕಲಿ ಎಂದು ಶಂಕಿಸಲಾದ ಆಧಾರ್ ಮತ್ತು ಪಾನ್ ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌ ಇದನ್ನೂ ಓದಿ: ಬಿಷ್ಣೋಯ್, ಗೋದಾರಾ ಗ್ಯಾಂಗ್‍ನ ಐವರು ಶೂಟರ್‌ಗಳ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

  • Bharat Jodo Nyay Yatra: ಅಸ್ಸಾಂನಲ್ಲಿ ಹೆಜ್ಜೆ ಹೆಜ್ಜೆಗೂ ಅಡ್ಡಿ – ಕೈ ಕಾರ್ಯಕರ್ತರು, ಪೊಲೀಸರ ನಡುವೆ ಘರ್ಷಣೆ

    Bharat Jodo Nyay Yatra: ಅಸ್ಸಾಂನಲ್ಲಿ ಹೆಜ್ಜೆ ಹೆಜ್ಜೆಗೂ ಅಡ್ಡಿ – ಕೈ ಕಾರ್ಯಕರ್ತರು, ಪೊಲೀಸರ ನಡುವೆ ಘರ್ಷಣೆ

    – ಅಸ್ಸಾಂನ ಗುವಾಹಟಿಯಲ್ಲಿ ಪರಿಸ್ಥಿತಿ ಉದ್ವಿಗ್ನ

    ದಿಸ್ಪುರ್‌: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯು ಮಂಗಳವಾರ ಮೇಘಾಲಯದ ಬಳಿಕ ಅಸ್ಸಾಂಗೆ ಮರುಪ್ರವೇಶಿಸಿದೆ.

    ಈ ವೇಳೆ ಗುವಾಹಟಿಯ ಒಳ ರಸ್ತೆಗಳ ಮೂಲಕ ತೆರಳಲು ಅಸ್ಸಾಂ ಸರ್ಕಾರ (Assam Government) ಅನುಮತಿ ನಿರಾಕರಿಸಿದ್ದರಿಂದ ಕಾಂಗ್ರೆಸ್‌ ಕಾರ್ಯಕರ್ತರು (Congress workers) ಹಾಗೂ ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ.

    ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರವು ಯಾತ್ರೆ ಅಸ್ಸಾಂ (Assam) ಪ್ರವೇಶಿಸದಂತೆ ನಿರ್ಬಂಧ ವಿಧಿಸಿತ್ತು. ಇದರ ಹೊರತಾಗಿಯೂ ಯಾತ್ರೆ ಬೈಪಾಸ್‌ ರಸ್ತೆ ಮೂಲಕ ಗುವಾಹಟಿ (Guwahati) ಪ್ರವೇಶಿಲು ಮುಂದಾದಾಗ ಮುಖಾಮುಖಿಯಾಗಿ ಘರ್ಷಣೆ ಸಂಭವಿಸಿದೆ. ಪೊಲೀಸರು ಯಾತ್ರೆಯನ್ನು ತಡೆದಿದ್ದರಿಂದ ರೊಚ್ಚಿಗೆದ್ದ ಕೈ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನ ಮುರಿದು ಸಿಟ್ಟು ಹೊರಹಾಕಿದ್ದಾರೆ. ಇದನ್ನೂ ಓದಿ: ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!

    ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಬಜರಂಗದಳ, ಬಿಜೆಪಿ ನೇತೃತ್ವದ ರ‍್ಯಾಲಿಗಳನ್ನು ಇದೇ ಮಾರ್ಗವಾಗಿ ಕೊಂಡೊಯ್ಯಲಾಯಿತು. ಆದ್ರೆ ನಾವು ಕಾನೂನು ಉಲ್ಲಂಘಿಸುವುದಿಲ್ಲ ಅಂತ ಹೇಳಿದರೂ ನಮ್ಮನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಅಸ್ಸಾಂ ಸರ್ಕಾರವು ಯಾತ್ರೆಗೆ ಅನಗತ್ಯ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಸಾರ್ವಜನಿಕರಿಗೆ ತೆರೆಯುತ್ತಿದ್ದಂತೆಯೇ ರಾಮಮಂದಿರಕ್ಕೆ ಹರಿದು ಬರ್ತಿದೆ ಜನಸಾಗರ!

    ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ನಡೆಯುತ್ತಿದ್ದ ವೇಳೆಯೂ ಸಹ ಭಾರತ್‌ ಜೋಡೊ ಯಾತ್ರೆ ಅಸ್ಸಾಂ ಪ್ರವೇಶಿಸದಂತೆ ತಡೆಹಿಡಿಯಲಾಗಿತ್ತು. ಈ ಸಂದರ್ಭದಲ್ಲಿ ರಾಹುಲ್‌ ಗಾಂಧಿ ದೇಗುಲ ಪ್ರವೇಶಿಸುವುದನ್ನೂ ಪೊಲೀಸರು ತಡೆಹಿಡಿದಿದ್ದರು. ಇದನ್ನೂ ಓದಿ: ಚೀನಾದಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪನ – ದೆಹಲಿಯಲ್ಲೂ ಕಂಪಿಸಿದ ಭೂಮಿ, ಬೆಚ್ಚಿಬಿದ್ದ ಜನ 

  • ಬಾಲ್ಯ ವಿವಾಹದ ವಿರುದ್ಧ ಸಮರ – ಮತ್ತೆ 800ಕ್ಕೂ ಅಧಿಕ ಮಂದಿಯ ಬಂಧನ

    ಬಾಲ್ಯ ವಿವಾಹದ ವಿರುದ್ಧ ಸಮರ – ಮತ್ತೆ 800ಕ್ಕೂ ಅಧಿಕ ಮಂದಿಯ ಬಂಧನ

    ಗುವಾಹಟಿ: ಬಾಲ್ಯ ವಿವಾಹದ (Child Marriage) ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿರುವ ಅಸ್ಸಾಂನ (Assam) ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ನೇತೃತ್ವದ ಸರ್ಕಾರ ಇಂದು ಎರಡನೇ ಹಂತದ ಕಾರ್ಯಾಚರಣೆ ನಡೆಸಿದ್ದು, ಕಾನೂನಿನ ವಿರುದ್ಧ ಅಪ್ರಾಪ್ತರ ಮದುವೆ ಮಾಡಿಸುತ್ತಿದ್ದ 800ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

    ಈ ಬಗ್ಗೆ ಎಕ್ಸ್‌ನಲ್ಲಿ (X) ಪೋಸ್ಟ್ ಮಾಡಿರುವ ಹಿಮಂತ ಬಿಸ್ವಾ ಶರ್ಮಾ ಈ ವರ್ಷದ ಆರಂಭದಲ್ಲಿ ಮೊದಲ ಸುತ್ತಿನ ಕಾರ್ಯಾಚರಣೆಯಲ್ಲಿ ರಾಜ್ಯಾದ್ಯಂತ ಸಾವಿರಾರು ಮಂದಿಯನ್ನು ಬಂಧಿಸಲಾಯಿತು. ಕಾರ್ಯಾಚರಣೆ ಇನ್ನೂ ನಡೆಯುತ್ತಿರುವುದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣಗಳಲ್ಲಿ ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದರು. ಇದನ್ನೂ ಓದಿ: ಇರುವುದೊಂದೇ ಸನಾತನ ಧರ್ಮ, ಉಳಿದೆಲ್ಲವೂ ಪಂಥಗಳು: ಯೋಗಿ

    ಕಳೆದ ಐದು ವರ್ಷಗಳಲ್ಲಿ ಬಾಲ್ಯವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಒಟ್ಟು 3,907 ಜನರನ್ನು ಬಂಧಿಸಲಾಗಿದೆ. ಅವರಲ್ಲಿ 3,319 ಜನರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012ರ (POCSO) ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಸೆಪ್ಟೆಂಬರ್ 11 ರಂದು ಅಸ್ಸಾಂ ವಿಧಾನಸಭೆಗೆ ಶರ್ಮಾ ತಿಳಿಸಿದ್ದರು. ಇದನ್ನೂ ಓದಿ: ಬಿಹಾರ ಜಾತಿ ಸಮೀಕ್ಷೆ ವರದಿ ಬಿಡುಗಡೆ; ಜಾತಿ ಹೆಸರಲ್ಲಿ ದೇಶ ವಿಭಜಿಸುವ ಪ್ರಯತ್ನವೆಂದು ಮೋದಿ ವಾಗ್ದಾಳಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಂಬೈ-ಗುವಾಹಟಿ ವಿಮಾನದಲ್ಲಿ ಅನುಚಿತವಾಗಿ ವರ್ತಿಸಿದ ಪ್ರಯಾಣಿಕ ಅರೆಸ್ಟ್

    ಮುಂಬೈ-ಗುವಾಹಟಿ ವಿಮಾನದಲ್ಲಿ ಅನುಚಿತವಾಗಿ ವರ್ತಿಸಿದ ಪ್ರಯಾಣಿಕ ಅರೆಸ್ಟ್

    ಮುಂಬೈ: ಮುಂಬೈನಿಂದ (Mumbai) ಗುವಾಹಟಿಗೆ (Guwahati) ತೆರಳುತ್ತಿದ್ದ ವಿಮಾನದಲ್ಲಿ (Flight) ಪ್ರಯಾಣಿಕನೊಬ್ಬ ಸಹ ಪ್ರಯಾಣಿಕರಿಗೆ (Police) ಲೈಂಗಿಕ ಕಿರುಕುಳ ನೀಡಿದ ಪ್ರಕರಣ ನಡೆದಿದೆ. ಈ ಆರೋಪ ಕೇಳಿ ಬಂದ ಕೂಡಲೇ ಆತನನ್ನು ವಿಮಾನದ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಮುಂಬೈ ವಿಮಾನ ನಿಲ್ದಾಣದಿಂದ ಗುವಾಹಟಿಗೆ ತೆರಳುತ್ತಿದ್ದ ವಿಮಾನದಲ್ಲಿ ಆರೋಪಿ ಅನುಚಿತವಾಗಿ ವರ್ತಿಸಿದ್ದಾನೆ. ಬಳಿಕ ಆತನನ್ನು ಗುವಾಹಟಿ ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ವಿಮಾನಯಾನ ಸಂಸ್ಥೆ ನಿರಾಕರಿಸಿದೆ. ಇದನ್ನೂ ಓದಿ: ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ವ್ಯಾನ್‌ಗೆ ಲಾರಿ ಡಿಕ್ಕಿ: 7 ಮಹಿಳೆಯರ ದುರ್ಮರಣ

    ಪ್ರಯಾಣಿಕರೊಬ್ಬರು ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆಗೆ ಅಗತ್ಯವಿರುವ ಸಹಕಾರವನ್ನು ನೀಡುವುದಾಗಿ ವಿಮಾನಯಾನ ಸಂಸ್ಥೆ ಹೇಳಿಕೊಂಡಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನಿಡಿದ್ದಾರೆ.

    ಇದರ ಹೊರತಾಗಿಯೂ ಹೆಚ್ಚಿನ ವಿವರಗಳನ್ನು ಮಾಧ್ಯಮಗಳಿಗೆ ನೀಡಲು ವಿಮಾನಯಾನ ಸಂಸ್ಥೆ ನಿರಾಕರಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: 40ನೇ ಫ್ಲೋರ್‌ನಿಂದ ನೆಲಕ್ಕೆ ಕುಸಿದ ಲಿಫ್ಟ್ – 7 ಜನರ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಡಿಶಾ ರೈಲು ಅಪಘಾತ; ಸಂಚಾರ ರದ್ದಾಗಿ ಬೆಂಗ್ಳೂರಲ್ಲೇ ನಿಂತ ಬೆಂಗಳೂರು-ಗುವಾಹಟಿ ರೈಲು

    ಒಡಿಶಾ ರೈಲು ಅಪಘಾತ; ಸಂಚಾರ ರದ್ದಾಗಿ ಬೆಂಗ್ಳೂರಲ್ಲೇ ನಿಂತ ಬೆಂಗಳೂರು-ಗುವಾಹಟಿ ರೈಲು

    ಬೆಂಗಳೂರು: ಒಡಿಶಾದಲ್ಲಿ (Odisha) 3 ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಈ ಭಾಗದಲ್ಲಿ ಸಾಗಬೇಕಿದ್ದ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಇದೇ ಮಾರ್ಗವಾಗಿ ಸಂಚರಿಸಬೇಕಿದ್ದ ಬೆಂಗಳೂರು-ಗುವಾಹಟಿ ರೈಲು ಬೆಂಗಳೂರಿನಲ್ಲೇ ನಿಂತಿದೆ.

    ಒಡಿಶಾ ಅಪಘಾತದ ಹಿನ್ನಲೆಯಲ್ಲಿ ಬೆಂಗಳೂರು-ಗುವಾಹಟಿ (Guwahati) ರೈಲು ಸಂಚಾರ ರದ್ದಾಗಿದೆ. 10:40 ಕ್ಕೆ ಗುವಾಹಟಿ, ಬೈಯಪ್ಪನಹಳ್ಳಿಯ SMVT ರೈಲು ನಿಲ್ದಾಣದಿಂದ ರೈಲು ಹೊರಡಬೇಕಿತ್ತು. ಬೆಂಗಳೂರಿನಿಂದ (Bengaluru) ಒಡಿಶಾಗೆ  ತೆರಳಲು ಟಿಕೆಟ್‌ ಬುಕ್‌ ಮಾಡಿದ್ದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಬೆಂಗಳೂರಿನ SMVT ರೈಲು ನಿಲ್ದಾಣದಲ್ಲೇ (SMT Railway Station) ಪ್ರಯಾಣಿಕರು ಪರದಾಡುವಂತಾಗಿದೆ. ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದೊಡ್ಡಮಟ್ಟದ ಸದ್ದು ಕೇಳಿಬಂತು; ದುರಂತದ ಘನಘೋರ ದೃಶ್ಯ ಬಿಚ್ಚಿಟ್ಟ ಕನ್ನಡಿಗ

    ರೈಲು ಪ್ರಯಾಣ ರದ್ದಾಗಿರುವುದಕ್ಕೆ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ. ಟಿಕೆಟ್‌ ಹಣ ವಾಪಸ್‌ ಪಡೆಯುವ ವಿಚಾರವಾಗಿ ಪ್ರಯಾಣಿಕರಿಂದ ವಾಗ್ವಾದ ಶುರುವಾಗಿತ್ತು. ಪರಿಣಾಮವಾಗಿ ರೈಲ್ವೆ ನಿಲ್ದಾಣದ ಬಳಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಇದನ್ನೂ ಓದಿ: Odisha Train Tragedy; ಪುಣ್ಯಕ್ಷೇತ್ರಕ್ಕೆ ಹೊರಟಿದ್ದ ಚಿಕ್ಕಮಗಳೂರಿನ 110 ಮಂದಿ ಯಾತ್ರಾರ್ಥಿಗಳು ಸೇಫ್

    ಜನರಲ್ ಟಿಕೆಟ್ ಪಡೆದಿದ್ದ ಪ್ರಯಾಣಿಕರಿಗೆ ರೈಲ್ವೆ ಅಧಿಕಾರಿಗಳು (Railway Officers) ಟಿಕಟ್ ಹಣ ವಾಪಸ್ ನೀಡುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಜನ ಟಿಕೆಟ್ ಹಣ ವಾಪಸ್ ಪಡೆದರು. ಇದನ್ನೂ ಓದಿ: ಒಡಿಶಾ ರೈಲು ದುರಂತ ಹೇಗಾಯ್ತು..? ಘಟನೆಗೆ ಕಾರಣ ಏನು..?

    ಹೌರ ಮಾರ್ಗವಾಗಿ ತೆರಳಬೇಕಿದ್ದ ಮೂರು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಬಾಗಲ್ಪುರ್ ಎಕ್ಸ್‌ಪ್ರೆಸ್, ಹೌರಾ ಎಕ್ಸ್‌ಪ್ರೆಸ್, ಕಾಮಾಕ್ಯ ಎಕ್ಸ್‌ಪ್ರೆಸ್‌ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಮೂರು ರೈಲುಗಳ ಸಂಚಾರ ರದ್ದಾದ ಹಿನ್ನಲೆ ಪ್ರಯಾಣಿಕರು ಪರದಾಡುವಂತಾಗಿದೆ. ತಮ್ಮ ಊರುಗಳಿಗೆ ತೆರಳಲು ಮೂರ್ನಾಲ್ಕು ತಿಂಗಳ ಹಿಂದೆಯೇ ಟಿಕೆಟ್ ಬುಕ್ ಮಾಡಿದ್ದರು. ಸದ್ಯ ರೈಲ್ವೆ ಸಿಬ್ಬಂದಿ ಟಿಕೆಟ್ ಬುಕ್ಕಿಂಗ್ ಹಣ ಹಿಂತಿರುಗಿಸುತ್ತಿದ್ದಾರೆ. ಇದನ್ನೂ ಓದಿ: Odisha Train Accident; ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆ – 233 ಮಂದಿ ಬಲಿ, 900 ಮಂದಿಗೆ ಗಾಯ