Tag: gutter

  • ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಮಗು

    ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಮಗು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಾಜಕಾಲುವೆಯಲ್ಲಿ 5 ವರ್ಷದ ಮಗುವೊಂದು ಕೊಚ್ಚಿಹೋಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

    ಗೋರಿಪಾಳ್ಯದ ಪಾದರಾಯನಪುರದ ಗುಡ್ಡದಹಳ್ಳಿ ಬಳಿ ಈ ಘಟನೆ ನಡೆದಿದೆ. ಇಮ್ರಾನ್ ಶರೀಫ್ ಮತ್ತು ಗುಲ್ಶಾನ್ ದಂಪತಿಯ ಪುತ್ರನಾಗಿರೊ ಮೊಹಮ್ಮದ್ ಝೈನ್ (5) ಕೊಚ್ಚಿ ಹೋಗಿದ್ದಾನೆ ಎಂದು ಹೇಳಲಾಗಿದೆ.

    ಮಗುವಿನ ತಂದೆ ನಾಲ್ಕು ತಿಂಗಳ ಹಿಂದೆ ತೀರಿಹೋಗಿದ್ದು, ಕಳೆದ ಶುಕ್ರವಾರ ಏರಿಯಾದ ಹುಡುಗರ ಜೊತೆ ಕಸ ಹಾಕಲು ಬಂದಿದ್ದ ಮಗು ಆಯತಪ್ಪಿ ಮೋರಿಯೊಳಗೆ ಬಿದ್ದಿರುವುದಾಗಿ ಮಗು ತಾಯಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಜೆಜೆ ನಗರ ಪೊಲೀಸ್ ಠಾಣಾ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಗುಡ್ಡದಹಳ್ಳಿಯ ದೊಡ್ಡ ಮೋರಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ಮುಂಬೈನಲ್ಲಿ ಭಾರಿ ಮಳೆ ಚರಂಡಿಗೆ ಬಿದ್ದ 3 ವರ್ಷದ ಬಾಲಕ – ವಿಡಿಯೋ

    ಮುಂಬೈನಲ್ಲಿ ಭಾರಿ ಮಳೆ ಚರಂಡಿಗೆ ಬಿದ್ದ 3 ವರ್ಷದ ಬಾಲಕ – ವಿಡಿಯೋ

    ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ 3 ವರ್ಷದ ಬಾಲಕ ತೆರೆದ ಚರಂಡಿಯೊಳಗೆ ಬಿದ್ದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

    ಮುಂಬೈನ ಗೋರೆಗಾವ್‍ನ ಅಂಬೇಡ್ಕರ್ ನಗರದಲ್ಲಿ ಬುಧವಾರ ರಾತ್ರಿ ಸುಮಾರು 10.24ರ ವೇಳೆಗೆ ನಡೆದಿದೆ. ಬಾಲಕ ಚರಂಡಿಗೆ ಬಿಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ವಿಡಿಯೋದಲ್ಲಿ ಬಾಲಕ ರಾತ್ರಿ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ. ನಂತರ ತನಗೆ ತಿಳಿಯದೇ ರಸ್ತೆಯ ಪಕ್ಕದಲ್ಲಿರುವ ತೆರೆದ ಚರಂಡಿಯೊಳಗೆ ಬಿದ್ದು ಬಿಡುತ್ತಾನೆ. ಮಗು ಚರಂಡಿಯೊಳಗೆ ಬೀಳುವ ದೃಶ್ಯ ಪಕ್ಕದ ಅಂಗಡಿಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಬಾಲಕನನ್ನು ಹುಡುಕುವ ಪ್ರಯತ್ನದಲ್ಲಿ ಇಂದು ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಯುತ್ತಿದೆ. ಮುಂಬೈನಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

  • 22 ವರ್ಷಗಳಿಂದ ಒಳಚರಂಡಿಯಲ್ಲೇ ಇವರ ಸಂಸಾರ

    ಬೊಗೊಟಾ: ಕೆಲವರು ಎಷ್ಟು ದುಡ್ಡಿದ್ದರೂ ಎಷ್ಟೇ ದೊಡ್ಡ ಮನೆಯಿದ್ದರೂ ಮತ್ತಷ್ಟು ಶ್ರೀಮಂತಿಕೆಗೆ ಹಂಬಲಿಸುತ್ತಾರೆ. ಮತ್ತೂ ಕೆಲವರು ಹಾಸಿಗೆ ಇದ್ದಷ್ಟೇ ಕಾಲು ಚಾಚು ಅನ್ನೋ ಮಾತಿನಂತೆ ಇದ್ದದ್ದರಲ್ಲೇ ನೆಮ್ಮದಿಯಾಗಿರ್ತಾರೆ. ಇದಕ್ಕೆ ಉದಹರಣೆ ದಕ್ಷಿಣ ಅಮೆರಿಕದ ಕೊಲೊಂಬಿಯಾದ ಈ ದಂಪತಿ. ಹಲವಾರು ವರ್ಷಗಳಿಂದ ಇವರು ಒಳಚಂಡಿಯೊಂದರಲ್ಲೇ ಸಂಸಾರ ನಡೆಸುತ್ತಿದ್ದಾರೆ. ಶ್ರೀಮಂತಿಕೆ ವೈಭೋಗಗಳು ಇಲ್ಲದಿದ್ದರೂ ಸಂತೋಷವಾಗಿದ್ದಾರೆ.

    ಮರಿಯಾ ಗಾರ್ಸಿಯಾ ಮತ್ತು ಮೈಗುಯೆಲ್ ರೆಸ್ಟ್ರೆಪೋ ದಂಪತಿ 22 ವರ್ಷಗಳಿಂದ ಒಳಚಂಡಿಯಲ್ಲೇ ಸಂಸಾರ ಮಾಡುತ್ತಿದ್ದಾರೆ ಅಂದ್ರೆ ನಂಬಲೇಬೇಕು. ಈ ದಂಪತಿ ಮೊದಲು ಕೊಲೊಂಬಿಯಾದ ಮೆಡೆಲಿನ್‍ನಲ್ಲಿ ಭೇಟಿಯಾದಾಗ ಇಬ್ಬರೂ ಮಾದಕ ವ್ಯಸನಿಗಳಗಿದ್ದರು. ಈ ಪ್ರದೇಶ ಹೆಚ್ಚು ಹಿಂಸಾಚಾರ ಹಾಗೂ ಮಾದಕದ್ರವ್ಯಗಳ ಕಳ್ಳಸಾಗಣೆಯ ಕೇಂದ್ರವಾಗಿತ್ತು. ಬೀದಿಯಲ್ಲೇ ಬದುಕು ಸಾಗಿಸುತ್ತಿದ್ದ ಇವರ ಜೀವನವನ್ನು ಮಾದಕ ವ್ಯಸನ ಹಾಳು ಮಾಡಿತ್ತು. ಆದ್ರೆ ಈ ಇಬ್ಬರೂ ಪರಸ್ಪರ ಜೊತೆಯಾಗಿದ್ದು ಸಂತೋಷ ಕಂಡುಕೊಂಡಿದ್ದರು. ಹೀಗಾಗಿ ಮಾದಕ ವ್ಯಸನದಿಂದ ಮುಕ್ತರಾಗಬೇಕು ಅಂತ ತೀರ್ಮಾನಿಸಿದ್ದರು.

    ಹಣ ಮತ್ತು ಆಶ್ರಯ ನೀಡಲು ಇಬ್ಬರಿಗೂ ಕುಟುಂಬಸ್ಥರು ಹಾಗೂ ಸ್ನೇಹಿತರಿಲ್ಲದ ಕಾರಣ ಈ ಒಳಚರಂಡಿಯನ್ನೇ ಮನೆಯಾಗಿಸಿಕೊಂಡರು. ಒಳಚರಂಡಿಯಲ್ಲಿ ವಾಸ ಮಾಡೋದನ್ನ ಊಹೆ ಮಾಡಿಕೊಂಡರೆ ನಮ್ಮ ಕಣ್ಣಮುಂದೆ ಬರೋದು ಕೇವಲ ಗಲೀಜು ಹಾಗೂ ಧೂಳಿನ ಚಿತ್ರಣ. ಆದ್ರೆ ಅದಕ್ಕೆ ವಿರುದ್ಧವೆಂಬಂತೆ ಈ ದಂಪತಿ ಒಳಚರಂಡಿಯಲ್ಲೇ ಎಲ್ಲಾ ಅಗತ್ಯ ವಸ್ತುಗಳನ್ನಿಟ್ಟುಕೊಂಡು ಚೊಕ್ಕವಾದ ಮನೆ ಮಾಡಿಕೊಂಡಿದ್ದಾರೆ. ಇದರೊಳಗೆ ಟಿವಿ, ಟೇಬಲ್ ಫ್ಯಾನ್ ಹಾಗೂ ವಿದ್ಯುತ್ ಸಂಪರ್ಕವೂ ಇದೆ. ಅಲ್ಲದೆ ಹಬ್ಬದ ಸಂದರ್ಭದಲ್ಲಿ ಇವರು ಎಲ್ಲರಂತೆ ಮನೆಯನ್ನ ಸಿಂಗರಿಸ್ತಾರೆ.

    ದಂಪತಿಯ ಜೊತೆ ಬ್ಲಾಕಿ ಎಂಬ ನಾಯಿ ಕೂಡ ಇದ್ದು ಮಾಲೀಕರು ಇಲ್ಲದಿದ್ದಾಗ ಮನೆಯನ್ನು ಕಾಯುತ್ತದೆ.