Tag: Gutka

  • ಗುಟ್ಕಾದ 5 ರೂ. ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಗುಂಡಿಟ್ಟರು

    ಗುಟ್ಕಾದ 5 ರೂ. ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಗುಂಡಿಟ್ಟರು

    ಆಗ್ರಾ: 4 ಮಂದಿ ಯುವಕರು ಅಂಗಡಿಯೊಂದರಲ್ಲಿ 5 ರೂ. ಗುಟ್ಕಾ ಖರೀದಿಸಿ ಹಾಗೇಯೇ ಹೋಗುತ್ತಿದ್ದರು. ಆಗ ಅವರನ್ನು ತಡೆದು ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಗುಂಡು ಹಾರಿಸಿ, ಕ್ರೌರ್ಯ ಮೆರೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಗಳನ್ನು ದೀಪಕ್, ಟಿಕನ್ನಾ, ಫೌಜ್ದಾರ್, ಪೋಟಾ ಎಂದು ಗುರುತಿಸಲಾಗಿದೆ. ಮಾಧೋಪುರದ ಚೋಟು ಅಗರ್ವಾಲ್ ಗುಂಡೇಟು ತಿಂದ ಅಂಗಡಿ ಮಾಲೀಕ. ಮಂಗಳವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಗಳವಾರ ರಾತ್ರಿ ಸುಮಾರು 9:30ರ ಹೊತ್ತಿಗೆ ಈ ಘಟನೆ ನಡೆದಿದೆ. ಚೋಟು ಅಂಗಡಿಗೆ ಬಂದ ಆರೋಪಿಗಳು 5 ರೂ. ಬೆಲೆಯ ಗುಟ್ಕಾವನ್ನು ಖರೀದಿಸಿದ್ದರು. ಆದರೆ ಹಣ ಕೊಡದೆ ವಾಪಾಸ್ ಆಗುತ್ತಿದ್ದ ವೇಳೆ ಅವರನ್ನು ತಡೆದ ಚೋಟು ಹಣ ಕೊಟ್ಟು ಹೋಗಿ ಎಂದನು. ಕೇವಲ 5 ರೂ. ವಿಚಾರಕ್ಕೆ ಸಿಟ್ಟಿಗೆದ್ದ ಯುವಕರು ಚೋಟುಗೆ ಹಿಗ್ಗಾಮುಗ್ಗ ಹೊಡೆದು, ಆತನ ಅಂಗಡಿಯ ಪೆಟ್ಟಿಗೆಯಲ್ಲಿದ್ದ 250 ರೂ. ಹಣವನ್ನು ದೋಚಿದ್ದರು.

    ಈ ವೇಳೆ ಗಲಾಟೆ ಗಮನಿಸಿದ ಸ್ಥಳೀಯ ಅಮಿತ್ ಚೋಟು ಸಹಾಯಕ್ಕೆ ಬಂದಾಗ, ಯುವಕರು ಮನಬಂದಂತೆ ಗುಂಡು ಹಾರಿಸಿದ್ದಾರೆ. ಜೊತೆಗೆ ಚೋಟುಗೂ ಗುಂಡಿಕ್ಕಿದ್ದಾರೆ. ಅಷ್ಟೇ ಅಲ್ಲದೆ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ನಿನ್ನನ್ನು ಸಾಯಿಸುತ್ತೇವೆ. ನಿನ್ನ ಕುಟುಂಬವನ್ನೂ ಕೊಲೆ ಮಾಡುತ್ತೇವೆ ಎಂದು ಅಮಿತ್‍ಗೆ ಬೆದರಿಕೆವೊಡ್ಡಿ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಆರೋಪಿಗಳು ಹೋದ ಬಳಿಕ ಗಂಭೀರ ಗಾಯಗೊಂಡಿದ್ದ ಚೋಟುವನ್ನು ಅಮಿತ್ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಗಂಭಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೊದಲು ಪೊಲೀಸರಿಗೆ ದೂರು ಕೊಡಲು ಹೆದರಿದ ಅಮಿತ್ ಬುಧವಾರ ಧೈರ್ಯ ಮಾಡಿ ಈ ಬಗ್ಗೆ ತಾಪ್ಪಲ್ ಪೊಲೀಸರ ಮುಂದೆ ಘಟನೆ ವಿವರಿಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307, ಸೆಕ್ಷನ್ 394 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಗುಟ್ಕಾ ಹಂಚಿಕೊಳ್ಳದ್ದಕ್ಕೆ ದಲಿತ ವ್ಯಕ್ತಿಗೆ ಬೆಂಕಿ ಹಚ್ಚಿದ ಪುಂಡರು!

    ಗುಟ್ಕಾ ಹಂಚಿಕೊಳ್ಳದ್ದಕ್ಕೆ ದಲಿತ ವ್ಯಕ್ತಿಗೆ ಬೆಂಕಿ ಹಚ್ಚಿದ ಪುಂಡರು!

    ಲಕ್ನೋ: ಗುಟ್ಕಾವನ್ನು ತಮ್ಮೊಂದಿಗೆ ಹಂಚಿಕೊಳ್ಳಲಿಲ್ಲವೆಂದು ಸಿಟ್ಟಿಗೆದ್ದ ಮೇಲ್ವರ್ಗದ ಇಬ್ಬರು ದಲಿತ ವ್ಯಕ್ತಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಮಥುರಾದ ಸಪೋಹ ಗ್ರಾಮಲ್ಲಿ ನಡೆದಿದೆ.

    ಸಪೋಹ ಗ್ರಾಮದ ಪರ್ದೇಶಿ (35) ಗಾಯಗೊಂಡ ದಲಿತ ವ್ಯಕ್ತಿ. ಶುಕ್ರವಾರ ಗ್ರಾಮದ ಅಂಗಡಿ ಬಳಿ ಗುಟ್ಕಾವನ್ನು ಹಂಚಿಕೊಳ್ಳುವ ವಿಚಾರಕ್ಕೆ ಅದೇ ಗ್ರಾಮದ ರಾಹುಲ್ ಠಾಕೂರ್ ಹಾಗೂ ರಾಜು ಎಂಬವರ ನಡುವೆ ಗಲಾಟೆ ಏರ್ಪಟ್ಟಿದೆ. ಇದರಿಂದ ರೊಚ್ಚಿಗೆದ್ದ ಇಬ್ಬರು ಪರ್ದೇಶಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅಂಗಡಿಯಲ್ಲಿದ್ದ ಸಿಮೇಎಣ್ಣೆಯನ್ನು ಸುರಿದು ಬೆಂಕಿ ಹಂಚಿ ಪರಾರಿಯಾಗಿದ್ದಾರೆ.

    ಗಾಯಗೊಂಡಿದ್ದ ಪರ್ದೇಶಿಯನ್ನು ಅಂಗಡಿ ಮಾಲೀಕ ಹಾಗೂ ಗ್ರಾಮಸ್ಥರು ಕೂಡಲೇ ಮಥುರಾದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇ 20 ರಷ್ಟು ಸುಟ್ಟಗಾಯಗಳಾಗಿದ್ದು, ಜೀವಕ್ಕೆ ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಪರ್ದೇಶಿ ಸಹೋದರ ಮಥುರಾ ಪೊಲೀಸರಿಗೆ ದೂರು ನೀಡಿದ್ದಾರೆ.

    ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307, 325, 504, 506 ಮತ್ತು ಎಸ್ಸಿ-ಎಸ್ಟಿ ಪ್ರಕರಣದಡಿ ದೂರು ದಾಖಲಿಸಿಕೊಂಡ ಪೊಲೀಸರು, ರಾಹುಲ್ ಠಾಕೂರ್ ಹಾಗೂ ರಾಜು ಎಂಬ  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಘಟನೆ ಸಂಬಂಧ ಪ್ರತಿಕ್ರಿಯಿಸಿದ ಮಥುರಾ ಪೊಲೀಸ್ ಅಧಿಕಾರಿ ವಿನಯ್ ಚೌಹಾಣ್, ಶುಕ್ರವಾರ ಪರ್ದೇಶಿ ಎಂಬವರು ಗ್ರಾಮದ ಅಂಗಡಿಯಲ್ಲಿ ಗುಟ್ಕಾ ಹಾಗೂ ಇತರೆ ವಸ್ತುಗಳನ್ನು ಖರೀದಿಸಿದ್ದಾರೆ. ಈ ವೇಳೆ ಅಂಗಡಿ ಬಳಿಯಿದ್ದ ಆರೋಪಿಗಳು ಗುಟ್ಕಾವನ್ನು ಹಂಚಿಕೊಳ್ಳುವಂತೆ ಪರ್ದೇಶಿಗೆ ಕೇಳಿದ್ದಾರೆ. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಜಗಳವಾಗಿದ್ದು, ಆರೋಪಿಗಳು ಹಲ್ಲೆ ನಡೆಸಿದ್ದಲ್ಲದೇ, ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕ್ಯಾನ್ಸರ್‍ನಿಂದ ಮಾಣಿಕ್‍ಚಂದ್ ಗುಟ್ಕಾ ಕಂಪೆನಿಯ ಮಾಲೀಕ ನಿಧನ

    ಕ್ಯಾನ್ಸರ್‍ನಿಂದ ಮಾಣಿಕ್‍ಚಂದ್ ಗುಟ್ಕಾ ಕಂಪೆನಿಯ ಮಾಲೀಕ ನಿಧನ

    ಪುಣೆ: ಮಾಣಿಕ್ ಚಂದ್ ಗುಟ್ಕಾ ಕಂಪನಿಯ ಮಾಲೀಕ ಮಾಲೀಕ್ ರಸಿಕ್‍ಲಾಲ್ ಮಾಣಿಕ್‍ಚಂದ್ ಧರಿವಾಲ್ (80) ಪುಣೆಯ ರೂಬಿ ಹಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಮಂಗಳವಾರ ರಾತ್ರಿ 8 ಗಂಟೆಯ ವೇಳೆಗೆ ಮೃತಪಟ್ಟಿದ್ದಾರೆ.

    ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿರೂರಿನಲ್ಲಿ ಜನಸಿದ್ದ ಧರಿವಾಲ್ ಅವರು, ತನ್ನ ತಂದೆ 20 ಬೀಡಿ ಕಾರ್ಖಾನೆಗಳನ್ನು ಅನುವಂಶಿಕವಾಗಿ ಪಡೆದಿದ್ದರು. ನಂತರ ಗುಟ್ಕಾ ವ್ಯವಹಾರದಲ್ಲಿ ಹೆಸರು ಮಾಡಿದ್ದರು. ಧರಿವಾಲ್ ಅವರ ಮೇಲೆ 2004 ರಲ್ಲಿ ಮುಂಬೈ ಪೊಲೀಸರು ಮಹಾರಾಷ್ಟ್ರ ಸಂಘಟಿತ ಅಪರಾಧಗಳ ಕಾಯ್ದೆ (ಮೋಕಾ) ಯ ಅಡಿ ದೂರು ದಾಖಲಿಸಿದ್ದರು. ಪ್ರಸುತ್ತ ಅವರ ಮರಣದಿಂದ ಅವರ ಮೇಲಿನ ವಿಚಾರಣೆ ಸ್ಥಗಿತಗೊಳ್ಳಲಿದೆ ಎಂದು ಧರಿವಾಲ್ ಪರ ವಕೀಲ ಹೇಳಿದ್ದಾರೆ.

    ಕಳೆದ ವರ್ಷ ಕೇಂದ್ರ ತನಿಖಾ ದಳ (ಸಿಬಿಐ) ಪೊಲೀಸರು ಧರಿವಾಲ್ ಮತ್ತು ಜೋಷಿ ಅವರ ವಿರುದ್ಧ ಪಾಕಿಸ್ತಾನ ಕರಾಚಿಯಲ್ಲಿ ಗುಟ್ಕಾ ಉತ್ಪಾದನಾ ಘಟಕ ಸ್ಥಾಪನೆಯ ಆರೋಪದಡಿ ಪ್ರಕರಣವನ್ನು ದಾಖಲಿಸಿದ್ದರು. ಅಲ್ಲದೇ ಇವರ ಮೇಲೆ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಪರ ಕಾರ್ಯ ನಿರ್ವಹಿಸುತ್ತಿರುವ ಕುರಿತು ಆರೋಪವನ್ನು ಮಾಡಲಾಗಿತ್ತು.

    ಧರಿವಾಲ್ ವಿರುದ್ಧ ಎಷ್ಟೇ ಆರೋಪಗಳಿದ್ದರೂ ಎಂದು ಅವರು ಪೊಲೀಸ್ ಕಸ್ಟಡಿಗೆ ಒಳಪಟ್ಟಿರಲಿಲ್ಲ. ಇವರ ಬಂಧನದ ಸಮಯದಲ್ಲಿ ಅನಾರೋಗ್ಯದ ಕುರಿತ ದಾಖಲೆಗಳನ್ನು ನೀಡಿ ಜಾಮೀನು ಪಡೆಯುತ್ತಿದ್ದರು.

    ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರರದಲ್ಲಿ ಗುಟ್ಕಾ ಉತ್ಪಾದನೆ ಹಾಗೂ ಮಾರಾಟ ನಿಷೇಧಿಸಿದ ನಂತರ ಪ್ಯಾಕೇಜಿಂಗ್, ರೋಲರ್ ಹಿಲ್ ಗಿರಣಿ, ರಿಯಲ್ ಎಸ್ಟೇಟ್, ಪವನ ಶಕ್ತಿ, ಪ್ಯಾಕ್ಡ್ ಕುಡಿಯುವ ನೀರು ಸೇರಿದಂತೆ ವಿವಿಧ ಉದ್ಯಮಗಳಲ್ಲಿ ತೊಡಗಿದ್ದರು.