Tag: Gustavo Petro

  • ಪ್ರಜೆಗಳನ್ನು ಸ್ವೀಕರಿಸಲ್ಲ ಎಂದ ಕೊಲಂಬಿಯಾಗೆ ಶಾಕ್‌ – ಟ್ರಂಪ್‌ ಬೆದರಿಕೆ ಮಣಿದು ಈಗ ವಿಮಾನ ರವಾನೆ

    ಪ್ರಜೆಗಳನ್ನು ಸ್ವೀಕರಿಸಲ್ಲ ಎಂದ ಕೊಲಂಬಿಯಾಗೆ ಶಾಕ್‌ – ಟ್ರಂಪ್‌ ಬೆದರಿಕೆ ಮಣಿದು ಈಗ ವಿಮಾನ ರವಾನೆ

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ನೀಡಿದ ಶಾಕ್‌ಗೆ ಬೆದರಿದ ಕೊಲಂಬಿಯಾ (Columbia) ತನ್ನ ಪ್ರಜೆಗಳನ್ನು ವಾಪಸ್‌ ಕರೆಸಿಕೊಳ್ಳಲು ವಿಮಾನ (Plane) ಕಳುಹಿಸುವುದಾಗಿ ಹೇಳಿದೆ.

    ಅಕ್ರಮ ವಲಸಿಗರನ್ನು ಹೊರದಬ್ಬುವ ಭಾಗವಾಗಿ ಅಮೆರಿಕ ಕೊಲಂಬಿಯಾ ಪ್ರಜೆಗಳನ್ನು ಗಡಿಪಾರು ಮಾಡಲು ಮುಂದಾಗಿತ್ತು. ಅಮೆರಿಕದ ನಿರ್ಧಾರಕ್ಕೆ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ (Gustavo Petro) ಆಕ್ಷೇಪ ವ್ಯಕ್ತಪಡಿಸಿದ್ದರು.

    ಕೊಲಂಬಿಯಾದ  ಪ್ರಜೆಗಳನ್ನು ಹೊತ್ತುಕೊಂಡು ಬರುವ ಅಮೆರಿಕ ವಾಯುಪಡೆಯ ಎರಡು ವಿಮಾನಗಳ ಲ್ಯಾಂಡಿಂಗ್‌ ಅನುಮತಿ ನೀಡುವುದಿಲ್ಲ ಎಂದು ಗುಸ್ಟಾವೊ ಪೆಟ್ರೋ ಘೋಷಣೆ ಮಾಡಿದ್ದರು.

    ಪೆಟ್ರೋ ನಿರ್ಧಾರದಿಂದ ಕೆಂಡಾಮಂಡಲವಾದ ಡೊನಾಲ್ಡ್‌ ಟ್ರಂಪ್‌ ತನ್ನ ಪ್ರಜೆಗಳನ್ನು ವಾಪಸ್‌ ಕರೆಸಿಕೊಳ್ಳದ್ದಕ್ಕೆ ಕೊಲಂಬಿಯಾ ಮೇಲೆ ತುರ್ತು 25 ಪ್ರತಿಶತ ಪ್ರತೀಕಾರದ ಸುಂಕ ವಿಧಿಸುವುದಾಗಿ ದಿಢೀರ್‌ ನಿರ್ಧಾರ ತೆಗೆದುಕೊಂಡರು. ಇದನ್ನೂ ಓದಿ: ನಾಲ್ವರು ಇಸ್ರೇಲ್‌ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡಿದ ಹಮಾಸ್‌ ಉಗ್ರರು

    ಒಂದು ವಾರದ ಬಳಿಕ ಸುಂಕ ಪ್ರಮಾಣವನ್ನು 50% ಏರಿಕೆ ಮಾಡಲಾಗುವುದು. ಕೊಲಂಬಿಯಾದ ಸರ್ಕಾರಿ ಅಧಿಕಾರಿಗಳು ಮತ್ತು ಎಲ್ಲಾ ಮಿತ್ರರಾಷ್ಟ್ರಗಳು ಮತ್ತು ಬೆಂಬಲಿಗರ ಮೇಲೆ ಪ್ರಯಾಣ ನಿಷೇಧ ಮತ್ತು ತಕ್ಷಣದಿಂದಲೇ ವೀಸಾ ರದ್ದು ಮಾಡಲಾಗುವುದು. ಕೊಲಂಬಿಯಾದ ಸರ್ಕಾರದ ಎಲ್ಲಾ ಪಕ್ಷದ ಸದಸ್ಯರು, ಕುಟುಂಬ ಸದಸ್ಯರು ಮತ್ತು ಬೆಂಬಲಿಗರ ವೀಸಾ ನಿರ್ಬಂಧಿಸುತ್ತೇವೆ. ಬ್ಯಾಂಕಿಂಗ್ ಮತ್ತು ಹಣಕಾಸು ನಿರ್ಬಂಧಗಳನ್ನು ಸಂಪೂರ್ಣವಾಗಿ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

    ಟ್ರಂಪ್‌ ನೀಡಿದ ಶಾಕ್‌ಗೆ ಕಕ್ಕಾಬಿಕ್ಕಿಯಾದ ಪೆಟ್ರೋ ಗಡಿಪಾರಾದ ಕೊಲಂಬಿಯಾದ ಪ್ರಜೆಗಳನ್ನು ಗೌರವಯುತವಾಗಿ ವಾಪಸ್‌ ಕರೆಸಿಕೊಳ್ಳಲು ನಾವೇ ವಿಮಾನವನ್ನು ವ್ಯವಸ್ಥೆ ಮಾಡುವುದಾಗಿ ಈಗ ಹೇಳಿದ್ದಾರೆ.

    ಕೊಲಂಬಿಯಾದ ನಿರ್ಧಾರದ ನಂತರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಹೇಳಿಕೆ ಬಿಡುಗಡೆ ಮಾಡಿ ಕೊಲಂಬಿಯಾದ ಮೇಲೆ ನಿರ್ಬಂಧ ಮತ್ತು ಸುಂಕಗಳನ್ನು ವಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.

  • ಕೊಲಂಬಿಯಾದಲ್ಲಿ ಸ್ಫೋಟಕ ದಾಳಿ – 8 ಪೊಲೀಸರ ಸಾವು

    ಕೊಲಂಬಿಯಾದಲ್ಲಿ ಸ್ಫೋಟಕ ದಾಳಿ – 8 ಪೊಲೀಸರ ಸಾವು

    ಬೊಗೊಟಾ: ನೈಋತ್ಯ ಕೊಲಂಬಿಯಾದಲ್ಲಿ ಶುಕ್ರವಾರ ಸ್ಫೋಟಕಗಳನ್ನು ಬಳಸಿ ನಡೆಸಿದ ದಾಳಿಯಲ್ಲಿ 8 ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಗುಸ್ಟಾವೊ ಪೆಟ್ರೋ ತಿಳಿಸಿದ್ದಾರೆ.

    ಅಧ್ಯಕ್ಷ ಗುಸ್ಟಾವೋ ಪೆಟ್ರೋ ಅಧಿಕಾರ ವಹಿಸಿಕೊಂಡ ಬಳಿಕ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ ಪೆಟ್ರೋ, 8 ಪೊಲೀಸರ ಸಾವಿಗೆ ಕಾರಣವಾದ ಸ್ಫೋಟಕ ದಾಳಿಯನ್ನು ನಾನು ಬಲವಾಗಿ ತಿರಸ್ಕರಿಸುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಅಡುಗೆ ಮನೆಯ ನೆಲಮಾಳಿಗೆಯಲ್ಲಿ 2.3ಕೋಟಿ ರೂ. ಮೌಲ್ಯದ ಚಿನ್ನದ ನಾಣ್ಯ ಪತ್ತೆ

    ಇದು ಪೊಲೀಸ್ ಭದ್ರತೆಯ ವಿರುದ್ಧದ ದಾಳಿಯಾಗಿದೆ. ಪೊಲೀಸರನ್ನು ಸ್ಫೋಟಕಗಳಿಂದ ಹಾಗೂ ಬಂದೂಕುಗಳಿಂದ ಕೊಲ್ಲಲಾಗಿದೆ ಎಂದು ಪ್ರಾದೇಶಿಕ ಪೊಲೀಸ್ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಯಾರ ಮೇಲೂ ಆರೋಪ ಹೊರಿಸಲಾಗಿಲ್ಲ. ಇದನ್ನೂ ಓದಿ: ಕೋಮು ಸಂಘರ್ಷದ ಮಧ್ಯೆ ಸಾಮರಸ್ಯ ಮೆರೆದ ಮುಸ್ಲಿಂ ಕುಟುಂಬ – ಗಣೇಶ ಪ್ರತಿಷ್ಠಾಪಿಸಿ ಹಬ್ಬ ಆಚರಣೆ

    ಪೆಟ್ರೋ ಅವರು ಕೊಲಂಬಿಯಾದ ಕ್ರಾಂತಿಕಾರಿ ಸಶಸ್ತ್ರ ಪಡೆಗಳ ಭಿನ್ನಮತೀಯರೊಂದಿಗೆ ಕದನ ವಿರಾಮವನ್ನು ಪ್ರಸ್ತಾಪಿಸಿದ್ದರು. ಬಳಿಕ ಅವರು ಶಸ್ತ್ರಾಸ್ತ್ಗಳನ್ನು ತ್ಯಜಿಸಿ 2016ರಲ್ಲಿ ಶಾಂತಿಯ ಮಾತುಕತೆಯನ್ನು ಮುಂದುವರಿಸಿದರು. ಆದರೆ ಬಳಿಕ 2019ರಲ್ಲಿ ಬೊಗೋಟಾದಲ್ಲಿನ ಪೊಲೀಸ್ ಅಕಾಡೆಮಿಯ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದು, ಅದರಲ್ಲಿ 22 ಜನರು ಸಾವನ್ನಪ್ಪಿದ್ದರು. ಇದರಿಂದ ಶಾಂತಿಯ ಮಾತುಕತೆ ಮುರಿದು ಬಿದ್ದಿತ್ತು.

    Live Tv
    [brid partner=56869869 player=32851 video=960834 autoplay=true]