Tag: guruswamy

  • ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತಕ್ಕೆ ಹೊಸ ತಿರುವು..!

    ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತಕ್ಕೆ ಹೊಸ ತಿರುವು..!

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗತ್ತು ಮಾರಮ್ಮ ವಿಷ ಪ್ರಸಾದ ದುರಂತಕ್ಕೆ ಹೊಸ ತಿರುವು ಸಿಕ್ಕಿದೆ.

    ದೇವಸ್ಥಾನಕ್ಕೆ ವರ್ಷಕ್ಕೆ ಬರೋಬ್ಬರೀ 80 ಲಕ್ಷ ರೂಪಾಯಿ ಆದಾಯ ಇತ್ತು. 1.5 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದಲ್ಲಿ ಗೋಪುರ ನಿರ್ಮಾಣಕ್ಕೆ ಸಿದ್ಧತೆ ಮಾಡಲಾಗಿತ್ತು. ಈ ವಿಚಾರದಲ್ಲಿ ಸ್ವಾಮೀಜಿ ಮತ್ತು ದೇವಸ್ಥಾನದ ಟ್ರಸ್ಟಿಗಳ ನಡುವೆ ಭಿನ್ನಾಭಿಪ್ರಾಯ ಇತ್ತು. ದುರಂತದ ದಿನ ನಡೆದಿದ್ದ ಗುದ್ದಲಿ ಪೂಜೆಯಲ್ಲಿ ಸ್ವಾಮೀಜಿ ಭಾಗಿಯಾಗಿದ್ದರು ಎಂದು ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.

    ಗೋಪುರ ಗುದ್ದಲಿ ಪೂಜೆಗೆ ಕಿರಿಯ ಸ್ವಾಮೀಜಿ ಪಟ್ಟದ ಇಮ್ಮಡಿ ಮಹಾದೇವಸ್ವಾಮಿ ಬಂದಿರಲಿಲ್ಲ. ಸಾಲೂರು ಮಠದ ಕಿರಿಯ ಸ್ವಾಮೀಜಿ ಚಿನ್ನಪ್ಪಿ ದೇವಸ್ಥಾನದ ಪ್ರತಿಯೊಂದು ಕಾರ್ಯಕ್ರಮಕ್ಕೂ ಬರುತ್ತಿದ್ದರು. ಆದ್ರೆ ಅಂದು ಅವರು ಬಂದಿರಲಿಲ್ಲ. ಹೀಗಾಗಿ ಹಿರಿಯ ಸ್ವಾಮೀಜಿ ಗುರುಸ್ವಾಮಿ ನೇತೃತ್ವದಲ್ಲಿ ಪೂಜೆ ನಡೆದಿತ್ತು. ಆದರೆ ಪೂಜೆ ನಡೆದ ಬಳಿಕ ಹಿರಿಯ ಸ್ವಾಮೀಜಿಯೂ ಪ್ರಸಾದ ಸ್ವೀಕರಿಸಿದೆ ಹೋಗಿದ್ದರು ಎಂದು ತಿಳಿದುಬಂದಿದೆ.

    ಇಮ್ಮಡಿ ಮಹಾದೇವಸ್ವಾಮಿ ಮತ್ತು ಸಾಲೂರು ಮಠದ ಕಿರಿಯ ಸ್ವಾಮೀಜಿ ಬೇರೆ ಬೇರೆಯಾಗಿದ್ದು, ಆದರೆ ಸಾಲೂರು ಮಠಕ್ಕೂ ಈ ದೇವಾಲಕ್ಕೂ ಯಾವುದೇ ಸಂಬಂಧ ಇಲ್ಲ. ಇಮ್ಮಡಿ ಮಹಾದೇವಸ್ವಾಮಿ ದೋಣಿಕೆರೆ ಮಠದವರಾಗಿದ್ದಾರೆ. ಈ ದೋಣಿಕೆರೆ ಮಠಕ್ಕೂ ಮಾರಮ್ಮ ದೇವಾಲಯಕ್ಕೂ ಸಂಬಂಧ ಇದೆ. ಈ ಹಿಂದೆ ದೋಣಿಕೆರೆ ಮಠದ ಅರ್ಚಕರು ಮಾರಮ್ಮನ ಪೂಜೆ ಮಾಡುತ್ತಿದ್ದರು. ಆದರೆ 50 ವರ್ಷಗಳ ಹಿಂದೆ ನಾವು ಪೂಜೆ ಮಾಡಲ್ಲ ಎಂದು ಹೊರಟು ಹೋಗಿರುತ್ತಾರೆ. ಬಳಿಕ ಸ್ಥಳೀಯರು, ಚಿನ್ನಪ್ಪಿ ಹಾಗೂ ಇತರರು ಸೇರಿ ಒಂದು ಟ್ರಸ್ಟ್ ಮಾಡಿ ಅವರೇ ಪೂಜೆ ಮಾಡಿಕೊಂಡು ಬರುತ್ತಿದ್ದರು.

    ಹೀಗೆ ಪೂಜೆ ಮಾಡಲು ಶುರು ಮಾಡಿದಾಗ ದೇವಾಲಯಕ್ಕೆ ಆದಾಯ ಹೆಚ್ಚಾಗಿತ್ತು. ನಂತರ ಮತ್ತೆ ದೋಣಿಕೆರೆ ಅರ್ಚಕರು ಬಂದು ನಾವೇ ಪೂಜೆ ಮಾಡುತ್ತೇವೆ ಬಿಟ್ಟುಕೊಡಿ ಎಂದು ಕೇಳಿದ್ದರು. ಆಗ ಸ್ಥಳೀಯರು ಇಲ್ಲ ನಾವೇ ಪೂಜೆ ಮಾಡುತ್ತಿದ್ದೇವೆ. ನೀವು ಒಂದು ವಾರಕ್ಕೆ ಬಂದು ಪೂಜೆ ಮಾಡಿ ಅಂತ ಹೇಳಿದ್ದರು. ಈ ವಿಚಾರಕ್ಕೆ ಆಗಾಗ ಮಾತುಕತೆ ನಡೆಯುತ್ತಿತ್ತು ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.

    ಗುರುಸ್ವಾಮಿ ಸ್ಪಷ್ಟನೆ:
    ದೇವಾಲಯದಲ್ಲಿ ಕಟ್ಟಡ ಕಟ್ಟುತ್ತಿದ್ದೇವೆ ನೀವು ಬನ್ನಿ ಎಂದು ಕರೆದಿದ್ದರು. ಅಂದು ಶುಕ್ರವಾರ ಆಗಿದ್ದರಿಂದ ನಮ್ಮ ಮಠದಲ್ಲೂ ಭಕ್ತರು ಹೆಚ್ಚಾಗಿದ್ದರು. ಕೊನೆಗೆ ಪೂಜೆ ಮುಗಿಸಿ ಮಾರಮ್ಮನ ದೇವಾಲಯಕ್ಕೆ ಹೋಗಿದ್ದೆ. ಆದರೆ ನಾನು ಹೋಗುವಷ್ಟರಲ್ಲಿ ಪೂಜೆ ಮುಗಿದಿತ್ತು. ಮತ್ತೆ ನಾನು ಕೂಡ ಪೂಜೆ ಮಾಡಿಸಿದೆ. ಬಳಿಕ ದೇವಾಲಯ ಕಂಟ್ರಾಕ್ಟರ್ ಸದಸ್ಯರ ಬಳಿ ಹೋಗಿ, ನೀವೇ ದೇವಸ್ಥಾನವನ್ನು ನಿರ್ಮಿಸಿ ಬೇರೆ ಯಾರಿಗೂ ವಹಿಸಬೇಡಿ ಎಂದು ಹೇಳಿ ನಾನು ಮಠಕ್ಕೆ ಬಂದೆ ಎಂದು ಹೇಳಿದ್ದಾರೆ.

    ನಾನು ಯಾವ ದೇವಾಸ್ಥಾನಕ್ಕೂ ಹೋದರು ಪ್ರಸಾದ ಸ್ವೀಕರಿಸುವುದಿಲ್ಲ. ನಾವೇ ಬೇರೆ ಮಾಡಿಕೊಳ್ಳುತ್ತೇವೆ. ಇಲ್ಲ ನಮಗೆ ಅಂತ ಬೇರೆ ಮನೆಯಲ್ಲಿ ಪ್ರಸಾದ ಮಾಡಿಸಿದ್ದರೆ ಅಲ್ಲಿ ಹೋಗಿ ತಿನ್ನುತ್ತೇವೆ. ಆದ್ದರಿಂದ ಅಂದಿನ ದಿನ ಕೂಡ ನಾನು ದೇವಾಲಯದಲ್ಲಿ ಪ್ರಸಾದ ತಿಂದಿಲ್ಲ. ದೇವಸ್ಥಾನಕ್ಕೆ ನಮಗೂ ಗುರು-ಶಿಷ್ಯರ ಸಂಬಂಧ ಇದ್ದಂತೆ. ನಾನು ಪೂಜೆಗೆ ಹೋಗಿ ವಾಪಸ್ ಮಠಕ್ಕೆ ಬಂದೆ ಎಂದು ಗುರುಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಾಸ್ತಿಗುಡಿ: ಉದಯ್ ಪಾತ್ರಕ್ಕೆ ಖಳನಟ ಮಧು ಗುರುಸ್ವಾಮಿ ಧ್ವನಿ

    ಮಾಸ್ತಿಗುಡಿ: ಉದಯ್ ಪಾತ್ರಕ್ಕೆ ಖಳನಟ ಮಧು ಗುರುಸ್ವಾಮಿ ಧ್ವನಿ

    ಬೆಂಗಳೂರು: ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ದುರಂತ ಸಾವು ಕಂಡ ನಟ ಉದಯ್ ಪಾತ್ರಕ್ಕೆ ಖಳನಟ ಮಧು ಗುರುಸ್ವಾಮಿ ಡಬ್ಬಿಂಗ್ ಮಾಡ್ತಿದ್ದಾರೆ.

    ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಡಬ್ಬಿಂಗ್ ನಡೆಯುತ್ತಿದೆ. ಭಜರಂಗಿ ಚಿತ್ರದಲ್ಲಿ ಮಂತ್ರವಾದಿ, ವಜ್ರಕಾಯ ಸಿನಿಮಾದಲ್ಲಿ ಹುಜುರ್,
    ಜೈ ಮಾರುತಿ 800 ಚಿತ್ರದಲ್ಲಿ ವೀರಪ್ಪನಾಗಿ ನಟಿಸಿದ್ದ ಮಧು ಗುರುಸ್ವಾಮಿ ನಟ ಉದಯ್ ಪಾತ್ರಕೆ ಧ್ವನಿಯಾಗಿದ್ದಾರೆ. ಅನಿಲ್ ಪಾತ್ರಕ್ಕೆ ನಟ ವಸಿಷ್ಠ ಅವರು ಈಗಾಗಲೇ ಡಬ್ಬಿಂಗ್ ಮಾಡಿದ್ದಾರೆ. ನಿರ್ದೇಶಕ ನಾಗಶೇಖರ್ ಡಬ್ಬಿಂಗ್ ಕೆಲಸಕ್ಕೆ ಸಾಥ್ ನೀಡಿದ್ದಾರೆ

    ಫೆಬ್ರವರಿ 24ರಂದು ಮಾಸ್ತಗುಡಿ ಚಿತ್ರದ ಆಡಿಯೋ ಲಾಂಚ್ ಗೆ ಚಿತ್ರ ತಂಡ ಪ್ಲಾನ್ ಮಾಡಿದೆ. ಏಪ್ರಿಲ್ 14 ಕ್ಕೆ ಸಿನಿಮಾ ರಿಲೀಸ್‍ಗೆ ಸಿದ್ಧತೆ ನಡೆಸಿದೆ.