Tag: Gurusiddharam Shivayogi Jayanthi

  • ಹೆಣ್ಣು, ಹೊನ್ನು ಮಣ್ಣೆಲ್ಲಾ ಓಸಿ ಸಿಕ್ರೆ ಜಮಾಯ್ಸು ಹಾಡಿಗೆ ರಸ್ತೆಯಲ್ಲೇ ಶಾಸಕ ಡ್ಯಾನ್ಸ್

    ಹೆಣ್ಣು, ಹೊನ್ನು ಮಣ್ಣೆಲ್ಲಾ ಓಸಿ ಸಿಕ್ರೆ ಜಮಾಯ್ಸು ಹಾಡಿಗೆ ರಸ್ತೆಯಲ್ಲೇ ಶಾಸಕ ಡ್ಯಾನ್ಸ್

    ಚಿಕ್ಕಮಗಳೂರು: ಗಡಿಬಿಡಿ ಕೃಷ್ಣ ಚಿತ್ರದ ಟಕ್ಕಾಟಕ್ಕಾ ಟಕ್ಕಾಯ್ಸು, ಲಗ್ಗಾ ಲಗಾ ಲಾಗಾಯ್ಸು… ಹೆಣ್ಣು, ಹೊನ್ನು ಮಣ್ಣೆಲ್ಲಾ ಓಸಿ ಸಿಕ್ರೆ ಜಮಾಯ್ಸು… ಎಂಬ ಹಾಡಿಗೆ ರಸ್ತೆ ಮಧ್ಯೆಯೇ ಶಾಸಕರು ಕುಣಿದು ಕುಪ್ಪಳಿಸಿದ್ದಾರೆ.

    ಅಜ್ಜಂಪುರದ ತಂಬುಡ್ತಳ್ಳಿ ಗೇಟ್ ನಿಂದ ಗುರುಸಿದ್ಧ ರಾಮೇಶ್ವರರ ಮೆರವಣಿಗೆಯಲ್ಲಿ ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಯುವಕರೊಂದಿಗೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಶಾಸಕರ ಕುಣಿತ ಕಂಡ ಯುವಕರು, ಅವರನ್ನು ಸುತ್ತುವರಿದು ಶಾಸಕರ ಜೊತೆ ಸ್ಟೆಪ್ ಹಾಕಿದ್ದಾರೆ.

    ಜಿಲ್ಲೆಯ ನೂತನ ತಾಲೂಕು ಅಜ್ಜಂಪುರದ ಗುರುಸಿದ್ಧರಾಮ ಶಿವಯೋಗಿಗಳ 847ನೇ ಜಯಂತೋತ್ಸವದ ಅಂಗವಾಗಿ ಇಂದು ಮತ್ತು ನಾಳೆ ಎರಡು ದಿನಗಳ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಕೂಡ ಹಾಜರಿದ್ದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಸುರೇಶ್ ರಸ್ತೆ ಮಧ್ಯೆಯೇ ಕುಣಿದು ಕುಪ್ಪಳಿಸಿರುವುದು ಸಖತ್ ಸದ್ದು ಮಾಡುತ್ತಿದೆ.