Tag: Gururaj Jaggesh

  • ನಾಲ್ಕು ಬಾರಿ ಕಾರ್ ಪಲ್ಟಿಯಾಗಿ, ಮರಕ್ಕೆ ಡಿಕ್ಕಿ ಹೊಡಿತು: ಪ್ರತ್ಯಕ್ಷದರ್ಶಿ

    ನಾಲ್ಕು ಬಾರಿ ಕಾರ್ ಪಲ್ಟಿಯಾಗಿ, ಮರಕ್ಕೆ ಡಿಕ್ಕಿ ಹೊಡಿತು: ಪ್ರತ್ಯಕ್ಷದರ್ಶಿ

    – ಜಗ್ಗೇಶ್ ಪುತ್ರ ಯತಿರಾಜ್ ಕಾರ್ ಅಪಘಾತ

    ಚಿಕ್ಕಬಳ್ಳಾಪುರ: ಜಗ್ಗೇಶ್ ಪುತ್ರ ಯತಿರಾಜ್ ಕಾರ್ ನಾಲ್ಕು ಬಾರಿ ಪಲ್ಟಿಯಾಗಿ, ಮರಕ್ಕೆ ಡಿಕ್ಕಿ ಹೊಡೆದು ನಿಂತಿತು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಲಕ್ಷ್ಮಿಪತಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ನಾವು ಹೆದ್ದಾರಿ ಬಳಿಯಲ್ಲಿಯೇ ವಿದ್ಯುತ್ ಕಂಬಗಳನ್ನು ಹಾಕ್ತಾ ಇದ್ದೀವಿ. ಕಾರ್ ವೇಗವಾಗಿ ಬರುತ್ತಿರುವಾಗ ಎಡಗಡೆಯಿಂದ ಬೈಕ್ ಬಂದಿದೆ. ಬೈಕಿಗೆ ಡಿಕ್ಕಿ ಹೊಡೆಯೋದನ್ನ ತಪ್ಪಿಸಲು ಮುಂದಾದಾಗ ಕಾರ್ ಯತಿರಾಜ್ ನಿಯಂತ್ರಣ ತಪ್ಪಿದೆ. ವೇಗವಾಗಿ ಬರುತ್ತಿದ್ದರಿಂದ ಕಾರ್ ನಾಲ್ಕು ಬಾರಿ ಪಲ್ಟಿಯಾಗಿ, ನಮ್ಮ ಮುಂದೆ ಬಂದು ಮರಕ್ಕೆ ಡಿಕ್ಕಿ ಹೊಡೀತು. ಮರಕ್ಕೆ ಡಿಕ್ಕಿ ಹೊಡೆಯದಿದ್ರೆ ನಮ್ಮ ಮೇಲೆಯೇ ಕಾರ್ ಬರುತ್ತಿತ್ತು.

    ಕಾರ್ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಯತಿರಾಜ್ ಅವರಿಗೆ ಪ್ರಾಣಪಾಯಕ್ಕೆ ಏನು ಅಪಾಯವಾಗಿಲ್ಲ. ಕೂಡಲೇ ಕಾರ್ ಬಾಗಿಲು ತೆಗೆದು ಯತಿರಾಜ್ ಅವರನ್ನ ಹೊರ ಕರೆ ತಂದು ನೀರು ಕುಡಿಸಿದೆವು. ನಂತರ ಸ್ವಲ್ಪ ಇಲ್ಲಿಯೇ ಓಡಾಡಿಸಿ ಏನಾದ್ರೂ ಆಗಿದೆಯಾ ಅಂತ ನೋಡಿದೇವು. ಆಟೋ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯ್ತು. ವಿಷಯ ತಿಳಿದ ಬಂದು ಅಲ್ಲಿಗೆ ಬಂದ ಗೆಳೆಯರ ಜೊತೆ ಯತಿರಾಜ್ ಹೋದರು ಎಂದು ಲಕ್ಷ್ಮಿಪತಿ ಮಾಹಿತಿ ನೀಡಿದ್ದಾರೆ.

    ಅಪಘಾತ ಸಂಭವಿಸಿದ್ದು ಎಲ್ಲಿ?:
    ಚಿಕ್ಕಬಳ್ಳಾಪುರ ನಗರದ ಹೊರವಲಯದ ಹೈದರಾಬಾದ್ ಹೆದ್ದಾರಿಯ ಅಲಗುರ್ಕಿ ಬೈ ಪಾಸ್ ಬಳಿ ಅಪಘಾತ ಸಂಭವಿಸಿದೆ. ಯತಿರಾಜ್ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿರುವಾಗ ಅಪಘಾತ ನಡೆದಿದೆ. ಅಪಘಾತದ ತೀವ್ರತೆಗೆ ಬಿಎಂಡಬ್ಲ್ಯೂ ಕಾರ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಏರ್ ಬ್ಯಾಗ್ ಓಪನ್ ಆಗಿದ್ದು ಮತ್ತು ಸ್ಥಳೀಯರ ರಕ್ಷಣೆಯಿಂದ ಯತಿರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ ಜಗ್ಗೇಶ್ ಅವರ ಹೆಸರಿನಲ್ಲಿ ನೋಂದಣಿಯಾಗಿದೆ.

  • ಜಗ್ಗೇಶ್ ಪುತ್ರ ಯತಿರಾಜ್ ಕಾರ್ ಅಪಘಾತ -ಮರಕ್ಕೆ ಡಿಕ್ಕಿ ಹೊಡೆದ ಕಾರ್

    ಜಗ್ಗೇಶ್ ಪುತ್ರ ಯತಿರಾಜ್ ಕಾರ್ ಅಪಘಾತ -ಮರಕ್ಕೆ ಡಿಕ್ಕಿ ಹೊಡೆದ ಕಾರ್

    ಚಿಕ್ಕಬಳ್ಳಾಪುರ: ಹಿರಿಯ ನಟ ಜಗ್ಗೇಶ್ ಹಿರಿಯ ಪುತ್ರ ಯತಿರಾಜ್ ಕಾರ್ ಅಪಘಾತಕ್ಕೊಳಗಾಗಿದೆ.

    ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಅಲಗುರ್ಕಿ ಬೈ ಪಾಸ್ ಬಳಿ ಅಪಘಾತ ಸಂಭವಿಸಿದ್ದು, ಯತಿರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಎಂಡಬ್ಲ್ಯೂ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಗುರುರಾಜ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಸ್ಥಳದಲ್ಲಿದ್ದ ಸ್ಥಳೀಯರು ಕೂಡಲೇ ಯತಿರಾಜ್ ಅವರನ್ನ ರಕ್ಷಣೆ ಮಾಡಿದ್ದಾರೆ.

    ಹೈದರಾಬಾದ್ ನಿಂದ ಬೆಂಗಳೂರಿಗೆ ಬರುವ ಮಾರ್ಗಮಧ್ಯೆ ಅಪಘಾತ ಸಂಭವಿಸಿದೆ. ಜಗ್ಗೇಶ್ ಕುಟುಂಬಸ್ಥರು ಅಪಘಾತ ಆಗಿರೋದನ್ನು ಖಚಿತಪಡಿಸಿದ್ದಾರೆ. ಯತಿರಾಜ್ ಸೇಫ್ ಆಗಿದ್ದು, ಯಾವುದೇ ಪ್ರಾಣಪಾಯ ಆಗಿಲ್ಲ ಎಂದು ಜಗ್ಗೇಶ್ ಕುಟುಂಬ ಮಾಹಿತಿ ನೀಡಿದೆ.

  • ಗುರುರಾಜ್ ಚಾಕು ಇರಿತ ಪ್ರಕರಣ- ಆರೋಪಿ ಹೇಳಿಕೆಗೆ ಜಗ್ಗೇಶ್ ಪ್ರತಿಕ್ರಿಯಿಸಿದ್ದು ಹೀಗೆ

    ಗುರುರಾಜ್ ಚಾಕು ಇರಿತ ಪ್ರಕರಣ- ಆರೋಪಿ ಹೇಳಿಕೆಗೆ ಜಗ್ಗೇಶ್ ಪ್ರತಿಕ್ರಿಯಿಸಿದ್ದು ಹೀಗೆ

    ಬೆಂಗಳೂರು: ನವರಸ ನಾಯಕ ಜಗ್ಗೇಶ್ ತಮ್ಮ ಮಗ ಗುರುರಾಜ್ ಅವರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಕುಮಾರ್ ಹೇಳಿಕೆಗೆ ಟ್ವಿಟರ್‍ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಿವಕುಮಾರ್ ಹೇಳಿಕೆಯ ಬಗ್ಗೆ ಪಬ್ಲಿಕ್ ಟಿವಿ ಸುದ್ದಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್, ಇಂದು ಕತೆ ತಿರುಚುವ ಬದಲು ಅಂತ ತಪ್ಪಾಗಿದ್ದರೆ ಸಾರ್ವಜನಿಕರ ಸಹಾಯದಿಂದ ಅಂದೆ ಗುರುಗೆ ಠಾಣೆಗೆ ಕರೆದುಕೊಂಡು ಹೋಗಬೇಕಿತ್ತು! ಸಾತ್ವಿಕ ಪ್ರಚಾರಕ್ಕೆ ಅದ್ಭುತನಾಟಕ! ಚಾಕುಹಿಡಿದವ! ಎಂದು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ಶಿವಕುಮಾರ್ ಹೇಳಿದ್ದೇನು?: ಅವತ್ತು ನಮ್ಮಿಬ್ಬರ ಕಾರುಗಳು ಪರಸ್ಪರ ಡಿಕ್ಕಿ ಹೊಡೆದವು. ಮೊದಲು ನಾನು ಅಚಾನಕ್ ಆಗಿ ಕಾರನ್ನು ಡಿಕ್ಕಿ ಹೊಡೆದೆ. ಬಳಿಕ ಅವರು ನನ್ನನ್ನ ಓವರ್‍ಟೇಕ್ ಮಾಡಿ ನನ್ನ ಕಾರನ್ನು ಅಡ್ಡ ಹಾಕಿದ್ರು. ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದದ್ದು ನಿಜ. ಆ ಸಂದರ್ಭದಲ್ಲಿ ಕಾರಿನ ಒಳಗೆ ಇದ್ದ ಬೇಸ್ ಬ್ಯಾಟ್ ತೆಗೆದು ನನ್ನ ತಲೆಗೆ ಹೊಡೆದ್ರು. ಗುರುರಾಜ್ ಇನ್ನೂ ಹೆಚ್ಚಾಗಿ ಹಲ್ಲೆ ಮಾಡೋದಕ್ಕೆ ಬಂದಿದ್ದಕ್ಕೆ ನಾನು ಅನಿವಾರ್ಯವಾಗಿ ಚಾಕುವಿನಿಂದ ಚುಚ್ಚಿದ್ದೇ ಹೊರತು ನಾನು ಉದ್ದೇಶಪೂರ್ವಕವಾಗಿ ಚುಚ್ಚಿಲ್ಲ ಅಂತಾ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಗುರು ನನ್ನ ಮೇಲೆ ಹಲ್ಲೆಯ ನಂತರ ಬೇಸ್ ಬ್ಯಾಟ್ ಬಸ್ಸಿನ ಒಳಗೆ ಎಸೆದಿದ್ದಾರೆ ಎಂದು ಆರ್.ಟಿ.ನಗರ ಪೊಲೀಸರ ಮುಂದೆ ತಿಳಿಸಿದ್ದಾರೆ. ಸದ್ಯ ಶಿವಕುಮಾರ್ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.

    https://www.youtube.com/watch?v=D0ClnHX7l64

    https://www.youtube.com/watch?v=-OiNofzJW-o

  • ನಟ ಜಗ್ಗೇಶ್ ಪುತ್ರ ಗುರುರಾಜ್‍ಗೆ ಚಾಕು ಇರಿತ ಪ್ರಕರಣಕ್ಕೆ ಸ್ಫೋಟಕ ತಿರುವು

    ನಟ ಜಗ್ಗೇಶ್ ಪುತ್ರ ಗುರುರಾಜ್‍ಗೆ ಚಾಕು ಇರಿತ ಪ್ರಕರಣಕ್ಕೆ ಸ್ಫೋಟಕ ತಿರುವು

    ಬೆಂಗಳೂರು: ನವರಸ ನಟ ಜಗ್ಗೇಶ್ ಪುತ್ರ ಗುರುರಾಜ್‍ಗೆ ಚಾಕು ಚುಚ್ಚಿದ ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಚಾಕು ಚುಚ್ಚೋದಕ್ಕೆ ಪ್ರಚೋದನೆ ನೀಡಿದ್ದೇ ಗುರುರಾಜ್ ಎಂದು ಆರೋಪಿ ಶಿವಕುಮಾರ್ ಹೇಳಿದ್ದಾರೆ.

    ಅವತ್ತು ನಮ್ಮಿಬ್ಬರ ಕಾರುಗಳು ಪರಸ್ಪರ ಡಿಕ್ಕಿ ಹೊಡೆದವು. ಮೊದಲು ನಾನು ಅಚಾನಕ್ ಆಗಿ ಕಾರನ್ನು ಡಿಕ್ಕಿ ಹೊಡೆದೆ. ಬಳಿಕ ಅವರು ನನ್ನನ್ನ ಓವರ್‍ಟೇಕ್ ಮಾಡಿ ನನ್ನ ಕಾರನ್ನು ಅಡ್ಡ ಹಾಕಿದ್ರು. ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದದ್ದು ನಿಜ. ಆ ಸಂದರ್ಭದಲ್ಲಿ ಕಾರಿನ ಒಳಗೆ ಇದ್ದ ಬೇಸ್ ಬ್ಯಾಟ್ ತೆಗೆದು ನನ್ನ ತಲೆಗೆ ಹೊಡೆದ್ರು.

    ಗುರುರಾಜ್ ಇನ್ನೂ ಹೆಚ್ಚಾಗಿ ಹಲ್ಲೆ ಮಾಡೋದಕ್ಕೆ ಬಂದಿದ್ದಕ್ಕೆ ನಾನು ಅನಿವಾರ್ಯವಾಗಿ ಚಾಕುವಿನಿಂದ ಚುಚ್ಚಿದ್ದೇ ಹೊರತು ನಾನು ಉದ್ದೇಶಪೂರ್ವಕವಾಗಿ ಚುಚ್ಚಿಲ್ಲ ಅಂತಾ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಗುರು ನನ್ನ ಮೇಲೆ ಹಲ್ಲೆಯ ನಂತರ ಬೇಸ್ ಬ್ಯಾಟ್ ಬಸ್ಸಿನ ಒಳಗೆ ಎಸೆದಿದ್ದಾರೆ ಎಂದು ಆರ್.ಟಿ.ನಗರ ಪೊಲೀಸರ ಮುಂದೆ ತಿಳಿಸಿದ್ದಾರೆ. ಸದ್ಯ ಶಿವಕುಮಾರ್ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.

    https://www.youtube.com/watch?v=-OiNofzJW-o

    ಗುರುರಾಜ್ ಗೆ ಚಾಕು ಇರಿತ: ಜಗ್ಗೇಶ್ ಹೇಳಿದ್ದೇನು?

    https://www.youtube.com/watch?v=D0ClnHX7l64

  • ಗುರುರಾಜ್ ಗೆ ಚಾಕು ಇರಿತ: ಜಗ್ಗೇಶ್ ಹೇಳಿದ್ದೇನು?

    ಗುರುರಾಜ್ ಗೆ ಚಾಕು ಇರಿತ: ಜಗ್ಗೇಶ್ ಹೇಳಿದ್ದೇನು?

    ಬೆಂಗಳೂರು: ಇದು ಒಳ್ಳೆಯದಲ್ಲ. ಮಾಧ್ಯಮಗಳ ಮೂಲಕ ದುಷ್ಕರ್ಮಿಗಳಿಗೆ ಸಂದೇಶ ರವಾನೆಯಾಗಬೇಕು. ಹಾಗಾಗಿ ನಾನೇ ಖುದ್ದು ದೂರು ನೀಡಲು ಬಂದಿದ್ದೇನೆ. ಇಲ್ಲಾಂದ್ರೆ ಬೆಂಗಳೂರು ಮುಂದೊಂದು ದಿನ ಮುಂಬೈ ಅಥವಾ ಡೆಲ್ಲಿ ಆಗುವುದರಲ್ಲಿ ಅನುಮಾನವಿಲ್ಲ ಎಂದು ನಟ ಜಗ್ಗೇಶ್ ಹೇಳಿದ್ದಾರೆ.

    ಹಿರಿಯ ಪುತ್ರ ಗುರುರಾಜ್‍ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ರಾಯರ ಆಶೀರ್ವಾದದಿಂದ ಹೆಚ್ಚಿನ ಅನಾಹುತವಾಗಿಲ್ಲ. ನಾವು ಯಾರಿಗೂ ಕೆಟ್ಟದನ್ನು ಮಾಡಿಲ್ಲ. ಹಾಗಾಗಿ ದೇವರು ನಮಗೆ ಕೆಟ್ಟದನ್ನು ಮಾಡುವುದಿಲ್ಲ ಎಂಬ ನಂಬಿಕೆ ಇದೆ. ಗಲಾಟೆ ನಡೆಯುವ ವೇಳೆ ಮಗು ಕಾರಿನಲ್ಲಿತ್ತು. ಹಾಗಾಗಿ ಮಗು ಸೇಫ್ ಆಗಿದೆ. ಅವನೂ ಯಾವಗಲೂ ಕ್ರೀಡಾಕೂಟದಲ್ಲಿ ಬ್ಯೂಸಿಯಾಗಿರುತ್ತಾನೆ. ಗುರು ಪತ್ನಿ ವಿಜ್ಞಾನಿ. ಆಕೆಯೂ ಸಹ ಬೇರೊಂದು ಕಡೆ ಕೆಲಸಕ್ಕೆ ಹೋಗುತ್ತಾರೆ. ಪ್ರತಿದಿನ ಗುರು ಮಗುವನ್ನು ಶಾಲೆಯಿಂದ ಕರೆದುಕೊಂಡು ಬರುತ್ತಾನೆ.

    ಬಹಳ ಸೂಕ್ಷ್ಮವಾಗಿ ಸಮಾಜವನ್ನು ಗಮನಿಸಿರುತ್ತೇನೆ. ಸಾಧಿಸುವವರ ಮೇಲೆ ಹೊಟ್ಟೆ ಉರಿ, ಇದೊಂದು ದುರಂತ. ಅಂತಹವರಿಗೆ ಸೂಕ್ತ ಶಿಕ್ಷಣದ ಕೊರತೆಯಿದೆ ಎಂದು ಜಗ್ಗೇಶ್ ವಿಷಾದ ವ್ಯಕ್ತಪಡಿಸಿದರು.

    ಆಗಿದ್ದೇನು?: ಗುರು ತಮ್ಮ ಮಗುವನ್ನು ಶಾಲೆಯಿಂದ ಕರೆದುಕೊಂಡು ಬರುವಾಗ ಕಾರಿನ ಪಕ್ಕವೇ ಕೆಲವರು ದೊಡ್ಡ ಶಬ್ಧ ಮಾಡಿಕೊಂಡು ಹೋಗಿದ್ದಾರೆ. ಗುರು ಇದನ್ನು ಪ್ರಶ್ನಿಸಿದಾಗ, ಇಬ್ಬರ ನಡುವೆಯೂ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ದುಷ್ಕರ್ಮಿ ಗುರು ತೊಡೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ.

    ಸಂಜೆ ವಾಕ್ ಮುಗಿಸಿಕೊಂಡು ಮನೆಗೆ ಬಂದಾಗ ಗುರುವಿನಿಂದ ಫೋನ್ ಬಂದಾಗ ನನಗೆ ವಿಷಯ ತಿಳಿಯಿತು. ನಂತರ ನಾನು ಆಸ್ಪತ್ರೆಗೆ ಬಂದು ಗುರುವನ್ನು ನೋಡಿದ್ದೇನೆ. ಕಾರ್ನಟಕ ಪೊಲೀಸರ ಬಗ್ಗೆ ನನಗೆ ನಂಬಿಕೆಯಿದೆ. ನಮ್ಮ ಪೊಲೀಸರು ತುಂಬಾ ಆ್ಯಕ್ಟೀವ್ ಆಗಿದ್ದಾರೆ. ಹಾಗಾಗಿ ನಾನು ದೂರು ದಾಖಲಿಸಿದ್ದೇನೆ. ಇದೊಂದು ಆಕಸ್ಮಿಕವಾಗಿ ನಡೆದಂತಹ ಘಟನೆಯಾಗಿದ್ದು, ಇದರ ಹಿಂದೆ ಯಾವುದೇ ವೈಯಕ್ತಿಕ ದ್ವೇಷಗಳಿಲ್ಲ ಎಂದು ಜಗ್ಗೇಶ್ ಸ್ಪಷ್ಟಪಡಿಸಿದರು.

    ಘಟನೆ ಬಗ್ಗೆ ಹಲ್ಲೆಗೊಳಗಾದ ಗುರುರಾಜ್ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ. ಅವರು ಮುಂದಿನ ಕ್ರಮ ಕೈಗೊಳ್ತಾರೆ ಎಂದು ಹೇಳಿದ್ದಾರೆ.

    https://youtu.be/D0ClnHX7l64

    https://youtu.be/-OiNofzJW-o