Tag: gurunath

  • ತಂದೆಯ ಕೊಲೆಯಾಗಿದೆ ಎಂದಿದ್ದಕ್ಕೆ ಮಾಜಿ ಸಚಿವ ಸಿ. ಗುರುನಾಥ್ ಮಗನ ಮೇಲೆ ಸಂಬಂಧಿಕರಿಂದ ಮಾರಣಾಂತಿಕ ಹಲ್ಲೆ

    ತಂದೆಯ ಕೊಲೆಯಾಗಿದೆ ಎಂದಿದ್ದಕ್ಕೆ ಮಾಜಿ ಸಚಿವ ಸಿ. ಗುರುನಾಥ್ ಮಗನ ಮೇಲೆ ಸಂಬಂಧಿಕರಿಂದ ಮಾರಣಾಂತಿಕ ಹಲ್ಲೆ

    ಕಲಬುರಗಿ: ಮಾಜಿ ಸಚಿವ ದಿವಂಗತ ಸಿ. ಗುರುನಾಥ್ ಅವರ ಮಗನ ಮೇಲೆ ಸಂಬಂಧಿಕರಿಂದ ಮಾರಣಾಂತಿಕ ಹಲ್ಲೆ ನಡೆದಿದೆ.

    ಕಲಬುರಗಿ ಜಿಲ್ಲೆ ಶಹಬಾದ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸಂಬಂಧಿಕರಾದ ಸತೀಶ್, ಅವಿನಾಶ್ ಸೇರಿದಂತೆ ಏಳೆಂಟು ಜನರಿಂದ ಸಿ ರಘುನಾಥ್ ಮೇಲೆ ದಾಳಿ ನಡೆದಿದ್ದು, ಕಬ್ಬಿಣದ ರಾಡ್‍ನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ.

    ರಘುನಾಥ್ ತನ್ನ ಫೇಸ್‍ಬುಕ್ ವಾಲ್‍ನಲ್ಲಿ ನನ್ನ ತಂದೆಯ ಆತ್ಮಹತ್ಯೆಯಲ್ಲ, ಕೊಲೆಯಾಗಿದೆ ಅಂತಾ ಪೋಸ್ಟ್ ಹಾಕಿದ್ದರು. ಇದನ್ನ ನೋಡಿ ಸಂಬಂಧಿಕರು ಕೆರಳಿದ್ದರು. ಪೋಸ್ಟ್ ಡಿಲೀಟ್ ಮಾಡು ಅಂತಾ ಎಚ್ಚರಿಕೆ ನೀಡಿದ್ದರು. ಆದರೆ ಎಚ್ಚರಿಕೆಗೆ ಕೇರ್ ಮಾಡದ ಹಿನ್ನಲೆಯಲ್ಲಿ ಹಲ್ಲೆ ನಡೆದಿದೆ ಎಂದು ರಘುನಾಥ್ ಆರೋಪಿಸಿದ್ದಾರೆ.

    ನನಗೆ ರಾಜಕೀಯವಾಗಿ ಮುಗಿಸಲು ಸತೀಶ್ ಹಾಗೂ ಅವಿನಾಶ್ ಪ್ಲ್ಯಾನ್ ಮಾಡಿದ್ದಾರೆಂದು ಆರೋಪ ಮಾಡಿರೋ ರಘುನಾಥ್, ಗಾಯದೊಂದಿಗೆ ಪೊಲೀಸರಿಗೆ ದೂರು ನೀಡಲು ಹೋಗಿದ್ದರು. ಪೊಲೀಸರ ಒತ್ತಾಯದ ಮೇರೆಗೆ ರಘುನಾಥ್ ಫೇಸ್‍ಬುಕ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

    ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.