Tag: Gurunandan

  • ‘ಫಾರೆಸ್ಟ್’ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌

    ‘ಫಾರೆಸ್ಟ್’ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌

    ಸ್ಯಾಂಡಲ್‌ವುಡ್ (Sandalwood) ‘ಉಪಾಧ್ಯಕ್ಷ’ ಚಿಕ್ಕಣ್ಣ (Chikkanna) ಸ್ನೇಹಿತರ ಜೊತೆಗೂಡಿ ಕಾಡಿನ ಕತೆ ಹೇಳೋಕೆ ರೆಡಿ ಆಗಿದ್ದಾರೆ. ಶೇಕಡ 80ರಷ್ಟು ಸಿನಿಮಾ ಕಾಡಿನಲ್ಲಿಯೇ ಸಾಗುತ್ತದೆ. ಹಾಗಾಗಿ ಚಿತ್ರಕ್ಕೆ ‘ಫಾರೆಸ್ಟ್’ ಅಂತಲೇ ಹೆಸರಿಡಲಾಗಿದೆ. ಈ ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದೆ. ಇದನ್ನೂ ಓದಿ:ದರ್ಶನ್ ಪ್ರಕರಣದ ಕುರಿತು ನಟಿ ಮಯೂರಿ ರಿಯಾಕ್ಷನ್

    ‘ಓಡೋ ಓಡೋ’ ಅಂತಾ ಶುರುವಾಗುವ ಹಾಡಿಗೆ ಪುನೀತ್ ಆರ್ಯ ಕ್ಯಾಚಿ ಆಗಿ ಸಾಹಿತ್ಯ ಬರೆದಿದ್ದಾರೆ. ಖ್ಯಾತ ಗಾಯಕ ಕೈಲಾಸ್ ಖೇರ್, ಹರ್ಷ ಉಪ್ಪಾರ್ ಧ್ವನಿಯಾಗಿದ್ದಾರೆ. ಧರ್ಮವೀರ್ ಈ ಹಾಡಿಗೆ ಸಂಗೀತ ಒದಗಿಸಿದ್ದಾರೆ. ಓಡೋ ಓಡೋ ಹಾಡಿನಲ್ಲಿ ಚಿಕ್ಕಣ್ಣ ರಂಗಾಯಣ ರಘು, ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್, ಅನೀಶ್ ತೇಜೇಶ್ವರ್ ಹಾಗೂ ಅರ್ಚನಾ ಕೊಟ್ಟಿಗೆ ಕಾಣಿಸಿಕೊಂಡಿದ್ದಾರೆ.

    ಈ ಹಿಂದೆ ‘ಡಬಲ್ ಇಂಜಿನ್’, ‘ಬಾಂಬೆ ಮಿಠಾಯಿ’, ‘ಬ್ರಹ್ಮಚಾರಿ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ ಇದೊಂದು ಫಾರೆಸ್ಟ್ ಅಡ್ವೆಂಚರಸ್ ಕಾಮಿಡಿ ಸಿನಿಮಾವಾಗಿದ್ದು, ಹಿರಿಯ ನಟ ಅವಿನಾಶ್, ಪ್ರಕಾಶ್ ತುಮ್ಮಿನಾಡ್, ಶರಣ್ಯ ಶೆಟ್ಟಿ (Sharany Shetty), ಅರ್ಚನಾ ಕೊಟ್ಟಿಗೆ (Archana Kottige), ದೀಪಕ್ ರೈ ಪಾಣಾಜೆ, ಸೂರಜ್ ಪಾಪ್ಸ್ ಸುನಿಲ್ ಕುಮಾರ್ ತಾರಾಬಳಗದಲ್ಲಿದ್ದಾರೆ.

    ‘ಫಾರೆಸ್ಟ್’ (Forest Film) ಸಿನಿಮಾಗೆ ಎನ್ ಎಂ ಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕಾಂತರಾಜು ಎಂಬುವವರು ಹಣ ಹಾಕುತ್ತಿದ್ದಾರೆ. ಚಿತ್ರಕ್ಕೆ ವಿ ರವಿಕುಮಾರ್ ಛಾಯಾಗ್ರಹಣ ಮಾಡುತ್ತಿದ್ದು, ಸಂಕಲನದ ಹೊಣೆಯನ್ನು ಅರ್ಜುನ್ ಕಿಟ್ಟು ಹೊತ್ತುಕೊಂಡಿದ್ದಾರೆ. ಧರ್ಮವೀರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿರುವ ಚಿತ್ರತಂಡ, ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

  • ಮಲ್ಟಿಸ್ಟಾರ್ ನಟನೆಯ ‘ಫಾರೆಸ್ಟ್’  ಚಿತ್ರಕ್ಕೆ ಚಂದ್ರ ಮೋಹನ್ ಡೈರೆಕ್ಟರ್

    ಮಲ್ಟಿಸ್ಟಾರ್ ನಟನೆಯ ‘ಫಾರೆಸ್ಟ್’ ಚಿತ್ರಕ್ಕೆ ಚಂದ್ರ ಮೋಹನ್ ಡೈರೆಕ್ಟರ್

    ನ್ನಡದಲ್ಲಿ ‌ಸದ್ದಿಲ್ಲದೇ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾ ರೂಪಗೊಳ್ಳುತ್ತಿದೆ. ಚಿಕ್ಕಣ್ಣ, ಅನೀಶ್ ತೇಜೇಶ್ವರ್,  ಗುರುನಂದನ್ ಹಾಗೂ ರಂಗಾಯಣ ರಘು ಕಾಂಬೋದಲ್ಲಿ ಹೊಸ ಚಿತ್ರವೊಂದು ತಯಾರಾಗುತ್ತಿದೆ. ಈ ನಾಲ್ಕು ಜನ ತಾರೆಯರನ್ನು ಒಂದೇ ಫ್ರೇಮ್ ಗೆ ತಂದು ಆಕ್ಷನ್ ಕಟ್ ಹೇಳುತ್ತಿರುವುದು ಡಬ್ಬಲ್ ಇಂಜಿನ್, ಬ್ರಹ್ಮಚಾರಿ ಸಿನಿಮಾಗಳ‌ ಸಾರಥಿ ಚಂದ್ರ ಮೋಹನ್.

    ಚಂದ್ರ ಮೋಹನ್ (Chandra Mohan) ಹೊಸ ಪ್ರಯತ್ನಕ್ಕೆ ಫಾರೆಸ್ಟ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಟೈಟಲ್ ಹೇಳುವಂತೆ ಫಾರೆಸ್ಟ್  (Forrest) ಅಡ್ವೆಂಚರ್‌ ಕಾಮಿಡಿ ಸಿನಿಮಾ. ಚಿತ್ರ 80%ರಷ್ಟು ಭಾಗ ಕಾಡಿನಲ್ಲಿಯೇ ಸಾಗುತ್ತದೆ.

    ಚಿಕ್ಕಣ್ಣ, ಅನೀಶ್ , ಗುರುನಂದನ್ ಹಾಗೂ ರಂಗಾಯಣ ರಘು ನಾಲ್ಕು ತಾರೆಯರು ಫಾರೆಸ್ಟ್ ಸಿನಿಮಾದ ಆಧಾರ ಸ್ತಂಭಗಳು. ಫನ್ ಜೊತೆಗೆ ಥ್ರಿಲ್ಲಿಂಗ್ ರೈಡ್ ಅನುಭವ ನೀಡುವ ಫಾರೆಸ್ಟ್ ಚಿತ್ರಕ್ಕೆ ಎನ್ ಎಂಕೆ ಸಿನಿಮಾಸ್ ಬ್ಯಾನರ್ ನಡಿ ಕಾಂತರಾಜು ಬಂಡವಾಳ ಹೂಡುತ್ತಿದ್ದಾರೆ. ಅಂದಹಾಗೇ ಕಾಂತರಾಜು ಅವರಿಗಿದು ಚೊಚ್ಚಲ ಚಿತ್ರ. ಸಿನಿಮಾರಂಗದ ಮೇಲಿನ ಆಸಕ್ತಿಯಿಂದ ಫಾರೆಸ್ಟ್ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

    ಫಾರೆಸ್ಟ್ ಸಿನಿಮಾಗೆ ವಿ. ರವಿಶಂಕರ್  ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಧರ್ಮವೀರ್-ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಸದ್ಯ ಟೈಟಲ್ ರಿವೀಲ್ ಮಾಡಿರುವ ಚಿತ್ರತಂಡವೀಗ ಮುಂದಿನ ದಿನಗಳಲ್ಲಿ ಉಳಿದ ತಾರಾಬಳಗದ ಮಾಹಿತಿ ನೀಡಲಿದೆ.

  • 2ನೇ ಮದುವೆ ನನಗೆ ಬೇಕಿತ್ತಾ ಅಂತಾರೆ ಮಠದ ಗುರುಪ್ರಸಾದ್

    2ನೇ ಮದುವೆ ನನಗೆ ಬೇಕಿತ್ತಾ ಅಂತಾರೆ ಮಠದ ಗುರುಪ್ರಸಾದ್

    ರಾಜು ಜೇಮ್ಸ್ ಬಾಂಡ್ (Raju James Bond)  ಚಿತ್ರದ ‘ಬೇಕಿತ್ತಾ… ಬೇಕಿತ್ತಾ..’ (Bekitta) ಹಾಡಿನ ಬಗ್ಗೆ ಹೇಳ್ತಾ, ನಿರ್ದೇಶಕ ಮಠ ಗುರುಪ್ರಸಾದ್ (Guruprasad) ತಮ್ಮ ಮೊದಲ ಮದುವೆ, ಡಿವೋರ್ಸ್, ಎರಡನೇ ಮದುವೆ ಮತ್ತು ಮಗು ಬಗ್ಗೆ ಬಾಯಿ ಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗ್ತಿದೆ.

    ರಾಜು ಜೇಮ್ಸ್ ಬಾಂಡ್ ಚಿತ್ರದ ಮೊದಲ ಹಾಡು (Song) ಬೇಕಿತ್ತಾ ಬೇಕಿತ್ತಾ. ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಆಗ್ಲೇ ಅರ್ಧ ಮಿಲಿಯನ್ ವೀವ್ಸ್ ಪಡೆದುಕೊಂಡಿದೆ‌. ಅನೂಪ್ ಸೀಳಿನ್ ಸಂಗೀತ, ನಿರ್ದೆಶಕ ದೀಪಕ್ ಮಧುವನಹಳ್ಳಿ ಸಾಹಿತ್ಯ ಬರೆದಿದ್ದಾರೆ. ಟಗರು ಖ್ಯಾತಿಯ ಅಥೋನಿ ದಾಸನ್ ಹಾಡಿದ್ದಾರೆ..ಲವ್ವು ನೋವಿನ ಎಣ್ಣೆ‌ ಹಾಡು ಇದಾಗಿದ್ದು ಕೇಳೋದಕ್ಕೆ ಕ್ಯಾಚಿಯಾಗಿದೆ.

    ಅನೂಪ್ ಸೀಳಿನ್ ಕಂಪೋಸಿಷನ್ ‌ದೀಪಕ್ ಲಿರಿಕ್ಸ್ ಹಾಗೂ ಅಥೋನಿದಾಸನ್ ವಾಯ್ಸು ಎಲ್ಲವೂ ಪರ್ಫೆಕ್ಟ್ ಆಗಿ ಮ್ಯಾಚಿಂಗ್ ಆಗಿದೆ. ಫಸ್ಟ್ ಟೈಂ ನಟ ಗುರುನಂದನ್ ವಿರಾಗಿ ವೇಷದಲ್ಲಿ ಕಾಣಿಸಿಕೊಂಡಿದ್ದು ಈ ಹಾಡು ಅವರಿಗೆ ಪಕ್ಕಾ ಹೇಳಿ ಮಾಡಿಸಿದಂತಿದೆ. ಇದನ್ನೂ ಓದಿ:‘ದೇವರ ಆಟ ಬಲ್ಲವರಾರು’ ಎನ್ನುತ್ತಾ 3 ವರ್ಷಗಳ ನಂತರ ಬಣ್ಣ ಹಚ್ಚಿದ ಸಿಂಧೂ ಲೋಕನಾಥ

    ಈ ಹಾಡು ನೋಡಿ ನಿರ್ದೇಶಕ ಮಠ ಗುರುಪ್ರಸಾದ್ ಖುದ್ದು ಈ ಹಾಡಿನ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ. ಈ ಹಾಡು ನನ್ನ ಬದುಕಿಗೆ ಹತ್ತಿರವಾಗಿದೆ ಎನ್ನುತ್ತಾ ತಮ್ಮ ಬದುಕಿನ ಮೊದಲ ಮದುವೆ ಡಿವೋರ್ಸ್, ಎರಡನೇ ಮದುವೆ ಮತ್ತು ಮಗು ಎಲ್ಲವನ್ನೂ ಹೇಳಿದ್ದಾರೆ. ಮಂಜುನಾಥ್ ವಿಶ್ಚಕರ್ಮ ನಿರ್ಮಾಣದ ಈ ಚಿತ್ರದಲ್ಲಿ ಗುರುನಂದನ್, ಮೃದುಲಾ, ರವಿಶಂಕರ್, ಅಚ್ಚುತ್, ಚಿಕ್ಕಣ್ಣ, ಸಾಧುಕೋಕಿಲಾ ಮುಂತಾದವರು ನಟಿಸಿದ್ದಾರೆ.

     

    ಸದ್ಯ ಬೇಕಿತ್ತಾ ಬೇಕಿತ್ತಾ ಹಾಡಿನಿಂದ ಸದ್ದು ಮಾಡ್ತಿರೋ ರಾಜು ಜೇಮ್ಸ್ ಬಾಂಡ್ ಚಿತ್ರ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ಬರಲಿದೆಯಂತೆ. ರಾಜು ಸೀರಿಸ್ ಮೂಲಕ ಸಖತ್ ಫೇಮಸ್ ಆಗಿರುವ ಗುರುನಂದನ್ ಈ ಸಿನಿಮಾದ ಮೂಲಕ ಮತ್ತಷ್ಟು ನಿರೀಕ್ಷೆ ಮೂಡಿಸಿದ್ದಾರೆ.

  • ಜಯಣ್ಣ ಫಿಲಂಸ್ ನೂತನ ಚಿತ್ರ ಆರಂಭ – ಗುರುನಂದನ್ ಹೀರೋ

    ಜಯಣ್ಣ ಫಿಲಂಸ್ ನೂತನ ಚಿತ್ರ ಆರಂಭ – ಗುರುನಂದನ್ ಹೀರೋ

    ಬೆಂಗಳೂರು: ಜಯಣ್ಣ ಫಿಲಂಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಆಗಸ್ಟ್ 19ರ ಸೋಮವಾರ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಲವ್ ಹಾಗೂ ಕಾಮಿಡಿ ಕಥೆ ಆಧರಿಸಿರುವ ಈ ಚಿತ್ರಕ್ಕೆ ಸುಮಾರು 50ದಿನಗಳ ಚಿತ್ರೀಕರಣ ನಡೆಯಲಿದ್ದು, ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ.

    ಈ ಹಿಂದೆ ರಾಮ್ ಲೀಲಾ, ಸಿಂಗ ಚಿತ್ರಗಳನ್ನು ನಿರ್ದೇಶಿಸಿದ್ದ ವಿಜಯ್ ಕಿರಣ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಅಭಿನಯಿಸುತ್ತಿದ್ದಾರೆ. ಸಾಧುಕೋಕಿಲ, ಶಿವರಾಜ್ ಕೆ.ಆರ್.ಪೇಟೆ, ಕಡ್ಡಿಪುಡಿ ಚಂದ್ರು, ಕುರಿ ಪ್ರತಾಪ್, ವಿಶ್ವ, ಶ್ರೀನಿವಾಸಪ್ರಭು ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ. ನಾಯಕಿಯ ಆಯ್ಕೆ ನಡೆಯುತ್ತಿದೆ.

    ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಸಂಭಾಷಣೆಯನ್ನು ರಘು ನಿಡುವಳ್ಳಿ ಬರೆದಿದ್ದಾರೆ. ಕವಿರಾಜ್ ಗೀತರಚನೆ ಮಾಡಿದ್ದಾರೆ. ನಟರಾಜನ್ ಶಂಕರನ್ ಸಂಗೀತ ನಿರ್ದೇಶನ, ಕಿರಣ್ ಹಂಪಾಪುರ ಛಾಯಾಗ್ರಹಣ, ಮಧು ಸಂಕಲನ, ರವಿವರ್ಮ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

  • ‘ಮಿಸ್ಸಿಂಗ್ ಬಾಯ್’ ಜೋಡಿಯಾದವಳು ಮಲೆಯಾಳಿ ಕನ್ಯೆ!

    ‘ಮಿಸ್ಸಿಂಗ್ ಬಾಯ್’ ಜೋಡಿಯಾದವಳು ಮಲೆಯಾಳಿ ಕನ್ಯೆ!

    ಬೆಂಗಳೂರು: ರಘುರಾಮ್ ಯಾವ ಚಿತ್ರ ಮಾಡಿದರೂ ಪ್ರತೀ ಪಾತ್ರವನ್ನೂ ಕಾಡುವಂತೆ, ಸದಾ ನೆನಪಿಟ್ಟುಕೊಳ್ಳುವಂತೆ ರೂಪಿಸುತ್ತಾರೆ. ಅವರೊಂದು ಚಿತ್ರ ಮಾಡುತ್ತಾರೆಂದಾಕ್ಷಣವೇ ಜನ ಕಾತರಗೊಳ್ಳುವುದೂ ಈ ಕಾರಣದಿಂದಲೇ. ಹಾಗಿದ್ದ ಮೇಲೆ ಈ ಸಿನಿಮಾದ ಕೇಂದ್ರ ಬಿಂದುವಿನಂತಿರೋ ನಾಯಕಿಯ ಪಾತ್ರವನ್ನೂ ಅವರು ಅಷ್ಟೇ ಆಸ್ಥೆಯಿಂದ ರೂಪಿಸಿರುತ್ತಾರೆ. ಇದಕ್ಕಾಗಿ ಭಾರೀ ಹುಡುಕಾಟ ನಡೆಸಿ ಕಡೆಗೂ ಮಲೆಯಾಳಿ ಬೆಡಗಿ, ಮಾಡೆಲ್ ಅರ್ಚನಾ ಜಯಕೃಷ್ಣನ್ ಅವರನ್ನು ಕರೆ ತಂದಿದ್ದಾರೆ!

    ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ಕೇರಳ ಹುಡುಗಿಯ ಆಗಮನವಾದಂತಿದೆ. ಭಾವನಾ ಮೆನನ್, ನಿತ್ಯಾ ಮೆನನ್, ಪಾರ್ವತಿ, ಮೀರಾ ಜಾಸ್ಮಿನ್, ರಮ್ಯಾ ನಂಬೀಶನ್… ಹೀಗೆ ಕನ್ನಡದಲ್ಲಿ ಮಿಂಚಿರೋ ಮಲೆಯಾಳಿ ಹುಡುಗೀರ ಪಟ್ಟಿ ದೊಡ್ಡದಿದೆ. ಇದೀಗ ಆ ಸಾಲಿಗೆ ಅರ್ಚನಾ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

    ಅರ್ಚನಾ ಮೂಲತಃ ಮಾಡೆಲ್. ಇದರೊಂದಿಗೇ ಒಂದಷ್ಟು ಮಲೆಯಾಳಂ ಚಿತ್ರಗಳಲ್ಲಿಯೂ ನಟಿಸಿದ್ದ ಅವರು ಸದ್ಯಕ್ಕೆ ಬೆಂಗಳೂರಿನಲ್ಲಿಯೇ ನೆಲೆ ನಿಂತಿದ್ದಾರೆ. ಮಾಡೆಲಿಂಗನ್ನು ಪ್ರಧಾನವಾಗಿ ಪರಿಗಣಿಸಿದ್ದಾರೆ. ಇಂಥಾ ಅರ್ಚನಾ ಮಿಸ್ಸಿಂಗ್ ಬಾಯ್ ಚಿತ್ರದ ನಿರ್ಮಾಪಕರಿಗೆ ಪರಿಚಿತೆಯಾಗಿದ್ದವರು. ಆ ಕಾರಣದಿಂದಲೇ ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರೆ. ಮಿಸ್ಸಿಂಗ್ ಬಾಯ್ ಮೂಲಕ ಅರ್ಚನಾ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ನೆಲೆ ನಿಲ್ಲೋ ಸೂಚನೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ‘ಮಿಸ್ಸಿಂಗ್ ಬಾಯ್’ ಆದ್ರಲ್ಲಾ ಫಸ್ಟ್ ರ‍್ಯಾಂಕ್ ಗುರುನಂದನ್

    ‘ಮಿಸ್ಸಿಂಗ್ ಬಾಯ್’ ಆದ್ರಲ್ಲಾ ಫಸ್ಟ್ ರ‍್ಯಾಂಕ್ ಗುರುನಂದನ್

    ಬೆಂಗಳೂರು: ಫಸ್ಟ್ ರ‍್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ಸಿನಿಮಾಗಳ ಮೂಲಕ ಕಮಾಲ್ ಮಾಡಿದ ಗುರುನಂದನ್ ಈಗ ಮಿಸ್ಸಿಂಗ್ ಬಾಯ್ ಅವತಾರದಲ್ಲಿ ಬರುತ್ತಿದ್ದಾರೆ. ‘ಫೇರ್ ಅಂಡ್ ಲವ್ಲಿ’ ಸಿನಿಮಾದ ಸಾರಥಿ ರಘುರಾಮ್ ನೈಜ ಕಥೆಗೆ ಸಿನಿಮಾ ಟಚ್ ಕೊಟ್ಟು ಮಿಸ್ಸಿಂಗ್ ಬಾಯ್ ಕಥೆ ರೆಡಿ ಮಾಡಿದ್ದಾರೆ. ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡು ಚಿತ್ರತಂಡ ಟೀಸರ್ ರಿಲೀಸ್ ಮಾಡಿದೆ.

    1990 ರಲ್ಲಿ 5 ವರ್ಷದ ಹುಡುಗ ತಂದೆ, ತಾಯಿ ಇಂದ ತಪ್ಪಿ ಹೋಗುತ್ತಾನೆ. ಈ ಹುಡುಗ ತನ್ನ ಕುಟುಂಬವನ್ನು ಹುಡುಕೋದು ಸಿನಿಮಾದ ಒನ್‍ಲೈನ್ ಸ್ಟೋರಿ. 5 ವರ್ಷದ ಹುಡುಗ ಮಿಸ್ ಆಗೋಕ್ಕೆ ಕಾರಣ ಏನು..? ಮತ್ತೆ ತಾಯಿಯನ್ನ ಹುಡುಕೊದು ಹೇಗೆ..? ಮಿಸ್ಸಿಂಗ್ ಬಾಯ್‍ಗೆ ತನ್ನ ಫ್ಯಾಮಿಲಿ ಸಿಗುತ್ತಾ ಅನ್ನೋ ಹತ್ತು ಹಲವು ಪ್ರಶ್ನೆಗಳನ್ನ ಹುಟ್ಟುಹಾಕುತ್ತೆ ರಿವಿಲ್ ಆಗಿರೋ ಟೀಸರ್.

    ಗುರುನಂದನ್ ಜೊತೆ ಸುಮಿತ್ರ, ರಂಗಾಯಣ ರಘು, ಕಿರಣ್, ರವಿಶಂಕರ್ ಗೌಡ, ಆರ್ ಜೆ ಪ್ರದೀಪ ಸೇರಿದಂತೆ ಹಲವು ಕಲಾವಿದ್ರು ಮಿಸ್ಸಿಂಗ್ ಬಾಯ್‍ಗೆ ಸಾಥ್ ಕೊಟ್ಟಿದ್ದಾರೆ. ಸದ್ಯ ರಿವಿಲ್ ಆಗಿರೋ ಟೀಸರ್ ಯುಟ್ಯೂಬ್‍ನಲ್ಲಿ ಒಳ್ಳೆ ಸೌಂಡ್ ಮಾಡುತ್ತಿದ್ದು ಸಿನಿಮಾ ಬಗ್ಗೆ ಮತ್ತಷ್ಟು ನಿರೀಕ್ಷೆಗಳನ್ನ ಹೆಚ್ಚಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕನ್ನಡಿಗರನ್ನು ನಗಿಸಲು ರಾಜು ಬರುವ ಡೇಟ್ ಫಿಕ್ಸ್

    ಕನ್ನಡಿಗರನ್ನು ನಗಿಸಲು ರಾಜು ಬರುವ ಡೇಟ್ ಫಿಕ್ಸ್

    ಬೆಂಗಳೂರು: ಫಸ್ಟ್ ಲುಕ್, ಟೀಸರ್, ಟ್ರೇಲರ್, ಸಾಂಗ ಹೀಗೆ ಚಿತ್ರ ಶುರುವಿನಿಂದಲೂ ಸುದ್ದಿ ಮಾಡ್ತಾನೆ ಬಂದಿತ್ತು ‘ರಾಜು ಕನ್ನಡ ಮಿಡಿಯಂ’. ಆದ್ರೆ ಅದ್ಯಾಕೋ ಗೊತ್ತಿಲ್ಲ ಚಿತ್ರ ತಂಡ ಸ್ಪಲ್ಪ ದಿನಗಳಿಂದ ಗಪ್-ಚುಪ್ ಆಗಿತ್ತು. ಆದರೆ ಈಗ ಕನ್ನಡಿಗರನ್ನು ನಗಿಸಲು ರಾಜು ಬರುವ ಡೇಟ್ ಫಿಕ್ಸ್ ಆಗಿದೆ.

    ಈ ತಿಂಗಳ 19ನೇ ದಿನಾಂಕದಂದು ‘ರಾಜು ಕನ್ನಡ ಮಿಡಿಯಂ’ ಕರುನಾಡ ಬೆಳ್ಳಿತೆರೆಯಲ್ಲಿ ಮನೋರಂಜನೆಯ ಮೋಜನ್ನು ಪ್ರದರ್ಶಿಸಲು ಸಿದ್ಧವಾಗಿದ್ದಾನೆ. ರಾಜು ಕನ್ನಡ ಮಿಡಿಯಂ ರೋಮ್ಯಾಂಟಿಕ್ ಕಾಮಿಡಿ ಮಿಶ್ರಣವುಳ್ಳ ಸಿನಿಮಾ. ಕಿರಣ್ ರವಿಂದ್ರನಾಥ್ ಸಂಗೀತ ಸಂಯೋಜನೆಯ ಹಾಡುಗಳು ಈಗಾಲೇ ಕೇಳುಗರನ್ನ ತಲುಪಿವೆ. ಗುರುನಂದನ್‍ಗೆ ಜೋಡಿಯಾಗಿ ಆಶಿಕಾ ರಂಗನಾಥ್ ಹಾಗೂ ಅವಂತಿಕಾ ಶೆಟ್ಟಿ ಕಂಗೊಳಿಸಿದ್ದಾರೆ. ಅದ್ರಲ್ಲೂ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸಿನಿಮಾ ರಿಲೀಸ್‍ಗೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

    ‘ಫಸ್ಟ್ ರ‍್ಯಾಂಕ್ ರಾಜು’ ಸಿನಿಮಾದ ನಂತರ ನರೇಶ್ ಕುಮಾರ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದೆ. ‘ಶಿವಲಿಂಗ’ದಂತಹ ಸೂಪರ್ ಡೂಪರ್ ಸಿನಿಮಾ ನಿರ್ಮಾಣ ಮಾಡಿದ್ದ ಕೆ.ಎ.ಸುರೇಶ್ ಈ ಚಿತ್ರದ ವಾರಸ್ದಾರ. ಈ ಚಿತ್ರ 2017ರಲ್ಲಿಯೇ ತೆರೆಕಾಣಬೇಕಿತ್ತು. ಆದ್ರೆ ಕಾರಣಂತರಗಳಿಂದ ಈ ವರ್ಷದ ಜನವರಿ 19ಕ್ಕೆ ರಾಜ್ಯಾದ್ಯಂತ ಹವಾ ಎಬ್ಬಿಸಲಿದೆ.

  • `ರಾಜು ಕನ್ನಡ ಮೀಡಿಯಂ’ ಸಿನಿಮಾ ರಿಲೀಸ್ ಗೆ ಮತ್ತೆ ಎದುರಾಯ್ತು ವಿಘ್ನ

    `ರಾಜು ಕನ್ನಡ ಮೀಡಿಯಂ’ ಸಿನಿಮಾ ರಿಲೀಸ್ ಗೆ ಮತ್ತೆ ಎದುರಾಯ್ತು ವಿಘ್ನ

    ಬೆಂಗಳೂರು: ಚಂದನವನದಲ್ಲಿ ಟ್ರೇಲರ್ ನಿಂದ ಸಖತ್ ಸದ್ದು ಮಾಡುತ್ತಿರುವ `ರಾಜು ಕನ್ನಡ ಮೀಡಿಯಂ’ ಸಿನಿಮಾ ತೆರೆಗೆ ಬರಲು ಮತ್ತೊಂದು ಕಂಟಕ ಎದುರಾಗಿದೆ. ಸಿನಿಮಾ ರಿಲೀಸ್ ಬಿಡುಗಡೆಗೆ ತಡೆಯಾಜ್ಞೆ ಕೋರಿ ನಿರ್ಮಾಪಕ ಡಾ.ಎನ್.ಲಕ್ಷ್ಮೀಪತಿ ಬಾಬು ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ಸಿನಿಮಾದ ನಿರ್ಮಾಣದ ಸಮಯದಲ್ಲಿ ನಿರ್ಮಾಪಕರಾದ ಸುರೇಶ್ ಮತ್ತು ಲಕ್ಷ್ಮೀಪತಿ ಬಾಬು ಇಬ್ಬರು ಒಪ್ಪಂದದ ಮೇರೆಗೆ ಸುರೇಶ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತರಲು ಯೋಚಿಸಿದ್ದರು. ಸುರೇಶ್ ಬ್ಯಾನರ್ ಅಡಿಯಲ್ಲಿ ಇಬ್ಬರು ನಿರ್ಮಾಪಕರು 60:40 ಅನುಪಾತದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಿ ಸಿನಿಮಾ ಮಾಡಲು ನಿರ್ಧರಿಸಿದ್ದರು ಎಂದು ಹೇಳಲಾಗುತ್ತಿದೆ.

    ಸದ್ಯ ಸುರೇಶ್ ಅವರು ನನ್ನಿಂದ ಶೇ.60ರಷ್ಟು ಬಂಡವಾಳವನ್ನು ಪಡೆದುಕೊಂಡು, ಸಿನಿಮಾವನ್ನು `ಸುರೇಶ್ ಆರ್ಟ್ಸ್’ನಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ ಎಂದು ಲಕ್ಷ್ಮೀಪತಿ ಬಾಬು ಆರೋಪಿಸುತ್ತಿದ್ದಾರೆ. ಇತ್ತ ಸುರೇಶ್ ಇಂದು ಕೋರ್ಟ್ ರಜೆಯಿದ್ದು, ನಾಳೆ ಎಲ್ಲವನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಾಯಕ ನಟನಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಸಾಧು ಕೋಕಿಲ, ಓಂ ಪ್ರಕಾಶ್, ಚಿಕ್ಕಣ್ಣ, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಸಿನಿಮಾ ಹೊಂದಿದೆ. ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆಯಲಿದ್ದಾರೆ. ಸಿನಿಮಾ ನರೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದಾರೆ.

     

  • ನಗೆಗಡಲಿನಲ್ಲಿ ಕನ್ನಡದ ಕಂಪು ಪಸರಿಸಲು ಬರ್ತಿದ್ದಾನೆ `ಕನ್ನಡ ಮೀಡಿಯಂ ರಾಜು’

    ನಗೆಗಡಲಿನಲ್ಲಿ ಕನ್ನಡದ ಕಂಪು ಪಸರಿಸಲು ಬರ್ತಿದ್ದಾನೆ `ಕನ್ನಡ ಮೀಡಿಯಂ ರಾಜು’

    ಬೆಂಗಳೂರು: ಫಸ್ಟ್ ರ‍್ಯಾಂಕ್ ಖ್ಯಾತಿಯ ಗುರುನಂದನ್ ಅಭಿನಯದ `ರಾಜು ಕನ್ನಡ ಮೀಡಿಯಂ’ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.

    ಕನ್ನಡ ಮೀಡಿಯಂ ನಲ್ಲಿ ಕಲಿತಿರುವ ಹುಡುಗ ರಾಜಧಾನಿಗೆ ಬಂದು ಹೇಗೆ ಜೀವನ ನಡೆಸುವುದರ ಜೊತೆಗೆ ಕನ್ನಡದ ಕಂಪನ್ನು ಹೇಗೆ ಪಸರಿಸುತ್ತಾನೆ ಎಂಬುದೇ ಕಥೆಯ ಜೀವಾಳವಾಗಿದೆ. ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಿದಾಗಿನಿಂದಲೂ ಸ್ಯಾಂಡಲ್‍ವುಡ್ ನಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿತ್ತು.

    ಈ ಹಿಂದೆ ಗುರುನಂದನ್ ನಟನೆಯ `ಫಸ್ಟ್ ರ‍್ಯಾಂಕ್ ರಾಜು’ ಭರ್ಜರಿ ಯಶಸ್ಸನ್ನು ಕಂಡಿತ್ತು. ಕನ್ನಡ ಮೀಡಿಯಂ ರಾಜು ಮೊದಲ ಸಿನಿಮಾದ ಮುಂದುವೆರಿದ ಭಾಗವೇ ಎಂದು ಹೇಳಲಾಗಿತ್ತು, ಆದರೆ ಇದು ಸಂಪೂರ್ಣ ವಿಭಿನ್ನ ಕಥೆಯನ್ನು ಒಳಗೊಂಡಿದೆ. ಗುರು ಅವರ ಕನ್ನಡದ ಬಗೆಗಿನ ಒಲವು, ಸಿನಿಮಾದಲ್ಲಿ ಬರುವ ಕಾಮಿಡಿ ದೃಶ್ಯಗಳು ಎಲ್ಲರನ್ನು ನಗಿಸುವುದು ಪಕ್ಕಾ ಆಗಿದೆ.

    ಚಿಕ್ಕಣ್ಣ, ಕುರಿ ಪ್ರತಾಪ್ ನಗಿಸಲು ರಾಜುವಿಗೆ ಸಾಥ್ ನೀಡಿದ್ದಾರೆ. ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆಯಲಿದ್ದಾರೆ. ಸಿನಿಮಾ ನರೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದಾರೆ. ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಸಾಧು ಕೋಕಿಲ, ಓಂ ಪ್ರಕಾಶ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಸಿನಿಮಾ ಹೊಂದಿದೆ.