Tag: Gurumitkal

  • ಬಾವಿಗೆ ಬಿದ್ದು ಇಬ್ಬರು ಯುವತಿಯರು ದುರ್ಮರಣ

    ಬಾವಿಗೆ ಬಿದ್ದು ಇಬ್ಬರು ಯುವತಿಯರು ದುರ್ಮರಣ

    ಯಾದಗಿರಿ: ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರು ಯುವತಿಯರು ಸಾವನ್ನಪ್ಪಿದ ಘಟನೆ ಯಾದಗಿರಿಯ (Yadgir) ಮೊಟ್ನಳ್ಳಿ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ.

    ಮೃತರನ್ನು ವೈಶಾಲಿ (17), ನವೀತಾ (16) ಎಂದು ಗುರುತಿಸಲಾಗಿದೆ. ಇಬ್ಬರು ಬಟ್ಟೆ ತೊಳೆಯಲು ಹೋಗಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳೀಯರು ಶವವನ್ನು ಬಾವಿಯಿಂದ ಹೊರಗೆ ತೆಗೆದಿದ್ದಾರೆ.

    ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ನವಜಾತ ಶಿಶುಗಳ ಸರಣಿ ಸಾವು – ಎರಡು ವಾರದ ಅಂತರದಲ್ಲಿ ಮೂರು ಶಿಶುಗಳ ಮರಣ

    ನವಜಾತ ಶಿಶುಗಳ ಸರಣಿ ಸಾವು – ಎರಡು ವಾರದ ಅಂತರದಲ್ಲಿ ಮೂರು ಶಿಶುಗಳ ಮರಣ

    ಯಾದಗಿರಿ: ಜಿಲ್ಲೆಯಲ್ಲಿ ನವಜಾತ ಶಿಶುಗಳ ಸರಣಿ ಸಾವು ಮುಂದುವರೆದಿದ್ದು, ಎರಡು ವಾರದ ಅಂತರದಲ್ಲಿ ಮೂರು ಶಿಶುಗಳು ಮೃತಪಟ್ಟಿವೆ. ಈ ಘಟನೆ ಯಾದಗಿರಿ (Yadagiri) ಜಿಲ್ಲೆಯ ಗುರುಮಠಕಲ್ (Gurumitkal) ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

    ನಿನ್ನೆ (ಎ.08) ತಪಾಸಣೆಗಾಗಿ ಗರ್ಭಿಣಿ ಗಾಯತ್ರಿ ದಾಸರಿ ಎಂಬವರು ಗುರುಮಠಕಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಈ ವೇಳೆ ವೈದ್ಯರು ಕೆಲವು ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಹೋಗಲು ಸೂಚಿಸಿದ್ದರು. ಆದರೆ ತಡರಾತ್ರಿ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.ಇದನ್ನೂ ಓದಿ: ಹೆಚ್ಚುವರಿ ಪರಿಹಾರ ನೀಡದ್ದಕ್ಕೆ ಸಣ್ಣ ನೀರಾವರಿ ಇಲಾಖೆಯ 1.43 ಲಕ್ಷ ರೂ. ಮೌಲ್ಯದ ಪೀಠೋಪಕರಣ ಜಪ್ತಿ

    ಆಸ್ಪತ್ರೆಗೆ ಬರುತ್ತಲೇ ಮಗುವಿನ ಅರ್ಧದೇಹ ಹೊರಗೆ ಬಂದಿತ್ತು. ಆದರೆ ಈ ಸಮಯದಲ್ಲಿ ಜಿಲ್ಲಾಸ್ಪತ್ರೆಗೆ ಹೋಗಲು ಯಾವುದೇ ಅಂಬುಲೆನ್ಸ್ ಇರಲಿಲ್ಲ. ಹೀಗಾಗಿ, ಸಿಬ್ಬಂದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ಹೆರಿಗೆ ಮಾಡಿದ್ದಾರೆ. ಹೆರಿಗೆಯಾದ ಕೆಲವೇ ಕ್ಷಣಗಳಲ್ಲಿ ನವಜಾತ ಶಿಶು ಮೃತಪಟ್ಟಿದೆ.

    ಶಿಶು ಮೃತಪಟ್ಟ ಹಿನ್ನೆಲೆ ಡಿಹೆಚ್‌ಓ ಮಹೇಶ್ ಬಿರಾದಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪೇದೆ ಆತ್ಮಹತ್ಯೆ

     

  • ಮಾಜಿ ಗ್ರಾಪಂ ಸದಸ್ಯನಿಂದ 120 ಎಕರೆ ಕೆರೆ ಭೂಮಿ ಕಬಳಿಕೆ!

    ಮಾಜಿ ಗ್ರಾಪಂ ಸದಸ್ಯನಿಂದ 120 ಎಕರೆ ಕೆರೆ ಭೂಮಿ ಕಬಳಿಕೆ!

    – ಲಕ್ಷ ಲಕ್ಷ ಹಣ ಪಡೆದು ಜಾಗ ಲೀಸ್‍ಗೆ ಕೊಟ್ಟ ಭೂಪ

    ಯಾದಗಿರಿ: ಕೃಷಿಗೆ ಉತ್ತೇಜನ ಸಿಗಲಿ, ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರದಿರಲಿ ಎಂಬ ಉದ್ದೇಶದಿಂದ ಸರ್ಕಾರ ಯಾದಗಿರಿಯ (Yadgir) ಗುರುಮಠಕಲ್‍ನ (Gurumitkal) ಬದ್ದೆಪಲ್ಲಿ ಗ್ರಾಮದಲ್ಲಿ ನೂರಾರು ಎಕರೆ ಜಮೀನಿನಲ್ಲಿ ಕೆರೆ ನಿರ್ಮಾಣ ಮಾಡಿತ್ತು. ಕಳೆದ 15 ವರ್ಷಗಳಿಂದ ಗ್ರಾಮದ ಪ್ರಭಾವಿ ವ್ಯಕ್ತಿ, ಗ್ರಾಮ ಪಂಚಾಯತಿ ಮಾಜಿ ಸದಸ್ಯನೊಬ್ಬ ಬರೋಬ್ಬರಿ 120 ಎಕರೆ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಲಕ್ಷ ಲಕ್ಷ ಹಣ ಪಡೆದು ಈ ಭೂಮಿಯನ್ನು ಲೀಸ್‍ಗೆ ನೀಡಿದ್ದಾನೆ. ಇದರಿಂದ ಕೆರೆ ನೀರು ನಂಬಿ ಕೃಷಿ ಮಾಡಬೇಕಿದ್ದ ನೂರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಬದ್ದೆಪಲ್ಲಿ ಗ್ರಾಮದಲ್ಲಿ ಸರ್ಕಾರ 140 ಎಕರೆ ಜಮೀನಿನಲ್ಲಿ ಕೆರೆ ನಿರ್ಮಾಣ ಮಾಡಿತ್ತು. ಇದರಿಂದ ರೈತರಿಗೆ ಅನುಕೂಲವಾಗಿತ್ತು. ಆ ಕೆರೆಯನ್ನೇ ಬಂಡವಾಳ ಮಾಡಿಕೊಂಡ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಅಭಿಮನ್ಯು ಸರ್ಕಾರಿ ಜಮೀನು ಕಬಳಿಕೆ ಮಾಡಿಕೊಂಡಿದ್ದಾನೆ. ಕೆರೆಗೆ ಹತ್ತಿರದಲ್ಲೇ ಆತನ 20 ಎಕರೆ ಜಮೀನಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಆತ ಬೇಸಿಗೆಯಲ್ಲಿ ಕೆರೆಯ ನೀರನ್ನು ಖಾಲಿ ಮಾಡಿ ಕಳೆದ 15 ವರ್ಷಗಳಿಂದ ಇಡೀ ಕೆರೆಯನ್ನ ಒತ್ತುವರಿ ಮಾಡಿ 120 ಎಕರೆ ಜಮೀನಿನನ್ನು ತನ್ನ ವಶಕ್ಕೆ ಪಡೆದಿದ್ದಾನೆ. ಇದನ್ನೂ ಓದಿ: ಮೀಸಲಾತಿಗೆ ನೆಹರು ವಿರೋಧ, ಅಂಬೇಡ್ಕರ್‌ಗೆ ಭಾರತರತ್ನ ಕೊಡುವ ಮನಸ್ಸು ಕಾಂಗ್ರೆಸ್‌ಗೆ ಇರಲಿಲ್ಲ: ಮೋದಿ ಕಿಡಿ

    ಈ ಜಾಗದಲ್ಲಿ ವಾಣಿಜ್ಯ ಬೆಳೆ ಖರ್ಬೂಜ ಬೆಳೆಯುತ್ತಿದ್ದಾನೆ. ಸರ್ಕಾರ ಕಳೆದ ವರ್ಷ ಗ್ರಾಮದ ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುವಂತೆ ಅನುಕೂಲಕ್ಕಾಗಿ ಕೆರೆ ತುಂಬುವ ಯೋಜನೆ ಜಾರಿ ಮಾಡಿ, ಸಣ್ಣ ನೀರಾವರಿ ಇಲಾಖೆ ಮೂಲಕ ಅನುದಾನ ಬಿಡುಗಡೆಗೊಳಿಸಿ ಕೆರೆಯನ್ನು ಸಹ ತುಂಬಿಸಿತ್ತು. ಈ ವೇಳೆ ಅಭಿಮನ್ಯು ತನ್ನ ಸ್ವಾರ್ಥಕ್ಕಾಗಿ ಕೆರೆಯ ನೀರನ್ನು ತೆರವು ಮಾಡಿದ್ದಲ್ಲದೇ, ಕೆರೆಯಲ್ಲಿ ಹೂಳು ಎತ್ತಿ ಕೆರೆಯ ಮಣ್ಣನ್ನು ಸಹ ಮಾರಿಕೊಂಡಿದ್ದ. ಈಗ ಅದೇ ಜಮೀನನ್ನು ಆಂಧ್ರ ಪ್ರದೇಶ ಮೂಲದ ವ್ಯಕ್ತಿಯಿಂದ ಲಕ್ಷ ಲಕ್ಷ ಹಣ ಪಡೆದು ಲೀಸ್‍ಗೆ ನೀಡಿದ್ದಾನೆ.

    ಕೆರೆ ನೀರು ಖಾಲಿ ಮಾಡಿದ್ದನ್ನು ಪ್ರಶ್ನೆ ಮಾಡಲು ಹೋದ ಗ್ರಾಮಸ್ಥರ ಮೇಲೂ ಅಭಿಮನ್ಯು ಹಾಗೂ ಆತನ ಕುಟುಂಬಸ್ಥರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹೀಗಾಗಿ ಇಡೀ ಊರಿಗೆ ಊರೇ ಒಗ್ಗಟಾಗಿ ಕಳೆದ ಎರಡು ತಿಂಗಳ ಹಿಂದೆ ಸರ್ಕಾರಿ ಭೂಮಿ ವಶಕ್ಕೆ ಪಡೆಯಲು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ. ಸರ್ಕಾರಿ ಜಮೀನು ಒತ್ತುವರಿ ಮಸಡಿಕೊಂಡಿರೋದು ಕಣ್ಣಿಗೆ ಕಾಣ್ತಿದ್ರೂ ಅಧಿಕಾರಿಗಳು ಯಾಕೆ ಮೌನವಹಿಸಿದ್ದಾರೆ ಎಂದು ಜನ ಪ್ರಶ್ನಿಸಿದ್ದಾರೆ. ಕೆರೆಯ ಜಾಗವನ್ನು ಒತ್ತುವರಿ ತೆರವುಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಶೈಲಿಯಲ್ಲಿ ಮೊಬೈಲ್‌ಗಳ್ಳರ ಸೆರೆ

  • ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಖರ್ಗೆ ಅಳಿಯ ಸ್ಪರ್ಧೆ ಸಾಧ್ಯತೆ: ಚಿಂಚನಸೂರು

    ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಖರ್ಗೆ ಅಳಿಯ ಸ್ಪರ್ಧೆ ಸಾಧ್ಯತೆ: ಚಿಂಚನಸೂರು

    ಡಿಸಿಎಂ ಆಗಿಯೇ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದ ಮಾಜಿ ಸಚಿವ

    ಯಾದಗಿರಿ: ಲಿಂಗಾಯತ ಸಿಎಂ ವಿಚಾರ ಚರ್ಚೆಯಾಗುತ್ತಿರುವ ಬೆನ್ನಲ್ಲೇ ನಾನು ಡಿಸಿಎಂ ಆಗಿಯೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು (Baburao Chinchansur) ಗುರುಮಠಕಲ್‍ನಲ್ಲಿ (Gurumitkal) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರಿಗೆ ನ್ಯಾಯಕೊಡಿಸುವ ಸಲುವಾಗಿ ನಾನು ರಾಜಕೀಯದಲ್ಲಿ ಜೀವಂತವಾಗಿದ್ದೇನೆ. ನಾನು ಉಪಮುಖ್ಯಮಂತ್ರಿಯಾಗಿಯೇ ರಾಜಕೀಯ ನಿವೃತ್ತಿಯಾಗುತ್ತೇನೆ. ಈ ಮೂಲಕ ಡಿಸಿಎಂ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಾನು ಈ ಬಾರಿ ಕೋಲಿ ಸಮಾಜವನ್ನು ಎಸ್‍ಟಿಗೆ ಸೇರ್ಪಡೆ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ – 35 ಜನ ಪೊಲೀಸ್ ವಶಕ್ಕೆ

    ವಿಧಾನಸಭೆ ಚುನಾವಣೆ ವೇಳೆ ನನಗೆ ರಸ್ತೆ ಅಪಘಾತವಾಗಿತ್ತು. ಆಗ ನನಗೆ ಆರು ಆಪರೇಷನ್‍ಗಳಾಗಿವೆ. ನನ್ನ ವಿರೋಧಿಗಳು ಸಾಯುತ್ತಾರೆಂದು ಅಪಪ್ರಚಾರ ಮಾಡಿದ್ದರು. ಇದರಿಂದ ನಾನು ಸೋತಿದ್ದೇನೆ. ಇದರಿಂದ ನನ್ನ ಆತ್ಮಕ್ಕೆ ಬೆಂಕಿ ಹತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ಇದರಿಂದ ಯಾವುದೇ ಪರಿಣಾಮ ಆಗುವುದಿಲ್ಲ. ಕಾಂಗ್ರೆಸ್ ಇನ್ನಷ್ಟು ಪ್ರಬಲವಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಕಲಬುರ್ಗಿ ಕಾಂಗ್ರೆಸ್ (Congress) ಅಭ್ಯರ್ಥಿ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ. ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಸ್ಪರ್ಧಿಸುವ ಸಾಧ್ಯತೆ ಇದೆ. ರಾಧಾಕೃಷ್ಣ ಅವರಿಗೆ ಟಿಕೆಟ್ ನೀಡುವಂತೆ ಒತ್ತಯಿಸುತ್ತೇವೆ. ಅವರಿಗೆ ಟಿಕೆಟ್ ಸಿಕ್ಕರೆ ಬಹುಮತದಿಂದ ಸಂಸದರನ್ನಾಗಿ ಆಯ್ಕೆ ಮಾಡುತ್ತೇವೆ. ಇಲ್ಲಿಯವರೆಗೂ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೋ ಗೊತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರಿಗೂ ಟಿಕೆಟ್ ಕೊಟ್ಟರು ಕೊಡಬಹುದು. ನನ್ನ ಪ್ರಕಾರ ಅವರ ಅಳಿಯನಿಗೆ ಟಿಕೆಟ್ ಕೊಡುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

    ಲೋಕಸಭಾ ಚುನಾವಣೆಯ ಸಮೀಪದಲ್ಲಿ ಚಿಂಚನಸೂರು ಹೇಳಿಕೆ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದೆಯಾ? ಈ ಬಾರಿ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೇ? ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಕಲ್ಲು ತೂರಾಟ; ಟಿಪ್ಪುವಿನ ಕಾರಣ ಬಲಿಷ್ಠವಾಗಿ ನಿಂತುಬಿಡ್ತು ಅನ್ನಿಸುತ್ತೆ ಎಂದ ಶಾಸಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]