Tag: Gurumatkal

  • ಯಾದಗಿರಿ | ಅನ್ನಭಾಗ್ಯ ಅಕ್ಕಿ ಬಳಿಕ ಜೋಳ, ಅವಧಿ ಮೀರಿದ ಹಾಲಿನ ಪೌಡರ್ ಪ್ಯಾಕೆಟ್ ಸೇರಿ ಅಕ್ರಮ ಜಾಲ ಪತ್ತೆ

    ಯಾದಗಿರಿ | ಅನ್ನಭಾಗ್ಯ ಅಕ್ಕಿ ಬಳಿಕ ಜೋಳ, ಅವಧಿ ಮೀರಿದ ಹಾಲಿನ ಪೌಡರ್ ಪ್ಯಾಕೆಟ್ ಸೇರಿ ಅಕ್ರಮ ಜಾಲ ಪತ್ತೆ

    ಯಾದಗಿರಿ: ಜಿಲ್ಲೆಯಲ್ಲಿ ಸರ್ಕಾರದ ಜೋಳ ಹಾಗೂ ಬಡಮಕ್ಕಳ ಪೌಷ್ಟಿಕತೆ ಹೆಚ್ಚಿಸುವ ಕ್ಷೀರಭಾಗ್ಯ ಯೋಜನೆಯ, ಅವಧಿ ಮೀರಿದ ನಂದಿನಿ ಹಾಲಿನ ಪೌಡರ್‌ಗಳ ಪ್ಯಾಕೆಟ್‌ಗಳನ್ನೂ ವಿದೇಶಕ್ಕೆ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ.

    ಯಾದಗಿರಿ ಜಿಲ್ಲೆಯ ಗುರುಮಠಕಲ್‌ನ ಲಕ್ಷ್ಮೀ ತಿಮ್ಮಪ್ಪ ಹತ್ತಿ ಮಿಲ್‌ನಲ್ಲಿ ಅಕ್ರಮ ಬಯಲಾಗಿದೆ. ಪಡಿತರ ಅಕ್ಕಿ ಇದೆ ಎಂದು ದಾಳಿ ಮಾಡಿ ಪರಿಶೀಲನೆ ಮಾಡಿದಾಗ ಮತ್ತಷ್ಟು ದಂಧೆ ಬಯಲಾಗಿದೆ.ಇದನ್ನೂ ಓದಿ: ಆರೆಸ್ಸೆಸ್, ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಯಾಕೆ ಲಾಠಿ, ಗನ್ ಟ್ರೈನಿಂಗ್ ಕೊಡ್ತಿಲ್ಲ?: ಶಾಸಕ ಮಂಜುನಾಥ ಭಂಡಾರಿ

    ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಟನ್‌ಗಟ್ಟಲೇ ಪಡಿತರ ಅಕ್ಕಿ ದಾಸ್ತಾನು ಜಪ್ತಿ ಮಾಡಲು ತೆರಳಿದ್ದ ತಂಡ ಅಕ್ಕಿ ಜೊತೆಗೆ ಜೋಳ ಹಾಗೂ ಹಾಲಿನ ಪೌಡರ್‌ನ ಚೀಲಗಳನ್ನೂ ಕಂಡು ಶಾಕ್ ಆಗಿದೆ.

    ಅಕ್ಕಿ ದಾಸ್ತಾನು ಜಪ್ತಿಯ ವೇಳೆ, ಗೋದಾಮಿನ ಮತ್ತೊಂದು ಭಾಗದಲ್ಲಿ ಸರ್ಕಾರಿ ಜೋಳ ಹಾಗೂ ನವೆಂಬರ್ 2024ರಲ್ಲೇ ಅವಧಿ ಮೀರಿದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ದಾಸ್ತಾನು ಸಿಕ್ಕಿದೆ. 200 ಕ್ವಿಂಟಾಲ್‌ನಷ್ಟು ಜೋಳದ ಚೀಲಗಳು ಹಾಗೂ 300 ಕೇಜಿಗೂ ಹೆಚ್ಚು ಹಾಲಿನ ಪೌಡರ್ ಅಂದಾಜು 20 ಚೀಲ ಗೋಧಿ ಪತ್ತೆಯಾಗಿದೆ.ಇದನ್ನೂ ಓದಿ: 7ನೇ ಕ್ಲಾಸ್ ವಿದ್ಯಾರ್ಥಿನಿಯ ರೇಪ್ ಮಾಡಿದ ಟ್ಯೂಷನ್ ಟೀಚರ್‌ಗೆ 10 ವರ್ಷ ಜೈಲು – ತೆಲಂಗಾಣ ಕೋರ್ಟ್ ಆದೇಶ

  • ಯಾದಗಿರಿ | ಅಕ್ಕಿ ಅಕ್ರಮ ಮಾರಾಟ ಜಾಲ ಪತ್ತೆ – 1.17 ಕೋಟಿ ಮೌಲ್ಯದ 4,108 ಕ್ವಿಂಟಾಲ್ ಸೀಜ್

    ಯಾದಗಿರಿ | ಅಕ್ಕಿ ಅಕ್ರಮ ಮಾರಾಟ ಜಾಲ ಪತ್ತೆ – 1.17 ಕೋಟಿ ಮೌಲ್ಯದ 4,108 ಕ್ವಿಂಟಾಲ್ ಸೀಜ್

    -ನಕಲಿ ಬ್ರ್ಯಾಂಡ್‌ ಹೆಸರಿನಲ್ಲಿ ವಿದೇಶಕ್ಕೂ ರಫ್ತು ಮಾಡಿರುವ ಶಂಕೆ

    ಯಾದಗಿರಿ: ಜಿಲ್ಲೆಯ ಎರಡು ರೈಸ್ ಮಿಲ್‌ಗಳ (Rice Mill) ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಒಟ್ಟು 1.17 ಕೋಟಿ ಮೌಲ್ಯದ 4,108 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ್ದಾರೆ.

    ಆಹಾರ ಇಲಾಖೆ ಉಪನಿರ್ದೇಶಕ ಅನೀಲಕುಮಾರ್ ಅವರು ಗುರಮಠಕಲ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅನ್ನಭಾಗ್ಯ ಅಕ್ಕಿಯನ್ನು ಪಾಲಿಶ್‌ ಮಾಡಿಸಿ, ವಿವಿಧ ಬ್ರ್ಯಾಂಡ್‌ ಹೆಸರಿನಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ನೀಡಿದ್ದ ದೂರಿನ ಆಧಾರದ ಪೊಲೀಸರು ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು.

    ಆಹಾರ ಪೊರೈಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆಹಾಯ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಯಾದಗಿರಿ ಜಿಲ್ಲೆಯ ಗುರಮಠಕಲ್ ಪಟ್ಟಣದ ಹೊರವಲಯದ ಉದ್ಯಮಿ ನರೇಂದ್ರ ರಾಠೋಡ ಹಾಗೂ ಅವರ ಪುತ್ರ ಅಯ್ಯಪ್ಪ ರಾಠೋಡಗೆ ಸೇರಿದ ಲಕ್ಷ್ಮೀ ವೆಂಕಟೇಶ್ವರ ಹಾಗೂ ಲಕ್ಷ್ಮೀ ಬಾಲಾಜಿ ರೈಸ್ ಮಿಲ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಗೋದಾಮಿನಲ್ಲಿ ಸಾವಿರಾರು ಅಕ್ಕಿ ಚೀಲಗಳ ಸಂಗ್ರಹ ಪತ್ತೆಯಾಗಿದೆ. ಸತತ ಮೂರು ದಿನಗಳ ಬಳಿಕ ಲೆಕ್ಕ ಕಾರ್ಯ ಮುಕ್ತಾಯವಾಗಿದ್ದು, ಸುಮಾರು 1.17 ಕೋಟಿ ರೂ.ಗೂ ಅಧಿಕ ಮೌಲ್ಯದ 4,108 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ:ಈದ್‌ಮಿಲಾದ್ ವೇಳೆ 15 ನಿಮಿಷ ಪೊಲೀಸರನ್ನ ಸುಮ್ಮನಿರಿಸಿ ಹಾಡು ಪ್ರಸಾರ – ಮೂವರ ವಿರುದ್ಧ ಕೇಸ್  ದಾಖಲು

    ಸದ್ಯ ರೈಸ್ ಮಿಲ್‌ಗೆ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ನಕಲಿ ಬ್ರ್ಯಾಂಡ್‌ನಡಿ ರೈಸ್ ಪಾಲಿಶ್‌ ಮಾಡಿ ಮಾರಾಟ ಮಾಡಿರುವುದು ತಿಳಿದುಬಂದಿದೆ. ಡೈನೆಸ್ಟಿ, ದಾರಾ ಡಬಲ್, ವೋಲ್ಗಾ ಸೇರಿದಂತೆ ವಿವಿಧ ಬ್ರ್ಯಾಂಡ್‌ ಚೀಲದಲ್ಲಿ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಜೊತೆಗೆ ಕಡಿಮೆ ದರಕ್ಕೆ ಅಕ್ಕಿ ಖರೀದಿ ಮಾಡಿ, ದುಬಾರಿ ಬೆಲೆಗೆ ಅಕ್ಕಿ ಮಾರಾಟ ಮಾಡಿ ಅಕ್ರಮ ದಂಧೆ ನಡೆಸಿರುವುದಲ್ಲದೇ ಸಿಂಗಾಪುರ, ದುಬೈ ಸೇರಿದಂತೆ ವಿವಿಧ ದೇಶದ ಬ್ರ್ಯಾಂಡ್‌ನಲ್ಲಿ ರಫ್ತು ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಪಂಜಾಬ್, ಹರಿಯಾಣ, ತೆಲಂಗಾಣ ಸರ್ಕಾರದ ಹೆಸರಿನಲ್ಲಿಯೂ ಪಡಿತರ ಅಕ್ಕಿ ಚೀಲಗಳು ಪತ್ತೆಯಾಗಿದೆ.

    ಈ ಬಗ್ಗೆ ತನಿಖೆಯಾದರೆ ಮತ್ತಷ್ಟು ಅಕ್ಕಿ ಮಾರಾಟ ಜಾಲ ಪತ್ತೆಯಾಗುವ ಸಾಧ್ಯತೆಯಿದೆ. ಸದ್ಯ ಇಬ್ಬರು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ಅರೆಸ್ಟ್‌ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲು ತೂರಲು ಪ್ರಚೋದನೆ ಏನು? – ಇಲ್ಲಿದೆ ಇನ್‌ಸೈಡ್‌ ಸ್ಟೋರಿ

  • ಸ್ಲೋ ಪಾಯ್ಸನ್ ನೀಡಿ ಪತಿಯ ಹತ್ಯೆ ಆರೋಪ – ವಿಡಿಯೋ ಸಾಕ್ಷಿ ಇದ್ರೂ ಪತ್ನಿಯನ್ನು ಬಂಧಿಸದ ಪೊಲೀಸರು

    ಸ್ಲೋ ಪಾಯ್ಸನ್ ನೀಡಿ ಪತಿಯ ಹತ್ಯೆ ಆರೋಪ – ವಿಡಿಯೋ ಸಾಕ್ಷಿ ಇದ್ರೂ ಪತ್ನಿಯನ್ನು ಬಂಧಿಸದ ಪೊಲೀಸರು

    ಯಾದಗಿರಿ: ಪತಿಯನ್ನು ಸ್ಲೋ ಪಾಯ್ಸನ್ ನೀಡಿ ಪತ್ನಿ ಹತ್ಯೆ ಮಾಡಿರುವ ಘಟನೆ ಯಾದಗಿರಿಯ (Yadagiri) ಗುರುಮಠಕಲ್‌ನ ಗಡ್ಡಿ ಮೊಹಲ್ಲಾನಲ್ಲಿ ನಡೆದಿದೆ.

    ಮೃತನನ್ನು ಮಹಮ್ಮದ್ ಅಲಿ ಎಂದು ಗುರುತಿಸಲಾಗಿದೆ. ಆತನ ಪತ್ನಿಯ ವಿರುದ್ಧ ಸ್ಲೋ ಪಾಯ್ಸನ್ ನೀಡಿದ ಆರೋಪ ಕೇಳಿಬಂದಿದೆ.ಇದನ್ನೂ ಓದಿ: ಒಲಿಂಪಿಕ್ಸ್‌ ಪದಕ ವಿಜೇತ ನೀರಜ್ ಚೋಪ್ರಾ ಸನ್ಮಾನಿಸಿದ ಸಿಎಂ

    ಕಳೆದ ಒಂದೂವರೆ ವರ್ಷದ ಹಿಂದೆ ಗಂಡನಿಗೆ ಕೆಮ್ಮು ಇದೆ ಎಂದು ಸ್ಲೋ ಪಾಯ್ಸನ್ ಹಾಕಿ ಹೆಂಡತಿ ಕೊಲೆ ಮಾಡಿದ್ದಳು. ಆದರೆ ಗಂಡ ಸಾಯುವ ಮುನ್ನ ಸೆಲ್ಫೀ ವಿಡಿಯೋ ಮಾಡಿ, ತನ್ನ ತಮ್ಮ ಮಹ್ಮದ್ ಇಕ್ಬಾಲ್‌ಗೆ ಕಳುಹಿಸಿದ್ದರು. ವಿಡಿಯೋದಲ್ಲಿ ನನಗೆ ಸರಿಯಾಗಿ ಆಸ್ಪತ್ರೆಗೆ ತೋರಿಸುತ್ತಿಲ್ಲ, ಊಟನೂ ಹಾಕ್ತಿಲ್ಲ, ವಿಷ ಹಾಕಿರುವ ಅನುಮಾನವಿದೆ ಎಂದು ತಿಳಿಸಿದ್ದರು.

    ಈ ಕುರಿತು ಮಹಮ್ಮದ್ ಅಲಿ ತಾಯಿ ಗುರುಮಠಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಹೂತ್ತಿದ್ದ ಶವವನ್ನು ತೆಗೆದು ಪೊಲೀಸರು ಪರಿಶೀಲನೆ ನಡೆಸಿದ್ದರು. ಜೊತೆಗೆ ವಿಡಿಯೋ ಸಾಕ್ಷಿಯಿರುವ ಬಗ್ಗೆಯೂ ಗೊತ್ತಿತ್ತು. ಆದರೆ ಇಷ್ಟೆಲ್ಲ ಇದ್ದರೂ ಪೊಲೀಸರು ಮಾತ್ರ ಪತ್ನಿಯನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ನ್ಯಾಯಕ್ಕಾಗಿ ವೃದ್ಧ ತಾಯಿ, ತಮ್ಮ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ.ಇದನ್ನೂ ಓದಿ: RTO ಕಣ್ತಪ್ಪಿಸಿ ಓಡಾಡ್ತಿದ್ದ ಫೆರಾರಿ ಕಾರು ಸೀಜ್‌ – 1.58 ಕೋಟಿ ತೆರಿಗೆ ಕಟ್ಟಲು ಸಂಜೆವರೆಗೆ ಡೆಡ್‌ಲೈನ್‌ ಫಿಕ್ಸ್‌

  • ಯಾದಗಿರಿ | ಮಳೆಯ ಅವಾಂತರಕ್ಕೆ ಶೆಡ್ ಗೋಡೆ ಕುಸಿದು ವೃದ್ಧೆ ಸಾವು

    ಯಾದಗಿರಿ | ಮಳೆಯ ಅವಾಂತರಕ್ಕೆ ಶೆಡ್ ಗೋಡೆ ಕುಸಿದು ವೃದ್ಧೆ ಸಾವು

    ಯಾದಗಿರಿ: ಮಳೆಯ ಅವಾಂತರಕ್ಕೆ ಟಿನ್ ಶೆಡ್ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುರುಮಠಕಲ್ (Gurumatkal) ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ನಡೆದಿದೆ.ಇದನ್ನೂ ಓದಿ: ನಟಿ ತಮನ್ನಾ ಭಾಟಿಯಾಗೆ ED ವಿಚಾರಣೆ

    ಮೃತ ವೃದ್ಧೆಯನ್ನು ಚಿಂತನಹಳ್ಳಿ ಗ್ರಾಮದ ನಿವಾಸಿ ಗುಂಜಲಮ್ಮ (68) ಎಂದು ಗುರುತಿಸಲಾಗಿದೆ.

    ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ರಾತ್ರಿ ಮಲಗಿರುವಾಗ ಸುರಿದ ಮಳೆಯ ರಭಸಕ್ಕೆ ಟಿನ್ ಶೆಡ್ ಗೋಡೆ ಕುಸಿದಿದ್ದು, ಮನೆಯಲ್ಲಿ ಮಲಗಿದ್ದ ವೃದ್ಧೆ ಸಾವನ್ನಪ್ಪಿದ್ದಾರೆ. ವೃದ್ಧೆಯ ಜೊತೆಗಿದ್ದ ಆಕೆಯ ಸಹೋದರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಗುರುಮಠಕಲ್ ಪೊಲೀಸ್ ಠಾಣಾ (Gurumatkal Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಭವಾನಿ ರೇವಣ್ಣಗೆ ಬಿಗ್‌ ರಿಲೀಫ್‌ – ಜಾಮೀನು ಅರ್ಜಿ ವಜಾ ಮಾಡಲು ನಿರಾಕರಿಸಿದ ಸುಪ್ರೀಂ

  • ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾಲಕನಿಗೆ ಚಾಕಲೇಟ್ ಕೊಡಿಸಿ ಕೊಲೆ!

    ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾಲಕನಿಗೆ ಚಾಕಲೇಟ್ ಕೊಡಿಸಿ ಕೊಲೆ!

    ಯಾದಗಿರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿಯ ಪುತ್ರನಿಗೆ ಚಾಕಲೇಟ್ ಕೊಡಿಸಿ ಪ್ರಿಯಕರ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗುರುಮಠಕಲ್ (Gurumatkal) ತಾಲೂಕಿನ ಕಾಕಲವಾರ (Kakalwar) ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕನನ್ನು 11 ವರ್ಷದ ನರೇಂದ್ರ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ಟೆಸ್ಟ್‌ ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆ ಬರೆದ ಜೋ ರೂಟ್‌

    ಹಲವು ವರ್ಷಗಳಿಂದ ನರೇಂದ್ರನ ತಾಯಿ ಗೋವಿಂದಮ್ಮಳ ಜೊತೆ ಅಬ್ದುಲ್ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ. ಆರೋಪಿ ಅಬ್ದುಲ್ ಗೋವಿಂದಮ್ಮಳನ್ನು ಓಡಿ ಹೋಗಿ ಮದುವೆಯಾಗೋಣ ಎಂದು ಕರೆದಿದ್ದ. ಆದರೆ ಗೋವಿಂದಮ್ಮ ಮಗನಿಗಾಗಿ ಓಡಿ ಹೋಗಿ ಮದುವೆಯಾಗುವುದನ್ನು ನಿರಾಕರಿಸಿದ್ದಳು. ಆಕೆಯ ಮಗನನ್ನು ಕಿರಾಣಿ ಅಂಗಡಿಗೆ ಕರೆದುಕೊಂಡು ಹೋಗಿ ಚಾಕಲೇಟ್ ಕೊಡಿಸಿದ್ದ. ಬಳಿಕ ಅಲ್ಲಿಂದ ಬಾಲಕನನ್ನು ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದ. ಆಕೆಯನ್ನು ವರಿಸಿಕೊಳ್ಳಲು ಈ ಕೃತ್ಯವನ್ನು ಎಸಗಿದ್ದ.

    ಸೆ.30ರಂದು ಅಬ್ದುಲ್ ಬಾಲಕನನ್ನು ಕೊಲೆ ಮಾಡಿದ್ದು, ಅನುಮಾನಾಸ್ಪದವಾಗಿ ಕಂಡಿದೆ. ತನಿಖೆ ನಡೆಸಿದಾಗ ಕಿರಾಣಿ ಅಂಗಡಿಯಲ್ಲಿ ಚಾಕಲೇಟ್ ಕೊಡಿಸಿ ಬಾಲಕನನ್ನು ಕರೆದೊಯ್ಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕನ ಸಾವು ನಡೆದ 9 ದಿನಗಳ ಬಳಿಕ ಪ್ರಕರಣ ಬೇಧಿಸಿ ಆರೋಪಿಯನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

    ಸದ್ಯ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸಂಜು ವೆಡ್ಸ್ ಗೀತಾ 2 : ಮಂಗ್ಲಿ ಹಾಡಿಗೆ ಸೊಂಟ ಬಳುಕಿಸಿದ ರಾಗಿಣಿ

  • ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್ ಡಿಸ್ಚಾರ್ಜ್

    ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್ ಡಿಸ್ಚಾರ್ಜ್

    ಯಾದಗಿರಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಗುರುಮಠಕಲ್ (Gurumatkal) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ (Baburao Chinchansur) ಶುಕ್ರವಾರ ಡಿಸ್ಚಾರ್ಜ್ ಆಗಿದ್ದಾರೆ.

    ಎಪ್ರಿಲ್ 16ರಂದು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮುಗಿಸಿ, ವಾಪಾಸ್ ಆಗುತ್ತಿದ್ದ ವೇಳೆ ಕಲಬುರಗಿಯ (Kalaburagi) ಆಕಾಶವಾಣಿ ಕೇಂದ್ರದ (Radio Station) ಬಳಿ ಅವರ ಕಾರು ಅಪಘಾತಕ್ಕೊಳಗಾಗಿತ್ತು. ಅಪಘಾತದಲ್ಲಿ ಚಿಂಚನಸೂರ್ ಅವರ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಮೂರು ಸರ್ಜರಿ ನಡೆಸಲಾಗಿತ್ತು. ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಅವರು ನಾಮಪತ್ರ ಸಲ್ಲಿಕೆಗೂ ಬರಲು ಸಾಧ್ಯವಾಗಿರಲಿಲ್ಲ. ಅವರ ಪರವಾಗಿ ನಾಮಪತ್ರವನ್ನು ಪತ್ನಿ ಅಮರೇಶ್ವರಿ ಚಿಂಚನಸೂರ್ ಸಲ್ಲಿಸಿದ್ದರು. ಇದನ್ನೂ ಓದಿ: ನಮ್ಮೂರಲ್ಲಿ ಬಿಜೆಪಿಯವರೇ ಗಲಾಟೆ ಮಾಡಿಸಿದ್ದಾರೆ: ಸಿದ್ದರಾಮಯ್ಯ

    ಈಗಾಗಲೇ ಚಿಂಚನಸೂರ್ ಪರವಾಗಿ ಅವರ ಪತ್ನಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗಷ್ಟೇ ಡಿಸ್ಚಾರ್ಜ್ ಆಗಿರುವ ಚಿಂಚನಸೂರ್ ಅವರ ಕಾಲಿಗೆ ಬ್ಯಾಂಡೇಜ್ ಹಾಕಿರುವುದರಿಂದ ವ್ಹೀಲ್ ಚೇರ್‍ನಲ್ಲೇ ಶನಿವಾರ ಪ್ರಚಾರ ಕೈಗೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಪ್ರೀತಂ ಗೌಡ ಹೇಳಿಕೆ ಖಂಡನೀಯ – ಸ್ವಪಕ್ಷದ ಶಾಸಕನ ವಿರುದ್ಧ ಅಶ್ವಥ್‌ ನಾರಾಯಣ್‌ ಗರಂ

  • ಸ್ವಾತಂತ್ರ್ಯ ನಂತರ ಯಾದಗಿರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆಗೆ ಟಿಕೆಟ್‌

    ಸ್ವಾತಂತ್ರ್ಯ ನಂತರ ಯಾದಗಿರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆಗೆ ಟಿಕೆಟ್‌

    ಯಾದಗಿರಿ: ಸ್ವಾತಂತ್ರ್ಯ ನಂತರ ಯಾದಗಿರಿ ಜಿಲ್ಲೆಯ ಚುನಾವಣಾ (Election) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಟಿಕೆಟ್‌ ಲಭಿಸಿದೆ. ಗುರುಮಠಕಲ್‌ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ (BJP) ಹೊಸ ಸಾಹಸಕ್ಕೆ ಮುಂದಾಗಿದೆ. ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಲಲಿತಾ ಅನಪೂರಗೆ (Lalita Anpur) ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಈ ಮೂಲಕ ಇತ್ತೀಚೆಗೆ ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ (Congress) ಸೇರಿರುವ ಅಭ್ಯರ್ಥಿ ಬಾಬುರಾವ್ ಚಿಂಚನಸೂರಗೆ ಬಿಜೆಪಿ ಚೆಕ್‍ಮೇಟ್ ನೀಡಿದೆ.

    ಇದುವರೆಗೂ ಜಿಲ್ಲೆಯ ಯಾವುದೇ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಯಾವುದೇ ಪಕ್ಷ ಮಣೆ ಹಾಕಿರಲಿಲ್ಲ. ಹೀಗಾಗಿ ಈ ಬಾರಿ ಮಹಿಳೆಯರಿಗೆ ಅವಕಾಶ ನೀಡಿರುವುದು ಇಲ್ಲಿನ ಚುನಾವಣೆ ವಿಶೇಷಕ್ಕೆ ಕಾರಣವಾಗಿದೆ. ಇದನ್ನೂ ಓದಿ: ರಾಜಕೀಯಕ್ಕೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ಗುಡ್‌ ಬೈ

    ಹಿಂದುಳಿದ ಕೋಲಿ ಕಬ್ಬಲಿಗ ಸಮುದಾಯದ ಅತ್ಯಂತ ಪ್ರಭಾವಿ ಮಹಿಳೆಯಾಗಿರುವ ಲಲಿತಾ ಅನಪೂರ ಯಾದಗಿರಿ (Yadgiri) ನಗರಸಭೆಯ ಹಾಲಿ ಸದಸ್ಯರಾಗಿದ್ದಾರೆ. ಗುರುಮಠಕಲ್ ಕ್ಷೇತ್ರದಲ್ಲಿ ಸಮುದಾಯದ ಹೆಚ್ಚಿನ ಮತಗಳು ಇರುವುದರಿಂದ ಬಿಜೆಪಿ ಹೈಕಮಾಂಡ್ ಇವರಿಗೆ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ಉತ್ತಮ ಪೈಪೋಟಿ ನೀಡಲಿದ್ದಾರೆ ಎನ್ನುವ ರಾಜಕೀಯ ಲೆಕ್ಕಾಚಾರ ಇದೆ.

    ಯಾದಗಿರಿ ಜಿಲ್ಲೆಯ ಗುರುಮಠಕಲ್ (Gurumatkal) ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಬಾಬುರಾವ್ ಚಿಂಚನಸೂರ ಹಾಗೂ ಜೆಡಿಎಸ್‍ನಿಂದ (JDS) ಶರಣಗೌಡ ಕಂದಕೂರಗೆ ಈಗಾಗಲೇ ಟಿಕೆಟ್ ಘೋಷಣೆಯಾಗಿತ್ತು. ಇದನ್ನೂ ಓದಿ: ಹಾವೇರಿಯಲ್ಲಿ ಎಷ್ಟು ಸೀಟು ಗೆಲ್ಲಿಸ್ತಾನೋ ನೋಡೋಣ: ಸೇಡಿನ ರಾಜಕಾರಣಿ – ಸಿಎಂ ವಿರುದ್ಧ ನೆಹರೂ ಓಲೇಕಾರ್ ಕಿಡಿ

  • ವೆಂಕಟರೆಡ್ಡಿ ಮುದ್ನಾಳ್ ಕ್ಷೇತ್ರ ಬದಲಾಯಿಸಬಾರದೆಂದು ವಿಷ ಸೇವಿಸಿದ ಬಿಜೆಪಿ ಕಾರ್ಯಕರ್ತ

    ವೆಂಕಟರೆಡ್ಡಿ ಮುದ್ನಾಳ್ ಕ್ಷೇತ್ರ ಬದಲಾಯಿಸಬಾರದೆಂದು ವಿಷ ಸೇವಿಸಿದ ಬಿಜೆಪಿ ಕಾರ್ಯಕರ್ತ

    ಯಾದಗಿರಿ: ವೆಂಕಟರೆಡ್ಡಿ ಮುದ್ನಾಳ್ ಅವರನ್ನು ಗುರುಮಠಕಲ್ ಕ್ಷೇತ್ರದಿಂದ ಬದಲಾವಣೆ ಮಾಡಬಾರದು ಎಂದು ಬಿಜೆಪಿ ಕಾರ್ಯಕರ್ತನೋರ್ವ ವಿಷ ಸೇವನೆಗೆ ಯತ್ನಿಸಿದ ಘಟನೆಯು ಯಾದಗಿರಿ ನಗರದ ಮುದ್ನಾಳ ಲೇಔಟ್ ನಲ್ಲಿ ನಡೆದಿದೆ.

    ಗುರುಮಠಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ವೆಂಕಟರೆಡ್ಡಿ ಮುದ್ನಾಳ್ ಅವರು ಬಿಜೆಪಿ ಪಕ್ಷದ ಇನ್ನೊರ್ವ ಆಕಾಂಕ್ಷಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಕಾರ್ಯಕರ್ತರು ತಪ್ಪಾಗಿ ಅರ್ಥೈಸಿಕೊಳ್ಳಬಾರದೆಂದು ವೆಂಕಟರೆಡ್ಡಿ ಅವರು ಸಭೆ ಕರೆದಿದ್ದರು.

    ಬಿಜೆಪಿ ಹೈಕಮಾಂಡ್ ಮಾತನ್ನು ಕೇಳಬೇಕೇ ಅಥವಾ ಗುರಮಠಕಲ್ ಕ್ಷೇತ್ರದ ಕಾರ್ಯಕರ್ತರ ಮಾತನ್ನು ಕೇಳಬೇಕೇ ಎನ್ನುವ ಗೊಂದಲದಲ್ಲಿ ವೆಂಕಟರೆಡ್ಡಿ ಮುದ್ನಾಳ್ ಇದ್ದು, ಸಭೆಯಲ್ಲಿ ಕಣ್ಣೀರು ಹಾಕಿದ್ದಾರೆ.

    2013ರ ಚುನಾವಣೆಯಲ್ಲಿ ವೆಂಕಟರೆಡ್ಡಿಯವರು ಕೆಜೆಪಿ ಪಕ್ಷದಿಂದ ಗುರುಮಠಕಲ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಕೆಜೆಪಿ ಪಕ್ಷ ಬಿಜೆಪಿ ಜೊತೆಗೆ ವಿಲೀನವಾದ ಬಳಿಕ ಈ ಬಾರಿ ಬಿಜೆಪಿ ಪಕ್ಷದಿಂದ ವೆಂಕಟರೆಡ್ಡಿ ಗುರುಮಠಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

    2013 ರ ಚುನಾವಣೆಯಲ್ಲಿ ವೆಂಕಟರೆಡ್ಡಿಯವರು 32,362 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. 3,689 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಎದರು ಸೋಲನ್ನುಕಂಡಿದ್ದರು.