ದರ್ಶನ್ (Darshan) ಬಂಧನವಾಗಿ ನೂರು ದಿನಗಳ ನಂತರ ಈ ಕುರಿತಂತೆ ಮಾತಾಡಿದ್ದಾರೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ (Gurukiran). ಮಂಗಳೂರಿನಲ್ಲಿ ಮಾತನಾಡಿರೋ ಗುರುಕಿರಣ್, ‘ರೇಣುಕಾಸ್ವಾಮಿ (Renukaswamy) ಹತ್ಯ ಪ್ರಕರಣ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ಆಗಿದೆ. ಸಿನಿಮಾಕ್ಕೂ ಅದಕ್ಕೂ ಸಂಬಂಧ ಇಲ್ಲ. ಸಿನಿಮಾ ನಟ ಆಗಿದಕ್ಕೆ ಅದು ಮಾಡಿದಲ್ಲ’ ಅಂದಿದ್ದಾರೆ.
ಸಿನಿಮಾ ರಂಗದಲ್ಲಿ ಡಾ.ರಾಜ್ ಕುಮಾರ್ ಒಂದು ಪ್ರಿನ್ಸಿಪಲ್ ಸೆಟ್ ಮಾಡಿದ್ದರು. ಇವತ್ತಿಗೂ ಎಲ್ಲರೂ ರಾಜ್ ಕುಮಾರ್ ಅವರಿಗೆ ಗೌರವ ಕೊಡ್ತಾರೆ. ಎಲ್ಲರೂ ರಾಜ್ ಕುಮಾರ್ ಆಗೋದಕ್ಕೆ ಆಗಲ್ಲ. ದರ್ಶನ್ ವಿಷಯದಲ್ಲಿ ಕೋಪ ಸ್ವಲ್ಪ ಮಿತಿ ಮೀರಿತು ಎಂದು ಅನಿಸುತ್ತೆ. ಜನರಿಗೆ ಒಳ್ಳೆಯದು ಬೇಡ ಕೆಟ್ಟದ್ದು ಬೇಕು. ಜೈಲಿಗೆ ಎಲ್ಲರನ್ನು ಭೇಟಿಯಾಗಲು ಹೋಗ್ತಾರೆ. ಆದರೆ ದರ್ಶನ್ ಮಾತ್ರ ತೋರಿಸ್ತಾರೆ ಅಷ್ಟೇ’ ಅಂದಿದ್ದಾರೆ.
ಘಟನೆ ಸಂದರ್ಭ ಅಲ್ಲಿ ಏನು ನಡೆದಿದೆ ಎಂದು ಗೊತ್ತಿಲ್ಲ. ಕಾನೂನು, ತನಿಖೆ ಮೂಲಕ ಸತ್ಯ ಹೊರ ಬರುತ್ತೆ. ಪೊಲೀಸರು ಸೆಲೆಬ್ರಿಟಿ ಎಂದು ನೋಡದೆ ಉತ್ತಮ ಕೆಲಸ ಮಾಡಿದ್ದಾರೆ. ದರ್ಶನ್ ಹೊರಗಡೆ ಬಂದ್ರೆ ನಮಗೂ ಖುಷಿ. ತಪ್ಪಿತಸ್ಥ ಅಂತಾ ಆದ್ರೆ ಈ ಮಣ್ಣಿನ ಕಾನೂನಿಗೆ ಗೌರವಿಸಬೇಕು ಎನ್ನುವುದು ಗುರುಕಿರಣ್ ಮಾತು.
ಬೆಂಗಳೂರು: ತನ್ನ 59ನೇ ಘಟಿಕೋತ್ಸವದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಮತ್ತು ಸಮಾಜಸೇವಕ ಕೆ.ಎಸ್ ರಾಜಣ್ಣನವರಿಗೆ ಬೆಂಗಳೂರು ವಿಶ್ವವಿದ್ಯಾಲಯವು (Bengaluru University) ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
59ನೇ ವಾರ್ಷಿಕ ಘಟಿಕೋತ್ಸವದಲ್ಲಿ 31,382 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದು, 26,210 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. 21,853 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದುಕೊಂಡಿದ್ದು, 5,861 ವಿದ್ಯಾರ್ಥಿಗಳು ಪ್ರಥಮ ದರ್ಜೆ, 1,289 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಡೆದುಕೊಂಡು ತೇರ್ಗಡೆ ಹೊಂದಿದ್ದಾರೆ. ಒಟ್ಟು 308 ಚಿನ್ನದ ಪದಕಗಳನ್ನು (Gold Medal) ವಿದ್ಯಾರ್ಥಿಗಳು ಮುಡಿಗೇರಿಸಿಕೊಂಡಿದ್ದು, 79 ನಗದು ಬಹುಮಾನವನ್ನು ಸ್ವೀಕರಿಸಿದ್ದಾರೆ. 140 ವಿದ್ಯಾರ್ಥಿಗಳು ಪಿಹೆಚ್‌ಡಿ ಪದವಿ ಸ್ವೀಕರಿಸಿದರು.
ಇನ್ನೂ ಬೆಂಗಳೂರು ವಿಶ್ವವಿದ್ಯಾಲಯ 59ನೇ ಘಟಿಕೋತ್ಸವಕ್ಕೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಗೈರಾದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರು ಮತ್ತು ಸಹ ಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ ಉಪಾಧ್ಯಕ್ಷರಾದ ಪ್ರೊ.ದೀಪಕ್ ಕುಮಾರ್ ಶ್ರೀವಾಸ್ತವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವದ ಭಾಷಣ ಮಾಡಿದರು.
ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ಗೆ (Gurukiran) ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ. ನಾಳೆ ನಡೆಯಲಿರೋ ಬೆಂಗಳೂರು ವಿವಿಯ 59ನೇ ಘಟಿಕೋತ್ಸವದಲ್ಲಿ ಗುರುಕಿರಣ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗುತ್ತದೆ ಅಂತ ಬೆಂಗಳೂರು ವಿವಿ ಕುಲಪತಿ ಡಾ.ಜಯಕರ್ ತಿಳಿಸಿದ್ದಾರೆ.
ಘಟಿಕೋತ್ಸವದ ಹಿನ್ನಲೆಯಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಲೆ, ಸಂಗೀತ ಕ್ಷೇತ್ರದ ಸಾಧನೆಗೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಕ್ರೀಡೆ, ಸಮಾಜ ಸೇವೆ ಕ್ಷೇತ್ರದಲ್ಲಿನ ಸಾಧನೆಗೆ ಕೆ.ಎಸ್.ರಾಜಣ್ಣ ರಾಜ್ಯ ಮಾಜಿ ಆಯುಕ್ತರು,ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ, ಕರ್ನಾಟಕ ಸರ್ಕಾರ ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಘೋಷಿಸಿದೆ ಅಂತ ತಿಳಿಸಿದರು. ಇದನ್ನೂ ಓದಿ:15 ವರ್ಷಗಳ ದಾಂಪತ್ಯಕ್ಕೆ ಅಂತ್ಯ- ಡಿವೋರ್ಸ್ ಬಗ್ಗೆ ಅಧಿಕೃತವಾಗಿ ತಿಳಿಸಿದ ಜಯಂ ರವಿ
ಈ ಬಾರಿ 31382 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗ್ತಿದೆ. 140 ಜನರಿಗೆ ಪಿಹೆಚ್‌ಡಿ ಪ್ರದಾನ ಮಾಡಲಾಗುತ್ತದೆ ಅಂತ ಮಾಹಿತಿ ನೀಡಿದ್ರು. ಕಾರಣಾಂತರಗಳಿಂದ ರಾಜ್ಯಪಾಲರು ನಾಳೆಯ ಘಟಿಕೋತ್ಸವಕ್ಕೆ ಗೈರಾಗಲಿದ್ದಾರೆ. ಯುಜಿಸಿಯ ವೈಸ್ ಚಾನ್ಸೆಲರ್ ಡಾ.ದೀಪಕ್ ಕುಮಾರ್ ಶ್ರೀವಾಸ್ತವ್ ಮುಖ್ಯ ಆತಿಥಿಗಳಾಗಿ ಭಾಗಿಯಾಗಲಿದ್ದಾರೆ ಅಂತ ಮಾಹಿತಿ ನೀಡಿದ್ರು.
ಸ್ನಾತಕೋತ್ತರ ವಿಭಾಗದಲ್ಲಿ ಅನ್ನಪೂರ್ಣ. ಎಸ್ ರಸಾಯನಶಾಸ್ತ್ರ ವಿಭಾಗ ಬೆಂಗಳೂರು ವಿವಿ 9 ಚಿನ್ನದ ಪದಕ,ವಿಶಾಲಾಕ್ಷಿ ವೈ.ಬಿ.- ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ 6 ಚಿನ್ನದ ಪದಕ ಮತ್ತು ರಂಜಿತಾ.ಎಸ್- ಹಿಂದಿ ವಿಭಾಗ, ಬೆಂಗಳೂರು ವಿವಿ 5 ಚಿನ್ನದ ಪದಕ ಪಡೆದಿದ್ದಾರೆ. ಸ್ನಾತಕ ವಿಭಾಗದಲ್ಲಿ ಅನುರಾಧ ಬಿಎಸ್ಸಿ ಜಿಂದಾಲ್ ಪದವಿ ಮಹಿಳಾ ಕಾಲೇಜು 9 ಚಿನ್ನದ ಪದಕ. ರಂಜಿತ.ವಿ,ಬಿಕಾಂ,ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ 6 ಚಿನ್ನದ ಪದಕ ಮತ್ತು ಮಾಧವ ಆರ್. ಕಾಮತ್ ಟೆಕ್ನಾಲಜಿ, ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗ, ಬೆಂಗಳೂರು ವಿವಿ 6 ಚಿನ್ನದ ಪದಕ ಪಡೆದಿದ್ದಾರೆ ಅಂತ ಮಾಹಿತಿ ನೀಡಿದರು.
ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಅವರ ಬೆಂಗಳೂರು ನಿವಾಸದಲ್ಲಿ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಡಿಸೆಂಬರ್ 31ರಂದು ಮಧ್ಯಾಹ್ನ ತಮ್ಮ ರೂಂನ ಬೀರುವಿನಲ್ಲಿಟ್ಟಿದ್ದ 2.50 ಲಕ್ಷ ರೂ.ಗಳನ್ನು ಗುರುಕಿರಣ್ ಅತ್ತೆ ಕಸ್ತೂರಿ ಶೆಟ್ಟಿ ಇಟ್ಟಿದ್ದರು. ಆದ್ರೆ ಜನವರಿ 5ರಂದು ಹಣ ಕಳ್ಳತನವಾಗಿದೆ. ಎರಡು ದಿನಗಳ ಕಾಲ ಕುಟುಂಬಸ್ಥರು ಮನೆಯೆಲ್ಲ ಹುಡುಕಾಡಿದ್ದಾರೆ.
ಮೆಲೋಡಿ ಹಾಡುಗಳು ಎಂದಿಗೂ ಜನರ ಜೀವನದ ಅವಿಭಾಜ್ಯ ಅಂಗವಾಗಿರುತ್ತವೆ. ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಆಕರ್ಷಿಸುವ ಹಲವಾರು ಮೆಲೋಡಿ ಹಾಡುಗಳ ಗುಂಪಿಗೆ ‘ರವಿಕೆ ಪ್ರಸಂಗ’ (Ravike Parsanga) ಚಿತ್ರದ ಮನಸಲಿ ಜೋರು ಕಲರವ ಎಂಬ ಅದ್ಭುತವಾದ ಹಾಡು ಸೇರಿಕೊಂಡಿದೆ. ಈ ಮೆಲೋಡಿ ಹಾಡನ್ನು ನೂರಾರು ಎವರ್ ಗ್ರೀನ್ ಸೂಪರ್ ಹಿಟ್ ಮೆಲೋಡಿ ಹಾಡುಗಳನ್ನು ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಬಿಡುಗಡೆ ಮಾಡಿದ್ದಾರೆ.
ಈ ವರ್ಷದ ಅತ್ಯುತ್ತಮ ಮೆಲೋಡಿ ಹಾಡುಗಳ (Song) ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಎಲ್ಲಾ ಅಂಶಗಳನ್ನು ಹೊಂದಿರುವ ಈ ಹಾಡಿಗೆ ಕಿರಣ್ ಕಾವೇರಪ್ಪ ಅವರ ಸಾಹಿತ್ಯ, ಮಾನಸ ಹೊಳ್ಳ ಅವರ ಮಧುರವಾದ ಧ್ವನಿ ಹಾಗೂ ವಿನಯ್ ಶರ್ಮಾ ಅವರ ಇಂಪಾದ ಸಂಗೀತ ಇದೆ.
ಸಂತೋಷ್ ಕೊಡಂಕೇರಿ ಅವರ ಚಿತ್ರಕಥೆ-ನಿರ್ದೇಶನದಲ್ಲಿ, ಪಾವನ ಸಂತೋಷ್ ಅವರ ಕಥೆ-ಸಂಭಾಷಣೆ ಇರುವ ಈ ಚಿತ್ರವನ್ನು ದೃಷ್ಟಿ ಮೀಡಿಯಾ & ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿಲಾಗಿದೆ. ಚಿತ್ರದ ಎಲ್ಲಾ ಕೆಲಸಗಳು ಮುಕ್ತಾಯವಾಗಿದ್ದು ಬಿಡುಗಡೆಯ ಹೊಸ್ತಿಲಲ್ಲಿ ಜನರನ್ನು ರಂಜಿಸಲಿದೆ.
ಗೀತಾ ಭಾರತಿ ಭಟ್ (Geeta Bharti Bhatt), ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಕೃಷ್ಣಮೂರ್ತಿ ಕವತಾರ್, ಪದ್ಮಜಾ ರಾವ್, ರಘು ಪಾಂಡೇಶ್ವರ್, ಪ್ರವೀಣ್ ಅಥರ್ವ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
– ಮುಖ್ಯ ವೇದಿಕೆಗೆ ಪುನೀತ್ ರಾಜ್ ಕುಮಾರ್ ಹೆಸರು
– 8 ಕೋಟಿ ಖರ್ಚಿನಲ್ಲಿ ಕಂಬಳ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕರಾವಳಿ ಕಂಬಳಕ್ಕೆ (Bengaluru Kambala) ಕೌಂಟ್ ಡೌನ್ ಆರಂಭವಾಗಿದೆ. ಇತಿಹಾದಲ್ಲೇ ಮೊದಲ ಬಾರಿಗೆ ನವೆಂಬರ್ 25, 26 ರಂದು ನಗರದ ಪ್ಯಾಲೆಸ್ ಗ್ರೌಂಡ್‍ನಲ್ಲಿ ಕಂಬಳ ನಡೆಯಲಿದೆ.
ಈ ಸಂಬಂಧ ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 200 ಜೋಡಿ ಕೋಣಗಳು ಕರಾವಳಿ ಕಂಬಳದಲ್ಲಿ ಕಮಾಲ್ ಮಾಡಲಿವೆ. ಹಾಸನದಿಂದ ದೊಡ್ಡ ಮೆರವಣಿಯ ಮೂಲಕ ಬೆಂಗಳೂರಿಗೆ ಕೋಣಗಳು ಬರಲಿದೆ. ಕಂಬಳದ ಮುಖ್ಯ ವೇದಿಕೆಗೆ ಪುನೀತ್ ರಾಜ್ ಕುಮಾರ್ (Puneeth Raj Kumar) ಅಂತಾ ಹೆಸರಿಟ್ಟು ನಾಮಕರಣ ಮಾಡಲಾಗಿದೆ ಎಂದರು.
ಇದೇ ವೇಳೆ ಕಂಬಳ ಸಮಿತಿಯ ಅಧ್ಯಕ್ಷ, ಪುತ್ತೂರು ಶಾಸಕ ಆಶೋಕ್ ರೈ (Ashok Rai) ಮಾತನಾಡಿ, ಬೆಂಗಳೂರಿನ ಕಂಬಳ ರೆಕಾರ್ಡ್ ಬ್ರೇಕ್ ಆಗಲಿದೆ. ಕರಾವಳಿ ಭಾಗದಲ್ಲಿ 147 ಕೆರೆ ಇರಲಿದೆ. ಆದರೆ ಬೆಂಗಳೂರಿನ ಕೆರೆ 155 ಮೀಟರ್ ಉದ್ದ ಇರಲಿದೆ. ಕಂಬಳದ ಕೋಣಗಳಿಗೆ ನೀರು ಬೈಹುಲ್ಲು, ಹುರುಳಿ ಎಲ್ಲವೂ ಊರಿಂದ ತರಿಸಲಾಗಿದೆ ಎಂದರು.
ನೀರು ಕೂಡ ಬದಲಾವಣೆ ಆದರೆ ಅವುಗಳಿಗೆ ಆರೋಗ್ಯ ಸಮಸ್ಯೆ ಆಗಲಿದೆ. ಹೀಗಾಗಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಗೆದ್ದ ಕಂಬಳದ ಕೋಣಗಳ ಮಾಲೀಕರಿಗೆ 16 ಗ್ರಾಂ. ಬಂಗಾರ ಮತ್ತು ಒಂದು ಲಕ್ಷ ರೂ. ಬಹುಮಾನ ಕೊಡಲಾಗುತ್ತೆ ಎಂದು ಹೇಳಿದರು.
ಬ್ರಿಜ್ ಭೂಷಣ್ ಆಗಮನ ಗೊಂದಲ ಉಂಟಾಗಿತ್ತು. ಹೀಗಾಗಿ ಅವ್ರಿಗೆ ಖುದ್ದಾಗಿ ವಿರೋಧದ ಬಗ್ಗೆಯೂ ಅವರಿಗೆ ಹೇಳಿದ್ದೇವೆ. ಹೊಸ ಆಮಂತ್ರಣ ಪತ್ರಿಕೆಯನ್ನು ಕೂಡ ತಯಾರು ಮಾಡುತ್ತಿದ್ದೇವೆ. ಒಟ್ಟು ಎಂಟು ಕೋಟಿ ಖರ್ಚಿನಲ್ಲಿ ಕಂಬಳ ನಡೆಯಲಿದೆ. ಎರಡು ದಿನದ ಕಾರ್ಯಕ್ರಮಕ್ಕೆ ಒಟ್ಟು ಆರು ಲಕ್ಷ ಜನ ಬರುವ ನಿರೀಕ್ಷೆ ಇದೆ ಎಂದು ವಿವರಿಸಿದರು.
ಐಶ್ವರ್ಯಾ ರೈ ಕಂಬಳಕ್ಕೆ ಬರೋದು ಅನುಮಾನ ಇದೆ. ಅವರ ತಾಯಿಗೆ ಆರೋಗ್ಯದ ಸಮಸ್ಯೆ ಇರೋದ್ರಿಂದ ಬರೋದು ಡೌಟು. ಆದರೆ ಬೇರೆ ಎಲ್ಲಾ ಗೆಸ್ಟ್ ಬರುತ್ತಿದ್ದಾರೆ ಎಂದು ಗುರುಕಿರಣ್ (Guru Kiran) ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ವಿನೋದ್ ಪ್ರಭಾಕರ್ (Vinod Prabhakar) ನಾಯಕರಾಗಿ ನಟಿಸಿರುವ, ನೂತನ್ ಉಮೇಶ್ (Nutan Umesh) ನಿರ್ದೇಶನದ ಹಾಗೂ ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಿರುವ ‘ಫೈಟರ್’ (Fighter) ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ ‘ಐ ವಾನ ಫಾಲೋ ಯು’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಗುರುಕಿರಣ್ ಸಂಗೀತ ನೀಡಿರುವ ಈ ಹಾಡನ್ನು ಚೈತ್ರ ಹೆಚ್. ಜಿ ಹಾಡಿದ್ದಾರೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಗುರುರಂಜನ್ ಶೆಟ್ಟಿ (ನಟಿ ಅನುಷ್ಕಾ ಶೆಟ್ಟಿ ಸಹೋದರ), ನಾಗರಾಜ್, ಕೃಷ್ಣಪ್ಪ, ಗೌರೀಶ್ ಹಾಗೂ ಹಿರಿಯ ಪತ್ರಕರ್ತರಾದ ಕೆ.ಎಸ್ ವಾಸು, ಕೆ.ಎನ್.ನಾಗೇಶ್ ಕುಮಾರ್ ಮುಂತಾದ ಗಣ್ಯರು ‘ಐ ವಾನ ಫಾಲೋ ಯು’ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಈ ಹಾಡಿನ ಮೊದಲ ಪದ ‘ಐ ವಾನ ಫಾಲೋ’ ಎಂಬುದನ್ನು ನಿರ್ದೇಶಕರು ಹೇಳಿದಾಗ ಫಾಲೋ ಎಂಬ ಪದದಿಂದಲೇ ಈ ಹಾಡು ಆರಂಭವಾಯಿತು. ವಿಶೇಷವೆಂದರೆ, ಈ ಹಾಡಿನಲ್ಲಿ ಬರುವ ಪದಗಳಿಗೆ ಎರಡು ಅರ್ಥಗಳಿದೆ. ಕವಿರಾಜ್ ಅದ್ಭುತವಾಗಿ ಹಾಡು ಬರೆದಿದ್ದಾರೆ. ಚೈತ್ರ ಸೊಗಸಾಗಿ ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಹಾಡಿನ ಬಗ್ಗೆ ಮಾಹಿತಿ ನೀಡಿದರು.
ಈ ಹಾಡನ್ನು ಪಾಂಡಿಚೇರಿಯಲ್ಲಿ ಚಿತ್ರಿಸಲಾಗಿದೆ. ಗುರುಕಿರಣ್ ಅವರ ಸಂಗೀತ, ಕವಿರಾಜ್ ಅವರ ಸಾಹಿತ್ಯ, ಮೋಹನ್ ನೃತ್ಯ ನಿರ್ದೇಶನ ಹಾಗೂ ವಿನೋದ್ ಪ್ರಭಾಕರ್, ಲೇಖಾ ಚಂದ್ರ ಅವರ ಅಭಿನಯ ಎಲ್ಲವೂ ಸೇರಿ ಈ ‘ಫಾಲೋ ಯು’ ಹಾಡು ಅದ್ಭುತವಾಗಿ ಹಾಗೂ ಅದ್ದೂರಿಯಾಗಿ ಮೂಡಿಬಂದಿದೆ. ಸದ್ಯದಲ್ಲೇ ಟ್ರೇಲರ್ ಬರಲಿದ್ದು, ಚಿತ್ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ದೇಶಕ ನೂತನ್ ಉಮೇಶ್.
ಚಿತ್ರದ ಮುಹೂರ್ತಕ್ಕೆ ಬಂದು ಹಾರೈಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೆನೆಯುತ್ತಾ ಮಾತು ಆರಂಭಿಸಿದ ನಾಯಕ ವಿನೋದ್ ಪ್ರಭಾಕರ್, ಈ ಫೈಟರ್ ಅನ್ಯಾಯದ ವಿರುದ್ಧ ಹಾಗೂ ರೈತರ ಪರವಾಗಿ ಹೋರಾಡುವ ಫೈಟರ್. ನಿರ್ಮಾಪಕ ಸೋಮಶೇಖರ್ ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರು ಅಷ್ಟೇ ಚೆನ್ನಾಗಿ ಕಥೆ ,ಚಿತ್ರಕಥೆ ಬರೆದಿದ್ದಾರೆ. ಇಂದು ಬಿಡುಗಡೆಯಾದ ಹಾಡಿನ ಚಿತ್ರೀಕರಣ ಮಾರ್ಚ್ ನಲ್ಲಿ ಪಾಂಡಿಚೇರಿಯಲ್ಲಿ ಚಿತ್ರೀಕರಣವಾಗಿದ್ದು, ಅಲ್ಲಿನ ಬಿಸಿಲು ತಡೆಯುವುದು ಕಷ್ಟ. ಎಲ್ಲರ ಶ್ರಮದಿಂದ ಈ ಹಾಡು ಚೆನ್ನಾಗಿ ಬಂದಿದೆ. ನಿರ್ಮಾಪಕ ಸೋಮಶೇಖರ್ ಅವರಿಗೆ ಈ ಚಿತ್ರ ದೊಡ್ಡ ಯಶಸ್ಸು ತಂದು ಕೊಡಲಿ. ಅವರಿಂದ ಸಾಕಷ್ಟು ಚಿತ್ರಗಳು ನಿರ್ಮಾಣವಾಗಲಿ ಎಂದು ಹಾರೈಸಿದರು.
ಇಡೀ ಚಿತ್ರತಂಡದ ಶ್ರಮದಿಂದ ಫೈಟರ್ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಇಂದು ಹಾಡು ಬಿಡುಗಡೆಯಾಗಿದೆ. ಚಿತ್ರತಂಡಕ್ಕೆ ಹಾಗೂ ಆಗಮಿಸಿರುವ ಗಣ್ಯರಿಗೆ ನನ್ನ ಧನ್ಯವಾದ ಎನ್ನುತ್ತಾರೆ ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ. ಹಾಡು ಬರೆದಿರುವ ಕವಿರಾಜ್, ಹಾಡಿರುವ ಚೈತ್ರ ಹಾಗೂ ನಾಯಕಿ ಲೇಖಾ ಚಂದ್ರ ಫಾಲೋ ಯು ಹಾಡಿನ ಬಗ್ಗೆ ಮಾತನಾಡಿದರು.
ಕನ್ನಡ ಸಿನಿಮಾ ರಂಗದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್ (Gurukiran) ಮತ್ತೆ ಬಣ್ಣ ಹಚ್ಚಿದ್ದಾರೆ. ಬರೋಬ್ಬರಿ ದಶಕದ ನಂತರ ಅವರು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಶರಣ್ (Sharan) ನಟನೆಯ ಛೂ ಮಂತರ್ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದು, ಅದಕ್ಕೂ ಮುನ್ನ 2007ರಲ್ಲಿ ತೆರೆಕಂಡ ಏಕದಂತ ಸಿನಿಮಾದಲ್ಲಿ ಗುರುಕಿರಣ್ ನಟಿಸಿದ್ದರು.
ಶರಣ್ ಈ ಸಿನಿಮಾದ ಮೂಲಕ ನಗಿಸಿ, ಹೆದರಿಸೋಕೆ ಬರುತ್ತಿದ್ದು, ಟೀಸರ್ ಮೂಲಕ ಕಮಾಲ್ ಕೂಡ ಮಾಡಿದ್ದಾರೆ. ಮಾನಸ ತರುಣ್, ತರುಣ್ ಶಿವಪ್ಪ ನಿರ್ಮಾಣದಲ್ಲಿ `ಛೂ ಮಂತರ್’ ಸಿನಿಮಾ ಮೂಡಿ ಬಂದಿದೆ. ಸದ್ಯ `ಛೂ ಮಂತರ್’ (Choo Mantar) ಟೀಸರ್ ಹಾರರ್ ಝಲಕ್ ಪ್ರೇಕ್ಷಕರನ್ನ ಬಡಿದೆಬ್ಬಿಸಿದೆ. ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಿರುವ ಶರಣ್ ಅವರ ಹೊಸ ಅವತಾರ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದನ್ನೂ ಓದಿ: ಅವಳಿ ಮಕ್ಕಳ ಮುದ್ದಾದ ಫೋಟೋ ಹಂಚಿಕೊಂಡ ಅಮೂಲ್ಯ
ಹಾಲಿವುಡ್ (Hollywood) ಸಿನಿಮಾಗಳನ್ನು ನೆನಪಿಸುವ ವಿಷ್ಯುವಲ್ಸ್ `ಛೂ ಮಂತರ್’ ಸಿನಿಮಾದಲ್ಲಿದೆ ಎನ್ನುವುದು ಟೀಸರ್ ನೋಡಿದ್ರೆ ಅರ್ಥವಾಗುತ್ತದೆ. ಪಾಳು ಬಿದ್ದ ಉತ್ತರಾಕಾಂಡದ ಮಾರ್ಗನ್ ಹೌಸ್ ಪ್ಯಾಲೇಸ್‌ನಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಭೂತ ಪ್ರೇತ ಇರುವ ಆತಂಕ ಮನೆಯಲ್ಲಿರುವವರನ್ನು ಕಾಡುತ್ತಿರುತ್ತದೆ. ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ನಾಯಕನಾಗಿ ಶರಣ್ ಎಂಟ್ರಿ ಕೊಡುತ್ತಾರೆ. ಟೀಸರ್ ನೋಡುಗರನ್ನು ಕಥೆಯ ಒಳಗೆ ಕರೆದುಕೊಂಡು ಹೋಗುತ್ತದೆ.
ನಟ ಶರಣ್ ಈ ಸಿನಿಮಾದಲ್ಲಿ ಒಬ್ಬ ಮಂತ್ರವಾದಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಮೇಘನಾ ಗಾಂವ್ಕರ್, ಅದಿತಿ, ನಟ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. `ಕರ್ವ’ (Karva) ಖ್ಯಾತಿಯ ನವನೀತ್ (Navaneeth) `ಛೂ ಮಂತರ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಭಿನ್ನ ಕಥೆಯನ್ನ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ಸದ್ಯ ಸಿನಿಮಾದ ಪೋಸ್ಟರ್, ಟೀಸರ್ ಮೂಲಕ `ಛೂ ಮಂತರ್’ ಚಿತ್ರ ಸಂಚಲನ ಸೃಷ್ಟಿಸಿದೆ. ಸಿನಿಮಾ ಚಿತ್ರೀಕರಣ ಕೂಡ ಕಂಪ್ಲಿಟ್ ಆಗಿದ್ದು, ಸದ್ಯದಲ್ಲಿಯೇ ತೆರೆಯ ಮೇಲೆ ಅಬ್ಬರಿಸಲಿದೆ.
‘ಸಂಕಷ್ಟಕರ ಗಣಪತಿ’ ಹಾಗೂ ‘ಫ್ಯಾಮಿಲಿ ಪ್ಯಾಕ್’ ಚಿತ್ರಗಳ ಮೂಲಕ ಜನಮನ ಗೆದ್ದಿರುವ ಲಿಖಿತ್ ಶೆಟ್ಟಿ (Likhit Shetty) ನಿರ್ಮಿಸಿ ಜೊತೆಗೆ ನಾಯಕರಾಗೂ ನಟಿಸುತ್ತಿರುವ ಚಿತ್ರ ‘ಫುಲ್ ಮೀಲ್ಸ್ (Full Meals). ಈ ಸಿನಿಮಾ ಟೈಟಲ್ ಕಾರಣದಿಂದಾಗಿಯೇ ಗಮನ ಸೆಳೆದಿತ್ತು. ಅಲ್ಲದೇ, ಈ ಸಿನಿಮಾದ ಶೀರ್ಷಿಕೆಯ ವಿಶೇಷತೆಯನ್ನು ಸಿನಿಮಾ ಟೀಮ್ ಹಂಚಿಕೊಂಡಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ.
ಸದ್ಯ ‘ಫುಲ್ ಮೀಲ್ಸ್’ ಚಿತ್ರದ ನೂತನ ಪೋಸ್ಟರ್ (Poster) ಬಿಡುಗಡೆಯಾಗಿದೆ. ಪೋಸ್ಟರ್ ಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ಈ ಚಿತ್ರದ ಅರ್ಧದಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಎನ್ ವಿನಾಯಕ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ (Gurukiran) ಸಂಗೀತ ನಿರ್ದೇಶನ ಹಾಗೂ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ. ಇದನ್ನೂ ಓದಿ:ಯಾರನ್ನಾದರೂ ಡೇಟ್ ಮಾಡಿ ಎಂದ ಅಭಿಮಾನಿಗೆ ಸಮಂತಾ ಹೇಳಿದ್ದೇನು?
ಲಿಖಿತ್ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮ, ರಂಗಾಯಣ ರಘು, ಸಾಧುಕೋಕಿಲ, ವಿಜಯ್ ಚೆಂಡೂರ್, ರಾಜೇಶ್ ನಟರಂಗ, ರಮೇಶ್ ಪಂಡಿತ್, ಹೊನ್ನವಳ್ಳಿ ಕೃಷ್ಣ, ಚಂದ್ರಕಲಾ ಮೋಹನ್, ಸುಜಯ್ ಶಾಸ್ತ್ರಿ, ಗಣೇಶ್ ರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.