Tag: Gurugram Police

  • ಬಿಗ್ ಬಾಸ್‌ ವಿಜೇತ ಎಲ್ವಿಶ್ ಮನೆ ಮೇಲೆ 25 ಸುತ್ತು ಗುಂಡಿನ ದಾಳಿ – ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

    ಬಿಗ್ ಬಾಸ್‌ ವಿಜೇತ ಎಲ್ವಿಶ್ ಮನೆ ಮೇಲೆ 25 ಸುತ್ತು ಗುಂಡಿನ ದಾಳಿ – ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

    ಫೇಮಸ್‌ ಯೂಟ್ಯೂಬರ್ (YouTuber), ಮಾಜಿ ಬಿಗ್ ಬಾಸ್‌ ವಿಜೇತ (Bigg Boss winner) ಹಾಗೂ ನಟನೂ ಆಗಿರುವ ಎಲ್ವಿಶ್ ಯಾದವ್ ಅವ್ರ ಮನೆ ಮೇಲೆ ಇಂದು ಬೆಳಗ್ಗೆ ಭೀಕರ ಗುಂಡಿನ ದಾಳಿ ನಡೆದಿದೆ.

    ಬೆಳಗ್ಗೆ 5:30 ರಿಂದ 6 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಮನೆಯ ಬಳಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು 2 ಡಜನ್‌ಗಿಂತಲೂ ಅಧಿಕ ಸುತ್ತು ಗುಂಡು ಹಾಅರಿಸಿ, ಎಸ್ಕೇಪ್‌ ಆಗಿದ್ದಾರೆ. ಅದೃಷ್ಟವಶಾತ್‌ ಆ ಸಂದರ್ಭದಲ್ಲಿ ಎಲ್ವಿಶ್‌ (Elvish Yadav) ಮನೆಯಲ್ಲಿ ಇರಲಿಲ್ಲವಾದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಫೈರಿಂಗ್‌ (Bullets Fire) ಬಳಿಕ ಇಡೀ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಬೆಂಗಳೂರು | ಐವರನ್ನು ಬಲಿ ಪಡೆದಿದ್ದ ಅಗ್ನಿ ದುರಂತ ಪ್ರಕರಣ – ಕಟ್ಟಡದ ಮಾಲೀಕ ಅರೆಸ್ಟ್

    ಏನಾಯಿತು?
    ಎಲ್ವಿಶ್ ಯಾದವ್ ತಮ್ಮ ಯೂಟ್ಯೂಬ್ ಮತ್ತು ಸೋಷಿಯಲ್‌ ಮೀಡಿಯಾ ಆಕ್ಟಿವಿಟೀಸ್‌ಗಳಿಂದ ಫೇಮಸ್‌ ಆಗಿದ್ದಾರೆ. ಗುಂಡು ಹಾರಿಸಿದ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗುರುಗ್ರಾಮ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಹಳೇ ಅಕ್ರಮ ಸಂಬಂಧಕ್ಕೆ ಶಿಕ್ಷೆ – ಹೆತ್ತ ತಾಯಿಯನ್ನೇ 2 ಬಾರಿ ಅತ್ಯಾಚಾರಗೈದ ಪಾಪಿ ಮಗ

    ಮೊದಲಿಗೆ ಮನೆಯವರ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳ ತಪಾಸಣೆ ನಡೆಸುತ್ತಿದ್ದಾರೆ. 20 ರಿಂದ 25 ಸುತ್ತು ಗುಂಡು ಹಾರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: Video Viral | ಸ್ವಾತಂತ್ರ‍್ಯ ದಿನಾಚರಣೆಯಂದು ಅಂಚೆ ಕಚೇರಿಯಲ್ಲಿ ಭರ್ಜರಿ ಬಾಡೂಟ; ಕ್ರಮಕ್ಕೆ ಆಗ್ರಹ

  • ಪಂಜಾಬ್‌ ಕಾಲುವೆಯಲ್ಲಿ ಬಿಸಾಡಿದ್ದ ಮಾಜಿ ಮಾಡೆಲ್‌ ಶವ ಹರಿಯಾಣದಲ್ಲಿ ಪತ್ತೆ – ಪ್ರಕರಣ ಭೇದಿಸಿದ್ದೇ ರೋಚಕ

    ಪಂಜಾಬ್‌ ಕಾಲುವೆಯಲ್ಲಿ ಬಿಸಾಡಿದ್ದ ಮಾಜಿ ಮಾಡೆಲ್‌ ಶವ ಹರಿಯಾಣದಲ್ಲಿ ಪತ್ತೆ – ಪ್ರಕರಣ ಭೇದಿಸಿದ್ದೇ ರೋಚಕ

    – 270 ಕಿಮೀವರೆಗೆ ಶವ ಹೊತ್ತೊಯ್ದು ಕಾಲುವೆಯಲ್ಲಿ ಶವ ಬಿಸಾಡಲಾಗಿತ್ತು
    – ಪೊಲೀಸರ ಎದುರು ತಪ್ಪೊಪ್ಪಿಕೊಂಡ ಆರೋಪಿ

    ಹರಿಯಾಣ: ಕಳೆದ ಒಂದು ವಾರಗಳ ಹಿಂದೆಯಷ್ಟೇ ಗುರುಗ್ರಾಮ್‌ನ ಹೋಟೆಲ್‌ವೊಂದರಲ್ಲಿ (Gurugram Hotel) ಗುಂಡು ಹಾರಿಸಿ ಹತ್ಯೆಗೀಡಾದ ಮಾಜಿ ಮಾಡೆಲ್‌ ದಿವ್ಯಾ ಪಹುಜಾ (Divya Pahuja) ಅವರ ಮೃತದೇಹವು ಹರಿಯಾಣದ ಕಾಲುವೆಯಲ್ಲಿ ಪತ್ತೆಯಾಗಿದೆ. ಪಂಜಾಬ್‌ನ ಭಾಕ್ರಾ ಕಾಲುವೆಯಲ್ಲಿ ಮೃತದೇಹವನ್ನು ಎಸೆಯಲಾಗಿದ್ದು, ಪಕ್ಕದ ರಾಜ್ಯಕ್ಕೆ ತೇಲಿಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಹರಿಯಾಣದ ಕಾಲುವೆಯಲ್ಲಿ ಪತ್ತೆಯಾದ ಮೃತದೇಹವನ್ನು ಗುರುಗ್ರಾಮ್‌ ಪೊಲೀಸರ ತಂಡವು ಹೊರತೆಗೆದು, ಪಹುಜಾ ಕುಟುಂಬಕ್ಕೆ ಫೋಟೋಗಳನ್ನ ಕಳುಹಿಸಿದೆ. ಕುಟುಂಬಸ್ಥರು ಮೃತದೇಹವನ್ನು ಗುರುತಿಸಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಕೆ ಕೊಲೆಯಾದ ಮರುದಿನ (ಜನವರಿ 3) ಪಂಜಾಬ್‌ನ ಕಾಲುವೆಯಲ್ಲಿ ಶವವನ್ನು ಎಸೆದಿರುವುದಾಗಿ ಆರೋಪಿಗಳಲ್ಲಿ ಒಬ್ಬ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಮೈಸೂರಿನಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅತಿಹೆಚ್ಚು ದೇಣಿಗೆ ಕೊಟ್ಟಿದ್ದು ಮುಸ್ಲಿಮರು!

    ಶುಕ್ರವಾರ (ಜ.12) ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಆರೋಪಿ ಬಾಲರಾಜ್ ಗಿಲ್ ಎಂಬಾತನನ್ನು ಗುರುಗ್ರಾಮ್‌ ಪೊಲೀಸರ ತಂಡ ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಆರೋಪಿ, ಜನವರಿ 2 ರಂದು ಕೊಲೆ ಮಾಡಿ, ಮರುದಿನ ಗುರುಗ್ರಾಮ್‌ನಿಂದ ಸುಮಾರು 270 ಕಿಮೀ ದೂರದಲ್ಲಿರುವ ಪಟಿಯಾಲದ ಕಾಲುವೆಯಲ್ಲಿ ಎಸೆದಿದ್ದೆವು ಎಂದು ಒಪ್ಪಿಕೊಂಡಿದ್ದ. ಆರೋಪಿ ಹೇಳಿಕೆ ಪಡೆದು ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಹರಿಯಾಣದ ಕಾಲುವೆಯಲ್ಲಿ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ದರ್ಶನ್ ಟಾರ್ಗೆಟ್: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

    ಏನಿದು ಘಟನೆ?
    ಜನವರಿ 2 ರಂದು ಗುರ್ಗಾಂವ್ ಹೋಟೆಲ್‌ನಲ್ಲಿ ದಿವ್ಯಾ ಪಹುಜಾ (27) ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಬಳಿಕ ಆಕೆಯ ಶವವನ್ನು ಹೋಟೆಲ್‌ನಿಂದ ಕಾರಿಗೆ ಎಳೆದೊಯ್ಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಶಂಕಿತ ಆರೋಪಿ ಅಭಿಜಿತ್ ಸೇರಿದಂತೆ ಪ್ರಕಾಶ್ ಮತ್ತು ಇಂದ್ರಜ್ ಎಂಬವರನ್ನು ಗುರುಗ್ರಾಮ್ ಕ್ರೈಂ ಬ್ರಾಂಚ್ ಅಧಿಕಾರಿಗಳು ಬಂಧಿಸಿದ್ದರು. ಪ್ರಕಾಶ್ ಮತ್ತು ಇಂದ್ರಜ್ ಇಬ್ಬರೂ ಅಭಿಜಿತ್‌ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಹೋಟೆಲ್ ಮಾಲೀಕ ಅಭಿಜಿತ್ ತನ್ನ ಸಹಚರರೊಂದಿಗೆ ಸೇರಿ ದಿವ್ಯಾಳನ್ನು ಕೊಲೆ ಮಾಡಿ ನಂತರ ಆಕೆಯ ಶವವನ್ನು ವಿಲೇವಾರಿ ಮಾಡಲು ತನ್ನ ಸಹಚರರಿಗೆ 10 ಲಕ್ಷ ರೂ. ನೀಡಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿತ್ತು.

    ದಿವ್ಯಾ ಪಹುಜಾ ಯಾರು?
    ದಿವ್ಯಾ ಪಹುಜಾ 2016ರ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಗ್ಯಾಂಗ್‌ಸ್ಟರ್‌ ಸಂದೀಪ್‌ ಗಡೋಲಿಯ ಗೆಳತಿ. ಹನಿಟ್ರ್ಯಾಪ್ ಮೂಲಕ ದಿವ್ಯಾ ಪಹುಜಾ ಸಂದೀಪ್‌ನನ್ನು ಕರೆಸಿಕೊಂಡು ಬಳಿಕ ಪೊಲೀಸರ ಸಹಾಯದಿಂದ ನಕಲಿ ಎನ್‌ಕೌಂಟರ್‌ನಲ್ಲಿ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದರು. ಈ ಪ್ರಕರಣದಲ್ಲಿ ದಿವ್ಯಾ ಪ್ರಮುಖ ಆರೋಪಿಯಾಗಿದ್ದಳು, ಅಲ್ಲದೇ ಆಕೆಯ ತಾಯಿ ಮತ್ತು ಐವರು ಪೊಲೀಸ್ ಸಿಬ್ಬಂದಿಯ ವಿರುದ್ಧವೂ ಹತ್ಯೆ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷವಷ್ಟೇ ದಿವ್ಯಾಳಿಗೆ  ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಜಾಮೀನು ಪಡೆಯುವ ಮೊದಲು ದಿವ್ಯಾ ಸುಮಾರು 7 ವರ್ಷಗಳ ಕಾಲ ಜೈಲಿನಲ್ಲಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.