Tag: Gurudwara

  • ಹಲಸೂರು ಗುರುದ್ವಾರಕ್ಕೆ ಬಾಂಬ್ ಬೆದರಿಕೆ – ಬಾತ್ರೂಮ್‌ನಲ್ಲಿ ಸ್ಫೋಟಿಸುವುದಾಗಿ ಮೇಲ್‌ನಲ್ಲಿ ಉಲ್ಲೇಖ

    ಹಲಸೂರು ಗುರುದ್ವಾರಕ್ಕೆ ಬಾಂಬ್ ಬೆದರಿಕೆ – ಬಾತ್ರೂಮ್‌ನಲ್ಲಿ ಸ್ಫೋಟಿಸುವುದಾಗಿ ಮೇಲ್‌ನಲ್ಲಿ ಉಲ್ಲೇಖ

    ಬೆಂಗಳೂರು: ಹಲಸೂರು (Ulsoor) ಮುಖ್ಯ ರಸ್ತೆಯಲ್ಲಿರುವ ಗುರುದ್ವಾರಕ್ಕೆ (Gurudwara) ಬಾಂಬ್ ಬೆದರಿಕೆ (Bomb Threat) ಬಂದಿದ್ದು, ಬಾತ್ರೂಮ್‌ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.

    ಹಲಸೂರು ಕೆರೆ ಬಳಿಯಿರುವ ಗುರುಸಿಂಗ್ ಸಭಾ ಗುರುದ್ವಾರಕ್ಕೆ ಕಳೆದ 4 ದಿನದ ಹಿಂದೆ `De-Brahminize Dravidistan’ ಎಂಬ ಸಂಘಟನೆಯಿಂದ ರಾಜ ಗಿರಿ ಎಂಬಾತನ ಹೆಸರಿನಲ್ಲಿ ಗುರುದ್ವಾರದ ಅಧಿಕೃತ ಮೇಲ್ ಐಡಿಗೆ ಬಾಂಬ್ ಬೆದರಿಕೆ ಬಂದಿದೆ. ಮೇಲ್‌ನಲ್ಲಿ, ಶೀಘ್ರವೇ 4 RDX IED ನಿಮ್ಮ ಗುರುದ್ವಾರದ ಬಾತ್ರೂಮ್‌ನಲ್ಲಿ ಬಾಂಬ್ ಸ್ಫೋಟಿಸುತ್ತದೆ. 8 ಗಂಟೆಯೊಳಗೆ ಎಲ್ಲವನ್ನೂ ಸ್ಥಳಾಂತರಿಸಿ ಎಂದು ಬರೆದಿದ್ದಾರೆ.ಇದನ್ನೂ ಓದಿ: ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಫೋಟ – ಹಲವರು ನಾಪತ್ತೆ ಶಂಕೆ

    ಈ ಕುರಿತು ಋಷಿಪಾಲ್ ಸಿಂಗ್ ಎಂಬುವವರು ಹಲಸೂರು ಪೊಲೀಸ್ ಠಾಣೆಗೆ (Ulsoor Police Station) ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ.ಇದನ್ನೂ ಓದಿ: ಹಾಸನ | ರಸ್ತೆಗೆ ಮರ ಕೆಡವಿ ವಾಹನ ಸವಾರರನ್ನು ತಡೆದ ಗಜರಾಜ!

  • ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಬಾಂಬ್ ಬೆದರಿಕೆ

    ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಬಾಂಬ್ ಬೆದರಿಕೆ

    ಬೀದರ್: ಜಿಲ್ಲೆಯ ಐತಿಹಾಸಿಕ ಗುರುದ್ವಾರಕ್ಕೆ (Gurudwara) ಇ-ಮೇಲ್ ಮೂಲಕ ಬಾಂಬ್ ಬ್ಲಾಸ್ಟ್ ಬೆದರಿಕೆ ಬಂದಿದೆ.

    ಶನಿವಾರ ಬೆದರಿಕೆ ಮೇಲ್ ಬಂದ ಬೆನ್ನಲ್ಲೇ ಗುರುದ್ವಾರದ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗುರುದ್ವಾರದ ಅಮೃತಕುಂಡ, ಸರೋವರ, ಯಾತ್ರಿ ನಿವಾಸದಲ್ಲಿ ಬಾಂಬ್ ಬ್ಲಾಸ್ಟ್ ನಡೆಯಲಿದೆ ಎಂದು ವಕೀಲ ಅಲೀಂ ಅಲ್ ಬುಕಾರಿ ಎಂಬ ವ್ಯಕ್ತಿಯಿಂದ ಮೇಲ್ ಬಂದಿದೆ. ಇದನ್ನೂ ಓದಿ: ಸಾಧನಾ ಸಮಾವೇಶ ಮುಗಿಸಿ ವಾಪಸ್‌ ಬರುವಾಗ ಡಿಕೆಶಿ ಬೆಂಗಾವಲು ವಾಹನ ಪಲ್ಟಿ – ಪ್ರಾಣಾಪಾಯದಿಂದ ಪಾರು

    ಈ ಕುರಿತು ಗುರುದ್ವಾರದ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕಾಡ್ ಸೇರಿ ವಿಶೇಷ ತಂಡದಿಂದ ತೀವ್ರ ಪರಿಶೀಲನೆ ಮಾಡಲಾಗುತ್ತಿದೆ.

    ಎಸ್ಪಿ, ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ ಸೇರಿ 50ಕ್ಕೂ ಹೆಚ್ಚು ಪೊಲೀಸರಿಂದ ಪರಿಶೀಲನೆ ಮಾಡಲಾಗುತ್ತಿದ್ದು, ಪೊಲೀಸರ ಪರಿಶೀಲನೆ ವೇಳೆ ಯಾವುದೇ ರೀತಿ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ತಮಿಳುನಾಡಿನ ಡ್ರಗ್ಸ್ ಸ್ಮಗ್ಲರ್ ಜಾಫರ್ ಸಾದಿಕ್, ಕೃತಿಗಾ ಉದಯನಿಧಿ ಹೆಸರು ಮೇಲ್‌ನಲ್ಲಿ ಉಲ್ಲೇಖಿಸಲಾಗಿದ್ದು, ನಿವೇತಾ ಪೇತುರಾಜ್, ಉದಯನಿಧಿ ಪ್ರಕರಣಗಳನ್ನು ಬೇರೆಡೆ ಸೆಳೆಯಲು ಸ್ಫೋಟ ಎಂದು ಮೇಲ್ ಕಳಿಸಲಾಗಿದೆ.

    ಪಾಕ್‌ನ ಐಎಸ್‌ಐ ಸೆಲ್ಸ್‌ಗಳು ಬಾಂಬ್ ಸ್ಫೋಟದ ಸಂಚು ರೂಪಿಸಿವೆ ಎಂದು ಹೇಳಲಾಗುತ್ತಿದ್ದು, ಭಕ್ತರ ಮೈಕ್ರೋ ಮೊಬೈಲ್ ಫೋನ್ ಸಿಗ್ನಲ್ ಬಳಸಿ ಸ್ಫೋಟಗೊಳಿಸಲಿದ್ದಾರೆಂದು ಮೇಲ್‌ನಲ್ಲಿ ಬರೆಯಲಾಗಿದೆ.ಇದನ್ನೂ ಓದಿ: ಸಂಕ್ರಾಂತಿಗೆ ವಿಜಯ್ ದಳಪತಿ-ಶಿವಕಾರ್ತಿಕೇಯನ್ ಮುಖಾಮುಖಿ

  • ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ್ದಕ್ಕೆ ಯುವಕನ ಕೊಲೆ

    ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ್ದಕ್ಕೆ ಯುವಕನ ಕೊಲೆ

    ಚಂಡೀಗಢ: ಸಿಖ್‌ (Sikh) ಧರ್ಮದ ಪವಿತ್ರ ಪುಸ್ತಕ ಗುರು ಗ್ರಂಥ ಸಾಹಿಬ್‌ (Guru Granth Sahib) ಕೆಲ ಪುಟಗಳನ್ನು ಹರಿದು ಹಾಕಿದ್ದಕ್ಕೆ 19 ವರ್ಷದ ಯುವಕನನ್ನು ಹೊಡೆದು ಕೊಂದು ಹಾಕಿದ ಘಟನೆ ಪಂಜಾಬ್‌ (Punjab) ಫಿರೋಜ್‌ಪುರದ ಗುರುದ್ವಾರದಲ್ಲಿ (Gurudwara) ಶನಿವಾರ ನಡೆದಿದೆ.

    ಬಂಡಾಲ ಗ್ರಾಮದ ಗುರುದ್ವಾರ ಬಾಬಾ ಬೀರ್‌ನಲ್ಲಿ ಬಕ್ಷೀಶ್ ಸಿಂಗ್ ಈ ಕೃತ್ಯ ಎಸಗಿದ್ದು, ನಂತರ ಕೋಪಗೊಂಡ ಆತನನ್ನು ಅಲ್ಲಿದ್ದ ಜನರು ಹಿಡಿದು ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ ಎಂದು ಉಪ ಪೊಲೀಸ್ ವರಿಷ್ಠ ಸಿಂಗ್ ಸುಖವಿಂದರ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಗಂಡನೊಂದಿಗೆ ಗಲಾಟೆ – ಕೋಪದಲ್ಲಿ ಮಗನನ್ನು ಮೊಸಳೆಗಳಿದ್ದ ನಾಲೆಗೆ ಎಸೆದ ತಾಯಿ

     

    ಮೃತಪಟ್ಟ ಯುವಕ ಮಾನಸಿಕ ಅಸ್ವಸ್ಥನಾಗಿದ್ದು ಎರಡು ವರ್ಷಗಳಿಂದ ಔಷಧಿ ಸೇವಿಸುತ್ತಿದ್ದ ಎಂದು ಆತನ ತಂದೆ ಲಖ್ವಿಂದರ್ ಸಿಂಗ್ ಹೇಳಿದ್ದಾರೆ. ಈಗ ಮಗನನ್ನು ಹತ್ಯೆಗೈದವರ ವಿರುದ್ಧ ಪ್ರಕರಣ ದಾಖಲಿಸುವಂತೆ ತಂದೆ ದೂರು ನೀಡಿದ್ದಾರೆ. ಇದನ್ನೂ ಓದಿ: ರೇವಣ್ಣ ಅರೆಸ್ಟ್‌ ಬೆನ್ನಲ್ಲೇ ಭವಾನಿಗೂ ಸಂಕಷ್ಟ?

    ಜನರು ಥಳಿಸಲು ಆರಂಭಿಸಿದಾಗ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಹರಿದು ಹಾಕಿದ ವಿಚಾರ ತಿಳಿದು ಗ್ರಾಮಸ್ಥರು ಗುರುದ್ವಾರದಲ್ಲಿ ಜಮಾಯಿಸಿ ಥಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯುವಕನನ್ನು ಥಳಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

  • ಗುರುದ್ವಾರದಲ್ಲಿ ರೊಮ್ಯಾನ್ಸ್ ಮಾಡಿದ ಸನ್ನಿ ಡಿಯೋಲ್, ಆಮೀಷಾ ವಿರುದ್ಧ ಕಿಡಿಕಾರಿದ ಸಿಖ್ ಸಮುದಾಯ

    ಗುರುದ್ವಾರದಲ್ಲಿ ರೊಮ್ಯಾನ್ಸ್ ಮಾಡಿದ ಸನ್ನಿ ಡಿಯೋಲ್, ಆಮೀಷಾ ವಿರುದ್ಧ ಕಿಡಿಕಾರಿದ ಸಿಖ್ ಸಮುದಾಯ

    ತ್ತೀಚಿಗೆ ‘ಆದಿಪುರುಷ್’ (Adipurush) ಸಿನಿಮಾ ತಂಡ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿತ್ತು. ಈ ವೇಳೆ ನಿರ್ದೇಶಕ ಓಂ ರಾವತ್, ನಾಯಕಿ ಕೃತಿ ಸನೋನ್‌ಗೆ (Kriti Sanon) ಕಿಸ್ ನೀಡಿದ್ದರು. ದೇವರ ಸನ್ನಿಧಿಗೆ ಬಂದ ಸಂದರ್ಭದಲ್ಲಿ ನಿರ್ದೇಶಕ ಈ ರೀತಿ ಮಾಡಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ವಿವಾದಕ್ಕೆ ದಾರಿ ಮಾಡಿ ಕೊಟ್ಟಿದೆ. ಗುರುದ್ವಾರದಲ್ಲಿ ನಟ ಸನ್ನಿ ಡಿಯೋಲ್, ಅಮೀಷಾ ಪಟೇಲ್ (Ameesha Patel) ರೊಮ್ಯಾನ್ಸ್ ಮಾಡಿರೋದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ:ಮುಂಬೈನಿಂದ ಸ್ಯಾಂಡಲ್ ವುಡ್ ಗೆ ಬಂದ ಪ್ರಾಚಿ ಶರ್ಮಾ

    ಸನ್ನಿ ಡಿಯೋಲ್, ಅಮೀಷಾ ಪಟೇಲ್ ನಟನೆಯ ‘ಗದರ್ 2’ಗಾಗಿ (Gadar 2) ಗುರುದ್ವಾರದಲ್ಲಿ ಬೀಡು ಬಿಟ್ಟಿತ್ತು. ಈ ಸಿನಿಮಾಗಾಗಿ ಚಿತ್ರೀಕರಿಸಿದ ಒಂದು ವೀಡಿಯೋ ಲೀಕ್ ಆಗಿದೆ. ಗುರುದ್ವಾರದಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡ ವೀಡಿಯೋ ಔಟ್ ಆಗಿದೆ. ಈ ಬೆನ್ನಲ್ಲೇ ಸಿಖ್ ಮುಖಂಡರು ಈ ಬಗ್ಗೆ ಧ್ವನಿಯೆತ್ತಿದಾರೆ. ರೊಮ್ಯಾಂಟಿಕ್ ದೃಶ್ಯಗಳನ್ನ ಪವಿತ್ರ ಸ್ಥಳಗಳಲ್ಲಿ ಮಾಡೋದು ಎಷ್ಟು ಸರಿ ಎಂದು ಸಿಖ್ ಸಮುದಾಯದವರು ಪ್ರಶ್ನೆ ಮಾಡ್ತಿದ್ದಾರೆ.

    ‘ಗದರ್ 2’ಗಾಗಿ ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ ಸನ್ನಿ ಡಿಯೋಲ್- ಅಮೀಷಾ ಪಟೇಲ್ ಅವರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಡೋಲು ಬಾರಿಸುತ್ತಿರುವ ಶಬ್ದವಿದೆ. ಈ ವಿಡಿಯೋ ನೋಡುತ್ತಿದ್ದಂತೆಯೇ ಸಿಖ್ ಸಮುದಾಯದವರಿಗೆ ಕೋಪ ಬಂದಿದೆ. ‘ಗದರ್ 2’ ಚಿತ್ರತಂಡದ ಈ ನಡೆಯನ್ನು ಖಂಡಿಸಲಾಗಿದೆ. ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ ಟ್ವಿಟರ್ ಖಾತೆಯಲ್ಲಿ ಒಂದು ಎಚ್ಚರಿಕೆ ಸಂದೇಶವನ್ನು ಹಂಚಿಕೊಳ್ಳಲಾಗಿದೆ.

    ಈ ಘಟನೆ ಕುರಿತು ತನಿಖೆ ಆಗಬೇಕು ಮತ್ತು ಚಿತ್ರತಂಡದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಗುರುದ್ವಾರ ಸಾಹಿಬ್‌ನಲ್ಲಿ ಗದರ್ 2 ಸಿನಿಮಾದ ಆಕ್ಷೇಪಾರ್ಹ ದೃಶ್ಯ ಚಿತ್ರೀಕರಿಸಿದ್ದನ್ನು ನಾವು ಖಂಡಿಸುತ್ತೇವೆ. ಇದು ಒಂದು ಅಧ್ಯಾತ್ಮದ ಸ್ಥಳ. ಇಂಥ ಜಾಗದಲ್ಲಿ ಈ ರೀತಿ ದೃಶ್ಯಗಳನ್ನು ಚಿತ್ರಿಸಬಾರದು ಎಂದು ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ ಮುಖಂಡರಾದ ಗುರುಚರಣ್ ಸಿಂಗ್ ಗ್ರೇವಾಲ್ ಅವರು ಹೇಳಿದ್ದೇರೆ. ಈ ಘಟನೆ ಕುರಿತಂತೆ ಗದರ್ 2 ಸಿನಿಮಾ ತಂಡದಿಂದ ಇನ್ನಷ್ಟೇ ಸ್ಪಷ್ಟನೆ ಬರಬೇಕಿದೆ.

  • ಗುರುದ್ವಾರದಲ್ಲಿ ಮದ್ಯಪಾನ ಮಾಡಿದ ಮಹಿಳೆಯ ಗುಂಡಿಕ್ಕಿ ಹತ್ಯೆ

    ಗುರುದ್ವಾರದಲ್ಲಿ ಮದ್ಯಪಾನ ಮಾಡಿದ ಮಹಿಳೆಯ ಗುಂಡಿಕ್ಕಿ ಹತ್ಯೆ

    ಚಂಡೀಗಢ: ಗುರುದ್ವಾರದ (Gurudwara) ಆವರಣದಲ್ಲಿ ಮದ್ಯಪಾನ ಮಾಡಿದ ಆರೋಪದ ಮೇಲೆ ಮಹಿಳೆಯನ್ನು (Woman) ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪಂಜಾಬ್‌ನ (Punjab) ಪಟಿಯಾಲದಲ್ಲಿ (Patiala) ನಡೆದಿದೆ.

    ಪರ್ಮಿಂದರ್ ಕೌರ್ (32) ಎಂದು ಗುರುತಿಸಲಾದ ಮಹಿಳೆ ಹತ್ಯೆಯಾಗಿದ್ದು, ಗುರುದ್ವಾರಕ್ಕೆ ನಿತ್ಯ ಭೇಟಿ ನೀಡುತ್ತಿದ್ದ ನಿರ್ಮಲಜಿತ್ ಸಿಂಗ್ ಸೈನಿ ಮಹಿಳೆ ಮೇಲೆ 5 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪಟಿಯಾಲ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಶರ್ಮಾ ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಭಾನುವಾರ ರಾತ್ರಿ ಪರ್ಮಿಂದರ್ ಕೌರ್ ದುಖ್ನಿವಾರ್ನ್ ಸಾಹಿಬ್ ಗುರುದ್ವಾರದ ಪವಿತ್ರ ನೀರಿನ ಕೊಳದ ಬಳಿ ಮದ್ಯಪಾನ ಮಾಡುತ್ತಿದ್ದಳು. ಇದನ್ನು ಗಮನಿಸಿದ ಗುರುದ್ವಾರದ ಸಿಬ್ಬಂದಿ ಆಕೆಯನ್ನು ಮ್ಯಾನೇಜರ್ ಕಚೇರಿಗೆ ಕರೆದೊಯ್ಯಲು ನಿರ್ಧರಿಸಿದರು. ಆದರೆ ಅಷ್ಟು ಹೊತ್ತಿಗಾಗಲೇ ನಿರ್ಮಲಜಿತ್ ಸಿಂಗ್ ಸೈನಿ ಕೋಪದಿಂದ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ ಮಹಿಳೆ ಮೇಲೆ ಹಲವು ಬಾರಿ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಬಜರಂಗದಳಕ್ಕೆ ಪಿಎಫ್‍ಐ ಹೋಲಿಕೆ – ಖರ್ಗೆಗೆ ಕೋರ್ಟ್ ಸಮನ್ಸ್

    ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಆರೋಪಿ ನಿರ್ಮಲಜಿತ್ ಆಸ್ತಿ ಡೀಲರ್ ಆಗಿದ್ದು, ಯಾವುದೇ ಅಪರಾಧ ಚಟುವಟಿಕೆಗಳ ಇತಿಹಾಸ ಹೊಂದಿಲ್ಲ ಎನ್ನಲಾಗಿದೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸೇವಿಸಿ 10 ಸಾವು – 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

  • ಕಾಬೂಲ್ ಗುರುದ್ವಾರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಕಾಸರಗೋಡಿನ ಸೂಸೈಡ್ ಬಾಂಬರ್

    ಕಾಬೂಲ್ ಗುರುದ್ವಾರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಕಾಸರಗೋಡಿನ ಸೂಸೈಡ್ ಬಾಂಬರ್

    – ಕಾಸರಗೋಡಿನಲ್ಲಿ ಅಂಗಡಿ ಇಟ್ಟುಕೊಂಡಿದ್ದ ಉಗ್ರ

    ನವದೆಹಲಿ: ಇತ್ತೀಚೆಗೆ ಕಾಬೂಲ್‍ನಲ್ಲಿ ನಡೆದ ಸಿಖ್‍ರ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ನಾಲ್ಕು ಜನ ಭಯೋತ್ಪಾದಕರಲ್ಲಿ ಓರ್ವ ಕೇರಳದ ಕಾಸರಗೋಡಿನ ಯುವಕನಿದ್ದ ಎಂದು ವರದಿಯಾಗಿದೆ.

    ಮಾರ್ಚ್ 25ರಂದು ಕಾಬೂಲ್‍ನ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಸಿಖ್‍ರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ಮಾಡಲಾಗಿತ್ತು. ಈ ದಾಳಿಯಲ್ಲಿ ನಾಲ್ಕು ಜನ ಸೂಸೈಡ್ ಬಾಂಬರ್ ಗಳು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿತ್ತು. ಈಗ ಇದರಲ್ಲಿ ಓರ್ವ ಭಾರತದ ಮೂಲದವನಾಗಿದ್ದು, ಕೇರಳದಿಂದ 4 ವರ್ಷದ ಹಿಂದೆ 14 ಜನರೊಂದಿಗೆ ಕಾಣೆಯಾಗಿದ್ದನು.

    ಕಳೆದ ಬುಧವಾರ ಕಾಬೂಲ್‍ನ ಸಿಖ್ ದೇಗುಲದ ಮೇಲೆ ದಾಳಿ ನಡೆಸಿದ ನಾಲ್ಕು ಸದಸ್ಯರ ತಂಡದ ಭಾಗವಾಗಿದ್ದ ಆತ್ಮಾಹುತಿ ದಾಳಿಕೋರ ಅಬು ಖಾಲಿದ್ ಅಲ್-ಹಿಂದಿ ಫೋಟೋವನ್ನು ಇಸ್ಲಾಮಿಕ್ ಸ್ಟೇಟ್ ಶುಕ್ರವಾರ ಪ್ರಕಟಿಸಿದೆ. ಉನ್ನತ ಮೂಲಗಳ ಪ್ರಕಾರ ಈತ ಕೇರಳದ ಕಾಸರಗೋಡಿನ ಪಾಡ್ನೆ ಪ್ರದೇಶದಲ್ಲಿ ಅಂಗಡಿ ಇಟ್ಟುಕೊಂಡಿದ್ದ ಮೊಹಮ್ಮದ್ ಸಾಜಿದ್ ಕುಥಿರುಮಾಲ್ ಎಂದು ತಿಳಿದು ಬಂದಿದೆ. 2016ರ ಎನ್‍ಐಎ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು ಮತ್ತು ಆತನ ವಿರುದ್ಧ ಇಂಟರ್‍ಪೋಲ್ ರೆಡ್ ನೋಟಿಸ್ ಜಾರಿಗೊಳಿಸಿತ್ತು.

    2016ರ ಜುಲೈನಲ್ಲಿ ಕೇರಳದ ಕಾಸರಗೋಡಿನ ಪೋಷಕರು, 30 ವರ್ಷದ ತಮ್ಮ ಮಗ ಅಬ್ದುಲ್ ರಶೀದ್ ಮತ್ತು ಆತನ ಪತ್ನಿ ಆಯಿಷಾ (ಸೋನಿಯಾ ಸೆಬಾಸ್ಟಿಯನ್) ಮತ್ತು ಮಗುವಿನೊಂದಿಗೆ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಇವರ ಜೊತೆ 14 ಜನರೊಂದಿಗೆ ಮೊಹಮ್ಮದ್ ಸಾಜಿದ್ ಕೂಡ ಕಾಣೆಯಾಗಿದ್ದಾನೆ ಎಂದು ಅದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೇ ವೇಳೆ ಕೇರಳದ ಸುತ್ತಲಿನ ಪ್ರದೇಶದ 14 ಯುವಕರು ಕಾಣೆಯಾಗಿದ್ದರು.

    ಇದಾದ ನಂತರ ಮೊಹಮ್ಮದ್ ಸಾಜಿದ್, ಅಬ್ದುಲ್ ರಶೀದ್ ಎಂಬಾತನ ಸಹಾಯ ಪಡೆದು, ನಿಷೇಧಿತ ಇಸ್ಲಾಮಿಸ್ಟ್ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಐಸಿಸ್)ಗೆ ತನ್ನ 14 ಜನ ಸ್ನೇಹಿತರೊಂದಿಗೆ ಸೇರಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ತಂದೆ ಮತ್ತು ಸಹೋದರನ ಜೊತೆ ಮಲೇಷ್ಯಾಗೆ ಹೋಗಿದ್ದ ಈತ ಅಲ್ಲಿ ಉಗ್ರರ ಜೊತೆ ನಂಟು ಹೊಂದಿದ್ದ ಎಂದು ಹೇಳಲಾಗಿತ್ತು.

    ಬಿಸಿನೆಸ್ ವಿಚಾರವಾಗಿ ಮಲೇಷ್ಯಾಗೆ ತಂದೆ ಮತ್ತು ಸಹೋದರನ ಜೊತೆ ಹೋಗಿದ್ದ ಸಾಜಿದ್ ಮತ್ತೆ ಅವರ ಜೊತೆ ವಾಪಸ್ ಬಂದಿರಲಿಲ್ಲ. ಆತ ಅಲ್ಲಿಂದ ಸೌದಿ ಅರೆಬೀಯಾಗೆ ಹೋಗಿದ್ದ. ಸೌದಿಯಿಂದ ದುಬೈಗೆ ಹೋಗಿ ಅಲ್ಲಿ ಪಾಕಿಸ್ತಾನದ ಐಸಿಸ್ ಏಜೆಂಟ್ ಜೊತೆ ಸಂಪರ್ಕ ಹೊಂದಿದ್ದ. ನಂತರ ಭಾರತಕ್ಕೆ ಬಂದಿದ್ದ ಆತ ತನ್ನೊಂದಿಗೆ 14 ಜನ ಕರೆದುಕೊಂಡು ಅಬ್ದುಲ್ ರಶೀದ್ ಸಹಾಯ ಪಡೆದು ಅಪ್ಘಾನಿಸ್ತಾಕ್ಕೆ ಹೋಗಿ ಉಗ್ರ ಸಂಘಟನೆ ಸೇರಿಕೊಂಡಿದ್ದ.

    ಭಾರತದಿಂದ ಪರಾರಿಯಾದ ನಂತರ ಸುಮಾರು 6 ತಿಂಗಳವರೆಗೆ ಸಾಜಿದ್ ಅವರು ತಾಯಿ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದ. ಆದರೆ ಕಳೆದ ಕೆಲ ತಿಂಗಳಿನಿಂದ ಸಾಜಿದ್ ತನ್ನ ತಾಯಿ ಜೊತೆ ಸಂಪರ್ಕ ಕಳೆದುಕೊಂಡಿದ್ದ. ಇದಾದ ಕೆಲವೇ ದಿನಗಳಲ್ಲಿ ಸಾಜಿದ್ ಕಾಬೂಲ್‍ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಪ್ರಮುಖ ಸೂಸೈಡ್ ಬಾಂಬರ್ ಆಗಿದ್ದ ಎಂದು ಸಾಜಿದ್ ಅವನ ಫೋಟೋ ಐಸಿಸ್ ಬಿಡುಗಡೆ ಮಾಡಿದೆ.

    ಕಳೆದ ಮಾರ್ಚ್ 25 ರಂದು ಕಾಬೂಲ್‍ನ ಶೋರ್ ಬಜಾರ್ ಪ್ರದೇಶದಲ್ಲಿನ ಗುರುದ್ವಾರದಲ್ಲಿ 150 ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಆದರ ಭಯೋತ್ಪಾದಕರು ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದು ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ದಾಳಿಯ ಸಮಯದಲ್ಲಿ ಗುರುದ್ವಾರಕ್ಕೆ ಭೇಟಿ ನೀಡಿದ ಭಾರತೀಯ ರಾಜತಾಂತ್ರಿಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿತ್ತು ಎಂದು ವರದಿಗಳು ತಿಳಿಸಿವೆ.

  • ದಕ್ಷಿಣ ಭಾರತದ ಏಕೈಕ ಸಿಖ್ಖರ ಪವಿತ್ರ ಸ್ಥಳ ಗುರುದ್ವಾರಕ್ಕೂ ಕೊರೊನಾ ಭೀತಿ

    ದಕ್ಷಿಣ ಭಾರತದ ಏಕೈಕ ಸಿಖ್ಖರ ಪವಿತ್ರ ಸ್ಥಳ ಗುರುದ್ವಾರಕ್ಕೂ ಕೊರೊನಾ ಭೀತಿ

    ಬೀದರ್: ಕರುನಾಡಿನಲ್ಲಿ ನಾಲ್ಕು ಜನ ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟ ಬೆನ್ನಲ್ಲೇ ರಾಜ್ಯದ ಜನರಲ್ಲಿ ತೀವ್ರ ಭೀತಿ ಸೃಷ್ಟಿಯಾಗಿದೆ. ಇದೀಗ ಬೀದರಿನಲ್ಲಿರುವ ದಕ್ಷಿಣ ಭಾರತದ ಏಕೈಕ ಸಿಖ್ಖರ ಪವಿತ್ರ ಸ್ಥಳ ಗುರುದ್ವಾರಕ್ಕೂ ಕೊರೊನಾ ಬಿಸಿ ತಟ್ಟಿದೆ.

    ರಾಜ್ಯ ಹೊರ ರಾಜ್ಯದಿಂದ ಸಾವಿರಾರು ಪ್ರವಾಸಿಗರು ಬರುವ ಈ ಪವಿತ್ರ ಸ್ಥಳದಲ್ಲಿ ಈಗ ಕೊರೊನಾ ವೈರಸ್ ಭಯ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಯಾರು ಗುರುದ್ವಾರದ ಕಡೆ ಬರಲು ಭಯ ಬೀಳುತ್ತಿದ್ದಾರೆ.

    ಹೆಚ್ಚಾಗಿ ಪಂಜಾಬ್‍ನ ಅಮೃತಸರ ಹಾಗೂ ಮಹಾರಾಷ್ಟ್ರದ ನಾಂದೇಡ್‍ನಿಂದ ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಿದ್ದರು. ಆದರೆ ಕೊರೊನಾ ವೈರಸ್‍ನಿಂದ ಪ್ರವಾಸಿಗರ ಸಂಖ್ಯೆ ಅತಿ ಕಡಿಮೆಯಾಗಿದೆ. ಗುರುದ್ವಾರದ ವ್ಯವಸ್ಥಾಪಕ ಮಂಡಳಿ ಕೊರೊನಾ ವೈರಸ್ ಬರದಂತೆ ಹೇಗೆ ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದು ಪೋಸ್ಟ್ ಹಾಕುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.