Tag: gurudev hoysala

  • ಡಾಲಿ ಧನಂಜಯ್ ನಟನೆ ‘ಗುರುದೇವ್ ಹೊಯ್ಸಳ’ ಗೆದ್ದಿದೆ : ಕಾರ್ತಿಕ್ ಗೌಡ

    ಡಾಲಿ ಧನಂಜಯ್ ನಟನೆ ‘ಗುರುದೇವ್ ಹೊಯ್ಸಳ’ ಗೆದ್ದಿದೆ : ಕಾರ್ತಿಕ್ ಗೌಡ

    ಡಾಲಿ ಧನಂಜಯ್ (Dali Dhananjay) ನಟನೆಯ ‘ಗುರುದೇವ್ ಹೊಯ್ಸಳ’ (Gurudev Hoysala) ಸಿನಿಮಾ ಕಳೆದ ವಾರವಷ್ಟೇ ರಿಲೀಸ್ ಆಗಿದೆ. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಆದರೆ, ಚಿತ್ರಮಂದಿರಕ್ಕೆ ಜನರು ಬರುತ್ತಿಲ್ಲ ಎನ್ನುವ ಮಾತೂ ಕೇಳಿ ಬಂದಿತ್ತು. ಈ ಎಲ್ಲದರ ಕುರಿತು ಕೆ.ಆರ್.ಜಿ ನಿರ್ಮಾಣ ಸಂಸ್ಥೆ ಸುದೀರ್ಘವಾಗಿ ಪತ್ರವೊಂದನ್ನು ಬರೆದಿದೆ. ಆ ಪತ್ರ ಹೀಗಿದೆ..

    ಕಳೆದ ವಾರ ಬಿಡುಗಡೆಯಾದ ನಮ್ಮ ಸಂಸ್ಥೆ ನಿರ್ಮಿಸಿರುವ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಸಿಕ್ಕಿದ್ದು, ಚಿತ್ರ ಎರಡನೆಯ ವಾರಕ್ಕೆ ಕಾಲಿಟ್ಟಿದೆ. ರಾಜ್ಯದಲ್ಲಿ ಚುನಾವಣೆಗಳ ಕಾವು ಮತ್ತು ಐಪಿಎಲ್ ಜ್ವರದ ನಡುವೆಯೂ ಚಿತ್ರಕ್ಕೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬಂದು ನೋಡಿ ಗೆಲ್ಲಿಸಿದ್ದಾರೆ. ಈ ಪ್ರಶಂಸೆಯಿಂದ ನಮ್ಮ ತಂಡಕ್ಕೆ ಸಾರ್ಥಕ್ಯದ ಭಾವ ಮೂಡಿದೆ.

    ನಮ್ಮ ಕೆ ಆರ್ ಜಿ ಸ್ಟುಡಿಯೋಸ್ ನ ಮೊದಲ ಚಿತ್ರ ‘ರತ್ನನ್ ಪ್ರಪಂಚ’, ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಯಾದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಇದನ್ನೂ ಓದಿ:‘ಕೆಜಿಎಫ್’ ರೈಟರ್ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಬೋಲ್ಡ್ ಬ್ಯೂಟಿ

    ಈಗ ನಮ್ಮ ಸಂಸ್ಥೆಯ ಎರಡನೆಯ ಚಿತ್ರಕ್ಕೂ ಜನಮನ್ನಣೆ ಸಿಕ್ಕಿರುವುದು ನಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮರ್ಯಾದೆ ಹತ್ಯೆ ಎಂಬ ಗಹನವಾದ ಸಮಸ್ಯೆಯ ಕುರಿತ ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ನಮಗೆ ಈ ತರಹದ ಇನ್ನಷ್ಟು ಸೂಕ್ಷ್ಮ ಸಂವೇದನೆಯ ಚಿತ್ರಗಳನ್ನು ನಿರ್ಮಿಸುವುದಕ್ಕೆ ಪ್ರೇರೇಪಿಸಿದೆ.

    ಈ ಎರಡೂ ಚಿತ್ರಗಳ ಯಶಸ್ಸಿನಿಂದ ಸದ್ಯದಲ್ಲೇ ನಮ್ಮ ಸಂಸ್ಥೆಯ ಮೂರನೆಯ ಪ್ರಯತ್ನವಾದ ಉತ್ತರಕಾಂಡ ಚಿತ್ರವನ್ನು ಸದ್ಯದಲ್ಲೇ ಶುರು ಮಾಡಲಿದ್ದೇವೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ನಡೆಯುವ ಈ ಕಥೆಯಲ್ಲೂ ಧನಂಜಯ ನಟಿಸುತ್ತಿದ್ದಾರೆ. ಇದಲ್ಲದೆ ಇನ್ನಷ್ಟು ಚಿತ್ರಗಳನ್ನು ನಮ್ಮ ಸಂಸ್ಥೆಯಡಿ ನಿರ್ಮಿಸುತ್ತಿದ್ದು, ಸದ್ಯದಲ್ಲೇ ಈ ಬಗ್ಗೆ ಘೋಷಣೆಯಾಗಲಿದೆ.

    ನಮ್ಮ ಈ ಗೆಲುವಿನಲ್ಲಿ ಸಿನಿಮಾ ಪ್ರೇಮಿಗಳು ಮತ್ತು ಮಾಧ್ಯಮದವರ ಪಾತ್ರ ಮಹತ್ವದ್ದಾಗಿದ್ದು, ನಮ್ಮ ಮುಂದಿನ ಕನಸುಗಳಿಗೆ ಅವರೇ ಸ್ಫೂರ್ತಿ ಎಂದರೆ ತಪ್ಪಿಲ್ಲ. ಜತೆಗೆ ವಿಮರ್ಶಕರು, ಸೋಷಿಯಲ್ ಮೀಡಿಯಾದ ಇನ್ಫ್ಲೂಯೆನ್ಸ್ ಪ್ರೋತ್ಸಾಹ ಮತ್ತು ಸಿನಿಮಾ ಪ್ರೀತಿ ಮರೆಯುವುದಕ್ಕೆ ಸಾಧ್ಯವೇ ಇಲ್ಲ.

    ನಮಗೆ ಸಲಹೆ, ಸೂಚನೆ ಮತ್ತು ಅಪರಿಮಿತ ಪ್ರೀತಿ ತೋರಿಸುತ್ತಾ ಬಂದಿರುವ ಸಹೋದರರಾದ ವಿಜಯ್ ಕಿರಗಂದೂರು ಮತ್ತು ನನ್ನ ಎಲ್ಲ ಹಿತೈಷಿಗಳಿಗೂ ನಾನು ಚಿರಋಣಿ. ಇಂದು ಕೆ ಆರ್ ಜಿ ಸ್ಟುಡಿಯೋಸ್ ಮತ್ತು ಕೆ ಆರ್ ಜಿ ಕನೆಕ್ಟ್ಸ್ ಈ ಹಂತಕ್ಕೆ ಬೆಳೆಯುತ್ತಿರುವುದಕ್ಕೆ ನಮ್ಮ ತಂಡದ ಪ್ರೀತಿ ಮತ್ತು ಪರಿಶ್ರಮ ಸಹ ಕಾರಣ. ಮುಂದಿನ ದಿನಗಳಲ್ಲಿ ನಿಮ್ಮನ್ನು ಇನ್ನಷ್ಟು ಮನರಂಜಿಸುವುದಕ್ಕೆ ಉತ್ಸುಕರಾಗಿದ್ದೇವೆ ಎಂದು ಕೆ ಆರ್ ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ (Karthik Gowda)  ಹಾಗೂ ಯೋಗಿ ಜಿ ರಾಜ್ (Yogi G Raj) ತಿಳಿಸಿದ್ದಾರೆ.

  • ‘ಬ್ಯಾರೇನೇ ಐತಿ’ ಅಂತ ಬಂದ ಗುರುದೇವ್ ಹೊಯ್ಸಳ

    ‘ಬ್ಯಾರೇನೇ ಐತಿ’ ಅಂತ ಬಂದ ಗುರುದೇವ್ ಹೊಯ್ಸಳ

    ತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚುವರಿ ಚಿತ್ರೀಕರಣ ಮಾಡಿರುವ ‘ಗುರುದೇವ್ ಹೊಯ್ಸಳ’ (Gurudev Hoysala) ಚಿತ್ರಕ್ಕೂ ಹಾಗೂ ಉತ್ತರ ಕರ್ನಾಟಕಕ್ಕೂ ಏನೋ ಒಂದು ವಿಶೇಷ ಕನೆಕ್ಷನ್ ಇರುವುದಂತೂ ಹೌದು. ಇದನ್ನು ಚಿತ್ರತಂಡವೇ ಸಾಕಷ್ಟು ಬಾರಿ ಹೇಳಿದ್ದುಂಟು. ಇದಕ್ಕೆ ಸರಿಯಾಗಿ ಇಂದು ‘ಗುರುದೇವ್ ಹೊಯ್ಸಳ’ ಸಿನೆಮಾ ತಂಡ ಮೂರನೇ ಹಾಡನ್ನು (Song)  ಬಿಡುಗಡೆ ಮಾಡಿದೆ.

    ‘ಬ್ಯಾರೇನೇ ಐತಿ’ (Barene Aiti) ಎನ್ನುವ ಈ ಹಾಡು ಉತ್ತರ ಕರ್ನಾಟಕ ಭಾಗದಲ್ಲಿ ವಾಸವಾಗಿರುವ ಅಲೆಮಾರಿಗಳ ಜೀವನ ಹೇಗಿರುತ್ತದೆ ಎಂದು ವರ್ಣನೆ ಮಾಡುತ್ತದೆ. ಅಲೆಮಾರಿಗಳ ಬಗ್ಗೆ ಇರುವ ಈ ಹಾಡಿಗೆ ಯೋಗರಾಜ್ ಭಟ್ (Yogaraj Bhatt) ರವರು ಸಾಹಿತ್ಯ ಬರೆದಿದ್ದು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರವರು ಹಾಡಿಗೆ ಹೊಸ ರೂಪ ಕೊಟ್ಟು, ರಚನೆ ಮಾಡಿ ಬಹಳ ಸೊಗಸಾಗಿ ಹಾಡಿದ್ದಾರೆ. ಇದನ್ನೂ ಓದಿ:ತೆಲಂಗಾಣಕ್ಕೆ ತೆರಳಿ ಪತ್ನಿಗೆ ವಸಿಷ್ಠ ಸಿಂಹ ಸರ್ಪ್ರೈಸ್

    ಈ ಹಿಂದೆ ರತ್ನನ್ ಪ್ರಪಂಚ ಚಿತ್ರದಲ್ಲಿ ‘ಅಲೆಮಾರಿಯೇ’ ಎಂಬ ಸಾಲುಗಳನ್ನು ಹೊಂದಿರುವ ಹಾಡಿನಲ್ಲಿ ಧನಂಜಯ (Dhananjay) ಕಾಣಿಸಿಕೊಂಡಿದ್ದರು ಎನ್ನುವುದು ಮತ್ತೊಂದು ವಿಶೇಷ. ಆದರೇ ‘ಗುರುದೇವ್ ಹೊಯ್ಸಳ’ ಚಿತ್ರದಲ್ಲಿ ಅಲೆಮಾರಿಗಳಿಗೆ ವಿಶೇಷ ಪ್ರಾಮುಖ್ಯತೆ ಸಿಕ್ಕಂತಿದೆ. ಈ ಚಿತ್ರಕ್ಕೂ ಅಲೆಮಾರಿಗಳಿಗೂ ಏನು ಸಂಬಂಧ, ಯಾಕೆ ಅವರ ಪಂಗಡವನ್ನು ಈ ಸಿನಿಮಾ ಹಾಡಿನಲ್ಲಿ ಬಳಸಿಕೊಂಡಿದ್ದಾರೆ ಎನ್ನುವುದು ಸಿನೆಮಾದಲ್ಲೇ ನೋಡಬೇಕಿದೆ.

    ಇನ್ನೇನು ಬಿಡುಗಡೆಯ ಬಿರುಸಿನಲ್ಲಿ ಇರುವ ಡಾಲಿ ಧನಂಜಯ ಅಭಿನಯದ 25ನೇ ಸಿನೆಮಾ ‘ಗುರುದೇವ್ ಹೊಯ್ಸಳ’, ದಿನೇ ದಿನೇ ಸಿನಿಪ್ರಿಯರ ಕುತೂಹಲ ಹೆಚ್ಚಿಸುತ್ತಿದೆ. ಮಾಸ್ ಟ್ರೈಲರ್, ಹಿಟ್ ಹಾಡುಗಳನ್ನ ಬಿಡುಗಡೆ ಮಾಡಿರುವ ಚಿತ್ರತಂಡ ಈಗಾಗಲೇ ಅರ್ಧ ಸಕ್ಸಸ್ ಕಂಡಂತಿದೆ.

    ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ನಿರ್ಮಿಸಿರುವ ‘ಗುರುದೇವ್ ಹೊಯ್ಸಳ’ ಸಿನಿಮಾ ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ. ವಿಜಯ್ ಎನ್ ರವರು ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

    ಈ ಚಿತ್ರದಲ್ಲಿ ಮಾಸ್ ಮತ್ತು ಖಡಕ್ ಪೊಲೀಸ್ ಪಾತ್ರ ಧರಿಸಿರುವ ಡಾಲಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

  • ಡಾಲಿ ಜೊತೆನೇ ಯಾಕೆ ಅಮೃತಾ ಸಿನಿಮಾ ಮಾಡ್ತಾರೆ? ಕಾಲೆಳೆದ ಕಿಚ್ಚ

    ಡಾಲಿ ಜೊತೆನೇ ಯಾಕೆ ಅಮೃತಾ ಸಿನಿಮಾ ಮಾಡ್ತಾರೆ? ಕಾಲೆಳೆದ ಕಿಚ್ಚ

    ಡಾಲಿ (Dali) ಮತ್ತು ಅಮೃತಾ ಅಯ್ಯಂಗಾರ್ `ಗುರುದೇವ ಹೊಯ್ಸಳ’ (Gurudeva Hoysala) ಸಿನಿಮಾದ ಮೂಲಕ ರಂಜಿಸಲು ಬರುತ್ತಿದ್ದಾರೆ. ಟ್ರೈಲರ್‌ ಲಾಂಚ್ ಕಾರ್ಯಕ್ರಮದಲ್ಲಿ ಡಾಲಿ ಮತ್ತು ಅಮೃತಾಗೆ ಕಿಚ್ಚ ಸುದೀಪ್ ಕಾಲೆಳೆದಿದ್ದಾರೆ. ಡಾಲಿ ಜೊತೆನೇ ನೀವ್ಯಾಕೆ ಸಿನಿಮಾ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್

    ತೆರೆಯ ಮೇಲೆ ಮೋಡಿ ಮಾಡಿರುವ ನಟರಾಕ್ಷಸ ಡಾಲಿ- ಅಮೃತಾ ಜೋಡಿ `ಪಾಪ್‌ಕಾರ್ನ್ ಮಂಕಿ ಟೈಗರ್’ ಮತ್ತು `ಬಡವ ರಾಸ್ಕಲ್’, `ಗುರುದೇವ ಹೊಯ್ಸಳ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವರ ಮಧ್ಯೆ ಒಳ್ಳೆಯ ಆಪ್ತತೆ ಬೆಳೆದಿದೆ. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೂಡಯಿದೆ. ಆದರೆ, ಇದನ್ನು ಇಬ್ಬರು ಒಪ್ಪಿಕೊಂಡಿಲ್ಲ. ಅವರ ಮಧ್ಯೆ ಪ್ರೀತಿ ಇದೆಯೋ ಇಲ್ಲವೋ ಒಳ್ಳೆಯ ಫ್ರೆಂಡ್‌ಶಿಪ್ ಅಂತೂ ಇದೆ. ಸುದೀಪ್ (Sudeep) ವೇದಿಕೆ ಏರಿದಾಗ ಇವರ ವಿಚಾರವನ್ನು ಇಟ್ಟುಕೊಂಡು ಎಲ್ಲರನ್ನೂ ನಕ್ಕು ನಗಿಸಿದ್ದಾರೆ.

    ಮೊದಲು ವೇದಿಕೆ ಏರಿದ ಅಮೃತಾ ಅವರು ಡಾಲಿಯನ್ನು ನಾಲ್ಕೈದು ಬಾರಿ ಹೊಗಳಿದರು. ಅವರು ಸುಂದರವಾಗಿ ಕಾಣ್ತಿದಾರೆ ಎಂದು ಮೆಚ್ಚುಗೆ ಸೂಚಿಸಿದರು. ನಂತರ ಸುದೀಪ್ ಜೊತೆ ವೇದಿಕೆ ಏರಿದ ಡಾಲಿ ಅವರು ಒಂದೇ ಬಾರಿ ಅಮೃತಾ ಹೆಸರನ್ನು ಹೇಳಿದರು. ಇದನ್ನು ಸುದೀಪ್ ನೆನಪಿಟ್ಟುಕೊಂಡಿದ್ದರು. ಧನಂಜಯ್ ಈ ರೀತಿ ಒಂದೇ ಮಾತಲ್ಲಿ ಅಮೃತಾ ಅವರ ಬಗ್ಗೆ ಹೇಳಿದ್ದು ನ್ಯಾಯ ಅಲ್ಲ ಎಂದರು ಕಿಚ್ಚ.

    ಆಗ ಡಾಲಿ ಅಮೃತಾ ಅವರನ್ನು ಹೊಗಳಲು ಮುಂದಾಗಿದ್ದಾರೆ. ನಟಿ ಬಗ್ಗೆ ಮಾತಾಡಿ ಎಂದು ಕಿಚ್ಚ ಕೂಡ ಕಾಲೆಳೆದಿದ್ದಾರೆ.  ಮೂರು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ವಿ. ಎಲ್ಲಾ ಸಿನಿಮಾಗಳಲ್ಲೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ ಎಂದು ಡಾಲಿ ಹೇಳುತ್ತಿದ್ದಂತೆ ಸುದೀಪ್ ಅವರು ಮತ್ತೆ ಕಾಲೆಳೆಯಲು ಮುಂದಾದರು. ಹೌದು ನೀವ್ಯಾಕೆ ಇವರೊಟ್ಟಿಗೆ ಕೆಲಸ ಮಾಡ್ತೀರಾ ಬೇರೆ ಕಲಾವಿದರಿಗೆ ಡೇಟ್ಸ್ ಕೊಡಿ. ಅವರ ಜೊತೆಯೂ ಕೆಲಸ ಮಾಡಿ. ಇವರೊಟ್ಟಿಗೆ ಸಿನಿಮಾ ಮಾಡ್ತಾ ಇದ್ರೆ ಬೇರೆ ಹೀರೋಗಳಿಗೆ ನೀವು ಹೇಗೆ ಸಿಗ್ತೀರಾ ಇಷ್ಟೆಲ್ಲ ಮಾಡಿದ್ರೂ ನಿಮ್ಮನ್ನು ಹೊಗಳುತ್ತಿಲ್ಲ ಎಂದು ಅಮೃತಾಗೆ ಸುದೀಪ್ ಹೇಳಿದರು. ಈ ಮಾತನ್ನು ಕೇಳಿ ಎಲ್ಲರೂ ನಕ್ಕರು. ಕೊನೆಯಲ್ಲಿ ಇವರ ಕೆಮಿಸ್ಟ್ರಿ ಬಗ್ಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಕಾರ್ತಿಕ್ ಮತ್ತು ಯೋಗಿ ಜಿ ನಿರ್ಮಾಣದ `ಗುರುದೇವ ಹೊಯ್ಸಳ’ ಸಿನಿಮಾ ಇದೇ ಮಾರ್ಚ್ 30ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಡಾಲಿ – ಅಮೃತಾ ಜೋಡಿ ಈ ಬಾರಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನ ಕಾದುನೋಡನೋಡಬೇಕಿದೆ.