Tag: Guru Raghavendra Swamy

  • ಮಂತ್ರಾಲಯದಲ್ಲಿ ಅದ್ದೂರಿಯಾಗಿ ನಡೆದ ಮಹಾರಥೋತ್ಸವ – ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ

    ಮಂತ್ರಾಲಯದಲ್ಲಿ ಅದ್ದೂರಿಯಾಗಿ ನಡೆದ ಮಹಾರಥೋತ್ಸವ – ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ

    ರಾಯಚೂರು: ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟವಾದ ಉತ್ತರರಾಧನೆ ಮಂತ್ರಾಲಯದಲ್ಲಿ (Mantralaya) ಅದ್ದೂರಿಯಾಗಿ ನಡೆಯುತ್ತಿದೆ. ಮಠದ ರಾಜ ಬೀದಿಯಲ್ಲಿ ನಡೆದ ಮಹಾರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ಆರಾಧನಾ ಸಂಭ್ರಮಕ್ಕೆ ಸಾಕ್ಷಿಯಾದರು.

    ಗುರು ರಾಘವೇಂದ್ರ ಸ್ವಾಮಿಗಳು (Guru Raghavendra Swamy) ವೃಂದಾವನಸ್ಥರಾದ ಮರುದಿನವನ್ನ ಮಂತ್ರಾಲಯದಲ್ಲಿ ಉತ್ತರರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆರಾಧಾನಾ ಮಹೋತ್ಸವದ ಕೊನೆಯ ಘಟ್ಟ ಉತ್ತರರಾಧನೆ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ಅದ್ದೂರಿಯಾಗಿ ನಡೆಯಿತು. ರಾಯರು ಪ್ರಹ್ಲಾದ ರಾಜರ ಉತ್ಸವ ಮೂರ್ತಿ ರೂಪದಿಂದ ಹೊರ ಪ್ರಾಕಾರದಲ್ಲಿ ಬಂದು ಭಕ್ತರಿಗೆ ರಾಜಬೀದಿಯಲ್ಲಿ ದರ್ಶನ ಕೊಡುತ್ತಾರೆ ಅನ್ನೋ ಪ್ರತೀತಿಯಿದೆ. ಗುರುರಾಯರನ್ನ ಪ್ರಹ್ಲಾದ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಇದನ್ನೂ ಓದಿ: ರಾಜಣ್ಣ ಮಾಡಿದ ಘೋರ ಅಪರಾಧವೇನು? ಸಿಎಂ ಸದನದಲ್ಲಿ ಉತ್ತರಿಸಲಿ: ವಿಜಯೇಂದ್ರ ಆಗ್ರಹ

    ಮಹಾರಥೋತ್ಸವಕ್ಕೂ ಮುನ್ನ ರಾಮದೇವರು ಮತ್ತು ಎಲ್ಲಾ ಬೃಂದಾವನಗಳಿಗೂ ಗುಲಾಲ್ ಸಮರ್ಪಣೆ ಮಾಡುವ ಮೂಲಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಂಗಿನ ಹಬ್ಬ ವಸಂತೋತ್ಸವ ಆಚರಿಸಿದರು. ಬಳಿಕ ಮಠದ ಮದ್ವದ್ವಾರದ ಮೂಲಕ ರಾಜಬೀದಿಯಲ್ಲಿ ಮಹಾರಥೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿದರು. ಇದೇ ವೇಳೆ ನೆರೆದಿದ್ದ ಭಕ್ತರನ್ನ ಉದ್ದೇಶಿಸಿ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿದರು. ದೇಶದ ರಕ್ಷಣೆ ಎಲ್ಲರ ಕರ್ತವ್ಯ, ಪರದೇಶಿಗಳು ನಮ್ಮ ಮೇಲೆ ದಾಳಿ ಮಾಡುವುದು ಅತ್ಯಂತ ಖಂಡನೀಯ. ಹಿಂದೂ ಧರ್ಮ ಶ್ರೇಷ್ಠವಾದ ಧರ್ಮ ನಾವೆಲ್ಲ ಜಾಗೂರಕರಾಗಿರಬೇಕು. ಧರ್ಮ, ದೇಶದ ರಕ್ಷಣೆಗೆ ನಾವೆಲ್ಲ ಕಟುಬದ್ಧರಾಗಿರಬೇಕು ಎಂದು ಸಂದೇಶ ನೀಡಿದರು. ಇದನ್ನೂ ಓದಿ: 354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟ – ಮಂತ್ರಾಲಯ ರಾಜಬೀದಿಯಲ್ಲಿಂದು ಮಹಾರಥೋತ್ಸವ

    ರಾಯರು ಪ್ರತಿನಿತ್ಯದಲ್ಲಿ ಅಂತರ್ಮುಖವಾಗಿ ಜಪತಪ ಮಾಡುತ್ತಿದ್ದರೆ ಉತ್ತರರಾಧನೆ ದಿನ ಬಹಿರ್ಮುಖವಾಗಿ ತಮ್ಮ ದೃಷ್ಟಿಯನ್ನ ಭಕ್ತರ ಕಡೆಗೆ ಹರಿಸುತ್ತಾರೆ. ಭಕ್ತರ ಬೇಡಿಕೆ ಈಡೇರಿಸುತ್ತಾರೆ ಅನ್ನೋ ನಂಬಿಕೆಯಿದೆ. ಹೀಗಾಗಿ ಉತ್ತರರಾಧನೆ ದಿನ ರಾಯರ ಅನುಗ್ರಹಕ್ಕೆ ಪಾತ್ರರಾಗಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

    ಪ್ರತಿವರ್ಷದಂತೆ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪವೃಷ್ಟಿಯನ್ನ ಮಾಡಲಾಯಿತು. ಈ ಮೂಲಕ ರಾಯರ ಆರಾಧನೆಯ ಮುಖ್ಯ ಮೂರು ದಿನಗಳು ಇಂದಿಗೆ ಮುಕ್ತಾಯಗೊಳ್ಳುತ್ತವೆ. ಸಪ್ತರಾತ್ರೋತ್ಸವ ಅಂಗವಾಗಿ ಇನ್ನೂ ಎರಡು ದಿನಗಳ ಕಾಲ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

  • 354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟ – ಮಂತ್ರಾಲಯ ರಾಜಬೀದಿಯಲ್ಲಿಂದು ಮಹಾರಥೋತ್ಸವ

    354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟ – ಮಂತ್ರಾಲಯ ರಾಜಬೀದಿಯಲ್ಲಿಂದು ಮಹಾರಥೋತ್ಸವ

    ರಾಯಚೂರು: ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟವಾದ ಉತ್ತರಾರಾಧನೆಗೆ ರಾಯರ ಮಠ ಸಿದ್ಧಗೊಂಡಿದೆ. ಮಠದ ರಾಜಬೀದಿಯಲ್ಲಿಂದು ಮಹಾರಥೋತ್ಸವ ನಡೆಯಲಿದೆ.

    ಕಲಿಯುಗದ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾದ ಮರುದಿನವನ್ನು ಮಂತ್ರಾಲಯದಲ್ಲಿ ಉತ್ತರಾರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆರಾಧನಾ ಮಹೋತ್ಸವದ ಕೊನೆಯ ಘಟ್ಟ ಉತ್ತರಾಧನೆ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಇಂದು ಮಹಾರಥೋತ್ಸವ ಜರುಗಲಿದೆ. ರಾಯರ ಉತ್ತರಾರಾಧನೆ ಹಿನ್ನೆಲೆ ಮಂತ್ರಾಲಯ ಮಠದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಇದನ್ನೂ ಓದಿ: ಮಂತ್ರಾಲಯ ಮಠದ ಗೋಶಾಲೆಯಲ್ಲಿ ಅಗ್ನಿ ಅವಘಡ – ಲಕ್ಷಾಂತರ ರೂ. ಮೌಲ್ಯದ ಮೇವು ಭಸ್ಮ

    ಈ ದಿನ ರಾಯರು ಪ್ರಹ್ಲಾದ ರಾಜರ ಉತ್ಸವಮೂರ್ತಿ ರೂಪದಿಂದ ಹೊರ ಪ್ರಾಕಾರದಲ್ಲಿ ಬಂದು ಭಕ್ತರಿಗೆ ರಾಜಬೀದಿಯಲ್ಲಿ ದರ್ಶನ ಕೊಡುತ್ತಾರೆ ಅನ್ನೋ ಪ್ರತೀತಿಯಿದೆ. ಹೈದ್ರಾಬಾದ್ ಮೂಲದ ಭಕ್ತರು ನೀಡಿರುವ ನವರತ್ನ ಕವಚವನ್ನ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಾಯರಿಗೆ ಇಂದು (ಆ.12) ಸಮರ್ಪಣೆ ಮಾಡಲಿದ್ದಾರೆ. ಮಹಾರಥೋತ್ಸವಕ್ಕೂ ಮುನ್ನ ರಾಮದೇವರು ಮತ್ತು ಎಲ್ಲಾ ಬೃಂದಾವನಗಳಿಗೂ ಗುಲಾಲ್ ಸಮರ್ಪಣೆ ಮಾಡುವ ಮೂಲಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಂಗಿನ ಹಬ್ಬ ವಸಂತೋತ್ಸವ ಆಚರಿಸುತ್ತಾರೆ. ಬಳಿಕ ಗುರುರಾಯರನ್ನ ಪ್ರಹ್ಲಾದ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ನಂತರ ಮಠದ ಮದ್ವದ್ವಾರ ಮೂಲಕ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯುತ್ತದೆ.

    ರಾಯರು ಪ್ರತಿನಿತ್ಯದಲ್ಲಿ ಅಂತರ್ಮುಖವಾಗಿ ಜಪತಪ ಮಾಡುತ್ತಿದ್ದರೆ ಉತ್ತರಾರಾಧನೆ ದಿನ ಬಹಿರ್ಮುಖವಾಗಿ ತಮ್ಮ ದೃಷ್ಟಿಯನ್ನ ಭಕ್ತರ ಕಡೆಗೆ ಹರಿಸುತ್ತಾರೆ. ಭಕ್ತರ ಬೇಡಿಕೆ ಈಡೇರಿಸುತ್ತಾರೆ ಅನ್ನೋ ನಂಬಿಕೆಯಿದೆ. ಹೀಗಾಗಿ ಉತ್ತರಾಧನೆ ದಿನ ರಾಯರ ಅನುಗ್ರಹಕ್ಕೆ ಪಾತ್ರರಾಗಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ರಾಯರ ಮಠಕ್ಕೆ ಆಗಮಿಸಿ ಮಹಾರಥೋತ್ಸವದಲ್ಲಿ ಭಾಗಿಯಾಗಿಯಾಗುತ್ತಾರೆ.

    ವಿವಿಧೆಡೆಯಿಂದ ಆಗಮಿಸಿರುವ ಭಜನಾ ಮಂಡಳಿಗಳು, ಕಲಾತಂಡಗಳು ರಾಜಬೀದಿಯಲ್ಲಿ ರಥೋತ್ಸವಕ್ಕೆ ಮೆರಗು ನೀಡಲು ಸಿದ್ಧವಾಗಿವೆ. ಹೆಲಿಕಾಪ್ಟರ್ ಮೂಲಕ ಪ್ರತೀವರ್ಷದಂತೆ ರಥಕ್ಕೆ ಪುಷ್ಪವೃಷ್ಟಿಯನ್ನ ಮಾಡಲಾಗುತ್ತದೆ. ಈ ಮೂಲಕ ರಾಯರ ಆರಾಧನೆಯ ಮುಖ್ಯ ಮೂರು ದಿನಗಳು ಮುಕ್ತಾಯವಾಗುತ್ತವೆ.ಇದನ್ನೂ ಓದಿ: ರಾಯರ ಮಧ್ಯಾರಾಧನೆಯಲ್ಲಿ ನಟ ಜಗ್ಗೇಶ್ ಭಾಗಿ

  • ರಾಯರ ಮಧ್ಯಾರಾಧನೆಯಲ್ಲಿ ನಟ ಜಗ್ಗೇಶ್ ಭಾಗಿ

    ರಾಯರ ಮಧ್ಯಾರಾಧನೆಯಲ್ಲಿ ನಟ ಜಗ್ಗೇಶ್ ಭಾಗಿ

    ರಾಯಚೂರು: ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Actor Jaggesh) ರಾಯರ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ, ರಾಯರ ದರ್ಶನ ಪಡೆದಿದ್ದಾರೆ. ಪ್ರತೀ ವರ್ಷ ಮಧ್ಯಾರಾಧನೆ ವೇಳೆ ಮಂತ್ರಾಲಯಕ್ಕೆ (Mantralaya) ಭೇಟಿ ನೀಡುವ ಜಗ್ಗೇಶ್ ಈ ಬಾರಿಯೂ ರಾಯರ ಆರಾಧನೆಯಲ್ಲಿ ಭಾಗವಹಿಸಿದ್ದಾರೆ.

    ರಾಯರ ದರ್ಶನ ಪಡೆದು ಬಳಿಕ ಮಂತ್ರಾಲಯದಲ್ಲಿ ಮಾತನಾಡಿದ ಅವರು, ಇಂದು ಸಂಜೆ ನಡೆಯಲಿರುವ ತೆಪ್ಪೋತ್ಸವ ನೋಡಿ ಹೋಗಬೇಕು ಎಂದು ಶ್ರೀಗಳು ಸೂಚಿಸಿದ್ದಾರೆ. ಪರಿಮಳ ತೀರ್ಥ ಪುಷ್ಕರಣಿ ನೂತನವಾಗಿ ನಿರ್ಮಾಣ ಮಾಡಲಾಗಿದೆ. ಪ್ರತಿ ವರ್ಷದಂತೆ ಮಧ್ಯಾರಾಧನೆಯಲ್ಲಿ ಭಾಗವಹಿಸಲು ಮಂತ್ರಾಲಯಕ್ಕೆ ಬಂದಿದ್ದೇನೆ ಖುಷಿಯಾಗುತ್ತಿದೆ. ಶ್ರೀಗಳ ನೇತೃತ್ವದಲ್ಲಿ ಅವರ ಪರಿಶ್ರಮದಿಂದ ಮಂತ್ರಾಲಯಕ್ಕೆ ಹೈಟೆಕ್ ಟಚ್ ಸಿಕ್ಕಿದೆ. ರಾಯರನ್ನು ವಿದೇಶಗಳಲ್ಲೂ ಭಕ್ತರು ಪೂಜಿಸುತ್ತಿದ್ದಾರೆ ಎಂದಿದ್ದಾರೆ.ಇದನ್ನೂ ಓದಿ: ಕೆಎನ್‌ ರಾಜಣ್ಣ ಏನು ತಪ್ಪು ಹೇಳಿದ್ದಾರೆ – ಪುತ್ರ ರಾಜೇಂದ್ರ ಪಶ್ನೆ

    ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಿ ಮಂತ್ರಾಲಯದ ಬಗ್ಗೆ ಹೇಳಿದ್ದೇನೆ. ರಾಯರ ಮಹಿಮೆ ಬಗ್ಗೆ ಪ್ರಧಾನಿಗೆ ಹೇಳುವ ಆಸೆಯಿತ್ತು. ಪ್ರಪಂಚದಿಂದ ಎಷ್ಟೋ ಬಳುವಳಿಗಳು ನಿಮಗೆ ಬರುತ್ತೆ, ರಾಯರ ಆಶೀರ್ವಾದವೂ ಇರಲಿ ಎಂದು ಶಾಲು, ಮಂತ್ರಾಕ್ಷತೆ ಕೊಟ್ಟಿದ್ದೇನೆ. ಇದಾಗಿ ಒಂದೇ ವಾರದಲ್ಲಿ ಪ್ರಧಾನಿ ಒಂದು ಕಾರ್ಯಕ್ರಮದಲ್ಲಿ ರಾಯರನ್ನ ಕಲಿಯುಗದ ಕಲ್ಪವೃಕ್ಷ ಕಾಮಧೇನುಕಿ ಜೈ ಅಂತ ಸ್ಮರಿಸಿದರು. ರಾಯರು ಮನಸ್ಸು ಮಾಡಿದ್ರೆ ಪ್ರಧಾನಿ ಮೋದಿಯನ್ನೂ ಮಂತ್ರಾಲಯಕ್ಕೆ ಕರೆಸುತ್ತಾರೆ. ರಾಯರ ಶಕ್ತಿಯ ಮುಂದೆ ನಾವೆಲ್ಲಾ ಏನು ಇಲ್ಲ ಎಂದರು.

    ಮಂತ್ರಾಲಯದಲ್ಲಿ ಏರೋಡ್ರಮ್ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ಸುಧಾಮೂರ್ತಿ ಹಾಗೂ ನಾನು ಅದರ ಬಗ್ಗೆ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಬೇಡಿಕೆಯನ್ನ ಸದನದಲ್ಲಿ ಇಟ್ಟಿದ್ದೇವೆ. ಮುಂದೊಂದು ದಿನ ಮಂತ್ರಾಲಯದಲ್ಲಿ ಏರೋಡ್ರಮ್ ಆಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಕಾಶ್ಮೀರದಲ್ಲಿ 11ನೇ ದಿನಕ್ಕೆ ಕಾಲಿಟ್ಟ ಸೇನಾ ಕಾರ್ಯಾಚರಣೆ – ಉಗ್ರರ ಗುಹೆಗಳು ಉಡೀಸ್‌

  • ಮಂತ್ರಾಲಯದಲ್ಲಿ ಅದ್ದೂರಿಯಾಗಿ ಜರುಗಿದ ಚಿನ್ನದ ರಥೋತ್ಸವ

    ಮಂತ್ರಾಲಯದಲ್ಲಿ ಅದ್ದೂರಿಯಾಗಿ ಜರುಗಿದ ಚಿನ್ನದ ರಥೋತ್ಸವ

    -ರಾಯರ ವೃಂದಾವನಕ್ಕೆ ಶ್ರೀಗಳಿಂದ ಮಹಾಪಂಚಾಮೃತ ಅಭಿಷೇಕ

    ರಾಯಚೂರು: ಮಂತ್ರಾಲಯ (Mantralaya) ರಾಯರ ಮಠದಲ್ಲಿ ಆರಾಧನಾ ಮಹೋತ್ಸವದ ಮುಖ್ಯ ಘಟ್ಟವಾದ ಮಧ್ಯಾರಾಧನೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಮಠದ ಪ್ರಾಕಾರದಲ್ಲಿ ಅದ್ದೂರಿಯಾಗಿ ಚಿನ್ನದ ರಥೋತ್ಸವ ಜರುಗಿತು.

    ತುಂಗಾ ತೀರನಿವಾಸಿ, ಭಕ್ತರ ಪಾಲಿನ ಕಲ್ಪತರು ಕಾಮಧೇನು, ಮಂತ್ರಾಕ್ಷತೆ ಮಹಿಮೆಯ ಮಹಾಪುರುಷ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ಕಳೆಗಟ್ಟಿದೆ. ಗುರುರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 353 ವರ್ಷಗಳು ಸಂದಿವೆ. ಶ್ರಾವಣ ಶುಕ್ಲ ಪಕ್ಷದ ಬಿದಿಗೆಯ ಮಂಗಳಕರವಾದ ಈ ದಿನವನ್ನ ಮಧ್ಯಾರಾಧನೆಯಾಗಿ ಆಚರಿಸಲಾಗುತ್ತಿದೆ.ಇದನ್ನೂ ಓದಿ: ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 354 ವರ್ಷ: ಮಂತ್ರಾಲಯದಲ್ಲಿ ಮಧ್ಯಾರಾಧನೆ ಸಂಭ್ರಮ

    ಮಧ್ಯಾರಾಧನೆಯ ಅಂಗವಾಗಿ ಮಠದ ಪ್ರಾಕಾರದಲ್ಲಿ ಚಿನ್ನದ ರಥೋತ್ಸವ ಅದ್ದೂರಿಯಾಗಿ ಜರುಗಿದೆ. ರಾಯರು ರಚಿಸಿದ ಪರಿಮಳ ಗ್ರಂಥ ಹಾಗೂ ಮೃತ್ತಿಕಾ ಬೃಂದಾವನವನ್ನಿಟ್ಟು ಮಠದ ಪ್ರಾಂಗಣದಲ್ಲಿ ಸ್ವರ್ಣ ರಥೋತ್ಸವ ನೆರವೇರಿಸಲಾಯಿತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ನಡೆದ ಚಿನ್ನದ ರಥೋತ್ಸವದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

    ಇದಕ್ಕೂ ಮುನ್ನ ಈ ದಿನ ವಿಶೇಷವಾಗಿ ಸ್ವತಃ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ರಾಯರ ವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕವನ್ನ ನೆರವೇರಿಸಿದರು. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಹಣ್ಣು, ಗೋಡಂಬಿ, ಒಣದ್ರಾಕ್ಷಿ ಸೇರಿ ವಿವಿಧ ಪದಾರ್ಥಗಳಿಂದ ಶ್ರೀಗಳು ವೃಂದಾವನದ ನಾಲ್ಕು ದಿಕ್ಕಿಗೂ ಅಭಿಷೇಕ ಮಾಡಿದರು. ಬಳಿಕ ಚಿನ್ನದ ಕವಚದೊಂದಿಗೆ ಅಲಂಕಾರ ಪೂಜೆ ನಡೆಯಿತು.

    ಇಂದಿಗೂ ರಾಯರು ವೃಂದಾವನದಲ್ಲಿ ತಮ್ಮ ಯೋಗ ಸಾಮರ್ಥ್ಯದಿಂದ ಸಶರೀರರಾಗಿದ್ದು, ಇಂದು ವಿಶೇಷವಾಗಿ ಭಕ್ತರನ್ನ ಅನುಗ್ರಹಿಸುತ್ತಾರೆ ಅನ್ನೋ ಪ್ರತೀತಿಯಿದೆ. ಈ ಹಿನ್ನೆಲೆ ಮಧ್ಯಾರಾಧನೆ ಎನ್ನುವುದು ಆರಾಧನಾ ಮಹೋತ್ಸವದಲ್ಲಿ ವಿಶೇಷವಾದದ್ದು. ಇನ್ನೂ ನೂತನವಾಗಿ ನಿರ್ಮಾಣವಾದ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ರಾತ್ರಿ ವೇಳೆ ತೆಪ್ಪೋತ್ಸವ ಜರುಗಲಿದೆ.

    ಇನ್ನೂ ನಾಳೆ ಉತ್ತರಾರಾಧನೆ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ. ಉತ್ತರಾರಾಧನೆಯೊಂದಿಗೆ ರಾಯರ ಆರಾಧನಾ ಮಹೋತ್ಸವದ ಮೂರು ದಿನಗಳ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.ಇದನ್ನೂ ಓದಿ: ಮಂತ್ರಾಲಯದಲ್ಲಿ ಪೂರ್ವಾರಾಧನೆ ಸಂಭ್ರಮ – ಸಂಜೆ ಗುರು ಅನುಗ್ರಹ ಪ್ರಶಸ್ತಿ ಪ್ರದಾನ

  • ಮಂತ್ರಾಲಯದಲ್ಲಿ ರಾಯರ 354ನೇ ಆರಾಧನಾ ಮಹೋತ್ಸವ – ಇಂದಿನಿಂದ 7 ದಿನ ಸಪ್ತರಾತ್ರೋತ್ಸವ

    ಮಂತ್ರಾಲಯದಲ್ಲಿ ರಾಯರ 354ನೇ ಆರಾಧನಾ ಮಹೋತ್ಸವ – ಇಂದಿನಿಂದ 7 ದಿನ ಸಪ್ತರಾತ್ರೋತ್ಸವ

    ರಾಯಚೂರು: ಇಂದಿನಿಂದ (ಆ.8) ಮಂತ್ರಾಲಯ (Mantralaya) ಸೇರಿದಂತೆ ರಾಯರ ಮಠಗಳಲ್ಲಿ ಗುರುರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಆರಂಭವಾಗಲಿದೆ. ಜೊತೆಗೆ 7 ದಿನಗಳ ಕಾಲ ಸಪ್ತರಾತ್ರೋತ್ಸವ ನಡೆಯಲಿದೆ.

    ಇಂದಿನಿಂದ ಗುರುರಾಘವೇಂದ್ರ ಸ್ವಾಮಿಯವರ (Guru Raghavendra Swamy) 354ನೇ ಆರಾಧನಾ ಮಹೋತ್ಸವ ಆರಂಭವಾಗಲಿದ್ದು, ಆ.8ರಿಂದ 14ರವರೆಗೆ ಏಳು ದಿನಗಳ ಕಾಲ ಸಪ್ತರಾತ್ರೋತ್ಸವ ನಡೆಯಲಿದೆ. ಇಂದು ಸಂಜೆ ಧ್ವಜಾರೋಹಣ ಮೂಲಕ ಸಪ್ತರಾತ್ರೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರು ಚಾಲನೆ ನೀಡಲಿದ್ದಾರೆ. ಗೋ, ಗಜ, ಅಶ್ವ, ಧಾನ್ಯ, ಲಕ್ಷ್ಮಿ ಪೂಜೆಯೊಂದಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಆ.10ಕ್ಕೆ ಪೂರ್ವಾರಾಧನೆ, 11ಕ್ಕೆ ಮಧ್ಯಾರಾಧನೆ, 12ಕ್ಕೆ ಉತ್ತರಾರಾಧನೆ ನಡೆಯಲಿದೆ.ಇದನ್ನೂ ಓದಿ: ʼಡೆತ್‌ನೋಟ್‌ʼ ನೋಡಿ ಡೆತ್‌ನೋಟ್‌ ಬರೆದು 14ರ ಬಾಲಕ ಆತ್ಮಹತ್ಯೆ!

    ತಿರುಮಲ ತಿರುಪತಿ ದೇವಸ್ಥಾನದಿಂದ ಇಂದು ಬರಲಿರುವ ಶ್ರೀನಿವಾಸ ದೇವರ ಶೇಷವಸ್ತ್ರ ರಾಯರ ಮೂಲಬೃಂದಾವನಕ್ಕೆ ಸಮರ್ಪಣೆ ಮಾಡಲಾಗುತ್ತದೆ. ಜೊತೆಗೆ ಮಠದ ಆವರಣದಲ್ಲಿ ನಿರ್ಮಾಣಗೊಂಡಿರುವ ಪುಷ್ಕರಣಿ ಆ.9ಕ್ಕೆ ಲೋಕಾರ್ಪಣೆಯಾಗಲಿದೆ. ಆ.10ರಂದು ಸಾಧಕರಿಗೆ ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆ.12ರಂದು ಬೆಳಿಗ್ಗೆ 10 ಗಂಟೆಗೆ ಶ್ರೀಮಠದ ಮುಂದಿನ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ.

    ಈ ಬಾರಿ ರಾಯರ ಮೂಲ ಬೃಂದಾವನಕ್ಕೆ ನವರತ್ನ ಕವಚ ಸಮರ್ಪಣೆ ಮಾಡಲಾಗುತ್ತಿದೆ. ಆರಾಧನಾ ಮಹೋತ್ಸವದ ಏಳು ದಿನಗಳ ಕಾಲ ಮಂತ್ರಾಲಯ ರಾಯರ ಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.ಇದನ್ನೂ ಓದಿ: ಬರ್ತ್‌ಡೇಗಾಗಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಹೋಟೆಲ್‌ಗೆ ಕರೆದೊಯ್ದು ಮೋಜು, ಮಸ್ತಿ – ವಾರ್ಡನ್, ಅಡುಗೆ ಕೆಲಸದಾಕೆಗೆ ನೋಟಿಸ್

  • ಚಂದ್ರಗ್ರಹಣ ಹಿನ್ನೆಲೆ – ರಾಯರ ವೃಂದಾವನಕ್ಕೆ ನಿರಂತರ ಜಲಾಭಿಷೇಕ

    ಚಂದ್ರಗ್ರಹಣ ಹಿನ್ನೆಲೆ – ರಾಯರ ವೃಂದಾವನಕ್ಕೆ ನಿರಂತರ ಜಲಾಭಿಷೇಕ

    – ರಾಯರ ದರ್ಶನಕ್ಕೆ ರಾತ್ರಿ 8:30ರ ವರೆಗೂ ಅವಕಾಶ

    ರಾಯಚೂರು: ರಾಹುಗ್ರಸ್ತ ಚಂದ್ರಗ್ರಹಣ (Lunar Eclipse) ಹಿನ್ನೆಲೆ ಮಂತ್ರಾಲಯದ (Mantralayam) ರಾಯರ (Guru Raghavendra Swamy) ವೃಂದಾವನಕ್ಕೆ ಗ್ರಹಣದ ಆರಂಭದಿಂದ ಮುಕ್ತಾಯದವರೆಗೂ ನಿರಂತರ ಜಲಾಭಿಷೇಕ ನಡೆಯಲಿದೆ. ಅಲ್ಲದೇ ಶಾಂತಿ ಹೋಮ ಕೂಡ ನಡೆಯಲಿದೆ.

    ಗ್ರಹಣ ಇರುವುದರಿಂದ ಭಕ್ತರ ಸೇವೆಗೆ ಒಂದಷ್ಟು ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಎಂದಿನಂತೆ ರಾಯರ ವೃಂದಾವನ ದರ್ಶನಕ್ಕೆ ರಾತ್ರಿವರೆಗೂ ಅವಕಾಶ ಇರಲಿದೆ. ಸಂಜೆ 4 ಗಂಟೆಯ ಬಳಿಕ ಪೂಜೆ ಹಾಗೂ ಸೇವೆಗಳನ್ನ ಬಂದ್ ಮಾಡಲಾಗುತ್ತಿದೆ. ಇದನ್ನೂ ಓದಿ: ಚಂದ್ರಗ್ರಹಣ ಎಫೆಕ್ಟ್ – ಮಂಗಳೂರಿನ ಕದ್ರಿ ದೇಗುಲದಲ್ಲಿ ಭಕ್ತಸಾಗರ

    ರಾತ್ರಿ ವೇಳೆ ನಡೆಯುತ್ತಿದ್ದ ಉತ್ಸವಗಳು, ಹರಕೆ ಸೇವೆಗಳನ್ನು ಮಧ್ಯಾಹ್ನವೇ ನೆರವೇರಿಸಲಾಗುತ್ತಿದೆ. ಚಿನ್ನದ ರಥ, ಬೆಳ್ಳಿ ರಥ, ಗಜ ವಾಹನೊತ್ಸವಗಳನ್ನು ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಳಿಸಲಾಗುತ್ತಿದೆ. ಉಳಿದಂತೆ ಭಕ್ತರಿಗೆ ರಾತ್ರಿ 8:30ರ ವರೆಗೂ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ 4 ಗಂಟೆ ಬಳಿಕ ತೀರ್ಥ ಪ್ರಸಾದ ಸೇವೆ ಇರುವುದಿಲ್ಲ. ಇನ್ನೂ ಗ್ರಹಣ ಕಾಲದಲ್ಲಿ ಶಾಂತಿ ಹೋಮ ಹಮ್ಮಿಕೊಳ್ಳಲಾಗಿದೆ. ಶಾಂತಿ ಹೋಮದಲ್ಲಿ ಭಕ್ತರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಭೇಟಿಯಾದ ನಿಖಿಲ್ ಕುಮಾರಸ್ವಾಮಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂತ್ರಾಲಯದ ಹೆಸರಲ್ಲಿ ನಕಲಿ ವೆಬ್‍ಸೈಟ್ – ಭಕ್ತರಿಂದ ಹಣ ವಸೂಲಿ ಮಾಡಿರುವ ಖದೀಮರು

    ಮಂತ್ರಾಲಯದ ಹೆಸರಲ್ಲಿ ನಕಲಿ ವೆಬ್‍ಸೈಟ್ – ಭಕ್ತರಿಂದ ಹಣ ವಸೂಲಿ ಮಾಡಿರುವ ಖದೀಮರು

    ರಾಯಚೂರು: ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಭಕ್ತರು ದೇಶ ಮಾತ್ರವಲ್ಲ ವಿದೇಶದಲ್ಲೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಖದೀಮರು ಮಠದ ಹೆಸರಿನಲ್ಲಿ ಆನ್‍ಲೈನ್ ಮೂಲಕ ಭಕ್ತರಿಂದ ಹಣ ವಸೂಲಿ ಮಾಡಿದ್ದಾರೆ. ಸಾಕಷ್ಟು ಜನ ಭಕ್ತರು ಸತ್ಯ ಅರಿಯದೇ ಕಾಣಿಕೆ ಅಂತಲೋ, ಭಕ್ತಿ ಸಮರ್ಪಣೆ ಅಂತಲೋ ದುಡ್ಡನ್ನು ಹಾಕಿ ಮೋಸ ಹೋಗಿದ್ದಾರೆ.

    ಮೊದಲ ಪ್ರಕರಣ
    ಕಲಿಯುಗದ ಕಾಮಧೇನು ಮಂತ್ರಾಲಯ ಶ್ರೀಗುರು ರಾಘವೇಂದ್ರ ಸ್ವಾಮಿ ಮಠದ ಹೆಸರು ದುರ್ಬಳಕೆ ಮಾಡಿಕೊಂಡು ಕಳೆದ ಎರಡು ವರ್ಷಗಳಿಂದ ವಿವಿಧ ಗುಂಪುಗಳು ಆನ್‍ಲೈನ್‍ನಲ್ಲಿ ಭಕ್ತರಿಂದ ಹಣ ವಸೂಲಿ ನಡೆಸಿವೆ. ಮಠದಲ್ಲಿ 25 ರೂಪಾಯಿಗೆ ಸಿಗುವ ಪರಿಮಳ ಪ್ರಸಾದದ ಒಂದು ಪ್ಯಾಕೆಟ್‍ನ್ನು ನೇರವಾಗಿ ಹೋಂ ಡೆಲಿವರಿ ಮಾಡುತ್ತೇವೆ ಎಂದು ಒಂದು ಪ್ಯಾಕೆಟ್‍ಗೆ 400 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಇದರಿಂದಲೇ ಭಕ್ತರಿಂದ ಲಕ್ಷಾಂತರ ರೂಪಾಯಿ ವಸೂಲಿಯಾಗಿದೆ. ಇದನ್ನೂ ಓದಿ: ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನ, ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು: ಬಸವರಾಜ ಹೊರಟ್ಟಿ 

    ಎರಡನೇ ಪ್ರಕರಣ
    ಮಂತ್ರಾಲಯದ ಸ್ಥಳೀಯ ಧಿರೇಂದ್ರ ಕೊರೊನಾ ಬಳಿಕ ಮಠದ ಸಿಬ್ಬಂದಿ, ಅರ್ಚಕರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡಿ ಎಂದು ಬ್ಯಾಂಕ್ ಅಕೌಂಟ್ ನಂಬರ್, ಗೂಗಲ್ ಪೇ ನಂಬರ್ ನೀಡಿ ಭಕ್ತರಿಂದ ಹಣ ವಸೂಲಿ ಮಾಡಿದ್ದಾನೆ.

    ಮೂರನೇ ಪ್ರಕರಣ
    ಮಂತ್ರಾಲಯದಲ್ಲಿನ ಯೋಜನೆಗೆ ಶ್ರೀಮಠದ ಭಕ್ತರು ಪ್ರಯೋಜಕತ್ವವನ್ನು ವಹಿಸಿಕೊಳ್ಳುವುದಕ್ಕೆ ಹಾಗೂ ದೇಣಿಗೆ ನೀಡುವಂತೆ ಕೋರಿ ‘ಮಾತೃಭೂಮಿ ಹಿಂದೂ ಸ್ಪಂದನೆ’ ಹೆಸರಿನ ವಾಟ್ಸಪ್ ಗ್ರೂಪ್‍ನಲ್ಲಿ ಹಣ ವಸೂಲಿ ನಡೆಸಲಾಗಿದೆ. ಈಗಾಗಲೇ ಪ್ರತ್ಯೇಕ ಮೂರು ಪ್ರಕರಣಗಳು ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಇಬ್ಬರು ಆರೋಪಿಗಳ ಬಂಧನವಾಗಿದೆ.

    ಮುಂದೆ ಯಾವುದೇ ಭಕ್ತರು ವಂಚಕರ ಬಲೆಗೆ ಬೀಳದೆ, ಕಾಣಿಕೆ ನೀಡುವವರು ನೇರವಾಗಿ ಮಠದ ಅಧಿಕೃತ ವೆಬ್‍ಸೈಟ್ ಮೂಲಕ ಅಥವಾ ನೇರವಾಗಿ ದೇಣಿಗೆ ನೀಡಬೇಕು. ಮೋಸ ಹೋದವರು ತಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲೇ ದೂರು ದಾಖಲಿಸಬೇಕು ಎಂದು ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ತಿಳಿಸಿದ್ದಾರೆ.

    ಭಕ್ತರು ವಂಚಕರ ಹಾವಳಿ ಹೆಚ್ಚಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ನಕಲಿ ವೆಬ್‍ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಠದ ಹೆಸರು ಬಳಸಿಕೊಂಡು ಹಣ ವಸೂಲಿಗೆ ನಿಂತಿರುವವರನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: 819 ಕೋಟಿ ವಂಚಿಸಿದ್ರಾ ಮಾಜಿ ಸಚಿವ..? – ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ್ ಗಂಭೀರ ಆರೋಪ

    ಕಳೆದ ಎರಡು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ವಿವಿಧ ಗುಂಪುಗಳು ರಾಯರ ಮಠದ ಹೆಸರಿನಲ್ಲಿ ವಸೂಲಿ ಮಾಡಿವೆ. ಕನಿಷ್ಠ ಈಗಲಾದ್ರೂ ಭಕ್ತರು ಎಚ್ಚೆತ್ತುಕೊಂಡು ಹಣ ವರ್ಗಾವಣೆ ಮಾಡಬೇಕಿದೆ. ಆಂಧ್ರಪ್ರದೇಶ ಹಾಗೂ ಕರ್ನಾಟಕ ಪೊಲೀಸರು ಖದೀಮರ ಗುಂಪುಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕಿದೆ.

    Live Tv