Tag: Gurtej Shetty

  • ವಿಷ್ಣುವರ್ಧನ್ ಸ್ಮಾರಕದಲ್ಲಿ ‘ರಾನಿ’ ಚಿತ್ರದ ಶೂಟಿಂಗ್ ಮುಕ್ತಾಯ

    ವಿಷ್ಣುವರ್ಧನ್ ಸ್ಮಾರಕದಲ್ಲಿ ‘ರಾನಿ’ ಚಿತ್ರದ ಶೂಟಿಂಗ್ ಮುಕ್ತಾಯ

    ಗುರುತೇಜ್ ಶೆಟ್ಟಿ (Gurtej Shetty) ನಿರ್ದೇಶನದ, ಕಿರಣ್ ರಾಜ್ (Kiran Raj) ನಾಯಕನಾಗಿ ನಟಿಸಿರುವ ‘ರಾನಿ’ (Rani) ಚಿತ್ರದ ಕೊನೆ ಹಂತದ ಚಿತ್ರಿಕರಣ ಮುಗಿಸಿದೆ.  ಮೈಸೂರಿನ ವಿಷ್ಣುವರ್ಧನ್ ಸ್ಮಾರಕದಲ್ಲಿ ರವಿಶಂಕರ್, ಮಠ ಗುರುಪ್ರಸಾದ್, ಯಶ್ ಶೆಟ್ಟಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರ್ ಅವರ ಕೊನೆಯ ಹತ್ತು ದಿನದ ಚಿತ್ರೀಕರಣ ಮಾಡಿ ಮುಗಿಸಿದೆ.

    ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ ಹೆಗ್ಡೆ ನಿರ್ಮಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಈಗಾಗಲೇ ಪೊಸ್ಟರ್, ಟೀಸರ್ ನಿಂದ ಚಿತ್ರ ಪ್ರೇಕ್ಷಕರಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿದೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು ರಾಧ್ಯ, ಸಮಿಕ್ಷಾ ಮತ್ತು ಅಪೂರ್ವ ಅಭಿನಯಿಸಿದ್ದಾರೆ.  ಮೈಕೋ ನಾಗರಾಜ್, ಉಗ್ರಂ ಮಂಜು, ಉಗ್ರಂ ರವಿ, ಸುಜಯ್ ಶಾಸ್ತ್ರಿ, ಗಿರೀಶ್ ಹೆಗ್ಡೆ, ಬಿ ಸುರೇಶ, ಶ್ರೀಧರ್, ಧರ್ಮೇಂದ್ರ ಆರಸ್, ಚೇತನ್ ದುರ್ಗ, ಅನಿಲ್ ಯಾದವ್, ಪ್ರಥ್ವಿ ರಾಜ್, ಅರ್ಜುನ್, ಕರಿ ಸುಬ್ಬು ಮುಂತಾದ ಹೆಸರಾಂತ ಕಲಾವಿದ ಚಿತ್ರದಲ್ಲಿ ಅಭಿನಯಿಸಿದ್ದಾರೆ.

     

    ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ, ಸತೀಶ್ ಕಲಾ ನಿರ್ದೇಶನ, ಉಮೇಶ ಸಂಕಲನ,  ಮಣಿಕಾಂತ್ ಕದ್ರಿ ಸಂಗೀತ ಹಾಗೂ ಪ್ರಮೋದ ಮರವಂತೆ ಗೀತರಚನೆ,  ವಿನೋದ್ ಸಾಹಸ ಧನಂಜಯ ಅವರ ನೃತ್ಯ ನಿರ್ದೇಶನವಿದೆ. “ರಾನಿ” ಗೆ ಸಚಿನ್ ಬಸ್ರೂರ್ ಹಿನ್ನಲೆ ಸಂಗೀತವಿದ್ದು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನೆಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟಿಸಲಿದೆ ಚಿತ್ರತಂಡ.

  • ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಟೀಸರ್

    ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಟೀಸರ್

    ಟೈಟಲ್ ಹಾಗೂ ಪೋಸ್ಟರ್ ನಿಂದ ಸಿನಿ ಪ್ರೇಕ್ಷರಲ್ಲಿ ಕುತೂಹಲ ಹುಟ್ಟಿಸಿದ ‘ರಾನಿ’ (Rani) ಸಿನಿಮಾದ ಟೀಸರ್ (Teaser) ನಾಯಕ ನಟ ಕಿರಣ್ ರಾಜ್ (Kiran Raj) ಹುಟ್ಟುಹಬ್ಬದ ದಿನ ಜುಲೈ 5 ರಂದು ಬಿಡುಗಡೆಯಾಗುತ್ತಿದೆ. ರಾನಿ  ಚಿತ್ರದ​ ನಾಯಕ ಕಿರಣ್ ರಾಜ್ ದುಬೈಗೆ ಹೋಗಿ 13 ಸಾವಿರ  ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿ ರಾನಿ ಚಿತ್ರದ ಟೈಟಲ್ ಅನಾವರಣಗೊಳಿಸಿದ್ದರು. ಅವರ ಈ ಸಾಹಸಕ್ಕೆ ಇಡೀ ಚಿತ್ರರಂಗವೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ನಂತರ ಬಿಡುಗಡೆಯಾದ ಪೋಸ್ಟರ್ ಚಿತ್ರದ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚಿಸಿತ್ತು.

    ಈ ಬಾರಿ ಗಟ್ಟಿ ಕಥೆಯೊಂದಿಗೆ ಆಕ್ಷನ್-ಕಮರ್ಷಿಯಲ್ ಸಿನಿಮಾ ಮಾಡಿದ್ದೇನೆ ಎನ್ನುವ ನಿರ್ದೇಶಕ ಗುರುತೇಜ್ ಶೆಟ್ಟಿ (Gurutej Shetty),  ಇದೊಂದು ಗ್ಯಾಂಗ್ ಸ್ಟರ್ ಸಿನಿಮಾ ಆದರೂ ಕುಟುಂಬ ಸಮೇತ ನೋಡುವಂತಹ ಭಾವನಾತ್ಮಕ ವಿಷಯಗಳು ಚಿತ್ರದಲ್ಲಿದೆ ಎನ್ನುತ್ತಾರೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕಿಡಿಕಾರಿದ ನಟ ರಾಜೀವ್ ಖಂಡೇಲ್ವಾಲ್

    ರವಿಶಂಕರ್ ಮೈಕೋ ನಾಗರಾಜ್ ,ಉಗ್ರಂ ರವಿ , ಉಗ್ರಂ ಮಂಜು, ಬಿ. ಸುರೇಶ , ಮಂಡ್ಯ ರಮೇಶ್, ಸುಜಯ್ ಶಾಸ್ತ್ರಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರು, ಗಿರೀಶ್ ಹೆಗ್ಡೆ ಹೀಗೆ ಮುಂತಾದ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

     

    ಸಮೀಕ್ಷಾ, ಅಪೂರ್ವ, ರಾದ್ಯಾ ಮೂವರು ಈ ಚಿತ್ರದ ನಾಯಕಿಯರು. ಮೂವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವೇಂದ್ರ ಬಿ.ಕೋಲಾರ್ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನಿರ್ದೆಶನ​​ವಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಹಿನ್ನಲೆ ಸಂಗೀತ ನೀಡುತ್ತಿದ್ದಾರೆ. ಸ್ಟಾರ್ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರವಿದು. ಇದೆ ವರ್ಷ ಡಿಸೆಂಬರ್ ನಲ್ಲಿ ಚಿತ್ರ ಬಿಡುಗಡೆ ಮಾಡುವ​ ಯೋಜನೆಯಲ್ಲಿದ್ದಾರೆ ನಿರ್ಮಾಪಕರು.

  • ‘ರಾನಿ’ ಚಿತ್ರದಲ್ಲಿ ಕಿರಣ್ ರಾಜ್ ಗೆ ಮಾಸ್ ಲುಕ್

    ‘ರಾನಿ’ ಚಿತ್ರದಲ್ಲಿ ಕಿರಣ್ ರಾಜ್ ಗೆ ಮಾಸ್ ಲುಕ್

    ಸ್ಟಾರ್ ಕ್ರಿಯೇಷನ್ಸ್ ಮೂಲಕ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ಅವರು ನಿರ್ಮಿಸಿರುವ,  ಗುರುತೇಜ್ ಶೆಟ್ಟಿ (Gurtej Shetty) ಕಥೆ  ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕಿರಣ್ ರಾಜ್ (Kiran Raj) ನಾಯಕರಾಗಿ ನಟಿಸುತ್ತಿರುವ ‘ರಾನಿ’ (Rani) ಚಿತ್ರದ ಪೋಸ್ಟರ್ (Poster) ಯಗಾದಿ ಹಬ್ಬಕ್ಕೆ ಬಿಡುಗಡೆಯಾಗಿದೆ. ನಾಯಕ ಕಿರಣ್ ರಾಜ್ ಮಾಸ್ ಲುಕ್ ನಲ್ಲಿ (Mass Look) ಕಾಣಿಸಿಕೊಂಡಿದ್ದಾರೆ.

    ಕಿರಣ್ ರಾಜ್ 13,000 ಅಡಿ ಎತ್ತರದಿಂದ ಜಿಗಿದು ಟೈಟಲ್ ಬಿಡುಗಡೆ ಮಾಡಿ ಚಿತ್ರರಂಗ ಹಾಗೂ ಪ್ರೇಕ್ಷಕರಿಂದ  ಪ್ರಶಂಸೆ ಪಡೆದುಕೊಂಡಿದ್ದರು.  ಈಗ ಬಿಡುಗಡೆಯಾಗಿರುವ ಮಾಸ್ ಲುಕ್ ಪೋಸ್ಟರ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಕಿರಣ್ ರಾಜ್ ಚಿತ್ರದಲ್ಲಿ ಭರ್ಜರಿ ಫೈಟ್ಸ್  ಮಾಡಿದಾರಂತೆ, ಚಿತ್ರದಲ್ಲಿ 6 ಸಾಹಸ ಸನ್ನಿವೇಶಗಳಿದೆ‌. ‘ರಾನಿ’ ಚಿತ್ರಕ್ಕಾಗಿ 7 ಸೆಟ್ ಗಳನ್ನು ಹಾಕಲಾಗಿದೆ‌.  5 ಸೆಟ್ ಗಳಲ್ಲಿ ಚಿತ್ರಿಕರಣ ಈಗಾಗಲೇ ಮುಗಿದಿದೆ. ಇದನ್ನೂ ಓದಿ: ಮಗಳ ನಟನೆ ಬಗ್ಗೆ ತಂದೆ-ತಾಯಿಗೆ ಖುಷಿ ಇದ್ಯಾ? ಅಸಲಿ ವಿಚಾರ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

    ಈಗಾಗಲೇ ಶೇಕಡಾ 60 ರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.   ರವಿಶಂಕರ್, ಮೈಕೋ ನಾಗರಾಜ್, ನಾಗತಿ ಹಳ್ಳಿ ಚಂದ್ರಶೇಖರ್, ಬಿ ಸುರೇಶ, ಉಗ್ರಂ ಮಂಜು, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್ ಹೆಗ್ಡೆ, ಪೃಥ್ವಿರಾಜ್‌, ಯಶ್ ಶೆಟ್ಟಿ, ಉಮೇಶ್, ಸುಜಯ್ ಶಾಸ್ತ್ರಿ, ಲಕ್ಷ್ಮಿ ಸಿದ್ದಯ್ಯ, ಸಂದೀಪ್ ಮಲಾನಿ, ಅನಿಲ್, ಧರ್ಮೆಂದ್ರ ಆರಸ್, ಮನಮೋಹನ್ ರೈ ಮುಂತಾದವರ ತಾರಾಬಳಗ ಚಿತ್ರಕ್ಕಿದೆ‌.

     ‘ಸಿಂಗಾರ ಸಿರಿಯೆ’ ಹಾಡು ಬರೆದಿರುವ ಪ್ರಮೋದ್ ಮರವಂತೆ ಈ ಚಿತ್ರದ ನಾಲ್ಕು ಹಾಡುಗಳನ್ನು ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.  ಸೂಕ್ಷ್ಮ ಕಥೆಯುಳ್ಳ,   ಪಕ್ಕ ಆಕ್ಷನ್ ಚಿತ್ರ ಇದಾಗಿದ್ದು, ಎಲ್ಲಾ ರಾಜ್ಯದಲ್ಲೂ ಕನ್ನಡದಲ್ಲೇ ಬಿಡುಗಡೆ ಯಾಗಲಿದೆ.  ಡಿಸೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಮುಂದಿನ ದಿನಗಳಲ್ಲಿ ನಾಯಕಿಯರು ಯಾರು ಎಂಬುದನ್ನು  ತಿಳಿಸುತ್ತೇವೆ ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ.