Tag: gurgaon. Flood

  • ಒಂದೇ ಮಳೆಗೆ ರಸ್ತೆಯಲ್ಲೇ ನಿಂತ ನೀರು

    ಒಂದೇ ಮಳೆಗೆ ರಸ್ತೆಯಲ್ಲೇ ನಿಂತ ನೀರು

    ನವದೆಹಲಿ: ಇಂದು ಬೆಳಗಿನ ಜಾವ ಸುರಿದ ಮಳೆಗೆ ನವದೆಹಲಿ, ಗುರಗಾಂವ್ ಸೇರಿದಂತೆ ಹಲವೆಡೆ ನೀರು ನಿಂತಿದ್ದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.

    ಇಂದು ಬೆಳಗಿನ ಜಾವ 2 ಗಂಟೆಗೆ ಮಳೆ ಪ್ರಾರಂಭವಾಗಿದ್ದು, 4 ರವರೆಗೆ ಸುರಿದಿದೆ. ಎರಡು ಗಂಟೆ ಸಾಧಾರಣವಾಗಿ ಸುರಿದಿದ್ದ ಮಳೆ ಬೆಳಗ್ಗೆ 8 ಗಂಟೆಗೆ ಜೋರಾಗಿ ಬೀಳಲಾರಂಭಿಸಿತು. ನಗರದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ ಎಂದು ರಾಷ್ಟ್ರ ರಾಜಧಾನಿ ಪ್ರದೇಶದ ಉಪನಿರ್ದೇಶಕ(Deputy Director National Capital Region) ಎಆರ್ ಎಸ್ ಸಂಗ್ವಾನ್ ತಿಳಿಸಿದ್ದಾರೆ.

    ಭಾರೀ ಮಳೆಯಾಗಿದ್ದರಿಂದ ದೆಹಲಿ-ಜೈಪುರ-ಮುಂಬೈ ಹೆದ್ದಾರಿಯಲ್ಲಿ ನೀರು ಹರಿಯುತ್ತಿದ್ದು, ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತಿವೆ. ಗುರುಗ್ರಾಮ ಹಲವು ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಟ್ರಾಫಿಕ್ ಉಂಟಾಗಿದೆ. ಆದಷ್ಟು ಬೇಗ ಟ್ರಾಫಿಕ್ ಕ್ಲೀಯರ್ ಮಾಡಲಾಗುವುದು ಎಂದು ಉಪ ಪೊಲೀಸ್ ಕಮೀಷನರ್ ಹೀರಾ ಸಿಂಗ್ ಸ್ಪಷ್ಟಪಡಿಸಿದ್ದಾರೆ.

    ಮುನ್ನೆಚ್ಚರಿಕೆಯ ಕ್ರಮವಾಗಿ ದೆಹಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದ್ರಲೋಕ್ ಚೌಕ ಮತ್ತು ಝಾಕಿರ್ ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಂಡಿದ್ದು, ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕೆಂದು ಎಂದು ದೆಹಲಿ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳೀಯರು ತಮ್ಮ ಬಡವಾಣೆಗಳಲ್ಲಿ ನೀರು ನಿಂತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv