Tag: Gurdwara

  • ಗುರುದ್ವಾರದ ಕರಸೇವಾ ಮುಖ್ಯಸ್ಥನ ಹತ್ಯೆ ಪ್ರಕರಣ- ಪ್ರಮುಖ ಆರೋಪಿ ಎನ್‍ಕೌಂಟರ್‌ಗೆ ಬಲಿ

    ಗುರುದ್ವಾರದ ಕರಸೇವಾ ಮುಖ್ಯಸ್ಥನ ಹತ್ಯೆ ಪ್ರಕರಣ- ಪ್ರಮುಖ ಆರೋಪಿ ಎನ್‍ಕೌಂಟರ್‌ಗೆ ಬಲಿ

    ಡೆಹ್ರಾಡೂನ್: ನಾನಕಮಟ್ಟ ಗುರುದ್ವಾರದ (Gurdwara) ಕರಸೇವಾ ಮುಖ್ಯಸ್ಥ ಬಾಬಾ ತಾರ್ಸೆಮ್ ಸಿಂಗ್ (Karseva chief Baba Tarsem Singh) ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಉತ್ತರಾಖಂಡ ವಿಶೇಷ ಕಾರ್ಯಪಡೆ (Uttarakhand STF) ಎನ್‍ಕೌಂಟರ್‌ನಲ್ಲಿ ಹತ್ಯೆಗೈದಿದೆ.

    ಅಮರ್‌ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಎಂಬಾತ ಪೊಲೀಸರ (Haridwar Police) ಗುಂಡಿಗೆ ಬಲಿಯಾದ ದುಷ್ಕರ್ಮಿ. ಹತ್ಯೆಗೀಡಾದ ಆರೋಪಿಯ ವಿರುದ್ಧ 16ಕ್ಕೂ ಹೆಚ್ಚು ಪ್ರಕರಣಗಳಿದ್ದು, ಈತನ ತಲೆಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಆತನ ಸಹಚರ ಪರಾರಿಯಾಗಿದ್ದಾನೆ ಎಂದು ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಭಿನವ್ ಕುಮಾರ್ ತಿಳಿಸಿದ್ದಾರೆ.

    ಇತ್ತೀಚೆಗೆ ಉಧಮ್ ಸಿಂಗ್ ನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ಅಮರ್‌ಜಿತ್ ಸಿಂಗ್ ಮತ್ತು ಆತನ ಸಹಚರ ಸರಬ್‍ಜಿತ್ ಸಿಂಗ್ ಪತ್ತೆಗೆ ತಲಾ 50 ಸಾವಿರ ರೂ. ನಿಂದ 1 ಲಕ್ಷ ರೂ.ಗಳಿಗೆ ಬಹುಮಾನ ಮೊತ್ತವನ್ನು ಹೆಚ್ಚಿಸಿದ್ದರು.

    ಪ್ರಕರಣದಲ್ಲಿ ಹಣ ಒದಗಿಸುವ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ, ಮೂವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಾಬಾ ಹತ್ಯೆಯನ್ನು ಸವಾಲಾಗಿ ತೆಗೆದುಕೊಂಡಿದ್ದು, ಎಸ್‍ಟಿಎಫ್ ಮತ್ತು ಪೊಲೀಸರು ಹಂತಕರಿಗಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದಾರೆ. ಉತ್ತರಾಖಂಡದಲ್ಲಿ ಅಪರಾಧಿಗಳು ಘೋರ ಅಪರಾಧಗಳನ್ನು ಎಸಗಿದರೆ ಅವರನ್ನು ಪೊಲೀಸರು ಕಟ್ಟುನಿಟ್ಟಾಗಿ ನಿಭಾಯಿಸುತ್ತಾರೆ ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.

    ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಉತ್ತರಾಖಂಡ ಎಸ್‍ಟಿಎಫ್ ಮತ್ತು ಹರಿದ್ವಾರ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.

    ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಮಾರ್ಚ್ 28 ರಂದು ಉಧಮ್ ಸಿಂಗ್ ನಗರದ ನಾನಕಮಟ್ಟಾ ಗುರುದ್ವಾರದಲ್ಲಿ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.

  • ಗುರುದ್ವಾರದ ಮಾಜಿ ಗ್ರಂಥಿ ಮೇಲೆ ಹಲ್ಲೆಗೈದು, ಕೂದಲು ಕಟ್ ಮಾಡಿದ ಕಿಡಿಗೇಡಿಗಳು

    ಗುರುದ್ವಾರದ ಮಾಜಿ ಗ್ರಂಥಿ ಮೇಲೆ ಹಲ್ಲೆಗೈದು, ಕೂದಲು ಕಟ್ ಮಾಡಿದ ಕಿಡಿಗೇಡಿಗಳು

    ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಗುರುದ್ವಾರದ ಮಾಜಿ ಗ್ರಂಥಿ ಮೇಲೆ ಅಪರಿಚಿತ ದುಷ್ಕರ್ಮಿಗಳು ಥಳಿಸಿ ಅವರ ಕೂದಲನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು.

    ‘ಗ್ರಂಥಿ’ ಎಂದರೆ ಗುರುದ್ವಾರವೊಂದರಲ್ಲಿ ಸಿಖ್ಖರ ಪವಿತ್ರ ಗ್ರಂಥ ‘ಶ್ರೀ ಗುರು ಗ್ರಂಥ ಸಾಹಿಬ್’ನ ವಿಧ್ಯುಕ್ತ ಓದುವವರು. ಗುರುವಾರ ರಾತ್ರಿ ಗುರುಬಕ್ಷ್ ಸಿಂಗ್ ಮೋಟಾರ್ ಸೈಕಲ್‍ನಲ್ಲಿ ಅಲವಾಡ ಗ್ರಾಮಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ಕೊಟ್ಟರು. ಇದನ್ನೂ ಓದಿ: ಬ್ಲ್ಯಾಕ್ ಏಲಿಯನ್‍ನಂತೆ ಬದಲಾದ ಇವನನ್ನು ನೋಡಿದವರು ಕೆಲಸವನ್ನೆ ಕೊಡುತ್ತಿಲ್ಲ – ಓದಿ ವಿಚಿತ್ರ ಕಥೆ 

    ನಡೆದಿದ್ದೇನು?
    ಸಹಾಯ ಕೇಳುವ ನೆಪದಲ್ಲಿ ಆರೋಪಿಗಳು ಗುರುಬಕ್ಷ್ ಸಿಂಗ್ ಅವರನ್ನು ತಡೆದಿದ್ದಾರೆ. ಈ ವೇಳೆ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದಾರೆ. ನಂತರ ಆರೋಪಿಗಳು ಗುರುಬಕ್ಷ್ ಸಿಂಗ್ ಅವರನ್ನು ಥಳಿಸಿ ಕೂದಲು ಕತ್ತರಿಸಿದ್ದಾರೆ.

    ಅಲ್ವಾರ್‌ನ ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವನಿ ಗೌತಮ್ ಅವರು ಈ ಕುರಿತು ಮಾತನಾಡಿದ್ದು, ಅಲವಾಡ ಗ್ರಾಮದಲ್ಲಿ ಸಿಖ್ಖರು ಮತ್ತು ಮಿಯೋ ಮುಸ್ಲಿಮರ ನಡುವಿನ ಹಳೆ ದ್ವೇಷದ ಕಾರಣದಿಂದ ಈ ಕೃತ್ಯ ನಡೆದಿದೆ. ಪ್ರೇಮ ಸಂಬಂಧಗಳ ಆರೋಪದ ಮೇಲೆ ಸಿಂಗ್ ಅವರನ್ನು ಗುರಿಯಾಗಿಸಲಾಗಿದೆ ಎಂದು ತೋರುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಯಡಿಯೂರಪ್ಪಗೆ ಬಹಳ ವಯಸ್ಸೇನು ಆಗಿಲ್ಲ – ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದಾರೆ: ಸುಧಾಕರ್ 

    ಈ ಕುರಿತು ರಾಮಗಢ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಕಾಬೂಲ್ ಗುರುದ್ವಾರ ದಾಳಿ: 3 ಗಂಟೆಗಳ ಕಾಲ ದೇವಾಲಯ ರಕ್ಷಿಸಲು ಹೋರಾಡಿದ ತಾಲಿಬಾನ್

    ಕಾಬೂಲ್ ಗುರುದ್ವಾರ ದಾಳಿ: 3 ಗಂಟೆಗಳ ಕಾಲ ದೇವಾಲಯ ರಕ್ಷಿಸಲು ಹೋರಾಡಿದ ತಾಲಿಬಾನ್

    ಕಾಬೂಲ್: ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ(ISKP) ಕಾಬೂಲ್‍ನ ಗುರುದ್ವಾರವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಪ್ರಯತ್ನಿಸಿದೆ. ಈ ವೇಳೆ ತಾಲಿಬಾನ್ ಯೋಧರು ಅವರ ಜೊತೆ 3 ಗಂಟೆಗಳ ಕಾಲ ಹೋರಾಡಿದ್ದಾರೆ.

    ನಮ್ಮ ಪ್ರವಾದಿಯನ್ನು ಅವಮಾನಿಸಿದ ಭಾರತೀಯ ರಾಜಕಾರಣಿಗಳಿಗೆ ಪ್ರತಿಕ್ರಿಯೆ ಎಂದು ಎಎಸ್‍ಕೆಪಿ ಹೇಳಿಕೊಂಡು ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡುತ್ತಿದೆ. ಈ ವೇಳೆ ಕಾಬೂಲ್‍ನಲ್ಲಿರುವ ಗುರುದ್ವಾರದ ಮೇಲೆ ಎಎಸ್‍ಕೆಪಿ ದಾಳಿ ಮಾಡಲು ಬಂದಿದ್ದು, ಅವರ ಜೊತೆ ತಾಲಿಬಾನ್ ಯೋಧರು ಮೂರು ಗಂಟೆಗಳ ಕಾಲ ದೇವಾಲಯವನ್ನು ರಕ್ಷಿಸಲು ಹೋರಾಡಿದ್ದಾರೆ. ಆದರೆ ಈ ವೇಳೆ ಉಗ್ರರು ಬಳಸಿದ ಸ್ಫೋಟಕಗಳಿಂದ ಯೋಧರಿಗೆ ಗಂಭೀರವಾಗಿ ಗಾಯವಾಗಿದೆ. ಇದನ್ನೂ ಓದಿ: ಅಗ್ನಿಪಥ್ ಪ್ರತಿಭಟನೆಗಳ ನಡುವೆ, ಅಗ್ನಿವೀರರಿಗೆ ಆನಂದ್ ಮಹೀಂದ್ರಾ ಕೊಟ್ರು ಬಿಗ್ ಆಫರ್ 

    ಈ ದಾಳಿಗೆ ಇಂಗಿಮಾಸಿ ಅಬು ಮೊಹಮ್ಮದ್ ಅಲ್-ತಾಜಿಕಿ ನೇತೃತ್ವ ವಹಿಸಿದೆ ಎಂದು ತಿಳಿದುಬಂದಿದೆ. ದೇವಾಲಯವನ್ನು ರಕ್ಷಣೆಗೆ ಮಧ್ಯಪ್ರವೇಶಿಸಲು ಯತ್ನಿಸಿದ ತಾಲಿಬಾನ್ ಯೋಧರೊಂದಿಗೆ ಉಗ್ರಗಾಮಿಗಳು ಮೂರು ಗಂಟೆಗಳಿಗೂ ಹೆಚ್ಚು ಕಾಲ ಹೋರಾಡಿದರು. ನಾಲ್ಕು ಸ್ಫೋಟಕ ಸಾಧನಗಳು ಮತ್ತು ಕಾರ್ ಬಾಂಬ್‍ಗಳನ್ನು ಬಳಸಿ ಯೋಧರಿಗೆ ಹಾನಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಭಯೋತ್ಪಾದಕ ಗುಂಪು ಕಾಬೂಲ್‍ನಲ್ಲಿ ಹಿಂದೂ ಮತ್ತು ಸಿಖ್ ದೇವಾಲಯಕ್ಕೆ ನುಗ್ಗಿ ಅಲ್ಲಿರುವ ಕಾವಲುಗಾರನನ್ನು ಕೊಲೆ ಮಾಡುತ್ತಿದೆ. ನಂತರ ದೇವಾಲಯದ ಒಳಗಿರುವ ಭಕ್ತರ ಮೇಲೆ ತನ್ನ ಮೆಷಿನ್ ಗನ್ ಮತ್ತು ಹ್ಯಾಂಡ್ ಗ್ರೆನೇಡ್‍ಗಳಿಂದ ಗುಂಡು ಹಾರಿಸಿ ಸಾಯಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಆತ್ಮಹತ್ಯೆಗೆ ಶರಣಾದ ಬೆಂಗಳೂರಿಗೆ ಸಬ್‍ ಇನ್ಸ್‌ಪೆಕ್ಟರ್

    ಶನಿವಾರ ಕಾಬೂಲ್‍ನ ಬಾಗ್-ಎ ಬಾಲಾ ಪಕ್ಕದಲ್ಲಿದ್ದ ಗುರುದ್ವಾರ ಪರ್ವಾನ್‍ನಲ್ಲಿ ಹಲವಾರು ಸ್ಫೋಟಗಳನ್ನು ಸಂಗ್ರಹಿಸಲಾಗಿತ್ತು. ಆದರೆ ಅಫ್ಘಾನ್ ಭದ್ರತಾ ಸಿಬ್ಬಂದಿ ಸ್ಫೋಟಕ ತುಂಬಿದ ವಾಹನವನ್ನು ತಡೆದು ನಿಲ್ಲಿಸುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.

    Live Tv

  • ಕಾಬೂಲ್‍ನ ಗುರುದ್ವಾರದ ಮೇಲೆ ಉಗ್ರರ ದಾಳಿ- 11 ಮಂದಿ ಸಾವು

    ಕಾಬೂಲ್‍ನ ಗುರುದ್ವಾರದ ಮೇಲೆ ಉಗ್ರರ ದಾಳಿ- 11 ಮಂದಿ ಸಾವು

    – 16ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

    ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನಲ್ಲಿ ಉಗ್ರರು ಬುಧವಾರ ಗುರುದ್ವಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 11 ಭಕ್ತರು ಸಾವನ್ನಪ್ಪಿದ್ದು, 16ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಸಿಖ್ ಸಮುದಾಯದ ನೂರಾರು ಜನರು ಪ್ರಾರ್ಥನೆ ಸಲ್ಲಿಸಲು ಬೆಳಗ್ಗೆ 7.30ರ ಸುಮಾರಿಗೆ ಕಾಬೂಲ್‍ನ ಗುರುದ್ವಾರಕ್ಕೆ ಆಗಮಿಸಿದ್ದರು. ಈ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಪರಿಣಾಮ ಸ್ಫೋಟದಲ್ಲಿ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ. ಈ ಬೆನ್ನಲ್ಲೇ ಭದ್ರತಾ ಪಡೆಯು ಗುರುದ್ವಾರವನ್ನು ಮುತ್ತಿಗೆ ಹಾಕಿ ಪ್ರತೀಕಾರ ತೀರಿಸಿಕೊಂಡಿದೆ.

    ದಾಳಿಯಲ್ಲಿ ಗಾಯಗೊಂಡ 16ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಈವರೆಗೂ ಯಾವುದೇ ಭಯೋತ್ಪಾದಕ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಅಫ್ಘಾನಿಸ್ತಾನದಲ್ಲಿ ಸುಮಾರು 300 ಸಿಖ್ ಕುಟುಂಬಗಳಿವೆ. ಅದರಲ್ಲೂ ಕಾಬೂಲ್ ಮತ್ತು ಜಲಾಲಾಬಾದ್‍ನಲ್ಲಿ ಸಿಖ್ ಸಮೂದಾಯದ ಜನರು ಹೆಚ್ಚಾಗಿದ್ದಾರೆ. ಈ ಎರಡು ನಗರಗಳಲ್ಲಿ ಗುರುದ್ವಾರಗಳಿವೆ.

    ಈ ಕುರಿತು ಟ್ವೀಟ್ ಮಾಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಈ ದಾಳಿಗೆ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ. ನಾವು ದಾಳಿ ಮಾಡಲಿಲ್ಲ ಎಂದು ತಿಳಿಸಿದ್ದಾನೆ.

    2018ರಲ್ಲಿ ಐಸಿಸ್ ದಾಳಿ:
    ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತ ಸಿಖ್ಖರು ಮತ್ತು ಹಿಂದೂಗಳ ಧಾರ್ಮಿಕ ಸ್ಥಳಗಳ ಮೇಲೆ ಆಗಾಗ್ಗೆ ದಾಳಿಗಳು ನಡೆಯುತ್ತಲೇ ಇವೆ. ಇದಕ್ಕೂ ಮುನ್ನ 2018ರಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರನ್ನು ಭೇಟಿಯಾಗಲು ಹೊರಟಿದ್ದ ಹಿಂದೂಗಳು ಮತ್ತು ಸಿಖ್ಖರ ಬೆಂಗಾವಲು ಮೇಲೆ ಆತ್ಮಾಹುತಿ ದಾಳಿ ನಡೆದಿತ್ತು. ಈ ವೇಳೆ 19 ಸಿಖ್ಖರು ಮತ್ತು ಹಿಂದೂಗಳು ಮೃತಪಟ್ಟಿದ್ದರು. ಈ ದಾಳಿ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಹೊತ್ತುಕೊಂಡಿತ್ತು. ದಾಳಿಯಿಂದಾಗಿ ಸಿಖ್ ಮತ್ತು ಹಿಂದೂ ಸಮುದಾಯಗಳು ಭಯಭೀತರಾಗಿದ್ದಾರೆ. ಹೆಚ್ಚಿನ ಸಂಖ್ಯೆಯ ಸಿಖ್ಖರು ಮತ್ತು ಹಿಂದೂಗಳು ದೇಶವನ್ನು ತೊರೆಯಲು ನಿರ್ಧರಿಸಿದ್ದರು. ಮೂರು ವರ್ಷಗಳಲ್ಲಿ ಅನೇಕ ಸಂತ್ರಸ್ತರು ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.