Tag: Guntur

  • ಬಾಹುಬಲಿ ಸಿನಿಮಾ ನೋಡುತ್ತಲೇ ಆಪರೇಷನ್ ಮಾಡಿಸಿಕೊಂಡ ಯುವತಿ

    ಬಾಹುಬಲಿ ಸಿನಿಮಾ ನೋಡುತ್ತಲೇ ಆಪರೇಷನ್ ಮಾಡಿಸಿಕೊಂಡ ಯುವತಿ

    ಹೈದರಾಬಾದ್: ಲ್ಯಾಪ್‍ಟಾಪ್‍ನಲ್ಲಿ ಬಾಹುಬಲಿ ಸಿನಿಮಾವನ್ನು ನೋಡುತ್ತಲೇ ಬ್ರೇನ್ ಆಪರೇಷನ್ ಮಾಡಿಸಿಕೊಂಡಿರುವ ಅಪರೂಪದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

    ಆಪರೇಷನ್‍ಗೆ ಒಳಗಾಗಿರುವ ಯುವತಿಯನ್ನು ವಿನಯಕುಮಾರಿ ಎಂದು ಗುರುತಿಸಲಾಗಿದೆ. ಈಕೆ ಇತ್ತೀಚಿಗೆ ಮೂರ್ಛೆ ರೋಗದಿಂದ ಬಳಲುತ್ತಿದ್ದಳು. ಎಂಆರ್‍ಐ ಸ್ಕ್ಯಾನ್ ಮಾಡಿಸಿದಾಗ ತಲೆಯಲ್ಲಿ ದುರ್ಮಾಂಸ ಬೆಳೆದಿರೋದು ಗೊತ್ತಾಗಿತ್ತು. ಇದರಿಂದ ಸರ್ಜರಿ ಮಾಡಲು ವೈದ್ಯರು ಸೂಚಿಸಿದ್ದರು. ಇದರಂತೆ ಇಂಟ್ರಾ ಆಪರೇಟಿಂಗ್ ನ್ಯಾವಿಗೇಷನ್ ವಿಧಾನದ ಮೂಲಕ ಆಪರೇಷನ್ ಕೈಗೊಂಡ ವೈದ್ಯರು ಯುವತಿಗೆ ಇಷ್ಟವಾದ ಬಾಹುಬಲಿ ಸಿನಿಮಾವನ್ನು ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೇ ಆಪರೇಷನ್ ವೇಳೆ ಯುವತಿ ವೈದ್ಯರ ಜೊತೆ ನಿರಂತರವಾಗಿ ಮಾತನಾಡುತ್ತಿದ್ದಳು ಎಂದು ತಿಳಿದು ಬಂದಿದೆ.

    ಒಟ್ಟಾರೆ ಐವರು ತಜ್ಞ ವೈದ್ಯರ ತಂಡ ಸುಮಾರು ಒಂದೂವರೆ ಗಂಟೆಗಳ ಕಾಲ ಸರ್ಜರಿಯನ್ನು ನಡೆಸಿ ದುರ್ಮಾಂಸವನ್ನು ತೆಗೆದುಹಾಕಿದ್ದಾರೆ. ಆಪರೇಷನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಯುವತಿ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

  • ತನಗೆ ಸಿಗದವನು ಬೇರೊಬ್ಬಳಿಗೂ ಸಿಗಬಾರದೆಂದು ಆ್ಯಸಿಡ್ ಎರಚಿದ್ಳು!

    ತನಗೆ ಸಿಗದವನು ಬೇರೊಬ್ಬಳಿಗೂ ಸಿಗಬಾರದೆಂದು ಆ್ಯಸಿಡ್ ಎರಚಿದ್ಳು!

    ಹೈದ್ರಾಬಾದ: ಗುಂಟೂರು ಜಿಲ್ಲೆಯ ವೆನಿಗ್ಲಾಂಡಾದಲ್ಲಿ ಪ್ರಿಯತಮೆಯೊಬ್ಬಳು ಆಕೆಯ ಮಾಜಿ ಪ್ರೇಮಿ ಮೇಲೆ ಆ್ಯಸಿಡ್ ಎರಚಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

    ಗುಂಟೂರು ಜಿಲ್ಲೆಯ ತಡಿಕೊಂಡ ಪಮುಲಪಡು ಗ್ರಾಮದ ಇಲಿಯಾಸ್ ಮತ್ತು ವೆನಿಗ್ಲಾಂಡದ ಹಿಮಾಬಿಂದು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರು. ಬಿಂದು ಖಾಸಗಿ ಕಾಲೇಜಿನಲ್ಲಿ ಫಾರ್ಮಾಸಿ ಓದುತ್ತಿದ್ದರು. ಕಾಲೇಜು ಪದವಿ ದಿನಗಳಿಂದಲೂ ಇಲಿಯಾಸ್ ಮತ್ತು ಬಿಂದು ಸ್ನೇಹಿತರಾಗಿದ್ದರು.

    ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಬಾಳುಕೊಟ್ಟಿತ್ತು ರಾಂಗ್ ನಂಬರ್!

    ಇದ್ದಕ್ಕಿದ್ದಂತೆ ಇವರ ಪ್ರೇಮ ಸಂಬಂಧವೂ ಮುರಿದು ಬಿದ್ದಿತ್ತು. ಮಂಗಳವಾರ ಇಲಿಯಾಸ್ ಮತ್ತೊಂದು ಹುಡುಗಿಯನ್ನು ವಿವಾಹವಾಗಿದ್ದಾನೆ. ಇದರಿಂದ ಅವಮಾನವಾದ ಬಿಂದು ಅದಕ್ಕಾಗಿ ಪ್ರತೀಕಾರ ತೀರಿಸಲು ಅದಕ್ಕಾಗಿ ಇಲಿಯಾಸ್‍ನ್ನು ಭೇಟಿಯಾಗಲು ಕರೆದು, ಅವನ ಮೇಲೆ ಆ್ಯಸಿಡ್ ಎರಚಿದ್ದಾಳೆ. ತೀವ್ರವಾಗಿ ಗಾಯಗೊಂಡ ಇಲಿಯಾಸ್ ಗುಂಟೂರು ಜನರಲ್ ಸರ್ಕಾರಿ ಆಸ್ಪತ್ರೆಯಲ್ಲಿ ಮೈತಪಟ್ಟಿದ್ದಾನೆ.

    ಇಲಿಯಾಸ್ ಕುಟುಂಬ ಸದಸ್ಯರು ಬಿಂದುವಿನ ಜೊತೆ ಸಂಬಂಧವಿರುವುದರ ಬಗ್ಗೆ ನಮಗೆ ತಿಳಿದಿರಲಿಲ್ಲ. ಈ ಘಟನೆ ನಡೆದ ಮೇಲೆಯೇ ನಮಗೆ ಅವರಿಬ್ಬರ ಸಂಬಂಧದ ಬಗ್ಗೆ ತಿಳಿದು ಬಂದಿದೆ ಎಂದು ಹೇಳಿದ್ದಾರೆ. ಮಂಗಲಗಿರಿ ಸಿ.ಐ. ಬ್ಯಹ್ಮಯ್ಯ ಅವರು ಬಿಂದು ಮತ್ತು ಆಕೆಯ ಕೃತ್ಯಕ್ಕೆ ಸಹಾಯ ಮಾಡಿದ ಇಬ್ಬರು ಪುರುಷರನ್ನು ಬಂಧಿಸಿದ್ದಾರೆ.