Tag: gunshot

  • ಪತ್ನಿಯನ್ನು ಅಪ್ಪಿಕೊಂಡು ಹೊಡೆದ ಗುಂಡು ತನಗೂ ಮುಳುವಾಯ್ತು- ದಂಪತಿ ಸಾವು

    ಪತ್ನಿಯನ್ನು ಅಪ್ಪಿಕೊಂಡು ಹೊಡೆದ ಗುಂಡು ತನಗೂ ಮುಳುವಾಯ್ತು- ದಂಪತಿ ಸಾವು

    ಲಕ್ನೋ: ಪತ್ನಿಯ (Wife) ಮೇಲೆ ಹಾರಿಸಿದ ಗುಂಡು ತನಗೂ ತಗುಲಿ ದಂಪತಿ (Couple) ಸಾವನ್ನಪ್ಪಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ (Moradabad) ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತಬ್ಬಿಕೊಂಡು ಗುಂಡು ಹಾರಿಸಿದ್ದ. ಅದೇ ಗುಂಡು ತನಗೂ ತಗುಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

    ಅನೇಕ್ ಪಾಲ್ (40) ಹಾಗೂ ಆತನ ಪತ್ನಿ ಸುಮನ್ ಪಾಲ್ (38) ಇಬ್ಬರೂ ಮೊಬೈಲ್ ಫೋನ್ ಕಳೆದು ಹೋಗಿದ್ದಕ್ಕಾಗಿ ಮಂಗಳವಾರ ಜಗಳವಾಡಿದ್ದರು. ಗಲಾಟೆ ತಿಳಿಯಾದ ಬಳಿಕ ಅನೇಕ್ ಪಾಲ್ ರಾತ್ರಿ ಪ್ರಾರ್ಥನೆ ಮುಗಿಸಿ ತನ್ನ ಪತ್ನಿಯ ಬಳಿಗೆ ಹೋಗಿದ್ದಾನೆ. ಏಕಾಏಕಿ ಪತ್ನಿಯನ್ನು ಅಪ್ಪಿಕೊಂಡು ಆಕೆಯ ಬೆನ್ನಿಗೆ ಗುಂಡು ಹಾರಿಸಿದ್ದಾನೆ. ಆದರೆ ಆತ ಪತ್ನಿಯನ್ನು ಅಪ್ಪಿಕೊಂಡಿದ್ದ ಕಾರಣ ಅದೇ ಗುಂಡು ಅನೇಕ್ ಪಾಲ್‌ನ ಎದೆಗೂ ತಗುಲಿದೆ. ಇದನ್ನೂ ಓದಿ: Biparjoy Cyclone ಅಬ್ಬರ ನಡುವೆ ಹೆಣ್ಣುಮಗುವಿಗೆ ‘ಬಿಪರ್‌ಜಾಯ್‌’ ಅಂತ ಹೆಸರಿಟ್ಟ ದಂಪತಿ

    ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾರೂ ಇಬ್ಬರೂ ಸಾವನ್ನಪ್ಪಿದ್ದಾರೆ. ಅನೇಕ್ ಪಾಲ್ ದೇಶೀಯ ನಿರ್ಮಿತ ಬಂದೂಕು ಬಳಸಿದ್ದು, ಅದನ್ನು ಆತ ಹೇಗೆ ಸಂಗ್ರಹಿಸಿದ್ದ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದಂಪತಿಗೆ ಒಂದು ಹೆಣ್ಣು ಹಾಗೂ ಮೂವರು ಗಂಡು ಮಕ್ಕಳಿದ್ದಾರೆ. ಇದೀಗ ಹೆಚ್ಚಿನ ತನಿಖೆಗೆ ದಂಪತಿಯ ಕುಂಟುಂಬದವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದನ್ನೂ ಓದಿ: ನಡುರಸ್ತೆಯಲ್ಲೇ ಯುವತಿ ಹತ್ಯೆಗೈದು ಕುತ್ತಿಗೆಯಲ್ಲಿ ಚಾಕು ಇಟ್ಟು ಸ್ಕೂಟಿ ಕೊಂಡೊಯ್ದರು!

  • ಕೃಷಿ ಭೂಮಿಯಲ್ಲಿ ಮೇಯುತ್ತಿದ್ದ ಹಸುಗಳನ್ನು ಗುಂಡಿಟ್ಟು ಕೊಂದ ಎಸ್ಟೇಟ್ ಮಾಲೀಕ

    ಕೃಷಿ ಭೂಮಿಯಲ್ಲಿ ಮೇಯುತ್ತಿದ್ದ ಹಸುಗಳನ್ನು ಗುಂಡಿಟ್ಟು ಕೊಂದ ಎಸ್ಟೇಟ್ ಮಾಲೀಕ

    ಮಡಿಕೇರಿ: ಹುಲ್ಲು ಮೇಯುತ್ತಾ ತನ್ನ ಭೂಮಿಯೊಳಗೆ ನುಗ್ಗಿದ ಕಾರಣಕ್ಕೇ ಎಸ್ಟೇಟ್ ಮಾಲೀಕ 2 ಹಸುಗಳನ್ನು (Cow) ಗುಂಡಿಟ್ಟು (Gunshot) ಕೊಂದಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಎಸ್ಟೇಟ್ ಮಾಲೀಕ ನರೇಂದ್ರ ನಾಯ್ಡು 2 ಹಸುಗಳನ್ನು ಗುಂಡಿಕ್ಕಿ ಕೊಂದಿರುವ ಆರೋಪಿ. ಹಸುಗಳ ಮಾಲೀಕ ಮಣಿ ಹಲವು ಹಸುಗಳನ್ನು ಸಾಕಿದ್ದು, ಹಾಲು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ ರಾತ್ರಿ ಮಣಿಯವರ 3 ಹಸುಗಳು ಮೇಯ್ದು ಮನೆಗೆ ಹಿಂತಿರುಗಿರಲಿಲ್ಲ. ಆದರೆ ಒಂದು ಹಸು ತಡರಾತ್ರಿ ಮನೆಗೆ ಮರಳಿದ್ದು, ಅದು ಗಂಭೀರವಾಗಿ ಗಾಯಗೊಂಡಿರುವುದನ್ನು ಮಣಿ ಗಮನಿಸಿದ್ದಾರೆ. ಹಸುವಿಗೆ ಸೂಕ್ತ ಚಿಕಿತ್ಸೆ ನೀಡಿ, ಮರುದಿನ ಇತರ 2 ಹಸುಗಳ ಹುಡುಕಾಟಕ್ಕೆ ಮಣಿ ತೆರಳಿದ್ದಾರೆ. ಇದನ್ನೂ ಓದಿ: ಕೊತ್ತಂಬರಿ ಸೊಪ್ಪಿನ ಹಾರ ಹಾಕಿ ಹೆಚ್‍ಡಿಕೆಯನ್ನು ಬರಮಾಡಿಕೊಂಡ ಗ್ರಾಮಸ್ಥರು

    ಮಣಿ ತನ್ನ ಇತರ 2 ಹಸುಗಳು ಪಕ್ಕದ ಎಸ್ಟೇಟ್‌ನಲ್ಲಿ ಸತ್ತು ಬಿದ್ದಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮಣಿ ಹುಡುಕಾಟಕ್ಕೆ ಹೋದಾಗ ನರೇಂದ್ರ ನಾಯ್ಡು ಒಡೆತನದ ಎಸ್ಟೇಟ್‌ನಲ್ಲಿ ಹಸುಗಳ ಮೃತದೇಹ ಪತ್ತೆಯಾಗಿದೆ. ಹಸುಗಳ ದೇಹದ ಮೇಲೆ ಗುಂಡೇಟಿನ ಗುರುತುಗಳು ಕಂಡುಬಂದಿದ್ದು, ನರೇಂದ್ರ ನಾಯ್ಡು ತನ್ನ ಹಸುಗಳನ್ನು ಗುಂಡಿಟ್ಟು ಕೊಂದಿದ್ದಾನೆ ಎಂದು ಮಣಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಲಾಪದ ವೇಳೆ ಫೇಸ್‌ಬುಕ್ ಲೈವ್ ಮಾಡಿದ ಶಾಸಕ ವಿಧಾನ ಸಭೆಯಿಂದ ಅಮಾನತು

    ಘಟನೆಗೆ ಸಂಬಂಧಿಸಿದಂತೆ ಮಣಿ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಸ್ಟೇಟ್ ಮಾಲೀಕ ಆರೋಪಿ ನರೇಂದ್ರ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಾಲೆಗೆ ಹೋಗುತ್ತಿದ್ದ 12ರ ಬಾಲಕಿ ಮೇಲೆ ಅತ್ಯಾಚಾರ – ಎಸ್ಕೇಪ್ ಆಗ್ತಿದ್ದ ಆರೋಪಿಗೆ ಗುಂಡೇಟು

    ಶಾಲೆಗೆ ಹೋಗುತ್ತಿದ್ದ 12ರ ಬಾಲಕಿ ಮೇಲೆ ಅತ್ಯಾಚಾರ – ಎಸ್ಕೇಪ್ ಆಗ್ತಿದ್ದ ಆರೋಪಿಗೆ ಗುಂಡೇಟು

    ಲಕ್ನೋ: ಶಾಲೆಗೆ ಹೋಗುತ್ತಿದ್ದ 12 ವರ್ಷದ ಬಾಲಕಿ ಮೇಲೆ 20 ವರ್ಷದ ಯುವಕ ಬುಧವಾರ ಅತ್ಯಾಚಾರವೆಸಗಿರುವುದಾಗಿ ಆರೋಪಿಸಲಾಗಿದ್ದು, ಆತ ತಪ್ಪಿಸಿಕೊಂಡು ಓಡುವ ವೇಳೆ ಆತನ ಕಾಲಿಗೆ ಪೊಲೀಸರು ಗುಂಡು ಹೊಡೆದಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಬಾಲಕಿ ಬೆಳಗ್ಗೆ ಶಾಲೆಗೆ ಹೋಗುತ್ತಿದ್ದ ವೇಳೆ ಆರೋಪಿ ಅವಳನ್ನು ಭೇಟಿಯಾಗಲು ಆಮಿಷ ಒಡ್ಡಿದ್ದ. ಬಳಿಕ ಆಕೆಯನ್ನು ಸೆಕ್ಟರ್ 32ರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಸೆಕ್ಟರ್ 24ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿಚಾರಣೆ ವೇಳೆ ಆರೋಪಿ ಈ ಹಿಂದೆಯೂ ಒಂದೆರಡು ಬಾರಿ ಬಾಲಕಿಗೆ ಬಲವಂತಪಡಿಸಿರುವುದಾಗಿ ತಿಳಿಸಿದ್ದಾನೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಹಾಗೂ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ವರ್‌ ಯಾತ್ರೆ ವೇಳೆ ಹಿಂದಿಕ್ಕಿದ್ದಕ್ಕೆ ಯೋಧನನ್ನು ಹೊಡೆದು ಕೊಂದ ಶಿವ ಭಕ್ತರ ಗುಂಪು!

    ಆರೋಪಿಯನ್ನು ಬಳಿಕ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಣ್‌ವಿಜಯ್ ಸಿಂಗ್ ಅವರು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದರು. ಆದರೆ ಪೊಲೀಸ್ ಠಾಣೆಗೆ ಹಿಂತಿರುಗುವ ಸಂದರ್ಭ ಆತ ಬಂಧನದಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದ.

    ಆರೋಪಿ ಪೊಲೀಸ್ ವ್ಯಾನ್‌ನಿಂದ ಜಿಗಿದು, ಓಡಿ ಹೋಗಲು ಪ್ರಯತ್ನಿಸಿದ್ದ. ಆದರೆ ಪೊಲೀಸರು ಆತ ತಪ್ಪಿಸಿಕೊಳ್ಳದಂತೆ ಸುತ್ತುವರಿದಿದ್ದರು. ಈ ವೇಳೆ ಆರೋಪಿ ಕೈಗೆ ಸಿಕ್ಕ ಇಟ್ಟಿಗೆ, ಕಲ್ಲುಗಳಿಂದ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದ. ಇದರಿಂದ ಪೊಲೀಸರು ಅನಿವಾರ್ಯವಾಗಿ ಆತನ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2 ವಾರದಲ್ಲಿ 5ನೇ ಪ್ರಕರಣ – ತಮಿಳುನಾಡಿದ 12ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

    ಆರೋಪಿಯ ಕಾಲಿಗೆ ಗುಂಡು ತಗುಲಿದ್ದು, ಆತನನ್ನು ಪೊಲೀಸರು ಮತ್ತೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಗುಂಡೇಟಿನ ಚಿಕಿತ್ಸೆಗೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಿಂಜೋ ಅಬೆಗೆ ಗುಂಡೇಟು ಆಘಾತ ತಂದಿದೆ – ವಿಶ್ವ ನಾಯಕರ ಪ್ರತಿಕ್ರಿಯೆ

    ಶಿಂಜೋ ಅಬೆಗೆ ಗುಂಡೇಟು ಆಘಾತ ತಂದಿದೆ – ವಿಶ್ವ ನಾಯಕರ ಪ್ರತಿಕ್ರಿಯೆ

    ನವದೆಹಲಿ: ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾಷಣ ಮಾಡುತ್ತಿದ್ದ ಸಂದರ್ಭದಲ್ಲೇ ದುಷ್ಕರ್ಮಿಯೊಬ್ಬ ಎದೆಗೆ ಗುಂಡು ಹಾರಿಸಿದ್ದು, ಅಬೆಗೆ ತೀವ್ರ ರಕ್ತಸ್ರಾವವಾಗಿದೆ.

    ಈ ಆಘಾತಕಾರಿ ಘಟನೆಗೆ ವಿಶ್ವದ ನಾಯಕರು ಪ್ರತಿಕ್ರಿಯಿಸಿದ್ದಾರೆ. ಜಪಾನ್ ಮಾಜಿ ಪ್ರಧಾನಿಯ ಉಳಿವಿಗಾಗಿ ಪ್ರಾರ್ಥನೆ ನಡೆಸಿದ್ದಾರೆ.

    ಘಟನೆ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ನನ್ನ ಆತ್ಮೀಯ ಸ್ನೇಹಿತ ಅಬೆ ಶಿಂಜೋ ಮೇಲಿನ ದಾಳಿ ತೀವ್ರ ಆಘಾತ ತಂದಿದೆ. ನಮ್ಮ ಆಲೋಚನೆ ಹಾಗೂ ಪ್ರಾರ್ಥನೆಗಳು ಅವರೊಂದಿಗೆ, ಅವರ ಕುಟುಂಬ ಹಾಗೂ ಜಪಾನ್ ಜನರೊಂದಿಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು

    ಅಮೆರಿಕದ ರಾಯಭಾರಿ ರಹಮ್ ಇಮ್ಯಾನುಯೆಲ್, ಅಬೆ-ಸಾನ್ ಜಪಾನ್‌ನ ಅತ್ಯುತ್ತಮ ನಾಯಕ ಹಾಗೂ ಅಮೆರಿಕದ ಅಚಲ ಮಿತ್ರರಾಗಿದ್ದಾರೆ. ಅಮೆರಿಕ ಸರ್ಕಾರ ಹಾಗೂ ಅಮೆರಿಕದ ಜನರು ಅಬೆ-ಸಾನ್ ಅವರ ಕುಟುಂಬ ಹಾಗೂ ಜಪಾನ್‌ನ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಟ್ವೀಟ್ ಮಾಡಿ, ಮಾಜಿ ಪ್ರಧಾನಿ ಶಿಂಜೊ ಅಬೆಗೆ ಗುಂಡು ಹಾರಿಸಲಾಗಿದೆ ಎಂದು ಜಪಾನ್‌ನಿಂದ ಬಂದ ಆಘಾತಕಾರಿ ಸುದ್ದಿ – ಈ ಸಮಯದಲ್ಲಿ ನಮ್ಮ ಆಲೋಚನೆಗಳು ಅವರ ಕುಟುಂಬ ಹಾಗೂ ಜಪಾನ್‌ನ ಜನರೊಂದಿಗೆ ಇದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಮೋದಿ ಕನಸಿನ ಬುಲೆಟ್ ಟ್ರೈನ್ ಯೋಜನೆ ಮುಖ್ಯಸ್ಥ ಸತೀಶ್ ಅಗ್ನಿಹೋತ್ರಿ ವಜಾ

    ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್, ಎಲ್ಲರಿಗೂ ನನ್ನಂತೆಯೇ ಆಘಾತ ಹಾಗೂ ದುಃಖ ತಂದಿದೆ ಎಂದು ನಾನು ಭಾವಿಸುತ್ತೇನೆ. ತೈವಾನ್ ಹಾಗೂ ಜಪಾನ್ ಎರಡೂ ಕಾನೂನು ಆಳ್ವಿಕೆಯನ್ನು ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರಗಳು. ನನ್ನ ಸರ್ಕಾರದ ಪರವಾಗಿ, ನಾನು ಹಿಂಸಾತ್ಮಕ ಮತ್ತು ಕಾನೂನುಬಾಹಿರ ಕೃತ್ಯಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನ್ಯೂಯಾರ್ಕ್‌ನಲ್ಲಿ ಶೂಟೌಟ್- ಭಾರತೀಯ ಮೂಲದ ವ್ಯಕ್ತಿಯ ಹತ್ಯೆ

    ನ್ಯೂಯಾರ್ಕ್‌ನಲ್ಲಿ ಶೂಟೌಟ್- ಭಾರತೀಯ ಮೂಲದ ವ್ಯಕ್ತಿಯ ಹತ್ಯೆ

    ನ್ಯೂಯಾರ್ಕ್: ಮನೆಯ ಸಮೀಪಿರುವ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ ಎಸ್‍ಯುವಿ ವಾಹನದಲ್ಲಿ ಕುಳಿತಿದ್ದಾಗ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದ ಘಟನೆ ನ್ಯೂಯಾರ್ಕ್‍ನಲ್ಲಿ ನಡೆದಿದೆ.

    ಸತ್ನಮ್ ಸಿಂಗ್ (31) ಮೃತ ವ್ಯಕ್ತಿ. ಕ್ವೀನ್ಸ್‌ನ ಸೌತ್ ಓಝೋನ್ ಪಾರ್ಕ್ ವಿಭಾಗದಲ್ಲಿ ಸತ್ನಮ್ ಸಿಂಗ್ ತನ್ನ ಸ್ನೇಹಿತನ ಜೀಪ್‍ನಲ್ಲಿ ಕುಳಿತಿದ್ದ. ಆ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯೊಬ್ಬ ನಡೆದುಕೊಂಡು ಬಂದು ಸತ್ನಮ್ ಸಿಂಗ್ ಅವರ ಕುತ್ತಿಗೆ ಹಾಗೂ ಎದೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆ ತಿಳಿಸಿದೆ.

    crime

    ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಎದೆಗೆ ಮತ್ತು ಕುತ್ತಿಗೆ ಭಾಗಕ್ಕೆ ಗುಂಡೇಟು ತಲುಪಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮನೆಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ವಿವಾದಿತ ಪಠ್ಯಗಳ ಮಾರ್ಪಾಡಿಗೆ ಸರ್ಕಾರದ ಆದೇಶ – ಕೈ ಬಿಟ್ಟ ಯಾವ ಅಂಶಗಳು ಸೇರ್ಪಡೆಯಾಗಿವೆ?

    ಗುಂಡಿನ ದಾಳಿ ನಡೆಸಿದ್ದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಬಂದೂಕುಧಾರಿಯೂ ಸತ್ನಮ್ ಸಿಂಗ್‍ನ ಸ್ನೇಹಿತನನ್ನು ಕೊಲ್ಲಲು ಬಯಸಿದ್ದನೋ ಅಥವಾ ಸತ್ನಮ್ ಸಿಂಗ್‍ನನ್ನೇ ಕೊಲ್ಲಲು ಗುರಿಯಾಗಿಸಿಕೊಂಡಿದ್ದನೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ನ್ಯೂಯಾರ್ಕ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಇತ್ತೀಚೆಗಷ್ಟೇ ತೆಲಂಗಾಣದ ಸಾಫ್ಟ್‌ವೇರ್ ಇಂಜಿನಿಯರ್ ಅನ್ನು ಆತನ ವಾಹನದಲ್ಲೇ ಗುಂಡು ಹಾರಿಸಿ ಹತ್ಯೆಗೈದ ಘಟನೆ ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಗರದಲ್ಲಿ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಇನ್ನೊಬ್ಬ ಭಾರತೀಯನ ಹತ್ಯೆ ಆಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಶೂಟೌಟ್- ಭಾರತದ ಟೆಕ್ಕಿ ಹತ್ಯೆ

    Live Tv

  • ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!

    ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!

    ಕೈರೋ: ಮದುವೆ ಹಿಂದಿನ ದಿನ ವರನ ಜೊತೆ ಸ್ನೇಹಿತರು ಸಂಭ್ರಮಾಚರಣೆ ಮಾಡೋ ಸಂದರ್ಭದಲ್ಲಿ ಅತೀ ಉತ್ಸಾಹದಲ್ಲಿ ಸ್ನೇಹಿತನೊಬ್ಬ ವರನ ಮರ್ಮಾಂಗಕ್ಕೆ ಗುಂಡೇಟು ಹೊಡೆದಿರುವ ಘಟನೆ ಈಜಿಪ್ಟ್‍ನಲ್ಲಿ ನಡೆದಿದೆ.

    28 ವರ್ಷದ ವರ ಓಮರ್ ಅಲ್ ಅಲ್‍ಸೈದ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಓಮರ್ ಮದುವೆಗೂ ಮುನ್ನ ಬ್ಯಾಚುಲರ್ ಪಾರ್ಟಿಯ ಸಂಭ್ರಮದಲ್ಲಿದ್ದ. ಈ ವೇಳೆ ಸ್ನೇಹಿತರಲ್ಲೊಬ್ಬ ಸಂಭ್ರಮಾಚರಣೆಗೆ ಗುಂಡು ಹಾರಿಸಿದ್ದ. ಉತ್ಸಾಹದಲ್ಲಿ ಗುಂಡು ಹಾರಿಸಿದ ಸ್ನೇಹಿತನಿಗೆ ಗನ್ ಮೇಲಕ್ಕೆ ಗುರಿಯಿಡಬೇಕು ಅನ್ನೋದು ಮರೆತುಹೋಗಿತ್ತು. ಪರಿಣಾಮ ಗುಂಡು ವರನ ಮರ್ಮಾಂಗಕ್ಕೆ ತಗುಲಿದೆ.

    ಘಟನೆಯಿಂದ ಓಮರ್‍ನ ಮರ್ಮಾಂಗ, ತೊಡೆ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ. ತಾನು ಮಾಡಿದ ಎಡವಟ್ಟಿನಿಂದ ಸ್ನೇಹಿತ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದು, ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಅತ್ತ ಗಾಯಗೊಂಡ ಓಮರ್ ಇನ್ನೂ ಬ್ಯಾಚುಲರ್ ಆಗಿದ್ದಾನೆ ಎಂದು ವರದಿಯಾಗಿದೆ. ಗಾಯಗೊಂಡಿರುವ ಓಮರ್‍ನ ಭಾವಿ ಪತ್ನಿಗೆ ಮುಂದೆ ಆತನನ್ನು ಮದುವೆಯಾಗೋ ಯೋಚನೆ ಇದೆಯಾ ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ಈಜಿಪ್ಟ್‍ನ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದೆ. ಗನ್ ಸರಿಯಾಗಿ ಹಿಡಿಯಲು ಬಾರದ ವರನ ಸ್ನೇಹಿತನ ಬಗ್ಗೆ ಜನ ಟೀಕಿಸಿದ್ದಾರೆ.

    ಈಜಿಪ್ಟ್ ನಲ್ಲಿ ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿ ಅನಾಹುತವಾಗಿರೋದು ಇದೇ ಮೊದಲೇನಲ್ಲ. ಅಕ್ಟೋಬರ್‍ನಲ್ಲಿ ಇಲ್ಲಿನ ಮದುವೆ ಸಮಾರಂಭವೊಂದಲ್ಲಿ ಅತಿಥಿಗೆ ಗುಂಡೇಟು ತಗುಲಿ ಸರ್ಜರಿಗೆ ಒಳಪಡಬೇಕಾಯ್ತು. ಈಜಿಪ್ಟ್ ನ ಬಾನಿ ಸ್ವೆಫ್‍ನಲ್ಲಿ 30 ವರ್ಷದ ವ್ಯಕ್ತಿ ಮುದವೆಗೆ ಬಂದಿದ್ದಾಗ ಅವರ ತೊಡೆಗೆ ಗುಂಡೇಟು ತಗುಲಿತ್ತು. ಅವರಿಗೆ ಸರ್ಜರಿ ಮಾಡಿಸಬೇಕಾಯ್ತು.