Tag: Guns and Roses

  • ಗನ್ಸ್ ಅಂಡ್ ರೋಸಸ್ ಸಂಗೀತ ಸಾರಥಿ ಶಶಿಕುಮಾರ್!

    ಗನ್ಸ್ ಅಂಡ್ ರೋಸಸ್ ಸಂಗೀತ ಸಾರಥಿ ಶಶಿಕುಮಾರ್!

    ಸಂಗೀತವನ್ನೇ ಜಗತ್ತಾಗಿಸಿಕೊಂಡ ಸಾಹಸಿ!

    ಯಾವುದೇ ಸಿನಿಮಾದ ಹಿಂದೆ ಹತ್ತಾರು ಮಂದಿಯ ಕನಸಿರುತ್ತದೆ. ಟರ್ನಿಂಗ್ ಪಾಯಿಂಟ್ ಅನ್ನೋ ಮಾಯೆ ಈ ಮೂಲಕವೇ ಧುತ್ತನೆದುರಾದೀತೆಂದು ಅದರ ಭಾಗವಾದ ಬಹುತೇಕರು ಆಸೆಗಣ್ಣಿನಿಂದ ಕಾಯುತ್ತಿರುತ್ತಾರೆ. ಮತ್ತೊಂದಷ್ಟು ಮಂದಿಯ ಜೀವಮಾನದ ಕನಸು ಇಂಥಾ ಸಿನಿಮಾ ಮೂಲಕವೇ ಸಾಕಾರಗೊಳ್ಳೋದೂ ಇದೆ. ಸದ್ಯ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಗನ್ಸ್ ಅಂಡ್ ರೋಸಸ್’ (Guns And Roses) ಚಿತ್ರದ ಮೂಲಕ ಶಶಿಕುಮಾರ್ (Shashi Kumar) ಅವರ ಮಹಾ ಕನಸು ಸಾಕಾರಗೊಂಡಿದೆ. ಸಂಗೀತವನ್ನೇ ಬದುಕಾಗಿಸಿಕೊಂಡು, ಆ ಕ್ಷೇತ್ರದಲ್ಲೇ ಏನಾದರೊಂದು ಸಾಧಿಸಬೇಕೆಂಬ ಉತ್ಕಟ ಆಕಾಂಕ್ಷೆ ಹೊಂದಿದ್ದವರು ಶಶಿ ಕುಮಾರ್. ಈ ಹಾದಿಯಲ್ಲಿ ಬದುಕೆಂಬುದು ಆಗಾಗ ಬ್ಯಾಲೆನ್ಸು ತಪ್ಪಿಸಿದೆ. ಮತ್ತೆಲ್ಲೋ ಹೊಯ್ದಾಡಿಸಿದೆ. ಆದರೆ, ಸಂಗೀತ ಗುಂಗಿನಲ್ಲಿಯೇ ಸಾಗಿ ಬಂದಿರುವ ಶಶಿ ಗನ್ಸ್ ಅಂಡ್ ರೋಸಸ್ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿದ್ದಾರೆ.

    ಎಂಬಿಎ ಮುಗಿಸಿಕೊಂಡು ಬದುಕಿಗಾಗಿ ಯಾವುದಾದರೊಂದು ಕೆಲಸ ಮಾಡುವ ಅನುವಾರ್ಯತೆ ಶಶಿಕುಮಾರ್ ಮುಂದಿತ್ತು. ಆದರೆ, ಸಂಗೀತವನ್ನು ಬಿಟ್ಟು ಬೇರೇನೇ ಮಾಡಿದರೂ ವ್ಯರ್ಥ ಎಂಬಂಥಾ ಮನಃಸ್ಥಿತಿ ಕೂಡ ಅವರನ್ನು ಆವರಿಸಿಕೊಂಡಿತ್ತು. ಒಂದು ವೇಳೆ ಬೇರೆ ಕಸುಬು ಮಾಡಿದರೂ ಅದು ತನ್ನ ಕನಸಿಗೆ ಮೆಟ್ಟಿಲಾಗುವಂತಿರಬೇಕು ಅನ್ನೋ ಆಕಾಂಕ್ಷೆಯೇ ಅನೇಕ ಸಾಹಸಗಳಿಗೂ ಪ್ರೇರೇಪಿಸಿತ್ತು. ಬಹುಶಃ ಬಂದ ಕಷ್ಟ ನಷ್ಟಗಳನ್ನೆಲ್ಲ ಅನುಭವಿಸಿ, ಅವುಡುಗಚ್ಚಿ ಮುಂದುವರೆಯದಿದ್ದರೆ, ಸಿಂಪೋನಿಯನ್ಸ್ ಎಂಬ ಕಂಪೆನಿ ಹುಟ್ಟುತ್ತಿರಲಿಲ್ಲ. ನಾನಾ ದಿಕ್ಕಿನಲ್ಲಿ ಪಳಗಿಕೊಂಡು, ‘ಗನ್ಸ್ ಅಂಡ್ ರೋಸಸ್’ ಚಿತ್ರದ ಸಂಗೀತ ನಿರ್ದೇಶಕರಾಗೋದೂ ಸಹ ಕನಸಿನ ಮಾತಾಗಿರುತ್ತಿತ್ತು.

    Guns and Roses Kannada Movie Team
    ಶಶಿಕುಮಾರ್ 2018ರಿಂದ ಸಿಂಫೋನಿಯನ್ಸ್ ಎಂಬ ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ. ಇದರ ನೆರಳಿನಲ್ಲಿ ಆಡಿಯೋ ಮತ್ತು ಮ್ಯೂಸಿಕ್ ಸಂಬಂಧಿತ ಕೆಲಸ ಕಾರ್ಯಗಳು ನಡೆಯುತ್ತವೆ. ಲೈವ್ ರೆಕಾರ್ಡಿಂಗ್, ಮಿಕ್ಸಿಂಗ್, ಮಾಸ್ಟರಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳೆಲ್ಲವೂ ಇಲ್ಲಿಯೇ ನಡೆಯುವಂಥಾ ವಾತಾವರಣ ಕಲ್ಪಿಸಲಾಗಿದೆ. ಹೀಗೆ ಸಂಗೀತದ ಅಪ್ಪುಗೆಯಲ್ಲಿಯೇ ಅನ್ನದ ಮೂಲ ಕಂಡುಕೊಂಡಿರುವ ಶಶಿಕುಮಾರ್ ಪಾಲಿಗೆ ಈ ಕ್ಷೇತ್ರದಲ್ಲಿಯೇ ಸಾಧಿಸಬೇಕೆಂಬ ಹಂಬಲವಿತ್ತು. ಅದರ ಸಲುವಾಗಿಯೇ ಪ್ರಯತ್ನ ಚಾಲ್ತಿಯಲ್ಲಿಟ್ಟಿದ್ದ ಫಲವಾಗಿಯೇ ‘ಗನ್ಸ್ ಅಂಡ್ ರೋಸಸ್’ ಚಿತ್ರದ ಸಂಗೀತ ನಿರ್ದೇಶನದ ಅವಕಾಶ ಒಲಿದು ಬಂದಿತ್ತು. ಇದನ್ನೂ ಓದಿ:ಗನ್ಸ್ ಅಂಡ್ ರೋಸಸ್ ಮೂಲಕ ಕಣ್ತೆರೆದ ಕಥೆಗಾರ ಶರತ್!

    ಇಲ್ಲಿರುವ 4 ಹಾಡುಗಳನ್ನು ಒಂದಕ್ಕೊಂದು ಭಿನ್ನವೆಂಬಂತೆ ರೂಪಿಸುವ ಜವಾಬ್ದಾರಿ ಶಶಿ ಮೇಲಿತ್ತು. ಒಂದು ಥೀಮ್ ಸಾಂಗ್, ಎಣ್ಣೆ ಕಂ ಪ್ಯಾಥೋ, ಈಗಿನ ಯುವ ಜನಾಂಗವನ್ನು ಪಟ್ಟಂಪೂರಾ ಆವರಿಸಿಕೊಳ್ಳಬಲ್ಲ ರ್ಯಾಪ್ ಸಾಂಗ್ ಅನ್ನು ಬಲು ಆಸ್ಥೆಯಿಂದ ಶಶಿ ರೂಪಿಸಿದ್ದಾರಂತೆ. ಇದುವರೆಗೂ ಶಾರ್ಟ್ ಮೂವಿಗಳಿಗೆ ಕೆಲಸ ಮಾಡಿದ್ದರು. ತಂಬೂರ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವ ಮೂಲಕ ಶಶಿ ಕನಸು ನನಸಾಗಿತ್ತು. ಅದು ಅವರ ಮೊದಲ ಚಿತ್ರವಾಗಿ ದಾಖಲಾಗುತ್ತದೆ. ಖ್ಯಾತ ನಿರ್ದೇಶಕ ಪಿ.ಹೆಚ್ ವಿಶ್ವನಾಥ್ ಅವರ ಆಡೇ ನಮ್ ಗಾಡು ಚಿತ್ರಕ್ಕೂ ಹಿನ್ನೆಲೆ ಸಂಗೀತ ನೀಡಿದ್ದರು. ಇದೆಲ್ಲವೂ ಸಂಗೀತದ ಭಾಗವೇ ಆಗಿದ್ದರೂ ಕೂಡಾ, ಪೂರ್ಣಪ್ರಮಾಣದ ಸಂಗೀತ ನಿರ್ದೇಶಕರಾಗಬೇಂಬುದು ಶಶಿಕುಮಾರ್‌ರ ಇರಾದೆಯಾಗಿತ್ತು. ಅದು ‘ಗನ್ಸ್ ಅಂಡ್ ರೋಸಸ್’ ಮೂಲಕ ಸಾಕಾರಗೊಂಡಿದೆ. ಈ ಹಾಡುಗಳೆಲ್ಲವೂ ಕೇಳುಗರಿಗೆ ಹಿಡಿಸುವ ಮೂಲಕ ಮೊದಲ ಹೆಜ್ಜೆ ಸಾರ್ಥಕಗೊಳ್ಳುತ್ತದೆಂಬ ನಂಬಿಕೆಯೂ ಅವರಲ್ಲಿದೆ.


    ಹಾಗೆ ನೋಡಿದರೆ, ಶಶಿಕುಮಾರ್ ಬಹುಮುಖ ಪ್ರತಿಭೆ. ಸಂಗೀತದ ಹಲವು ಆಯಾಮಗಳನ್ನು ಒಳಗಿಳಿಸಿಕೊಂಡು ಪಳಗಬೇಕೆಂಬ ತಪನೆಯೊಂದನ್ನು ಬೆಚ್ಚಗಿಟ್ಟುಕೊಂಡವರು ಶಶಿ. ತಾನು ಏನೇ ಮಾಡಿದರೂ ಅದು ಸಂಗೀತಕ್ಕೆ ಸಂಬಂಧಿಸಿದ್ದೇ ಆಗಿರಬೇಕೆಂಬುದು ಅವರ ಹಂಬಲ. ಅದರ ಭಾಗವಾಗಿಯೇ ಸಂಗೀತಕ್ಕೆ ಸಂಬಂಧಿಸಿದ ಟೀಚಿಂಗ್ ವೃತ್ತಿಯನ್ನೂ ಸಂಭಾಳಿಸಿಕೊಂಡು ಹೋಗುತ್ತಿದ್ದಾರೆ. ಆರಂಭದಿಂದಲೂ ಮ್ಯೂಸಿಕ್ ಕಂಪೆನಿ ಒಂದನ್ನು ಕಟ್ಟಬೇಕೆಂಬ ಆಸೆ ಹೊಂದಿದ್ದ ಅವರು, ಅದಕ್ಕಾಗಿ ನಡೆಸಿದ್ದ ಸರ್ಕಸ್ಸುಗಳು ಒಂದೆರಡಲ್ಲ. ಕಾಸು ಹೊಂದಿಸುವ ಉದ್ದೇಶದಿಂದಲೇ ಕಂಪೆನಿ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಶಶಿ, 2018ರಲ್ಲಿ ಸಿಂಪೋನಿಯನ್ಸ್ ಎಂಬ ಸಂಸ್ಥೆ ಕಟ್ಟುವ ಮೂಲಕ ಕನಸನ್ನು ನನಸಾಗಿಸಿಕೊಂಡಿದ್ದರು. ಇದೀಗ ಗನ್ಸ್ ಅಂಡ್ ರೋಸಸ್ ಮೂಲಕ ಅವರ ವೃತ್ತಿ ಬದುಕು ನಿರ್ಣಾಯಕ ಘಟ್ಟದತ್ತ ಹೊರಳಿಕೊಂಡಿದೆ. ಈಗಿರುವ ವಾತಾವರಣ ಗಮನಿಸಿದರೆ, ಅದು ಅಲ್ಲಿಯೇ ಹುಲುಸಾಗಿ ಬೆಳೆದು ನಿಲ್ಲುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

    ಇಂಥಾ ಹಲವಾರು ಪ್ರತಿಭಾನ್ವಿತರು ‘ಗನ್ಸ್ ಅಂಡ್ ರೋಸಸ್’ ಮೂಲಕ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ. ದ್ರೋಣ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಎಚ್.ಆರ್ ನಟರಾಜ್ ಅಂಥಾದ್ದೊಂದು ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ. ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ (Yashvika Nishkala) ಅರ್ಜುನ್‌ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಇದೀಗ ಸಿನಿಮಾ ಪ್ರೇಮಿಗಳನ್ನು ಸೆಳೆದುಕೊಂಡಿದೆ.

  • ಗನ್ಸ್ ಅಂಡ್ ರೋಸಸ್ ಮೂಲಕ ಕಣ್ತೆರೆದ ಕಥೆಗಾರ ಶರತ್!

    ಗನ್ಸ್ ಅಂಡ್ ರೋಸಸ್ ಮೂಲಕ ಕಣ್ತೆರೆದ ಕಥೆಗಾರ ಶರತ್!

    ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಹೆಚ್.ಆರ್ ನಟರಾಜ್ ನಿರ್ಮಾಣ ಮಾಡಿರುವ, ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನ ಮಾಡಿರುವ ಚಿತ್ರ ‘ಗನ್ಸ್ ಅಂಡ್ ರೋಸಸ್’. ಈ ಚಿತ್ರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ‘ಗನ್ಸ್ ಅಂಡ್ ರೋಸಸ್’ ತೆರೆ ಕಂಡಿದೆ. ವಿಶೇಷವೆಂದರೆ, ‘ಗನ್ಸ್ ಅಂಡ್ ರೋಸಸ್’ ಮೂಲಕ ಕನ್ನಡ ಚಿತ್ರರಂಗಕ್ಕೆ ಶರತ್ (Sharath) ಎಂಬ ಯುವ ಕಥೆಗಾರನ ಎಂಟ್ರಿಯಾಗಿದೆ. ಬರಹಗಾರನಾಗಿ ಹುರಿಗೊಳ್ಳುತ್ತಲೇ ನಿರ್ದೇಶಕನಾಗಬೇಕೆಂಬ ಇಂಗಿತ ಹೊಂದಿರುವ ಶರತ್ ಅವರು ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ್ದಾರೆ.

    ಐಟಿ ವಲಯ ಸೇರಿದಂತೆ ಒಂದಷ್ಟು ಅನುಭವಗಳನ್ನು ತಮ್ಮದಾಗಿಸಿಕೊಂಡವರು ಶರತ್. ಸಿನಿಮಾ ಸೆಳೆತದಿಂದ ತಪ್ಪಿಸಿಕೊಳ್ಳಲಾರದೆ, ಖ್ಯಾತ ಸಿನಿಮಾ ಕಥೆಗಾರ ಆಗಿರುವ ನಿರ್ಮಾಪಕ ಅಜಯ್ ಕುಮಾರ್ ಅವರ ಗರಡಿ ಸೇರಿಕೊಂಡಿದ್ದ ಶರತ್, ಒಂದಷ್ಟು ವರ್ಷ ಅಲ್ಲಿಯೇ ಹುರಿಗೊಂಡಿದ್ದಾರೆ. ಕಡೆಗೂ ಅಜಯ್ ಕುಮಾರ್ (Ajay Kumar) ತಮ್ಮ ಪುತ್ರ ಅರ್ಜುನ್ (Arjun) ನಾಯಕನಾಗಿರುವ ಚೊಚ್ಚಲ ಚಿತ್ರವಾದ ‘ಗನ್ಸ್ ಅಂಡ್ ರೋಸಸ್’ಗೆ ಕಥೆ ಬರೆಯುವ ಅವಕಾಶವನ್ನು ಶರತ್‌ಗೆ ಕೊಟ್ಟಿದ್ದಾರೆ. ಹೀಗೊಂದು ಸುವರ್ಣಾವಕಾಶ ಲಭಿಸುತ್ತಲೇ ಶರತ್ ಈಗಿನ ಜನರೇಷನ್‌ನ ಹುಡುಗರನ್ನೇ ಗುರಿಯಾಗಿಸಿಕೊಂಡು, ಸಾಮಾಜಿಕ ಪಲ್ಲಟಗಳ ಭೂಮಿಕೆಯಲ್ಲಿ ಚೆಂದದ್ದೊಂದು ಕಥೆ ಸಿದ್ಧ ಪಡಿಸಿದ್ದಾರೆ.

    ಆ ಹಂತದಲ್ಲಿ ಸ್ಯಾಂಡಲ್‌ವುಡ್ ಸುತ್ತಾ ಡ್ರಗ್ಸ್ ಕೇಸ್ ಪಹರೆ ನಡೆಸುತ್ತಿತ್ತು. ಬಾಲಿವುಡ್ ದಿಕ್ಕಿನಲ್ಲಿ ಖ್ಯಾತ ನಟನ ಮಗ ಡ್ರಗ್ಸ್ ಕೇಸಲ್ಲಿ ಬಂಧಿಯಾಗಿದ್ದ. ಆ ಪಿಡುಗಿನ ಆಳಕ್ಕೆ ಹೊಕ್ಕು, ಅದಕ್ಕೆ ಯುವ ಜನತೆ ಈಡಾಗುತ್ತಿರುವ ಹಿಂಚುಮುಂಚಿನ ವಿದ್ಯಮಾನದ ಬಗ್ಗೆ ಪರಾಮರ್ಶೆ ನಡೆಸಿ ಈ ಕಥೆ ಹೆಣೆದಿದ್ದರಂತೆ. ಹಾಗಂತ, ಇಂಥಾದ್ದೊಂದು ಸಾಮಾಜಿಕ ಕಾಳಜಿಯ ಕಥೆಯನ್ನು ಒಂದೇ ಕೋನದಲ್ಲಿ ನೋಡಿದರೆ ಡಾಕ್ಯುಮೆಂಟರಿಯಾಗಿ ಬಿಡುತ್ತೆ. ಮನರಂಜನೆಗೆ ಕೊರತೆ ಇಲ್ಲದಂತೆ, ಕಮರ್ಶಿಯಲ್ ಹಾದಿಯಲ್ಲಿಯೇ ಒಂದಿಡೀ ಕಥೆಯನ್ನು ರೂಪಿಸೋದು ಶರತ್ ಪಾಲಿಗೆ ಸವಾಲಾಗಿತ್ತು. ಗುರುಗಳಾದ ಅಜಯ್ ಕುಮಾರ್ ಅವರ ಸಲಹೆ, ಸೂಚನೆಗಳನ್ನು ಅನುಸರಿಸಿ, ಆ ಸವಾಲನ್ನು ಸಮರ್ಥವಾಗಿ ಎದುರುಗೊಂಡ ತೃಪ್ತಿ ಶರತ್ ಅವರಲ್ಲಿದೆ.

    Guns and Roses Kannada Movie Team

    ಚಿತ್ರರಂಗದಲ್ಲಿ ಬರಹಗಾರರಿಗೆ ಮನ್ನಣೆಯಿಲ್ಲ ಅನ್ನೋ ಕೊರಗು ಆಗಾಗ ನಾನಾ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತೆ. ಬರಹಗಾರರಿಂದಷ್ಟೇ ಒಂದೊಳ್ಳೆ ಕಂಟೆಂಟ್ ಸೃಷ್ಟಿಯಾಗುತ್ತದೆ ಅನ್ನೋದು ನಿರ್ವಿವಾದ. ಈ ವಲಯದಲ್ಲಿರುವ ಅಷ್ಟೂ ಸವಾಲುಗಳನ್ನು ದಾಟಿಕೊಂಡು ಬರಹಗಾರರಾಗಿ ಗಮನ ಸೆಳೆದ ಒಂದಷ್ಟು ಮಂದಿಯಿದ್ದಾರೆ. ಮೊದಲ ಚಿತ್ರದಲ್ಲಿಯೇ ಶರತ್ ಕೂಡ ಆ ಸಾಲಿಗೆ ಸೇರ್ಪಡೆಗೊಳ್ಳುವ ಲಕ್ಷಣಗಳಿದ್ದಾವೆ. ಸಿನಿಮಾ ಅನ್ನೋದು ಪ್ರಭಾವೀ ಮಾಧ್ಯಮ. ಅದರ ಮೂಲಕ ಡ್ರಗ್ಸ್ ನಂಥಾ ಪಿಡುಗಿನ ಗಂಭೀರ ಸ್ವರೂಪವನ್ನು ಮನಗಾಣಿಸಿ, ಅದರ ಪರಿಣಾಮವನ್ನು ಹೇಳುವ ಜರೂರತ್ತು ಸದ್ಯದ ಮಟ್ಟಿಗಿದೆ. ಅಂಥಾದ್ದೊಂದು ಸಮಾಜಿಕ ಕಾಳಜಿಯ ಕಥೆ ಮುಟ್ಟಿದ್ದರಿಂದಲೇ ಶರತ್ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಅದು ಪ್ರೇಕ್ಷಕರ ವಲಯದಲ್ಲಿಯೂ ಪ್ರತಿಫಲಿಸುತ್ತಿದೆ. ಈ ಸಿನಿಮಾದ ಜೊತೆಗೆ, ಕಥೆಗಾರನಾಗಿ ಶರತ್ ಕೂಡ ಗೆಲ್ಲುವ ಭರವಸೆ ಮೂಡಿಕೊಂಡಿದೆ.

    ದ್ರೋಣ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ಹೆಚ್.ಆರ್ ನಟರಾಜ್ ನಿರ್ಮಾಣ ಮಾಡಿದ್ದಾರೆ. ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್‌ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ‘ಗನ್ಸ್ ಅಂಡ್ ರೋಸಸ್’ ಜನವರಿ 3ರಂದು ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  • ಗನ್ಸ್ ಅಂಡ್ ರೋಸಸ್ ಚಿತ್ರದ ಖಡಕ್ ವಿಲನ್ ಜೀವನ್ ರಿಚ್ಚಿ!

    ಗನ್ಸ್ ಅಂಡ್ ರೋಸಸ್ ಚಿತ್ರದ ಖಡಕ್ ವಿಲನ್ ಜೀವನ್ ರಿಚ್ಚಿ!

    ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನದ ‘ಗನ್ಸ್ ಅಂಡ್ ರೋಸಸ್’ ಚಿತ್ರ ಜನವರಿ 3ರಂದು ಬಿಡುಗಡೆಗೊಳ್ಳಲಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಭಾಷೆಗಳಲ್ಲಿ ಈ ಸಿನಿಮಾ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ. ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರ ತಾರಾಬಳಗವಿದೆ. ನಾಯಕ ನಟ ಅರ್ಜುನ್ ಪಾಲಿಗಿದು ಮೊದಲ ಚಿತ್ರವಾದರೂ, ಹೆಸರುವಾಸಿಯಾಗಿರುವ ನುರಿತ ನಟರೊಂದಿಗೆ ನಟಿಸಿ, ಪಳಗಿಕೊಳ್ಳುವ ಸುಯೋಗ ಅವರಿಗೆ ಲಭಿಸಿದೆ. ಪ್ರತೀ ಪಾತ್ರಕ್ಕೂ ನಿರ್ದೇಶಕರು ಅಳೆದೂ ತೂಗಿ, ಸರಿ ಹೊಂದುವಂಥಾ ನಟ ನಟಿಯರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಇದರಲ್ಲಿರುವ ಬಹುಮುಖ್ಯವಾದ ವಿಲನ್ ಪಾತ್ರಕ್ಕೆ ಜೀವನ್ ರಿಚ್ಚಿ ಆಯ್ಕೆಯಾಗಿದ್ದರ ಹಿಂದೆ ಅನೇಕ ಅಚ್ಚರಿದಾಯಕ, ಅನಿರೀಕ್ಷಿತ ಅಂಶಗಳಿವೆ!

    ಜೀವನ್ ರಿಚ್ಚಿ ಈಗ್ಗೆ ಹನ್ನೆರಡು ವರ್ಷದಿಂದೀಚೆಗೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವವರು. ಆರಂಭದಲ್ಲಿ ಪೊಲೀಸ್ ಪಾತ್ರಗಳಿಗೆ ಸೀಮಿತವಾದಂತಿದ್ದ ಇತ್ತೀಚಿನ ವರ್ಷಗಳಲ್ಲಿ ಜೀವನ್‌ರ ಪ್ರತಿಭೆಗೆ ತಕ್ಕುದಾದ ಪಾತ್ರಗಳೇ ಸಿಗುತ್ತಿವೆ. ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರದಲ್ಲಿ ನಟಿಸುವ ಮೂಲಕವೂ ಜೀವನ್ ವೃತ್ತಿ ಬದುಕು ಹೊಸ ದಿಕ್ಕಿನತ್ತ ಹೊರಳಿಕೊಂಡಿದೆ. ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ ಗನ್ಸ್ ಅಂಡ್ ರೋಸಸ್ ಚಿತ್ರದ ಪಾತ್ರದ ಮೇಲಂತೂ ಅವರೊಳಗೆ ಅಗಾಧವಾದ ಭರವಸೆ ಇದೆ. ದಶಕಗಳ ಹಿಂದೆ ಸಿನಿಮಾ ರಂಗ ಪ್ರವೇಶಿಸಿದವರೆಲ್ಲ ಕಡುಗಷ್ಟಗಳನ್ನು ಕಂಡುಂಡಿದ್ದಾರೆ. ಅಂಥಾ ಸಾಕಷ್ಟು ಸಂಕಷ್ಟ, ನಿರಾಸೆ, ಅವಮಾನಗಳನ್ನು ನುಂಗಿಕೊಂಡೇ ನಟನಾಗಿ ರೂಪುಗೊಂಡಿರುವ ಜೀವನ್ ರಿಚ್ಚಿ ಪಾಲಿಗೆ ಈ ಸಿನಿಮಾದ ಪಾತ್ರ ಟರ್ನಿಂಗ್ ಪಾಯಿಂಟ್ ಆಗೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

    ಗನ್ಸ್ ಅಂಡ್ ರೋಸಸ್ ಚಿತ್ರದ ಈ ಪಾತ್ರ ಜೀವನ್ ರಿಚ್ಚಿ ಅವರಿಗೊಲಿದಿದ್ದೇ ಒಂದು ಸೋಜಿಗ. ಅದು ಸಾಧ್ಯವಾದದ್ದರ ಹಿಂದೆ ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ ಶೋಭರಾಜ್ ಅವರ ಪಾಲೂ ಇದೆ. ಶೋಭರಾಜ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಜೀವನ್ ಪಾಲಿಗೆ ಅಣ್ಣನಂತಿರುವವರು. ಇದರಲ್ಲಿ ಪೊಲೀಸ್ ಪಾತ್ರವೊಂದಕ್ಕೆ ಕಲಾವಿದರ ಹುಡುಕಾಟ ಇರೋದನ್ನರಿತಿದ್ದ ಶೋಭರಾಜ್ ಅದಕ್ಕೆ ಜೀವನ್ ರಿಚ್ಚಿಯವರನ್ನು ರೆಫರ್ ಮಾಡಿದ್ದರಂತೆ. ನಂತರ ಈ ಬಗ್ಗೆ ಜೀವನ್ ಗೆ ತಿಳಿಸಿದ್ದ ಶೋಭ ರಾಜ್ ನಿರ್ದೇಶಕರನ್ನು ಭೇಟಿಯಾಗುವಂತೆ ಸೂಚಿಸಿದ್ದರಂತೆ.

    ಅದರಂತೆ ನಿರ್ದೇಶಕರಾದ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಅವರಿಗೆ ಕರೆ ಮಾಡಿದಾಗ ಆಫೀಸಿಗೆ ಬಂದು ಭೇಟಿಯಾಗುವಂತೆ ಸಂದೇಶ ಬಂದಿತ್ತು. ಅದರನ್ವಯ ಜೀವನ್ ಕಚೇರಿಗೆ ಹೋದಾಗ ಅಲ್ಲಿದ್ದವರು ನಿರ್ದೇಶಕ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಮತ್ತು ಪ್ರಸಿದ್ಧ ಸಿನಿಮಾ ಕಥೆಗಾರರಾದ ಅಜಯ್ ಕುಮಾರ್. ಅಜಯ್ ಕುಮಾರ್ ಅವರು ಜೀವನ್‌ರನ್ನು ನೋಡುತ್ತಲೇ ನಿರ್ದೇಶಕರನ್ನು ಕರೆದುಕೊಂಡು ಏನೋ ಮಾತನಾಡಲೆಂಬಂತೆ ಒಳ ಹೋಗಿದ್ದರು. ಕೆಲ ಹೊತ್ತಿನ ಬಳಿಕ ಬಂದಾಗ ಸಣ್ಣ ಪೊಲೀಸ್ ಪಾತ್ರದ ಬದಲಿಗೆ, ಚಿತ್ರದುದ್ದಕ್ಕೂ ಇರುವ, ಮಹತ್ವದ ವಿಲನ್ ಪಾತ್ರವನ್ನೇ ಜೀವನ್ ಅವರಿಗೆ ಕೊಡಲು ಅಜಯ್ ಕುಮಾರ್ ಮತ್ತು ನಿರ್ದೇಶಕರು ತೀರ್ಮಾನಿಸಿದ್ದರಂತೆ. ಅದೇ ಸ್ಥಳದಲ್ಲಿ ಒಂದಿಡೀ ಕಥೆ, ಆ ಪಾತ್ರದ ಚಹರೆಗಳನ್ನು ನಿರ್ದೇಶಕರು ವಿವರಿಸಿದಾಗ ಜೀವನ್ ರಿಚ್ಚಿ ಅಕ್ಷರಶಃ ಥ್ರಿಲ್ ಆಗಿದ್ದರಂತೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಶಾಕ್‌ – ಜ.5 ರಿಂದ ಬಸ್‌ ಪ್ರಯಾಣ ದರ ಏರಿಕೆ

    ಒಂದು ಪೊಲೀಸ್ ಪಾತ್ರಕ್ಕಾಗಿ ಹೋಗಿ ಮುಖ್ಯ ವಿಲನ್ ಪಾತ್ರ ದಕ್ಕಿಸಿಕೊಂಡ ಜೀವನ್ ಅದನ್ನು ಜೀವಿಸಿದಂತೆ ನಟಿಸಿದ್ದಾರಂತೆ. ಈ ಪಾತ್ರದ ಮೂಲಕವೇ ತಮ್ಮ ಹನ್ನೆರಡು ವರ್ಷಗಳ ಸಿನಿಮಾ ಯಾನ ಸಾರ್ಥಕಗೊಳ್ಳಲಿದೆ ಎಂಬಂಥಾ ಗಾಢ ನಂಬಿಕೆ ಜೀವನ್ ಅವರೊಳಗೆ ಮೂಡಿಕೊಂಡಿದೆ. ಶೋಭರಾಜ್ ಎದುರಾಳಿ ವಿಲನ್ ಆಗಿ ಅಬ್ಬರಿಸಿರೋ ಜೀವನ್ ಪಾಲಿಗೆ ಇದು ತಮ್ಮ ವೃತ್ತಿ ಬದುಕಿನ ಅತ್ಯಂತ ಮಹತ್ವದ ಪಾತ್ರವೆಂಬ ಹೆಮ್ಮೆ ಮೂಡಿಕೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆ ಪಾತ್ರ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ. ಈ ಪಾತ್ರಕ್ಕೆ ತಮ್ಮನ್ನು ಸೂಚಿಸಿದ ಶೋಭರಾಜ್ ಹಾಗೂ ನೋಟದಲ್ಲಿಯೇ ನಟನೆಯ ಕಸುವು ಗುರುತಿಸಿ ಮುಖ್ಯ ವಿಲನ್ ಪಾತ್ರ ಕೊಟ್ಟ ಅಜಯ್ ಕುಮಾರ್ ಹಾಗೂ ನಿರ್ದೇಶಕರ ಬಗ್ಗೆ ಜೀವನ್ ರಲ್ಲಿ ಕೃತಜ್ಞತಾ ಭಾವವಿದೆ. BBK 11: ನನ್ನ ಮಗಳು ಕಳಪೆಯಲ್ಲ: ಚೈತ್ರಾ ಪರ ನಿಂತ ತಾಯಿ

    ದ್ರೋಣ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ಹೆಚ್.ಆರ್ ನಟರಾಜ್ ನಿರ್ಮಾಣ ಮಾಡಿದ್ದಾರೆ. ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ 3ರಂದು ತೆರೆಗಾಣಲಿದೆ.

  • ಗನ್ಸ್ ಅಂಡ್ ರೋಸಸ್: ಅಬ್ಬರದ ಎಂಟ್ರಿಗೆ ಅಣಿಯಾದ ಅರ್ಜುನ!

    ಗನ್ಸ್ ಅಂಡ್ ರೋಸಸ್: ಅಬ್ಬರದ ಎಂಟ್ರಿಗೆ ಅಣಿಯಾದ ಅರ್ಜುನ!

    ನ್ನಡ ಚಿತ್ರರಂಗಕ್ಕೆ ಮತ್ತೋರ್ವ ಕಟ್ಟುಮಸ್ತಾದ ನಾಯಕ ನಟನ ಆಗಮನವಾಗುತ್ತಿದೆ. ಅಷ್ಟಕ್ಕೂ ಈ ಹಿಂದೆ ಗನ್ಸ್ ಅಂಡ್ ರೋಸಸ್ ಚಿತ್ರದ ಟೀಸರ್ ಲಾಂಚ್ ಆದಾಗಲೇ ನಾಯಕ ಅರ್ಜುನ್ ಗಮನ ಸೆಳೆದಿದ್ದರು. ಕನ್ನಡ ಚಿತ್ರರಂಗದ ಖ್ಯಾತ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಗನ್ಸ್ ಅಂಡ್ ರೋಸಸ್ ಮೂಲಕ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಟೀಸರ್ ನಲ್ಲಿ ಇವರ ಪಾತ್ರದ ಚಹರೆ ಕಂಡವರು ಮಾತ್ರವಲ್ಲ; ಪರಭಾಷಾ ಚಿತ್ರರಂಗದ ವಿತರಕರೂ ಕೂಡಾ ಅರ್ಜುನ್ ನಟನೆಯ ಪರಿ ಕಂಡು ಖುಷಿಗೊಂಡಿದ್ದಾರಂತೆ. ಇದು ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ತಯಾರುಗೊಂಡಿರುವ ಸಿನಿಮಾ. ಮೊದಲ ಹೆಜ್ಜೆಯಲ್ಲಿಯೇ ಪ್ಯಾನ್‌ ಇಂಡಿಯಾ ಮಟ್ಟ ಮುಟ್ಟುತ್ತಿರುವ ಖುಷಿ ಅರ್ಜುನ್ ಅವರಲ್ಲಿದೆ.

    ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನದ ಗನ್ಸ್ ಅಂಡ್ ರೋಸಸ್ ಜನವರಿ 3ರಂದು ತೆರೆಗಾಣಲಿದೆ. ಈಗಿನ ಜನರೇಷನ್ ಅನ್ನು ಸೆಳೆಯುತ್ತಲೇ, ಅವರಿಗಾಗಿ ಸಂದೇಶವನ್ನೂ ಬಚ್ಚಿಟ್ಟುಕೊಂಡಿರುವ ಈ ಚಿತ್ರ ಪಕ್ಕಾ ಕಮರ್ಶಿಯಲ್ ಶೈಲಿಯಲ್ಲಿಯೇ ರೂಪುಗೊಂಡಿದೆ. ಸಿನಿಮಾ ವಾತಾವರಣದಲ್ಲಿಯೇ ಬೆಳೆದು ಬಂದಿರುವ ಅರ್ಜುನ್ ಸಾಕಷ್ಟು ತಯಾರಿ ನಡೆಸಿಯೇ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಅರ್ಜುನ್ ಅವರ ತಂದೆ ಕನ್ನಡ ಚಿತ್ರರಂಗದ ಖ್ಯಾತ ಕಥೆಗಾರ ಅಜಯ್ ಕುಮಾರ್. ಈ ಕಾರಣದಿಂದಲೇ ಸಿನಿಮಾ ವಾತಾವರಣ ಅರ್ಜುನ್ ಪಾಲಿಗೆ ಎಳವೆಯಿಂದಲೇ ಸಿಕ್ಕಿತ್ತು. ಆ ಹಂತದಲ್ಲಿಯೇ ನಟನಾಗಬೇಕೆಂಬ ಆಸೆಯೂ ಚಿಗುರಿಕೊಂಡಿತ್ತು. ಇದನ್ನೂ ಓದಿ: ಹೊಸ ವರ್ಷಕ್ಕೆ ಶಾಕ್‌ – ಜ.5 ರಿಂದ ಬಸ್‌ ಪ್ರಯಾಣ ದರ ಏರಿಕೆ

    Guns and Roses Kannada Movie

    ಈ ನಡುವೆ 2008ರಲ್ಲಿ ತೆರೆಗಂಡಿದ್ದ ನಂದ ಲವ್ಸ್ ನಂದಿತಾ ಚಿತ್ರಕ್ಕೆ ಅಜಯ್ ಕುಮಾರ್ ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದರು. ಆ ಸಿನಿಮಾದಲ್ಲಿ ಲೂಸ್ ಮಾದ ಯೋಗಿಯ ಬಾಲ್ಯದ ಪಾತ್ರದ ಮೂಲಕ ಅರ್ಜುನ್ ಮೊದಲ ಸಲ ಬಣ್ಣ ಹಚ್ಚಿದ್ದರು. ಅಲ್ಲಿಂದಾಚೆಗೆ ಓದು ಪೂರ್ಣಗೊಳ್ಳುವವರೆಗೂ ಅಜಯ್ ಅವರು ತನ್ನ ಮಗನನ್ನು ಸಿನಿಮಾದಿಂದ ದೂರವಿಟ್ಟಿದ್ದರು. ಬಳಿಕ ಒಂದಷ್ಟು ಅವಕಾಶಗಳು ಬಂದರೂ ಸಾಕಷ್ಟು ತಯಾರಿ ನಡೆಸಿ, ಓದೆಲ್ಲ ಮುಗಿದ ನಂತರ ಪ್ರಯತ್ನಿಸುವಂತೆ ಮಗನಿಗೆ ತಾಕೀತು ಮಾಡಿದ್ದರು. ಅದನ್ನು ಚಾಚೂ ತಪ್ಪದೆ ಪಾಲಿಸಿದ್ದ ಅರ್ಜುನ್ ಸಿನಿಮಾ ತರಬೇತಿ ಪಡೆದು, ಡ್ಯಾನ್ಸ್, ಫೈಟ್, ನಟನೆ ಸೇರಿದಂತೆ ಎಲ್ಲದರಲ್ಲಿಯೂ ಪಳಗಿಕೊಂಡು ಗನ್ಸ್ ಅಂಡ್ ರೋಸಸ್ ಚಿತ್ರವನ್ನು ಒಪ್ಪಿಕೊಂಡಿದ್ದರಂತೆ.

    Guns and Roses Kannada Movie Team

    ಇಲ್ಲಿ ಅವರಿಗೆ ಪವರ್ ಫುಲ್ ಪಾತ್ರವೇ ಸಿಕ್ಕಿದೆ. ಮಾತು ಕಡಿಮೆ ಕೆಲಸ ಜಾಸ್ತಿ ಎಂಬಂಥಾ ಗುಣ ಲಕ್ಷಣ ಹೊಂದಿರೋ ಪಾತ್ರವದು. ಈಗಿನ ಯುವ ಸಮುದಾಯದ ಬದುಕಿಗೆ ಕನ್ನಡಿ ಹಿಡಿದಂಥಾ ಆ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ ಖುಷಿ ಅವರಲ್ಲಿದೆ. ಹಿರಿಯ ನಟರ ಜೊತೆ ನಟಿಸುತ್ತಾ, ಅವರಿಂದ ಪಾಠ ಕಲಿಯುತ್ತಾ, ತಮ್ಮನ್ನು ತಾವೇ ತಿದ್ದಿಕೊಂಡು ನಟನಾಗಿ ರೂಪುಗೊಂಡ ಬಗ್ಗೆ ಅವರಲ್ಲೊಂದು ಹೆಮ್ಮೆ ಇದ್ದಂತಿದೆ. ಸಿನಿಮಾ ಸಂಬಂಧಿತವಾದ ವಿದ್ಯೆಗಳನ್ನೆಲ್ಲ ಕಲಿತು ಬಂದಿದ್ದರೂ, ಸಿನಿಮಾ ಸೆಟ್ಟು, ಕ್ಯಾಮೆರಾ ಮುಂದಿನ ಜಗತ್ತೇ ಬೇರೆಯದ್ದಿರುತ್ತೆ. ಆ ಜಗತ್ತಿಗೆ ತನ್ನನ್ನು ತಾನು ಒಡ್ಡಿಕೊಂಡು, ನಾಯಕನ ಪಾತ್ರವನ್ನು ಒಳಗಿಳಿಸಿಕೊಂಡಿರೋ ಅರ್ಜುನ್ ಪಾಲಿಗೆ ಈ ಸಿನಿಮಾ ಮೂಲಕವೇ ಗಟ್ಟಿಯಾಗಿ ನೆಲೆಕಂಡುಕೊಳ್ಳುವ ಭರವಸೆಯೂ ಇದೆ.

    Guns And Roses

    ಇಲ್ಲಿ ನಾನಾ ಚಹರೆಗಳನ್ನು ಹೊಂದಿರುವ ಪಾತ್ರಕ್ಕೆ ಅರ್ಜುನ್ ಜೀವ ತುಂಬಿದ್ದಾರೆ. ಅದಕ್ಕಾಗಿ ತಿಂಗಳುಗಟ್ಟಲೆ ತಯಾರಿ ನಡೆಸಿದ್ದಾರೆ. ಪಕ್ಕಾ ಆಕ್ಷನ್ ಸೀನುಗಳಲ್ಲಿಯೂ ಕೂಡಾ ಅವರು ಮಿಂಚಿದ್ದಾರಂತೆ. ಈಗಂತೂ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳ ಧ್ಯಾನ ಪ್ರೇಕ್ಷಕ ವಲಯದಲ್ಲಿದೆ. ಗಟ್ಟಿ ಕಥೆಯೊಂದಿಗೆ, ಕಮರ್ಶಿಯಲ್ ಜಾಡಿನಲ್ಲಿ ರೂಪುಗೊಂಡ ಈ ಸಿನಿಮಾ ಅಂಥಾ ಪ್ರೇಕ್ಷಕರೊಂದಿಗೆ ಎಲ್ಲ ಅಭಿರುಚಿಯವರನ್ನೂ ಸೆಳೆಯುವಂತೆ ಮೂಡಿ ಬಂದಿದೆ ಎಂಬುದು ಅರ್ಜುನ್ ಅಭಿಪ್ರಾಯ. ಪ್ರಥಮ ಚಿತ್ರದ ಮೂಲಕವೇ ಬಹುಭಾಷೆಗಳ ಪ್ರೇಕ್ಷಕರನ್ನು ತಲುಪುತ್ತಿರೋ ಥ್ರಿಲ್ ಕೂಡಾ ಸಹಜವಾಗಿಯೇ ಅರ್ಜುನ್ ರನ್ನು ಆವರಿಸಿಕೊಂಡಿದೆ. ಇದನ್ನೂ ಓದಿ: ಹಸೆಮಣೆ ಏರಿದ ‘ಸರಿಯಾಗಿ ನೆನಪಿದೆ ನನಗೆ’ ಗಾಯಕ Armaan Malik

    ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಹೆಚ್.ಆರ್ ನಟರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಗನ್ಸ್ ಅಂಡ್ ರೋಸಸ್ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅರ್ಜುನ್ ಗೆ ಯಶ್ವಿಕಾ ನಿಷ್ಕಲಾ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ 3ರಂದು ತೆರೆ ಕಾಣಲಿದೆ.

  • ಗನ್ಸ್ ಅಂಡ್ ರೋಸಸ್ ಮೂಲಕ ಮಿಂಚಲಣಿಯಾದ ರಂಗಭೂಮಿ ಪ್ರತಿಭೆ ಜಾಹ್ನವಿ!

    ಗನ್ಸ್ ಅಂಡ್ ರೋಸಸ್ ಮೂಲಕ ಮಿಂಚಲಣಿಯಾದ ರಂಗಭೂಮಿ ಪ್ರತಿಭೆ ಜಾಹ್ನವಿ!

    ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನ ‘ಗನ್ಸ್ ಅಂಡ್ ರೋಸಸ್’ ಚಿತ್ರ ಜನವರಿ 3ರಂದು ಅದ್ಧೂರಿಯಾಗಿ ತೆರೆಗಾಣುತ್ತಿದೆ. ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಗೊಳ್ಳಲಿದೆ.

    ಅರ್ಜುನ್ ನಾಯಕ ನಟನಾಗಿ ಈ ಚಿತ್ರದಲ್ಲಿ ಭರ್ಜರಿಯಾಗಿಯೇ ಎಂಟ್ರಿ ಕೊಡಲಿದ್ದಾರೆ. ಗನ್ಸ್ ಅಂಡ್ ರೋಸಸ್ ಭೂಮಿಕೆಯಿಂದ ಒಂದಷ್ಟು ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಆಗಮಿಸಲಿದ್ದಾರೆ. ಸದರಿ ಸಿನಿಮಾದ ನಾನಾ ವಿಭಾಗಗಳಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. ಹಾಗೆ ಬೆಳಕು ಕಾಣಲು ತಯಾರಾಗಿರುವ ನವ ಪ್ರತಿಭಾನ್ವಿತರ ಸಾಲಿನಲ್ಲಿ ಜಾಹ್ನವಿ ವಿಶ್ವನಾಥ್ ಕೂಡಾ ಸೇರಿಕೊಂಡಿದ್ದಾರೆ.

    ಶಾಲಾ ಕಾಲೇಜು ದಿನಗಳಿಂದಲೇ ನಟಿಯಾಗುವ ಕನಸು ಹೊತ್ತು, ಅದರಲ್ಲಿ ಪಳಗಿಕೊಳ್ಳುವ ಸಲುವಾಗಿಯೇ ರಂಗಭೂಮಿಯನ್ನು ಆಯ್ಕೆ ಮಾಡಿಕೊಂಡಿದ್ದವರು ಜಾಹ್ನವಿ. ವರ್ಷಗಟ್ಟಲೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು ತಮ್ಮ ಕನಸಿನ ಕ್ಷೇತ್ರವಾದ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ತಯಾರಾಗಿದ್ದರು. ಒಂದೊಳ್ಳೆ ಅವಕಾಶಕ್ಕಾಗಿ ಅರಸುತ್ತಿದ್ದಾಗ ಅಚಾನಕ್ಕಾಗಿ ಗನ್ಸ್ ಅಂಡ್ ರೋಸಸ್ ಚಿತ್ರತಂಡದ ಸಂಪರ್ಕ ಸಿಕ್ಕಿತ್ತು. ಆ ಹೊತ್ತಿನಲ್ಲಿ ನಿರ್ದೇಶಕರು ತಾರಾಗಣದ ಆಯ್ಕೆಗಾಗಿ ಆಡಿಷನ್ ಕರೆದಿದ್ದರು. ಈ ವಿಚಾರ ತಿಳಿದ ಜಾಹ್ನವಿ ಅದರಲ್ಲಿ ಪಾಲ್ಗೊಂಡು, ಎಲ್ಲ ಪರೀಕ್ಷೆಗಳನ್ನು ದಾಟಿಕೊಂಡಿದ್ದರು. ಈ ಹಂತದಲ್ಲಿ ಜಾಹ್ನವಿಯ ನಟನೆಯ ಕಸುವು ಗಮನಿಸಿದ ನಿರ್ದೇಶಕ ಹೆಚ್.ಎಸ್ ಶ್ರೀನಿವಾಸ್ ಕುಮಾರ್, ಚಿತ್ರದುದ್ದಕ್ಕೂ ಚಲಿಸುವ ಚೆಂದದ ಪಾತ್ರವೊಂದರಲ್ಲಿ ನಟಿಸೋ ಅವಕಾಶ ಕೊಟ್ಟಿದ್ದರು.‌ ಇದನ್ನೂ ಓದಿ: ಹೊಸ ವರ್ಷಕ್ಕೆ ಶಾಕ್‌ – ಜ.5 ರಿಂದ ಬಸ್‌ ಪ್ರಯಾಣ ದರ ಏರಿಕೆ

    Guns and Roses Kannada Movie Team

    ಜಾಹ್ನವಿ ವಿಶ್ವನಾಥ್ ಈ ಚಿತ್ರದಲ್ಲಿ ನಾಯಕಿಯ ಗೆಳತಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಅದು ಹಾಗೆ ಬಂದು, ಹೀಗೆ ಹೋಗುವ ಪಾತ್ರವಲ್ಲ. ಕಥೆಯೊಂದಿಗೇ ಚಲಿಸುತ್ತಾ, ನಿರ್ಣಾಯಕ ಘಟ್ಟಗಳಲ್ಲಿ ನಾಯಕಿಗೆ ಗೈಡ್ ಮಾಡೋ ಗಟ್ಟಿ ಪಾತ್ರವದು. ಅತ್ಯಂತ ಪ್ರಬುದ್ಧ ಚಹರೆಯ ಆ ಪಾತ್ರ ಕ್ಲೈಮ್ಯಾಕ್ಸಿನಲ್ಲಿಯೂ ತಿರುವಿಗೆ ಕಾರಣವಾಗುತ್ತದೆಯಂತೆ. ವಿದ್ಯಾಭ್ಯಾಸ ಮುಗಿಸಿಕೊಂಡಾಕ್ಷಣವೇ ನಟಿಯಾಗಬೇಕೆಂಬ ನಿರ್ಧಾರ ತಳೆದಿದ್ದ, ಅದಕ್ಕಾಗಿ ವರ್ಷಗಟ್ಟಲೆ ತಯಾರಿ ನಡೆಸಿದ್ದ ಜಾಹ್ನವಿ ಪಾಲಿಗೆ ಗನ್ಸ್ ಅಂಡ್ ರೋಸಸ್ ಮೈಲಿಗಲ್ಲಿನಂಥಾ ಚಿತ್ರ. ಇದರ ಪಾತ್ರದ ಮೂಲಕವೇ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಇರಾದೆ ಜಾಹ್ನವಿಗಿದೆ.

    ದ್ರೋಣ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ಹೆಚ್.ಆರ್ ನಟರಾಜ್ ನಿರ್ಮಾಣ ಮಾಡಿದ್ದಾರೆ. ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ 3ರಂದು ತೆರೆಗಾಣಲಿದೆ.

  • ಸಾರಥಿಯ ಕಣ್ಣಲ್ಲಿ ಮಿಂಚಿದ ಗನ್ಸ್ ಅಂಡ್ ರೋಸಸ್!

    ಸಾರಥಿಯ ಕಣ್ಣಲ್ಲಿ ಮಿಂಚಿದ ಗನ್ಸ್ ಅಂಡ್ ರೋಸಸ್!

    ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ‘ಗನ್ಸ್ ಅಂಡ್ ರೋಸಸ್’. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ ಟೀಸರ್ ಮೂಲಕ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಯುವ ಸಮುದಾಯಕ್ಕೆ ಹತ್ತಿರಾಗುವ, ಕುಟುಂಬ ಸಮೇತರಾಗಿ ನೋಡುವಂಥಾ ಗುಣ ಲಕ್ಷಣಗಳನ್ನು ಹೊಂದಿರುವ, ಸಾಮಾಜಿಕ ಸಂದೇಶವನ್ನು ಪಕ್ಕಾ ಕಮರ್ಶಿಯಲ್ ಜಾಡಿನಲ್ಲಿ ರವಾನಿಸಿರುವ ‘ಗನ್ಸ್ ಅಂಡ್ ರೋಸಸ್’ ಮುಂದಿನ ತಿಂಗಳು, ಜನವರಿ 3ರಂದು ಅದ್ಧೂರಿಯಾಗಿ ಕನ್ನಡವೂ ಸೇರಿದಂತೆ 5 ಭಾಷೆಗಳಲ್ಲಿ ತೆರೆಕಾಣಲಿದೆ. ಈ ಮೂಲಕ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಅವರ 25 ವರ್ಷಗಳ ಸಿನಿಮಾ ಯಾನ ಸಾರ್ಥಕ ಕಾಣುವ ಘಳಿಗೆ ಹತ್ತಿರವಾಗಿದೆ.

    ಟೀಸರ್ ಮೂಲಕ ‘ಗನ್ಸ್ ಅಂಡ್ ರೋಸಸ್’ (Guns And Roses) ಆಂತರ್ಯದ ಕಸುವಿನ ಅನಾವರಣವಾಗಿದೆ. ಈ ಮೂಲಕ ಒಂದಷ್ಟು ಭರವಸೆಯೂ ಮೂಡಿಕೊಂಡಿದೆ. ಹೊಸಬರು ಮತ್ತು ಅನುಭವಿಗಳ ಸಮಾಗಮದಂತಿರುವ ತಂಡವೊಂದು ಹೊಸ ವರ್ಷದ ಹೊಸ್ತಿಲಲ್ಲಿಯೇ ಗೆಲುವು ದಾಖಲಿಸುವ ನಿರೀಕ್ಷೆಗಳೂ ಮೂಡಿಕೊಂಡಿವೆ. ಇದೆಲ್ಲವನ್ನೂ ಕಂಡು ನಿರ್ದೇಶಕ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಥ್ರಿಲ್ ಆಗಿದ್ದಾರೆ. ಯಾಕೆಂದರೆ, ಈ ಸಿನಿಮಾದೊಂದಿಗೆ ನಿರ್ದೇಶಕರಾಗುವ ಕನಸೊಂದು ನನಸಾಗಿದೆ. ಇದಕ್ಕಾಗಿ ಅವರು ಭರ್ತಿ 25 ವರ್ಷಗಳನ್ನು ಪಣವಾಗಿಸಿದ್ದಾರೆ. ಪೊಲೀಸ್ ಸ್ಟೋರಿ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಅವರು ಕನಸಿನ ಹಾದಿಯಲ್ಲಿ ಮೊದಲ ಹೆಜ್ಜೆಯಿಟ್ಟಿದ್ದರು. ಆ ಬಳಿಕ ನೂರಾರು ಸಿನಿಮಾಗಳಲ್ಲಿ ಕಾರ್ಯ ನಿರ್ವಹಿಸಿ ಕಡೆಗೂ ‘ಗನ್ಸ್ ಅಂಡ್ ರೋಸಸ್’ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

    ಹೀಗೆ ಸುದೀರ್ಘ ಕಾಲಾವಧಿಯವರೆಗೂ ಅವುಡುಗಚ್ಚಿ ಕಾದಿದ್ದ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಅವರ ಪಾಲಿಗೆ ಮೊದಲ ಚಿತ್ರವೇ ಬಹುಭಾಷಾ ಚಿತ್ರವಾಗುವಂಥಾ ಸುಯೋಗವೂ ಲಭಿಸಿದೆ. ಈಗಿನ ಜನರೇಷನ್‌ನ ಹುಡುಗರನ್ನು ಸಂಪೂರ್ಣವಾಗಿ ಸೆಳೆಯುತ್ತಲೇ, ಎಲ್ಲ ವರ್ಗದ ಪ್ರೇಕ್ಷಕರ ಪಾಲಿಗೂ ರುಚಿಸುವ ಸಿನಿಮಾ ರೂಪಿಸಿದ ತುಂಬು ತೃಪ್ತಿಯೂ ಅವರಲ್ಲಿದೆ. ಈ ಇಪ್ಪತೈದು ವರ್ಷಗಳ ಯಾನದಲ್ಲಿ ಅವರ ಪಾಲಿಗೆ ಪ್ರೇಕ್ಷಕರ ನಾಡಿ ಮಿಡಿತದ ಅರಿವಾಗಿದೆ. ಕಾಲದಿಂದ ಕಾಲಕ್ಕೆ ಅಪ್‌ಡೇಟ್ ಆಗುತ್ತಾ ಸಾಗುವ ಮನಃಸ್ಥಿತಿಯೂ ಸಿದ್ಧಿಸಿದೆ. ಈ ಎಲ್ಲ ಅನುಭವಗಳನ್ನು ಧಾರೆಯೆರೆದು ಒಂದೊಳ್ಳೆ ಸಿನಿಮಾ ಕಟ್ಟಿ ಕೊಟ್ಟ ಧನ್ಯತಾ ಭಾವ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಅವರಲ್ಲಿದೆ.

    ಇಷ್ಟೂ ವರ್ಷಗಳ ಕಾಲ ಹಲವಾರು ಘಟಾನುಘಟಿ ಕಲಾವಿದರೊಂದಿಗೆ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಅವರು ಒಡನಾಡಿದ್ದಾರೆ. ಇದರ ಫಲವಾಗಿಯೇ ಸದರಿ ಚಿತ್ರದ ಪಾತ್ರಗಳಿಗೆ ಒಪ್ಪುವಂಥಾ ಕಲಾವಿದರೇ ಸಿಗಲು ಸಾಧ್ಯವಾಗಿದೆ. ನಟರಾದ ಕಿಶೋರ್, ಶೋಭರಾಜ್, ಅವಿನಾಶ್ ಇಲ್ಲಿ ಪ್ರಧಾನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದರಲ್ಲಿ ನಟಿಸುವ ಕೋರಿಕೆಯನ್ನು ಇವರ ಮುಂದಿಟ್ಟಾಗ ರೇಟಿನ ಬಗ್ಗೆ ಮಾತಾಡದೆ, ಡೇಟ್ ಯಾವತ್ತೆಂದು ಕೇಳುವ ಔದಾರ್ಯ ಮೆರೆದ ಈ ನಟರೆಲ್ಲರ ಬಗ್ಗೆ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಅವರಲ್ಲೊಂದು ಕೃತಜ್ಞತಾ ಭಾವವಿದೆ.

    ಸ್ಯಾಂಡಲ್‌ವುಡ್‌ನಲ್ಲಿಯೂ ಡ್ರಗ್ಸ್ ವಿಚಾರದ ಸದ್ದಾಗಿದ್ದ ಘಳಿಗೆಯಲ್ಲಿಯೇ ಈ ಚಿತ್ರದ ಕಥೆ ಕಾವುಗಟ್ಟಿಕೊಂಡಿತ್ತು. ಶರತ್ ಬರೆದ ಈ ಕಥೆ ಸಮಾಜವನ್ನು ಸರಿದಿಕ್ಕಿನಲ್ಲಿ ಸಾಗಿಸುವಂಥಾ ಸಂದೇಶವೂ ಇದೆ. ಅದೆಲ್ಲವನ್ನೂ ಪಕ್ಕಾ ಮನೋರಂಜನೆ ಮತ್ತು ಕಮರ್ಶಿಯಲ್ ಅಂಶಗಳೊಂದಿಗೆ ಸಮರ್ಥವಾಗಿ ದೃಶ್ಯೀಕರಿಸಿದ ತೃಪ್ತಿ ನಿರ್ದೇಶಕರದ್ದು. ಮೈಸೂರಿನ ಹುಣಸೂರು ಭಾಗದವರಾದ ನಿರ್ದೇಶಕರಿಗೆ ಆರಂಭದಿಂದಲೂ ಸಿನಿಮಾಸಕ್ತಿ ಇತ್ತು. ಅಲ್ಲಿಂದಲೇ ಸಿನಿಮಾ ರಂಗಕ್ಕೆ ತೆರಳಿ ಸಾಧಿಸಿದ್ದವರನ್ನೆಲ್ಲ ಬೆರಗುಗಣ್ಣಿನಿಂದ ನೋಡುತ್ತಾ ಬಂದಿದ್ದ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಇದೀಗ ತಾವೇ ಎಲ್ಲರ ಗಮನ ಸೆಳೆದಿದ್ದಾರೆ. 25 ವರ್ಷಗಳಿಂದ ಇವರನ್ನು ನೋಡುತ್ತಾ ಬಂದಿದ್ದ ನಿರ್ಮಾಪಕ ಎಚ್.ಆರ್ ನಟರಾಜ್ ಕೂಡಾ ಆ ನಂಬಿಕೆಯಿಂದಲೇ ನಿರ್ದೇಶನದ ಜವಾಬ್ದಾರಿ ವಹಿಸಿದ್ದರು. ಅದನ್ನು ಉಳಿಸಿಕೊಳ್ಳುವಂಥಾ ಸಿನಿಮಾ ಮಾಡಿದ ಖುಷಿ ನಿರ್ದೇಶಕರಲ್ಲಿದೆ. ಈ ಚಿತ್ರ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.

    ಈಗ ವಾತಾವರಣ ಬದಲಾಗಿದೆ. ಸಿನಿಮಾ ರಂಗಕ್ಕೆ ಪ್ರವೇಶ ಪಡೆಯೋದು ಸೇರಿದಂತೆ ಎಲ್ಲವೂ ಸಲೀಸಾಗಿದೆ. ಆದರೆ, ಎಂಟ್ರಿ ಕೊಡೋದೇ ಕಷ್ಟವಾಗಿದ್ದ ಕಾಲಘಟ್ಟದಲ್ಲಿ ಸಿನಿಮಾ ರಂಗಕ್ಕೆ ಬಂದು, ಇಪ್ಪತೈದು ವರ್ಷಗಳ ಕಾಲ ಅಲ್ಲಿಯೇ ಮುಂದುವರೆದಿರುವವರು ಹೆಚ್.ಎಸ್ ಶ್ರೀನಿವಾಸ್ ಕುಮಾರ್. ಆ ಸುದೀರ್ಘ ಅನುಭವಗಳ ಬಲದಿಂದಲೇ ಅವರು ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಟೀಸರ್‌ಗೆ ಸಿಗುತ್ತಿರುವ ಭರಪೂರ ಮೆಚ್ಚುಗೆ ಅವರೊಳಗಿನ ಭರವಸೆಯನ್ನು ಇಮ್ಮಡಿಗೊಳಿಸಿದೆ. ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಹೆಚ್.ಆರ್ ನಟರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಖ್ಯಾತ ಸಿನಿಮಾ ಕಥೆಗಾರ ಅಜಯ್ ಕುಮಾರ್ (Ajay Kumar) ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ (Yashika Nishkala) ಅರ್ಜುನ್‌ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ 3ರಂದು ತೆರೆಗಾಣಲಿದೆ.

  • ಮಾಸ್ ಕಥನದ ಸುಳಿವಿನೊಂದಿಗೆ ಗಮನ ಸೆಳೆದ `ಗನ್ಸ್ ಅಂಡ್ ರೋಸಸ್’ ಟೀಸರ್!

    ಮಾಸ್ ಕಥನದ ಸುಳಿವಿನೊಂದಿಗೆ ಗಮನ ಸೆಳೆದ `ಗನ್ಸ್ ಅಂಡ್ ರೋಸಸ್’ ಟೀಸರ್!

    ಸಿನಿಮಾ ಪಾಲಿಗೆ ಎಂದೂ ಹಳತಾಗದ ಕಥಾ ವಸ್ತುಗಳಲ್ಲಿ ಭೂಗತ ಜಗತ್ತೂ ಸೇರಿಕೊಂಡಿದೆ. ಆಯಾ ನಿರ್ದೇಶಕರ ಹೊಸತನದ ದೃಷ್ಟಿಗೆ ಈ ಲೋಕದ ಕಥಾ ಎಳೆಗಳು ತಾಜಾತನದಿಂದ ದಕ್ಕೋದಿದೆ. ಇದೀಗ ಪ್ರೇಕ್ಷಕರ ಗಮನ ಸೆಳೆದುಕೊಂಡಿರುವ `ಗನ್ಸ್ ಅಂಡ್ ರೋಸಸ್’ (Guns And Roses) ಚಿತ್ರ ಟೀಸರ್ ನಲ್ಲಿಯೂ ಅಂಥಾದ್ದೇ ಕಥನದ ಸುಳಿವು ಸಿಕ್ಕಿದೆ. ದೃಶ್ಯಗಳಲ್ಲಿರೋ ಆವೇಗ, ಶ್ರೀಮಂತಿಕೆ, ಹೊಸತನಗಳ ಮೂಲಕ ಈ ಸಿನಿಮಾದ ಟೀಸರ್ (Kannada Cinema Teaser) ಪ್ರೇಕ್ಷಕರ ನಡುವಲ್ಲೊಂದು ಚರ್ಚೆ ಹುಟ್ಟು ಹಾಕಿದೆ. ಐದು ಭಾಷೆಗಳಲ್ಲಿ ತಯಾರುಗೊಂಡಿರುವ ಈ ಚಿತ್ರ ಇದೇ ಡಿಸೆಂಬರ್ 27 ರಂದು ಬಿಡುಗಡೆಗೊಳ್ಳಲಿದೆ.

    ವಿಶೇಷವೆಂದರೆ, ಇದು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ತಯಾರಾಗಿರುವ ಚಿತ್ರ. ಇದರ ನಾಯಕ ಅರ್ಜುನ್ ಕಥೆಗಾರರಾಗಿ, ಸಂಭಾಷಣಾಕಾರರಾಗಿ, ನಟರಾಗಿ ಹೆಸರಾಗಿರುವ ಅಜಯ್ ಕುಮಾರ್ ಅವರ ಪುತ್ರ. ಈ ಪ್ಯಾನ್‌ಇಂಡಿಯಾ ಚಿತ್ರದ ಮೂಲಕ ಅವರು ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಅವರಿಲ್ಲಿ ಪಕ್ಕಾ ಮಾಸ್ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ. ಈಗಾಗಲೇ ಬೇರೆ ಬೇರೆ ಭಾಷೆಗಳ ವಿತರಕರು ಚಿತ್ರವನ್ನು ವೀಕ್ಷಿಸಿದ್ದಾರೆ. ಅವರೆಲ್ಲರೂ ಅರ್ಜುನ್ ನಟನೆಯ ಕಸುವನ್ನು ಕಂಡು ಅಕ್ಷರಶಃ ಬೆರಗಾಗಿದ್ದಾರೆ. ಎಲ್ಲ ಭಾಷೆಗಳಿಗೂ ಹೊಂದಿಕೊಳ್ಳುವಂಥಾ ಅರ್ಜುನ್ ಅವರ ಛಾತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟನೆ, ಸಾಹಸ ಸನ್ನಿವೇಶ, ಡ್ಯಾನ್ಸ್ ಸೇರಿದಂತೆ ಎಲ್ಲದರಲ್ಲಿಯೂ ಅವರು ಪಳಗಿದ ನಟನಂತೆ ಕಾಣಿಸಿಕೊಂಡಿದ್ದಾರೆ. ಹೀಗೊಂದು ಮೆಚ್ಚುಗೆ ಪರಭಾಷಾ ಚಿತ್ರರಂಗದ ಮಂದಿಯಿಂದಲೇ ಕೇಳಿ ಬಂದಿದೆ ಎಂದರೆ, ಈ ಸಿನಿಮಾದ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿಕೊಳ್ಳುತ್ತದೆ.

    ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಎಚ್.ಆರ್ ನಟರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶನ ವಿಭಾಗದಲ್ಲಿ ಇಪ್ಪತೈದು ವರ್ಷಗಳಿಂದ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಸದರಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಪೋಲಿಸ್ ಸ್ಟೋರಿ ಚಿತ್ರದಿಂದ ನಿರ್ದೇಶನ ವಿಭಾಗದಲ್ಲಿ ಕಾರ್ಯಾರಂಭ ಮಾಡಿದ್ದ ಹೆಚ್.ಎಸ್ ಶ್ರೀನಿವಾಸ್ ಕುಮಾರ್, ಇದುವರೆಗೂ ನೂರಾರು ಸಿನಿಮಾಗಳ ಭಾಗವಾಗಿದ್ದಾರೆ. ಅಂಥಾ ಅನುಭವಗಳನ್ನೆಲ್ಲ ಒಟ್ಟುಗೂಡಿಸಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಇದು ಭೂಗತ ಜಗತ್ತಿನ ಕಥೆಯೊಂದಿಗೆ ಮೈಕೈ ತುಂಬಿಕೊಂಡಿರುವ ಕಥಾನಕ. ಅದರೊಂದಿಗೆ ನವಿರು ಪ್ರೇಮ ಕಥೆಯೂ ಸೇರಿಕೊಂಡಿದೆಯಂತೆ. ಇದುವರೆಗೂ ಕತ್ತಲ ಜಗತ್ತಿಗೆ ಕಣ್ಣಾದ ಅನೇಕ ಕಥೆಗಳು ಬಂದಿವೆ. ಆದರೆ, ಇಲ್ಲಿರೋದು ಭಿನ್ನ ಧಾಟಿಯ ಕಥೆ ಅನ್ನೋದು ಚಿತ್ರತಂಡದ ಮಾತು.

    ಬೆಂಗಳೂರು ಸುತ್ತಮುತ್ತಲ ಸುಂದರ ಲೊಕೇಶನ್‌ಗಳಲ್ಲಿ ಈ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಇದೀಗ ಎಲ್ಲ ಕೆಲಸ ಕಾರ್ಯ ಮುಗಿಸಿಕೊಂಡಿರೋ ಗನ್ಸ್ ಅಂಡ್ ರೋಸಸ್ ಬಿಡುಗಡೆಗೆ ತಯಾರಾಗಿ ನಿಂತಿದೆ. ಈಗಾಗಲೇ ಒಂದು ಲಿರಿಕಲ್ ವೀಡಿಯೋ ಸಾಂಗ್ ಅನ್ನು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಗೊಳಿಸಲಾಗಿದೆ. ಹಂತ ಹಂತವಾಗಿ ಮಿಕ್ಕುಳಿದ ಹಾಡುಗಳನ್ನು ಬಿಡುಗಡೆಗೊಳಿಸುವ ಆಲೋಚನೆಯಲ್ಲಿ ಚಿತ್ರತಂಡವಿದೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಅವಿನಾಶ್, ಕಿಶೋರ್ ಮುಂತಾದವರ ತಾರಾಗಣವಿದೆ.

  • ಪಂಚಭಾಷೆಗಳ ‘ಗನ್ಸ್ ಅಂಡ್ ರೋಸಸ್’ ಗೆ ಸೆನ್ಸಾರ್

    ಪಂಚಭಾಷೆಗಳ ‘ಗನ್ಸ್ ಅಂಡ್ ರೋಸಸ್’ ಗೆ ಸೆನ್ಸಾರ್

    ಹೆಚ್ ಆರ್ ನಟರಾಜ್ ನಿರ್ಮಾಣದ, ಹೆಚ್ ಎಸ್ ಶ್ರೀನಿವಾಸಕುಮಾರ್ ನಿರ್ದೇಶನದ ಹಾಗೂ ಕನ್ನಡ ಚಿತ್ರರಂಗದ ಹೆಸರಾಂತ ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್ ನಾಯಕರಾಗಿ ನಟಿಸಿರುವ ಅಂಡರ್ ವಲ್ಡ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ‘ಗನ್ಸ್ ಅಂಡ್ ರೋಸಸ್’ (Guns and Roses) ಚಿತ್ರ  ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿದೆ.

    ಐದು ಭಾಷೆಗಳಲ್ಲೂ ಪ್ರಾದೇಶಿಕ ಸೆನ್ಸಾರ್ (Censor) ಮಂಡಳಿ ಈ ಚಿತ್ರವನ್ನು ವೀಕ್ಷಿಸಿದ್ದು, ಯು/ಎ ಪ್ರಮಾಣಪತ್ರ ನೀಡಿದೆ. ಸದ್ಯದಲ್ಲೇ ಟೀಸರ್ ಹಾಗೂ ಹಾಡುಗಳು ರಿಲೀಸ್ ಆಗಲಿದ್ದು, ಏಪ್ರಿಲ್ ಕೊನೆಯಲ್ಲಿ ಚಿತ್ರ ತೆರೆಗೆ ಬರಲಿದೆ‌.  ಬೇಸಿಗೆಯ ರಜೆಗೆ ಉತ್ತಮ ಮನೋರಂಜನೆ ನೀಡುವ ಚಿತ್ರ ನಮ್ಮದಾಗಲಿದೆ ಎಂಬ ಅಭಿಪ್ರಾಯ ಚಿತ್ರತಂಡದ್ದು.

    ಶರತ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಶಶಿಕುಮಾರ್ ಸಂಗೀತ ನಿರ್ದೇಶನ, ಆರ್ ಜನಾರ್ದನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮಲ್ಲೇನಹಳ್ಳಿ ರಾಜು ನಿರ್ಮಾಣ ನಿರ್ವಹಣೆ ಮತ್ತು ಮುನಿರಾಜ್ ಅವರ ಸಹ ನಿರ್ದೇಶನವಿದೆ.

    ಅರ್ಜುನ್ (Arjun) ಅವರಿಗೆ ನಾಯಕಿಯಾಗಿ ಯಶ್ಚಿಕ ನಿಷ್ಕಲ ನಟಿಸಿದ್ದಾರೆ.  ಕಿಶೋರ್, ಶೋಭ್ ರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ಅಶ್ವಥ್ ನೀನಾಸಂ, ಹರೀಶ್, ಜೀವನ್ ರಿಚಿ, ಅರುಣಾ ಬಾಲರಾಜ್, ಡೈಮಂಡ್‌ ರಾಜಣ್ಣ ಮುಂತಾದವರು “ಗನ್ಸ್ ಅಂಡ್ ರೋಸಸ್” ಚಿತ್ರದ ತಾರಾಬಳಗದಲ್ಲಿದ್ದಾರೆ‌.

  • ಮತ್ತೆ ಗನ್ ಹಿಡಿದ ನಟ ಕಿಶೋರ್

    ಮತ್ತೆ ಗನ್ ಹಿಡಿದ ನಟ ಕಿಶೋರ್

    ಹೆಚ್. ಆರ್. ನಟರಾಜ್ ನಿರ್ಮಾಣದ, ಹೆಚ್ ಎಸ್ ಶ್ರೀನಿವಾಸಕುಮಾರ್ ನಿರ್ದೇಶನದಲ್ಲಿ ಅರ್ಜುನ್ (Arjun) ನಾಯಕರಾಗಿ ನಟಿಸಿರುವ ‘ಗನ್ಸ್ ಅಂಡ್ ರೋಸಸ್’ (Guns and Roses) ಚಿತ್ರದಲ್ಲಿ ಖ್ಯಾತ ನಟ ಕಿಶೋರ್ ಅಭಿನಯಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಿಶೋರ್ (Kishore) ಅವರು ಕಾಣಿಸಿಕೊಂಡಿದ್ದು, ಇತ್ತೀಚಿಗೆ ಅವರು ಅಭಿನಯಿಸಿದ ಸನ್ನಿವೇಶಗಳನ್ನು ಬೆಂಗಳೂರಿನಲ್ಲಿ ಚಿತ್ರಿಸಿಕೊಳ್ಳಲಾಗಿದೆ.  ಗನ್ಸ್ ಅಂಡ್ ರೋಸಸ್ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಒಂದೆರಡು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.

    ಶರತ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಶಶಿಕುಮಾರ್ ಸಂಗೀತ ನಿರ್ದೇಶನ, ಆರ್ ಜನಾರ್ದನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮಲ್ಲೇನಹಳ್ಳಿ ರಾಜು ನಿರ್ಮಾಣ ನಿರ್ವಹಣೆ ಮತ್ತು ಮುನಿರಾಜ್ (ಕಬ್ಜ) ಅವರ ಸಹ ನಿರ್ದೇಶನವಿದೆ.

    ಕಥೆಗಾರರಾದ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಯಶ್ಚಿಕ ನಿಷ್ಕಲ. ಕಿಶೋರ್, ಶೋಭ್ ರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ಅಶ್ವಥ್ ನೀನಾಸಂ, ಹರೀಶ್, ಜೀವನ್ ರಿಚಿ, ಅರುಣಾ ಬಾಲರಾಜ್, ಡೈಮಂಡ್‌ ರಾಜಣ್ಣ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ‌.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಗನ್ಸ್ ಅಂಡ್ ರೋಸಸ್’ ಚಿತ್ರಕ್ಕಾಗಿ ಹಾಡಿದ ವಿಜಯ್ ಪ್ರಕಾಶ್

    ‘ಗನ್ಸ್ ಅಂಡ್ ರೋಸಸ್’ ಚಿತ್ರಕ್ಕಾಗಿ ಹಾಡಿದ ವಿಜಯ್ ಪ್ರಕಾಶ್

    ದ್ಭುತ ಕಂಠದಿಂದಾಗಿ ವಿಶ್ವದಾದ್ಯಂತ ಜನಪ್ರಿಯರಾಗಿರುವ ಗಾಯಕ ವಿಜಯ್ ಪ್ರಕಾಶ್ (Vijay Prakash),  ‘ಗನ್ಸ್ ಆ್ಯಂಡ್ ರೋಸಸ್’ (Guns and Roses) ಚಿತ್ರದ ಹಾಡೊಂದನ್ನು (Song) ‌ಹಾಡಿದ್ದಾರೆ. ಶರಣ್ ಕುಮಾರ್ ಬರೆದಿರುವ ‘108 ಗೆ ಫೋನ್ ಮಾಡೊ ಶಿಷ್ಯ. ಸಾವು ಬದುಕಿನ ಮಧ್ಯೆ ಹೋರಾಡೊ ವಿಷ್ಯ’ ಎಂಬ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದು, ಇತ್ತೀಚೆಗೆ ಹೊಸಕೆರೆಹಳ್ಳಿಯ ದ್ವಾರ ಸ್ಟುಡಿಯೋದಲ್ಲಿ ಧ್ವನಿಮುದ್ರವಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

    ರಾಜಕೀಯದಲ್ಲಿ ಸಕ್ರಿಯರಾಗಿರುವ ಉದ್ಯಮಿ ಹೆಚ್. ಆರ್. ನಟರಾಜ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಹೆಚ್.ಎಸ್. ಶ್ರೀನಿವಾಸ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಶರತ್. ಎಸ್ ಅವರದು. ಶಶಿಕುಮಾರ್ ಸಂಗೀತ ನಿರ್ದೇಶನ, ಆರ್ ಜನಾರ್ದನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

    ಕಥೆಗಾರರಾದ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಯಶ್ಚಿಕ ನಿಷ್ಕಲ. ಶೋಭ್ ರಾಜ್, ಅವಿನಾಶ್, ಅಶ್ವಥ್ ನೀನಾಸಂ, ಹರೀಶ್, ಜೀವನ್ ರಿಚಿ, ಅರುಣಾ ಬಾಲರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ‌.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]