Tag: gunpoint

  • ಪಾಕ್ ಪ್ರಧಾನಿ, ಮಾಜಿ ಪತ್ನಿಯ ಕಾರಿನ ಮೇಲೆ ಗುಂಡಿನ ದಾಳಿ

    ಪಾಕ್ ಪ್ರಧಾನಿ, ಮಾಜಿ ಪತ್ನಿಯ ಕಾರಿನ ಮೇಲೆ ಗುಂಡಿನ ದಾಳಿ

    ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಮಾಜಿ ಪತ್ನಿ ರೇಹಮ್ ಅವರ ಕಾರಿನ ಮೇಲೆ ಗುಂಡಿನದಾಳಿಯಾಗಿದೆ. ಈ ವಿಚಾರವಾಗಿ ಕೋಪಗೊಂಡ ರೇಹಮ್, ಇಮ್ರಾನ್ ಖಾನ್ ವಿರುದ್ಧ ಟ್ವಿಟ್ಟರ್‌ನಲ್ಲಿ ವಾಗ್ದಾಳಿ ಮಾಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?: ನಾನು ನನ್ನ ಸಂಬಂಧಿಯೊಬ್ಬರ ವಿವಾಹ ಸಮಾರಂಭದಿಂದ ಭಾನುವಾರ ರಾತ್ರಿ ವಾಪಸ್ ಬರುತ್ತಿದ್ದೆ. ಆಗ ನನ್ನ ಕಾರಿನ ಮೇಲೆ ಗುಂಡಿನ ದಾಳಿಯಾಗಿದೆ. ಮೋಟರ್ ಸೈಕಲ್ ಮೇಲೆ ಬಂದ ಇಬ್ಬರು ಅಪರಿಚಿತರು ಗುಂಡು ಹಾರಿಸಿದ್ದಾರೆ. ನನ್ನ ಆಪ್ತ ಕಾರ್ಯದರ್ಶಿ ಮತ್ತು ಚಾಲಕ ಕೂಡ ಕಾರಿನಲ್ಲಿ ಇದ್ದರು. ಅದೃಷ್ಟಕ್ಕೆ ಏನೂ ಅಪಾಯ ಆಗಲಿಲ್ಲ. ಈ ಇಮ್ರಾನ್ ಖಾನ್ ಆಡಳಿತದ ಹೊಸ ಪಾಕಿಸ್ತಾನ, ಈಗ ಹೇಡಿಗಳು, ಕೊಲೆಗಡುಕರು, ದುರಾಸೆಬುರುಕರ ರಾಜ್ಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ನನಗೆ ಗಾಯವಾಗದೆ ಇದ್ದರೂ ಘಟನೆಯಿಂದ ತುಂಬ ಕೋಪ ಬಂದಿದೆ. ಹಾಗೇ, ಜನಸಾಮಾನ್ಯರ ಬಗ್ಗೆ ಆತಂಕವಾಗುತ್ತಿದೆ. ಇದೊಂದು ಹೇಡಿತನದ ಕೃತ್ಯ ಮಾಜಿ ಪತಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ:  ‘ಫಿಟ್ ಇಂಡಿಯಾ’ ಬಗ್ಗೆ ಅರಿವು ಮೂಡಿಸಲು ಜಿಮ್‌ನಲ್ಲಿ ವರ್ಕೌಟ್ ಮಾಡಿದ ಮೋದಿ

    ಟಿವಿ ನಿರೂಪಕಿ ರೇಹಮ್ 2014ರ ಅಕ್ಟೋಬರ್ 30ರಂದು ಇಮ್ರಾನ್ ಖಾನ್‍ರನ್ನು ಮದುವೆಯಾಗಿದ್ದರು. ನಂತರ 2015ರಲ್ಲಿ ವಿಚ್ಛೇದನ ನೀಡಿದ್ದಾರೆ. ಇಮ್ರಾನ್ ಖಾನ್ ಆಡಳಿತ, ಅವರ ಸಾರ್ವಜನಿಕ ನಿಯಮಗಳ ವಿರುದ್ಧ ಪದೇಪದೆ ರೇಹಮ್ ವಾಗ್ದಾಳಿ ನಡೆಸುತ್ತಾರೆ.