Tag: gunman

  • ಮಾಜಿ ಸಂಸದ ಅನಂತ್‌ಕುಮಾರ್ ಹೆಗಡೆ ಗನ್ ಮ್ಯಾನ್ ಶ್ರೀಧರ್ ಅಮಾನತು

    ಮಾಜಿ ಸಂಸದ ಅನಂತ್‌ಕುಮಾರ್ ಹೆಗಡೆ ಗನ್ ಮ್ಯಾನ್ ಶ್ರೀಧರ್ ಅಮಾನತು

    ಕಾರವಾರ: ನೆಲಮಂಗಲ ರೋಡ್ ರೇಜ್ (Nelamangala Road Rage) ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಗನ್‌ಮ್ಯಾನ್ ಶ್ರೀಧರ್‌ರವರನ್ನು ಮುಂದಿನ ಆದೇಶದವರೆಗೂ ಅಮಾನತು ಮಾಡಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಆದೇಶ ಹೊರಡಿಸಿದ್ದಾರೆ.

    ಮಾಜಿ ಸಂಸದ ಅನಂತಕುಮಾರ್ ಹೆಗಡೆ ಗನ್‌ಮ್ಯಾನ್ ಆಗಿ ಕಳೆದ 10 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಶ್ರೀಧರ್ ಮಾಜಿ ಸಂಸದರ ಆಪ್ತ ಕೂಡ. ಇನ್ನು ನೆಲಮಂಗಲದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಇವರು ಸಹ ಆರೋಪಿಯಾಗಿದ್ದು, ಇಂದು ಜಾಮೀನು ಪಡೆದಿದ್ದರು. ಇದನ್ನೂ ಓದಿ: ಶಾಸಕರ ಅಸಮಾಧಾನ ಎಲ್ಲವನ್ನೂ ಸಿಎಂ ಹ್ಯಾಂಡಲ್ ಮಾಡ್ತಾರೆ: ಸಚಿವ ಎಂಬಿ ಪಾಟೀಲ್

    ಆದರೇ ಇದೀಗ ಡಿ.ಆರ್ ಪೊಲೀಸ್ ವಿಭಾಗದಲ್ಲಿ ಇವರ ಅಮಾನತು ಜೊತೆ ಗಣ್ಯ ವ್ಯಕ್ತಿಗಳಿಗೆ ಗನ್‌ಮ್ಯಾನ್ ಆಗಿರುವ ಜಿಲ್ಲೆಯ ಐದು ವರ್ಷಕ್ಕಿಂತ ಹೆಚ್ಚು ಸಮಯ ಸೇವೆ ಮಾಡುತ್ತಿರುವ ಗನ್ ಮ್ಯಾನ್‌ಗಳಿಗೆ ಸಹ ಇದೀಗ ಈ ಘಟನೆ ನಂತರ ವರ್ಗಾವಣೆ ಆದೇಶ ಮಾಡಲಾಗಿದ್ದು, ಹತ್ತು ಜನ ಗನ್‌ಮ್ಯಾನ್‌ಗಳಿಗೆ ಇಂದು ವರ್ಗಾವಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಆದೇಶಿಸಿದ್ದಾರೆ.  ಇದನ್ನೂ ಓದಿ:  ನಾಳೆ ಬಾಹ್ಯಾಕಾಶ ಯೋಜನೆಯ ಆಕ್ಸಿಯಮ್ 4 ಉಡಾವಣೆ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಪ್ರಯಾಣ

  • ಮದ್ದೂರು ಶಾಸಕ ಉದಯ್‌ ಮನೆಯಲ್ಲೇ ಗನ್‌ಮ್ಯಾನ್‌ ಮೇಲೆ ಹಲ್ಲೆ ನಡೆಸಿತ್ತು ದರ್ಶನ್‌ ಗ್ಯಾಂಗ್‌!

    ಮದ್ದೂರು ಶಾಸಕ ಉದಯ್‌ ಮನೆಯಲ್ಲೇ ಗನ್‌ಮ್ಯಾನ್‌ ಮೇಲೆ ಹಲ್ಲೆ ನಡೆಸಿತ್ತು ದರ್ಶನ್‌ ಗ್ಯಾಂಗ್‌!

    – ಲೋಕಸಭಾ ಚುನಾವಣಾ ಸಮಯದಲ್ಲಿ ಶಾಸಕರ ಮನೆಯಲ್ಲೇ ಹಲ್ಲೆ
    – ಗನ್‌ಮ್ಯಾನ್‌ ಜೊತೆ ರಾಜಿ ಸಂಧಾನ ನಡೆಸಿದ್ದ ಉದಯ್‌

    ಮಂಡ್ಯ: ದರ್ಶನ್ ಗ್ಯಾಂಗ್ (Darshan Gang) ಪೊಲೀಸ್ ಪೇದೆ (Police Constable) ಮೇಲೆಯೇ ಹಲ್ಲೆ ನಡೆಸಿದ್ದ ವಿಚಾರ ಈಗ ತಡವಾಗಿ ಬೆಳಕಿಗೆ ಬಂದಿದೆ.

    ಹೌದು. ಲೋಕಸಭಾ ಚುನಾವಣೆ (Lok Sabha Election) ಸಮಯದಲ್ಲಿ ದರ್ಶನ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು (Star Chandru) ಪರ ಪ್ರಚಾರಕ್ಕೆ ಮಂಡ್ಯಕ್ಕೆ (Mandya) ಆಗಮಿಸಿದ್ದರು. ಏಪ್ರಿಲ್ 22 ರಂದು ಮದ್ದೂರು (Madduru) ಕ್ಷೇತ್ರದಲ್ಲಿ ಸ್ಟಾರ್ ಚಂದ್ರು ಪರ ದರ್ಶನ್ ಪ್ರಚಾರ ನಡೆಸುತ್ತಿದ್ದಾಗ ಮದ್ದೂರು ಶಾಸಕ ಉದಯ್ (MLA Uday) ಅವರ ಗನ್‌ ಮ್ಯಾನ್‌ ಆಗಿದ್ದ ನಾಗೇಶ್ (Nagesh) ಜೊತೆ ದರ್ಶನ್ ಪಟಾಲಂ ಗಲಾಟೆ ನಡೆಸಿತ್ತು.

    ಮುಖಂಡರನ್ನ ಹತ್ತಿರಕ್ಕೆ ಬಿಟ್ಟುಕೊಳ್ಳುವ ವಿಚಾರದಲ್ಲಿ ಲಕ್ಷ್ಮಣ್, ನಾಗರಾಜು ಹಾಗೂ ಇತರರು ಡಿಎಆರ್ ಪೇದೆ ನಾಗೇಶ್ ಜೊತೆ ಜಗಳ ಮಾಡಿದ್ದರು. ಇದೇ ಜಗಳ ಮುಂದುವರಿಸಿ ಕದಲೂರು ಉದಯ್ ಮನೆ ಮುಂದೆ ಪೇದೆ ನಾಗೇಶ್‌ ಅವರ ಮೇಲೆ ಹಲ್ಲೆ ಮಾಡಿತ್ತು. ಇದನ್ನೂ ಓದಿ: ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಿಲ್ಲವೇ? – ವಕೀಲರು ಕೊಟ್ಟ ಉತ್ತರವೇನು?

    ಪೊಲೀಸರು ನಮ್ಮನ್ನ ಏನು ಮಾಡಲು ಆಗಲ್ಲ. ನಮ್ಮ ಹತ್ತಿರ ಏನು ಕಿತ್ತುಕೊಳ್ಳಲು ಆಗಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದವರ ವಿರುದ್ಧ ಕೆಸ್ತೂರು ಪೊಲೀಸ್ ಠಾಣೆಗೆ ನಾಗೇಶ್‌ ಅವರು ದೂರು ನೀಡಲು ಹೋಗಿದ್ದರು. ಅಷ್ಟೇ ಅಲ್ಲದೇ ಮದ್ದೂರಿನ ತಾಲೂಕು ಆಸ್ಪತ್ರೆಯಲ್ಲಿ ನಾಗೇಶ್‌ ಅವರಿಗೆ ಚಿಕಿತ್ಸೆ ಸಹ ನಡೆದಿತ್ತು.

    ಈ ವಿಚಾರ ದೊಡ್ಡದಾಗುತ್ತಿದ್ದಂತೆ ಶಾಸಕ ಉದಯ್ ಅವರು ರಾಜಿ ಸಂಧಾನ ಮಾಡಿ ನಾಗೇಶ್‌ ಅವರನ್ನು ಮನವೊಲಿಸಿದ್ದರು. ನಂತರ ಉದಯ್ ಗನ್‌ ಮ್ಯಾನ್ ಹುದ್ದೆಯಿಂದ ಹೊರಬಂದಿದ್ದ ನಾಗೇಶ್ ಅವರು ಈಗ ಡಿಎಆರ್ ತುಕಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

     

  • ಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕಿಗೆ ಗನ್‌ಮ್ಯಾನ್‌!

    ಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕಿಗೆ ಗನ್‌ಮ್ಯಾನ್‌!

    ಬೆಂಗಳೂರು: ಕರ್ನಾಟಕದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಬಿಟ್ ಕಾಯಿನ್ ಪ್ರಕರಣದ (Bit Coin Scam) ಆರೋಪಿ ಶ್ರೀಕಿಗೆ (Sriki) ಈಗ ಗನ್ ಮ್ಯಾನ್ (Gunman) ನೀಡಲಾಗಿದೆ.

    ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ದಳ (SIT) ರಚನೆ ಮಾಡಿತ್ತು. ಎಸ್‌ಐಟಿ ಮುಂದೆ ಸ್ಫೋಟಕ ಮಾಹಿತಿ ನೀಡಿದ್ದ ಶ್ರೀಕಿಗೆ ಈಗ ಕೊಲೆ ಬೆದರಿಕೆ ಇದೆ. ಅಷ್ಟೇ ಅಲ್ಲದೇ ಶ್ರೀಕಿ ಪೊಲೀಸರ ಕೈಯಲ್ಲಿ ಸಿಗದೇ ತಪ್ಪಿಸಿಕೊಂಡು ಓಡಾಡುತ್ತಿರುತ್ತಾನೆ. ಹೀಗಾಗಿ ಎಸ್‌ಐಟಿ ಶ್ರೀಕಿಗೆ ಗನ್ ಮ್ಯಾನ್ ನೀಡಿದೆ.

     

    ವಿಧಾನಸಭಾ ಚುನಾವಣೆಯಲ್ಲಿ (Vidhan Sabha Election) ಬಿಟ್‌ ಕಾಯಿನ್‌ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.  ಇದನ್ನೂ ಓದಿ: ಇಸ್ತಾಂಬುಲ್ ನೈಟ್‍ಕ್ಲಬ್‍ನಲ್ಲಿ ಅಗ್ನಿ ದುರಂತ – 29 ಮಂದಿ ದುರ್ಮರಣ

    ಶ್ರೀಕಿಯನ್ನು ಬಳಸಿಕೊಂಡು ರಾಜಕಾರಣಿಗಳು ಬಿಟ್‌ಕಾಯಿನ್ ಹಗರಣಗಳನ್ನು ಎಸಗಿದ ಆರೋಪವಿದೆ. ವಿವಿಧ ಸೈಬರ್ ಕ್ರೈಂಗಳಲ್ಲಿ ಭಾಗಿಯಾದ ಆರೋಪದಡಿ ಶ್ರೀಕಿ ಹಾಗೂ ನಾಲ್ವರು ಇತರರ ವಿರುದ್ಧ 2021ರ ಫೆಬ್ರವರಿ 22ರಂದು ಮೊದಲ ಆರೋಪಪಟ್ಟಿ ಸಲ್ಲಿಕೆಯಾಗಿತ್ತು. ಅಧಿಕಾರಕ್ಕೆ ಬಂದ ಕಾಂಗ್ರೆಸ್‌ (Congress) ಸರ್ಕಾರ ಈ ಪ್ರಕರಣದ ಮರು ತನಿಖೆಗೆ ಎಸ್‌ಐಟಿ ರಚನೆ ಮಾಡಿತ್ತು.

     

    ಶ್ರೀಕೃಷ್ಣ (ಶ್ರೀಕಿ) ಬೆಂಗಳೂರಿನ ನಿವಾಸಿಯಾಗಿದ್ದು, 2014 ರಿಂದ 2017ರವರೆಗೆ ಈತ ನೆದರ್‌ಲ್ಯಾಂಡ್‌ ಆಮ್‌ಸ್ಟರ್‌ಡ್ಯಾಮ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‍ಸಿ ಪದವಿ ಪಡೆದ ಬಳಿಕ ವೆಬ್‍ಸೈಟ್ ಹ್ಯಾಕ್ ಮಾಡಲು ಆರಂಭಿಸಿದ್ದ. ಆರಂಭದಲ್ಲಿ ಸಣ್ಣ ಪಟ್ಟ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಅನುಭವ ಪಡೆದ ಬಳಿಕ ದೊಡ್ಡ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಇದನ್ನೇ ಉದ್ಯೋಗ ಮಾಡಿಕೊಂಡಿದ್ದ. ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದ ಬಳಿಕ ಆತ ಬಿಟ್‍ಕಾಯಿನ್ ಬಳಸಿ ಹಣವನ್ನು ಪಡೆಯುತ್ತಿದ್ದ. ಈ ಎಲ್ಲ ಕೆಲಸಕ್ಕೆ ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ. ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ ಕಾರಣ ಈತನ ಮಾಹಿತಿಗಳು ಸಿಗುತ್ತಿರಲಿಲ್ಲ. ಬಿಟ್ ಕಾಯಿನ್ ಮೂಲಕ ಡ್ರಗ್ಸ್ ತರಿಸಿಕೊಂಡು ಬೇಕಾದ ವ್ಯಕ್ತಿಗಳಿಗೆ ನೀಡುತ್ತಿದ್ದ ಆರೋಪವಿದೆ.

     

  • ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ, ಬೆದರಿಕೆ

    ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ, ಬೆದರಿಕೆ

    ಬ್ಯೂನಸ್ ಐರಿಸ್: ಫಿಫಾ ವಿಶ್ವಕಪ್ (FIFA WorldCup) ವಿಜೇತ, ಅಜೆಂಟಿನಾ ಫುಟ್ಬಾಲ್ ತಂಡದ ನಾಯಕ ಲಿಯೋನಲ್ ಮೆಸ್ಸಿ (Lionel Messi) ಅವರ ಕುಟುಂಬಕ್ಕೆ ಸೇರಿದ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ಮೆಸ್ಸಿಗೂ ಬೆದರಿಕೆ ನೀಡಿದ್ದಾರೆ.

    ರಾತ್ರೋ ರಾತ್ರಿ ಬಂದ ಇಬ್ಬರು ಬಂದೂಕುದಾರಿಗಳು ಸೂಪರ್ ಮಾರ್ಕೆಟ್ (Messi Super Market) ಮುಂಭಾಗಕ್ಕೆ 14 ಗುಂಡುಗಳನ್ನು ಹಾರಿಸಿದ್ದಾರೆ. ಜೊತೆಗೆ `ಮೆಸ್ಸಿ, ನಾವು ನಿಮಗಾಗಿ ಕಾಯುತ್ತಿದ್ದೇವೆ. ಜಾವ್ಕಿನ್ ಒಬ್ಬ ನಾರ್ಕೋ, ಅವನು… ನಿನ್ನನ್ನ ನೋಡಿಕೊಳ್ಳುವುದಿಲ್ಲ’ ಎಂದು ಕೈಬರಹ ಸಂದೇಶವನ್ನು ಬರೆದುಹೋಗಿದ್ದಾರೆ. ಆ ಸಮಯದಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.

    ಪಾಬ್ಲೊ ಜಾವ್ಕಿನ್ ಅವರು ಮೆಸ್ಸಿಯ ತವರು ರೊಸಾರಿಯೊದ ಮೇಯರ್ ಆಗಿದ್ದಾರೆ. ಅಲ್ಲಿ ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಇದೆ. ಇದು ರಾಜಧಾನಿ ಬ್ಯೂನಸ್ ಐರಿಸ್ ನಿಂದ ವಾಯುವ್ಯಕ್ಕೆ 320 ಕಿಮೀ ದೂರದಲ್ಲಿದೆ.

    ಇಬ್ಬರು ವ್ಯಕ್ತಿಗಳು 3 ಗಂಟೆ ಸುಮಾರಿಗೆ ಮೋಟಾರ್ ಬೈಕ್‌ನಲ್ಲಿ ಬಂದಿರುವುದನ್ನು ಪ್ರತ್ಯಕ್ಷದರ್ಶಿಗಳು ದೃಢಪಡಿಸಿದ್ದಾರೆ. ಅವರಲ್ಲಿ ಒಬ್ಬರು ಇಳಿದು ಗುಂಡು ಹಾರಿಸಿದ ಎಂದಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು (Police) ತನಿಖೆ ಕೈಗೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: WPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್ ತಾರೆಯರು

    Lionel Messi

    ರೊಸಾರಿಯೊ ಪರಾನಾ ನದಿಯ ಬಂದರು ನಗರವಾಗಿದೆ. ಇದೀಗ ಮಾದಕವಸ್ತು ಕಳ್ಳಸಾಗಣೆಯ ಕೇಂದ್ರವಾಗಿ ಮಾರ್ಪಟ್ಟಿದ್ದು, ಅರ್ಜೆಂಟಿನಾದ ಅತ್ಯಂತ ಹಿಂಸಾತ್ಮಕ ನಗರ ಎನಿಸಿಕೊಂಡಿದೆ. 2022ರಲ್ಲಿಯೂ ಈ ನಗರದಲ್ಲಿ 287 ಹತ್ಯೆಗಳು ನಡೆದಿವೆ. ಇದನ್ನೂ ಓದಿ: ಎರಡನೇ ದಿನ 16 ವಿಕೆಟ್ ಪತನ – ಆಸೀಸ್ ಗೆಲುವಿಗೆ ಬೇಕು 76 ರನ್

  • ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ

    ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ

    ಸಿಡ್ನಿ: ಆಸ್ಟ್ರೇಲಿಯಾದ ಕ್ಯಾನ್‍ಬೆರಾ ವಿಮಾನ ನಿಲ್ದಾಣದ ಚೆಕ್ ಇನ್ ಪ್ರದೇಶದಲ್ಲಿ ಬಂದೂಕುಧಾರಿಯೊಬ್ಬ ಐದು ಬಾರಿ ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ.

    ಘಟನೆಗೆ ಸಂಬಂಧಿಸಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಆತನ ಬಳಿ ಇದ್ದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯದ ವೀಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ವೇಳೆ ಒಬ್ಬನೇ ಘಟನೆಗೆ ಕಾರಣ ಎನ್ನುವುದರ ಬಗ್ಗೆ ಸುಳಿವು ದೊರೆತಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಹಾನಿ ಆಗಿಲ್ಲ. ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಹಿಂದೆ ಆಪ್ತ ಸ್ನೇಹಿತರೂ ಸೇರಿದ್ದಾರೆ: ತಂದೆ ಆರೋಪ

    ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾನ್‍ಬೆರಾ ವಿಮಾನ ನಿಲ್ದಾಣದ ಟರ್ಮಿನಲ್‍ನಿಂದ ತೆರವು ಮಾಡಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿತ್ತು. ಇನ್ನೂ ಕೆಲವು ವಿಮಾನಗಳು ಪ್ರಯಾಣಿಕರೊಂದಿಗೆ ರನ್‍ವೇಯಲ್ಲಿ ಸ್ಥಗಿತಗೊಂಡಿದ್ದವು. ಕೆಲವು ಗಂಟೆಗಳ ನಂತರ ವಿಮಾನ ಕಾರ್ಯಾಚರಣೆಗಳು ಪುನಾರಂಭಗೊಂಡವು. ಇದನ್ನೂ ಓದಿ: ಕೊನೆ ಉಸಿರಿರೋವರೆಗೂ ಮಂಡ್ಯದ ಸೊಸೆಯಾಗಿರುವೆ: ಸುಮಲತಾ ಅಂಬರೀಶ್

    Live Tv
    [brid partner=56869869 player=32851 video=960834 autoplay=true]

  • ಎಫ್‌ಬಿಐ ಕಚೇರಿ ಮೇಲೆ ದಾಳಿಗೆ ಮುಂದಾದ ಬಂದೂಕುಧಾರಿ ಹತ್ಯೆಗೈದ ಪೊಲೀಸರು

    ಎಫ್‌ಬಿಐ ಕಚೇರಿ ಮೇಲೆ ದಾಳಿಗೆ ಮುಂದಾದ ಬಂದೂಕುಧಾರಿ ಹತ್ಯೆಗೈದ ಪೊಲೀಸರು

    ವಾಷಿಂಗ್ಟನ್‌: ಓಹಿಯೋದಲ್ಲಿ ಎಫ್‌ಬಿಐ ಕಚೇರಿ ಮೇಲೆ ದಾಳಿ ಮಾಡಲು ಮುಂದಾದ ಬಂದೂಕುಧಾರಿಯನ್ನು ಪೊಲೀಸರು ಕೊಂದಿದ್ದಾರೆ.

    ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಸಿನ್ಸಿನಾಟಿ ಫೀಲ್ಡ್ ಕಚೇರಿ ಮೇಲೆ ದಾಳಿಗೆ ಶಸ್ತ್ರಸಜ್ಜಿತ ವ್ಯಕ್ತಿ ಯತ್ನಿಸಿದ್ದ. ಕೂಡಲೇ ಎಚ್ಚೆತ್ತುಕೊಂಡ ಓಹಿಯೋ ಪೊಲೀಸ್ ಅಧಿಕಾರಿಗಳು ಆತನನ್ನು ಹತ್ಯೆಗೈದಿದ್ದಾರೆ. ಇದನ್ನೂ ಓದಿ: ಬಾಂಬ್‌ ಸ್ಫೋಟಿಸಿ ತಾಲಿಬಾನ್‌ ಧರ್ಮಗುರು ಹತ್ಯೆ

    ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹತ್ಯೆಯಾದ ಶಸ್ತ್ರಸಜ್ಜಿತ ವ್ಯಕ್ತಿಗೆ, ಜನವರಿ 6 ರಂದು ರಾಜಧಾನಿ ಮೇಲಿನ ದಾಳಿಯಲ್ಲಿ ಭಾಗವಹಿಸಿದ್ದ ಉಗ್ರಗಾಮಿ ಗುಂಪುಗಳೊಂದಿಗೆ ಸಂಬಂಧವಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

    ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫ್ಲೋರಿಡಾದ ಮನೆಯನ್ನು ಫೆಡರಲ್ ಏಜೆಂಟ್‌ಗಳು ಶೋಧಿಸಿದ ಕೆಲವೇ ದಿನಗಳಲ್ಲಿ ಎಫ್‌ಬಿಐ ಉದ್ಯೋಗಿಗಳನ್ನು ಕೊಲ್ಲುವುದಾಗಿ ಬೆದರಿಕೆ ಸಂದೇಶ ಬಂದಿತ್ತು. ಫೆಡರಲ್ ಕಾನೂನು ಜಾರಿ ವಿರುದ್ಧ ಆನ್‌ಲೈನ್ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಎಫ್‌ಬಿಐ ನಿರ್ದೇಶಕರು ವರದಿಗಾರರಿಗೆ ತಿಳಿಸಿದ ಒಂದು ದಿನದ ನಂತರ ಸಿನ್ಸಿನಾಟಿಯಲ್ಲಿ ಈ ದಾಳಿ ನಡೆದಿದೆ. ಇದನ್ನೂ ಓದಿ: ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರು ತೊರೆದ ಪುನೀತ್ ರಾಜ್ ಕುಮಾರ್ ಗನ್ ಮ್ಯಾನ್ ಚಲಪತಿ

    ಬೆಂಗಳೂರು ತೊರೆದ ಪುನೀತ್ ರಾಜ್ ಕುಮಾರ್ ಗನ್ ಮ್ಯಾನ್ ಚಲಪತಿ

    ದೆಷ್ಟೇ ಜನಸಂದಣಿ ಇರಲಿ, ಅಭಿಮಾನಿಗಳು ಮುತ್ತಿಕ್ಕಿಕೊಳ್ಳಲು ಪುನೀತ್ ರಾಜ್ ಕುಮಾರ್ ಅವರನ್ನು ಸೇಫಾಗಿ ಕರೆದುಕೊಂಡು ಹೋಗುತ್ತಿದ್ದವರು ಅವರ ಗನ್ ಮ್ಯಾನ್ ಚಲಪತಿ. ಮಾಜಿ ಸೈನಿಕರು ಆಗಿರುವ ಚಲಪತಿ ಹಲವು ವರ್ಷಗಳಿಂದ ಅಪ್ಪು ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಅಂದು ಕೊನೆಯ ಬಾರಿಗೆ ಪುನೀತ್ ಅವರು ಆಸ್ಪತ್ರಗೆ ಹೋದಾಗ, ಅವರನ್ನು ಕಾರ್ ವರೆಗೂ ಕರೆದುಕೊಂಡು ಹೋಗಿ ಬಿಟ್ಟವರು ಆನಂತರ ಅಪ್ಪು ಅವರ ಅಗಲಿಗೆ ಸುದ್ದಿ ಕೇಳಿ ಕಣ್ಣಿರಾಗಿದ್ದರು. ಅಷ್ಟೊಂದು ಭಾವನಾತ್ಮಕವಾಗಿ ಅಪ್ಪು ಅವರನ್ನು ಅಭಿಮಾನಿಸುತ್ತಿದ್ದರು.

    ಈಗ ಅಪ್ಪು ಇಲ್ಲ, ಸುಮ್ಮನೆ ಅವರ ಮನೆಯಲ್ಲಿ ಕುಳಿತುಕೊಳ್ಳಲು ಆಗಲ್ಲ. ಅಲ್ಲದೇ, ಬೇರೆ ಯಾವ ನಟರ ಬಳಿಯೂ ಇವರಿಗೆ ಕೆಲಸ ಮಾಡಲು ಇಷ್ಟವಿಲ್ಲವಂತೆ. ಹಾಗಾಗಿ ಅಪ್ಪು ಇಲ್ಲದ ಬೆಂಗಳೂರನ್ನೇ ತೊರೆದು, ವಾಪಸ್ಸು ತಮ್ಮೂರಿಗೆ ಹೋಗಿದ್ದಾರೆ ಚಲಪತಿ. ಬೇರೆ ಯಾರಿಗಾದರೂ ಗನ್ ಮ್ಯಾನ್ ಆಗುತ್ತೇನೆ. ಮತ್ತೆ ನಟರಿಗೆ ಆಗಲಾರೆ. ಅಪ್ಪು ಸಾರ್ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಮಾಧ್ಯಮಗಳ ಜೊತೆ ನೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ಅಪ್ಪು ಸಾರ್ ನಿಧನದ ನಂತರ ಐದಾರು ತಿಂಗಳು ಅಶ್ವಿನಿ ಮೇಡಂ ಜೊತೆ ಕೆಲಸ ಮಾಡಿದೆ. ಇದೀಗ ಕೆಲಸ ಬಿಟ್ಟು ಒಂದು ತಿಂಗಳಾಗಿದೆ. ಊರಲ್ಲೇ ಇದ್ದೇನೆ. ಅಪ್ಪ ಸರ್ ನೆನಪಿನಲ್ಲೇ ದಿನಗಳನ್ನು ಸಾಗಿಸುತ್ತಿದ್ದೇನೆ. ಅಲ್ಲದೇ, ಅಪ್ಪು ಸರ್ ಮನೆಯಲ್ಲಿ ನಾನು ಮಾಡುವಂತಹ ಕೆಲಸ ಏನೂ ಇರಲಿಲ್ಲ. ಸುಮ್ಮನೆ ಕೂರುವುದು ನನಗೆ ಕಷ್ಟ. ಹಾಗಾಗಿ ವಾಪಸ್ಸು ಊರಿಗೆ ಬಂದಿದ್ದೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಯಾವತ್ತೂ ಅಪ್ಪು ಸರ್ ನನ್ನನ್ನು ಗನ್ ಮ್ಯಾನ್ ಆಗಿ ನೋಡಲಿಲ್ಲ. ಸಹೋದರನಂತೆ ಕಂಡರು ಎಂದು ನೆನಪಿಸಿಕೊಳ್ಳುತ್ತಾರೆ.

    Live Tv

  • ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ – ದುಷ್ಕರ್ಮಿ ಗುಂಡಿಗೆ ಮೂವರು ಬಲಿ

    ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ – ದುಷ್ಕರ್ಮಿ ಗುಂಡಿಗೆ ಮೂವರು ಬಲಿ

    ವಾಷಿಂಗ್ಟನ್: ಅಮೇರಿಕಾದ ಉತ್ತರ ಮೇರಿಲ್ಯಾಂಡ್‍ನ ಕಾರ್ಖಾನೆಯೊಂದರಲ್ಲಿ ಬಂದೂಕುಧಾರಿಯೋರ್ವ ಗುಂಡಿನ ದಾಳಿ ನಡೆಸಿದ್ದು, ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಸೈನಿಕರೊಂದಿಗೆ ಗುಂಡಿನ ಚಕಮಕಿ ನಡೆಸುತ್ತಿದ್ದಾಗ ಬಂದೂಕುಧಾರಿಯನ್ನು ತಕ್ಷಣಕ್ಕೆ ಗುರುತಿಸಲಾಗಲಿಲ್ಲ. ಆದರೆ ನಂತರ ಗುಂಡೇಟಿನಿಂದ ಗಾಯಗೊಂಡ ದುಷ್ಕರ್ಮಿ ಹಾಗೂ ಸೈನಿಕರೊಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವಾಷಿಂಗ್ಟನ್ ಕೌಂಟಿ ಶೆರಿಫ್ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಕೈ ಶಾಸಕರನ್ನು ಸೆಳೆಯದಂತೆ ಇಂಟರ್‌ನೆಟ್ ಸೇವೆಯನ್ನೇ ಸ್ಥಗಿತಗೊಳಿಸಿದ ರಾಜಸ್ಥಾನ

    ಈ ಘಟನೆಯ ಹಿಂದಿನ ಕಾರಣವೇನು ಎಂಬುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಯಾವುದೇ ಬೆದರಿಕೆಗಳನ್ನು ಕೂಡ ಹಾಕಲಾಗಿರಲಿಲ್ಲ. ಸದ್ಯ ದಾಳಿ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಜೊತೆಗೆ ಬಂದೂಕುಧಾರಿ ಸೈನಿಕರೊಬ್ಬರ ಮೇಲೂ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಹೇಳಿದ್ದಾರೆ.

    crime

    ಈ ಕಾರ್ಖಾನೆಯು ಸುಮಾರು 100ಕ್ಕೂ ಹೆಚ್ಚು ದೇಶಗಳಿಗೆ ಕಾಂಕ್ರೀಟ್ ಉತ್ಪಾದನಾ ಸಾಧನಗಳನ್ನು ಪೂರೈಸುತ್ತದೆ. ಸದ್ಯ ಘಟನೆ ವೇಳೆ ಎಷ್ಟು ಮಂದಿ ಉದ್ಯೋಗಿಗಳಿದ್ದರು ಎಂಬ ಮಾಹಿತಿಯನ್ನು ಕಲೆಹಾಕುತ್ತಿದ್ದು, ಇದೀಗ ಈ ಸಂಬಂಧ ಸಮಗ್ರವಾಗಿ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಗೋಲ್ಡೀ ಬ್ರಾರ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ – ಸಿಧು ಹತ್ಯೆ ಕೇಸ್‌ನಲ್ಲಿ ಅಲ್ಲ

  • ಚರ್ಚ್‍ನಲ್ಲಿ ಹತ್ಯಾಕಾಂಡ – 50 ಮಂದಿಯನ್ನು ಗುಂಡಿಟ್ಟು ಕೊಂದ

    ಚರ್ಚ್‍ನಲ್ಲಿ ಹತ್ಯಾಕಾಂಡ – 50 ಮಂದಿಯನ್ನು ಗುಂಡಿಟ್ಟು ಕೊಂದ

    ಅಬುಜಾ: ನೈರುತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ ಮೇಲೆ ಬಂದೂಕುಧಾರಿಯೋರ್ವ ಸಾಮೂಹಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಗಾಯಗೊಂಡಿದ್ದಾರೆ.

    ಭಾನುವಾರ ಬೆಳಗಿನ ಜಾವ ಚರ್ಚ್‍ನಲ್ಲಿ ಪ್ರಾರ್ಥನೆ ಮಾಡಲು ಅನೇಕ ಮಂದಿ ಆಗಮಿಸಿದ್ದರು. ಈ ವೇಳೆ ಮುತ್ತಿಗೆ ಹಾಕಿ ಬಂದೂಕುಧಾರಿ ಆರಂಭದಲ್ಲಿ ಹೊರಗಡೆ ದಾಳಿ ನಡೆಸಿ ನಂತ ಒಳಗಡೆ ದಾಳಿ ನಡೆಸಿದ್ದಾನೆ. ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಮನೆಬಂದಂತೆ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ:  ಬೆಂಗಳೂರಿನಲ್ಲಿ 16 ದಿನಗಳ ಬಳಿಕ ಕೊರೊನಾಗೆ ಮಹಿಳೆ ಬಲಿ

    ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಒಂಡೋ ರಾಜ್ಯದ ಪೊಲೀಸ್ ವಕ್ತಾರ ಫನ್ಮಿಲಾಯೊ ಇಬುಕುನ್ ಒಡುನ್ಲಾಮಿ, ಬಂದೂಕುಧಾರಿ ಚರ್ಚ್ ಕಟ್ಟಡದ ಹೊರಗೆ ಮತ್ತು ಒಳಗೆ ಜನರ ಮೇಲೆ ಗುಂಡು ಹಾರಿಸಿದ್ದಾನೆ. ಸದ್ಯ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಯಾರು ಎನ್ನುವುದು ತಿಳಿದು ಬಂದಿಲ್ಲ ಇದನ್ನೂ ಓದಿ: ಕೇರಳದಲ್ಲಿ ಎರಡು ನೊರೊವೈರಸ್ ಪ್ರಕರಣ ಪತ್ತೆ

    ನಂತರ ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಒಂಡೋ ರಾಜ್ಯ ಗವರ್ನರ್ ಅರಕುನ್ರಿನ್ ಒಲುವರೊಟಿಮಿ ಅಕೆರೆಡೊಲು ಅವರು, ಇದೊಂದು ದೊಡ್ಡ ಹತ್ಯಾಕಾಂಡ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

  • ಅಮೆರಿಕದಲ್ಲಿ ಭೀಕರ ಗುಂಡಿನ ದಾಳಿ – 10 ಮಂದಿ ಬಲಿ

    ಅಮೆರಿಕದಲ್ಲಿ ಭೀಕರ ಗುಂಡಿನ ದಾಳಿ – 10 ಮಂದಿ ಬಲಿ

    ವಾಷಿಂಗ್ಟನ್: 18 ವರ್ಷದ ಯುವಕನೊಬ್ಬ ಅಮೆರಿಕ ನ್ಯೂಯಾರ್ಕ್‌ ಬಫೆಲೋ ಸೂಪರ್‌ ಮಾರ್ಕೆಟ್‌ ದಿನಸಿ ಮಳಿಗೆಯೊಂದರಲ್ಲಿ ಭೀಕರ ಗುಂಡಿನ ದಾಳಿ ನಡೆಸಿ, 10 ಮಂದಿಯನ್ನು ಹತ್ಯೆಗೈದಿದ್ದಾನೆ. ಕಳೆದ 48 ಗಂಟೆಯಲ್ಲಿ ಎರಡು ಕಡೆ ಗುಂಡಿನ ದಾಳಿ ನಡೆದಿದ್ದು, ಇದು ಜನಾಂಗೀಯ ಪ್ರೇರಿತ ದಾಳಿ ಎಂಬುದು ಸ್ಪಷ್ಟವಾಗಿದೆ.

    ದುಷ್ಕರ್ಮಿಯು ಗುಂಡಿನ ದಾಳಿ ನಡೆಸಿದ್ದಲ್ಲದೆ, ಕೃತ್ಯವನ್ನು ತನ್ನ ಕ್ಯಾಮೆರಾ ಮೂಲಕ ನೇರಪ್ರಸಾರ ಮಾಡಿದ್ದಾನೆ. ಸೇನಾ ಸಾಧನಗಳನ್ನು ಧರಿಸಿ ಬಿಳಿ ವರ್ಣೀಯ ದಾಳಿಕೋರನನ್ನು ಹತ್ಯಾಕಾಂಡದ ಬಳಿಕ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಜೋಸೆಫ್ ಗ್ರಾಮಾಗ್ಲಿಯಾ ಹೇಳಿದ್ದಾರೆ. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಕೊರೊನಾ ಸ್ಫೋಟ – ಮೂರೇ ದಿನಕ್ಕೆ 12 ಲಕ್ಷ ಮಂದಿಗೆ ಸೋಂಕು

    ಜನಾಂಗೀಯ ಪ್ರೇರಿತ ದಾಳಿ: ಗುಂಡಿನ ದಾಳಿಯಲ್ಲಿ 10 ಮಂದಿ ಬಲಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಬಲಿಯಾದ ಹೆಚ್ಚಿನವರು ಕಪ್ಪು ವರ್ಣೀಯರಾಗಿದ್ದಾರೆ. ಹಾಗಾಗಿ ಇದು ಜನಾಂಗೀತ ಪ್ರೇರಿತ ದಾಳಿ ಎಂಬುದು ಗೋಚರವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಒಂದೇ ದಿನ 1.74 ಲಕ್ಷ ಮಂದಿಗೆ ಜ್ವರ- ಉತ್ತರ ಕೊರಿಯಾದಲ್ಲಿ 21 ಸಾವು

    ಟಾಪ್ಸ್ ಸೂಪರ್ ಮಾರ್ಕೆಟ್‌ಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊತ್ತು ಬಂದ ದಾಳಿಕೋರ, ಮೊದಲು ಪಾರ್ಕಿಂಗ್ ಲಾಟ್‌ನಲ್ಲಿದ್ದ ನಾಲ್ವರು ವ್ಯಕ್ತಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಅವರಲ್ಲಿ ಮೂವರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಬಳಿಕ ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ ಆತ, ಗುಂಡಿನ ದಾಳಿ ಮುಂದುವರಿಸಿದ್ದಾನೆ. ಅಂಗಡಿ ಒಳಗೆ ಹತ್ಯೆಯಾದವರಲ್ಲಿ ಸಶಸ್ತ್ರ ಭದ್ರತಾ ಕಾವಲು ವಿಭಾಗದಲ್ಲಿ ಕೆಲಸ ಮಾಡಿದ್ದ ನಿವೃತ್ತ ಪೊಲೀಸ್ ಅಧಿಕಾರಿಯೂ ಇದ್ದಾರೆ ಎಂದು ಗ್ರಾಮಗ್ಲಿಯಾ ತಿಳಿಸಿದ್ದಾರೆ.

    ನಿವೃತ್ತ ಪೊಲೀಸ್ ಅಧಿಕಾರಿ ಶಂಕಿತನ ವಿರುದ್ಧ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಆದರೆ, ಬುಲೆಟ್‌ಪ್ರೂಫ್ ಧರಿಸಿದ್ದ ದಾಳಿಕೋರ ತನ್ನನ್ನು ರಕ್ಷಿಸಿಕೊಂಡು ನಿವೃತ್ತ ಅಧಿಕಾರಿಯನ್ನು ಹತ್ಯೆಗೈದಿದ್ದಾನೆ. ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿದ ಪೊಲೀಸರೊಂದಿಗೆ ಕೆಲಕಾಲ ವಾಗ್ವಾದ ನಡೆಸಿದ್ದಾನೆ. ತನ್ನ ಕುತ್ತಿಗೆಗೆ ಬಂದೂಕು ಹಿಡಿದುಕೊಂಡು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಸಿದ್ದಾನೆ. ಅಂತಿಮವಾಗಿ ಶರಣಾಗಿದ್ದಾನೆ. ಇದನ್ನೂ ಓದಿ: ಕಂಗೆಟ್ಟ ಶ್ರೀಲಂಕಾಕ್ಕೆ ಎಲ್‌ಟಿಟಿಇ ದಾಳಿಯ ಭೀತಿ – ಹೈ ಅಲರ್ಟ್

    ಈ ಗುಂಡಿನ ದಾಳಿ ದ್ವೇಷ ಅಪರಾಧ ಮತ್ತು ಜನಾಂಗೀಯ ಪ್ರೇರಿತ ಕೃತ್ಯವೇ ಎಂಬ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಎಫ್‌ಬಿಐನ ಬಫೆಲೋ ಕ್ಷೇತ್ರ ಕಚೇರಿ ಉಸ್ತುವಾರಿ ಸ್ಟೀಫನ್ ಬೆಲೊಂಗಿಯಾ ತಿಳಿಸಿದ್ದಾರೆ.