Tag: Gunfight

  • ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್‌ – ನಾಲ್ವರು ಪೊಲೀಸರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ

    ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್‌ – ನಾಲ್ವರು ಪೊಲೀಸರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕಥುವಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ (Terrorists) ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಪೊಲೀಸರು ಹುತಾತ್ಮರಾಗಿದ್ದು, ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಭದ್ರತಾ ಪಡೆಗಳು ಶೋಧ ನಡೆಸುತ್ತಿದ್ದಾಗ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ DSP ಧೀರಜ್ ಕಟೋಚ್, 1 PARA (Special Forces) ಯೋಧ ಸೇರಿ ಐವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರರಿಂದ ನಾಲ್ಕು ಭಯೋತ್ಪಾದಕರು ಇನ್ನೂ ಅವಿತುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸದ್ಯ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಶೋಧಕಾರ್ಯ ಮುಂದುವರಿದಿದೆ. ಇದನ್ನೂ ಓದಿ: Jammu Terrorist Attack: ಜಮ್ಮುವಿನಲ್ಲಿ ದಿಢೀರ್‌ ಭಯೋತ್ಪಾದಕ ದಾಳಿ ಹೆಚ್ಚಾಗುತ್ತಿರುವುದು ಏಕೆ?

    Jammui 3

    ಕಥುವಾ ಜಿಲ್ಲೆಯ ಸುಫೈನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಾಡಿನಲ್ಲಿ ಅಡಗಿದ್ದ ಉಗ್ರರು ಗುಂಡಿನ ದಾಳಿ ನಡೆಸಿದರು. ಮೃತಪಟ್ಟ ಪೊಲೀಸರಲ್ಲಿ ಹೆಡ್ ಕಾನ್ಸ್‌ಟೇಬಲ್‌ ಮತ್ತು ಇಬ್ಬರು ಕಾನ್ಸ್‌ಟೇಬಲ್‌ ಇದ್ದಾರೆ. ಗುಂಡಿನ ದಾಳಿ ತೀವ್ರವಾಗಿದ್ದರಿಂದ ಮೃತದೇಹಗಳನ್ನು ಸ್ಥಳದಿಂದ ಸಾಗಿಸಲು ಸಾಧ್ಯವಾಗಿಲ್ಲ. ಗ್ರೆನೇಡ್ ಮತ್ತು ರಾಕೆಟ್ ದಾಳಿಯಿಂದ ಪ್ರದೇಶವು ತತ್ತರಿಸಿದೆ. ಇದನ್ನೂ ಓದಿ: Jammu & Kashmir | 40 ಅಡಿ ಆಳದ ಕಂದಕಕ್ಕೆ ಉರುಳಿದ ಸೇನೆಯ ಬಸ್‌ – ಮೂವರು ಯೋಧರು ದುರ್ಮರಣ

    ಪ್ರತಿಕೂಲ ಭೂಪ್ರದೇಶದಲ್ಲಿ ಹೆಚ್ಚಿನ ಭಯೋತ್ಪಾದಕರು ಇರುವ ಕಾರಣ ಈವರೆಗೆ ಸಾವನ್ನಪ್ಪಿದ್ದ ಪೊಲೀಸರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಆನೇಕಲ್‌ | ಪತ್ನಿ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಪತಿ – ಮಹಾರಾಷ್ಟ್ರದಲ್ಲಿ ಹಂತಕ ಅರೆಸ್ಟ್

    ಕಥುವಾ ಉಗ್ರರ ಸ್ವರ್ಗವಾಗುತ್ತಿದೆಯೇ?
    1990ರ ದಶಕದಲ್ಲಿ ಕಥುವಾ (Kathua) ಭಯೋತ್ಪಾದಕರ ದೊಡ್ಡ ನೆಲೆಯಾಗಿ ಗುರುತಿಸಿಕೊಂಡಿತ್ತು. ಇಡೀ ಜಮ್ಮು ಮತ್ತು ಕಾಶ್ಮೀರದಾದ್ಯಂತ ದಾಳಿ ನಡೆಸಲು ಇಲ್ಲಿಯೇ ಉಗ್ರರು ಪ್ಲ್ಯಾನ್‌ ರೂಪಿಸುತ್ತಿದ್ದರು. ಸೇನೆ ವಿರುದ್ಧ ಯುದ್ಧಗಳ ತಯಾರಿಯೂ ಇಲ್ಲಿಯೇ ನಡೆಸುತ್ತಿದ್ದರು. ಕಥುವಾ ಉಧಂಪುರ, ಸಾಂಬಾ ಮತ್ತು ದೋಡಾ ಜಿಲ್ಲೆಗಳ ಪಕ್ಕದಲ್ಲಿದ್ದ ಕಾರಣ ಭದ್ರತಾ ಪಡೆಗಳು ಉಗ್ರರ ಹೆಡೆಮುರಿ ಕಟ್ಟಲು ಇಲ್ಲಿಯೇ ಬೀಡುಬಿಟ್ಟಿರುತ್ತಿದ್ದವು ಎಂದು ಅಲ್ಲಿನ ಪ್ರಾಥಮಿಕ ಮೂಲಗಳು ತಿಳಿಸಿವೆ. ಈಗ ಮತ್ತೆ ಕಥುವಾ ಉಗ್ರರ ನೆಲೆಯಾಗುತ್ತಿದೆಯೇ ಎಂಬ ಸಂಶಯ ಹುಟ್ಟಿಕೊಂಡಿದೆ. ಏಕೆಂದರೆ ಇಲ್ಲಿನ ಭೌಗೋಳಿಕತೆ ವಿಶೇಷವಾಗಿದೆ. ಒಂದು ಬದಿಯಲ್ಲಿ ಪಾಕಿಸ್ತಾನ ಗಡಿ ಇದ್ದರೆ, ಮತ್ತೊಂದು ಬದಿಯಲ್ಲಿ ಹಿಮಾಚಲ ಪ್ರದೇಶ ಇದೆ. ಮುಖ್ಯವಾಗಿ ಅರಣ್ಯ ಪ್ರದೇಶ ದಟ್ಟವಾಗಿರುವುದರಿಂದ ಉಗ್ರರು ತಪ್ಪಿಸಿಕೊಳ್ಳಲು ಅನುಕೂಲಕರ ವಾತಾವರಣ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಉಗ್ರರು ಈ ಭಾಗದ ನೆಲೆಯನ್ನು ಗುರಿಯಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

  • ಪುಲ್ವಾಮಾದಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಸಿಕ್ಕಿಬಿದ್ದ ಲಷ್ಕರ್‌ ಟಾಪ್‌ ಕಮಾಂಡರ್ಸ್‌

    ಪುಲ್ವಾಮಾದಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಸಿಕ್ಕಿಬಿದ್ದ ಲಷ್ಕರ್‌ ಟಾಪ್‌ ಕಮಾಂಡರ್ಸ್‌

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ (Security Forces) ನಡೆದ ಗುಂಡಿನ ಚಕಮಕಿಯಲ್ಲಿ (Gunfight) ಪಾಕಿಸ್ತಾನ ಮೂಲದ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದಾರೆ.

    ಭಾರತೀಯ ಸೇನೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೊಯ್ಬಾದ ಉಪಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್‌ನ ಇಬ್ಬರು ಟಾಪ್‌ ಕಮಾಂಡರ್‌ಗಳು (Lashkar Commander), ಮನೆಯೊಂದರಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ಬಂಧಿಸಿದ ಕಾಶ್ಮೀರ ಪೊಲೀಸರು

    ಪುಲ್ವಾಮಾದ (Pulwama) ನೆಹಮಾ ಪ್ರದೇಶದಲ್ಲಿ ಭಯೋತ್ಪಾದಕರು ಮನೆಯೊಂದರಲ್ಲಿ ಅಡಗಿದ್ದಾರೆ ಎಂಬುದರ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು, ಗುಂಡಿನ ದಾಳಿ ನಡೆಸಿದ್ದವು. ಈ ವೇಳೆ ಪಾಕ್‌ ಮೂಲದ ಉಗ್ರರರಿಂದಲೂ ಪ್ರತಿದಾಳಿ ನಡೆದಿದ್ದು, ಕೊನೆಗೆ ಮನೆಯೊಂದರಲ್ಲಿ ಅಡಗಿದ್ದ ಉಗ್ರರು ಸೇನಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ.

    ಭಯೋತ್ಪಾದಕರಾದ ರಯೀಸ್ ಅಹ್ಮದ್ ಮತ್ತು ರಿಯಾಜ್ ಅಹ್ಮದ್ ದಾರ್ ಇಬ್ಬರೂ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಿವಾಸಿಗಳು ಎಂದು ಸೇನೆ ಖಚಿತಪಡಿಸಿದೆ. ಇದನ್ನೂ ಓದಿ:  Election Results – ಟ್ರೆಂಡ್‌ ಬೇಗನೇ ಗೊತ್ತಾದ್ರೂ ತಡವಾಗಲಿದೆ ಅಧಿಕೃತ ಫಲಿತಾಂಶ

    ಈ ಕುರಿತು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ ವಲಯದ ಪೊಲೀಸರು, ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ಎನ್‌ಕೌಂಟರ್‌ ಪ್ರಾರಂಭವಾಗಿದೆ. ಪೊಲೀಸರು ಹಾಗೂ ಭದ್ರತಾ ಪಡೆಗಳು ನಿರಂತರ ಕಾರ್ಯಾಚರಣೆಯಲ್ಲಿವೆ. ಈವರೆಗೆ ಸಾವು ನೋವುಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಳೆದ ಮೇ 7ರಂದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭದ್ರಯಾ ಪಡೆದಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತ್ಯೆಗೀಡಾಗಿದ್ದರು. ಇದನ್ನೂ ಓದಿ: ಇಂದಿನಿಂದ ದೇಶಾದ್ಯಂತ ಎಕ್ಸ್‌ಪ್ರೆಸ್‌ವೇ, ಹೈವೇಗಳಲ್ಲಿ ಟೋಲ್‌ ದರ ಏರಿಕೆ