Tag: Gun Shoot

  • ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ – ಹಲವು ಮಂದಿ ಸಾವು

    ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ – ಹಲವು ಮಂದಿ ಸಾವು

    ವಾಷಿಂಗ್ಟನ್‌: ಕ್ಯಾಪಿಟಲ್‌ ಹಿಲ್‌ ಬಳಿಯ ಈಶಾನ್ಯ ವಾಷಿಂಗ್ಟನ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಹಲವು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಎಫ್ ಸ್ಟ್ರೀಟ್ ನಾರ್ತ್ ಈಸ್ಟ್‌ನ 1500 ಬ್ಲಾಕ್‌ನಲ್ಲಿ ರಾತ್ರಿ 8:30 ರ ಸುಮಾರಿಗೆ ಗುಂಡಿನ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ಟ್ವೀಟ್ ಮಾಡಿದ್ದು, ಘಟನೆಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಆದರೆ ಎಷ್ಟು ಮಂದಿ ಎಂಬ ಬಗ್ಗೆ ನಿಖರ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಅಕ್ರಮ ಸಂಬಂಧ ಹೊಂದುವಂತೆ ಪತ್ನಿಗೆ ಬ್ಲಾಕ್‍ಮೇಲ್ – ಪೊಲೀಸಪ್ಪನ ಮೂಗು, ಕಿವಿ, ತುಟಿ ಕಟ್

    ಗುಂಡಿನ ದಾಳಿಯಲ್ಲಿ ಹಲವರು ಸಾವನ್ನಪ್ಪಿರುವುದು ಕಂಡುಬಂದಿದೆ. ಅಂಬುಲೆನ್ಸ್‌ಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದಾಗ ಈ ಘಟನೆ ನಡೆದಿದೆ. ಕನಿಷ್ಠ 15 ಗುಂಡುಗಳನ್ನು ಹಾರಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

    ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಈ ಹಿಂಸಾಚಾರದಲ್ಲಿ ಮಕ್ಕಳು ಹಾಗೂ ಜನರನ್ನು ರಕ್ಷಿಸುವ ಸಲುವಾಗಿ ಶಸ್ತ್ರಾಸ್ತ್ರಗಳಿಂದ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಬೇಕು. ಶಸ್ತ್ರಾಸ್ತ್ರ ಖರೀದಿ ವಯೋಮಿತಿಯನ್ನು 18ರಿಂದ 21ಕ್ಕೆ ಹೆಚ್ಚಿಸಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಈ ಹಿಂದೆ ಹೇಳಿದ್ದರು. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥ ಝವಾಹಿರಿ ಹತ್ಯೆ- ಮೋಸ್ಟ್ ವಾಂಟೆಡ್ ಉಗ್ರನ ಮೇಲೆ ಡ್ರೋಣ್ ಸ್ಟ್ರೈಕ್‌

    ಮೇ 24 ರಂದು ನಡೆದಿದ್ದ ಗುಂಡಿನ ದಾಳಿಯಲ್ಲಿ 19 ಮಕ್ಕಳು ಸೇರಿದಂತೆ ಅನೇಕರು ಮೃತಪಟ್ಟಿದ್ದರು. ಜೂ.1ರಂದು ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವಿಗೀಡಾಗಿದ್ದರು. ಜೂ.20ರಂದು ಅಪ್ರಾಪ್ತ ನಡೆಸಿದ ದಾಳಿಯಲ್ಲಿ ಪೊಲೀಸ್‌ ಅಧಿಕಾರಿ ಸೇರಿದಂತೆ ಮೂವರು ಸಾವನ್ನಪ್ಪಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮಗನ ಬರ್ತ್‌ಡೇ ಪಾರ್ಟಿ ವೇಳೆ ಹಾರಿಸಿದ ಗುಂಡು ತಗುಲಿ ತಾಯಿ ಸಾವು

    ಮಗನ ಬರ್ತ್‌ಡೇ ಪಾರ್ಟಿ ವೇಳೆ ಹಾರಿಸಿದ ಗುಂಡು ತಗುಲಿ ತಾಯಿ ಸಾವು

    ಲಕ್ನೋ: ಪುತ್ರನ ಬರ್ತ್‌ಡೇ ಸಂಭ್ರಮಾಚರಣೆ ವೇಳೆ ಹಾರಿಸಿದ ಗುಂಡು ತಗುಲಿ ತಾಯಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದೆ.

    ಅನಿತಾ ವರ್ಮಾ ಮೃತಪಟ್ಟ ಮಹಿಳೆ. ಬುಧವಾರ ರಾತ್ರಿ ಮೂರು ವರ್ಷದ ತಮ್ಮ ಪುತ್ರನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಈ ವೇಳೆ ಸಂಭ್ರಮಕ್ಕಾಗಿ ಹಾರಿಸಿದ ಗುಂಡು ಮಹಿಳೆಗೆ ತಗುಲಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಪಂಜಾಬ್‍ನ ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ – 2 ಸಾವು, 4 ಮಂದಿಗೆ ಗಾಯ

    ಅನಿತಾ ಅವರು ಪ್ರದೀಪ್‌ ವರ್ಮಾ ಎಂಬವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗನ ಹುಟ್ಟುಹಬ್ಬ ಸಂಭ್ರಮಕ್ಕೆ 100 ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಿದ್ದರು. ಅನಿತಾ ಕುಟುಂಬಕ್ಕೆ ಹತ್ತಿರದವರೇ ಆಗಿದ್ದ ಜೈರಾಮ್‌ ವರ್ಮಾ ಪಾರ್ಟಿ ವೇಳೆ ಕುಡಿದ ಮತ್ತಿನಲ್ಲಿದ್ದರು. ಸಂಭ್ರಮಕ್ಕೆ ಜೈರಾಮ್‌ ಹಾರಿಸಿದ ಗುಂಡು ಅನಿತಾಗೆ ತಗುಲಿ ಮೃತಪಟ್ಟಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಜೈರಾಮ್‌ ವರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಯನ್ನು ಬಚಾವ್ ಮಾಡಲು ಖತರ್ನಾಕ್ ಪ್ಲಾನ್ ಮಾಡಿದ್ದ ತಂದೆ ಅರೆಸ್ಟ್!

  • ಕನ್ನಡಿಯಲ್ಲಿ ಬಿಂಬ ನೋಡಿ ಗುಂಡು ಹೊಡೆಯುತ್ತಾರೆ ಕೊಡಗಿನ ಮಹಿಳೆ

    ಕನ್ನಡಿಯಲ್ಲಿ ಬಿಂಬ ನೋಡಿ ಗುಂಡು ಹೊಡೆಯುತ್ತಾರೆ ಕೊಡಗಿನ ಮಹಿಳೆ

    ಮಡಿಕೇರಿ: ವಿಶಿಷ್ಟ ಹಬ್ಬ ಆಚರಣೆಗಳ, ಉಡುಗೆ ತೊಡುಗೆ ಮತ್ತು ಸಂಪ್ರದಾಯಗಳಿಂದ ಕೊಡಗು ದೇಶದ ಗಮನ ಸೆಳೆದಿದೆ. ಇಲ್ಲಿ ಮಕ್ಕಳು ಹುಟ್ಟಿದರೆ ಗುಂಡು ಹಾರಿಸಿ ಸಂಭ್ರಮಿಸುತ್ತಾರೆ. ಅಂತ್ಯಸಂಸ್ಕಾರದ ವೇಳೆ ಗುಂಡು ಹಾರಿಸಿ ಶೋಕ ವ್ಯಕ್ತಪಡಿಸಲಾಗುತ್ತದೆ. ಇನ್ನು ಹಬ್ಬ ಹರಿದಿನಗಳೆಂದರೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳು ಸಾಮಾನ್ಯ. ಅದರೆ ಕೊಡಗಿನ ಮಹಿಳೆಯೊಬ್ಬರು ಕನ್ನಡಿಯಲ್ಲಿ ಬಿಂಬ ನೋಡಿ ಹಿಮ್ಮುಖವಾಗಿ ಕೋವಿಯಿಂದ ಶೂಟ್ ಮಾಡುವುದರಲ್ಲಿ ಪರಿಣಿತರಾಗಿದ್ದಾರೆ.

    ವಿರಾಜಪೇಟೆ ತಾಲ್ಲೂಕಿನ ಒಂಟಿಯಂಗಡಿ ಸಮೀಪದ ದೇವಣಗೇರಿಯ ನಿವಾಸಿ ಡೀನಾ ಉತ್ತಪ್ಪ ಇಂತಹ ಸಾಧನೆ ಮಾಡಿರುವವರು. ಸಾಮಾನ್ಯವಾಗಿ ಮುಂದೆ ನೋಡಿಯೇ ಗುರಿತಪ್ಪದಂತೆ ಟಾರ್ಗೆಟ್ ಇಟ್ಟು ಶೂಟ್ ಮಾಡುವುದಕ್ಕೆ ಇಷ್ಟೋ ಜನರಿಗೆ ಸಾಧ್ಯವಾಗುವುದಿಲ್ಲ. ಆದರೆ ಮಹಿಳೆ ಡೀನಾ ಉತ್ತಪ್ಪ ಹಿಮ್ಮುಖವಾಗಿ ಗನ್  ಹೆಗಲೇರಿಸಿಕೊಂಡು ಕನ್ನಡಿಯಲ್ಲಿ ಟಾರ್ಗೆಟ್ ಇಟ್ಟಿರುವ ವಸ್ತುವಿನ ಬಿಂಬ ನೋಡುತ್ತಾ ಗುರಿ ತಪ್ಪದಂತೆ ಏರ್ ಗನ್ ನಿಂದ ಹಿಮ್ಮುಖವಾಗಿ ಶೂಟ್ ಮಾಡುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

    ಗೃಹಿಣಿಯಾಗಿರುವ ಡೀನಾ ತಾವು ಪ್ರೌಢಶಾಲೆಯಲ್ಲಿದ್ದಾಗಲೇ ಏರ್ ಗನ್ ಶೂಟ್ ಮಾಡುತ್ತಿದ್ದರು. ವಿವಾಹವಾದ ಬಳಿಕ ಈ ಅಭ್ಯಾಸ ಕೈಬಿಟ್ಟಿದ್ದರು. ಆದರೆ ಕಳೆದ ಎರಡು ವರ್ಷಗಳ ಹಿಂದೆ ದಸರಾ ಸಂದರ್ಭದಲ್ಲಿ ಜಂಬೋ ಸರ್ಕಸ್ ನೋಡಲು ಹೋಗಿದ್ದರು. ಸರ್ಕಸ್ ನಲ್ಲಿ ಕನ್ನಡಿಯಲ್ಲಿ ಬಿಂಬ ನೋಡಿಕೊಂಡು, ಹಿಮ್ಮುಖವಾಗಿ ಶೂಟ್ ಮಾಡಿದ್ದನ್ನು ನೋಡಿ ನಾನು ಏಕೆ ಇದನ್ನು ಪ್ರಯತ್ನಿಸಬಾರೆಂದು ಆಲೋಚಿಸಿ ಹಿಮ್ಮುಖವಾಗಿ ಶೂಟ್ ಮಾಡಲು ನಿರಂತರ ಪ್ರಯತ್ನಿಸಿದ್ದಾರೆ.

    ಕಳೆದ ಆರು ತಿಂಗಳ ಹಿಂದೆ ಅದರಲ್ಲಿ ಸಕ್ಸಸ್ ಆಗಿದ್ದಾರೆ. ಆ ನಂತರವೂ ನಿರಂತರ ಪ್ರಯತ್ನದ ಫಲವಾಗಿ ಡೀನಾ ಅವರು ಈಗ ಕನ್ನಡಿಯಲ್ಲಿ ಟಾರ್ಗೆಟ್ ನ ಬಿಂಬ ನೋಡುತ್ತಾ ಹಿಮ್ಮುಖವಾಗಿ ಸಲೀಸಾಗಿ ಶೂಟ್ ಮಾಡುತ್ತಾರೆ.

    ಹಿಮ್ಮುಖವಾಗಿ ಶೂಟ್ ಮಾಡಿದ್ದ ಇವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅದನ್ನು ಗಮನಿಸಿದ್ದ ಕೊಡಗಿನ ಇನ್ನಿಬ್ಬರು ಯುವಕರು ಪ್ರಭಾವಿತರಾಗಿ ಅವರು ಕೂಡ ಹಿಮ್ಮುಖವಾಗಿ ಶೂಟ್ ಮಾಡುವುದನ್ನು ಅಭ್ಯಾಸಿಸಿದ್ದಾರೆ. ಈಗ ಹಿಮ್ಮುಖವಾಗಿ ಶೂಟ್ ಮಾಡುವುದು ಕೊಡಗಿನಲ್ಲಿ ಟ್ರೆಂಡ್ ಆಗಿ ಬೆಳೆಯುತ್ತಿದೆ. ಪತ್ನಿ ಡೀನಾ ಅವರ ಈ ಪ್ರಯತ್ನಕ್ಕೆ ಪತಿ ಉತ್ತಪ್ಪ ಕೂಡ ಸಾಥ್ ನೀಡುತ್ತಿದ್ದಾರೆ.