Tag: gun right

  • ಸಾರ್ವಜನಿಕವಾಗಿ ಗನ್‌ ಒಯ್ಯುವುದು ಅಮೆರಿಕನ್ನರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್‌

    ಸಾರ್ವಜನಿಕವಾಗಿ ಗನ್‌ ಒಯ್ಯುವುದು ಅಮೆರಿಕನ್ನರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್‌

    ವಾಷಿಂಗ್ಟನ್: ಅಮೆರಿಕನ್ನರು ಸಾರ್ವಜನಿಕವಾಗಿ ಬಂದೂಕುಗಳನ್ನು ಒಯ್ಯುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ ಎಂದು ಯುಎಸ್‌ ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ನೀಡಿದೆ.

    ಅಮೆರಿಕದ ಶಾಲಾ-ಕಾಲೇಜುಗಳಲ್ಲಿ ಸಾರ್ವಜನಿಕವಾಗಿ ಗುಂಡಿನ ದಾಳಿ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಂತಹ ಸನ್ನಿವೇಶದಲ್ಲೇ ಸುಪ್ರೀಂ ಕೋರ್ಟ್‌ ತೀರ್ಪನ್ನು ಪ್ರಕಟಿಸಿದೆ. ಇದನ್ನೂ ಓದಿ: ಟಾನ್ಸಿಲ್ ಸರ್ಜರಿ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಬ್ರೆಜಿಲ್‌ ಮಾಜಿ ಸುಂದರಿ

    ವ್ಯಕ್ತಿ ಕಾನೂನುಬದ್ಧ ಸ್ವರಕ್ಷಣೆ ಅಗತ್ಯವಿದೆ ಎಂದು ಸಾಬೀತುಪಡಿಸಲು ಬಂದೂಕು ಪರವಾನಗಿಯನ್ನು ಪಡೆಯಬಹುದು. ಬಂದೂಕುಗಳನ್ನು ಹೊಂದಿರುವ ಜನರನ್ನು ನಿರ್ಬಂಧಿಸುವ ರಾಜ್ಯಗಳ ಕಾನೂನುಗಳಿಗೂ ಈ ತೀರ್ಪು ಬ್ರೇಕ್‌ ನೀಡಿದೆ.

    ಮೇ ತಿಂಗಳಲ್ಲಿ ಎರಡು ಸಾಮೂಹಿಕ ಗುಂಡಿನ ದಾಳಿಯ ನಂತರ ಬಂದೂಕುಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ನ್ಯಾಯಾಲಯ, US ಸಂವಿಧಾನವು ಬಂದೂಕುಗಳನ್ನು ಹೊಂದುವ ಮತ್ತು ಸಾರ್ವಜನಿಕವಾಗಿ ಜೊತೆಯಲ್ಲಿ ಒಯ್ಯುವ ಹಕ್ಕನ್ನು ಖಾತರಿಪಡಿಸುತ್ತದೆ ಎಂದು ವಾದಿಸಿದ ವಕೀಲರ ಪರವಾಗಿ ತೀರ್ಪು ನೀಡಿದೆ.

    2ನೇ ಮತ್ತು 14ನೇ ತಿದ್ದುಪಡಿಗಳು, ಮನೆಯ ಹೊರಗೆ ಆತ್ಮರಕ್ಷಣೆಗಾಗಿ ಬಂದೂಕು ಒಯ್ಯುವ ವ್ಯಕ್ತಿಯ ಹಕ್ಕನ್ನು ರಕ್ಷಿಸುತ್ತವೆ ಎಂದು ನ್ಯಾಯಮೂರ್ತಿ ಕ್ಲಾರೆನ್ಸ್ ಥಾಮಸ್ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಬಿಕ್ಕಟ್ಟು; ಡೀಸೆಲ್‌ಗಾಗಿ ಬಂಕ್‌ನಲ್ಲಿ 5 ದಿನ ಕ್ಯೂನಲ್ಲಿ ನಿಂತಿದ್ದ ಟ್ರಕ್‌ ಡ್ರೈವರ್‌ ಸಾವು

    ನ್ಯೂಯಾರ್ಕ್‌ ಕಾನೂನು, ಸಂವಿಧಾನದ 14ನೇ ತಿದ್ದುಪಡಿಯನ್ನು ಉಲ್ಲಂಘಿಸುತ್ತದೆ. ಸಾಮಾನ್ಯ ಸ್ವರಕ್ಷಣೆ ಅಗತ್ಯತೆಗಳನ್ನು ಹೊಂದಿರುವ, ಕಾನೂನು ಪಾಲಿಸುವ ನಾಗರಿಕರು, 2ನೇ ತಿದ್ದುಪಡಿಯ ಹಕ್ಕನ್ನು ಸ್ವಯಂ ರಕ್ಷಣೆಗಾಗಿ ಬಂದೂಕನ್ನು ಸಾರ್ವಜನಿಕವಾಗಿ ಇರಿಸಿಕೊಳ್ಳಲು ಮತ್ತು ಒಯ್ಯುವುದನ್ನು ನಿರ್ಬಂಧಿಸುತ್ತದೆ ಎಂದು ಕೋರ್ಟ್‌ ತಿಳಿಸಿದೆ.

    ಪ್ರಕರಣ ಏನು?
    ಮೇ 14 ರಂದು, ನ್ಯೂಯಾರ್ಕ್‌ನ ಬಫಲೋದಲ್ಲಿನ ಸೂಪರ್‌ ಮಾರ್ಕೆಟ್‌ನಲ್ಲಿ 18 ವರ್ಷದ ಯುವಕ AR-15-ಟೈಪ್ ಅಸಾಲ್ಟ್ ರೈಫಲ್ ಅನ್ನು ಬಳಸಿ 10 ಆಫ್ರಿಕನ್-ಅಮೆರಿಕನ್ನರನ್ನು ಕೊಂದಿದ್ದ. ಇದಾದ ಎರಡು ವಾರಗಳ ನಂತರ ಟೆಕ್ಸಾಸ್‌ನ ಉವಾಲ್ಡೆಯ ಪ್ರಾಥಮಿಕ ಶಾಲೆಯಲ್ಲಿ ಬಾಲಕನೊಬ್ಬ ಗುಂಡಿನ ದಾಳಿ ನಡೆಸಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಕೊಂದಿದ್ದ. ಇದನ್ನೂ ಓದಿ: ಚರ್ಚ್‌ಗಳೂ ಸೇರಿ 4 ತಿಂಗಳಲ್ಲಿ 150ಕ್ಕೂ ಹೆಚ್ಚು ಸ್ಮಾರಕಗಳು ನೆಲಸಮ – ಯುನೆಸ್ಕೋ ವರದಿ

    ನ್ಯೂಯಾರ್ಕ್‌ ಕಾನೂನು ಏನು ಹೇಳುತ್ತೆ?
    ಯಾವುದೇ ವ್ಯಕ್ತಿ ಸಾರ್ವಜನಿಕವಾಗಿ ಬಂದೂಕು ಒಯ್ಯುವುದಾದರೆ, ಆತ್ಮರಕ್ಷಣೆಗಾಗಿ ಎಂಬುದನ್ನು ಸಾಬೀತುಪಡಿಸಬೇಕು ಎಂದು ನ್ಯೂಯಾರ್ಕ್‌ ಕಾನೂನು ಹೇಳುತ್ತದೆ.

    Live Tv