Tag: gun culture

  • ಪಂಜಾಬ್‍ನಲ್ಲಿ ಗನ್ ಸಂಸ್ಕೃತಿ ವಿರುದ್ಧ ಕ್ರಮ – ರಾಜ್ಯದಲ್ಲಿ 813 ಗನ್ ಪರವಾನಗಿ ರದ್ದು

    ಪಂಜಾಬ್‍ನಲ್ಲಿ ಗನ್ ಸಂಸ್ಕೃತಿ ವಿರುದ್ಧ ಕ್ರಮ – ರಾಜ್ಯದಲ್ಲಿ 813 ಗನ್ ಪರವಾನಗಿ ರದ್ದು

    ಚಂಡೀಗಢ: ಪಂಜಾಬ್‍ನಲ್ಲಿ (Punjab) ಗನ್ ಸಂಸ್ಕೃತಿ (Gun Culture) ವಿರುದ್ಧ ಭಗವಂತ್ ಮಾನ್ ನೇತೃತ್ವದ ಸರ್ಕಾರ ಪ್ರಮುಖ ಕ್ರಮವನ್ನು ಕೈಗೊಂಡಿದ್ದು, ರಾಜ್ಯದಲ್ಲಿ 813 ಬಂದೂಕುಗಳ ಪರವಾನಗಿಯನ್ನು ರದ್ದುಗೊಳಿಸಿದೆ.

    ಭಗವಂತ್ ಮಾನ್ (Bhagwant Mann) ಸರ್ಕಾರವು ಲೂಧಿಯಾನ ಗ್ರಾಮಾಂತರದಿಂದ 87, ಶಹೀದ್ ಭಗತ್ ಸಿಂಗ್ ನಗರದಿಂದ 48, ಗುರುದಾಸ್‍ಪುರದಿಂದ 10, ಫರೀದ್‍ಕೋಟ್‍ನಿಂದ 84, ಪಠಾಣ್‍ಕೋಟ್‍ನಿಂದ 199, ಹೋಶಿಯಾಪುರದಿಂದ 47, ಕಪುರ್ತಲಾದಿಂದ 6, ಎಸ್‍ಎಎಸ್ ಕಸ್ಬಾದಿಂದ 235 ಮತ್ತು ಸಂಗ್ರೂರ್‍ನಿಂದ 16 ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ಅಮೃತಸರ ಕಮಿಷನರೇಟ್‍ನ 27 ಮತ್ತು ಜಲಂಧರ್ ಕಮಿಷನರೇಟ್‍ನ 11 ಮತ್ತು ಇತರ ಹಲವು ಜಿಲ್ಲೆಗಳ ಶಸ್ತ್ರಾಸ್ತ್ರ ಪರವಾನಗಿಯನ್ನು (Licence) ಸಹ ರದ್ದುಗೊಳಿಸಲಾಗಿದೆ. ಪಂಜಾಬ್ ಸರ್ಕಾರ ಇದುವರೆಗೆ 2,000 ಕ್ಕೂ ಹೆಚ್ಚು ಶಸ್ತ್ರಾಸ್ತ್ರ ಪರವಾನಗಿಗಳನ್ನು ರದ್ದುಗೊಳಿಸಿದೆ.

    ಬಂದೂಕುಗಳನ್ನು ಇಟ್ಟುಕೊಳ್ಳುವವರು ನಿಯಮಗಳನ್ನು ಅನುಸರಿಸಬೇಕು. ಪಂಜಾಬ್‍ನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು, ಧಾರ್ಮಿಕ ಸ್ಥಳಗಳು, ಮದುವೆ ಸಮಾರಂಭಗಳು ಅಥವಾ ಇತರ ಯಾವುದೇ ಕಾರ್ಯಕ್ರಮಗಳಲ್ಲಿ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಲು ಹಾಗೂ ಪ್ರದರ್ಶಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

    ಪಂಜಾಬ್‍ನಲ್ಲಿ ಒಟ್ಟು 3,73,053 ಶಸ್ತ್ರಾಸ್ತ್ರ ಪರವಾನಗಿಗಳಿವೆ. ಬಂದೂಕು ಸಂಸ್ಕøತಿಯನ್ನು ಕೊನೆಗಾಣಿಸಲು ನಿರಂತರವಾಗಿ ಕ್ರಮ ಕೈಗೊಳ್ಳುತ್ತಿರುವುದಾಗಿ ಪಂಜಾಬ್ ಸರ್ಕಾರ ಹೇಳಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಮೋದಿ ರೋಡ್ ಶೋ – ಸ್ವಾಗತಿಸಲು ನಿಂತಿದ್ದ ಅಭಿಮಾನಿಗಳಿಗೆ ಪ್ರಧಾನಿ ಪುಷ್ಪಾರ್ಚನೆ

    ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯು ಗನ್ ಸಂಸ್ಕೃತಿಯ ಪರ-ವಿರೋಧ ಬಗ್ಗೆ ತೀವ್ರ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಿಯಂತ್ರಣ ಮಾಡಬೇಕು ಎಂಬುದು ಹೆಚ್ಚಾಗಿ ಕೇಳಿ ಬಂದಿತ್ತು.  ಇದನ್ನೂ ಓದಿ: ಕಾಂಗ್ರೆಸ್ ಕೌರವರನ್ನು ಪಾಂಡವರಂತೆ ಸದೆಬಡಿಯುತ್ತೇವೆ: ಶ್ರೀರಾಮುಲು

  • ಪಂಜಾಬ್‌ನಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಬಿಗಿ – ಹಿಂಸೆ ವೈಭವೀಕರಿಸುವ ಹಾಡುಗಳು ಬ್ಯಾನ್

    ಪಂಜಾಬ್‌ನಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಬಿಗಿ – ಹಿಂಸೆ ವೈಭವೀಕರಿಸುವ ಹಾಡುಗಳು ಬ್ಯಾನ್

    ಚಂಡೀಗಢ: ಪಂಜಾಬ್ (Punjab) ಸರ್ಕಾರ ರಾಜ್ಯದ ಕುಖ್ಯಾತ ಬಂದೂಕು ಸಂಸ್ಕೃತಿಗೆ (Gun Culture) ಕಡಿವಾಣ ಹಾಕಿದ್ದು, ಶಸ್ತ್ರಾಸ್ತ್ರ (Arms)ನಿಯಂತ್ರಣವನ್ನು ಬಿಗಿಗೊಳಿಸಿದೆ. ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸಾರ್ವಜನಿಕ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ನಿಷೇಧಿಸುವುದು ಸೇರಿದಂತೆ ಗನ್ ಮಾಲೀಕತ್ವ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ಶಸ್ತ್ರಾಸ್ತ್ರಗಳು ಅಥವಾ ಹಿಂಸೆಯನ್ನು ವೈಭವೀಕರಿಸುವ ಹಾಡುಗಳನ್ನು (Songs) ಕೂಡಾ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

    ಮೂಲಗಳ ಪ್ರಕಾರ ಇದುವರೆಗೆ ನೀಡಲಾದ ಎಲ್ಲಾ ಶಸ್ತ್ರಾಸ್ತ್ರ ಪರವಾನಗಿಗಳನ್ನು ಮುಂದಿನ 3 ತಿಂಗಳೊಳಗೆ ಕೂಲಂಕುಷವಾಗಿ ಪರಿಶೀಲಿಸಲಾಗುವುದು. ಪರವಾನಗಿದಾರರಲ್ಲಿ ಶಸ್ತ್ರಾಸ್ತ್ರ ಹೊಂದಿರಲು ಜಿಲ್ಲಾಧಿಕಾರಿಗಳಿಗೆ ತೃಪ್ತಿದಾಯಕ ಕಾರಣಗಳು ಸಿಗಲಿಲ್ಲವೆಂದಾದರೆ ಹೊಸ ಪರವಾನಗಿಯನ್ನು ನೀಡಲಾಗುವುದಿಲ್ಲ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

    ಮಾನವನ ಜೀವನಕ್ಕೆ, ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಶಸ್ತ್ರಾಸ್ತ್ರಗಳನ್ನು ಅಜಾಗರೂಕರಾಗಿ ಬಳಕೆ ಮಾಡುವುದು ಅಥವಾ ಸಂಭ್ರಮಾಚರಣೆಯ ವೇಳೆ ಗುಂಡು ಹಾರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಇದನ್ನೂ ಓದಿ: ಅಯೋಧ್ಯೆ ಮಸೀದಿ ನಿರ್ಮಾಣ ಕಾರ್ಯ 2023ಕ್ಕೆ ಪೂರ್ಣ ಸಾಧ್ಯತೆ – ಟ್ರಸ್ಟ್‌

    ಭಗವಂತ್ ಮಾನ್ ಅವರು ಮೇ ತಿಂಗಳಿನಲ್ಲಿಯೇ ಹಾಡುಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಅಥವಾ ಹಿಂಸೆಯನ್ನು ವೈಭವೀಕರಿಸುವ ಗಾಯಕರಿಗೆ ಎಚ್ಚರಿಕೆ ನೀಡಿದ್ದರು. ಅಂತಹ ಪ್ರವೃತ್ತಿಯನ್ನು ಬೆಂಬಲಿಸುವುದಕ್ಕೆ ಅವರು ಅಸಮ್ಮತಿ ಸೂಚಿಸಿದರು. ಇಂತಹ ಕೆಲಸಗಳಲ್ಲಿ ಭಾಗಿಯಾಗುವವರೊಂದಿಗೆ ಕಠಿಣವಾಗಿ ವ್ಯವಹರಿಸಲಾಗುವುದು ಎಂದು ಹೇಳಿದ್ದರು.

    ಇಂತಹ ಹಾಡುಗಳ ಮೂಲಕ ಸಮಾಜ ವಿರೋಧಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಬದಲು ಸಹೋದರತ್ವ, ಶಾಂತಿ ಮತ್ತು ಸೌಹಾರ್ದತೆಯ ಬಂಧಗಳನ್ನು ಬಲಪಡಿಸುವ ಮೂಲಕ ಪಂಜಾಬ್‌ನ ನೀತಿಗಳನ್ನು ಅನುಸರಿಸುವಂತೆ ಮಾನ್ ಗಾಯಕರಿಗೆ ಕರೆ ನೀಡಿದ್ದರು. ಇದನ್ನೂ ಓದಿ: ತನ್ನ ಹೆಂಡತಿಯನ್ನ ಭಾರೀ ಮೊತ್ತಕ್ಕೆ ಮಾರಾಟ ಮಾಡಿದ ಗಂಡ – ಮದುವೆನೂ ಮಾಡಿಸಿದ

    Live Tv
    [brid partner=56869869 player=32851 video=960834 autoplay=true]