Tag: Gulshan Devaiah

  • ರಾಕೇಶ್ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ಆದ್ರೆ ಜನರಿಗೆ ಆತನ ಮೇಲಿರುವ ಪ್ರೀತಿಯನ್ನ ನೋಡ್ತಿದ್ದೀನಿ: ಗುಲ್ಶನ್ ದೇವಯ್ಯ

    ರಾಕೇಶ್ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ಆದ್ರೆ ಜನರಿಗೆ ಆತನ ಮೇಲಿರುವ ಪ್ರೀತಿಯನ್ನ ನೋಡ್ತಿದ್ದೀನಿ: ಗುಲ್ಶನ್ ದೇವಯ್ಯ

    `ಕಾಂತಾರ ಚಾಪ್ಟರ್ 1′ (Kantara: Chapter 1) ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ಕುಲಶೇಖರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗುಲ್ಶನ್ ದೇವಯ್ಯ (Gulshan Devaiah) ತಮ್ಮ ಸಹ ನಟ ರಾಕೇಶ್ ಪೂಜಾರಿಯನ್ನು (Rakesh Poojary) ನೆನೆದು ಭಾವುಕರಾಗಿದ್ದಾರೆ.

    ಈ ಕುರಿತು ನಟ ಗುಲ್ಶನ್ ದೇವಯ್ಯ ಅವರು ತಮ್ಮ ಎಕ್ಸ್‌ (X) ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ನನಗೆ ರಾಕೇಶ್ ಪೂಜಾರಿಯ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ಜನರು ಆತನ ಮೇಲಿಟ್ಟಿರುವ ಪ್ರೀತಿಯನ್ನು ಹಾಗೂ ಆತನನ್ನು ನೆನಪಿಸಿಕೊಳ್ಳುವ ಪರಿಯನ್ನು ನಾನು ಗಮನಿಸುತ್ತಿದ್ದೇನೆ. ಇದರಿಂದಲೇ ಆತ ಎಂತಹ ಕಲಾವಿದ ಎಂದು ಗೊತ್ತಾಗುತ್ತದೆ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಅದ್ಭುತ ಭಾರತೀಯ ಚಿತ್ರ, ಅಭಿನಯವು ಪೀಳಿಗೆಗೆ ಸ್ಫೂರ್ತಿ: ರಿಷಬ್‌ ನಟನೆಗೆ ರಿತೇಶ್ ದೇಶಮುಖ್ ಚಪ್ಪಾಳೆ

    ಇದೇ ವೇಳೆ ಪೋಸ್ಟ್‌ವೊಂದನ್ನು ರೀಪೋಸ್ಟ್ ಮಾಡಿದ್ದು, ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಪ್ರೇಕ್ಷಕರನ್ನು ಅತೀ ಹೆಚ್ಚು ನಗಿಸಿದ ಪಾತ್ರವೆಂದರೆ ಅದು ರಾಕೇಶ್ ಪೂಜಾರಿಯವರದ್ದು. ಆದರೆ ಇಂದು ಸಿನಿಮಾದ ಮೂಲಕ ಅವರಿಗೆ ಸಿಗುತ್ತಿರುವ ಪ್ರೀತಿಯನ್ನು ನೋಡಲು ಅವರು ನಮ್ಮೊಂದಿಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

    ಹೊಂಬಾಳೆ ಫಿಲ್ಮ್ಸ್‌ ಅಡಿಯಲ್ಲಿ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ `ಕಾಂತಾರ ಚಾಪ್ಟರ್ 1′ ಅ.2ರಂದು ವಿಶ್ವದಾದ್ಯಂತ ತೆರೆಕಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.ಇದನ್ನೂ ಓದಿ: ಮೂರು ದಿನದಲ್ಲಿ 52 ಕೋಟಿ – ಹಿಂದಿಯಲ್ಲೂ ಕಮಾಲ್‌ ಆರಂಭಿಸಿದ ಕಾಂತಾರ

     

  • ಕಾಂತಾರ ಚಾಪ್ಟರ್‌ 1ಗೆ ಪ್ರೇಕ್ಷಕರ ಮೆಚ್ಚುಗೆ ಕಂಡು ರಿಷಬ್‌ ಶೆಟ್ಟಿ ಪತ್ನಿ ಭಾವುಕ – ಅಪ್ಪಿಕೊಂಡು ಸಮಾಧಾನಪಡಿಸಿದ ರಿಷಬ್‌

    ಕಾಂತಾರ ಚಾಪ್ಟರ್‌ 1ಗೆ ಪ್ರೇಕ್ಷಕರ ಮೆಚ್ಚುಗೆ ಕಂಡು ರಿಷಬ್‌ ಶೆಟ್ಟಿ ಪತ್ನಿ ಭಾವುಕ – ಅಪ್ಪಿಕೊಂಡು ಸಮಾಧಾನಪಡಿಸಿದ ರಿಷಬ್‌

    – ರಿಷಬ್‌ ನಿರ್ದೇಶನ, ಅಭಿನಯಕ್ಕೆ ಪ್ರೇಕ್ಷಕರು ಫಿದಾ; ಶಿಳ್ಳೆ, ಚಪ್ಪಾಳೆಯ ಮೆಚ್ಚುಗೆ

    ಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರ ಕಾಂತಾರ ಚಾಪ್ಟರ್ 1 (Kantara Chapter 1) ಚಿತ್ರವು ಅದ್ದೂರಿಯಾಗಿ ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ. ಸಿನಿಮಾ ಮೂಡಿಬಂದ ರೀತಿ ಹಾಗೂ ಅದಕ್ಕೆ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಬಾರಿ ಮೆಚ್ಚುಗೆ ಕಂಡು ರಿಷಬ್‌ ಶೆಟ್ಟಿ ಪತ್ನಿ ಭಾವುಕರಾದರು.

    ಸಿನಿಮಾ ಪ್ರದರ್ಶನದ ಸಮಯದಲ್ಲಿ ರಿಷಬ್‌ ಶೆಟ್ಟಿ ಅವರ ಪತ್ನಿ, ನಟ-ವಿನ್ಯಾಸಕಿ ಪ್ರಗತಿ ಶೆಟ್ಟಿ (Pragathi Shetty), ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನೋಡಿ ಕಣ್ಣೀರು ಹಾಕಿದರು. ಆಗ ಪತ್ನಿಯನ್ನು ಅಪ್ಪಿಕೊಂಡು ರಿಷಬ್ ಸಮಾಧಾನಪಡಿಸಿದ ದೃಶ್ಯ ಕಂಡುಬಂತು. ನಿಜಕ್ಕೂ ಇದು ಹೃದಯಸ್ಪರ್ಶಿ ಕ್ಷಣವಾಗಿದೆ. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ವಿಶ್ವದಾದ್ಯಂತ ಇಂದು ರಿಲೀಸ್

    ವಿಜಯದಶಮಿ ದಿನವೇ ವಿಶ್ವದಾದ್ಯಂತ ಕಾಂತಾರ ಚಾಪ್ಟರ್‌ 1 ಸಿನಿಮಾ ರಿಲೀಸ್‌ ಆಗಿದೆ. ಎಲ್ಲೆಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಿಷಬ್‌ ಶೆಟ್ಟಿ ನಿರ್ದೇಶನ ಮತ್ತು ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾವನ್ನು ಪ್ರೇಕ್ಷಕರು ಎಂಜಾಯ್‌ ಮಾಡಿದ್ದಾರೆ.

    ರಿಷಬ್, ತನ್ನ ಪತ್ನಿಯೊಂದಿಗೆ ಕಾಂತಾರ ಚಾಪ್ಟರ್‌ 1 ರ ಪ್ರದರ್ಶನಕ್ಕೆ ಹಾಜರಾಗಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಒಂದು ವೀಡಿಯೊದಲ್ಲಿ ರಿಷಬ್ ಪ್ರೇಕ್ಷಕರಿಗೆ ಧನ್ಯವಾದ ಹೇಳುತ್ತಿರುವ ಭಾವನಾತ್ಮಕ ಕ್ಷಣಗಳೂ ವ್ಯಕ್ತವಾಗಿವೆ. ಇದನ್ನೂ ಓದಿ: ಕಾಂತಾರದ ನಂತರದ What Next? – ಪ್ರಶ್ನೆಗೆ ಉತ್ತರ ನೀಡಿದ ರಿಷಭ್‌ ಶೆಟ್ಟಿ

    ರಿಷಬ್ ತಮ್ಮ ಚಿತ್ರದಲ್ಲಿ ಕೆಲಸ ಮಾಡಿದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರೇಕ್ಷಕರು ಅವರೆಲ್ಲರಿಗೂ ಹರ್ಷೋದ್ಗಾರದ ಮೂಲಕ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ರಿಷಬ್ ಜೊತೆಗೆ ಚಿತ್ರದಲ್ಲಿ ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  • ಹೊಂಬಾಳೆ ಫಿಲಮ್ಸ್‌ನ ‘ಕಾಂತಾರ ಚಾಪ್ಟರ್ 1’ ನಲ್ಲಿ ಕುಲಶೇಖರನ ಪಾತ್ರದಲ್ಲಿ ಗುಲ್ಶನ್ ದೇವಯ್ಯ

    ಹೊಂಬಾಳೆ ಫಿಲಮ್ಸ್‌ನ ‘ಕಾಂತಾರ ಚಾಪ್ಟರ್ 1’ ನಲ್ಲಿ ಕುಲಶೇಖರನ ಪಾತ್ರದಲ್ಲಿ ಗುಲ್ಶನ್ ದೇವಯ್ಯ

    ಹು ನಿರೀಕ್ಷಿತ ಚಿತ್ರ ‘ಕಾಂತಾರ ಚಾಪ್ಟರ್ 1’ (Kantara: Chapter 1) ನಲ್ಲಿ ಜನಪ್ರಿಯ ನಟ ಗುಲ್ಶನ್ ದೇವಯ್ಯ (Gulshan Devaiah) ಅವರು ಪ್ರಮುಖ ಪಾತ್ರವಾದ ಕುಲಶೇಖರನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೊಂಬಾಳೆ ಫಿಲಮ್ಸ್ (Hombale Films) ಹೆಮ್ಮೆಯಿಂದ ಘೋಷಿಸಿದೆ.

    ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ, ಜಾಗತಿಕವಾಗಿ ಮೆಚ್ಚುಗೆ ಗಳಿಸಿದ ‘ಕಾಂತಾರ’ (2022) ದ ಹಿಂದಿನ ಅಧ್ಯಾಯವಾಗಿದ್ದು, ಹೊಂಬಾಳೆ ಫಿಲಮ್ಸ್‌ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಈ ಚಿತ್ರವು ಸಂಸ್ಕೃತಿ, ಜಾನಪದ ಮತ್ತು ಅದ್ಭುತ ಕಥಾಹಂದರದ ಆಳವಾದ ಪದರಗಳನ್ನು ಪರಿಶೋಧಿಸಲಿದೆ.

    ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಕಾಂತಾರ ಚಾಪ್ಟರ್ 1’ ಪ್ರಬಲ ನಿರೂಪಣೆ ಮತ್ತು ಅದ್ಭುತ ದೃಶ್ಯಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಸಿದ್ಧವಾಗಿದೆ. ಗುಲ್ಶನ್ ದೇವಯ್ಯ ಅವರ ಆಗಮನವು ಚಿತ್ರದ ದೊಡ್ಡ ಜಗತ್ತಿಗೆ ಹೊಸ ಆಯಾಮವನ್ನು ಸೇರಿಸಿದೆ.

    ಈ ಚಿತ್ರವು 2025ರ ಅಕ್ಟೋಬರ್ ತಿಂಗಳಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.