Tag: Gully cricket

  • ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಕೊಹ್ಲಿ

    ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಕೊಹ್ಲಿ

    ಇಂದೋರ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಕ್ಕಳೊಂದಿಗೆ ಗಲ್ಲಿಯಲ್ಲಿ ಕ್ರಿಕೆಟ್ ಆಡಿ, ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

    ಟೆಸ್ಟ್ ಪಂದ್ಯಕ್ಕಾಗಿ ಭಾರತ ಮತ್ತು ಬಾಂಗ್ಲಾದೇಶ ತಂಡವು ಸೋಮವಾರ ಇಂದೋರ್ ತಲುಪಿದೆ. ವಿರಾಟ್ ಕೊಹ್ಲಿ ಮಂಗಳವಾರ ಬಿಚೋಲಿಯ ಶ್ರೀಜಿ ವ್ಯಾಲಿ ಕ್ಯಾಂಪಸ್ ತಲುಪಿದ್ದಾರೆ. ಇಲ್ಲಿ ಕೊಹ್ಲಿ ಜಾಹೀರಾತನ್ನು ಚಿತ್ರೀಕರಿಸಿ, ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಈ ವೇಳೆ ವಿರಾಟ್ ನೋಡಲು ಸಾಕಷ್ಟು ಜನರು ಸೇರಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    https://www.instagram.com/p/B4wmTo1p435/?utm_source=ig_embed

    ಮಧ್ಯಪ್ರದೇಶದ ಹೋಳ್ಕರ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ತಂಡವು ಮಂಗಳವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ ಅಭ್ಯಾಸ ನಡೆಸಿದೆ. ಬಳಿಕ ಭಾರತ ತಂಡವು ಮಧ್ಯಾಹ್ನ 2 ಗಂಟೆಗೆ ಕ್ರೀಡಾಂಗಣವನ್ನು ತಲುಪಿ, ಸಂಜೆ 5 ರವರೆಗೆ ಅಭ್ಯಾಸ ನಡೆಸಿದೆ.

    ಏಕದಿನ, ಟಿ-20 ಪಂದ್ಯಗಳಂತೆ ಟೆಸ್ಟ್ ವೀಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳು ಹೆಚ್ಚಾಗಿ ಆಸಕ್ತಿ ತೋರುವುದಿಲ್ಲ. ಟೆಸ್ಟ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಇರುತ್ತಾರೆ. ಆದರೆ ನವೆಂಬರ್ 14ರಂದು ಹೋಳ್ಕರ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಪಂದ್ಯ ವೀಕ್ಷಿಸಲು ಟಿಕೆಟ್ ಖರೀದಿಗೆ ಜನ ಹೆಚ್ಚು ಆಸಕ್ತಿ ತೋರಿದ್ದಾರೆ. ಹೀಗಾಗಿ ಪ್ರತಿದಿನವೂ ಟಿಕೆಟ್ ತೆಗೆದುಕೊಳ್ಳುವವರ ಸಾಲು ಕಾಣಿಸುತ್ತಿದೆ. ಟಿಕೆಟ್ ಮಾರಾಟವು ಇಂದು ಮಧ್ಯಾಹ್ನ 12 ರಿಂದ ಪ್ರಾರಂಭವಾಗಿದೆ. ಒಬ್ಬ ವ್ಯಕ್ತಿಯು ಯಾವುದೇ ಎರಡು ದಿನಗಳವರೆಗೆ ಏಕಕಾಲದಲ್ಲಿ ಟಿಕೆಟ್ ಖರೀದಿಸಬಹುದು.

    ಬಿಸಿಸಿಐ ಅಧಿಕಾರಿಗಳು ಮಂಗಳವಾರ ಸಂಜೆ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದಾರೆ. ಈ ಸಮಯದಲ್ಲಿ ಅವರು ಡ್ರೆಸ್ಸಿಂಗ್ ರೂಮ್, ವಿಐಪಿ ಬಾಕ್ಸ್ ಮತ್ತು ಪೆವಿಲಿಯನ್ ಸ್ಟ್ಯಾಂಡ್ ಅನ್ನು ಪರಿಶೀಲಿಸಿದರು. ಪಂದ್ಯದ ಸಮಯದಲ್ಲಿ, ಆಟಗಾರರ ಸುರಕ್ಷತೆಗೆ ಯಾವುದೇ ಕೊರತೆಯಿಲ್ಲ ಎಂದು ಖಚಿತಪಡಿಸಿಕೊಳ್ಳಲು 1,500 ಸೈನಿಕರನ್ನು ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ನಿಯೋಜಿಸಲಾಗುತ್ತದೆ ಎಂದು ವರದಿಯಾಗಿದೆ.

  • ಚಿಣ್ಣರ ಜೊತೆಗೆ ಗಲ್ಲಿ ಕ್ರಿಕೆಟ್ ಆಡಿದ ಆರ್.ಆಶೋಕ್ – ವಿಡಿಯೋ ನೋಡಿ

    ಚಿಣ್ಣರ ಜೊತೆಗೆ ಗಲ್ಲಿ ಕ್ರಿಕೆಟ್ ಆಡಿದ ಆರ್.ಆಶೋಕ್ – ವಿಡಿಯೋ ನೋಡಿ

    ಬೆಂಗಳೂರು: ರಾಜಕೀಯದ ಬಿಡುವು ಮಾಡಿಕೊಂಡಿರುವ ಬಿಜೆಪಿ ಮುಖಂಡ, ಮಾಜಿ ಡಿಸಿಎಂ ಆರ್.ಅಶೋಕ್ ಅವರು ಚಿಣ್ಣರ ಜೊತೆಗೆ ಗಲ್ಲಿ ಕ್ರಿಕೆಟ್ ಆಡಿದ್ದಾರೆ.

    ಬೆಂಗಳೂರಿನ ಪದ್ಮನಾಭ ನಗರದಲ್ಲಿ ಮಕ್ಕಳ ಜೊತೆಗೆ ಆರ್.ಅಶೋಕ್ ಅವರು ಕ್ರಿಕೆಟ್ ಆಡಿದ್ದಾರೆ. ಶಾಲೆಗೆ ಇಂದು ರಜೆ ಇರುವುದರಿಂದ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಮಕ್ಕಳ ಜೊತೆಗೆ ಸೇರಿದ ಆರ್.ಅಶೋಕ್ ಅವರು ಬ್ಯಾಟ್ ಹಿಡಿದು ಮಕ್ಕಳ ಎಸೆತಗಳನ್ನು ಎದುರಿಸಿದರು.

    ಬ್ಯಾಟಿಂಗ್ ಅಷ್ಟೇ ಅಲ್ಲದೆ ಬೌಲಿಂಗ್ ಕೂಡ ಮಾಡಿ ಮಕ್ಕಳ ಜೊತೆಗೆ ಕೆಲ ಸಮಯ ಕಳೆದಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಕೆಲವರು ಆರ್.ಅಶೋಕ್ ಹಾಗೂ ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಮತ್ತೆ ಕೆಲವರು ತಮ್ಮ ಮೊಬೈಲ್‍ನಲ್ಲಿ ಶಾಸಕರು ಕ್ರಿಕೆಟ್ ಆಗುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.