Tag: gulam nabi azad

  • ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದ ಗುಲಾಂ ನಬಿ ಆಜಾದ್!

    ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದ ಗುಲಾಂ ನಬಿ ಆಜಾದ್!

    ನವದೆಹಲಿ: ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (DPAP) ಅಧ್ಯಕ್ಷ ಗುಲಾಂ ನಬಿ ಆಜಾದ್ ಅವರು ಮುಂಬರುವ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ (Anantnag-Rajouri) ಲೋಕಸಭಾ ಕ್ಷೇತ್ರದಿಂದ ಗುಲಾಂ ನಬಿ ಆಜಾದ್ (Ghulam Nabi Azad) ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಎಂದು ಪಕ್ಷ ತಿಳಿಸಿದೆ. ಆಜಾದ್ ಅವರು ಹಿಂದೆ ಸರಿದ ಬಳಿಕ ಇದೀಗ ಮೊಹಮ್ಮದ್ ಸಲೀಂ ಪರ್ರೆ ಅನಂತನಾಗ್-ರಾಜೌರಿ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಬಹುದು ಎಂದು ಮೂಲಗಳು ತಿಳಿಸಿವೆ.

    ಈ ಸಂಬಂಧ ಕಾಶ್ಮೀರದ ಡಿಪಿಎಪಿಯ ಪ್ರಾಂತೀಯ ಅಧ್ಯಕ್ಷ ಮೊಹಮ್ಮದ್ ಅಮೀನ್ ಭಟ್ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬೆಳವಣಿಗೆಯನ್ನು ಆಜಾದ್ ಖಚಿತಪಡಿಸಿದ್ದಾರೆ. ಅವರು ಲೋಕಸಭಾ ಚುನಾವಣೆಗೆ (Loksabha Elections 2024) ಸ್ಪರ್ಧಿಸುವುದಿಲ್ಲ. ಹೀಗಾಗಿ ಅನಂತನಾಗ್-ರಜೌರಿ ಕ್ಷೇತ್ರಕ್ಕೆ ವಕೀಲ ಸಲೀಂ ಪರ್ರೆ ಡಿಪಿಎಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿದರು.

    ಆಜಾದ್ ಯೂಟರ್ನ್: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ಮರುಸ್ಥಾಪಿಸಲು ಮತ್ತು ಅಲ್ಲಿನ ನಿವಾಸಿಗಳ ಭೂಮಿ ಮತ್ತು ಉದ್ಯೋಗ ಹಕ್ಕುಗಳ ರಕ್ಷಣೆಗಾಗಿ ತನ್ನ ಹೋರಾಟವನ್ನು ಮುಂದುವರಿಸಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಈ ಹೇಳಿಕೆ ಕೊಟ್ಟ ಕೆಲವೇ ದಿನಗಳಲ್ಲಿ ಇದೀಗ ಆಜಾದ್‌ ಯೂಟರ್ನ್‌ ಹೊಡೆದಿದ್ದಾರೆ.

    ಆಜಾದ್ ಅವರು 2022 ರಲ್ಲಿ ಕಾಂಗ್ರೆಸ್ ತೊರೆದರು. ಈ ಮೂಲಕ ಪಕ್ಷದೊಂದಿಗಿನ ಐದು ದಶಕಗಳ ಸಂಬಂಧವನ್ನು ಕೊನೆಗೊಳಿಸಿದರು. ಬಳಿಕ ಡಿಪಿಎಪಿಯನ್ನು ಸೇರಿಕೊಂಡರು. ಇದನ್ನೂ ಓದಿ: ಫಸ್ಟ್‌ ಟೈಂ ಅತಿ ಕಡಿಮೆ ಸಂಖ್ಯೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ

  • ಆಜಾದ್ ಬೆಂಬಲಿಸಿ 51 ನಾಯಕರ ರಾಜೀನಾಮೆ – ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ಆಘಾತ

    ಆಜಾದ್ ಬೆಂಬಲಿಸಿ 51 ನಾಯಕರ ರಾಜೀನಾಮೆ – ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ಆಘಾತ

    ನವದೆಹಲಿ: ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಹೈಕಮಾಂಡ್ ನಾಯಕರಿಗೆ ಶಾಕ್ ಮೂಡಿಸಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್, ಈಗ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಬೆಚ್ಚಿಬೀಳುವಂತ ಆಘಾತ ನೀಡಿದ್ದಾರೆ.

    ಗುಲಾಂ ನಬಿ ಅಜಾದ್ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ಅವರ ಬೆಂಬಲಿಗರು ರಾಜೀನಾಮೆ ನೀಡಿದ್ದು, ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ 51 ಮಂದಿ ಸಾಮೂಹಿಕ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈವರೆಗೂ 64 ಮಂದಿ ರಾಜೀನಾಮೆ ನೀಡಿದ್ದು, ಗುಲಾಂ ನಬಿ ಅಜಾದ್ ಅವರ ಹೊಸ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ. ಇದನ್ನೂ ಓದಿ: ಲಡಾಕ್‍ನ ಸಿಂಧೂ ನದಿ ಸಂಗಮ ಸ್ಥಳಕ್ಕೆ ಶೋಭಾ ಕರಂದ್ಲಾಜೆ ಭೇಟಿ

    ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್, ಮಾಜಿ ಸಚಿವರಾದ ಅಬ್ದುಲ್ ಮಜಿದ್ ವಾನಿ, ಮನೋಹರ್ ಲಾಲ್ ಶರ್ಮಾ, ಘರು ರಾಮ್ ಮತ್ತು ಮಾಜಿ ಶಾಸಕ ಬಲ್ವಾನ್ ಸಿಂಗ್ ಸೇರಿದಂತೆ ಹಲವರು ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ತಮ್ಮ ಎಲ್ಲ ಜವಾಬ್ದಾರಿಗಳಿಗೆ ರಾಜೀನಾಮೆ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ‌.

    ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಕಳೆದ ಶುಕ್ರವಾರ ಕಾಂಗ್ರೆಸ್ ಜೊತೆಗಿನ ಐದು ದಶಕಗಳ ಒಡನಾಟವನ್ನು ಕೊನೆಗೊಳಿಸಿದರು. ಅಸಮರ್ಥ ನಾಯಕರು ಪಕ್ಷವನ್ನು ಸಮಗ್ರವಾಗಿ ನಾಶಪಡಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರದಿಂದ ರಾಷ್ಟ್ರೀಯ ಮಟ್ಟದ ಪಕ್ಷವನ್ನು ಪ್ರಾರಂಭಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಗೌತಮ್ ಅದಾನಿ ಈಗ ವಿಶ್ವದ 3ನೇ ಶ್ರೀಮಂತ – ಏಷ್ಯಾಗೆ ಇದು ಫಸ್ಟ್ ಟೈಂ

    ಮಾಜಿ ಸಚಿವರು ಮತ್ತು ಶಾಸಕರು ಸೇರಿದಂತೆ ಹನ್ನೆರಡು ಪ್ರಮುಖ ಕಾಂಗ್ರೆಸ್ ನಾಯಕರು, ನೂರಾರು ಪಂಚಾಯತ್ ರಾಜ್ ಸಂಸ್ಥೆ (ಪಿಆರ್‌ಐ) ಸದಸ್ಯರು, ಪುರಸಭೆ ಕಾರ್ಪೊರೇಟರ್‌ಗಳು, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ನಾಯಕರು ಈಗಾಗಲೇ ಆಜಾದ್‌ ಪಕ್ಷ ಸೇರಲು ಕಾಂಗ್ರೆಸ್ ತೊರೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಧಾನಿ ಮೋದಿ ಒರಟು ಮನುಷ್ಯ ಅಂದುಕೊಂಡಿದ್ದೆ – ಆಜಾದ್

    ಪ್ರಧಾನಿ ಮೋದಿ ಒರಟು ಮನುಷ್ಯ ಅಂದುಕೊಂಡಿದ್ದೆ – ಆಜಾದ್

    ನವದೆಹಲಿ: ಕಾಂಗ್ರೆಸ್ ಮಾಜಿ ನಾಯಕ ಹಾಗೂ ಮಾಜಿ ಸಿಎಂ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

    ರಾಷ್ಟ್ರ ರಾಜಧಾನಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಆಜಾದ್, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಜನರು ಸಾವನ್ನಪ್ಪಿದ ಬಸ್ ದುರಂತವನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಗುಲಾಂ ನಬಿ ಆಜಾದ್‌ ಕಾರ್ಯ ನೆನೆದು ಭಾವುಕರಾದ ಪ್ರಧಾನಿ ಮೋದಿ

    ಜಮ್ಮು ಮತ್ತು ಕಾಶ್ಮೀರದಲ್ಲಿ ಗುಜರಾತ್ ಪ್ರವಾಸಿ ಬಸ್‌ನೊಳಗೆ ಗ್ರೆನೇಡ್ ಸ್ಫೋಟಗೊಂಡಿದ್ದರಿಂದ ಸ್ಥಳದಲ್ಲೇ ನೂರಾರು ಜನ ಸಾವನ್ನಪ್ಪಿದ್ದರು. ಇದು ನಾನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾಗ ಸಂಭವಿಸಿದ ಘಟನೆ. ಪ್ರಧಾನಿ ಮೋದಿ ಆಗ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು, ಅಂದು ನನಗೆ ಕರೆ ಮಾಡಿದ್ದರು, ಘಟನೆಯ ಬಗ್ಗೆ ವಿವರ ಪಡೆಯುವ ತುಡಿತ ಅವರಿಗಿತ್ತು. ನಾನು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯದಲ್ಲಿ ನಿರತನಾಗಿದ್ದ ಕಾರಣ ಈ ಕ್ಷಣದಲ್ಲಿ ಮಾತನಾಡಲು ಸಾಧ್ಯವಿಲ್ಲವೆಂದು ತಿಳಿಸುವಂತೆ ನನ್ನ ಸಿಬ್ಬಂದಿಗೆ ಹೇಳಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

    ಅಲ್ಲದೇ ಕಳೆದ ವರ್ಷ ರಾಜ್ಯ ಸಭೆಗೆ ವಿದಾಯ ಹೇಳುವ ಸಂದರ್ಭದಲ್ಲಿ ನನ್ನ ನಿಜವಾದ ಸ್ನೇಹಿತ ಗುಲಾಂ ನಬಿ ಆಜಾದ್ ಅವರಿಗೆ ಎಂದು ಭಾವನಾತ್ಮಕವಾಗಿ ವಿದಾಯ ಹೇಳೀದ್ದನ್ನೂ ಸ್ಮರಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಒಳ್ಳೆಯ ವ್ಯಕ್ತಿ ಆದರೆ ರಾಜಕೀಯಕ್ಕೆ ಯೋಗ್ಯನಲ್ಲ: ಆಜಾದ್

    `ನಾನು ಪ್ರಧಾನಿ ಮೋದಿಯನ್ನು ಒರಟು ಮನುಷ್ಯ ಎಂದು ಭಾವಿಸಿದ್ದೆ, ಆದರೆ ಅವರು ಮಾನವೀಯತೆ ತೋರಿಸಿದರು’ ಎಂದು ಆಜಾದ್ ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇಶ ಕಷ್ಟ ಕಾಲದಲ್ಲಿರೋವಾಗ ಗುಲಾಂ ನಬಿ ಹೀಗೆ ಮಾಡಬಾರದಿತ್ತು: ಡಿಕೆಶಿ ಬೇಸರ

    ದೇಶ ಕಷ್ಟ ಕಾಲದಲ್ಲಿರೋವಾಗ ಗುಲಾಂ ನಬಿ ಹೀಗೆ ಮಾಡಬಾರದಿತ್ತು: ಡಿಕೆಶಿ ಬೇಸರ

    ಬೆಂಗಳೂರು: ದೇಶ ಕಷ್ಟದ ಕಾಲದಲ್ಲಿ ಇರುವಾಗ ಹೀಗೆ ಮಾಡಬಾರದಿತ್ತು ಎಂದು ಗುಲಾಂ ನಬಿ ಆಜಾದ್ ರಾಜೀನಾಮೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಲಾಂ ನಬಿ ಆಜಾದ್ ರಾಜೀನಾಮೆ ದುಃಖದ ಸುದ್ದಿ. ನಾವೆಲ್ಲ ದೇಶಕ್ಕಾಗಿ ಹೋರಾಟ ಮಾಡುವಾಗ 600 ಜನ ನಾಯಕರು ಉದಯಪುರದಲ್ಲಿ ಕುಳಿತು ಚರ್ಚೆ ಮಾಡಿದ್ದೆವು, ತೀರ್ಮಾನ ಮಾಡಿದ್ದೆವು. ಆಗ ಗುಲಾಂ ನಬಿ ಆಜಾದ್ ಕೂಡ ಇದೆಲ್ಲದರಲ್ಲಿ ಪಾಲುದಾರರಾಗಿದ್ದರು ಎಂದು ನೆನಪು ಮೆಲುಕು ಹಾಕಿಕೊಂಡರು.

    ಐದು ಪೇಜ್ ಪತ್ರವನ್ನೂ ಕೂಡ ಬರೆದಿದ್ದಾರೆ. 50 ವರ್ಷಗಳ ಕಾಲ ಎಲ್ಲ ನಿರ್ಧಾರ ತೆಗೆದುಕೊಳ್ಳುವ ಟೀಂನಲ್ಲಿ ಅವರೇ ಕೆಲಸ ಮಾಡಿದ್ದರು. ಇವತ್ತು ಇಂಥ ತೀರ್ಮಾನ ಮಾಡಿದ್ದಕ್ಕೆ ಏನು ಹೆಸರಿಡಬೇಕೋ ನೀವೇ ಹೇಳಿ. ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ – ಸರ್ಕಾರದ ವಿವೇಚನೆಗೆ ಬಿಟ್ಟ ಹೈಕೋರ್ಟ್‌

    ಗುಲಾಂ ನಬಿ ಆಜಾದ್‍ಗೆ ಅವರೇ ಎಲ್ಲವನ್ನೂ ಪಾಲನೆ ಮಾಡುವುದಕ್ಕೆ ಅವಕಾಶ ಇತ್ತು. ಕಾಂಗ್ರೆಸ್ ಪಕ್ಷ 40 ವರ್ಷ ಅವರಿಗೆ ಅಧಿಕಾರ ಕೊಟ್ಟಿದೆ. ಕಾಂಗ್ರೆಸ್ ಪಕ್ಷವೇ ಅವರಿಗೆ ಎಲ್ಲ ಕೊಟ್ಟಿದೆ. ಗುಲಾಂ ನಬಿ ಆಜಾದ್ ಅಂತ ಅವರಿಗೆ ಹೆಸರು ಬರುವುದಕ್ಕೆ ಕಾಂಗ್ರೆಸ್ ಪಾರ್ಟಿ, ನೆಹರೂ ಫ್ಯಾಮಿಲಿ, ಗಾಂಧಿ ಫ್ಯಾಮಿಲಿ ಕಾರಣ ಎಂದರು.

    ಇಷ್ಟು ದೊಡ್ಡ ಅಧಿಕಾರ ಅನುಭವಿಸಿ ಹೆಸರು ಪಡೆದುಕೊಂಡರು. ಈಗ ರಾಹುಲ್ ಗಾಂಧಿ ಸರಿ ಇಲ್ಲ ಅನ್ನುವವರು ಯಾಕೆ ರಾಹುಲ್ ರಾಜೀನಾಮೆ ಕೊಡುವಾಗ ಪ್ರತಿಭಟನೆ ಮಾಡಲಿಲ್ಲ?. ಸೋನಿಯಾ ಗಾಂಧಿಯವರು ಕೊಡುವುದಕ್ಕೆ ಇನ್ನೇನು ಉಳಿದಿತ್ತು. ನಿಮಗೆ ಗಾಂಧಿ ಫ್ಯಾಮಿಲಿ ಕೊಡುವುದಕ್ಕೆ?. ಹೊಸ ಜನರೇಷನ್ ಆಲೋಚನೆ ಏನಿದೆ ಗುಲಾಂಗೆ ಗೊತ್ತಿತ್ತಾ ಎಂದು ಪ್ರಶ್ನಿಸಿದರು.

    ಯುವಕರು ಹೊಸ ಆಲೋಚನೆ ಮಾಡ್ತಿದ್ದಾರೆ, ಹೊಸ ಕಾಲಕ್ಕೆ ಹೋಗಿದೆ. ಭಾರತವನ್ನು ಉಳಿಸಬೇಕಾದವರು, ಭಾರತ್ ಜೋಡೋ ಯಾತ್ರೆ ಮಾಡಬೇಕು ಅಂತ ನೀವೇ ಹೇಳಿದವರು. ಇದು ದುರದೃಷ್ಟಕರ, ಹಿರಿತನಕ್ಕೆ ಮಾದರಿ ಆಗಿರಬೇಕಾಗಿತ್ತು ಗುಲಾಂ. ಕಾಂಗ್ರೆಸ್ ನ ಮುಳುಗಿಸುವುದಕ್ಕೆ ಸಾಧ್ಯ ಇಲ್ಲ, ಲಕ್ಷಾಂತರ ಜನರನ್ನ ಕಾಂಗ್ರೆಸ್ ತಯಾರು ಮಾಡಿದೆ. ಕಾಂಗ್ರೆಸ್ ಇರಲಿಲ್ಲ ಅಂದಿದ್ದರೆ ಇಡೀ ದೇಶ ಇಬ್ಭಾಗ ಆಗ್ತಿತ್ತು ಎಂದು ಡಿಕೆಶಿ ಹೇಳಿದರು.

    Live Tv
    [brid partner=56869869 player=32851 video=960834 autoplay=true]