Tag: Gulab Jamun

  • ಚುನಾವಣಾ ಪ್ರಚಾರದ ವೇಳೆ ಬೇಕರಿಯಲ್ಲಿ ಗುಲಾಬ್ ಜಾಮೂನು ಖರೀದಿಸಿದ ರಾಹುಲ್ ಗಾಂಧಿ

    ಚುನಾವಣಾ ಪ್ರಚಾರದ ವೇಳೆ ಬೇಕರಿಯಲ್ಲಿ ಗುಲಾಬ್ ಜಾಮೂನು ಖರೀದಿಸಿದ ರಾಹುಲ್ ಗಾಂಧಿ

    ಚೆನ್ನೈ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಯವರು (Rahul Gandhi) ತಮಿಳುನಾಡಿನ (Tamil Nadu) ಸಿಂಗಾನಲ್ಲೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಅನಿರೀಕ್ಷತವಾಗಿ ಬೇಕರಿಯೊಂದಕ್ಕೆ ಭೇಟಿ ನೀಡಿ ಅವರ ಇಷ್ಟದ ಗುಲಾಬ್ ಜಾಮೂನನ್ನು (Tamil Nadu) ಖರೀದಿಸಿದ್ದಾರೆ.

    ರಾಹುಲ್ ಗಾಂಧಿಯವರು ಕೊಯಮತ್ತೂರಿನ ಸಭೆಗೆ ತೆರಳುತ್ತಿದ್ದರು. ಈ ವೇಳೆ ಬೇಕರಿಯೊಂದರ ಬಳಿ ಕಾರು ನಿಲ್ಲಿಸಿ ಜಾಮೂನನ್ನು ಖರೀದಿಸಿದ್ದಾರೆ. ಸುಮಾರು ಒಂದು ಕಿಲೋ ಸ್ವೀಟ್‍ನ್ನು ಅವರು ಖರೀದಿಸಿದರು. ಮೊದಲು ಸ್ಯಾಂಪಲ್ ನೋಡಿ ಸಿಹಿತಿಂಡಿಯನ್ನು ಖರೀದಿಸಿದರು. ಅವರು ನನ್ನ ಅಂಗಡಿಗೆ ಬಂದಿದ್ದರಿಂದ ಸಂತೋಷವಾಯಿತು. ನಾವು ರಾಹುಲ್ ಅವರಿಗೆ ಹಣ ಪಾವತಿಸಬಾರದೆಂದು ಕೇಳಿಕೊಂಡೆವು. ಆದರೂ ಅವರು ಹಣ ಪಾವತಿಸಿದ್ದಾರೆ ಎಂದು ಅಂಗಡಿ ಮಾಲೀಕ ಬಾಬು ಅವರು ಹೇಳಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಮುನಿಸು ಮರೆತು ಶ್ರೀನಿವಾಸ್ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ

    ಇದಕ್ಕೂ ಮುನ್ನ ಸಭೆಯೊಂದರಲ್ಲಿ ರಾಹುಲ್ ಗಾಂಧಿಯವರು ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರದ ಚುನಾವಣಾ ಬಾಂಡ್ ಯೋಜನೆ ಜಗತ್ತಿನಲ್ಲಿ ಯಾರೂ ಮಾಡಿರದ ದೊಡ್ಡ ಭ್ರಷ್ಟಾಚಾರವಾಗಿದೆ. ರಾಜಕೀಯ ವ್ಯವಸ್ಥೆಯನ್ನು ಶುದ್ಧೀಕರಿಸಲು ಬಿಜೆಪಿ ವಾಷಿಂಗ್ ಮೆಷಿನ್‍ನ್ನು ನಿರ್ವಹಿಸುತ್ತಿದೆ. ಯಾರು ಪಕ್ಷಕ್ಕೆ ದೇಣಿಗೆ ನೀಡಿದರೂ ಅಥವಾ ಹಣ ನೀಡುತ್ತಾರೆ. ಅವರು ಎಷ್ಟು ಹಣ ನೀಡಿದರೂ ಅವರ ಹೆಸರು ಯಾರಿಗೂ ತಿಳಿಯುವುದಿಲ್ಲ ಎಂದು ಅವರು ಅರೋಪಿಸಿದರು.

    ಈ ಯೋಜನೆಯನ್ನು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಹಣ ನೀಡಿದವರ ಹೆಸರನ್ನು ಬಿಡುಗಡೆ ಮಾಡಲು ಒತ್ತಾಯಿಸಿದೆ. ಸಿಬಿಐ, ಇಡಿ ಅಥವಾ ಆದಾಯ ತೆರಿಗೆ ಇಲಾಖೆಯಿಂದ ವಿಚಾರಣೆ ಎದುರಿಸುತ್ತಿರುವ ಕಂಪನಿಗಳು ಬಿಜೆಪಿಗೆ ಗಮನಾರ್ಹ ಮೊತ್ತವನ್ನು ದೇಣಿಗೆ ನೀಡಿವೆ. ದೇಣಿಗೆ ನೀಡಿದ ಉದ್ಯಮಿಗಳಿಗೆ ಬಿಜೆಪಿ ಗುತ್ತಿಗೆ ನೀಡಿದೆ. ಈ ಮೂಲಕ ಬಿಜೆಪಿ ಸುಲಿಗೆಗೆ ಇಳಿದಿದೆ ಎಂದು ಅವರು ಅರೋಪಿಸಿದ್ದಾರೆ.

    ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಸಾರ್ವತ್ರಿಕ ಚುನಾವಣೆಯ 1 ನೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಮತಗಳ ಎಣಿಕೆಯನ್ನು ನಿಗದಿಪಡಿಸಲಾಗಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್-ಡಿಎಂಕೆ ನೇತೃತ್ವದ ಮೈತ್ರಿ ಗೆದ್ದಿದೆ. ರಾಜ್ಯದ 39 ಸ್ಥಾನಗಳಲ್ಲಿ 38 ಕಾಂಗ್ರೆಸ್-ಡಿಎಂಕೆ ಮೈತ್ರಿ, ಎಐಎಡಿಎಂಕೆ ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಇದನ್ನೂ ಓದಿ: ನಾಳೆ ರಾಜ್ಯಕ್ಕೆ ಮೋದಿ ಆಗಮನ – ಪ್ರಧಾನಿ ಮುಂದೆ ಹಲವು ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್‌ ಅಭ್ಯರ್ಥಿ

  • ಮಕ್ಕಳಿಗೆ ಜಾಮೂನಿನಲ್ಲಿ ವಿಷ ಹಾಕಿದ ತಂದೆ – ಬಳಿಕ ತಾನೂ ಆತ್ಮಹತ್ಯೆಗೆ ಯತ್ನ

    ಮಕ್ಕಳಿಗೆ ಜಾಮೂನಿನಲ್ಲಿ ವಿಷ ಹಾಕಿದ ತಂದೆ – ಬಳಿಕ ತಾನೂ ಆತ್ಮಹತ್ಯೆಗೆ ಯತ್ನ

    ರಾಮನಗರ: ಕೌಟುಂಬಿಕ ಕಲಹ (Family Dispute) ಹಿನ್ನೆಲೆ ಮಕ್ಕಳಿಬ್ಬರಿಗೆ ವಿಷವುಣಿಸಿದ (Poison) ತಂದೆ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರ (Ramanagara) ತಾಲೂಕಿನ ಕ್ಯಾಸಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಕುಮಾರ್ (38) ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ಜಾಮೂನಿನಲ್ಲಿ (Gulab Jamun) ವಿಷ ಬೆರಸಿ ತಿನ್ನಿಸಿ ತಾನೂ ವಿಷ ಸೇವಿಸಿದ್ದಾರೆ. ಸದ್ಯ ಮೂವರ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಲಸಿಕೆ ಹಾಕ್ತಿದ್ದಾಗಲೇ ಕುಸಿದ ಅಂಗನವಾಡಿಯ ಮೇಲ್ಛಾವಣಿ- ಮಗುವಿನ ತಲೆಗೆ ಗಾಯ

    ಕೌಟುಂಬಿಕ ಕಲಹದಿಂದ ಕೆಲ ತಿಂಗಳ ಹಿಂದೆ ಪತ್ನಿ ತವರು ಮನೆ ಸೇರಿದ್ದರು. ಎರಡು ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಕುಮಾರ್ ಹೆಂಡತಿ ವಾಪಸ್ ಬಾರದಿದ್ದಕ್ಕೆ ಮನನೊಂದು ಮಕ್ಕಳಿಗೂ ವಿಷವುಣಿಸಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಟಿಕ್‌ಟಾಕ್ ಸುಂದರಿಗೆ ಕಂಟಕವಾಯ್ತು ಮೊಬೈಲ್ ಗೀಳು – ಪ್ರೀತಿಸಿ ಮದ್ವೆಯಾಗಿದ್ದ ಮಡದಿಯನ್ನೇ ಕೊಂದ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫ್ರೀ ಟೈಂನಲ್ಲಿ ಮನೆಯಲ್ಲೇ ಮಾಡಿ ಗುಲಾಬ್ ಜಾಮೂನ್

    ಫ್ರೀ ಟೈಂನಲ್ಲಿ ಮನೆಯಲ್ಲೇ ಮಾಡಿ ಗುಲಾಬ್ ಜಾಮೂನ್

    ತ್ಯಂತ ಮೃದುವಾದ, ಬಾಯಿಗಿಟ್ಟರೆ ಕರಗುವಂತಹ ರುಚಿಕರವಾದ ಗುಲಾಬ್ ಜಾಮೂನ್ ಯಾರಿಗೆ ಇಷ್ಟ ಇಲ್ಲ ಹೇಳಿ? ಭಾರತದ ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಗುಲಾಬ್ ಜಾಮೂನ್ ಕೂಡಾ ಒಂದು. ಆದರೂ ಜನರು ಮಾರುಕಟ್ಟೆಯಲ್ಲಿ ದೊರಕುವ ರೆಡಿಮೆಡ್ ಇನ್ಸ್ಟೆಂಟ್ ಮಿಕ್ಸರ್‌ಗಳಿಂದಲೇ ಜಾಮೂನ್ ತಯಾರಿಸುವುದು ಎಷ್ಟು ಬೇಸರ ಅಲ್ವಾ? ಆದರೂ ಇದನ್ನು ಮನೆಯಲ್ಲಿಯೇ ಯಾವುದೇ ರೆಡಿಮೆಡ್ ಪೌಡರ್ ಬಳಸದೇ ಸುಲಭವಾಗಿ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಫ್ರೀ ಟೈಮ್‌ನಲ್ಲಿ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಗುಲಾಬ್ ಜಾಮೂನ್ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    * ಮೈದಾ – 1/2 ಕಪ್
    * ತುರಿದ ಖೋವಾ- 1 ಕಪ್ (200-225 ಗ್ರಾಂ)
    * ಅಡುಗೆ ಸೋಡ- 1/8 ಟೀಸ್ಪೂನ್
    * ತುಪ್ಪ/ಎಣ್ಣೆ- ಡೀಪ್ ಫ್ರೈಗೆ ಬೇಕಾಗುವಷ್ಟು
    * ಹಸಿರು ಏಲಕ್ಕಿ – 3-4
    * ಕೇಸರಿ ಎಳೆಗಳು – 8-10
    * ಸಕ್ಕರೆ – ಒಂದೂವರೆ ಕಪ್
    * ನೀರು – ಎರಡೂವರೆ ಕಪ್

    ಮಾಡುವ ವಿಧಾನ:
    * ಮೊದಲು ಸಕ್ಕರೆ ಪಾಕ ತಯಾರಿಸಲು ಆಳವಾದ ಪಾತ್ರೆ ತೆಗೆದುಕೊಂಡು ಅದಕ್ಕೆ ನೀರಿನೊಂದಿಗೆ ಸಕ್ಕರೆ, ಏಲಕ್ಕಿ ಹಾಗೂ ಕೇಸರಿ ಎಳೆಗಳನ್ನು ಹಾಕಿ ಕುದಿಸಿ. ಬಳಿಕ 10-12 ನಿಮಿಷಗಳವರೆಗೆ ಪಾಕ ಜಿಗುಟಾಗುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ, ಪಕ್ಕಕ್ಕಿಡಿ.
    * ಜಾಮೂನ್ ಮಿಶ್ರಣ ತಯಾರಿಸಲು ತುರಿದ ಖೋವಾಗೆ ಅಡುಗೆ ಸೋಡಾ, ಜರಡಿ ಹಿಡಿದ ಮೈದಾ ಸೇರಿಸಿ, ಹಿಟ್ಟಿನಂತೆ ನುಣ್ಣಗೆ ಮಿಶ್ರಣ ಮಾಡಿ. ಅಂಟು ಬರಲು ಸ್ವಲ್ಪ ಹಾಲು ಬಳಸಬಹುದು.
    * ಈ ಹಿಟ್ಟನ್ನು 20 ನಿಮಿಷಗಳ ಕಾಲ ಪಕ್ಕಕ್ಕೆ ಇಟ್ಟು, ಬಳಿಕ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಕೈಗೆ ಸ್ವಲ್ಪ ತುಪ್ಪ ಸವರಿ ಉಂಡೆ ಕಟ್ಟುವುದರಿಂದ ಉಂಡೆ ನಯವಾಗಿ ಮೂಡಿ ಬರುತ್ತದೆ. ಉಂಡೆಯಲ್ಲಿ ಬಿರುಕು ಬೀಳದಂತೆ ಎಚ್ಚರವಹಿಸಿ.
    * ಮಧ್ಯಮ ಉರಿಯಲ್ಲಿ ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಬಿಸಿ ಮಾಡಿ. ಅದರಲ್ಲಿ ಉಂಡೆಗಳನ್ನು ಹಾಕಿ ಗಾಢ ಕಂದು ಬಣ್ಣಕ್ಕೆ ತಿರುಗುವವರೆಗೆ ಕಾಯಿಸಿ.
    * ಕಾದ ಉಂಡೆಗಳನ್ನು ಎಣ್ಣೆಯಿಂದ ತೆಗೆದು 5 ನಿಮಿಷ ಆರಲು ಬಿಡಿ.
    * ಬಿಸಿ ಸ್ವಲ್ಪ ಆರಿದ ಬಳಿಕ ಸಕ್ಕರೆ ಪಾಕಕ್ಕೆ ಅವುಗಳನ್ನು ಹಾಕಿ, 2 ಗಂಟೆ ಹೀರಿಕೊಳ್ಳಲು ಬಿಡಿ.

     

    ಬೇಕೆಂದಲ್ಲಿ ಬಾದಾಮಿ ಪಿಸ್ತಾಗಳನ್ನು ಇಟ್ಟು ಅಲಂಕಾರ ಮಾಡಿದರೆ ಮೃದುವಾದ ಗುಲಾಬ್ ಜಾಮೂನ್ ಸವಿಯಲು ಸಿದ್ಧವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಬಿಸಿ ಬಿಸಿ ಗುಲಾಬ್ ಜಾಮೂನ್ ಪಾತ್ರೆಗೆ ಬಿದ್ದು ಮಗು ಸಾವು

    ಬಿಸಿ ಬಿಸಿ ಗುಲಾಬ್ ಜಾಮೂನ್ ಪಾತ್ರೆಗೆ ಬಿದ್ದು ಮಗು ಸಾವು

    ಮುಂಬೈ: ಗುಲಾಬ್ ಜಾಮೂನ್ ತಯಾರಿಸಿಟ್ಟಿದ್ದ ಪಾತ್ರೆಗೆ ಮಗು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಎರಡು ವರ್ಷದ ರಾಜವೀರ್ ನಿತಿನ್ ಮೇಘವಾಲೆ ಗುಲಾಬ್ ಜಾಮೂನು ಪಾತ್ರೆಯಲ್ಲಿ ಬಿದ್ದು ಮೃತಪಟ್ಟ ಮಗುವಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಮನೆಯವರು ಮಹಾಪ್ರಸಾದವಾಗಿ ಗುಲಾಬ್ ಜಾಮೂನುಗಳನ್ನು ಸಿದ್ಧಪಡಿಸಿ, ದೊಡ್ಡದಾದ ಪಾತ್ರೆಯಲ್ಲಿ ಸಂಗ್ರಹಿಸಿದ್ದರು.

    ಇದರ ಅರಿವಿಲ್ಲದ ರಾಜವೀರ್ ಆಟವಾಡುತ್ತಾ ಹೋಗಿ ಬಿಸಿ ಜಾಮೂನು ಪಾತ್ರೆಯಲ್ಲಿ ಬಿದ್ದಿದ್ದಾನೆ. ತಕ್ಷಣಕ್ಕೆ ಮಗುವನ್ನು ಯಾರೂ ಗಮನಿಸಿರಲಿಲ್ಲ. ಮಗು ಕಿರುಚಾಡಿದ್ದನ್ನು ಕೇಳಿ, ಪೋಷಕರು ಮಗುವನ್ನು ಪಾತ್ರೆಯಿಂದ ಎತ್ತಿದ್ದಾರೆ. ಆದರೆ ಬಿಸಿ ಜಾಮೂನಿನಲ್ಲಿ ಬಿದ್ದಿದ್ದರಿಂದ ಮಗುವಿಗೆ ತೀವ್ರವಾದ ಸುಟ್ಟಗಾಯಗಳಾಗಿದ್ದವು. ಕೂಡಲೇ ಪೋಷಕರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾಜವೀರ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv