Tag: Gujurat

  • ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ ಸೇನೆ!

    ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ ಸೇನೆ!

    ನವದೆಹಲಿ: ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ನೆಲೆ ಮೇಲೆ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬೆನ್ನಲ್ಲೇ ಪಾಕಿಸ್ತಾನದ ಡ್ರೋನ್ ಅನ್ನು ಭಾರತ ಹೊಡೆದು ಉರುಳಿಸಿದೆ.

    ಗುಜರಾತಿನ ಕಚ್ ಗಡಿಯಲ್ಲಿ ಹಾರಾಡುತ್ತಿದ್ದ ಡ್ರೋನ್ ಅನ್ನು ಭಾರತ ಹೊಡೆದು ಉರುಳಿಸಿದೆ. ಬೆಳಗ್ಗೆ 6.30ರ ವೇಳೆ ಭಾರತ ಡ್ರೋನ್ ಹೊಡೆದು ಉರುಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಭಾರತದ ವಾಯುಸೇಬೆ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಗಡಿ ಭಾಗದಲ್ಲಿ ಬೀಡುಬಿಟ್ಟಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರ ನೆಲೆಯ ಮೇಲೆ ಬರೋಬ್ಬರಿ ಸಾವಿರ ಕೆಜಿಯ ಬಾಂಬ್ ಹಾಕಿದೆ.

    ಕಾಶ್ಮೀರದ ಬಾಲ್ಕೋಟ್ ನಲ್ಲಿ ನೆಲೆ ಕಂಡುಕೊಂಡಿದ್ದ ಉಗ್ರರ ಸಂಘಟನೆಯ ಕ್ಯಾಂಪ್ ಸಂಪೂರ್ಣ ಧ್ವಂಸವಾಗಿದ್ದು, ಪುಲ್ವಾಮಾ ದಾಳಿಗೆ ಪ್ರತೀಕಾರವನ್ನು ಭಾರತ ತೆಗೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುಜರಾತ್ ಸಿಎಂ ರೂಪಾಣಿ ವಿರುದ್ಧ ಸವಾಲು ಹಾಕಿ ಸೋತ ಕೈ ಶ್ರೀಮಂತ ಶಾಸಕ

    ಗುಜರಾತ್ ಸಿಎಂ ರೂಪಾಣಿ ವಿರುದ್ಧ ಸವಾಲು ಹಾಕಿ ಸೋತ ಕೈ ಶ್ರೀಮಂತ ಶಾಸಕ

    ರಾಜಕೋಟ್: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ರಾಜಕೋಟ್ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಹೈಪ್ರೊಫೈಲ್ ಕ್ಷೇತ್ರಗಳಲ್ಲಿ ಒಂದಾಗಿದ್ದ ಬಿಜೆಪಿಗೆ ಅತ್ಯಂತ ಪ್ರತಿಷ್ಠೆಯ ವಿಚಾರದಲ್ಲಿ ಕಾಂಗ್ರೆಸ್ ಶ್ರೀಮಂತ ಶಾಸಕ ಇಂದ್ರನೀಲ್ ರಾಜಗುರು ಅವರನ್ನು ಸೋಲಿಸಿದ್ದಾರೆ.

    ಆರಂಭದಲ್ಲಿ ಹಿನ್ನಡೆಯಲ್ಲಿದ್ದ ರೂಪಾಣಿ ಕೊನೆ ಕೊನೆಗೆ ಮುನ್ನಡೆ ಸಾಧಿಸಿ ಗೆಲುವು ಸಾಧಿಸಿದರು. 2012ರಲ್ಲಿ ರಾಜಕೋಟ್ ಪೂರ್ವ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದ ರಾಜಗುರು ನನ್ನ ವಿರುದ್ಧ ಸ್ಪರ್ಧಿಸಿ ಗೆದ್ದು ತೋರಿಸುವಂತೆ ಸಾರ್ವಜನಿಕವಾಗಿ ರೂಪಾನಿಗೆ ಸವಾಲು ಹಾಕಿದ್ದರು. ಈ ಸವಾಲಿಗೆ ರೂಪಾಣಿ ಪ್ರತಿಕ್ರಿಯೇ ನೀಡದ್ದಕ್ಕೆ ರಾಜಗುರು ನಾನೇ ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿ ನಿಮ್ಮನ್ನು ಸೋಲಿಸುತ್ತೇನೆ ಎಂದು ರಣಕಹಳೆ ಮೊಳಗಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಅವರನ್ನು 2002ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಕಳುಹಿಸಿರುವ ಈ ಕ್ಷೇತ್ರದಲ್ಲಿ 1985ರಿಂದ ಸತತವಾಗಿ ಕಮಲ ಅರಳುತ್ತಿದೆ. ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಈ ಕೇತ್ರದಲ್ಲಿ 7 ಬಾರಿ ಗೆದ್ದಿದ್ದಾರೆ. 85 ರಿಂದ ಸತತವಾಗಿ ಏಳು ಬಾರಿ ಗೆದ್ದಿದ್ದ 2002ರಲ್ಲಿ ನರೇಂದ್ರ ಮೋದಿ ಅವರಿಗೆ ಸ್ಥಾನ ತೆರವು ಮಾಡಿದ್ದ ಬಳಿಕ 2014ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ಆಯ್ಕೆಯಾದ ಬಳಿಕ ರಾಜೀನಾಮೆ ನೀಡಿದ್ದರು.

    32 ವರ್ಷಗಳಿಂದ ಬಿಜೆಪಿಯನ್ನು ಗೆಲ್ಲಿಸುತ್ತಿರುವ, ಶೇ.100ರಷ್ಟು ನಗರ ಪ್ರದೇಶಗಳನ್ನೇ ಹೊಂದಿರುವ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಪಾಟೀದಾರ ಸಮುದಾಯದವರಿದ್ದಾರೆ. ಹೀಗಾಗಿ ರೂಪಾಣಿ ಈ ಚುನಾವಣೆಯಲ್ಲಿ ಸೋಲಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಿ ರಾಜಗುರು ಕಣಕ್ಕೆ ಇಳಿದಿದ್ದರು.

  • ಇಡೀ ದೇಶ ಬಿಜೆಪಿ ಮಯವಾಗುತ್ತದೆ: ಜಗದೀಶ್ ಶೆಟ್ಟರ್

    ಇಡೀ ದೇಶ ಬಿಜೆಪಿ ಮಯವಾಗುತ್ತದೆ: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ಈಗಾಗಲೇ ನಾವು ಎರಡೂ ರಾಜ್ಯಗಳಲ್ಲಿ ಗೆಲುವಿನತ್ತ ಮುಂದುವರೆದಿದ್ದೇವೆ ಎಂದು ವಿಧಾನ ಸಭೆಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

    ನಾವು ಎರಡೂ ರಾಜ್ಯಗಳಲ್ಲಿ ಬಹುಮತ ಸಾಧಿಸುತ್ತೇವೆ. ಅದು ಮೋದಿಯವರ ಸಾಧನೆ ನೋಡಿ ಜನರು ಮನ್ನಣೆ ಹಾಕಿದ್ದಾರೆ. ಕಾಂಗ್ರೆಸ್ ನಲ್ಲಿ ತಳಮಳ ಶುರುವಾಗಿದೆ ಹಾಗೂ ಇಡೀ ದೇಶ ಬಿಜೆಪಿ ಮಯವಾಗುತ್ತದೆ. ಕೆಲವು ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಇರಬಹುದು. ಮುಂದಿನ ದಿನಗಳಲ್ಲಿ ಅಲ್ಲೂ ಕಮಲ ಅರಳಲಿದೆ. ಈ ಚುನಾವಣೆ ರಾಜ್ಯದ ಮೇಲೆ ಸಾಕಷ್ಟು ಪರಿಣಾಮ ಬಿರುತ್ತೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ನಾವು ಕಳೆದ ಬಾರಿಗಿಂತ ಹೆಚ್ಚಿನ ಸೀಟುಗಳಿಸುತ್ತವೋ ಬಿಡುತ್ತೆವೋ ಗೊತ್ತಿಲ್ಲ. ಆದರೆ ಗುಜರಾತ್ ನಲ್ಲಿ ನಾವು ಸರಳ ಬಹುಮತ ಪಡೆಯುತ್ತೇವೆ. ಗುಜರಾತ್ ನಲ್ಲಿ ಮೋದಿ ವಿರುದ್ಧ ಕೆಟ್ಟ ಅಪಪ್ರಚಾರ ಮಾಡಿದರು. ಆದರೂ ಏನು ವರ್ಕೌಟ್ ಆಗಲಿಲ್ಲ. ಜಿಎಸ್ ಟಿ, ನೋಟ್ ಬ್ಯಾನ್ ಗೆ ಜನ ವಿರೋಧಿಸಿಲ್ಲ. ವಿರೋಧಿಸಿದರೆ ಗುಜರಾತ್ ನಲ್ಲಿ ನಮಗೆ ಇಷ್ಟೊಂದು ಸೀಟುಗಳು ಬರುತ್ತಿರಲಿಲ್ಲ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

  • ಮೀಸೆ ಬೆಳೆಸಿದಕ್ಕೆ ಗುಜರಾತ್‍ನಲ್ಲಿ ದಲಿತ ಯುವಕನ ಮೇಲೆ ಹಲ್ಲೆ

    ಮೀಸೆ ಬೆಳೆಸಿದಕ್ಕೆ ಗುಜರಾತ್‍ನಲ್ಲಿ ದಲಿತ ಯುವಕನ ಮೇಲೆ ಹಲ್ಲೆ

    ಗಾಂಧಿನಗರ: ದಲಿತ ಯುವಕ ಮೀಸೆ ಬೆಳೆಸಿದಕ್ಕೆ ಮೇಲ್ಜಾತಿಯ ಜನರು ಅವನ ಮೇಲೆ ಹಲ್ಲೆ ನಡೆಸಿರುವ ಘಟನೆ ಸೆಪ್ಟೆಂಬರ್ 25ರಂದು ಗುಜರಾತ್‍ನ ಗಾಂಧಿನಗರದಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ದರ್ಬಾರ್ ಸಮುದಾಯದ ಮೂವರು ಯುವಕರು ಗಾಂಧಿನಗರ ಜಿಲ್ಲೆಯ ಕಲೋಲ್ ತಾಲೂಕಿನ ಲಿಂಬೋದರ ಗ್ರಾಮದ ಪಿಯೂಷ್ ಪರ್ಮರ್(24) ಯುವಕರೊಬ್ಬರಿಗೆ ಬೈದು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಮಯೂರ್‍ಸಿನ್ ವಗೆಲಾ, ರಾಹುಲ್ ವಿಕ್ರಮ್‍ಸಿನ್ ಸೆರಾತಿಯ ಮತ್ತು ಅಜಿತ್‍ಸಿನ್ ವಗೆಲಾ ವಿರುದ್ಧ ದೂರು ದಾಖಲಾಗಿದ್ದು ಪ್ರಕರಣ ದಾಖಲಾಗಿದೆ.

    ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನಾನು ಸಹೋದರ ದಿಗಂತ್ ಜೊತೆ ಗರ್ಬಾ ಮುಗಿಸಿ ರಾತ್ರಿ ಮನೆಗೆ ಹಿಂತಿರುಗುತ್ತಿದ್ದೆವು. ಆಗ ಅವರನ್ನು ಯಾರೋ ನಿಂದಿಸಲು ಶುರು ಮಾಡಿದ್ದರು. ಯಾರು ಎಂದು ನೋಡಲು ನೋಡಿದಾಗ ಗೊತ್ತಾಗಿರಲಿಲ್ಲ. ನಂತರ ಅವರ ಹತ್ತಿರ ಹೋಗಿ ನೋಡಿದ್ದಾಗ ದರ್ಬಾರ್ ಸಮುದಾಯದ ಮೂವರು ಯುವಕರಿದ್ದರು. ಜಗಳ ಆಗಬಾರದು ಎನ್ನುವ ಕಾರಣಕ್ಕೆ ನಾವು ಅವರನ್ನು ನಿರ್ಲಕ್ಷಿಸಿದ್ದೇವು. ನಾವು ಮನೆಗೆ ಹೋಗುವಾಗ ನಮ್ಮನ್ನು ಹಿಂಬಾಲಿಸುತ್ತಿದ್ದರು. ನಂತರ ಮನೆಯ ಹತ್ತಿರ ಬಂದು ಬೈಯಲು ಆರಂಭಿಸಿದ್ದರು. ಮೊದಲು ನನ್ನ ಸಹೋದರ ದಿಗಂತ್‍ನನ್ನು ನಿಂದಿಸಿದ್ದರು ಬಳಿಕ ನನ್ನನ್ನು ಹೊಡೆಯಲು ಆರಂಭಿಸಿದ್ದರು. ದಲಿತನಾಗಿ ಮೀಸೆ ಏಕೆ ಬೆಳೆಸಿದ್ದೀಯ ಎಂದು ಹೊಡೆಯುತ್ತಿದ್ದರು ಎಂದು ಪಿಯೂಷ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • 21ನೇ ವರ್ಷಕ್ಕೆ ಸಿಎ, ಸಿಎಸ್, ಸಿಎಂಎ ಪೂರ್ಣ! ವಿಶೇಷ ಸಾಧನೆಗೈದ ಯುವಕನ ಕಥೆ ಓದಿ

    21ನೇ ವರ್ಷಕ್ಕೆ ಸಿಎ, ಸಿಎಸ್, ಸಿಎಂಎ ಪೂರ್ಣ! ವಿಶೇಷ ಸಾಧನೆಗೈದ ಯುವಕನ ಕಥೆ ಓದಿ

    ಸೂರತ್: 21 ವರ್ಷದ ಗುಜರಾತ್‍ನ ಸೂರತ್ ನಿವಾಸಿ ಆದಿತ್ಯಾ ಜಾವರ್ ಚಾರ್ಟರ್ಡ್ ಅಕೌಂಟೆಂಟ್ (ಸಿಎ), ಕಂಪನಿ ಸೆಕ್ರೇಟರಿ(ಸಿಎಸ್), ಕಾಸ್ಟ್ ಮತ್ತು ಮ್ಯಾನೇಜ್‍ಮೆಂಟ್ ಅಕೌಂಟೆನ್ಸಿ (ಸಿಎಂಎ) ಪರೀಕ್ಷೆಯನ್ನು ಪಾಸ್ ಮಾಡುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

    ಈ ಮೊದಲು ದೆಹಲಿಯ ಸಾರ್ಥಕ್ ಅಹುಜ ಮತ್ತು ಪಲ್ಲವಿ ಸಚ್‍ದೇವ 23 ವರ್ಷದಲ್ಲಿ ಸಿಎ, ಸಿಎಸ್, ಸಿಎಂಎ ಮುಗಿಸಿದ್ದರು. ಆದರೆ ಈಗ ಸಿಎಂಎ ಅಂತಿಮ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಜಾವರ್ ತೇರ್ಗಡೆಯಾಗುವ ಮೂಲಕ ಹೊಸ ಮೈಲಿಗಲ್ಲನ್ನು ಬರೆದಿದ್ದಾರೆ.

    12ನೇ ತರಗತಿ ಮುಗಿಸಿದ ನಂತರ ಜಾವರ್ ತನ್ನ ಓದಿನ ಜೊತೆಗೆ ಸಿಎ ಓದಲು ಆರಂಭಿಸಿದರು. 15ನೇ ವರ್ಷದಲ್ಲಿ ಸಿಎ ಎಲ್ಲ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಸಿಎಎಸ್ ಪರೀಕ್ಷೆಯನ್ನು ಕಟ್ಟಿದರು. ನಂತರ ಸಿಎಂಎ ಪರೀಕ್ಷೆ ಬರೆದು ಈಗ ಉತ್ತೀರ್ಣರಾಗಿದ್ದಾರೆ.

    ಜಾವರ್ ಸೂರತ್‍ನ ಚಾರ್ಟರ್ಡ್ ಅಕೌಂಟೆಟ್ ಆಗಿರುವ ರವಿ ಚಾವ್‍ಚರಿಯ ಹತ್ತಿರ ತರಬೇತಿ ಪಡೆದಿದ್ದಾರೆ. ಇಂದಿರಾ ಗಾಂಧಿ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿಯನ್ನು ಓದಿರುವ ಜಾವರ್ ಈಗ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

    ಜಾವರ್‍ನ ತಂದೆ ಮಹೇಶ್ ಜಾವರ್ ಜವಳಿ ವ್ಯಾಪಾರಿ. ಅವರು ಸಹ ಸಿಎ ಎರಡನೇ ಹಂತವನ್ನು ಪೂರ್ಣಗೊಳಿಸಿದ್ದರೂ ಕುಟುಂಬ ವ್ಯವಹಾರದಲ್ಲಿ ತೊಡಗಿರುವುದರಿಂದ ಸಿಎ ಫೈನಲ್ ಪರೀಕ್ಷೆಯನ್ನು ಬರೆದಿರಲಿಲ್ಲ. ಜಾವರ್‍ನ ತಾಯಿ ಕಳೆದ 25 ವರ್ಷಗಳಿಂದ ಶಾಲಾ ಶಿಕ್ಷಕಿಯಾಗಿದ್ದಾರೆ.