Tag: gujrat

  • ಕೋವಿಡ್ 19 ಆಸ್ಪತ್ರೆಯಲ್ಲಿ ಅಗ್ನಿ ಅವಘಡ – ಐವರು ಸೋಂಕಿತರು ದಾರುಣ ಸಾವು

    ಕೋವಿಡ್ 19 ಆಸ್ಪತ್ರೆಯಲ್ಲಿ ಅಗ್ನಿ ಅವಘಡ – ಐವರು ಸೋಂಕಿತರು ದಾರುಣ ಸಾವು

    ಗಾಂಧಿನಗರ: ಕೋವಿಡ್ 19 ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಐವರು ಕೊರೊನಾ ರೋಗಿಗಳು ದಾರುಣವಾಗಿ ಮೃತಪಟ್ಟ ಘಟನೆ ಗುಜರಾತ್ ನಲ್ಲಿ ನಡೆದಿದೆ.

    ರಾಜ್‍ಕೋಟ್‍ನ ಉದಯ ಶಿವಾನಂದ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅವಘಡ ಸಂಭವಿಸಿದ ಸಮಯದಲ್ಲಿ ಆಸ್ಪತ್ರೆಯಲ್ಲಿ 33 ಮಂದಿ ಕೊರೊನಾ ಸೋಂಕಿತರಿದ್ದರು. ಈ ಪೈಕಿ ಐವರು ಅಗ್ನಿ ದುರಂತಕ್ಕೆ ತುತ್ತಾಗಿದ್ದಾರೆ.

    ಘಟನೆ ನಡೆಯುತ್ತಿದ್ದಂತೆಯೇ ಮಾಹಿತಿ ಅರಿತ ಅಗ್ನಿಶಾಮದಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕಿಟಕಿ ಮೂಲಕ ಉಳಿದವರನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಅವರನ್ನು ಬೇರೊಂದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಘಟನೆ ಸಂಬಂಧ ತನಿಖೆ ನಡೆಸುವಂತೆ ಹಾಗೂ ಘಟನೆಗೆ ಕಾರಣವೇನು ಎಂಬುದನ್ನು ತಿಳಿದು ವರದಿ ನೀಡುವಂತೆ ಆದೇಶಿಸಿದ್ದಾರೆ.

    ಆಸ್ಪತ್ರೆಗಳಲ್ಲಿ ಅಗ್ನಿ ಅವಘಡ ಸಂಭವಿಸುವುದು ಇದೇ ಮೊದಲಲ್ಲ. ಈ ಹಿಂದೆಯೂ ಗುಜರಾತ್ ನ ಕೆಲವು ಆಸ್ಪತ್ರೆಗಳಲ್ಲಿ ಇಂತಹ ಅವಘಡಗಳು ನಡೆದಿವೆ. ಆಗಸ್ಟ್ 6 ರಂದು ಅಹಮ್ಮದಾಬಾದ್ ಆಸ್ಪತ್ರೆ, ಆಗಸ್ಟ್ 25ರಂದು ಜಾಮ್ ನಗರ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

  • ಗರ್ಭಿಣಿ ಪಾರ್ಟ್ನರ್‌ನ ಕೊಲೆಗೈದು ಆಕೆಯ ತಂದೆಯ ತೋಟದಲ್ಲೇ ಹೂತಿಟ್ಟ!

    ಗರ್ಭಿಣಿ ಪಾರ್ಟ್ನರ್‌ನ ಕೊಲೆಗೈದು ಆಕೆಯ ತಂದೆಯ ತೋಟದಲ್ಲೇ ಹೂತಿಟ್ಟ!

    – ತನಿಖೆಯ ವೇಳೆ ಬಯಲಾಯ್ತು ಸತ್ಯ
    – ಪೊಲಿಸರ ಮುಂದೆ ಆರೋಪಿ ಹೇಳಿದ್ದೇನು..?

    ಗಾಂಧಿನಗರ: ಗರ್ಭಿಣಿ ಲಿವ್ ಇನ್ ಪಾರ್ಟ್ನರ್ ನ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

    ಮೃತ ದುರ್ದೈವಿಯನ್ನು ರಶ್ಮಿ ಕಟಾರಿಯಾ ಎಂದು ಗುರುತಿಸಲಾಗಿದೆ. ಈಕೆಯ ಮೃತದೇಹ ಆರೋಪಿ ಜೊತೆ ವಾಸವಾಗಿರುವ ಮನೆಯಿಂದ 22 ಕಿ.ಮೀ ದೂರದಲ್ಲಿರುವ ಆಕೆಯ ತಂದೆಯ ಕೃಷಿ ಭೂಮಿಯಲ್ಲಿ ದೊರೆತಿದೆ.

    ನವೆಂಬರ್ 14ರಂದು ರಶ್ಮಿ ತನ್ನ 3 ವರ್ಷದ ಮಗನನ್ನು ತಾಯಿ ಮನೆಯಲ್ಲಿ ಬಿಟ್ಟು ಬಳಿಕ ಅಲ್ಲಿಂದ ಯಾವುದೇ ಸುಳಿವು ಇಲ್ಲದೆ ಕಾಣೆಯಾಗಿಯಾಗಿದ್ದಳು. ರಶ್ಮಿ ಕಾಣೆಯಾದ ಬಳಿಕ ಹೆತ್ತವರು ಹುಡುಕಾಟ ಆರಂಭಿಸಿದ್ದಾರೆ. ಹಲವು ದಿನಗಳ ಕಾಲ ಹುಡುಕಾಡಿದರೂ ರಶ್ಮಿ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಕೊನೆಗೆ ಆಕೆಯ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಆಗ ಆಕೆ 5 ತಿಂಗಳ ಗರ್ಭಿಣಿ ಎಂಬುದು ಬಯಲಾಯಿತು.

    ಈಕೆ ಕಳೆದ 5 ವರ್ಷಗಳಿಂದ ಚಿರಾಗ್ ಪಟೇಲ್ ಎಂಬ ವ್ಯಕ್ತಿಯ ಜೊತೆ ಲಿವ್-ಇನ್-ರಿಲೇಷನ್‍ಶಿಪ್ ನಲ್ಲಿದ್ದಳು ಎಂಬುದಾಗಿ ಕುಟುಂಬ ಕೂಡ ತಿಳಿಸಿದೆ. ಇತ್ತ ರಶ್ಮಿ ನಾಪತ್ತೆ ದೂರನ್ನು ಸ್ವೀಕರಿಸಿದ ಪೊಲೀಸರು ಆಕೆಗಾಗಿ ಹುಡುಕಾಟ ಆರಂಭಿಸಿದರು. ಈ ಮಧ್ಯೆ ಚಿರಾಗ್ ನನ್ನು ಕೂಡ ಪೊಲೀಸರು ತನಿಖೆ ನಡೆಸಿದ್ದಾರೆ. ವಿಚಾರಣೆ ವೇಳೆ ರಶ್ಮಿಯನ್ನು ಕೊಂದಿದ್ದಾಗಿ ಚಿರಾಗ್ ಒಪ್ಪಿಕೊಂಡಿದ್ದಾನೆ.

    ಕತ್ತು ಹಿಸುಕಿ ಕೊಲೆ ಮಾಡಿ ಆಕೆಯ ಶವವನ್ನು ತಂದೆಯ ಕೃಷಿಭೂಮಿಗೆ ಕೊಂಡೊಯ್ದು, ಜೆಸಿಬಿಯಿಂದ ಗುಂಡಿ ತೋಡಿ ದೇಹವನ್ನು ಹೂತುಹಾಕಿರುವುದಾಗಿ ಪೊಲೀಸರ ಬಳಿ ಚಿರಾಗ್ ತಿಳಿಸಿದ್ದಾನೆ. ಮೃತದೇಹವನ್ನು ವಶಕ್ಕೆ ಪಡೆದದುಕೊಂಡು, ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ಈ ಮಧ್ಯೆ ಗುಜರಾತ್ ಪೊಲೀಸರು ಚಿರಾಗ್ ನನ್ನು ಬಂಧಿಸಿದ್ದಾರೆ. ಬಂಧಿಸಿದ ಬಳಿಕ ಹೆಚ್ಚಿನ ವಿಚಾರಣೆ ನಡೆಸಿದ ವೇಳೆ ಇತ್ತೀಚೆಗೆ ಆಕೆ ತನ್ನ ಜೊತೆ ಹೆಚ್ಚು ಜಗಳವಾಡುತ್ತಿದ್ದಳು. ಈ ಹಿನ್ನೆಲೆಯಲ್ಲಿ ತಾನು ಆಕೆಯನ್ನು ಕೊಲೆ ಮಾಡಿರುವುದಾಗಿ ಬಹಿರಂಗಪಡಿಸಿದ್ದಾನೆ.

    ಕೃತ್ಯದಲ್ಲಿ ಚಿರಾಗ್ ಮೊದಲ ಪತ್ನಿಯ ಕೈವಾಡ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಯಾಕಂದ್ರೆ ಕೆಲ ತಿಂಗಳ ಹಿಂದೆ ಆಕೆ ರಶ್ಮಿ ಜೊತೆ ಜಗಳವಾಡಿದ್ದಳು. ಅಲ್ಲದೆ ಥಳಿಸಿದ್ದಳು. ಸದ್ಯ ಈ ಕೃತ್ಯದಲ್ಲಿ ಚಿರಾಗ್ ಜೊತೆ ಇನ್ಯಾರಾದರೂ ಕೈ ಜೋಡಿಸಿದ್ದಾರೆಯೋ ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.

  • ಅಳಿಯನ ಮನೆಗೆ ಹೋಗಲು ಮಗಳು ಒಪ್ಪದ್ದಕ್ಕೆ ತಾಯಿ ಆತ್ಮಹತ್ಯೆ

    ಅಳಿಯನ ಮನೆಗೆ ಹೋಗಲು ಮಗಳು ಒಪ್ಪದ್ದಕ್ಕೆ ತಾಯಿ ಆತ್ಮಹತ್ಯೆ

    – ಅಳಿಯನ ಮನೆಯಿಂದ ನಿರಂತರ ಒತ್ತಡ
    – ಒತ್ತಡ ಸಹಿಸಲಾರದೆ ತಾಯಿ ಸೂಸೈಡ್

    ಗಾಂಧಿನಗರ: ಹುಟ್ಟಿದ ಮಗು ಹೆಣ್ಣಾದರೆ ಆಕೆಯನ್ನು ಪ್ರೀತಿಯಿಂದ ಸಾಕಿ-ಸಲಹುವ ಹೆತ್ತವರು, ಒಳ್ಳೆಯ ಮನೆತನಕ್ಕೆ ಮದುವೆ ಮಾಡಿಕೊಡಬೇಕು, ಮಗಳು ಚೆನ್ನಾಗಿರಬೇಕು ಎಂದು ಆಶಿಸುತ್ತಾರೆ. ಅಂತೆಯೇ ಗುಜರಾತ್ ನಲ್ಲೂ ಕೂಡ ಪೋಷಕರು ತಮ್ಮ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಆದರೆ ಆಕೆ ಮಾತ್ರ ಹೆತ್ತವರ ಮನೆಗೆ ವಾಪಸ್ಸಾಗಿದ್ದಾಳೆ. ಇದರಿಂದ ನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡ ವಿಲಕ್ಷಣ ಘಟನೆಯೊಂದು ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಅನಿತಾ ದೇವಸಿ(45) ಎಂದು ಗುರುತಿಸಲಾಗಿದೆ. ವಡೋದರದ ಲಖಿಂಪುರ ರಸ್ತೆಯ ನಿವಾಸಿಯಾಗಿರುವ ಈಕೆ ಬುಧವಾರ ಮಧ್ಯಾಹ್ನ ಮನೆಯ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ವೇಲೆ ಮನೆಯಲ್ಲಿ ಎಲ್ಲರೂ ಮಲಗಿದ್ದನ್ನೇ ಉಪಯೋಗಿಸಿಕೊಂಡ ಮಹಿಳೆ ನೇರವಾಗಿ ಮನೆಯ ಟೆರೇಸ್ ಗೆ ತೆರಳಿ ಅಲ್ಲಿಂದ ಹಾರಿದ್ದಾರೆ.

    ಮಗಳಿಗೆ ಮನವರಿಕೆ ಮಾಡಿದ್ರೂ ವಿಫಲ:
    ದೇವಸಿಯ ಮಗಳನ್ನು ರಾಜಸ್ಥಾನದ ಪಲಿ ಜಿಲ್ಲೆಯ ವ್ಯಕ್ತಿಯೊಬ್ಬನಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಮಗಳು ಮಾತ್ರ ವಡೋದಲ್ಲಿರುವ ಹೆತ್ತವರ ಮನೆಗೆ ಬಂದವಳು ಮತ್ತೆ ಗಂಡನ ಮನೆಗೆ ತೆರಳಲು ಮನಸ್ಸು ಮಾಡಲಿಲ್ಲ. ಹೀಗಾಗಿ ದೇವಸಿ ಹಾಗೂ ಆಕೆಯ ಪತಿ ಮಗಳನ್ನು ಆಕೆಯ ಗಂಡನ ಮನೆಗೆ ತೆರಳುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಮಗಳು ಮಾತ್ರ ಯಾವುದೇ ಕಾರಣಕ್ಕೂ ತನ್ನ ಗಂಡನ ಮನೆಗೆ ತೆರಳುವ ಯೋಚನೆ ಮಾಡಲಿಲ್ಲ.

    ಇತ್ತ ಅಳಿಯನ ಮನೆ ಕಡೆಯಿಂದಲೂ ನಿಮ್ಮ ಮಗಳನ್ನು ಕಳುಹಿಸಿಕೊಡಿ ಎಂದು ಒತ್ತಡ ಹಾಕಲು ಶುರು ಮಾಡಿದ್ದರು. ಆದರೆ ದೇವಸಿ ಮಾತ್ರ ಮಗಳನ್ನು ಆಕೆಯ ಗಂಡನ ಮನೆಗೆ ಕಳುಹಿಸಿಕೊಡುವಲ್ಲಿ ವಿಫಲರಾಗಿದ್ದರು.

    ಮಗಳನ್ನು ಮನೆಗೆ ಕಳುಹಿಸಿಕೊಡಿ ಎಂದು ಅಳಿಯನ ಮನೆಯಿಂದ ಒತ್ತಡ ಹೇರಲಾಗುತ್ತಿತ್ತು. ಹಾಗೆಯೇ ಬುಧವಾರ ಕರೆ ಮಾಡಿದ್ದ ಅಳಿಯ, ನಿಮ್ಮ ಮಗಳನ್ನು ನಮ್ಮ ಮನೆಗೆ ಕಳುಹಿಸಿಕೊಡಿ ಎಂದು ಪೀಡಿಸಲು ಆರಂಭಿಸಿದ್ದಾನೆ. ಅಳಿಯನ ಮಾತುಗಳಿಂದ ದಂಪತಿ ಕಂಗಾಲಾಗಿದ್ದು, ದೇವಸಿ ಪತಿ ಅನಾರೋಗ್ಯಕ್ಕೆ ತುತ್ತಾದರು. ಕೂಡಲೇ ನೆರೆಹೊರೆಯವರು ಸ್ಥಳಕ್ಕೆ ದೌಡಾಯಿಸಿದರು.

    ಇತ್ತ ಮನೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ಎಲ್ಲರೂ ನಿದ್ದೆಗೆ ಜಾರಿದ ಸಂದರ್ಭವನ್ನು ಉಪಯೋಗಿಸಿಕೊಂಡ ದೇವಸಿ ನೇರವಾಗಿ ಮನೆಯೆ ಟೆರೇಸ್ ಗೆ ತೆರಳಿ ಅಲ್ಲಿಂದ ಹಾರಿದ್ದಾರೆ. ಪರಿಣಾಮ ತಲೆಗೆ ಗಂಭೀರ ಏಟು ಬಿದ್ದಿದೆ. ಕೂಡಲೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ. ಬಳಿಕ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಟ್ರಾವೆಲ್ ಹಿಸ್ಟರಿಯೇ ಇಲ್ಲದ 14 ತಿಂಗಳ ಮಗುವಿಗೆ ಕೊರೊನಾ ಪಾಸಿಟಿವ್

    ಟ್ರಾವೆಲ್ ಹಿಸ್ಟರಿಯೇ ಇಲ್ಲದ 14 ತಿಂಗಳ ಮಗುವಿಗೆ ಕೊರೊನಾ ಪಾಸಿಟಿವ್

    ಗಾಂಧಿನಗರ: ಅಮೆರಿಕದಲ್ಲಿ ಪಟ್ಟ ಕಂದಮ್ಮಗಳಿಗೆ ಕೊರೊನಾ ಬಂದಿದ್ದು, ಇದೀಗ ಭಾರತದಲ್ಲೂ 14 ತಿಂಗಳ ಮಗುವಿಗೆ ಕೊರೊನಾ ಇರುವುದು ಪತ್ತೆಯಾಗಿದೆ.

    ಹೌದು. ಗುಜರಾತಿನ ಜಮ್ನಾನಗರ್ ಜಿಲ್ಲೆಯ ಗಂಡು ಮಗುವಿಗೆ ಕೊರೊನಾ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಗ್ಯ ಅಧಿಕಾರಿಗಳು ಮಗುವಿಗೆ ಹೇಗೆ ಕೊರೊನಾ ಬಂದಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಭಾನುವಾರ ಮಗುವಿಗೆ ಕೊರೊನಾ ಪಾಸಿಟಿವ್ ಇರೋದು ಬೆಳಕಿಗೆ ಬಂದಿದ್ದು, ಸದ್ಯ ಮಗು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಹೆತ್ತವರು ಕಾರ್ಮಿಕರಾಗಿದ್ದು, ಕೊರೊನಾ ವೈರಸ್ ನಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿರೋದರ ಹಿನ್ನೆಲೆಯಲ್ಲಿ ಪುಟ್ಟ ಗ್ರಾಮವೊಂದರಲ್ಲಿ ನೆಲೆಸಿದ್ದಾರೆ.

    ಈ ಮೂಲಕ ಜಮ್ನಾನಗರ್ ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆಯಾಗಿದೆ. ಒಟ್ಟಿನಲ್ಲಿ ಮಗುವಿಗೆ ಕೊರೊನಾ ಬಂದಿರುವುದನ್ನು ಪತ್ತೆ ಹಚ್ಚಲು ಆರೋಗ್ಯ ಅಧಿಕಾರಿಗಳಿಗೆ ಒಂದು ದೊಡ್ಡ ಟಾಸ್ಕ್ ಇದಾಗಿದೆ.

    ಮಗುವಿನ ಪೋಷಕರು ಕಾರ್ಮಿಕರಾಗಿದ್ದು, ಇತ್ತೀಚೆಗೆ ತೆರಳಿದ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಹೀಗಾಗಿ ಮಗುವಿಗೆ ಹೇಗೆ ಕೊರೊನಾ ಬಂದಿದೆ ಎಂಬುದನ್ನು ಆರೋಗ್ಯಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ರವಿ ಂಕರ್ ತಿಳಿಸಿದ್ದಾರೆ.

    ಮಗುವಿನ ಪೋಷಕರು ಮೂಲತಃ ಉತ್ತರಪ್ರದೇಶದವರಾಗಿದ್ದು, ಡೇರ್ಡ್ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಆ ಪ್ರದೇಶ ಬಿಟ್ಟು ಎಲ್ಲೂ ಹೋಗದೆ ಹಲವು ದಿನಗಳೇ ಕಳೆದಿತ್ತು. ಆದರೂ ದಂಪತಿಯ 14 ತಿಂಗಳ ಮಗನಿಗೆ ಕೊರೊನಾ ಲಕ್ಷಣಗಳು ಕಂಡುಬಂದಿರುವುದು ಅಲ್ಲಿಯ ಜನರಲ್ಲಿ ಅಚ್ಚರಿ ಹುಟ್ಟಿಸಿದೆ ಎಂದು ಡಿಸಿ ವಿವರಿಸಿದ್ದಾರೆ.

    ಲಕ್ಷಣಗಳು ಕಂಡು ಬಂದ ಕೂಡಲೇ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೋಷಕರು ಶನಿವಾರ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಭಾನುವಾರ ಪರೀಕ್ಷೆ ನಡೆಸಿದಾಗ ಮಗುವಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಸದ್ಯ ಬಾಲಕನಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಬಾಲಕನ ಹೆತ್ತವರು ಆರೋಗ್ಯವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಕೊರೊನಾ ಪತ್ತೆಯಾದ ಬೆನ್ನಲ್ಲೇ ಇಡೀ ಗ್ರಾಮವನ್ನೇ ಲಾಕ್ ಡೌನ್ ಮಾಡಲಾಗಿದೆ.

  • ಸಮೀಕ್ಷೆಗಳು ಏನೇ ಹೇಳಲಿ ಗುಜರಾತ್‍ನಲ್ಲಿ ಗೆಲ್ಲೋದು ನಾವೇ: ಕೈ ಆತ್ಮವಿಶ್ವಾಸಕ್ಕೆ ಕಾರಣ ಏನು?

    ಸಮೀಕ್ಷೆಗಳು ಏನೇ ಹೇಳಲಿ ಗುಜರಾತ್‍ನಲ್ಲಿ ಗೆಲ್ಲೋದು ನಾವೇ: ಕೈ ಆತ್ಮವಿಶ್ವಾಸಕ್ಕೆ ಕಾರಣ ಏನು?

    ಎಲ್ಲ ಸಮೀಕ್ಷೆಗಳು ಗುಜರಾತ್ ನಲ್ಲಿ ಈ ಬಾರಿ ಮತ್ತೆ ಕಮಲ ಅರಳಲಿದೆ ಎಂದು ಹೇಳಿದ್ದರೂ ಕಾಂಗ್ರೆಸ್ ಮಾತ್ರ ಈ ಬಾರಿ ಗೆಲುವು ನಮ್ಮದೇ ಎಂದು ಆತ್ಮವಿಶ್ವಾಸದಿಂದ ಪ್ರಚಾರದಲ್ಲಿ ತೊಡಗುತ್ತಿದೆ. ಮೋದಿ ಅಲೆ ಇಲ್ಲ, ಈಗ ಇಲ್ಲಿ ಇರುವುದು ಆಡಳಿತ ವಿರೋಧಿ ಅಲೆ. ಹೀಗಾಗಿ ಬಿಜೆಪಿ ಆಡಳಿತ ಈ ವರ್ಷಕ್ಕೆ ಕೊನೆಯಾಗಲಿದ್ದು ಮತ್ತ ಮತದಾರ ನಮ್ಮ ಕೈ ಹಿಡಿಯಲಿದ್ದಾನೆ ಎನ್ನುತ್ತಿದ್ದಾರೆ ಕಾಂಗ್ರೆಸ್ ನಾಯಕರು. ಇಷ್ಟು ಘಂಟಾಘೋಷವಾಗಿ ಕಾಂಗ್ರೆಸ್ ಹೇಳಿಕೊಳ್ಳಲು ಕಾರಣ ಏನಿರಬಹುದು ಎನ್ನುವುದಕ್ಕೆ ಇಲ್ಲಿ ಕೆಲ ಮಾಹಿತಿಗಳನ್ನು ನೀಡಲಾಗಿದೆ.

    1. ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ
    ಕಳೆದ ಇಪ್ಪತ್ತು ವರ್ಷದ ನಿರಂತರ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತೊಮ್ಮೆ ಗುಜರಾತ್ ಚುನಾವಣೆ ಹೋಗುತ್ತಿದೆ. ಸುದೀರ್ಘ ಕಾಲ ಆಡಳಿತ ನಡೆಸಿರುವ ಬಿಜೆಪಿ ಸಾಕಷ್ಟು ಕೆಲಸಗಳ ಮಾಡಿದರೂ ಅದರ ಹೊರತಾಗಿ ಆಡಳಿತ ವಿರೋಧಿ ಅಲೆ ಎದ್ದಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಹೆಚ್ಚು ರೈತ ವರ್ಗವಿರುವ ಅಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಬೆಲೆಗಳು ಇಳಿಕೆಯಾಗಿದ್ದರೂ ಕೆಲ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಜೊತೆಗೆ ಸರ್ಮಪಕ ನೀರಾವರಿ ಸೌಲಭ್ಯ ಕಲ್ಪಿಸಿದ್ದರೂ ಅದು ಕೆಲ ರೈತರ ಪಾಲಾಗಿದೆ. ಸಾಕಷ್ಟು ರೈತರು ನೀರಾವರಿ ಯೋಜನೆ ಲಾಭ ಪಡೆದಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸಿಎಂ ಬದಲಾದರೂ ಪರಿಣಾಮಕಾರಿ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ ಎನ್ನುವ ಆರೋಪವಿದೆ.

    2. ಮತ ಹಂಚಿಕೆಯಲ್ಲಿ ಕುಸಿತ
    2012ರಲ್ಲಿ 72.5% ಮತದಾನ ನಡೆದಿದ್ದು, 47% ಮತ ಪಡೆಯುವ ಮೂಲಕ ಬಿಜೆಪಿ 115 ಸ್ಥಾನಗಳನ್ನು ಗಳಿಸಿದ್ದರೆ, 38.9% ಮತ ಪಡೆದ ಕಾಂಗ್ರೆಸ್ 61 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 63.6% ಮತದಾನ ನಡೆದಿದ್ದು, ಎಲ್ಲ 26 ಸ್ಥಾನಗಳನ್ನು ಬಿಜೆಪಿ ಜಯಗಳಿಸಿತ್ತು. ಬಿಜೆಪಿಗೆ 60.1% ಮತ ಬಿದ್ದರೆ, ಕಾಂಗ್ರೆಸ್‍ಗೆ 33.5% ಮತ ಬಿದ್ದಿತ್ತು. ವಿಧಾನ ಸಭಾ ಚುನಾವಣೆಗೆ ಹೋಲಿಸಿದರೆ ಲೋಕಸಭೆಯಲ್ಲಿ ಬಿಜಿಪಿಗೆ ಬಿದ್ದ ಪ್ರಮಾಣ ಕಡಿಮೆಯಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ವಿವಿಧ ಚುನಾವಣೆಯಲ್ಲಿ ಬಿಜೆಪಿಗೆ ಬೀಳುತ್ತಿರುವ ಮತ ಪ್ರಮಾಣ ಕಡಿಮೆಯಾಗಿದೆ. ಕೆಲ ದಿನಗಳ ಹಿಂದೆ ಪ್ರಕಟವಾದ ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಸಾಬೀತಾಗಿದೆ.

    3. ನಾಯಕತ್ವದ ಸಮಸ್ಯೆ
    ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ಅವರಂತಹ ಡೈನಾಮಿಕ್ ಮುಖ್ಯಮಂತ್ರಿ ಅಭ್ಯರ್ಥಿ ಸದ್ಯ ಬಿಜೆಪಿಯಲ್ಲಿ ಯಾರು ಕಂಡು ಬರುತ್ತಿಲ್ಲ. ಮೋದಿ ಬಳಿಕ ಆನಂದಿ ಬೆನ್ ಮುಖ್ಯಮಂತ್ರಿ ಆದರೂ ನಂತರದ ಬೆಳವಣಿಗೆಯಲ್ಲಿ ಅವರನ್ನು ಕೆಳಗೆ ಇಳಿಸಿ ವಿಜಯ್ ರೂಪಾನಿ ಸಿಎಂ ಆಗಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇರುವುದು ಸ್ಪಷ್ಟವಾಗಿದೆ.

    4. ಬಹುಪಾಲು ಗ್ರಾಮೀಣ ವಿಧಾನಸಭಾ ಕ್ಷೇತ್ರಗಳು
    ಸುಮಾರು 50% ಜನಸಂಖ್ಯೆ ಗುಜರಾತ್‍ನ ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿದೆ. ಸಾಂಪ್ರದಾಯಿಕವಾಗಿ ನಗರ ಪ್ರದೇಶಗಳಲ್ಲಿ ಬಿಜೆಪಿ ಶಕ್ತಿಶಾಲಿಯಾಗಿದೆ. ನಗರದ ಯುವ ಜನತೆ ಮೋದಿ ಪರವಾಗಿದ್ದರೆ ಹಳ್ಳಿ ಮಂದಿ ಇನ್ನು ಕಾಂಗ್ರೆಸ್ ಪರವಾಗಿದ್ದಾರೆ. ಬಿಜೆಪಿಯಲ್ಲಿ 54% ಶಾಸಕರು ನಗರ ಭಾಗದಿಂದ ಆಯ್ಕೆಯಾದರೆ, ಕಾಂಗ್ರೆಸ್ ನ 74% ಶಾಸಕರು ಗ್ರಾಮೀಣ ಭಾಗದಿಂದ ಆಯ್ಕೆಯಾಗಿ ಬರುತ್ತಾರೆ. ಈ ಹಿಂದೆ ಬಿಜೆಪಿ ಗೆದ್ದಿರುವ ಆರು ಮುನ್ಸಿಪಲ್ ಪ್ರದೇಶಗಳು ನಗರ ಪ್ರದೇಶ ವ್ಯಾಪ್ತಿಯದು. ಗ್ರಾಮೀಣ ಪ್ರದೇಶಗಳಲ್ಲಿ 79 ಸ್ಥಾನಗಳ ಪೈಕಿ ಕೇವಲ ಏಳು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಗುಜರಾತ್ ವಿಧಾನಸಭೆ ಸ್ಥಾನಗಳ ಸಂಖ್ಯೆ 182 ಈ ಪೈಕಿ ಗ್ರಾಮೀಣ ಭಾಗದಲ್ಲಿ 112 ಸೀಟುಗಳಿದ್ದರೆ, ನಗರ ಭಾಗದಲ್ಲಿ 70 ಸೀಟುಗಳಿವೆ. ಹೀಗಾಗಿ ಮೇಲಿನ ಮುನ್ಸಿಪಲ್ ಚುನಾವಣಾ ಫಲಿತಾಂಶದ ಅಂಕಿ ಅಂಶಗಳನ್ನು ಗಮನಿಸಿದರೆ ಬಿಜೆಪಿಗಿಂತ ಕಾಂಗ್ರೆಸ್ ಒಂದು ಕೈ ಮೇಲಿದೆ.

    5. ಕಾಂಗ್ರೆಸ್‍ನತ್ತ ಮುಸ್ಲಿಮರು ವಾಪಸ್?
    ಸುಮಾರು 20-25% ರಷ್ಟು ಪ್ರಮಾಣದಲ್ಲಿ ಮುಸ್ಲಿಮರು ಗುಜರಾತ್ ನಲ್ಲಿ ವಾಸವಾಗಿದ್ದಾರೆ. 2012 ರ ಮಾಹಿತಿ ಪ್ರಕಾರ 31% ಮತಗಳನ್ನು ಇವರು ಬಿಜೆಪಿ ಪರವಾಗಿ ಚಲಾಯಿಸಿದ್ದಾರೆ ಎನ್ನಲಾಗಿದೆ. ಆದರೆ ಬಿಜೆಪಿ ಮುಸ್ಲಿಮ್ ಸಮುದಾಯವನ್ನು ಕಡೆಗಣಿಸುತ್ತಿದ್ದು ಈ ಬಾರಿ ಒಬ್ಬರಿಗೂ ಟಿಕೆಟ್ ನೀಡಿಲ್ಲ. ಇತ್ತೀಚಿಗೆ ಗೋವು ಹಾಗೂ ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿ ಪರಿಣಾಮ ಬೀರಬಹುದು. ರಾಜ್ಯದ ಜನಸಂಖ್ಯೆಯಲ್ಲಿ 10% ಮುಸ್ಲಿಂ ಮತಗಳ ಪಾಲನ್ನು ಬಿಜೆಪಿ ಹೊಂದಿದೆ. ಹೀಗಾಗಿ ಮೂರನೇ ಎರಡು ಭಾಗದಷ್ಟು ಮತಗಳ ಕಳೆದುಕೊಂಡರೆ ಇದು ರಾಜ್ಯದ 36 ಸ್ಥಾನಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇದನ್ನೂ ಓದಿ:ಗುಜರಾತ್ ಚುನಾವಣೆ: ಮತ್ತೆ ಮೋದಿ ಗೆಲುವಿಗೆ ಕಾಂಗ್ರೆಸ್ ಹಾಕಿ ಕೊಟ್ಟಿತಾ ರೆಡ್ ಕಾರ್ಪೆಟ್?

    6. ಕೇಂದ್ರ ಸರ್ಕಾರದ ಪ್ರಭಾವ
    ಈ ವರ್ಷದ ಅಂತ್ಯದ ವೇಳೆಗೆ ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಮೂರುವರೆ ವರ್ಷಗಳನ್ನು ಪೂರೈಸಲಿದೆ. ಕೇಂದ್ರ ಸರ್ಕಾರದ ಆಡಳಿತವೂ ಕೂಡಾ ಗುಜರಾತ್ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗೆಳೆಯುಂತಿಲ್ಲ. ಗುಜರಾತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳಿದ್ದಾರೆ. ಹೀಗಾಗಿ ನೋಟ್‍ಬ್ಯಾನ್, ಜಿಎಸ್‍ಟಿ ಜಾರಿಯಿಂದ ತೊಂದರೆಯಾಗಿ ವ್ಯಾಪಾರ ಕುಂಠಿತಗೊಂಡಿದ್ದಲ್ಲಿ ಅವರ ಮತ ನಮಗೆ ಬಿದ್ದೇ ಬೀಳುತ್ತದೆ ಎಂದು ಹೇಳುತ್ತಿದ್ದಾರೆ ಕಾಂಗ್ರೆಸ್ ನಾಯಕರು.

    7. ಪಾಟೀದಾರ್ ಸಮುದಾಯದ ವಿರೋಧ
    ಪಾಟೀದಾರ್ ಮೀಸಲಾತಿ ಆಂದೋಲನವನ್ನು ನಿರ್ವಹಿಸುವಲ್ಲಿ ಬಿಜೆಪಿ ಆರಂಭದಲ್ಲಿ ಎಡವಿತ್ತು. ಇದರಿಂದ ಇದು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಈ ಆಂದೋಲನವಾಗಿ ಬೆಳೆಯತೊಡಗಿತು ಇದರ ಜೊತೆಗೆ ಆನಂದಿಬೇನ್ ಪಟೇಲ್ ಸಿಎಂ ಆದ ಬಳಿಕವೂ ಈ ಹೋರಾಟಕ್ಕೆ ಸರ್ಕಾರದಿಂದ ಸೂಕ್ತ ಬೆಂಬಲ ವ್ಯಕ್ತವಾಗದ ಹಿನ್ನೆಲೆ ಪಾಟೀದಾರರು ಬದಲಿ ರಾಜಕೀಯ ಆಯ್ಕೆಗಳನ್ನು ಹುಡುಕಿಕೊಳ್ಳುವಂತೆ ಮಾಡಿದೆ. ಗುಜರಾತ್ ನಲ್ಲಿ ಸುಮಾರು 16% ಪಾಟೀದಾರ್ ಸಮುದಾಯವಿದೆ. ಇವರು ಸಾಂಪ್ರದಾಯಿಕವಾಗಿ ಬಿಜೆಪಿ ಬೆಂಬಲಿರಾಗಿದ್ದು ಕಳೆದ ಲೋಕಸಭೆಯಲ್ಲಿ 70% ಮತಗಳನ್ನು ಬಿಜೆಪಿ ಪರವಾಗಿ ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ. ಪಾಟೀದಾರ್ ಸಮುದಾಯ ಬಿಜೆಪಿಯ ಒಟ್ಟು ಮತಹಂಚಿಕೆಯಲ್ಲಿ ಐದನೇ ಒಂದು ಭಾಗವನ್ನು ಹೊಂದಿದ್ದು, 73 ಸ್ಥಾನಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆದ್ದರಿಂದ ಈ ಮತಗಳು ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಐತಿಹಾಸಿಕ ಗೆಲುವಿಗೆ ಸಹಕಾರಿಯಾಗಲಿದೆ. 2012 ರಲ್ಲಿ ಮಾಜಿ ಸಿಎಂ ಕೇಶುಭಾಯಿ ಪಟೇಲ್ ನೇತೃತ್ವದ ಗುಜರಾತ್ ಪರಿವರ್ತನಾ ಪಾರ್ಟಿ 3.6% ಮತಗಳನ್ನು ಪಡೆದುಕೊಂಡಿತು ಇದಷ್ಟೇ ಅಲ್ಲದೇ ಸೌರಾಷ್ಟ್ರ ಮತ್ತು ಕಚ್ ನಲ್ಲಿ 23 ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು. 2012ಕ್ಕೆ ಹೋಲಿಸಿಕೊಂಡರೆ ಇದರ ಪ್ರಮಾಣ ಮತ್ತಷ್ಟು ದೊಡ್ಡದಾಗಿದ್ದು ಪಾಟೀದಾರ್  ಅವರನ್ನು ನ್ನು ಯಾರೇ ಎದುರು ಹಾಕಿಕೊಂಡರು ಅಪಾಯ ಖಚಿತ. ಇದನ್ನೂ ಓದಿ: ಮತ್ತೆ ಗುಜರಾತ್‍ನಲ್ಲಿ ಕಮಲ ಅರಳೋದು ಖಚಿತ! ಯಾವ ಸಮೀಕ್ಷೆ ಏನು ಹೇಳಿದೆ?