Tag: gujrat

  • ನವೀಕರಿಸಬಹುದಾದ ಇಂಧನ ವಲಯದಲ್ಲಿ ಆಸಕ್ತಿ ಒಂದು ಆಯ್ಕೆಯಲ್ಲ, ಅನಿವಾರ್ಯ – ಜಗದೀಪ್ ಧನಕರ್

    ನವೀಕರಿಸಬಹುದಾದ ಇಂಧನ ವಲಯದಲ್ಲಿ ಆಸಕ್ತಿ ಒಂದು ಆಯ್ಕೆಯಲ್ಲ, ಅನಿವಾರ್ಯ – ಜಗದೀಪ್ ಧನಕರ್

    ಗಾಂಧಿನಗರ: ಹವಾಮಾನ ವೈಪರೀತ್ಯದ ಸಮಸ್ಯೆ ಭೂಮಿಯ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಹೀಗಾಗೀ ನವೀಕರಿಸಬಹುದಾದ ಇಂಧನದಲ್ಲಿ (Renewable Energy) ಆಸಕ್ತಿ ತೋರಿಸುವುದು ಒಂದು ಆಯ್ಕೆಯಲ್ಲ ಅದು ಪ್ರಪಂಚದ ಅನಿವಾರ್ಯವಾಗಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagadeep Dhankar) ಹೇಳಿದರು.

    ನಾಲ್ಕನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಭೂಮಿಯನ್ನು ಉಳಿಸಲು, ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆ ಮಾಡದೆ ನಮಗೆ ಬೇರೆ ದಾರಿಯಿಲ್ಲ ಮತ್ತು ಹವಾಮಾನ ಬದಲಾವಣೆಯ ಬೆದರಿಕೆಯನ್ನು ಎದುರಿಸಲು ನಾವು ಹಗಲಿರುಳು ಶ್ರಮಿಸಬೇಕಾಗಿದೆ ಎಂದರು. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್‌ಗೆ ಡಿಸಿಎಂ ಪಟ್ಟ – ಶೀಘ್ರವೇ ಘೋಷಣೆ ಸಾಧ್ಯತೆ

    ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ವಿಶ್ವಕ್ಕೆ ಮುಂಚೂಣಿಯಲ್ಲಿದೆ, ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಎದುರಿಸಲು, ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ಭಾರತದ ಉಪಕ್ರಮದ ಮೇಲೆ ಸೌರ ಒಕ್ಕೂಟವನ್ನು ರಚಿಸಲಾಯಿತು. ಜಗತ್ತನ್ನು ಉಳಿಸಲು ನಾವು ಬದ್ಧರಾಗಿದ್ದೇವೆ. ಇದಕ್ಕಾಗಿ ಜಗತ್ತಿನ ಎಲ್ಲಾ ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ನಾವು ಶಕ್ತಿಯನ್ನು ಬಳಸುವಾಗ ನಮ್ಮ ಅಗತ್ಯಕ್ಕೆ ಮಾತ್ರ ಬಳಸಬೇಕು. ಭಾರತದಲ್ಲಿ ಆಗುತ್ತಿರುವ ಅಭಿವೃದ್ಧಿಯು ಇಡೀ ಜಗತ್ತಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ ಮಸೂದೆಗೆ ಕ್ಯಾಬಿನೆಟ್‌ ಒಪ್ಪಿಗೆ

    ಈ ಸಂದರ್ಭದಲ್ಲಿ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಮಾತನಾಡಿ, ಇಂದು ಇಡೀ ವಿಶ್ವವೇ ನವೀಕರಿಸಬಹುದಾದ ಇಂಧನಕ್ಕಾಗಿ ಭಾರತದತ್ತ ನೋಡುತ್ತಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಮುಂದಿಟ್ಟಿರುವ ದೂರದೃಷ್ಟಿ. ಗುಜರಾತಿನ ಮುಖ್ಯಮಂತ್ರಿಯಾಗಿ ಮತ್ತು ದೇಶದ ಪ್ರಧಾನಿಯಾಗಿ ಅವರು ಇದರಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ರಾಜ್ಯಗಳು 2030 ರ ವೇಳೆಗೆ 540 ಜಿಡಬ್ಲ್ಯೂ ನವೀಕರಿಸಬಹುದಾದ ಶಕ್ತಿಯ ಗುರಿಯನ್ನು ಹೊಂದಿವೆ. 2030 ರ ವೇಳೆಗೆ ಹಸಿರು ಶಕ್ತಿ ಪರಿವರ್ತನೆಗಾಗಿ ಹಣಕಾಸು ಸಂಸ್ಥೆಗಳು 386 ಶತಕೋಟಿ ಡಾಲರ್ ವಾಗ್ದಾನ ಮಾಡಿವೆ. ಇದರಿಂದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 82 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು. ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನ – ಯುವಕ ಪೊಲೀಸ್ ವಶಕ್ಕೆ

  • ಮೂರನೇ ಮಗು ಜನಿಸಿದ್ದಕ್ಕೆ ಇಬ್ಬರು ಬಿಜೆಪಿ ಕೌನ್ಸಿಲರ್‌ಗಳು ಅನರ್ಹ!

    ಮೂರನೇ ಮಗು ಜನಿಸಿದ್ದಕ್ಕೆ ಇಬ್ಬರು ಬಿಜೆಪಿ ಕೌನ್ಸಿಲರ್‌ಗಳು ಅನರ್ಹ!

    ಗಾಂಧಿನಗರ:‌ ಮೂರನೇ ಮಗು ಜನಿಸಿದ್ದಕ್ಕೆ ಗುಜರಾತ್‌ನ (Gujrat) ಅಮೇಲಿ ಜಿಲ್ಲೆಯ ದಾಮ್‌ನಗರ ನಗರಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರನ್ನು ಅನರ್ಹಗೊಳಿಸಲಾಗಿದೆ.

    ಖೀಮಾ ಕಸೋಟಿಯಾ ಮತ್ತು ಮೇಘನಾ ಬೋಖಾ ಅವರೇ ಅನರ್ಹಗೊಂಡ ಬಿಜೆಪಿ ಸದಸ್ಯರು. ಗುಜರಾತ್ ಮುನ್ಸಿಪಾಲಿಟಿ ಆಕ್ಟ್ 1963 (Gujarat Municipalities Act, 1963) ಅನ್ನು ಉಲ್ಲಂಘಿಸಿ ಮೂರು ಮಕ್ಕಳನ್ನು ಹೊಂದಿದ್ದಕ್ಕಾಗಿ ಅಮ್ರೇಲಿ ಜಿಲ್ಲಾಧಿಕಾರಿ ಅಜಯ್ ದಹಿಯಾ ಅವರ ಕಚೇರಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಆದರೆ ಕೌನ್ಸಿಲರ್‌ಗಳ ಅನರ್ಹತೆ, ನಗರಪಾಲಿಕೆ ಮೇಲಿನ ಬಿಜೆಪಿ ಹಿಡಿತದ ಮೇಲೆ ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಬಿಜೆಪಿಗೆ (BJP) ಅಲ್ಲಿ ಸ್ಪಷ್ಟ ಬಹುಮತ ಇದೆ.

    ಇತ್ತೀಚೆಗೆ ವಜ್ರ ವ್ಯಾಪಾರಿಯೊಬ್ಬರು ಈ ಇಬ್ಬರೂ ಸದಸ್ಯರಿಗೆ ಮೂರನೇ ಮಗುವಾಗಿದೆ ಎಂದು ದೂರು ನೀಡಿದ್ದರು. ಸದ್ಯ ಅಮೇಲಿ ಜಿಲ್ಲಾಧಿಕಾರಿಗೆ ಈ ಇಬ್ಬರ 3ನೇ ಮಗು ಜನಿಸಿದ ಮಾಹಿತಿ ದೊರಕಿದೆ. ಹೀಗಾಗಿ ಇಬ್ಬರನ್ನೂ ಅನರ್ಹ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ನಡುವೆ ತಾವು ಸ್ಪರ್ಧಿಸುವಾಗ ತಮಗೆ ಇಬ್ಬರು ಮಕ್ಕಳಿದ್ದರಷ್ಟೇ. ನಾವು ಆಯ್ಕೆಯಾದ ಬಳಿಕ ಮೂರನೇ ಮಗು ಹುಟ್ಟಿದೆ ಎಂದು ಈ ಇಬ್ಬರು ಸಮಜಾಯಿಸಿ ನೀಡಿದ್ದಾರೆ. ಆದರೆ ಅವರ ವಾದ ತಳ್ಳಿ ಹಾಕಿದ ಜಿಲ್ಲಾಧಿಕಾರಿ, ನಿಯಮದಂತೆ ಅಧಿಕಾರಾವಧಿಯಲ್ಲಿ 3ನೇ ಮಗು ಜನಿಸಿದರೂ ಅನರ್ಹರಾಗುತ್ತಾರೆ ಎಂದು ಹೇಳಿ ಇಬ್ಬರ ಸದಸ್ಯತ್ವವನ್ನೂ ರದ್ದು ಮಾಡಿದ್ದಾರೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ- ಇಬ್ಬರು ಪೊಲೀಸ್‌ ಅಧಿಕಾರಿಗಳ ಅಮಾನತು

    2005-06 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು (Narendra Modi) 1963ರ ಮುನ್ಸಿಪಲ್ ಕಾಯ್ದೆಗೆ ತಿದ್ದುಪಡಿ ಮಾಡಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ಯಾವುದೇ ವ್ಯಕ್ತಿ ಪಂಚಾಯತ್, ಪುರಸಭೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಶನ್‌ ಗಳ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದರು. ಬಳಿಕ ಇನ್ನೊಂದು ತಿದ್ದುಪಡಿ ತಂದು ಅಧಿಕಾರಾವಧಿಯಲ್ಲಿ 3ನೇ ಮಗು ಜನಿಸಿದರೂ ಅನರ್ಹರಾಗಲಿದ್ದಾರೆ ಎಂಬ ನಿಯಮ ಸೇರಿಸಿದ್ದರು.

  • SSLCಯಲ್ಲಿ 99% ಅಂಕ ತೆಗೆದ ವಿದ್ಯಾರ್ಥಿನಿಯ ಮೆದುಳಿನಲ್ಲಿ ರಕ್ತಸ್ರಾವವಾಗಿ ದುರ್ಮರಣ

    SSLCಯಲ್ಲಿ 99% ಅಂಕ ತೆಗೆದ ವಿದ್ಯಾರ್ಥಿನಿಯ ಮೆದುಳಿನಲ್ಲಿ ರಕ್ತಸ್ರಾವವಾಗಿ ದುರ್ಮರಣ

    ಗಾಂಧಿನಗರ: ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯಾದ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ (Brain Hemorrhage) ಸಾವನ್ನಪ್ಪಿದ್ದಾಳೆ.

    ಗುಜರಾತ್ (Gujrat) ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ಬೋರ್ಡ್ (GSEB) ಫಲಿತಾಂಶ ಮೇ 11 ರಂದು ಪ್ರಕಟವಾಗಿದೆ. ಹೀರ್ ಘೆಟಿಯಾ ಎಂಬಾಕೆ 10 ನೇ ತರಗತಿ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ್ದಾಳೆ.

    ಆಕೆಗೆ ಮೆದುಳಿನ ರಕ್ತಸ್ರಾವವಾಗಿದ್ದು, ಒಂದು ತಿಂಗಳ ಹಿಂದೆ ರಾಜ್‌ಕೋಟ್‌ನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಶಸ್ತ್ರಚಿಕಿತ್ಸೆಯ ನಂತರ ಡಿಸ್ಚಾರ್ಜ್ ಕೂಡ ಆಗಿ ಮನೆಗೆ ತೆರಳಿದ್ದಳು. ಆದರೆ ವಾರದ ಹಿಂದೆ ಆಕೆಯಲ್ಲಿ ಮತ್ತೆ ಉಸಿರಾಟ ಮತ್ತು ಹೃದಯದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಯಿತು.

    ಎಂಆರ್‌ಐ ವರದಿಯಲ್ಲಿ 80% ರಿಂದ 90% ರಷ್ಟು ಆಕೆಯ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ತೋರಿಸಿದೆ. ಆಕೆಯ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ ಹೀರ್ ಬುಧವಾರ ನಿಧನರಾದಳು. ಬಳಿಕ ಆಕೆಯ ಕಣ್ಣುಗಳು ಮತ್ತು ಆಕೆಯ ದೇಹವನ್ನು ಪೋಷಕರು ದಾನ ಮಾಡಿದರು. ಇದನ್ನೂ ಓದಿ: ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ, ಕೊಲೆ- ಮೃತ ಪ್ರಭುಧ್ಯಾ ತಾಯಿ ಗಂಭೀರ ಆರೋಪ

    ತಂದೆ ಮಾಧ್ಯಮಗಳ ಜೊತೆ ಮಾತನಾಡಿ, ಹೀರ್ ವೈದ್ಯೆ ಆಗಬೇಕೆಂದು ಬಯಸಿದ್ದಳು. ಆದರೆ ವಿಧಿ ಲಿಖಿತ ಬೇರೆಯೇ ಆಗಿತ್ತು. ಸದ್ಯ ಆಕೆಯ ದೇಹವನ್ನು ದಾನ ಮಾಡಿದ್ದೇವೆ. ಈ ಮೂಲಕ ಅವಳು ವೈದ್ಯನಾಗಲು ಸಾಧ್ಯವಾಗದಿದ್ದರೂ, ಅವಳು ಇತರ ಜೀವಗಳನ್ನು ಉಳಿಸಲು ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಗದ್ಗದಿತರಾದರು.

  • ವೀಡಿಯೋ: ಕಾಲಿನ ಮೂಲಕ ಮತಚಲಾಯಿಸಿ ಮಾದರಿಯಾದ ಯುವಕ!

    ವೀಡಿಯೋ: ಕಾಲಿನ ಮೂಲಕ ಮತಚಲಾಯಿಸಿ ಮಾದರಿಯಾದ ಯುವಕ!

    ಗಾಂಧಿನಗರ: ಏಳು ಹಂತಗಳ ಲೋಕಸಭಾ ಚುನಾವಣೆಯ (Loksabha Elections 2024) ಮೂರನೇ ಹಂತದ ಮತದಾನ ಇಂದು ನಡೆಯುತ್ತಿದೆ. ಗುಜರಾತ್‌ನ ನಾಡಿಯಾಡ್‌ನ ಮತಗಟ್ಟೆಯಲ್ಲಿ ಯುವಕನೊಬ್ಬ ಮತದಾನ ಮಾಡಲು ಆಗಮಿಸಿದ ಸ್ಫೂರ್ತಿಯ ಪ್ರಸಂಗವೊಂದು ಎಲ್ಲರ ಗಮನ ಸೆಳೆದಿದೆ.

    ಯುವಕ ಅಂಕಿತ್‌ ಸೋನಿಯವರು (Ankit Soni) ಮಂಗಳವಾರ ನಡೆದ ಮೂರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಗುಜರಾತ್‌ನ ನಾಡಿಯಾಡ್‌ನ ಮತಗಟ್ಟೆಯಲ್ಲಿ ಕಾಲುಗಳ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ದೇಶಾದ್ಯಂತ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಮತದಾರರು ಹೊರಗೆ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದರು.

    ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಎಲೆಕ್ಟ್ರಿಕ್‌ ಶಾಕ್‌ ನಿಂದ ನನ್ನ ಎರಡೂ ಕೈಗಳನ್ನು ಕಳೆದುಕೊಂಡೆ. ನನ್ನ ಗುರುಗಳು ಮತ್ತು ಶಿಕ್ಷಕರ ಆಶೀರ್ವಾದದಿಂದ ನಾನು ಚಿತ್ರ ಬಿಡಿಸಲು ಪ್ರಾರಂಭಿಸಿದೆ. ನಂತರ ಬರೆಯಲು ಪ್ರಾರಂಭಿಸಿದೆ. ಇದಾದ ಬಳಿಕ ನಾನು ಶಾಲೆಗೆ ಹೋಗಲು ಪ್ರಾರಂಭಿಸಿದೆ. ನಾನು ಶಾಲೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದೆ. ಜೊತೆಗೆ ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ ಮಾಡಿ MBA ಮಾಡಿದೆ. ಕಳೆದ ಹಲವು ವರ್ಷಗಳಿಂದ ನಾನು ಹೀಗೆಯೇ ಮತ ಚಲಾಯಿಸುತ್ತಿದ್ದೇನೆ. ಜನರು ಹೊರಗೆ ಬಂದು ತಮ್ಮ ಅಮೂಲ್ಯವಾದ ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸಂತ್ರಸ್ತೆಯನ್ನು ತೋಟದ ಮನೆಯಿಂದ ರಕ್ಷಿಸಿದ್ದು ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಾರಾ ಮಹೇಶ್

    ಮೂರನೇ ಹಂತದ ಲೋಕಸಭೆ ಚುನಾವಣೆಯು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳಲ್ಲಿ ನಡೆಯುತ್ತಿದೆ.

  • ಅಕ್ರಮವಾಗಿ ನಿರ್ಮಾಣವಾಗಿದ್ದ ದರ್ಗಾ, ದೇಗುಲಗಳನ್ನು ಕೆಡವಿದ ಪೊಲೀಸರು!

    ಅಕ್ರಮವಾಗಿ ನಿರ್ಮಾಣವಾಗಿದ್ದ ದರ್ಗಾ, ದೇಗುಲಗಳನ್ನು ಕೆಡವಿದ ಪೊಲೀಸರು!

    ಗಾಂಧೀನಗರ: ಗುಜರಾತ್‌ನ ಜುನಾಗಢ್‌ನಲ್ಲಿ (Junagadh, Gujrat) ಅಕ್ರಮವಾಗಿ ನಿರ್ಮಿಸಲಾದ ದರ್ಗಾ ಮತ್ತು ಎರಡು ದೇವಾಲಯಗಳನ್ನು (Dargah, Temples) ಪೊಲೀಸರು ನೆಲಸಮಗೊಳಿಸಿದ್ದಾರೆ.

    ಅಕ್ರಮ ಕಟ್ಟಡಗಳ ನೆಲಸಮ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳಲು ತಡರಾತ್ರಿ ಈ ಕ್ರಮ ಕೈಗೊಳ್ಳಲಾಗಿದೆ. ಕೆಡವುವ ವೇಳೆ ಸುಮಾರು 1000 ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ ಗೆ ನಿಯೋಜನೆ ಮಾಡಲಾಗಿತ್ತು.

    ಕಳೆದ ವರ್ಷ ದರ್ಗಾವನ್ನು ಕೆಡವಲು ನೋಟಿಸ್ ನೀಡಲಾಗಿತ್ತು. ಅದರಂತೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದರು. ಈ ವೇಳೆ ಸ್ಥಳೀಯರು ಪ್ರತಿಭಟನೆ ನಡೆಸಿದರು. ಬಳಿಕ ಇದು ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ತೀರ್ಪಿನ ನಂತರ ಶನಿವಾರ ರಾತ್ರಿ ದರ್ಗಾವನ್ನು ಅಕ್ರಮ ಎಂದು ಘೋಷಿಸಿ ಕೆಡವಲಾಯಿತು. ಧ್ವಂಸ ಕಾರ್ಯಾಚರಣೆಯು ಮಧ್ಯರಾತ್ರಿ ಸುಮಾರು 2 ಗಂಟೆಗೆ ಆರಂಭವಾಗಿ, ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಮುಗಿದಿದೆ. ಕಾರ್ಯಾಚರಣೆಯ ಸ್ಥಳದಿಂದ 300-400 ಮೀಟರ್ ದೂರದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು.

    ಕಳೆದ ವರ್ಷ ನಡೆದಿದ್ದೇನು..?: ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರಸ್ತೆ ಮಧ್ಯೆ ನಿರ್ಮಿಸಿರುವ ದರ್ಗಾವನ್ನು ತೆರವುಗೊಳಿಸಲು ಈ ಹಿಂದೆಯೂ ಪ್ರಯತ್ನ ನಡೆಸಲಾಗಿತ್ತು. ಕಳೆದ ವರ್ಷ ಜೂನ್‌ನಲ್ಲಿ ಅಕ್ರಮ ದರ್ಗಾ ಕುರಿತು ಭಾರೀ ಗಲಾಟೆ ನಡೆದಿತ್ತು. ಪೊಲೀಸ್ ತಂಡವು ಕ್ರಮ ಕೈಗೊಳ್ಳಲು ಸ್ಥಳಕ್ಕೆ ತಲುಪಿತ್ತು. ಈ ವೇಳೆ ಸ್ಥಳೀಯ ಜನರು ಪ್ರತಿಭಟನೆಗೆ ಮುಂದಾದರು. ವಾಹನಗಳಿಗೆ ಬೆಂಕಿ ಹಚ್ಚಿದರು. ಇದನ್ನೂ ಓದಿ: ಮಸೀದಿ, ಮದರಸಾಗಳಲ್ಲಿ ಎನ್‍ಐಎ ದಾಳಿ ನಡೆಸಿದ್ರೆ ರಾಮೇಶ್ವರಂ ಕೆಫೆ ಸ್ಫೋಟ ಆರೋಪಿ ಪತ್ತೆಯಾಗಬಹುದು: ಶರಣ್ ಪಂಪ್‍ವೆಲ್

    ಸಂಜೆಯಾಗುತ್ತಿದ್ದಂತೆಯೇ ಸುಮಾರು 200 ರಿಂದ 300 ಸ್ಥಳೀಯ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರು ಅಲ್ಲಿಂದ ತೆರಳಲು ಮುಂದಾದರು. ಈ ವೇಳೆ ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಹಲ್ಲೆ ಮಾಡಿದರು. ಕಲ್ಲು ತೂರಾಟವನ್ನು ಕೂಡ ಮಾಡಿದ ಘಟನೆ ಕೂಡ ನಡೆದಿತ್ತು. ಈ ಘಟನೆಯಲ್ಲಿ ಉಪ ಎಸ್ಪಿ ಹಾಗೂ ಮೂವರು ಪೊಲೀಸರು ಗಾಯಗೊಂಡಿದ್ದರು.

    ಈ ದರ್ಗಾವನ್ನು ಸರಿ ಸುಮಾರು 2 ದಶಕಗಳ ಹಿಂದೆ ನಿರ್ಮಿಸಲಾಗಿತ್ತು. ಇದೀಗ ದರ್ಗಾದ ಜೊತೆಗೆ ಜುನಾಗಢ್‌ನ ವಿವಿಧ ಸ್ಥಳಗಳಲ್ಲಿ ನಿರ್ಮಿಸಲಾದ ಎರಡು ಅಕ್ರಮ ದೇವಾಲಯಗಳನ್ನು ಸಹ ಕೆಡವಲಾಗಿದೆ.

  • ಅನಂತ್‌ ಅಂಬಾನಿ ಕೈಯಲ್ಲಿದ್ದ ವಾಚ್‌ಗೆ ಮನಸೋತ ಜುಕರ್‌ಬರ್ಗ್‌ ದಂಪತಿ!

    ಅನಂತ್‌ ಅಂಬಾನಿ ಕೈಯಲ್ಲಿದ್ದ ವಾಚ್‌ಗೆ ಮನಸೋತ ಜುಕರ್‌ಬರ್ಗ್‌ ದಂಪತಿ!

    ಗಾಂಧೀನಗರ: ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹಪೂರ್ವ ವೈಭವದ ಆಚರಣೆ ಮನೆ ಮಾಡಿದ. ಈ ನಡುವೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ( Meta CEO Mark Zuckerberg) ಮತ್ತು ಪತ್ನಿ ಪ್ರಿಸ್ಸಿಲ್ಲಾ ಚಾನ್ (Priscilla Chan) ಅವರು ಅನಂತ್ ಅಂಬಾನಿಯ ದುಬಾರಿ ಬೆಲೆಯ ವಾಚ್ ಬಗ್ಗೆ ವಿಚಾರಿಸಿರುವುದು ಅತಿಥಿಗಳ ಗಮನವನ್ನು ಸೆಳೆದಿದೆ.

    ಹೌದು. ಮಾರ್ಕ್ ಜುಕರ್‌ಬರ್ಗ್ ತಮ್ಮ ಪತ್ನಿ ಪ್ರಿಸ್ಸಿಲ್ಲಾ ಚಾನ್ ಜೊತೆ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿ ಆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಜುಕರ್‌ಬರ್ಗ್ ಪತ್ನಿ ಪ್ರಿಸ್ಸಿಲ್ಲಾ ಚಾನ್ ಅವರು ಅನಂತ್ ಅಂಬಾನಿ ಅವರ ಕೈಯಲ್ಲಿರುವ ದುಬಾರಿ ವಾಚ್‌ (Watch) ನೋಡಿ ಮಾರುಹೋಗಿದ್ದಾರೆ. ಇದನ್ನೂ ಓದಿ: ಪುತ್ರ ಅನಂತ್ ಪ್ರೀ-ವೆಡ್ಡಿಂಗ್‌ನಲ್ಲಿ ನೀತಾ ಅಂಬಾನಿ ಡ್ಯಾನ್ಸ್

    ವೀಡಿಯೋದಲ್ಲಿ ಏನಿದೆ..?: ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಅವರೊಂದಿಗೆ ವರ ಅನಂತ್ ಅವರು ನಿಂತುಕೊಂಡು ಮಾತನಾಡುತ್ತಿದ್ದರು. ಹೀಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಜುಕರ್‌ ಬರ್ಗ್‌ ಅವರ ಪತ್ನಿಯ ಕಣ್ಣಿಗೆ ಅನಂತ್‌ ಅವರ ವಾಚ್‌ ಬಿದ್ದಿದೆ. ಅಲ್ಲದೆ ಅವರಿಗೆ ತುಂಬಾ ಇಷ್ಟವಾಗುತ್ತೆ. ಹೀಗಾಗಿ ಅವರು ವಾಚ್‌ ತುಂಬಾ ಅದ್ಭುತವಾಗಿದೆ ಎಂದು ಹೇಳುತ್ತಾರೆ. ಈ ವೇಳೆ ಜುಕರ್‌ ಬರ್ಗ್‌ ಅವರು.. ಹೌದು. ತುಂಬಾ ಚೆನ್ನಾಗಿದೆ. ನಾನು ಈಗಾಗಲೇ ಅವರಿಗೆ ಹೇಳಿದೆ ಎನ್ನುತ್ತಾರೆ. ಈ ವೇಳೆ ಪ್ರಿಸಿಲ್ಲಾ, ಈ ವಾಚ್​​ ಅನ್ನು ಯಾವ ಕಂಪನಿ ತಯಾರಿಸಿದೆ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅನಂತ್, ರಿಶಾರ್​ ಮಿಲ್ ಕಂಪನಿ ಎಂದು ಹೇಳಿದ್ದಾರೆ.

    ಅನಂತ್ ಕೈಯಲ್ಲಿದ್ದ ವಾಚ್ ನೋಡಿ ಜುಕರ್​​ಬರ್ಗ್ ಅವರ ಮನಸ್ಸು ಬದಲಾಗಿದೆ. ಹೀಗಾಗಿ ಮಾತು ಮುಂದವರಿಸಿದ ಅವರು, ನಿಮಗೆ ಗೊತ್ತಾ ನಾನು ಎಂದಿಗೂ ವಾಚ್​​ಗಳನ್ನು ಖರೀದಿಸಲು ಬಯಸಲಿಲ್ಲ. ಆದರೆ ಅನಂತ್‌ ಅವರ ಕೈಯಲ್ಲಿದ್ದ ವಾಚ್ ನೋಡಿ ನನ್ನ ಮನಸ್ಸು ಬದಲಾಯಿತು. ವಾಚ್ ಚೆನ್ನಾಗಿ ಕಾಣುತ್ತದೆ ಎಂದಿದ್ದಾರೆ. ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಅಲ್ಲದೆ ಹಲವಾರು ಪರ-ವಿರೋಧ ಕಾಮೆಂಟ್‌ಗಳು ಬರುತ್ತಿವೆ.

    ವಾಚ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಿ: ರಿಶಾರ್​ ಮಿಲ್ (Richard Mille) ಅತ್ಯಂತ ದುಬಾರಿ ವಾಚ್​​ಗಳನ್ನು ತಯಾರಿಸುತ್ತದೆ. ಇದು ಸ್ವಿಜರ್​ಲೆಂಡ್​ನ ಕಂಪನಿ ಆಗಿದೆ. ಅನಂತ್ ಅಂಬಾನಿ ಕೈಯಲ್ಲಿದ್ದ ವಾಚ್​ ಬೆಲೆ ಬರೋಬ್ಬರಿ 14 ಕೋಟಿ ರೂಪಾಯಿ ಎನ್ನಲಾಗಿದೆ.

  • ಹರಾನಿ ಸರೋವರದಲ್ಲಿ ದೋಣಿ ಮುಳುಗಿ 9 ಮಕ್ಕಳು ಸೇರಿ 12 ಮಂದಿ ದಾರುಣ ಸಾವು

    ಹರಾನಿ ಸರೋವರದಲ್ಲಿ ದೋಣಿ ಮುಳುಗಿ 9 ಮಕ್ಕಳು ಸೇರಿ 12 ಮಂದಿ ದಾರುಣ ಸಾವು

    – ಮೃತರ ಕುಟುಂಬಸ್ಥರಿಗೆ PMNRFನಿಂದ ತಲಾ 2 ಲಕ್ಷ ಪರಿಹಾರ
    – ರಾಜ್ಯ ಸರ್ಕಾರದಿಂದ ಮೃತ ಕುಟುಂಬಗಳಿಗೆ ತಲಾ ರೂ. 4 ಲಕ್ಷ

    ಗಾಂಧೀನಗರ: ಗುಜರಾತ್‌ನ ವಡೋದರದ (Gujrat Vadodara) ಹರಾನಿ ಸರೋವರದಲ್ಲಿ (Harani Lake) ದೋಣಿ ಮುಳುಗಿ 9 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ.

    ಅಧಿಕಾರಿಗಳ ಪ್ರಕಾರ, ವಿಹಾರಕ್ಕೆಂದು ತೆರಳಿದ್ದ ದೋಣಿಯಲ್ಲಿ (Boat) 23 ಮಕ್ಕಳು ಮತ್ತು ನಾಲ್ವರು ಶಿಕ್ಷಕರು ಇದ್ದರು. ಘಟನೆ ನಡೆದ ಕೂಡಲೇ ಸ್ಥಳಕ್ಕೆ ರಕ್ಷಣಾ ತಂಡ ದೌಡಾಯಿಸಿ ಕೆರೆಯಿಂದ ಐವರು ಮಕ್ಕಳನ್ನು ರಕ್ಷಣೆ ಮಾಡಿದೆ. ಉಳಿದ ವಿದ್ಯಾರ್ಥಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ವಡೋದರಾದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಾರ್ಥ್ ಬ್ರಹ್ಮಭಟ್ ಅವರು, ವಿಹಾರಕ್ಕೆಂದು ಬಂದಿದ್ದ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಹರಾನಿ ಸರೋವರದಲ್ಲಿ ಮಗುಚಿ ಬಿದ್ದಿದೆ. ಅಗ್ನಿಶಾಮಕ ದಳವು ಇದುವರೆಗೆ 7 ವಿದ್ಯಾರ್ಥಿಗಳನ್ನು ರಕ್ಷಿಸಿದೆ, ನಾಪತ್ತೆಯಾದವರಿಗಾಗಿ ಶೋಧ ನಡೆಯುತ್ತಿದೆ. ಅಲ್ಲದೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವ ಮೊದಲೇ ಸ್ಥಳೀಯರು ಕೆಲವು ಮಕ್ಕಳನ್ನು ರಕ್ಷಿಸಿದ್ದಾರೆ ಎಂದು ಹೇಳಿದರು.

    PMNRFನಿಂದ ಪರಿಹಾರ: ವಡೋದರದ ಹರಾನಿ ಸರೋವರದಲ್ಲಿ ದೋಣಿ ಮುಳುಗಿ ಆಗಿರುವ ಜೀವಹಾನಿಯಿಂದ ನೊಂದಿದ್ದೇನೆ. ಈ ದುಃಖದ ಸಮಯದಲ್ಲಿ ಮೃತರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಸ್ಥಳೀಯಾಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬದವರಿಗೆ ತಲಾ 2 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುತ್ತದೆ. ಗಾಯಾಳುಗಳಿಗೆ ರೂ. 50,000 ನೀಡಲಾಗುವುದು ಎಂದು PMO ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

    ಈ ದುರಂತ ಘಟನೆಯ ನಂತರ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಸಂತಾಪ ವ್ಯಕ್ತಪಡಿಸಿದ್ದಾರೆ. ವಡೋದರದ ಹರನಿ ಸರೋವರದಲ್ಲಿ ನಡೆದ ಅವಘಡ ಅತ್ಯಂತ ಹೃದಯ ವಿದ್ರಾವಕವಾಗಿದೆ. ಪ್ರಾಣ ಕಳೆದುಕೊಂಡ ಅಮಾಯಕ ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಈ ಸಮಯದಲ್ಲಿ ಅವರ ಕುಟುಂಬಕ್ಕೆ ದುಃಖಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಆಶಿಸುತ್ತೇನೆ.  ಅವಘಡದಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ರೂ. 4 ಲಕ್ಷ ಹಾಗೂ ಗಾಯಗೊಂಡವರಿಗೆ ರೂ. 50,000 ಪರಿಹಾರ ನೀಡುತ್ತದೆ  ಎಂದು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  • ಗುಜರಾತ್‌ನಿಂದ ಅಯೋಧ್ಯೆಗೆ ಆಗಮಿಸಿದೆ 500 ಕೆಜಿಯ ಬೃಹತ್ ನಗಾರಿ

    ಗುಜರಾತ್‌ನಿಂದ ಅಯೋಧ್ಯೆಗೆ ಆಗಮಿಸಿದೆ 500 ಕೆಜಿಯ ಬೃಹತ್ ನಗಾರಿ

    ಅಯೋಧ್ಯೆ: ಜನವರಿ 22 ರಂದು ನಡೆಯಲಿರುವ ರಾಮ ಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮುನ್ನ ಗುಜರಾತ್‌ನಿಂದ 500 ಕೆಜಿ ತೂಕದ ಬೃಹತ್ ನಗಾರಿಯು (Nagada) ವಿಶೇಷ ರಥದಲ್ಲಿ ಆಗಮಿಸಿದೆ.

    ಗುರುವಾರ ಅಯೋಧ್ಯೆಗೆ ಆಗಮಿಸಿರುವ ಈ ನಗಾರಿಯನ್ನು ರಾಮಮಂದಿರ ಆವರಣದಲ್ಲಿ ಅಳವಡಿಸಲಾಗುವುದು. ಗುಜರಾತಿನ ಕರ್ಣಾವತಿಯ ದರ್ಯಾಪುರ ವಿಸ್ತರಣೆಯಲ್ಲಿರುವ ದಬ್ಗರ್ ಸಮುದಾಯದವರು ಇದನ್ನು ರೆಡಿ ಮಾಡಿದ್ದಾರೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.

    ಸೂರ್ಯನ ಬೆಳಕು ಮತ್ತು ಮಳೆಗೆ ಹಾನಿಯಾಗದಂತೆ ಅದನ್ನು ತಡೆದುಕೊಳ್ಳಲು ಸಿದ್ಧಪಡಿಸಲಾಗಿದೆ. ಇದನ್ನು ಕಬ್ಬಿಣ ಮತ್ತು ತಾಮ್ರದ ಫಲಕಗಳನ್ನು ಬಳಸಿ ಮಾಡಲಾಗಿದ್ದು, ಇದರ ಮೇಲೆ ಚಿನ್ನ ಮತ್ತು ಬೆಳ್ಳಿಯನ್ನು ಲೇಪಿಸಲಾಗಿದೆ. ಇದರ ಸೌಂಡ್‌ ಕಿಲೋಮೀಟರ್ ದೂರದವರೆಗೂ ಕೇಳಿಸುತ್ತದೆ.

    ಗುಜರಾತ್ ವಿಶ್ವ ಹಿಂದೂ ಪರಿಷತ್ ನಾಯಕರೊಬ್ಬರು ದೇವಸ್ಥಾನದ ಟ್ರಸ್ಟ್‌ಗೆ ಪತ್ರವನ್ನು ಕಳುಹಿಸಿದ ನಂತರ ಮುಂಬರುವ ಆಚರಣೆಗಳ ಭಾಗವಾಗಿ ಇದನ್ನು ಸ್ವೀಕರಿಸಲು ವಿನಂತಿಸಲಾಯಿತು. ಇದನ್ನೂ ಓದಿ: ಸಿದ್ಧವಾಗಿದೆ 3 ಲಕ್ಷ ರಾಮ ಧ್ವಜ – ದಕ್ಷಿಣದ 4 ರಾಜ್ಯಗಳಿಂದ ಆರ್ಡರ್‌

    ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ನಾಯಕರ ಸಮ್ಮುಖದಲ್ಲಿ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ . ಸಮಾರಂಭಕ್ಕೆ ದೇಶಾದ್ಯಂತದ ಸಾವಿರಾರು ಮಂದಿಯನ್ನು ಆಹ್ವಾನಿಸಲಾಗಿದೆ. ಈ ಆಹ್ವಾನಿತರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದ ಕಾರ್ಮಿಕರ ಕುಟುಂಬಗಳೂ ಸೇರಿವೆ ಎನ್ನಲಾಗಿದೆ.‌

    ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು, ಕೈಗಾರಿಕೋದ್ಯಮಿಗಳು ಸೇರಿದಂತೆ ಸುಮಾರು 7,000 ಕ್ಕೂ ಹೆಚ್ಚು ಜನರು ದೇವಸ್ಥಾನದ ಟ್ರಸ್ಟ್, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.

  • SORRY ಕೇಳುವಂತೆ ಯುವಕನ ಬಾಯಿಗೆ ಚಪ್ಪಲಿ ತುರುಕಿ ಹಲ್ಲೆಗೈದ ಮಹಿಳಾ ಉದ್ಯಮಿ & ಟೀಂ!

    SORRY ಕೇಳುವಂತೆ ಯುವಕನ ಬಾಯಿಗೆ ಚಪ್ಪಲಿ ತುರುಕಿ ಹಲ್ಲೆಗೈದ ಮಹಿಳಾ ಉದ್ಯಮಿ & ಟೀಂ!

    ಗಾಂಧಿನಗರ: ದಲಿತ ಯುವಕನ ಮೇಲೆ ಹಲ್ಲೆ ಹಾಗೂ ಆತನ ಬಾಯಿಗೆ ಚಪ್ಪಲಿ ತುರುಕಿದ ಆರೋಪದ ಮೇಲೆ ಮಹಿಳಾ ಉದ್ಯಮಿ (Woman Businessman) ಜೊತೆ 6 ಮಂದಿಯ ವಿರುದ್ಧ ಗುಜರಾತ್‍ನ (Gujrat) ಮೊರ್ಬಿ ನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕೃತ್ಯ ಎಸಗಿದ ಮಹಿಳಾ ಉದ್ಯಮಿಯನ್ನು ವಿಭೂತಿ ಪಟೇಲ್ ಅಕಾ ರಾಣಿಬಾ ಎಂದು ಗುರುತಿಸಲಾಗಿದೆ. ಈ ಸಂಬಂಧ ಸಂತ್ರಸ್ತ ನಿಲೇಶ್ ದಲ್ಸಾನಿಯಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಮೊರ್ಬಿ ನಗರದ ಪೊಲೀಸರು ಇಂದು ಮಹಿಳೆ ವಿಭೂತಿ ಪಟೇಲ್ ಅಕಾ ರಾಣಿಬಾ ಮತ್ತು ಆಕೆಯ ಸಹೋದರ ಓಂ ಪಟೇಲ್ ಮತ್ತು ಮ್ಯಾನೇಜರ್ ಸೇರಿದಂತೆ ಇತರರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಸಿ/ಎಸ್‍ಟಿ ಸೆಲ್) ಪ್ರತಿಪಾಲ್‍ಸಿನ್ಹ್ ಝಾಲಾ ಹೇಳಿದರು.

    ವಿಭೂತಿ ಪಟೇಲ್ ಅಕಾ ರಾಣಿಬಾ ಕಂಪನಿಯಲ್ಲಿ 21 ವರ್ಷದ ದಲಿತ ಯುವಕ 15 ದಿನ ಕೆಲಸ ಮಾಡಿದ್ದನು. ಅಂತೆಯೇ ಆತ ಸಂಬಳಕ್ಕೆ ಬೇಡಿಕೆ ಇಟ್ಟಿದ್ದಕ್ಕಾಗಿ ಮಹಿಳಾ ಉದ್ಯಮಿಯು ಯುವಕನ ಬಾಯಿಗೆ ತುರುಕಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾಳೆ. ಈ ಘಟನೆ ಬುಧವಾರ ನಡೆದಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: 4 ತಿಂಗಳ ಪುಟ್ಟ ಕಂದಮ್ಮನಿಗೆ ಹಾಲುಣಿಸಿ ಸಂತೈಸಿದ ಮಹಿಳಾ ಪೊಲೀಸ್: ಭಾರೀ ಮೆಚ್ಚುಗೆ

    ದೂರಿನಲ್ಲೇನಿದೆ..?: ಕಳೆದ ಅಕ್ಟೋಬರ್‍ನಲ್ಲಿ ರಾಣಿ ಬಾ ಅವರು ತಮ್ಮ ಸಂಸ್ಥೆಗೆ ನಿಲೇಶ್ ದಲ್ಸಾನಿಯಾನನ್ನು ನೇಮಕ ಮಾಡಿಕೊಂಡಿದ್ದರು. ಅಂತೆಯೇ ಟೈಲ್ಸ್ ಮಾರ್ಕೆಟಿಂಗ್ ಕೆಲಸಕ್ಕಾಗಿ ನಿಲೇಶ್‍ನನ್ನು ನಿಯೋಜಿಸಲಾಗಿತ್ತು. ಆತನಿಗೆ 12 ಸಾವಿರ ರೂಪಾಯಿ ಸಂಬಳ ಕೊಡೋದಾಗಿ ಹೇಳಲಾಗಿತ್ತು. ಆದರೆ ಸಂಬಳವನ್ನೇ ಕೊಟ್ಟಿರಲಿಲ್ಲ ಎಂದು ಎಫ್‍ಐಆರ್ ನಲ್ಲಿ ವಿವರಿಸಲಾಗಿದೆ.

    ಅಕ್ಟೋಬರ್ ಅಂತ್ಯದ ವೇಳೆಗೆ ನಿಲೇಶ್‍ನನ್ನು ಇದ್ದಕ್ಕಿದ್ದಂತೆಯೇ ಕೆಲಸದಿಂದ ಕಿತ್ತು ಹಾಕಿದ್ದರು. ಹೀಗಾಗಿ 16 ದಿನ ಕೆಲಸ ಮಾಡಿದ್ದು, ಅಷ್ಟು ದಿನಗಳ ವೇತನವನ್ನಾದರೂ ಕೊಡಿ ಎಂದು ನಿಲೇಶ್ ದಲ್ಸಾನಿಯಾ ಬೇಡಿಕೆ ಇಟ್ಟಿದ್ದರು. ಆದರೆ ಯುವಕ ಬೇಡಿಕೆಗೆ ರಾಣಿ ಬಾ ಕ್ಯಾರೇ ಎಂದಿಲ್ಲ. ಆತನ ಫೋನ್ ಕರೆಗಳನ್ನೂ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಬೇಸತ್ತ ನಿಲೇಶ್ ದಲ್ಸಾನಿಯಾ ತಮ್ಮ ಸಹೋದರ ಮೇಹುಲ್ ಹಾಗೂ ನೆರೆ ಮನೆಯ ಭಾವೇಶ್ ಎಂಬಾತನ ಜೊತೆಗೆ ಕಳೆದ ಬುಧವಾರ ರಾಣಿಬಾ ಅವರ ಕಚೇರಿಗೆ ತೆರಳಿದ್ದ. ತಮ್ಮ ಸಂಬಳ ಕೊಡಿ ಎಂದು ಬೇಡಿಕೆ ಇಟ್ಟ. ಈ ವೇಳೆ ರಾಣಿಬಾ ತಮ್ಮ ಸಹೋದರ ಓಂ ಪಟೇಲ್ ಕರೆ ಮಾಡಿದರು.

    ಆರೋಪಿ ಮಹಿಳಾ ಉದ್ಯಮಿ ರಾಣಿಬಾ, ಆಕೆಯ ಸಹೋದರ ಓಂ ಪಟೇಲ್, ಕಂಪನಿಯ ಮ್ಯಾನೇಜರ್ ಹಾಗೂ ಇತರ ಕಾರ್ಮಿಕರು ಸೇರಿಕೊಂಡು ಮೂವರಿಗೂ ಥಳಿಸಿದರು. ಕೊನೆಗೆ ನಿಲೇಶ್ ದಲ್ಸಾನಿಯಾ ಬಾಯಿಗೆ ತನ್ನ ಚಪ್ಪಲಿ ತಿರುಕಿದ ರಾಣಿಬಾ ಕ್ಷಮೆ ಕೇಳುವಂತೆ ಆಗ್ರಹಿಸಿದರು. ಇಷ್ಟು ಮಾತ್ರವಲ್ಲದೆ ಮೂವರನ್ನೂ ತಮ್ಮ ವಾಣಿಜ್ಯ ಕಟ್ಟಡದ ಟೆರೇಸ್‍ಗೆ ಎಳೆದೊಯ್ದು ಅಲ್ಲಿಯೂ ಹಿಗ್ಗಾಮುಗ್ಗ ಥಳಿಸಿದರು ಎಂದು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ಈ ಹಿನ್ನೆಲೆಯಲ್ಲಿ ಇದೀಗ ಆರು ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.

  • ರಾಜ್ಯಸಭಾ ಚುನಾವಣೆಗೆ ಜೈಶಂಕರ್ ನಾಮಪತ್ರ ಸಲ್ಲಿಕೆ

    ರಾಜ್ಯಸಭಾ ಚುನಾವಣೆಗೆ ಜೈಶಂಕರ್ ನಾಮಪತ್ರ ಸಲ್ಲಿಕೆ

    ಗಾಂಧೀನಗರ: ವಿದೇಶಾಂಗ ಸಚಿವ ಎಸ್ ಜೈಶಂಕರ್ (Jai Shankar) ಅವರು ಸೋಮವಾರ (ಇಂದು) ರಾಜ್ಯಸಭಾ ಚುನಾವಣೆಗೆ (Elections to the Rajya Sabha from Gujarat.) ನಾಮಪತ್ರ ಸಲ್ಲಿಸಿದ್ದಾರೆ.

    ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಮತ್ತು ಬಿಜೆಪಿ ಗುಜರಾತ್ ಘಟಕದ ಅಧ್ಯಕ್ಷ ಸಿ ಆರ್ ಪಾಟೀಲ್ (C. R Pateel) ಅವರು ಜೈಶಂಕರ್ ಅವರೊಂದಿಗೆ ರಾಜ್ಯ ವಿಧಾನಸಭೆ ಸಂಕೀರ್ಣಕ್ಕೆ ತೆರಳಿ ಚುನಾವಣಾಧಿಕಾರಿ ರೀಟಾ ಮೆಹ್ತಾ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.

    ಗೋವಾ, ಗುಜರಾತ್ ಮತ್ತು ಪಶ್ಚಿಮ ಬಂಗಾಳದ (West Bengal) 10 ಸ್ಥಾನಕ್ಕೆ ಜುಲೈ 24 ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜುಲೈ 13 ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಜುಲೈ 17ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಇದನ್ನೂ ಓದಿ: ವಿಮಾನ ನಿಲ್ದಾಣಗಳಿಗೆ ಹೆಚ್ಚಿನ ಭದ್ರತೆ – ಅತ್ಯಾಧುನಿಕ ಸ್ಕ್ಯಾನರ್ ಖರೀದಿಗೆ ಕೇಂದ್ರ ನಿರ್ಧಾರ

    ಗುಜರಾತ್‍ನ 11 ರಾಜ್ಯಸಭಾ ಸ್ಥಾನಗಳ ಪೈಕಿ ಬಿಜೆಪಿ 8 ಸ್ಥಾನಗಳನ್ನು ಹೊಂದಿದೆ. ಉಳಿದ ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ. ಬಿಜೆಪಿ ಹೊಂದಿರುವ 8 ಸ್ಥಾನಗಳ ಪೈಕಿ ಜೈಶಂಕರ್, ಜುಗಲ್ಜಿ ಠಾಕೋರ್ ಮತ್ತು ದಿನೇಶ್ ಅನವಾಡಿಯಾ ಅವರ ರಾಜ್ಯಸಭಾ ಅವಧಿಯು ಆಗಸ್ಟ್ 18 ರಂದು ಮುಕ್ತಾಯಗೊಳ್ಳಲಿದೆ. ಈ ಮೂರು ಸ್ಥಾನಗಳಿಗೆ ಪ್ರಸ್ತುತ ಚುನಾವಣೆ ನಡೆಯಲಿದೆ.

    2022ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 182ರಲ್ಲಿ 156 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿತ್ತು. ಕಾಂಗ್ರೆಸ್ 17 ಸ್ಥಾನಗಳನ್ನು ಪಡೆದುಕೊಂಡರೆ, ಆಪ್ ಕೇವಲ 5 ಸ್ಥಾನಗಳನ್ನು ಪಡೆದುಕೊಂಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]