Tag: gujarat

  • ವಿಡಿಯೋ: ಪ್ರಧಾನಿ ಮೋದಿಯ ಕಾರು ನಿಲ್ಲಿಸಿದ್ಳು 4 ವರ್ಷದ ಪೋರಿ

    ವಿಡಿಯೋ: ಪ್ರಧಾನಿ ಮೋದಿಯ ಕಾರು ನಿಲ್ಲಿಸಿದ್ಳು 4 ವರ್ಷದ ಪೋರಿ

    ಸೂರತ್: 4 ವರ್ಷದ ಪುಟ್ಟ ಬಾಲಕಿಯೊಬ್ಬಳು ಇಂದು ಪ್ರಧಾನಿ ಮೋದಿ ಅವರ ಕಾರನ್ನೇ ನಿಲ್ಲುವಂತೆ ಮಾಡಿದ್ದಾಳೆ.

    ಹೌದು. ಎರಡು ದಿನಗಳ ಗುಜರಾತ್ ಭೇಟಿಯ ಭಾಗವಾಗಿ ಇಂದು ಮೋದಿ ಸೂರತ್‍ನಲ್ಲಿದ್ದರು. ಮೋದಿ ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಅವರನ್ನು ನೋಡಲು ಅಲ್ಲಿ ಜನಸಾಗರವೇ ನೆರೆದಿತ್ತು. ಈ ವೇಳೆ ಜನರ ಮಧ್ಯದಿಂದ ಪುಟ್ಟ ಬಾಲಕಿಯೊಬ್ಬಳು ಮೋದಿ ಅವರ ಕಾರಿನ ಬಳಿ ಓಡಿ ಬಂದಳು. ತಕ್ಷಣ ಅಲ್ಲಿದ್ದ ಕಮಾಂಡೋಗಳು ಏನು ಮಾಡಬೇಕು ಎಂದು ತಿಳಿಯದೆ ಒಂದು ಸೆಕೆಂಡ್ ಗೊಂದಲಕ್ಕೀಡಾದ್ರು. ಆದ್ರೂ ಭದ್ರತಾ ದೃಷ್ಟಿಯಿಂದ ಬಾಲಕಿಯನ್ನ ತಡೆದು ಹಿಂದಕ್ಕೆ ಹೋಗುವಂತೆ ಸೂಚಸಿದ್ರು.

    ಇದನ್ನ ನೋಡ್ತಿದ್ದ ಪ್ರಧಾನಿ ಮೋದಿ ಕಾರನ್ನು ನಿಲ್ಲಿಸಿ ಆ ಬಾಲಕಿಯನ್ನ ಕರೆದುಕೊಂಡು ಬರುವಂತೆ ಹೇಳಿದ್ರು. ಕಮಾಂಡೋಗಳು ಬಾಲಕಿಯನ್ನ ಕಾರಿನೊಳಗೆ ಕರೆದುಕೊಂಡು ಹೋಗಿದ್ದು, ಮೋದಿ ಆ ಬಾಲಕಿಯನ್ನ ಎತ್ತಿಕೊಂಡು ನಗುತ್ತಾ ಮಾತನಾಡಿಸಿ ಕಳಿಸಿದ್ದಾರೆ. 4 ವರ್ಷದ ಬಾಲಕಿಯ ಹೆಸರು ನ್ಯಾನ್ಸಿ ಎಂದು ತಿಳಿದುಬಂದಿದೆ. ಬಾಲಕಿ ತನ್ನ ಪುಟ್ಟ ಕೈಗೆ ಧರಿಸಿದ್ದ ವಾಚ್ ತೋರಿಸಿ “ಟೈಂ ಎಷ್ಟು” ಎಂದು ಮೋದಿ ಕೇಳಿದ್ರಂತೆ. ಈ ವೇಳೆ ಅಲ್ಲಿದ್ದ ಜನ ಮಗುವಿನೊಂದಿಗೆ ಮೋದಿಯ ಸಂಭಾಷಣೆ ನೋಡಿ ಮೋದಿ… ಮೋದಿ… ಎಂದು ಜೈಕಾರ ಹಾಕಿದ್ರು.

    ಭಾನುವಾರದಂದು ಸೂರತ್‍ಗೆ ಆಗಮಿಸಿದ ಮೋದಿ ಬೃಹತ್ ರೋಡ್ ಶೋ ನಡೆಸಿದ್ರು. ವಿಮಾನ ನಿಲ್ದಾಣದಿಂದ ನಗರಕ್ಕೆ ಹೋಗುವ ಮಾರ್ಗದಲ್ಲಿ 10 ಸಾವಿರ ಬೈಕ್‍ಗಳ ಮೆರವಣಿಗೆ, ದೊಡ್ಡ ಟಿವಿ ಪರದೆಗಳು ಹಾಗೂ ವಿದ್ಯುತ್ ದೀಪಗಳ ಮಧ್ಯೆ ಮೋದಿ ಎಸ್‍ಯುವಿಯಲ್ಲಿ ನಿಂತು ಜನರತ್ತ ಕೈ ಬೀಸುತ್ತಾ ಸುಮಾರು 2 ಗಂಟೆಗಳ ರೋಡ್ ಶೋನಲ್ಲಿ ಭಾಗಿಯಾಗಿದ್ರು.

  • ಗುಜರಾತ್‍ನಲ್ಲಿ ಇನ್ಮುಂದೆ ಗೋಹತ್ಯೆಗೆ ಜೀವಾವಧಿ ಶಿಕ್ಷೆ

    ಗುಜರಾತ್‍ನಲ್ಲಿ ಇನ್ಮುಂದೆ ಗೋಹತ್ಯೆಗೆ ಜೀವಾವಧಿ ಶಿಕ್ಷೆ

    ಅಹಮದಾಬಾದ್: ಗುಜರಾತ್‍ನಲ್ಲಿ ಗೋಹತ್ಯೆಗೆ ಇದ್ದ ಶಿಕ್ಷೆಯನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಗೋಹತ್ಯೆಗೆ ಜೀವಾವಧಿ ಶಿಕ್ಷೆ ನೀಡುವಂತೆ ತಿದ್ದುಪಡಿ ಮಸೂದೆಯನ್ನು ಇಂದು ಗುಜರಾತ್ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಮೂಲಕ ಗುಜರಾತ್ ಗೋಹತ್ಯೆಗೆ ದೇಶದಲ್ಲೇ ಅತ್ಯಂತ ಕಠಿಣ ಶಿಕ್ಷೆ ನೀಡುವ ರಾಜ್ಯವಾಗಿದೆ.

    1954ರ ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಗೋವುಗಳ ಅಕ್ರಮ ಸಾಗಣೆಗೆ 10 ವರ್ಷ ಜೈಲು ಶಿಕ್ಷೆ ಇತ್ತು. 2011ರಲ್ಲಿ ಇದಕ್ಕೆ ತಿದ್ದುಪಡಿ ತಂದು ಗೋಹತ್ಯೆ ಅಪರಾಧಕ್ಕೆ ಕನಿಷ್ಠ 3 ವರ್ಷ, ಗರಿಷ್ಠ 7 ವರ್ಷಗಳ ಶಿಕ್ಷೆ ಹಾಗೂ 50 ಸಾವಿರ ರೂ. ದಂಡವನ್ನು ನಿಗದಿಪಡಿಸಲಾಗಿತ್ತು.

    ಆದರೆ ಇನ್ಮುಂದೆ ಗೋಹತ್ಯೆಗೆ ಜೀವಾವಧಿ ಶಿಕ್ಷೆ ವಿಧಿಸಲು ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ಅಲ್ಲದೆ ಗೋಮಾಂಸ ಹೊಂದಿದವರು ಸಿಕ್ಕಿಬಿದ್ದರೆ 1 ಲಕ್ಷ ರೂ. ನಿಂದ 5 ಲಕ್ಷ ರೂ.ವರೆಗೆ ದಂಡ ಹಾಗೂ 10 ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ. ಹಾಗೂ ಇದು ಜಾಮೀನು ರಹಿತ ಅಪರಾಧವೆಂದು ಪರಿಗಣಿಸಲಾಗುತ್ತದೆ.

    ಕಳೆದ ಕೆಲವು ವಾರಗಳಿಂದ ಮುಖ್ಯಮಂತ್ರಿ ವಿಜಯ್ ರೂಪಾನಿ, ಗೋವುಗಳ ಸಂರಕ್ಷಣೆಗೆ ಕಠಿಣ ಕಾನೂನು ತರಬೇಕೆಂದು ಮಾತನಾಡಿದ್ದರು.

    2011ರಲ್ಲಿ ನರೇಂದ್ರ ಮೋದಿ ಅಧಿಕಾರಿದಲ್ಲಿದ್ದಾಗ ಗುಜರಾತ್‍ನಲ್ಲಿ ಗೋವುಗಳ ಕಳ್ಳಸಾಗಣೆ ಮತ್ತು ಗೋಹತ್ಯೆಯನ್ನು ನಿಷೇಧಿಸಲಾಗಿತ್ತು.