Tag: gujarat result

  • ಮತಎಣಿಕೆಗೆ 1 ಗಂಟೆ ಮುನ್ನವೇ ಸಿದ್ದರಾಮಯ್ಯ ಹೇಳಿದ್ರು ಗುಜರಾತ್ ಫಲಿತಾಂಶದ `ಲೆಕ್ಕಾಚಾರ’

    ಮತಎಣಿಕೆಗೆ 1 ಗಂಟೆ ಮುನ್ನವೇ ಸಿದ್ದರಾಮಯ್ಯ ಹೇಳಿದ್ರು ಗುಜರಾತ್ ಫಲಿತಾಂಶದ `ಲೆಕ್ಕಾಚಾರ’

    ಬೆಂಗಳೂರು: ಗುಜರಾತ್‍ನಲ್ಲಿ ಕಾಂಗ್ರೆಸ್ ಸೋತರೂ ಸಿಎಂ ಮೊಗದಲ್ಲಿ ಮಂದಹಾಸ ಮೂಡಿತ್ತು. ಕಾಂಗ್ರೆಸ್ ಸೋತರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಕ್ಕಿದ್ದೇಕೆ ಗೊತ್ತಾ? ಸಿದ್ದರಾಮಯ್ಯ ನಗುವಿಗೂ ಗುಜರಾತ್ ಫಲಿತಾಂಶಕ್ಕೂ ಸಂಬಂಧವಿದೆ.

    ಮತ ಎಣಿಕೆಗೆ ಒಂದು ಗಂಟೆ ಮುನ್ನವೇ ಸಿದ್ದರಾಮಯ್ಯ ಫಲಿತಾಂಶದ `ಲೆಕ್ಕಾಚಾರ’ ಹೇಳಿದ್ರು. ಆಪ್ತರ ಬಳಿ ಸಿಎಂ ಸಿದ್ದರಾಮಯ್ಯ ಗುಜರಾತ್ ಫಲಿತಾಂಶದ ಕುರಿತು ಏನು ಹೇಳಿಕೊಂಡಿದ್ರು ಅನ್ನೋ ಬಗ್ಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಸಿಎಂ ಹೇಳಿದಂತೆಯೇ ಗುಜರಾತ್ ಫಲಿತಾಂಶ ಬಂದಿರೋದು ಸಿದ್ದರಾಮಯ್ಯ ಮಂದಹಾಸದ ಮರ್ಮ.

    ದಿನಾಂಕ: 18-12-2017, ಸಮಯ: ಬೆಳಗ್ಗೆ 7 ಗಂಟೆ, ಸ್ಥಳ: ಸಿಎಂ ನಿವಾಸ

    ಸಿಎಂ ಸಿದ್ದರಾಮಯ್ಯ: ಎಷ್ಟು ಬಂದದೋ ಗುಜರಾತ್‍ನಲ್ಲಿ.. ಏನ್ ನೂರು ದಾಟಬಿಟ್ಟಾರಾ..?
    ಆಪ್ತ1: ಅಯ್ಯೋ.. ಎಲ್ಲಾ ನೂರಿಪ್ಪತ್ತು ಅಂತಾರಲ್ಲಣ್ಣೋ..?
    ಸಿಎಂ ಸಿದ್ದರಾಮಯ್ಯ: ಅಯ್ಯಾ.. ಏನ್ ಹೇಳ್‍ಬಿಟ್ ತಕ್ಷಣ.. ಆಗ್ಬುಟ್ಟದಾ.. ಮಿಸಿನ್ ಓಪನ್ ಮಾಡುದ್ರೆ ತಾನೆ ಗೊತ್ತಾಗೋದಾ..
    ಆಪ್ತ2: ಅದು ಸರೀನೆ.. ಸಮೀಕ್ಷೆಗಳು ನಿಜ ಆಗಲ್ಲ.. 10 ಗಂಟೆಗೆ ಎಲ್ಲಾ ಗೊತ್ತಾಗ್ದಣ್ಣೋ
    ಸಿಎಂ ಸಿದ್ದರಾಮಯ್ಯ: ನೂರು ಒಳಗೆ ಬಿಜೆಪಿದು ಬರ್ಲಿ.. ಇಲ್ಲಿ ನೋಡೋಣಾ
    ಸಿಎಂ ಸಿದ್ದರಾಮಯ್ಯ: ಗುಜರಾತ್‍ನಲ್ಲಿ 80 ಸೀಟ್ ಬಂದ್ರೂ ಸಾಕು ನಮ್ಗೆ.. ಇಲ್ಲಿ ನಾವು ಗೆದ್ದಂಗೆ.. ಶಾ ಬಂದ್ರೂ ಆಗಲ್ಲ… ಮೋದಿ ಬಂದ್ರೂ ಆಗಲ್ಲ ಬುಡ್ರಲಾ..
    ಆಪ್ತ1: ಅವರು ಅಂಗೆ ಅಂತಾರೆ.. ಬಿಜೆಪಿಯವರೇ ಕಷ್ಟ ಅಂತಾ.. ನಾವು ಏನು ಹೆದ್ರಂಗೆ ಇಲ್ಲ ಬುಡಣ್ಣೋ…

    ಸಿಎಂ ಸಿದ್ದರಾಮಯ್ಯ ಅಂದಾಜಿಸಿದಂತೆಯೇ ಗುಜರಾತ್‍ನಲ್ಲಿ ಬಿಜೆಪಿ ನೂರರೊಳಗೆ ನಿಲ್ತು. ಕಾಂಗ್ರೆಸ್ 80ರ ಆಜುಬಾಜು ಬಂದು ನಿಲ್ತು. ಹೀಗಾಗಿ ಸಿದ್ದರಾಮಯ್ಯ ಮೊಗದಲ್ಲಿ ಮಂದಹಾಸ ಮೂಡಿತ್ತು.