ಅಹಮದಾಬಾದ್: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಇಡೀ ದೇಶಾದ್ಯಂತ ನೆಲೆಸಿರುವ ಪಾಕಿಸ್ತಾನಿಯರನ್ನ ವಾಪಸ್ ಕಳುಹಿಸುವ ಕಾರ್ಯಾಚರಣೆಯನ್ನು ಸರ್ಕಾರಗಳು ಚುರುಕುಗೊಳಿಸಿವೆ. ಈ ನಡುವೆ ವಿವಿಧ ದೇಶಗಳಿಂದ ಬಂದು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು (Illegal Immigrants) ಪತ್ತೆಹಚ್ಚುವ ಕೆಲಸಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
ಅದರಂತೆ ಅಹಮದಾಬಾದ್ (Ahmedabad) ಮತ್ತು ಸೂರತ್‌ನಲ್ಲಿ ನಡೆದ ಶೋಧ ಕಾರ್ಯಾಚರಣೆಯ ನಂತರ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 1,000ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿಗರನ್ನು (Bangladeshis) ಬಂಧಿಸಲಾಗಿದೆ. ಗುಜರಾತ್ ಪೊಲೀಸರು (Gujarat Police) ಇಲ್ಲಿಯವರೆಗೆ ನಡೆಸಿದ ಅತಿದೊಡ್ಡ ಕಾರ್ಯಾಚರಣೆ ಇದಾಗಿದ್ದು, ಬಂಧಿತರನ್ನ ಶೀಘ್ರವೇ ಗಡೀಪಾರು ಮಾಡುವ ಪ್ರಕ್ರಿಯೆ ಚುರುಕುಗೊಂಡಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘ್ವಿ ತಿಳಿಸಿದ್ದಾರೆ.
ಅಹಮದಾಬಾದ್‌ನಲ್ಲಿ ಕನಿಷ್ಠ 890 ಮತ್ತು ಸೂರತ್‌ನಲ್ಲಿ 134 ಬಾಂಗ್ಲಾದೇಶಿಗರನ್ನ ಬಂಧಿಸಲಾಗಿದೆ. ಬಂಧಿತರು ಗುಜರಾತ್‌ಗೆ ಬರುವ ಮುನ್ನ ಭಾರತದ ವಿವಿಧ ಭಾಗಗಳಲ್ಲಿ ಉಳಿಯಲು ಪಶ್ಚಿಮ ಬಂಗಾಳದಿಂದ ಪಡೆದ ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂದು ಸಹ ಸಚಿವರು ಮಾಹಿತಿ ನೀಡಿದ್ದಾರೆ.
ಗುಜರಾತ್‌ನಲ್ಲಿ ವಾಸಿಸುವ ಅಕ್ರಮ ವಲಸಿಗರು ಸ್ವಯಂಪ್ರೇರಿತವಾಗಿ ಪೊಲೀಸರ ಮುಂದೆ ಶರಣಾಗಬೇಕು, ಇಲ್ಲದಿದ್ದರೆ ಅವರನ್ನು ಬಂಧಿಸಿ ಗಡೀಪಾರು ಮಾಡಲಾಗುವುದು ಎಚ್ಚರಿಕೆ ಸಹ ನೀಡಿದ್ದಾರೆ.
ಗಾಂಧಿನಗರ: ಗುಜರಾತ್‌ನ ವಲ್ಸಾದ್ (Gujarat’s Valsad) ಜಿಲ್ಲೆಯಲ್ಲಿ 19 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದ ಮೇಲೆ ಹರಿಯಾಣದ 29 ವರ್ಷದ ಸರಣಿ ಹಂತಕನನ್ನು ಗುಜರಾತ್ ಪೊಲೀಸರು (Gujarat Police) ಬಂಧಿಸಿದ್ದಾರೆ. ಈ ಅತ್ಯಾಚಾರ ಎಸಗುವುದಕ್ಕೂ ಮುನ್ನ ಹಂತಕ ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ರೈಲಿನಲ್ಲೇ ನಾಲ್ವರನ್ನು ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ನವೆಂಬರ್ 14ರಂದು ಉದ್ವಾಡ ರೈಲು ನಿಲ್ದಾಣದ (Railway Station) ಸಮೀಪದ ಹಳಿಯ ಮೇಲೆ ಯುವತಿಯ ಶವ ಪತ್ತೆಯಾಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರು ಹರಿಯಾಣದ ರೋಹ್ಟಕ್ ಮೂಲದ ರಾಹುಲ್ ಸಿಂಗ್ ಜಾಟ್ ಎಂಬಾತನ್ನ ನವೆಂಬರ್ 24ರಂದು ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಸಂತ್ರಸ್ತೆ ಆ ದಿನ ಟ್ಯೂಷನ್ ಮುಗಿಸಿ ಮನೆಗೆ ಬಂದಾಗ ಹಿಂದಿನಿಂದ ಹಲ್ಲೆ ನಡೆಸಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ಬಳಿಕ ತಿಳಿಸಿದ್ದಾರೆ.
ಹಂತಕ ಸುಳಿವು ಸಿಕ್ಕಿದ್ದು ಹೇಗೆ?
ವಲ್ಸಾದ್ ಎಸ್ಪಿ ಕರಂರಾಜ್ ವಘೇಲಾ ಮಾತನಾಡಿ, ಅಪರಾಧ ನಡೆದ ಸ್ಥಳದಲ್ಲಿ ಹಂತಕ ಬಿಟ್ಟುಹೋಗಿದ್ದ ಟೀ ಶರ್ಟ್ ಮತ್ತು ಬ್ಯಾಗ್ ಪೊಲೀಸರಿಗೆ ಪ್ರಮುಖ ಸಾಕ್ಷ್ಯಗಳಾಗಿತ್ತು. ಅಲ್ಲದೇ ಸಿಟಿಟಿವಿಯಲ್ಲಿ ಆರೋಪಿ ಮುಖಚಹರೆ ಸೆರೆಯಾಗಿತ್ತು. ನಂತರ ಸೂರತ್‌ನ ಲಜ್‌ಪೋರ್ ಸೆಂಟ್ರಲ್ ಜೈಲಿನ ಅಧಿಕಾರಿ ಈತನ್ನ ಗುರುತಿಸಿದರು. ಈ ಹಿಂದೆ ನಾಲ್ಕು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ರಾಹುಲ್ ಇತ್ತೀಚೆಗಷ್ಟೇ ಜೈಲಿನಿಂದ ರಿಲೀಸ್ ಆಗಿದ್ದ. ಭಾನುವಾರ ರಾತ್ರಿ ಸ್ಥಳೀಯ ಮತ್ತು ರೈಲ್ವೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ವಲ್ಸಾದ್‌ನ ವಾಪಿ ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಹಂತಕನ್ನ ಬಂಧಿಸಲಾಯಿತು ಎಂದು ವಿವರಿಸಿದ್ದಾರೆ.
ಸರಣಿ ಹಂತಕನ ಬಗ್ಗೆ ಸ್ಫೋಟಕ ಮಾಹಿತಿ
ಆರೋಪಿ ಜಾಟ್ ಕುರಿತು ಎಸ್ಪಿ ಹಲವು ಸ್ಫೋಟಕ ವಿಚಾರಗಳನ್ನ ತಿಳಿಸಿದ್ದಾರೆ. ಈತ ರೈಲಿನಲ್ಲಿ ಹೆಚ್ಚು ಪ್ರಯಾಣಿಸುತ್ತಿದ್ದ, ಒಂದು ಸ್ಥಳದಲ್ಲಿ ಇರುತ್ತಿರಲಿಲ್ಲ. ಈ ಹಿಂದೆ ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಮಹಾರಾಷ್ಟ್ರದ ರೈಲುಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ನಡೆದ ಲೂಟಿ, ಕೊಲೆ ಕೃತ್ಯಗಳನ್ನೂ ಎಸಗಿದ್ದ ಎಂದು ತಿಳಿಸಿದ್ದಾರೆ.
ಜಾಟ್‌ನನ್ನ ಬಂಧನ ಮಾಡುವ ಹಿಂದಿನ ದಿನ ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರಿಂದ ಲೂಟಿ ಮಾಡಿದ್ದ. ಕಳೆದ ಅಕ್ಟೋಬರ್‌ನಲ್ಲೂ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ನಂತರ ಮಹಾರಾಷ್ಟ್ರದ ಸೋಲಾಪುರ ರೈಲು ನಿಲ್ದಾಣದ ಬಳಿ, ಪಶ್ಚಿಮ ಬಂಗಾಳದ ಹೌರಾ ರೈಲು ನಿಲ್ದಾಣದ ಬಳಿ ಕತಿಹಾರ್ ಎಕ್ಸ್‌ಪ್ರೆಸ್ ರೈಲು ಹಾಗೂ ಕರ್ನಾಟಕದಲ್ಲಿ ತಲಾ ಒಬ್ಬೊಬ್ಬರನ್ನು ಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
– 2 ವಾರದಲ್ಲಿ ಒಟ್ಟು 13,000 ಕೋಟಿ ಮೌಲ್ಯದ ಕೊಕೇನ್ ಜಪ್ತಿ
ಗುಜರಾತ್: 5,000 ಕೋಟಿ ರೂ. ಮೌಲ್ಯದ 514 ಕೆ.ಜಿ ಕೊಕೇನ್ (Cocaine) ವಶಕ್ಕೆ ಪಡೆಯಲಾಗಿದ್ದು, ದೆಹಲಿ ಹಾಗೂ ಗುಜರಾತ್ ಪೊಲೀಸರ ವಿಶೇಷ ತಂಡವು ಭರ್ಜರಿ ಬೇಟೆಯಾಡಿ, ಐವರನ್ನು ಬಂಧಿಸಿದ್ದಾರೆ.
ಇತ್ತೀಚಿಗೆ ದೆಹಲಿ ಪೊಲೀಸರು 5,000 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಭಾನುವಾರ ಗುಜರಾತ್‌ನಲ್ಲಿ 5,000 ಕೋಟಿ ರೂ. ಮೂಲ್ಯದ 518 ಕೆ.ಜಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದೆ. ಗುಜರಾತ್ ಹಾಗೂ ದೆಹಲಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಅಂಕಲೇಶ್ವರ ಔಷಧ ಕೇಂದ್ರದಲ್ಲಿ ಮಾದಕ ವಸ್ತು ಪತ್ತೆಯಾಗಿದೆ.ಇದನ್ನೂ ಓದಿ:ಟ್ರಂಪ್‌ಗಿಂತಲೂ ಕಮಲಾ ಹ್ಯಾರಿಸ್‌ಗೆ ಹೆಚ್ಚಿನ ಕೋಟ್ಯಧಿಪತಿಗಳ ಬೆಂಬಲ – ಇಲ್ಲಿದೆ ಬಿಲಿಯನೇರ್ಸ್ ಲಿಸ್ಟ್
ಈ ಮೂಲಕ ಒಟ್ಟು 2 ವಾರದಲ್ಲಿ ಗುಜರಾತ್ ಹಾಗೂ ದೆಹಲಿಯಲ್ಲಿ ಜಾರಿ ನಿದೇಶನಾಯಲಯ (ED-Enforcement Directorate) ಒಟ್ಟು 13,000 ಕೋಟಿ ರೂ.ಮೌಲ್ಯದ 1289 ಕೆ.ಜಿ ಕೊಕೇನ್ ಹಾಗೂ 40 ಕೆ.ಜಿಯಷ್ಟು ಥಾಯ್ಲೆಂಡ್‌ನ ಹೈಡ್ರೋಪೋನಿಕ್ ಎಂಬ ಮಾದಕ ವಸುವನ್ನು ವಶಕ್ಕೆ ಪಡೆದುಕೊಂಡಿವೆ.
ಇದಕ್ಕೂ ಮುನ್ನವೇ ಅ.1 ರಂದು ದೆಹಲಿ ಪೊಲೀಸರ ವಿಶೇಷ ತಂಡವು ಮಹಿಪಾಲ್‌ಪುರದಲ್ಲಿರುವ ತುಷಾರ್ ಗೋಯಲ್ ಅವರ ಗೋದಾಮಿನ ಮೇಲೆ ದಾಳಿ ನಡೆಸಿತ್ತು. ಆ ವೇಳೆ 562 ಕೆ.ಜಿ. ಕೊಕೇನ್ ಮತ್ತು 40 ಕೆ.ಜಿ. ಹೈಡ್ರೋಪೋನಿಕ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು. ಅದಾದ ಬಳಿಕ ಹಿಚ್ಚಿನ ತನಿಖೆಗಾಗಿ ಅ.11ರಂದು ದೆಹಲಿಯ ರಮೇಶ್ ನಗರದಲ್ಲಿ 208 ಕೆ.ಜಿ. ಕೊಕೇನ್‌ನ್ನು ವಶಪಡಿಸಿಕೊಳ್ಳಲಾಗಿದ್ದು, ನಮಕೀನ್ ಪ್ಯಾಕೆಟ್‌ನಲ್ಲಿ ಮಾದಕವಸ್ತು ಲಭ್ಯವಾಗಿತ್ತು.
ಗಾಂಧಿನಗರ: ಗುಜರಾತ್‍ನ (Gujarat) ವಡಾಲಿಯಲ್ಲಿ (Vadali) ಗುರುವಾರ (ಮೇ 2) ಮನೆಗೆ ಬಂದಿದ್ದ ಪಾರ್ಸೆಲ್ ಸ್ಫೋಟಗೊಂಡು ತಂದೆ ಹಾಗೂ ಮಗಳು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ಗುರುವಾರ ಮಧ್ಯಾಹ್ನ ಜೀತುಭಾಯಿ ಹೀರಾಭಾಯಿ ವಂಜಾರಾ (32) ಎಂಬವರ ಮನೆಗೆ ಪಾರ್ಸೆಲ್‍ನಲ್ಲಿ ಟೇಪ್ ರೆಕಾರ್ಡರ್ ಬಂದಿತ್ತು. ಈ ವೇಳೆ ಅದನ್ನು ತೆಗೆದು ವಿದ್ಯುತ್ ಸಂಪರ್ಕ ಮಾಡುತ್ತಿದ್ದಂತೆ ಅದು ಸ್ಫೋಟಗೊಂಡಿತ್ತು. ಈ ವೇಳೆ ಜೀತುಭಾಯಿ ಹಾಗೂ ಅವರ ಮಗಳು ಭೂಮಿಕಾ (12) ಸಾವಿಗೀಡಾಗಿದ್ದರು. ಅಲ್ಲದೇ ಇನ್ನಿಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು. ಇದನ್ನೂ ಓದಿ: ತಿಂಡಿ ಮಾಡಲ್ಲ ಎಂದಿದ್ದಕ್ಕೆ ಹಲ್ಲೆಗೈದು ಅತ್ತೆ ಕೊಲೆ – ಕುಸಿದು ಸತ್ತರೆಂದು ಕಥೆ ಕಟ್ಟಿದ್ದ ಸೊಸೆ ಅರೆಸ್ಟ್
ಪ್ರಕರಣದ ಹಿಂದೆ ಬಿದ್ದ ಪೊಲೀಸರು, ಸಿಸಿಟಿವಿಗಳಲ್ಲಿ ದಾಖಲಾದ ವೀಡಿಯೋ ಆಧಾರದ ಮೇಲೆ ಪಾರ್ಸೆಲ್ ತಲುಪಿಸಿದ್ದ ಆಟೋ ಚಾಲಕನನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಆಟೋ ಚಾಲಕನನ್ನು ವಿಚಾರಿಸಿದಾಗ, ಜಯಂತಿಭಾಯಿ ಬಾಲುಸಿಂಗ್ ವಂಜಾರ (31) ಎಂಬಾತ ಜೀತುಭಾಯಿ ಅವರ ಮನೆಗೆ ಪಾರ್ಸೆಲ್ ಕಳುಹಿಸಿದ್ದು ಎಂದು ತಿಳಿದು ಬಂದಿದೆ.
ಜೀತುಭಾಯಿ ತನ್ನ ಮಾಜಿ ಪ್ರೇಯಸಿ ಮದುವೆಯಾಗಿದ್ದಕ್ಕೆ ಆರೋಪಿ ಈ ಕೃತ್ಯ ಎಸಗಿದ್ದಾನೆ. ಆತ ಸ್ಫೋಟಕ ತಯಾರಿಸಲು ರಾಜಸ್ಥಾನದಿಂದ ಜೆಲೆಟಿನ್ ಕಡ್ಡಿಗಳನ್ನು ತಂದಿದ್ದ. ಅಲ್ಲದೇ ಅದನ್ನು ಟೇಪ್ ರೆಕಾರ್ಡ್‍ರ್‍ನಲ್ಲಿ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿದ ತಕ್ಷಣ ಸ್ಫೋಟಗೊಳ್ಳುವಂತೆ ಮಾಡಿದ್ದ ಎಂದು ತಿಳಿದು ಬಂದಿದೆ.
ಅಹಮದಾಬಾದ್: ಏಕದಿನ ವಿಶ್ವಕಪ್ (World Cup 2023) ಟೂರ್ನಿ ಆರಂಭವಾಗಿದ್ದು, ತೀವ್ರ ಕುತೂಹಲ ಕೆರಳಿಸಿರುವ ಭಾರತ – ಪಾಕಿಸ್ತಾನ ಪಂದ್ಯಕ್ಕೆ (Ind vs Pak) ದಿನಗಣನೆ ಆರಂಭವಾಗಿದೆ. ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಟ್ವಿಟ್ಟರ್‌ನಲ್ಲೂ ಟ್ರೆಂಡ್ ಅಲೆ ಎದ್ದಿದೆ.
ಹೌದು. ಇದೇ ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. 2008ರ ನವೆಂಬರ್ 26ರಂದು ನಡೆದ ಮುಂಬೈ ದಾಳಿಯಲ್ಲಿ ಪಾಕ್ ಉಗ್ರರನ್ನು ಮಟ್ಟ ಹಾಕಿದ್ದ NSG ಕಮಾಂಡೋಗಳನ್ನು ಈ ಪಂದ್ಯಕ್ಕೆ ಭದ್ರತೆಗಾಗಿ ನಿಯೋಜಿಸಲಾಗಿದೆ.
ಕಳೆದ 20 ವರ್ಷಗಳಲ್ಲಿ ಅಹಮದಾಬಾದ್ ನಗರದಲ್ಲಿ ಯಾವುದೇ ಕೋಮುಗಲಭೆಗಳು ನಡೆದಿಲ್ಲವಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗುವುದು ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್.ಮಲಿಕ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಗುಜರಾತ್ ಸಿಎಂ ಭೂಪೇಂದ್ರಬಾಯ್ ಪಟೇಲ್ ಅವರು ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘವಿ, ರಾಜ್ಯ ಡಿಜಿಪಿ ವಿಕಾಸ್ ಸಹಾಯ್, ಜಿ.ಎಸ್ ಮಲಿಕ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗಾಂಧಿನಗರದಲ್ಲಿ ಸಭೆ ನಡೆಸಿ ಪೊಲೀಸರ ಪ್ಲ್ಯಾನ್ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಇಂಡೋ ಪಾಕ್ ಪಂದ್ಯದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿರುವ ಕರಾವಳಿಗರ ರಕ್ಷಣೆಗೆ ವಿದೇಶಾಂಗ ಸಚಿವರಿಗೆ ಪತ್ರ: ನಳಿನ್ ಕುಮಾರ್ ಕಟೀಲ್
7,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯೊಂದಿಗೆ, ಕ್ರೀಡಾಂಗಣದ ಭದ್ರತೆಗಾಗಿ ಮತ್ತು ಪಂದ್ಯದ ಸಮಯದಲ್ಲಿ ನಗರದ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಸುಮಾರು 4,000 ಗೃಹರಕ್ಷಕರನ್ನು ನಿಯೋಜಿಸಲಾಗುವುದು. ಈ ಸಿಬ್ಬಂದಿಯ ಜೊತೆಗೆ ನಾವು ಮೂರು ‘ಹಿಟ್ ತಂಡಗಳು’ ಮತ್ತು ಎನ್ಎಸ್ಜಿಯು ಒಂದು ಡ್ರೋನ್ ತಡೆ ತಂಡವನ್ನು ನಿಯೋಜಿಸುತ್ತೇವೆ. ನಮ್ಮ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ 9 ತಂಡಗಳನ್ನು ಸಹ ಬಳಸಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲದೇ ಇನ್ಸ್‌ಪೆಕ್ಟರ್ ಜನರಲ್ ಮತ್ತು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಶ್ರೇಣಿಯ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳು ಮತ್ತು 21 ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಶ್ರೇಣಿಯ ಅಧಿಕಾರಿಗಳು ಪಂದ್ಯದ ದಿನದಂದು ಸಿಬ್ಬಂದಿ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ನೀಡಲಿದ್ದಾರೆ ಎಂದೂ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
“ರಾಜ್ಯ ಮೀಸಲು ಪೊಲೀಸ್ (SRP) ಯ 13 ತುಕಡಿಗಳಲ್ಲದೆ, ನಮ್ಮ ಭದ್ರತಾ ವ್ಯವಸ್ಥೆಯ ಭಾಗವಾಗಿ ನಾವು ಕ್ಷಿಪ್ರ ಕ್ರಿಯಾ ಪಡೆಯ ಮೂರು ತುಕಡಿಗಳನ್ನು ನಿಯೋಜಿಸುತ್ತೇವೆ. ಆರ್ ಎಎಫ್ ನಗರದ ಕೋಮು ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇಡಲಿದೆ. ಕಾಲ್ತುಳಿತದ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು, ನಾವು ಈಗಾಗಲೇ ಸ್ಥಳಾಂತರಿಸುವ ಯೋಜನೆಯನ್ನು ಸಿದ್ಧಪಡಿಸಿದ್ದೇವೆ ಮತ್ತು ಕ್ರೀಡಾಂಗಣದಲ್ಲಿ ಪೂರ್ವಾಭ್ಯಾಸವೂ ನಡೆಯುತ್ತಿದೆ ಎಂದು ಮಲಿಕ್ ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ನನ್ನ ಬಿಡುಗಡೆ ಮಾಡಬೇಕು, ಜೊತೆಗೆ 500 ಕೋಟಿ ರೂ. ನೀಡಬೇಕು. ಇಲ್ಲವಾದರೆ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡಲಾಗುವುದು. ಅಷ್ಟೇ ಅಲ್ಲದೇ ಅಹಮದಾಬಾದ್‌ನ ಮೋದಿ ಕ್ರೀಡಾಂಗಣವನ್ನು ಸ್ಫೋಟಿಸಲಾಗುವುದು ಎಂದು ಮುಂಬೈ ಪೊಲೀಸರಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು.
ಗಾಂಧಿನಗರ: ಅನ್ಯ ಜಾತಿಯ ಹುಡುಗನನ್ನ ಪ್ರೀತಿಸಿ ಮದುವೆಯಾಗಿದ್ದಕ್ಕೆ (Marriage) ವ್ಯಕ್ತಿಯೊಬ್ಬ ಬದುಕಿದ್ದಾಗಲೇ ತನ್ನ ಮಗಳ ಅಂತ್ಯ ಸಂಸ್ಕಾರ ನೆರವೇರಿಸಿದ ವಿಚಿತ್ರ ಘಟನೆ ಗುಜರಾತಿನ (Gujarat) ದಾಹೋದ್ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಏನಿದು ಲವ್ ಸ್ಟೋರಿ?
ಒಂದು ತಿಂಗಳ ಹಿಂದೆ ತಮ್ಮ ಮಗಳು ಮನೆಯಿಂದ ಹೊರಗೆ ಹೋದವಳು ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಗ್ರಾಮಸ್ಥರಿಗೆಲ್ಲಾ ವಿಷಯ ಮುಟ್ಟಿಸಿ ಹುಡುಕಾಟ ನಡೆಸಿದ್ದರು. ಎಷ್ಟು ಹುಡುಕಾಡಿದರೂ ಸಿಗದಿದ್ದಾಗ ಸ್ಥಳೀಯ ಪೊಲೀಸ್ (Gujarat Police) ಠಾಣೆಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ (Investigation) ನಡೆಸಿದ್ದ ಪೊಲೀಸರು ಮಗಳನ್ನು ಪತ್ತೆ ಮಾಡಿದಾಗ ಆಕೆ ಅನ್ಯ ಜಾತಿಯ ಹುಡುಗನ್ನ ಪ್ರೀತಿಸಿ ಮದುವೆಯಾಗಿರುವುದು ಕಂಡುಬಂದಿತು.
ಪೋಷಕರು ಮಗಳನ್ನು ಪರಿಪರಿಯಾಗಿ ಬೇಡಿಕೊಂಡರೂ ಆಕೆ ಹಿಂದಿರುಗಲು ಒಪ್ಪಲಿಲ್ಲ. ಅಲ್ಲದೇ ಪೊಲೀಸ್ ವಿಚಾರಣೆಯಲ್ಲೂ ತಾನೂ ವಯಸ್ಕಳಾಗಿದ್ದೇನೆ, ಇಷ್ಟಪಟ್ಟವರನ್ನ ಆಯ್ಕೆ ಮಾಡಿಕೊಳ್ಳುವ ಹಕ್ಕು, ಸ್ವಾತಂತ್ರ್ಯ ಇದೆ ಅಂತಾ ಖಡಕ್ಕಾಗಿ ವಾದಿಸಿದ್ದಳು. ಹಾಗಾಗಿ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಇದನ್ನೂ ಓದಿ: ಫ್ರಾನ್ಸ್ ಧಗ ಧಗ – ಭದ್ರತೆಗೆ 45 ಸಾವಿರ ಪೊಲೀಸರ ನಿಯೋಜನೆ, 994 ಮಂದಿ ಅರೆಸ್ಟ್
ನಂತರ ಮಗಳನ್ನು ತನ್ನ ಪಾಡಿಗೆ ಬಿಟ್ಟು ಕುಟುಂಬಸ್ಥರೊಂದಿಗೆ ಮನೆಗೆ ಹಿಂದಿರುಗಿದ ತಂದೆ ಅಂತ್ಯ ಸಂಸ್ಕಾರ ನೆರವೇರಿಸಿ ಮಗಳಜೊತೆಗಿನ ಸಂಬಂಧವನ್ನ ಮುರಿದುಕೊಂಡಿದ್ದಾನೆ. ಇನ್ನು ಅವಳು ನನ್ನ ಪಾಲಿಗೆ ಸತ್ತು ಹೋಗಿದ್ದಾಳೆ, ನನಗು-ಅವಳಿಗು ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಲೆ ಬೋಳಿಸಿಕೊಂಡು ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನ ನೆರವೇರಿಸಿದ್ದಾನೆ.
ಬಳಿಕ ಮೇಘನಾ ಪಟೇಲ್ ಅವರನ್ನು ಬಂಧಿಸಿ ಅವರ ಮೂಲಕ ಮತ್ತಷ್ಟು ಮದ್ಯ ವಶಪಡಿಸಿಕೊಳ್ಳಲಾಯಿತು. ಒಟ್ಟು 10 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಂಡು ಆಕೆಯನ್ನು ಬಂಧಿಸಲಾಯಿತು ಎಂದು ಉಮ್ರಾ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.
ಸೂಕ್ತ ಕಾನೂನಿನ ಅಡಿ ಕೇಸ್ ದಾಖಲಿಸಿದ್ದು, ಮೇಘನಾ ಪಟೇಲ್ ಹಾಗೂ ಮದ್ಯ ಸಾಗಿಸುತ್ತಿದ್ದ ಕಾರು ಚಾಲಕನನ್ನು ಬಂಧಿಸಿದ್ದೇವೆ.
ಬರ‍್ರೆನ್: ಜಿನಿವಾದಲ್ಲಿ ಈಚೆಗೆ ನಡೆದ ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ (CESR) ಮಹಾಸಭೆಯಲ್ಲಿ ಸ್ವಯಂಘೋಷಿತ ದೇವಮಾನವ ಹಾಗೂ ಕೈಲಾಸ ದೇಶದ ಸಂಸ್ಥಾಪಕ ಸ್ವಾಮಿ ನಿತ್ಯಾನಂದನ (Swamy Nithyananda) ಶಿಷ್ಯೆ ಭಾಗವಹಿಸಿದ್ದರು ಎಂದು ಹೇಳಲಾಗಿದೆ.
USK at UN Geneva: Inputs on the Achievement of Sustainability
Participation of the United States of KAILASA in a discussion on the General Comment on Economic, Social and Cultural Rights and Sustainable Development at the United Nations in Geneva
ವಿಶ್ವಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಮಹಾಸಭೆಯಲ್ಲಿ (United Nations Meeting) ಅಮೆರಿಕ, ಯುಕೆ, ಸ್ಲೊವೇನಿಯಾ, ಫ್ರಾನ್ಸ್ ಮುಂತಾದ ಕಡೆಗಳಲ್ಲಿ ನಿತ್ಯಾನಂದ ಆಶ್ರಮಗಳನ್ನು ನಡೆಸುತ್ತಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ (United States of Kailasa) ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಲ್ಲಿ ಸಾಮಾಜಿಕ, ಆರ್ಥಿಕ ವಿಚಾರಗಳನ್ನು ಚರ್ಚಿಸಲಾಯಿತು ಎಂದು ಕೈಲಾಸ ಎಸ್‌ಪಿಹೆಚ್ ನಿತ್ಯಾನಂದ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಸಹ ಹಂಚಿಕೊಳ್ಳಲಾಗಿದೆ.
ಇದೇ ಸಭೆಯಲ್ಲಿ ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಎಂದು ಹೇಳಿರುವ ವಿಜಯಪ್ರಿಯಾ (Vijayapriya Nithyananda) ಸಹ ಭಾಗವಹಿಸಿದ್ದರು. ಅಲ್ಲಿ ನಿತ್ಯಾನಂದ ತನ್ನ ಜನ್ಮಸ್ಥಳವಾದ ಭಾರತ ದೇಶದಿಂದ ಹಿಂಸೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಪಾಕ್, ಚೀನಾದಲ್ಲಿ ತರಬೇತಿ ಪಡೆದ ಡೇಂಜರಸ್ ವ್ಯಕ್ತಿ ಭಾರತಕ್ಕೆ ಎಂಟ್ರಿ – NIA ಅಲರ್ಟ್
ಕೈಲಾಸ ಹಿಂದೂ ಧರ್ಮದ (Hinduism) ಮೊದಲ ಸಾರ್ವಭೌಮ ರಾಜ್ಯ. ಅದನ್ನು ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶ (ಸುಪ್ರೀಂ ಪಾಂಟಿಫ್ ಆಫ್ ಹಿಂದೂಯಿಸಂ – SPH) ನಿತ್ಯಾನಂದ ಪರಮಶಿವಂ ಸ್ಥಾಪಿಸಿದ್ದಾರೆ. ಅವರು ಪ್ರಬುದ್ಧ ಹಿಂದೂ ನಾಗರಿಕತೆ ಮತ್ತು ಆದಿಶೈವ, ಸ್ಥಳೀಯ ಬುಡಕಟ್ಟು ಸೇರಿ ಹಿಂದೂ ಧರ್ಮದ 10 ಸಾವಿರ ಸಂಪ್ರದಾಯಗಳನ್ನ ಪುನರುಜ್ಜೀವನಗೊಳಿಸಿದ್ದಾರೆ. ಕೈಲಾಸ ಸುಸ್ಥಿರ ಅಭಿವೃದ್ಧಿಯೊಂದಿಗೆ ಯಶಸ್ವಿಯಾಗಿದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಉಗ್ರನನ್ನು ಹತ್ಯೆಗೈದ ಭದ್ರತಾ ಪಡೆ
ಇತರ ಪ್ರತಿನಿಧಿಗಳು ಮಾತನಾಡಿ, ನಾನಾ ದೇಶಗಳಲ್ಲಿ ಮಹಿಳೆಯರು ಅನುಭವಿಸುತ್ತಿರುವ ಹಿಂಸೆಗಳು, ಪುರುಷ ಪ್ರಧಾನ ಸಮಾಜಗಳಲ್ಲಿ ಒಳಗಾಗುತ್ತಿರುವ ಅಪಮಾನಗಳ ಬಗ್ಗೆ ಪ್ರತಿಪಾದಿಸಿದ್ದಾರೆ. ಜಗತ್ತಿನಲ್ಲಿ ಶೇ.82ರಷ್ಟು ಮಹಿಳೆಯರು ಪದೇ ಪದೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸಿದ್ದಕ್ಕಾಗಿ ಶೇ. 42ರಷ್ಟು ಮಹಿಳೆಯರು, ಅತ್ಯಾಚಾರ ಸೇರಿದಂತೆ ಅನೇಕ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.
ಅಜ್ಞಾನ ಸ್ಥಳದಲ್ಲಿ ಕೈಲಾಸ ದೇಶ ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಈ ದೇಶವನ್ನು ವಿಶ್ವಸಂಸ್ಥೆ ಗುರುತಿಸಿದೆಯೇ ಎಂಬುದು ಅಸ್ಪಷ್ಟವಾಗಿದೆ.
ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿರುದ್ಧ 2010ರಲ್ಲಿ ಕರ್ನಾಟಕ ಸೆಷನ್ಸ್ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಗುಜರಾತ್ ಆಶ್ರಮದಲ್ಲಿಯೂ ಚಿತ್ರಹಿಂಸೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿ ಬಂದಿತು. ಈ ಕುರಿತು ತನಿಖೆ ನಡೆಸಿದ ಗುಜರಾತ್ ಪೊಲೀಸರು, ನಿತ್ಯಾನಂದ ದೇಶದಿಂದಲೇ ತಲೆ ಮರೆಸಿಕೊಂಡಿರುವುದಾಗಿ ವರದಿ ಮಾಡಿದ್ದರು.
ಗಾಂಧಿನಗರ: ಮೂರು ಮಕ್ಕಳ ತಾಯಿಯಾಗಿದ್ದ ಮಹಿಳೆಯೊಬ್ಬಳು (Women) ಗಂಡನಿಂದ ಬೇರಾಗಿ ಮತ್ತೊಬ್ಬ ಯುವಕನೊಂದಿಗೆ ಲಿವ್ ಇನ್ ರಿಲೇಷನ್‌ನಲ್ಲಿ (Live In Relationship) ಇದ್ದಳು. ಈ ವೇಳೆ ಗೆಳೆಯನ ಸ್ನೇಹಿತನೊಂದಿಗೂ ದೈಹಿಕ ಸಂಪರ್ಕ ಬೆಳೆಸಿದ್ದ ಮಹಿಳೆಯನ್ನ ಸ್ಕೆಚ್ ಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಮಾಹಿತಿ ಪ್ರಕಾರ, ಚಮೇಲಿ ಎಂದು ಗುರುತಿಸಲಾದ ಮಹಿಳೆ ಮೂರು ಮಕ್ಕಳ ತಾಯಿ. ಕೆಲ ತಿಂಗಳ ಹಿಂದೆ ಪತಿಯಿಂದ ದೂರಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎನ್ನಲಾಗಿದೆ. ಘಟನೆ ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ಕಂಠಪೂರ್ತಿ ಕುಡಿದು ಬಸ್‌ನಲ್ಲಿ ಯುವತಿಯ ಸೀಟ್ ಮೇಲೆ ಮೂತ್ರವಿಸರ್ಜನೆ ಮಾಡಿದ ಭೂಪ
ಏನಿದು ಘಟನೆ?: ಮಹಿಳೆ ಚಮೇಲಿ ಗಂಡನಿಂದ ಪ್ರತ್ಯೇಕವಾಗಿ ರನೌಲಿ ಬಸ್ ನಿಲ್ದಾಣದ ಬಳಿ ವಾಸಿಸುತ್ತಿದ್ದಳು. ಗಂಡನಿಂದ ದೂರಾಗಿದ್ದರೂ ಮತ್ತೊಬ್ಬ ಯುವಕ ಅಜಯ್ ಯಾದವ್‌ನೊಂದಿಗೆ ಲಿವ್ ಇನ್ ರಿಲೇಷನ್‌ನಲ್ಲಿ ವಾಸಿಸುತ್ತಿದ್ದಳು. ಇಬ್ಬರ ನಡುವೆ ದೈಹಿಕ ಸಂಪರ್ಕ ಅಗಿತ್ತು. ಈ ನಡುವೆ ಅಜಯ್ ಸ್ನೇಹಿತ ಉದಯ್ ಶುಕ್ಲಾ ಎಂಬ ಮತ್ತೊಬ್ಬ ಯುವಕನ ಜೊತೆಗೂ ಚಮೇಲಿ ಸಂಪರ್ಕ ಹೊಂದಿದ್ದಳು. ಅವನನ್ನು ಸೆಕ್ಸ್‌ಗಾಗಿ ಪೀಡಿಸುತ್ತಿದ್ದಳು, ಉದಯ್ ಬೇರೆ ಮದುವೆಯಾಗಿದ್ದರೂ ತನ್ನನ್ನು ಮದುವೆಯಾಗುವಂತೆ ಆಕೆ ಒತ್ತಾಯಿಸುತ್ತಿದ್ದಳು. ಈ ವಿಚಾರಕ್ಕೆ ಉದಯ್-ಚಮೇಲಿ ನಡುವೆ ಸಾಕಷ್ಟು ಬಾರಿ ಜಗಳ ನಡೆದಿತ್ತು.
ಕೊನೆಗೆ ಉದಯ್ ಶುಕ್ಲಾ ತನ್ನ ಸ್ನೇಹಿತ ಅಜಯ್‌ಗೆ ಈ ವಿಷಯ ತಿಳಿಸಿದಾಗ ಇಬ್ಬರೂ ಸೇರಿ ಆಕೆಯನ್ನ ಮುಗಿಸೋಕೆ ಪ್ಲಾನ್ ಮಾಡಿದರು. ಅದಕ್ಕಾಗಿ ಪ್ರೇಮಿಗಳ ದಿನವನ್ನೇ ಆಯ್ಕೆ ಮಾಡಿಕೊಂಡರು. ನಂತರ ಉದಯ್ ಶುಕ್ಲಾ ನೆಪಮಾಡಿಕೊಂಡು ಪದ್ಮಲಾ ಗ್ರಾಮದ ನದಿಯ ಬಳಿಗೆ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದ. ಆ ವೇಳೆಗಾಗಲೇ ಅಜಯ್ ಅಲ್ಲಿ ಕಾಯುತ್ತಾ ಕುಳಿತಿದ್ದ. ಇಬ್ಬರೂ ಸೇರಿ ಬಣ್ಣ-ಬಣ್ಣದ ಮಾತುಗಳನ್ನಾಡಿ ನದಿಯ ಸೇತುವೆಯ ಮೇಲೆ ಕರೆತಂದರು. ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಸೇತುವೆ ಕೆಳಗೆ ಎಸೆದಿದ್ದಾರೆ.
ಇದೀಗ ಪ್ರಕರಣ ಬಯಲಾಗಿದೆ. ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
LIVE TV
[brid partner=56869869 player=32851 video=960834 autoplay=true]
ಅಹಮದಾಬಾದ್: ಗುಜರಾತ್ ಪೊಲೀಸರು ದಲಿತ ನಾಯಕ, ವಾಡಗಾಂವ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಎನ್‍ಕೌಂಟರ್ ಮಾಡಲು ಸಂಚು ರೂಪಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳನ್ನೊಳಗೊಂಡ ವಾಟ್ಸಪ್ ಗ್ರೂಪ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಆ ವಿಡಿಯೋಗಳಲ್ಲಿ ರಾಜಕಾರಣಿಯಂತೆ ಕಾಣಿಸುವ ವ್ಯಕ್ತಿಯೊಬ್ಬನನ್ನು ಪೊಲೀಸರು ಹೊಡೆಯುತ್ತಿರುವ ದೃಶ್ಯ ಮೊದಲ ವಿಡಿಯೋದಲ್ಲಿದೆ. ಮತ್ತೊಂದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಷಯಕ್ಕೆ ಸಂಬಂಧಿಸಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ದೃಶ್ಯವಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಗುಜರಾತ್ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ವಿಡಿಯೋದಲ್ಲಿ ಏನಿದೆ?: ಪೊಲೀಸರು ತಂದೆಯಾಗಲು ಬಯಸುವರು, ಪೊಲೀಸರು ‘ಲಖೋಟ’ ಎಂದು ಕರೆಯುವರನ್ನು ಮತ್ತು ಪೊಲೀಸರ ವಿಡಿಯೋ ಮಾಡುವರ ಜೊತೆ ಪೊಲೀಸರು ಹೀಗೆ ವರ್ತಿಸಲಿದ್ದಾರೆ. ಲೆಕ್ಕ ಚುಕ್ತಾ ಮಾಡಲಾಗುವುದು ಎಂದು ಗುಜರಾತ್ ಪೊಲೀಸರು ಹೇಳಿರುವ ವಿಡಿಯೋವನ್ನು ವಾಟ್ಸ್‍ಆಪ್ ಗ್ರೂಪ್ ನಲ್ಲಿ ಅಹಮದಾಬಾದ್ ಗ್ರಾಮೀಣ ಡಿವೈಎಸ್‍ಪಿ ಆರ್.ಬಿ. ದೇವ್ ಧಾ ಹಂಚಿಕೊಂಡಿದ್ದ ವಿಡಿಯೋಗಳು ಶುಕ್ರವಾರ ವೈರಲ್ ಆಗಿದೆ.
ಬೇರೆ ಗ್ರೂಪ್ ನಲ್ಲಿ ಬಂದ ಆ ವಿಡಿಯೋಗಳನ್ನು ಕಾಪಿ ಪೇಸ್ಟ್ ಮಾಡಿದ್ದೆನಷ್ಟೆ. ಅದು ನಾನೇ ಸ್ವತಃ ಕಳುಹಿಸಿದ ವಿಡಿಯೋಗಳಲ್ಲ. ಈಗ ಅದೇ ವಿಡಿಯೋಗಳು ಇತರೇ ಗ್ರೂಪ್ ನಲ್ಲಿ ಹರಿದಾಡುತ್ತಿದೆ.” ಎಂದು ಡಿವೈಎಸ್ ಪಿ ಆರ್.ಬಿ.ದೇವದ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಜಿಗ್ನೇಶ್‍ರವರು ಖಾಸಗಿ ವಾಹಿನಿಯೊಂದಕ್ಕೆ “ಇದು ಗಂಭೀರ ವಿಷಯವಾಗಿದೆ. ಎನ್‍ಕೌಂಟರ್‍ನಲ್ಲಿ ನನನ್ನು ಕೊಲ್ಲಬಹುದೆಂದು ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳು ಮಾತನಾಡುತ್ತಿರುವುದರ ಬಗ್ಗೆ ನಾನು ಡಿಜಿಪಿ, ಗೃಹ ಸಚಿವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಫೆಬ್ರವರಿ 18 ರಂದು ಈ ವಿಡಿಯೋ ವೈರಲ್ ಆಗಿತ್ತು. ಜಿಗ್ನೇಶ್‍ರವರು ಅಹ್ಮದಾಬಾದ್ ಬಾಂಧವನ್ನು ಪ್ರಾರಂಭಿಸುವ ಮೊದಲು ಇವರು ಬಂಧನಕ್ಕೊಳಗಾದ ಕಾರಣ ಮೇವಾನಿ ಪೊಲೀಸರು ಇಗೇ ಮಾತನಾಡಿದ್ದಾರೆಂದು ಶಂಕಿಸಲಾಗಿದೆ.
Jignesh mevani's encounter? Here is the link of gujarati web portal which exposes a WhatsApp communication where two top cops are discussing how I could be killed in an encounter. Can you believe this ?https://t.co/qdS8e4iHCe