Tag: Gujarat Giants

  • ಗುಜರಾತ್‌ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ –  ಶನಿವಾರ ಡೆಲ್ಲಿ ವಿರುದ್ಧ ಫೈನಲ್‌

    ಗುಜರಾತ್‌ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ – ಶನಿವಾರ ಡೆಲ್ಲಿ ವಿರುದ್ಧ ಫೈನಲ್‌

    ಮುಂಬೈ: ಹೇಲಿ ಮ್ಯಾಥ್ಯೂಸ್ (Hayley Matthews) ಆಲ್‌ರೌಂಡರ್‌ ಆಟದಿಂದಾಗಿ ಎಲಿಮಿನೆಟರ್‌ (Eliminator) ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ (Gujarat Giants) ವಿರುದ್ಧ 47 ರನ್‌ಗಳ ಭರ್ಜರಿ ಜಯ ಸಾಧಿಸಿದ ಮುಂಬೈ (Mumbai Indians) ಡಬ್ಲ್ಯೂಪಿಎಲ್‌ ಫೈನಲ್‌ ಪ್ರವೇಶಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ 4 ವಿಕೆಟ್‌ ನಷ್ಟಕ್ಕೆ 213 ರನ್‌ ಹೊಡೆಯಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 19.2 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟ್‌ ಆಯ್ತು.

    ಈ ಗೆಲುವಿನೊಂದಿಗೆ ಮುಂಬೈ ಎರಡನೇ ಬಾರಿ ಫೈನಲ್‌ ಪ್ರವೇಶಿಸಿದಂತಾಯಿತು. 2023 ರಲ್ಲಿ ನಡೆದ ಮೊದಲ ಆವೃತ್ತಿ ಮುಂಬೈ ಡೆಲ್ಲಿಯನ್ನು ಸೋಲಿಸಿ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಶನಿವಾರ ಫೈನಲ್‌ನಲ್ಲಿ ಅದೇ ಡೆಲ್ಲಿ ವಿರುದ್ಧ ಸೆಣಸಾಡಲಿದೆ.

    ಗುಜರಾತ್‌ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತ್ತು. 43 ರನ್‌ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. ಹೇಲಿ ಮ್ಯಾಥ್ಯೂಸ್ 3 ವಿಕೆಟ್‌, ಅಮೆಲಿಯಾ ಕೆರ್ 2 ವಿಕೆಟ್‌ ಪಡೆದರು.

    ಮುಂಬೈ ಪರ ಯಸ್ತಿಕಾ ಭಾಟಿಯಾ 15 ರನ್‌ ಗಳಿಸಿ ಔಟಾದರೂ ಎರಡನೇ ವಿಕೆಟಿಗೆ ಹೇಲಿ ಮ್ಯಾಥ್ಯೂಸ್ ಮತ್ತು ನ್ಯಾಟ್ ಸಿವರ್-ಬ್ರಂಟ್ 71 ಎಸೆತಗಳಲ್ಲಿ 133 ರನ್‌ ಜೊತೆಯಾಟವಾಡಿದರು.

    ಹೇಲಿ ಮ್ಯಾಥ್ಯೂಸ್ 77 ರನ್‌(50 ಎಸೆತ, 10 ಬೌಂಡರಿ, 3 ಸಿಕ್ಸರ್‌) ಹೊಡೆದರೆ ನ್ಯಾಟ್ ಸಿವರ್-ಬ್ರಂಟ್ 77 ರನ್‌( 41 ಎಸೆತ, 10 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು. ಕೊನೆಯಲ್ಲಿ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) 36 ರನ್‌( 12 ಎಸೆತ, 2 ಬೌಂಡರಿ, 4 ಸಿಕ್ಸರ್‌) ಸಿಡಿಸಿದ ಪರಿಣಾಮ ಮುಂಬೈ ತಂಡ 200 ರನ್‌ಗಳ ಗಡಿಯನ್ನು ದಾಟಿತ್ತು.

     

  • ಹರ್ಲೀನ್ ಡಿಯೋಲ್‍ ಅಬ್ಬರದ ಬ್ಯಾಟಿಂಗ್‌ಗೆ ಡೆಲ್ಲಿ ಬರ್ನ್‌ – ಗುಜರಾತ್‌ಗೆ 5 ವಿಕೆಟ್‌ಗಳ ರೋಚಕ ಜಯ

    ಹರ್ಲೀನ್ ಡಿಯೋಲ್‍ ಅಬ್ಬರದ ಬ್ಯಾಟಿಂಗ್‌ಗೆ ಡೆಲ್ಲಿ ಬರ್ನ್‌ – ಗುಜರಾತ್‌ಗೆ 5 ವಿಕೆಟ್‌ಗಳ ರೋಚಕ ಜಯ

    ಲಕ್ನೋ: ಹರ್ಲೀನ್ ಡಿಯೋಲ್‍ ಅಬ್ಬರದ ಬ್ಯಾಟಿಂಗ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್ ಜೈಂಟ್ಸ್ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್‌ ಹೊಡೆಯಿತು. ಸವಾಲಿನ ಗುರಿಯನ್ನು ಬೆನ್ನಟ್ಟಿದ ಗುಜರಾತ್‌ 19.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 178 ರನ್‌ ಹೊಡೆದು ಗೆಲುವು ಸಾಧಿಸಿತು.

    ಗುಜರಾತ್ ಪರ ಅಜೇಯ ಹರ್ಲೀನ್ ಡಿಯೋಲ್‍ 49 ಎಸೆತಗಳಲ್ಲಿ 1 ಸಿಕ್ಸರ್‌, 9 ಬೌಂಡರಿ ನೆರವಿನಿಂದ 70 ರನ್‌ ಕಲೆಹಾಕಿ ತಂಡವನ್ನು ಗೆಲುವಿನ ದಡ ತಲುಪಿಸಿದರು. ಬೆತ್ ಮೂನಿ 35 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 44 ರನ್‌ ಹೊಡೆದು ಔಟಾದರು.

    ಗುಜರಾತ್‌ 4 ರನ್‌ಗಳಿದ್ದಾಗ ತನ್ನ ಮೊದಲ ವಿಕೆಟ್‌ ಕಳೆದುಕೊಂಡಿತ್ತು. ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಬೆತ್‌ ಮೂನಿ ಮತ್ತು ಹರ್ಲಿನ್‌ ಎರಡನೇ ವಿಕೆಟಿಗೆ 57 ಎಸೆತಗಳಲ್ಲಿ 85 ರನ್‌ ಜೊತೆಯಾಟವಾಡಿ ಚೇತರಿಕೆ ನೀಡಿದರು. ಡಿಯಾಂಡ್ರಾ ಡಾಟಿನ್ 24, ಆಶ್ಲೀ ಗಾರ್ಡ್ನರ್ 22 ರನ್‌ ಹೊಡೆದು ಔಟಾದರು.

    ಡೆಲ್ಲಿ ಪರ ಶಿಖಾ ಪಾಂಡೆ, ಜೆಸ್ ಜೊನಾಸೆನ್ ತಲಾ 2 ವಿಕೆಟ್‌, ಮಿನ್ನು ಮಣಿ 1 ವಿಕೆಟ್ ಕಬಳಿಸಿದರು.

    ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಪರ ಮೆಗ್ ಲ್ಯಾನಿಂಗ್ 57 ಎಸೆತಗಳಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಸ್ಫೋಟಕ 92 ರನ್ ಹೊಡೆದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಔಟಾದ ಮೆಗ್‌ ಲ್ಯಾನಿಂಗ್‌ ಕೇವಲ 8 ರನ್‌ಗಳಿಂದ ಶತಕ ವಂಚಿತರಾದರು.‌ ಶಫಾಲಿ ವರ್ಮಾ 27 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 3 ಬೌಂಡರಿ ನೆರವಿನಿಂದ 40 ರನ್‌ ಕಲೆಹಾಕಿದರು.

    ಗುಜರಾತ್ ಪರ ಮೇಘಾ ಸಿಂಗ್ 3 ವಿಕೆಟ್‌ ಮತ್ತು ಡಿಯಾಂಡ್ರಾ ಡಾಟಿನ್ 2 ವಿಕೆಟ್ ಕಿತ್ತರು.

  • ಬೆತ್ ಮೂನಿ ಸ್ಫೋಟಕ ಬ್ಯಾಟಿಂಗ್‌ – ಯುಪಿ ವಿರುದ್ಧ ಗುಜರಾತ್‌ಗೆ 81 ರನ್‌ಗಳ ಭರ್ಜರಿ ಜಯ

    ಬೆತ್ ಮೂನಿ ಸ್ಫೋಟಕ ಬ್ಯಾಟಿಂಗ್‌ – ಯುಪಿ ವಿರುದ್ಧ ಗುಜರಾತ್‌ಗೆ 81 ರನ್‌ಗಳ ಭರ್ಜರಿ ಜಯ

    ಲಕ್ನೋ: ಬೆತ್ ಮೂನಿ (Beth Mooney) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಗುಜರಾತ್‌ ಜೈಂಟ್ಸ್‌ (Gujarat Giants) ಯುಪಿ ವಾರಿಯರ್ಸ್‌(UP Warriorz) ವಿರುದ್ಧ 81 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 5 ವಿಕೆಟ್‌ ನಷ್ಟಕ್ಕೆ 186 ರನ್‌ ಹೊಡೆಯಿತು. ಕಠಿಣ ಗುರಿಯನ್ನು ಪಡೆದ ಯುಪಿ ವಾರಿಯರ್ಸ್‌ 17.1 ಓವರ್‌ಗಳಲ್ಲಿ 105 ರನ್‌ ಗಳಿಸಿ ಆಲೌಟ್‌ ಆಯ್ತು.

    ಯುಪಿ ಪರ ಆರಂಭಿಕ ಆಟಗಾರ್ತಿ ಗ್ರೇಸ್‌ ಹ್ಯಾರಿಸ್‌ 25 ರನ್‌(30 ಎಸೆತ, 3 ಬೌಂಡರಿ) ಹೊಡೆದರೆ ಚಿನೆಲ್ಲೆ ಹೆನ್ರಿ 28 ರನ್‌( 14 ಎಸೆತ, 3 ಬೌಂಡರಿ, 2 ಸಿಕ್ಸ್‌) ಸಿಡಿಸಿ ಔಟಾದರು.

    ಗುಜರಾತ್‌ ಪರ ಕಾಶ್ವೀ ಗೌತಮ್ ಮತ್ತು ತನುಜಾ ಕನ್ವರ್ ತಲಾ 3 ವಿಕೆಟ್‌ ಪಡೆದರೆ ಡಿಯಾಂಡ್ರಾ ಡಾಟಿನ್ 2, ಮೇಘನಾ ಸಿಂಗ್‌ ಮತ್ತು ಆಶ್ಲೀ ಗಾರ್ಡ್ನರ್ ತಲಾ ಒಂದೊಂದು ವಿಕೆಟ್‌ ಪಡೆದರು.

    ಗುಜರಾತ್‌ ಪರ ಆರಂಭಿಕ ಆಟಗಾರ್ತಿ ದಯಾಲನ್ ಹೇಮಲತಾ 3 ಎಸೆತಗಳಿಗೆ 2 ರನ್ ಗಳಿಸಿ ಮೊದಲ ವಿಕೆಟ್ ಒಪ್ಪಿಸಿದರು. ಬಳಿಕ ಎರಡನೇ ವಿಕೆಟಿಗೆ ಬೆತ್ ಮೂನಿ ಹಾಗೂ ಹರ್ಲೀನ್ ಡಿಯೋಲ್ 68 ಎಸೆತಗಳಿಗೆ 101 ರನ್ ಜೊತೆಯಾಟವಾಡಿದರು. ಇದನ್ನೂ ಓದಿ: ರೋಹಿತ್‌ ಶರ್ಮಾ ದಪ್ಪಗಿದ್ದಾರೆ – ಕಾಂಗ್ರೆಸ್‌ ವಕ್ತಾರೆ ಪೋಸ್ಟ್, ವಿವಾದದ ಬೆನ್ನಲ್ಲೇ ಪಕ್ಷದಿಂದ ಛೀಮಾರಿ

    ಬೆತ್ ಮೂನಿ ಅಜೇಯ 96 ರನ್ (59 ಎಸೆತ, 17 ಬೌಂಡರಿ) ಹೊಡೆದರೆ ಹರ್ಲೀನ್ ಡಿಯೋಲ್ 45 ರನ್(32 ಎಸೆತ, 6 ಬೌಂಡರಿ) ಹೊಡೆದ ಪರಿಣಾಮ ತಂಡ 180 ರನ್‌ಗಳ ಗಡಿಯನ್ನು ದಾಟಿತ್ತು.

     

  • ಬೆಂಗಳೂರಿನಲ್ಲಿ ಹ್ಯಾಟ್ರಿಕ್‌ ಸೋಲು – ಆರ್‌ಸಿಬಿ ವಿರುದ್ಧ ಗುಜರಾತ್‌ಗೆ ಸುಲಭ ಜಯ

    ಬೆಂಗಳೂರಿನಲ್ಲಿ ಹ್ಯಾಟ್ರಿಕ್‌ ಸೋಲು – ಆರ್‌ಸಿಬಿ ವಿರುದ್ಧ ಗುಜರಾತ್‌ಗೆ ಸುಲಭ ಜಯ

    ಬೆಂಗಳೂರು: ತವರು ನೆಲದಲ್ಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ (RCB) ಹ್ಯಾಟ್ರಿಕ್‌ ಸೋಲಾಗಿದೆ. ನಾಯಕಿ ಆಶ್ಲೇ ಗಾರ್ಡ್ನರ್ (Ashleigh Gardner) ಸ್ಫೋಟಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ ವಿರುದ್ಧ ಗುಜರಾತ್‌ ಜೈಂಟ್ಸ್‌ (Gujarat Giants) 6 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 7 ವಿಕೆಟ್‌ ನಷ್ಟಕ್ಕೆ 125 ರನ್ ‌ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 16.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 126 ರನ್‌ ಹೊಡೆದು ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು. ಹ್ಯಾಟ್ರಿಕ್‌ ಸೋಲು ಕಂಡರೂ ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲೇ ಮುಂದುವರಿದಿದೆ.

    32 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದ್ದರೂ ಗಾರ್ಡ್ನರ್ 58 ರನ್‌ (31 ಎಸೆತ, 6 ಬೌಂಡರಿ, 3 ಸಿಕ್ಸ್‌) ಸಿಡಿಸಿದರೆ ಫೋಬೆ ಲಿಚ್‌ಫೀಲ್ಡ್ ಔಟಾಗದೇ 30 ರನ್‌ (21 ಎಸೆತ, 3 ಬೌಂಡರಿ, 1 ಸಿಕ್ಸ್‌) ಹೊಡೆದರು. ಆರ್‌ಸಿಬಿ ಪರ ರೇಣುಕಾ ಸಿಂಗ್‌ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ತಲಾ 2 ವಿಕೆಟ್‌ ಪಡೆದರು. ಇದನ್ನೂ ಓದಿ: ಕಾರವಾರ| ಪ್ರೀತಿಸಿ ಮದುವೆಯಾಗಿದ್ದ ಮಗಳು-ಅಳಿಯನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನ


    ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ವಿಫಲವಾಯಿತು. ಸ್ಮೃತಿ ಮಂಧನಾ 10 ರನ್‌, ಡ್ಯಾನಿ ವ್ಯಾಟ್‌ 4 ರನ್‌ ಗಳಿಸಿ ಔಟಾದರು. ಕಳೆದ ಎರಡೂ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದ ಪೆರ್ರಿ ಶೂನ್ಯಕ್ಕೆ ಔಟಾದರು. ರಾಘ್ವಿ ಬಿಸ್ಟ್‌ 22 ರನ್‌, ಕನಿಕಾ ಅಹುಜಾ 33 ರನ್‌, ಜಾರ್ಜಿಯಾ 20 ರನ್‌ ಕಲೆ ಹಾಕಿದರು.

    ಗುಜರಾತ್‌ ಪರ ಉತ್ತಮ ಬೌಲಿಂಗ್‌ ಮಾಡಿದ ತನುಜಾ 16 ಹಾಗೂ ಡಿಯಾಂಡ್ರಾ 31 ರನ್‌ ನೀಡಿ ತಲಾ 2 ವಿಕೆಟ್‌ ಕಿತ್ತರು. ಇನ್ನುಳಿದ ಆಶ್ಲೀ, ಕಾಶ್ವೀ ತಲಾ ವಿಕೆಟ್‌ ಪಡೆದುಕೊಂಡರು.

  • ಡೆಲ್ಲಿ ಕ್ಯಾಪಿಟಲ್ಸ್‌ ಆಲ್‌ರೌಂಡರ್‌ ಆಟ – ಗುಜರಾತ್‌ ವಿರುದ್ಧ 6 ವಿಕೆಟ್‌ಗಳ ಜಯ

    ಡೆಲ್ಲಿ ಕ್ಯಾಪಿಟಲ್ಸ್‌ ಆಲ್‌ರೌಂಡರ್‌ ಆಟ – ಗುಜರಾತ್‌ ವಿರುದ್ಧ 6 ವಿಕೆಟ್‌ಗಳ ಜಯ

    ಬೆಂಗಳೂರು: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ ಗುಜರಾತ್‌ ಜೈಂಟ್ಸ್‌ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಬಲ ಬೌಲಿಂಗ್‌ ದಾಳಿ ತುತ್ತಾಯಿತು. 20 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ತಂಡ ಆರಂಭಿಕ ಆಘಾತ ಎದುರಿಸಿತು. ಬಳಿಕ 60 ರನ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು ತೀವ್ರ ಕುಸಿತ ಕಂಡಿತು. ಅಂತಿಮವಾಗಿ 9 ವಿಕೆಟ್‌ ನಷ್ಟಕ್ಕೆ 127 ರನ್‌ ದಾಖಲಿಸಿತು. ಗುಜರಾತ್‌ ನೀಡಿದ 128 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದೆಹಲಿ 15.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ ರನ್‌ 131 ರನ್‌ ಹೊಡೆದು ಗೆಲುವು ಸಾಧಿಸಿತು.

    ಡೆಲ್ಲಿ ಪರ ಜೆಸ್ ಜೊನಾಸೆನ್ 32 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ ಸಿಡಿಸಿ 61 ರನ್‌ ಹೊಡೆದು ತಂಡದ ಗೆಲುವಿಗೆ ಕೊಡುಗೆ ನೀಡಿದರು. ಶಫಾಲಿ ವರ್ಮಾ 27 ಎಸೆತಗಳಲ್ಲಿ 3 ಸಿಕ್ಸರ್‌, 5 ಬೌಂಡರಿಗಳ ನೆರವಿನಿಂದ 44 ರನ್‌ಗಳನ್ನು ಕಲೆ ಹಾಕಿದರು.

    ಗುಜರಾತ್ ಪರ ಕಾಶ್ವೀ ಗೌತಮ್ 2 ವಿಕೆಟ್‌, ತನುಜಾ ಕನ್ವರ್ ಹಾಗೂ ಆಶ್ಲೀ ಗಾರ್ಡ್ನರ್ ತಲಾ 1 ವಿಕೆಟ್‌ ಕಬಳಿಸಿದರು.

    ಗುಜರಾತ್ ಪರ ಭಾರತಿ ಫುಲ್ಮಾಲಿ 29 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 4 ಬೌಂಡರಿಗಳ ನೆರವಿನಿಂದ 40 ರನ್‌ ಗಳಿಸಿ ಔಟಾಗದೇ ಉಳಿದರು. ಡಿಯಾಂಡ್ರಾ ಡಾಟಿನ್ 24 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 26 ರನ್‌, ತನುಜಾ ಕನ್ವರ್ 24 ಎಸೆತಗಳಲ್ಲಿ 16 ರನ್‌, ತಂಡದ ನಾಯಕಿ ಬೆತ್ ಮೂನಿ 11 ಎಸೆತಗಳಲ್ಲಿ 10 ರನ್‌ ಗಳಿಸಿದರು.

    ಡೆಲ್ಲಿ ಕ್ಯಾಪಿಟಲ್ಸ್ ಪರ ಶಿಖಾ ಪಾಂಡೆ, ಮರಿಜಾನ್ನೆ ಕಪ್, ಅನ್ನಾಬೆಲ್ ಸದರ್ಲ್ಯಾಂಡ್ ತಲಾ 2 ವಿಕೆಟ್‌, ಟೈಟಾಸ್ ಸಾಧು ಹಾಗೂ ಜೆಸ್ ಜೊನಾಸೆನ್ ತಲಾ ಒಂದೊಂದು ವಿಕೆಟ್‌ ಪಡೆದರು.

  • ನ್ಯಾಟ್ ಸ್ಕೀವರ್ ಸ್ಫೋಟಕ ಫಿಫ್ಟಿ – ಗುಜರಾತ್ ವಿರುದ್ಧ ಮುಂಬೈಗೆ 5 ವಿಕೆಟ್‌ಗಳ ಭರ್ಜರಿ ಜಯ

    ನ್ಯಾಟ್ ಸ್ಕೀವರ್ ಸ್ಫೋಟಕ ಫಿಫ್ಟಿ – ಗುಜರಾತ್ ವಿರುದ್ಧ ಮುಂಬೈಗೆ 5 ವಿಕೆಟ್‌ಗಳ ಭರ್ಜರಿ ಜಯ

    ವಡೋದರಾ: ನ್ಯಾಟ್ ಸ್ಕೀವರ್ ಸ್ಫೋಟಕ ಅರ್ಧಶತಕ ಹಾಗೂ ಸಂಘಟಿತ ಬೌಲಿಂಗ್ ನೆರವಿನಿಂದ ಮಹಿಳಾ ಪ್ರೀಮಿಯರ್ ಲೀಗ್‌ನ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡ ಗುಜರಾತ್ ಜೈಂಟ್ಸ್ (Gujarat Giants) ತಂಡದ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯಗಳಿಸಿತು.

    ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟ್ ಬೀಸಿದ ಗುಜರಾತ್ ತಂಡ 20 ಓವರ್‌ಗಳಿಗೆ 120 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ಮುಂಬೈ ತಂಡಕ್ಕೆ 121 ರನ್‌ಗಳ ಗುರಿ ನೀಡಿತು.

    ಗುಜರಾತ್ ನೀಡಿದ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡ 16.01 ಓವರ್‌ಗೆ ಗುರಿ ತಲುಪಿ ಸುಲಭ ಜಯಸಾಧಿಸಿತು. ನ್ಯಾಟ್ ಸ್ಕೀವರ್ ಬ್ರಂಟ್ 11 ಫೋರ್ ಹೊಡೆಯುವ ಮೂಲಕ 39 ಎಸೆತಗಳಿಗೆ 57 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಸ್ಕೀವರ್ ಹಾಗೂ ಅಮೆಲಿಯಾ ಕೆರ್ ಜೊತೆಯಾಟವಾಡಿ 38 ಎಸೆತಗಳಿಗೆ 45 ರನ್ ಕಲೆಹಾಕಿದರು. ಹೆಯಲಿ ಮ್ಯಾಥ್ಯೂಸ್ (17 ರನ್), ಅಮೆಲಿಯಾ ಕೆರ್ (19 ರನ್) ಗಳಿಸಿ ಔಟಾದರು. ಸಜೀವನ್ ಸಜನ 10 ರನ್ ಹಾಗೂ ಜಿ ಕಮಲಿನಿ 4 ರನ್ ಗಳಿಸಿ ಅಜೇಯರಾಗಿ ಉಳಿದರು.

    ಇದಕ್ಕೂ ಮುನ್ನ ಬ್ಯಾಟ್ ಬೀಸಿದ ಗುಜರಾತ್ ತಂಡಕ್ಕೆ ಆರಂಭದಲ್ಲೇ ಹಿನ್ನಡೆ ಉಂಟಾಯಿತು. 1.2 ಓವರ್‌ನಲ್ಲೇ ಬೆತ್ ಮೂನಿ 3 ಎಸೆತಗಳಿಗೆ 1 ರನ್‌ಗಳಿಸಿ ಔಟಾದರು. ಕಾಶ್ವೀ ಗೌತಮ್ 2 ಫೋರ್ ಹಾಗೂ 1 ಸಿಕ್ಸ್ ಸಿಡಿಸಿ 15 ಎಸೆತಗಳಿಗೆ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆಶ್ಲೇ ಗಾರ್ಡನರ್ 10 ಎಸೆತಗಳಿಗೆ 10 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಕಾಶ್ವೀ ಗೌತಮ್ ಹಾಗೂ ಹರ್ಲಿನ್ ಡಿಯೋಲ್ ಜೊತೆಯಾಟವಾಡಿ 19 ಎಸೆತಗಳಿಗೆ 24 ರನ್‌ಗಳ ಕಲೆಹಾಕಿದರು. ಹರ್ಲಿನ್ ಡಿಯೋಲ್ 4 ಫೋರ್ ಸಿಡಿಸಿ 31 ಬಾಲ್‌ಗಳಿಗೆ 32 ರನ್ ಗಳಿಸಿ ಔಟಾದರು.

  • ವಾರಿಯರ್ಸ್ ಮೇಲೆ ಜೈಂಟ್ಸ್ ಸವಾರಿ; 6 ವಿಕೆಟ್‌ಗಳ ಜಯ – ಗೆಲುವಿನ ಖಾತೆ ತೆರೆದ ಗುಜರಾತ್

    ವಾರಿಯರ್ಸ್ ಮೇಲೆ ಜೈಂಟ್ಸ್ ಸವಾರಿ; 6 ವಿಕೆಟ್‌ಗಳ ಜಯ – ಗೆಲುವಿನ ಖಾತೆ ತೆರೆದ ಗುಜರಾತ್

    ವಡೋದರಾ: ಇಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ (WPL) 3ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (Gujarat Giants) ತಂಡ ಯುಪಿ ವಾರಿಯರ್ಸ್ (UP Warriorz) ತಂಡದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯಗಳಿಸಿತು.

    ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಂಟಿಂಗ್‌ಗೆ ಇಳಿದ ಯುಪಿ ವಾರಿಯರ್ಸ್ ತಂಡ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಗುಜರಾತ್ ತಂಡಕ್ಕೆ 144 ರನ್ ಗಳ ಗುರಿ ನೀಡಿತು.

    144 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ತಂಡ 4 ವಿಕೆಟ್‌ ನಷ್ಟಕ್ಕೆ 144 ರನ್ ಗಳಿಸಿ ಗೆಲುವು ಕಂಡಿತು. ಗುಜರಾತ್ ತಂಡದ ನಾಯಕಿ ಆಶ್ಲೇ ಗಾರ್ಡ್ನರ್ 5 ಫೋರ್ ಹಾಗೂ 3 ಸಿಕ್ಸ್ ಸಿಡಿಸುವ ಮೂಲಕ 29 ಎಸೆತಗಳಿಗೆ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಒಟ್ಟು 32 ಎಸೆತಗಳಿಗೆ 52 ರನ್ ಗಳಿಸಿ ಆಶ್ಲೇ ಗಾರ್ಡ್ನರ್ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಹರ್ಲಿನ್‌ ಡಿಯೋಲ್‌ ಅಯೇಜ 34 ರನ್‌, ಡಿಯಾಂಡ್ರ ಡಾಟಿನ್ ಅಜೇಯ 33 ರನ್‌ ಜವಾಬ್ದಾರಿಯುತ ಬ್ಯಾಟಿಂಗ್‌ನೊಂದಿಗೆ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಆಡಿದ ಯುಪಿ ವಾರಿಯರ್ಸ್ ತಂಡದ ನಾಯಕಿ ದೀಪ್ತಿ ಶರ್ಮ ಆರು ಫೋರ್ ಸಿಡಿಸಿ ತಂಡವನ್ನು ಮುನ್ನಡೆಸಿದರು. ಈ ಮೂಲಕ 27 ಎಸೆತಗಳಿಗೆ 39 ರನ್ ಗಳಿಸಿ ದೀಪ್ತಿ ವಿಕೆಟ್ ಒಪ್ಪಿಸಿದರು. ಉಮಾ ಚೇಟ್ರಿ 4 ಫೋರ್ ಸಿಡಿಸಿ 27 ಎಸೆತಗಳಿಗೆ 24 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಅಲಾನ ಕಿಂಗ್ 14 ಬಾಲ್‌ಗಳಿಗೆ 19 ರನ್‌ಗಳಿಸಿ ಔಟಾಗದೇ 20 ಓವರ್ ಮುಗಿಸಿದರು.

  • WPL 2024: ವಾರಿಯರ್ಸ್‌ ಮನೆಗೆ – ಆರ್‌ಸಿಬಿಗೆ ಪ್ಲೇ ಆಫ್‌ಗೆ; ಅಭಿಮಾನಿಗಳು ಖುಷ್‌

    WPL 2024: ವಾರಿಯರ್ಸ್‌ ಮನೆಗೆ – ಆರ್‌ಸಿಬಿಗೆ ಪ್ಲೇ ಆಫ್‌ಗೆ; ಅಭಿಮಾನಿಗಳು ಖುಷ್‌

    – ದೀಪ್ತಿ ಶರ್ಮಾ ಅರ್ಧಶತಕದ ಹೋರಾಟ ವ್ಯರ್ಥ
    – ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಗೆದ್ದು ಬೀಗಿದ ಗುಜರಾತ್‌

    ನವದೆಹಲಿ: ದೀಪ್ತಿ ಶರ್ಮಾ (Deepti Sharma) ಅವರ ಸ್ಫೋಟಕ ಬ್ಯಾಟಿಂಗ್‌ ಹೊರತಾಗಿಯೂ ಗುಜರಾತ್‌ ಜೈಂಟ್ಸ್‌ (Gujarat Giants) ಮಹಿಳಾ ತಂಡ, ಯುಪಿ ವಾರಿಯರ್ಸ್‌ ವಿರುದ್ಧ 8 ರನ್‌ಗಳ ಜಯ ಸಾಧಿಸಿದೆ. ಪ್ಲೇಫ್‌ ರೇಸ್‌ನಲ್ಲಿದ್ದ ಯುಪಿ ವಾರಿಯರ್ಸ್‌ ತಂಡ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಸೋಲಿನಿಂದ ಆರ್‌ಸಿಬಿ (RCB) ಪ್ಲೇ ಆಫ್‌ ಖಚಿತಪಡಿಸಿಕೊಂಡಿದೆ.

    ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿತ್ತು. 153 ರನ್‌ಗಳ ಗುರಿ ಬೆನ್ನತ್ತಿದ್ದ ಯುಪಿ ವಾರಿಯರ್ಸ್‌ (UP Warriorz) 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 144 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಈ ಸೋಲಿನೊಂದಿಗೆ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿತು. ಇದನ್ನೂ ಓದಿ: ಭಾರೀ ಹೈಡ್ರಾಮಾ ಬಳಿಕ ಟ್ರಯಲ್ಸ್‌ನಲ್ಲಿ ವಿನೇಶ್‌ಗೆ ವಿಜಯ – ಪ್ಯಾರಿಸ್‌ ಒಲಿಂಪಿಕ್ಸ್‌ ಕನಸು ಜೀವಂತ

    ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿದ್ದ ಗುಜರಾತ್‌ ಜೈಂಟ್ಸ್‌ ತಂಡ ಬಳಿಕ ಮೂರು ಪಂದ್ಯಗಳಲ್ಲಿ ಸುಧಾರಿತ ಪ್ರದರ್ಶನ ನೀಡಿತ್ತು. ಸದ್ಯ 7 ಪಂದ್ಯಗಳಲ್ಲಿ 2 ರಲ್ಲಿ ಗೆಲುವು ಸಾಧಿಸಿರುವ ಗುಜರಾತ್‌ ಜೈಂಟ್ಸ್‌ ಮಾ.13 ರಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕೊನೆಯ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಗೆದ್ದರೂ ಸೋತರೂ ಗುಜರಾತ್‌ ತಂಡ ಮನೆಗೆ ತೆರಳಬೇಕಿದೆ. ಯುಪಿ ವಾರಿಯರ್ಸ್‌ ತಂಡವು ತನ್ನ ಲೀಗ್‌ ಸುತ್ತಿನ ಎಲ್ಲಾ ಪಂದ್ಯಗಳನ್ನಾಡಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಹೀಗಾಗಿ 3ನೇ ಸ್ಥಾನದಲ್ಲಿರುವ ಆರ್‌ಸಿಬಿ ಮಾ.12 ರಂದು ನಡೆಯಲಿರುವ ಕೊನೆಯ ಲೀಗ್‌ ಪಂದ್ಯದಲ್ಲಿ ಗೆದ್ದರೂ ಸೋತರೂ ಪ್ಲೇ ಆಫ್‌ ತಲುಪಲಿದೆ.

    ಗುಜರಾತ್‌ ಜೈಂಟ್ಸ್‌ ಪರ ಲಾರಾ ವೊಲ್ವಾರ್ಡ್ಟ್ 43 ರನ್‌, ಬೆತ್‌ ಮೂನಿ 74 ರನ್‌ ಹಾಗೂ ಆಶ್ಲೀಗ್ ಗಾರ್ಡ್ನರ್ 15 ರನ್‌, ಕ್ಯಾಥರಿನ್ ಬ್ರೈಸ್ 11 ರನ್‌ ಗಳಿಸಿದ್ರೆ ಉಳಿದವರು ಅಲ್ಪಮೊತ್ತಕ್ಕೆ ನಿರ್ಗಮಿಸಿದರು. ಚೇಸಿಂಗ್‌ ಆರಂಭಿಸಿದ ಯುಪಿ ವಾರಿಯರ್ಸ್‌ ತಂಡದ ಪರ ಕೊನೆಯವರೆಗೂ ಹೋರಾಡಿದ ದೀಪ್ತಿ ಶರ್ಮಾ 60 ಎಸೆತಗಳಲ್ಲಿ 4 ಸಿಕ್ಸರ್‌, 9 ಬೌಂಡರಿಗಳೊಂದಿಗೆ 88 ರನ್‌ ಗಳಿಸಿದ್ರೆ, ಪೂನಂ ಖೇಮ್ನಾರ್ 36 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.ಇದನ್ನೂ ಓದಿ: ಐತಿಹಾಸಿಕ ಸಾಧನೆ ಬೆನ್ನಲ್ಲೇ ಬಿಸಿಸಿಐನಿಂದ ಗುಡ್‌ನ್ಯೂಸ್‌ – ವಾರ್ಷಿಕ ಸಂಬಳ ಹೊರತುಪಡಿಸಿ ವಿಶೇಷ ವೇತನ ಘೋಷಣೆ

  • WPL – ಮೆಗ್‌ ಲ್ಯಾನಿಂಗ್‌ ಅರ್ಧಶತಕ; ಗುಜರಾತ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 25 ರನ್‌ಗಳ ಗೆಲುವು

    WPL – ಮೆಗ್‌ ಲ್ಯಾನಿಂಗ್‌ ಅರ್ಧಶತಕ; ಗುಜರಾತ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 25 ರನ್‌ಗಳ ಗೆಲುವು

    ಬೆಂಗಳೂರು: ಆರಂಭಿಕ ಆಟಗಾರ್ತಿ ಮೆಗ್‌ ಲ್ಯಾನಿಂಗ್‌ ಅರ್ಧಶತಕ ಹಾಗೂ ಜೆಸ್ ಜೊನಾಸೆನ್, ಅನ್ನಾಬೆಲ್ ಸದರ್ಲೆಂಡ್‌ ಬೌಲಿಂಗ್‌ ನೆರವಿನಿಂದ ಗುಜರಾತ್‌ ಜೈಂಟ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 25 ರನ್‌ಗಳ ಜಯ ಸಾಧಿಸಿದೆ.

    ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಗುಜರಾತ್‌ ತಂಡವು ಫೀಲ್ಡಿಂಗ್‌ ಆಯ್ದುಕೊಂಡಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನೀಡಿದ್ದ 164 ರನ್‌ಗಳ ಗುರಿ ಬೆನ್ನತ್ತಲಾಗದೇ ಸೋಲನುಭವಿಸಿತು. ಗುಜರಾತ್‌ 20 ಓವರ್‌ಗೆ 8 ವಿಕೆಟ್‌ ನಷ್ಟಕ್ಕೆ 138 ರನ್‌ ಗಳಿಸಲಷ್ಟೇ ಶಕ್ತಿವಾಗಿ ಸೋಲೊಪ್ಪಿಕೊಂಡಿತು.

    ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಿಸಿತ್ತು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಶಫಾಲಿ ವರ್ಮಾ ಕೇವಲ 13 ರನ್‌ಗಳಿಗೆ ವಿಕೆಟ್‌ ಒಪ್ಪಿಸಿ ಹೊರ ನಡೆದರು. ಅಲೈಸ್‌ ಕ್ಯಾಪ್ಸಿಗೊ 27 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಈ ಪರಿಸ್ಥಿತಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ ಮೆಗ್‌ ಲ್ಯಾನಿಂಗ್‌ ಅರ್ಧಶತಕ (55 ರನ್‌, 41 ಬಾಲ್‌, 6 ಫೋರ್‌, 1 ಸಿಕ್ಸರ್‌) ಸಿಡಿಸಿ ಮಿಂಚಿದರು.

    ಜೆಮಿಯಾ ರಾಡ್ರಿಗಸ್‌ (7 ರನ್) ಕೂಡ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅನ್ನಾಬೆಲ್‌ ಸದರ್ಲೆಂಡ್‌ 20, ಜೆಸ್ ಜೊನಾಸೆನ್ 11, ಅರುಂಧತಿ ರೆಡ್ಡಿ ಮತ್ತು ರಾಧಾ ಯಾದವ್ ತಲಾ 5, ಶಿಖಾ ಪಾಂಡೆ 14 (ಔಟಾಗದೆ) ರನ್‌ ಗಳಿಸಿ ತಂಡದ ಮೊತ್ತ 162 ಕ್ಕೆ ತಂದು ನಿಲ್ಲಿಸಿದರು.

    ಹೋರಾಟದ ಮೊತ್ತವನ್ನು ಬೆನ್ನತ್ತಿದ ಗುಜರಾತ್‌ ತಂಡವು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಬೆತ್ ಮೂನಿ ಕೇವಲ 12 ರನ್‌ ಗಳಿಸಿ ಔಟಾದರು. ಲಾರಾ ವೊಲ್ವಾರ್ಡ್ಟ್ ಶೂನ್ಯ ಸುತ್ತಿ ಹೊರನಡೆದರು. ಫೋಬೆ ಲಿಚ್ಫೀಲ್ಡ್ 15, ವೇದಾ ಕೃಷ್ಣಮೂರ್ತಿ 12 ರನ್‌ ಅಷ್ಟೇ ಗಳಿಸಿದರು. ಆಶ್ಲೀ ಗಾರ್ಡ್ನರ್ ಏಕಾಂಗಿ ಹೋರಾಟ ಕೈಗೂಡಲಿಲ್ಲ. ಗಾರ್ಡ್ನರ್‌ 41 ರನ್‌ ಗಳಿಸಿ (5 ಫೋರ್‌, 1 ಸಿಕ್ಸರ್‌) ಭರವಸೆ ಇದ್ದಾಗಲೇ ವಿಕೆಟ್‌ ಕೈಚೆಲ್ಲಿದರು. ತನುಜಾ ಕನ್ವರ್ 13, ಮೇಘನಾ ಸಿಂಗ್ 10 ರನ್‌ ಗಳಿಸಿದ್ದು ಬಿಟ್ಟರೆ ಯಾವ ಆಟಗಾರ್ತಿಯೂ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರಿಂದ ತಂಡವು ಸೋಲೊಪ್ಪಿಕೊಂಡಿತು.

    ಡೆಲ್ಲಿ ತಂಡದ ಪರ ಜೆಸ್ ಜೊನಾಸೆನ್ ಹಾಗೂ ರಾಧಾ ಯಾದವ್ ತಲಾ 3 ವಿಕೆಟ್‌ ಕಬಳಿಸಿ ತಂಡದ ಗೆಲುವಿಗೆ ನೆರವಾದರು. ಗುಜರಾತ್‌ ತಂಡದ ಪರ ಮೇಘನಾ ಸಿಂಗ್ 4 ವಿಕೆಟ್‌ ಕಬಳಿಸಿ ಗಮನ ಸೆಳೆದಿದ್ದರು. ಆಶ್ಲೀ ಗಾರ್ಡ್ನರ್ 2 ವಿಕೆಟ್‌ ಉರುಳಿಸಿದ್ದರು.

  • ಗ್ರೇಸ್‌ ಹ್ಯಾರಿಸ್‌ ಸ್ಫೋಟಕ ಅರ್ಧಶತಕ – ಯುಪಿಗೆ 6 ವಿಕೆಟ್‌ಗಳ ಭರ್ಜರಿ ಜಯ

    ಗ್ರೇಸ್‌ ಹ್ಯಾರಿಸ್‌ ಸ್ಫೋಟಕ ಅರ್ಧಶತಕ – ಯುಪಿಗೆ 6 ವಿಕೆಟ್‌ಗಳ ಭರ್ಜರಿ ಜಯ

    ಬೆಂಗಳೂರು: ಗ್ರೇಸ್‌ ಹ್ಯಾರಿಸ್‌ (Grace Harris) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಯುಪಿ ವಾರಿಯರ್ಸ್‌ (UP Warriorz), ಗುಜರಾತ್‌ ಜೈಂಟ್ಸ್‌ (Gujarat Giants) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲ ಬ್ಯಾಟ್‌ ಮಾಡಿದ ಗುಜರಾತ್‌ ಜೈಂಟ್ಸ್‌ 5 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಯುಪಿ ವಾರಿಯರ್ಸ್‌ 15.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 143 ರನ್‌ ಹೊಡೆಯುವ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿತು.

    ಯುಪಿ ಪರ ಗ್ರೇಸ್‌ ಹ್ಯಾರಿಸ್‌ ಔಟಾಗದೇ 60 ರನ್‌ (33 ಎಸೆತ, 9 ಬೌಂಡರಿ, 2 ಸಿಕ್ಸರ್‌) ಹೊಡೆದರೆ ಆರಂಭಿಕ ಆಟಗಾರ್ತಿ, ನಾಯಕಿ ಅಲಿಸ್ಸಾ ಹೀಲಿ 33 ರನ್‌ (21 ಎಸೆತ, 7 ಬೌಂಡರಿ) ಹೊಡೆದರು. ಇದನ್ನೂ ಓದಿ: ಐದನೇ ಬಾರಿಗೆ ಬೆಂಗಳೂರಿನಲ್ಲಿ ಬಾಂಬ್‌ ಸ್ಟೋಟ: ಹಿಂದೆ ಎಲ್ಲೆಲ್ಲಿ ಸಂಭವಿಸಿತ್ತು?

    ಗುಜರಾತ್‌ ಜೈಂಟ್ಸ್‌ ಪರ ಆಶ್ಲೀಗ್ ಗಾರ್ಡ್ನರ್ 30 ರನ್‌ (17 ಎಸೆತ, 4 ಬೌಂಡರಿ, 1 ಸಿಕ್ಸರ್)‌, ಫೋಬೆ ಲಿಚ್ಫೀಲ್ಡ್ 35 ರನ್‌ (26 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದರು.

    ಸದ್ಯ ಡಬ್ಲ್ಯೂಪಿಎಲ್‌ (WPL) ಅಂಕ ಪಟ್ಟಿಯಲ್ಲಿ ತಲಾ 4 ಅಂಕಗಳನ್ನು ಪಡೆದಿದ್ದರೂ ನೆಟ್‌ ರನ್‌ ರೇಟ್‌ ಆಧಾರದಲ್ಲಿ ಡೆಲ್ಲಿ ಮೊದಲ ಸ್ಥಾನ ಪಡೆದರೆ ಆರ್‌ಸಿಬಿ ಎರಡನೇ ಸ್ಥಾನ ಪಡೆದಿದೆ. ಯುಪಿ, ಮುಂಬೈ ಅನುಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿದೆ. ಆಡಿರುವ ಮೂರು ಪಂದ್ಯಗಳನ್ನು ಸೋತಿರುವ ಗುಜರಾತ್‌ 0 ಅಂಕದೊಂದಿಗೆ ಐದನೇ ಸ್ಥಾನದಲ್ಲಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಕೇಸ್‌ – ಓರ್ವ ವಶಕ್ಕೆ