Tag: Gujarat floods

  • Gujarat Floods | ಸ್ಕೂಟಿ ಮೇಲೆ ಹೊತ್ತೊಯ್ದು ಮೊಸಳೆ ರಕ್ಷಣೆ – ವೀಡಿಯೋ ವೈರಲ್

    Gujarat Floods | ಸ್ಕೂಟಿ ಮೇಲೆ ಹೊತ್ತೊಯ್ದು ಮೊಸಳೆ ರಕ್ಷಣೆ – ವೀಡಿಯೋ ವೈರಲ್

    ಗಾಂಧಿನಗರ: ಗುಜರಾತ್‌ನಲ್ಲಿ ಪ್ರವಾಹದಿಂದಾಗಿ (Gujarat floods) ಬೀದಿಯಲ್ಲಿ ಬಿದ್ದಿದ್ದ ಮೊಸಳೆಗಳನ್ನು ರಕ್ಷಿಸುವ ಕೆಲಸಗಳು ಭರದಿಂದ ಸಾಗುತ್ತಿವೆ. ಅದರಲ್ಲೂ ವಡೋದರಾ ನಗರದಲ್ಲಿ ಯುವಕರಿಬ್ಬರು ಮೊಸಳೆಯೊಂದನ್ನು (Crocodile) ಸ್ಕೂಟಿ ಮೇಲೆ ಹೊತ್ತೊಯ್ದು ರಕ್ಷಿಸಿದ ಘಟನೆ ನಡೆದಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಂದೀಪ್ ಠಾಕೂರ್ ಮತ್ತು ರಾಜ್ ಭಾವ್ಸಾರ್ ಎಂಬ ಯುವಕರಿಬ್ಬರು ಮೊಸಳೆಯನ್ನು ಸ್ಕೂಟಿ ಮೇಲೆ ಹೊತ್ತೊಯ್ದು ರಕ್ಷಿಸಿದ್ದಾರೆ. ಪ್ರವಾಹದಿಂದಾಗಿ ನೀರಿನಲ್ಲಿ ತೇಲಿಕೊಂಡು ಬಂದು ರಸ್ತೆಯಲ್ಲಿ ಬಿದ್ದಿದ್ದ ಮೊಸಳೆಯ ಬಾಯಿಗೆ ಪಟ್ಟಿ ಕಟ್ಟಿ, ಬಳಿಕ ಸ್ಕೂಟಿ ಮೇಲೆ ಅಡ್ಡಲಾಗಿ ಮಲಗಿಸಿಕೊಂಡು ಪ್ರಾಣಿ ರಕ್ಷಣಾ ಸ್ಥಳಕ್ಕೆ ಸಾಗಿಸಿದ್ದಾರೆ. ಇದನ್ನೂ ಓದಿ: ಗೌರಿ ಹಬ್ಬದಂದು ಮುಖ್ಯಮಂತ್ರಿಗಳಿಂದ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿ ಉದ್ಘಾಟನೆ – ಡಿಕೆಶಿ

    ಪ್ರವಾಹದಿಂದಾಗಿ ವಡೋದರಾದ (Vadodara) ವಿಶ್ವಾಮಿತ್ರಿ ನದಿಯಿಂದ ಮೊಸಳೆಗಳ ದಂಡೇ ಊರಿಗೆ ನುಗ್ಗಿವೆ. ಮೊಸಳೆ ಜೊತೆಗೆ ಇನ್ನೂ ಹಲವಾರು ಪ್ರಾಣಿಗಳು ಪ್ರವಾಹದಿಂದ ತೊಂದರೆಗೆ ಸಿಲುಕಿವೆ. ಇದರಿಂದಾಗಿ ಪ್ರಾಣಿಗಳ ರಕ್ಷಣೆಗೆ ವಡೋದರಾದಲ್ಲಿ ಕೆಲವು ವಸತಿ ಪ್ರದೇಶಗಳನ್ನು ನಿಗದಿಪಡಿಸಲಾಗಿದೆ.

    ಈವರೆಗೆ ನಗರದಲ್ಲಿ 40 ಮೊಸಳೆಗಳು ಕಂಡುಬಂದಿವೆ. ಈ ಪೈಕಿ 33 ಮೊಸಳೆಗಳನ್ನು ಸುರಕ್ಷಿತವಾಗಿ ನದಿಗೆ ಬಿಡಲಾಗಿದೆ. 5 ಮೊಸಳೆಗಳು ಪುನರ್ವಸತಿ ಕೇಂದ್ರದಲ್ಲಿವೆ. ಎರಡು ಮೊಸಳೆಗಳು ಅಪಘಾತದಲ್ಲಿ ಸಾವನ್ನಪ್ಪಿವೆ ಎಂದು ವಡೋದರಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಞೇಶ್ವರ್ ವ್ಯಾಸ್ ಮಾಹಿತಿ ನೀಡಿದ್ದಾರೆ.

    ಅರಣ್ಯ ಇಲಾಖೆಯ ಜೊತೆ ಎನ್‌ಜಿಒ ತಂಡಗಳು ಕೂಡ ಪ್ರಾಣಿಗಳ ರಕ್ಷಣೆಯಲ್ಲಿ ತೊಡಗಿವೆ. ಹಾಗೆಯೇ ಪ್ರಾಣಿಗಳ ರಕ್ಷಣೆಗೆ ಸಹಾಯವಾಣಿ ತೆರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಓಡಿಸುತ್ತಿದ್ದ ಹಳೇ ಬೈಕ್‌ಗೆ ಹೊಸ ರೂಪ – 1981 ರ ಮಾಡೆಲ್ ಎಝಡಿ ರೋಡ್ ಕಿಂಗ್ ಬೈಕ್

  • Rain Alert | ಆಲಮಟ್ಟಿ ಡ್ಯಾಂನಿಂದ 1.76 ಲಕ್ಷ, ನಾರಾಯಣಪುರ ಜಲಾಶಯದಿಂದ 1.90 ಲಕ್ಷ ಕ್ಯುಸೆಕ್‌ ನೀರು ನದಿಗೆ

    Rain Alert | ಆಲಮಟ್ಟಿ ಡ್ಯಾಂನಿಂದ 1.76 ಲಕ್ಷ, ನಾರಾಯಣಪುರ ಜಲಾಶಯದಿಂದ 1.90 ಲಕ್ಷ ಕ್ಯುಸೆಕ್‌ ನೀರು ನದಿಗೆ

    – ಗುಜರಾತ್‌ಗೆ ಈಗ ಚಂಡಮಾರುತ ಭೀತಿ
    – ಬಾಗಲಕೋಟೆ, ರಾಯಚೂರಿಗೆ ಪ್ರವಾಹ ಭೀತಿ

    ಬೆಂಗಳೂರು: ಮಹಾರಾಷ್ಟ್ರದಲ್ಲಿ ಭಾರೀ ಮಳೆ (Heavy Rain In Maharashtra) ಕಾರಣ ಬೆಳಗಾವಿ ಭಾಗದ ನದಿಗಳೆಲ್ಲಾ ಉಕ್ಕಿಹರಿಯುತ್ತಿವೆ. ಈ ಬೆನ್ನಲ್ಲೇ ಆಲಮಟ್ಟಿ ಜಲಾಶಯದಿಂದ ಇನ್ನೂ ಹೆಚ್ಚಿನ ನೀರನ್ನು ಬಿಡುವಂತೆ ಮಹಾರಾಷ್ಟ್ರ ನೀರಾವರಿ ಇಲಾಖೆ ಮನವಿ ಮಾಡಿದೆ.

    ಮಹಾರಾಷ್ಟ್ರ ಮನವಿ ಮಾಡಿರುವ ಕಾರಣ, ಕೃಷ್ಣಾ ನದಿ (Krishna River) ಪಾತ್ರದಲ್ಲಿ 5 ದಿನ ಆರೆಂಜ್‌ ಅಲರ್ಟ್ ಘೋಷಣೆ ಮಾಡಲಾಗಿದೆ. ಸದ್ಯ ಆಲಮಟ್ಟಿ ಜಲಾಶಯದಿಂದ (Almatti Dam) 1.76 ಲಕ್ಷ ಕ್ಯುಸೆಕ್‌ ನೀರು, ನಾರಾಯಣಪುರ ಡ್ಯಾಂನಿಂದ (Narayanapura Dam) 1.90 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದನ್ನೂ ಓದಿ: ಯುಜಿ ನೀಟ್ & ಯುಜಿ ಸಿಇಟಿ-24 | ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟ – ಆ.31 ರಿಂದ ʻಚಾಯ್ಸ್ʼ ಆಯ್ಕೆ!

    ನಿರಂತರ ಮಳೆ ಹಿನ್ನೆಲೆ ಬಾಗಲಕೋಟೆ, ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಯಾದಗಿರಿಯ ಗುರುಸಣಗಿ ಬ್ಯಾರೇಜ್‌ನಿಂದ ಭೀಮಾನದಿಗೆ 1 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಇದರಿಂದ ಭೀಮಾತೀರದ ವೀರಾಂಜನೇಯ, ಕಂಗಳೇಶ್ವರ ದೇವಾಲಯಗಳು ಮುಳುಗಡೆ ಆಗಿವೆ.

    ಅಲ್ಲದೇ ಅಫಜಲಪುರದ ಘತ್ತರಗಾ ಸೇತುವೆ ಜಲಾವೃತವಾಗಿವೆ. ಹಾಸನದ ಸಕಲೇಶಪುರ ಭಾಗದಲ್ಲಿ ಮತ್ತೆ ಗುಡ್ಡಕುಸಿತದ ಭೀತಿ ಆವರಿಸಿದೆ. ಇನ್ನೂ ಶುಕ್ರವಾರ ಸಂಜೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲೂ ಮಳೆಯಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಇದನ್ನೂ ಓದಿ: `ಕರಿಯಾ’ ಸಿನಿಮಾ ರೀ ರಿಲೀಸ್ ವೇಳೆ ಪುಂಡಾಟಿಕೆ – ಬೆಂಗಳೂರಲ್ಲಿ ಕೆಲ ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದ ಪೊಲೀಸ್!

    ಅತ್ತ, ಪ್ರವಾಹದಿಂದ (Gujarat floods) ತತ್ತರಿಸಿರುವ ಗುಜರಾತ್‌ಗೆ ಈಗ ಚಂಡಮಾರುತ ಭೀತಿ ಎದುರಾಗಿದೆ. ಅರಬ್ಬಿ ಸಮುದ್ರದಲ್ಲಿ ರೂಪುಗೊಳ್ತಿರುವ ಚಂಡಮಾರುತ ಮುಂದಿನ 12 ಗಂಟೆಯಲ್ಲಿ ಕಛ್ ತೀರಕ್ಕೆ ಅಪ್ಪಳಿಸುವ ಸಂಭವ ಇದೆ. ಹೀಗಾಗಿ ತೀರ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸಿ: ಪ್ರಿಯಾಂಕ್‌ ಖರ್ಗೆ