ನವದೆಹಲಿ: ಕಳೆದ ಗುಜರಾತ್ ಚುನಾವಣೆಯಲ್ಲಿ(Gujarat Election) ಪ್ರತಿರೋಧ ತೋರಿದ್ದ ಕಾಂಗ್ರೆಸ್(Congress) ಈ ಬಾರಿ ಯಾವುದೇ ಹೋರಾಟ ನೀಡದೇ ಹೀನಾಯವಾಗಿ ಸೋತಿದೆ.
ಮೋದಿ, ಶಾ(Narendra Modi, Amit Shah) ತಂತ್ರಗಾರಿಕೆಯ ಮುಂದೆ ಕಾಂಗ್ರೆಸ್ ರಣತಂತ್ರ ಸಂಪೂರ್ಣ ವಿಫಲವಾಗಿದೆ. 27 ವರ್ಷಗಳಿಂದ ಆಡಳಿತದಲ್ಲಿರುವ ಪಕ್ಷದ ವಿರುದ್ಧ ಆಡಳಿತ ವಿರೋಧಿ ಅಲೆ ಏಳುವುದು ಸಹಜ. ಈ ಕಾರಣಕ್ಕೆ ಈ ಅಂಶಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರಚಾರ ನಡೆಸಿದ್ದರೂ ಮತದಾರ ಈ ಬಾರಿಯೂ ಕಾಂಗ್ರೆಸ್ ಕೈ ಹಿಡಿಯಲಿಲ್ಲ.
ಸೋಲಿಗೆ ಕಾರಣ ಏನು?
ಸತತ ಸೋಲಿನಿಂದಾಗಿ ಗುಜರಾತ್‌ನಲ್ಲಿ ಕಾಂಗ್ರೆಸ್ ಸಂಘಟನೆಯೇ ದುರ್ಬಲವಾಗಿತ್ತು. ಆರಂಭದಲ್ಲೇ ಹುಮ್ಮಸ್ಸು ಕಳೆದುಕೊಂಡಿದ್ದ ಕಾಂಗ್ರೆಸ್ ನಾಯಕರು ನೆಪ ಮಾತ್ರಕ್ಕೆ ಸ್ಪರ್ಧಿಸಿದ್ದರು. ಬಿಜೆಪಿ(BJP) ಸರ್ಕಾರವನ್ನು ಟೀಕಿಸಲು ಪ್ರಬಲ ಅಸ್ತ್ರಗಳಿಲ್ಲದೇ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. ನಿರುದ್ಯೋಗ, ಬೆಲೆ ಏರಿಕೆ, ಜಿಡಿಪಿ ಕುಸಿತವನ್ನೇ ನಾಯಕರು ಪ್ರಚಾರ ಮಾಡಿದ್ದರೂ ಇದು ಯಾವುದು ಜನರಿಗೆ ತಲುಪಲಿಲ್ಲ.
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯ((Bharat Jodo Yatra) ಕಡೆ ಗಮನ ನೀಡಿತೇ ಹೊರತು ಗುಜರಾತ್ ಕಡೆ ಹೆಚ್ಚಿನ ಗಮನ ಹರಿಸಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಹೊರತುಪಡಿಸಿ ಬೇರೆ ರಾಷ್ಟ್ರೀಯ ನಾಯಕರು ಗುಜರಾತ್ ಕಡೆ ತಲೆ ಹಾಕಲಿಲ್ಲ. ನೆಪ ಮಾತ್ರಕ್ಕೆ ರಾಹುಲ್ ಪ್ರಚಾರ ನಡೆಸಿದರೂ ಪ್ರಿಯಾಂಕಾ, ಸೋನಿಯಾಗಾಂಧಿ ಗೈರಾಗಿದ್ದರು. ಇದನ್ನೂ ಓದಿ: ಫಲ ನೀಡಿತು ಚಾಣಕ್ಯ ಜೋಡಿಯ ತಂತ್ರ – ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳೇನು?
ಕಾಂಗ್ರೆಸ್ ಚಾಣಕ್ಯ ಅಹಮದ್ ಪಟೇಲ್ ನಿಧನ ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ನೀಡಿದ್ದು, ಸ್ಥಳೀಯ ನಾಯಕರ ಮೇಲೆ ಚುನಾವಣೆ ಅವಲಂಬನೆಯಾಗಿತ್ತು. ಆದರೆ ಸ್ಥಳೀಯ ನಾಯಕರಲ್ಲಿ ಬಿಜೆಪಿಗೆ ಫೈಟ್ ನೀಡಬಲ್ಲ ನಾಯಕರು ಕಾಂಗ್ರೆಸ್‌ನಲ್ಲಿ ಇರಲಿಲ್ಲ. ಹಾರ್ದಿಕ್, ಅಲ್ಪೇಶ್ ಸೇರಿ ಕಡೆಯ ಸಮಯದಲ್ಲಿ ಪ್ರಮುಖ ನಾಯಕರು ಪಕ್ಷಾಂತರ ಮಾಡಿದ್ದರಿಂದ ಬಿಜೆಪಿಗಿದ್ದ ವಿರೋಧ ಕಡಿಮೆಯಾಯಿತು. ಇದರ ಜೊತೆ ಹಲವು ರಾಜ್ಯಗಳನ್ನು ಕಳೆದುಕೊಂಡಿದ್ದರಿಂದ ಆರ್ಥಿಕ ಶಕ್ತಿಯೂ ಕಡಿಮೆಯಾಗಿತ್ತು.
ಕೊನೆ ಕ್ಷಣದಲ್ಲಿ ಕಾಂಗ್ರೆಸ್ ವೋಟಿನ ಬುಟ್ಟಿಗೆ ಆಪ್ ಲಗ್ಗೆ ಇಟ್ಟಿತ್ತು. ಪರಿಣಾಮ ಕಾರಣ ಕಡಿಮೆ ಅಂತರದಲ್ಲಿ ಗೆಲ್ಲಬಹುದಾಗಿದ್ದ ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳು ಸೋತಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಸತತ 7ನೇ ಬಾರಿ ಅಧಿಕಾರಕ್ಕೆ ಏರುವ ಮೂಲಕ ಗುಜರಾತ್‌ನಲ್ಲಿ(Gujarat) ಬಿಜೆಪಿ ಐತಿಹಾಸಿಕ ಸಾಧನೆ ಮಾಡಿದೆ. ಈ ಫಲಿತಾಂಶ ಬರಲು ಮೋದಿ, ಶಾ ಜೋಡಿ ಬಹಳ ಶ್ರಮ ಪಟ್ಟಿತ್ತು.
2024ರ ಲೋಕಸಭಾ ಚುನಾವಣೆಯನ್ನು ಗೆಲ್ಲಬೇಕಾದರೆ ತವರು ರಾಜ್ಯವನ್ನು ಗೆಲ್ಲಲ್ಲೇಬೇಕಿತ್ತು. ಈ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ಗೃಹ ಸಚಿವ ಅಮಿತ್ ಶಾ(Amit Shah) ಚುನಾವಣೆಗೂ ಒಂದು ವರ್ಷದ ಮೊದಲೇ ಪ್ಲಾನ್ ಮಾಡಿದ್ದರು.
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯ ಮಾಹಿತಿ ತಿಳಿದ ಮೋದಿ, ಶಾ ಜೋಡಿ ಕಳೆದ ವರ್ಷವೇ ಸಂಪುಟ ಪುನರ್ ರಚನೆ ಮಾಡಿದ್ದರು. ಹಿರಿಯರಿಗೆ ಕೊಕ್ ನೀಡಿ ‘ಯಂಗ್ ಕ್ಯಾಬಿನೆಟ್’ ರಚನೆ ಮಾಡಿದ್ದರು.
ಹಿರಿಯ ನಾಯಕರಾದ ನಿತೀನ್ ಪಟೇಲ್, ವಿಜಯ್ ರೂಪಾನಿ ಸೇರಿದಂತೆ ಎಂಟು ಹಿರಿಯರನ್ನು ಕ್ಯಾಬಿನೆಟ್‌ನಿಂದ ತೆಗೆದು ಆದಿವಾಸಿ, ಒಬಿಸಿ, ಪಾಟಿದಾರ್ ಸಮುದಾಯದ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿತ್ತು. ಎರಡು ದಶಕಗಳ ಬಳಿಕ ಪಾಟಿದಾರ್ ಸಮುದಾಯಕ್ಕೆ ಸಿಎಂ ಸ್ಥಾನ ಸಿಕ್ಕಿತ್ತು. ಉತ್ತರ ಪ್ರದೇಶದಲ್ಲೂ ಬಿಜೆಪಿ ಸಣ್ಣ ಸಣ್ಣ ಸಮುದಾಯದ ನಾಯಕರಿಗೆ ಮಂತ್ರಿ ಸ್ಥಾನ ಮತ್ತು ಚುನಾವಣೆಯಲ್ಲಿ ಟಿಕೆಟ್ ನೀಡಿತ್ತು. ಈ ತಂತ್ರಗಾರಿಕೆ ಯಶ್ವಸಿಯಾದ ಬೆನ್ನಲ್ಲೇ ಅದನ್ನೂ ಗುಜರಾತ್‌ನಲ್ಲೂ ಅಳವಡಿಸಿದ್ದು ಯಶಸ್ವಿಯಾಗಿದೆ. ಇದನ್ನೂ ಓದಿ: ಆಪ್ ಗೆದ್ದರೂ ದೆಹಲಿ ಮೇಯರ್ ಹುದ್ದೆ ಬಿಜೆಪಿಗೆ ಸಿಗುತ್ತಾ?
ಪಾಟೀದಾರ್ ಸಮುದಾಯದ ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಪಾಟೀದಾರ್ ಸಮುದಾಯದ ಅಸಮಾಧಾನವನ್ನು ಚಾಣಕ್ಯ ಜೋಡಿ ತಣ್ಣಗೆ ಮಾಡಿತ್ತು.
2017ರಲ್ಲಿ ಬಿಜೆಪಿಗೆ ಸಡ್ಡು ಹೊಡೆದಿದ್ದ ಪಾಟೀದಾರ್ ಚಳವಳಿ ನಾಯಕ ಹಾರ್ದಿಕ್ ಪಟೇಲ್ ಹಾಗೂ ಒಬಿಸಿ ಯುವ ನಾಯಕ ಅಲ್ಪೇಶ್ ಠಾಕೂರ್ ಅವರನ್ನು ಬಿಜೆಪಿಗೆ ಸೇರಿಸಲಾಯಿತು. ಹೋರಾಟ ಮಾಡುವ ನಾಯಕರೇ ಬಿಜೆಪಿ ಸೇರಿದ್ದರಿಂದ ಅವರ ಅಭಿಮಾನಿಗಳು ಸಹಜವಾಗಿಯೇ ಬಿಜೆಪಿ ಪರ ನಿಂತರು, ಹೋರಾಟದ ಕಿಚ್ಚು ಕಡಿಮೆಯಾಯಿತು.
ವಿರೋಧ ವ್ಯಕ್ತವಾದರೂ ಹಿರಿಯರನ್ನು ಕೈ ಬಿಟ್ಟು ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಾಯಿತು. ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ 27 ರ್‍ಯಾಲಿ ಮಾಡಿದ್ದರು. ಅಷ್ಟೇ ಅಲ್ಲದೇ ಎರಡು ಐತಿಹಾಸಿಕ ರೋಡ್ ಶೋ ಮೂಲಕ ಗುಜರಾತಿಗಳ ಮನಗೆದ್ದಿದ್ದರು.
ಬಹಳ ಮುಖ್ಯವಾಗಿ 2017ರ ಚುನಾವಣೆಯಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಬಹಳ ಕಡಿಮೆ ಮತಗಳ ಅಂತರದಿಂದ ಸೋತಿತ್ತು. ಈ ಕ್ಷೇತ್ರಗಳಲ್ಲಿ ಈ ಬಾರಿ ಜಯ ಸಾಧಿಸಲೇಬೇಕೆಂದು ಪಕ್ಷ ಸಂಘಟನೆ ಮಾಡಿದ್ದು ಫಲ ನೀಡಿದೆ.
ಇಷ್ಟೇ ಅಲ್ಲದೇ ಅಭಿವೃದ್ಧಿ ಕೆಲಸಗಳನ್ನು ಪ್ರಚಾರ ಮಾಡಿತ್ತು. ಮೋದಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಅಭಿವೃದ್ಧಿ ಸಮಸ್ಯೆಯಾಗಿತ್ತು. ಸರ್ದಾರ್ ಸರೋವರ ಯೋಜನೆ ನೀರು ತಡವಾಗಿ ಗ್ರಾಮಗಳನ್ನು ತಲುಪಲು ಕಾಂಗ್ರೆಸ್ ಕಾರಣ ಎಂದು ಆರೋಪ ಮಾಡಿದ್ದರು.
27 ವರ್ಷಗಳ ಆಡಳಿತದ ಬಳಿಕವೂ ಗೆಲ್ಲವುದು ಬಹಳ ಸುಲಭದ ಮಾತಲ್ಲ. ಆದರೆ ಈಗ 7ನೇ ಬಾರಿ ಅಧಿಕಾರಕ್ಕೆ ಏರಿ ಕಾಂಗ್ರೆಸ್ ಪಕ್ಷವನ್ನೇ ಬಿಜೆಪಿ ಬಹುತೇಕ ಹೊಸಕಿ ಹಾಕಿದೆ. ಕಾಂಗ್ರೆಸ್ ಮತಗಳನ್ನು ಆಪ್ ವಿಭಜಿಸಿದ್ದರಿಂದ ಬಿಜೆಪಿಯ ಗೆಲುವು ಸುಗಮವಾಗಿದೆ.
ದೇಶ ಆಳಬೇಕಾದರೆ ನಾಯಕ ಮೊದಲು ತನ್ನ ರಾಜ್ಯವನ್ನು ಗೆಲ್ಲಬೇಕು. ಪ್ರಧಾನಿ ಮೋದಿ ರಾಜ್ಯವನ್ನು ಗೆದ್ದಿರುವುದು ಮಾತ್ರವಲ್ಲ ಕ್ಲೀನ್ ಸ್ವೀಪ್‌ನೊಂದಿಗೆ ಗೆಲ್ಲುವ ಮೂಲಕ 2024ರ ಚುನಾವಣೆಯ ಮೊದಲ ಪರೀಕ್ಷೆಯನ್ನೂ ರ‍್ಯಾಂಕ್‌ನೊಂದಿಗೆ ಗೆದ್ದಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು : 2023ರ ಚುನಾವಣೆಯಲ್ಲಿ ನೂರಕ್ಕೆ ನೂರು ಬಿಜೆಪಿ (BJP) ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವಿಶ್ವಾಸ ವ್ಯಕ್ತಪಡಿಸಿದರು.
ಗುಜರಾತ್ (Gujarat) ಮತ್ತು ಹಿಮಾಚಲ ಪ್ರದೇಶದ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಜಯ ಎಂಬ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜನರು ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಲಿದ್ದಾರೆ. ಜನರು ಸುಳ್ಳು ಆರೋಪಗಳು ಹಾಗೂ ರಾಜಕೀಯ ಆರೋಪಗಳಿಗೆ ಬೆಲೆ ಕೊಡುವುದಿಲ್ಲ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಹುನ್ನಾರ – ರಸ್ತೆಯುದ್ದಕ್ಕೂ ಮೊಳೆಗಳನ್ನು ಹಾಕಿದ ಕಿಡಿಗೇಡಿಗಳು
ಎರಡು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಇಡೀ ಭಾರತ, ವಿಶ್ವ ಬೆಂಬಲ ಕೊಡುತ್ತಿದೆ. ಹೀಗಾಗಿ ಗುಜರಾತ್‌ನಲ್ಲಿ 7ನೇ ಬಾರಿ ಗೆಲುವು ಸಾಧಿಸುತ್ತಿದ್ದೇವೆ ಎಂದರು. ಈ ಚುನಾವಣೆ (Election) ಫಲಿತಾಂಶ ಮುಂಬರುವ ಕರ್ನಾಟಕ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. 2023ರ ಚುನಾವಣೆಯಲ್ಲಿ ನೂರಕ್ಕೆ ನೂರು ಬಿಜೆಪಿ ಅಧಿಕಾರಕ್ಕೆ ಬರಲಿದೆ ಅಂತ ಭವಿಷ್ಯ ನುಡಿದರು. ಇದನ್ನೂ ಓದಿ: ಗಡಿ ವಿವಾದ ಜೀವಂತವಾಗಿಡಲು ಮಹಾರಾಷ್ಟ್ರ ಪುಂಡಾಟಿಕೆ ಮಾಡುತ್ತಿದೆ: ಸಿದ್ದರಾಮಯ್ಯ
Live Tv
[brid partner=56869869 player=32851 video=960834 autoplay=true]
ಲಕ್ನೋ/ಗಾಂಧಿನಗರ: ಬಿಜೆಪಿ (BJP) ಚುನಾವಣೆ ಗೆಲ್ಲಲು ಗಣ, ಹೆಂಡದ ಹೊಳೆ ಹರಿಸುತ್ತಿದೆ ಎಂದು ಲೋಕಸಭಾ ಚುನಾವಣಾ ಆಕಾಂಕ್ಷಿ ಹಾಗೂ ಸಮಾಜವಾದಿ ಪಕ್ಷದ (Samajwadi Party) ನಾಯಕಿ ಡಿಂಪಲ್ ಯಾದವ್ (Dimple Yadav) ಎಂದು ಆರೋಪಿಸಿದ್ದಾರೆ.
होटल पाम, स्टेशन रोड, मैनपुरी में सैकड़ों की संख्या में भाजपा नेता, कार्यकर्ता इकट्ठे होकर निरंतर शराब और पैसा बंटवा रहे हैं।
ಈ ಬಗ್ಗೆ ಚುನಾವಣಾ ಆಯೋಗಕ್ಕೂ ಈ ಬಗ್ಗೆ ದೂರು ನೀಡಲಾಗುವುದು. ಅಲ್ಲದೇ ಮತದಾನ ಪ್ರಾರಂಭವಾಗುವ 24 ಗಂಟೆಗಳ ಮೊದಲು ಸಮಾಜವಾದಿ ಪಕ್ಷದ ಶಾಸಕರು ಬಿಜೆಪಿಯ ಅಕ್ರಮ ಚಟುವಟಿಕೆಯ ವಿರುದ್ಧ ಧರಣಿ ಕೂರಲಿದ್ದರೆ ಎಂದು ಎಚ್ಚರಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ, ರಾಮ್‌ಪುರ್ ಸದರ್ ಮತ್ತು ಖತೌಲಿ ವಿಧಾನಸಭಾ ಕ್ಷೇತ್ರಗಳು ಮತ್ತು ಮೈನ್‌ಪುರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷ-ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಗುಜರಾತ್‌ನಲ್ಲಿಂದು ಮತದಾನ ಅಂತ್ಯ:
ಗುಜರಾತ್ ವಿಧಾನಸಭೆ ಚುನಾವಣೆಯ (Gujarat Election) 2ನೇ ಮತ್ತು ಕೊನೆಯ ಹಂತದ ಮತದಾನ ನಡೆಯುತ್ತಿದೆ. 93 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆಡಳಿತ ವಿರೋಧಿ ಅಲೆ ಮೀರಿ ಐತಿಹಾಸಿಕ ಗೆಲವು ಸಾಧಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದರೇ, ಕಾಂಗ್ರೆಸ್ ಕೂಡಾ ಹೋರಾಟ ತೀವ್ರಗೊಳಿಸಿದೆ. ಇತ್ತ ಆಪ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಖಾತೆ ತೆರೆಯುವ ಲೆಕ್ಕಚಾರದಲ್ಲಿದೆ.
2ನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ 61 ರಾಜಕೀಯ ಪಕ್ಷಗಳ 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು ಎರಡು ಕೋಟಿ 51 ಲಕ್ಷದ 58 ಸಾವಿರದ 730 ಮತದಾರರು ಮತದಾನಕ್ಕೆ ಅರ್ಹವಾಗಿದ್ದಾರೆ. ಇದರಲ್ಲಿ ಒಂದು ಕೋಟಿ 29 ಲಕ್ಷದ 26 ಸಾವಿರದ 501 ಪುರುಷ ಹಾಗೂ ಒಂದು ಕೋಟಿ 22 ಲಕ್ಷದ 31 ಸಾವಿರದ 335 ಮಹಿಳಾ ಮತದಾರರಿದ್ದಾರೆ. ಮತದಾನಕ್ಕಾಗಿ 26,409 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಂದು ಲಕ್ಷದ 13 ಸಾವಿರದ 325 ಮತಗಟ್ಟೆ ಸಿಬ್ಬಂದಿ ಬೂತ್ ಗಳಲ್ಲಿ ಸಿದ್ಧತೆ ನಡೆಸಿದ್ದಾರೆ.
ಮೋದಿಯಿಂದ (Narendra Modi) ಮತ ಚಲಾವಣೆ:
2ನೇ ಹಂತದಲ್ಲಿ ಬನಸ್ಕಾಂತ, ಪಟಾನ್, ಮೆಹ್ಸಾನಾ, ಸಬರ್ಕಾಂತ, ಅರಾವಳಿ, ಗಾಂಧಿನಗರ, ಅಹಮದಾಬಾದ್, ಆನಂದ್, ಖೇಡಾ, ಮಹಿಸಾಗರ್, ಪಂಚ ಮಹಲ್, ದಾಹೋದ್, ವಡೋದರಾ ಮತ್ತು ಛೋಟಾ ಉದಯಪುರ ಸೇರಿ 14 ಜಿಲ್ಲೆಗಳಲ್ಲಿ 2ನೇ ಹಂತದ ಮತದಾನ ನಡೆಯಲಿದೆ. ಮಧ್ಯ ಮತ್ತು ಉತ್ತರ ಗುಜರಾತ್‌ನ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಪ್ರಮುಖರು ಇಂದು ಮತದಾನ ಮಾಡಲಿದ್ದಾರೆ.
Live Tv
[brid partner=56869869 player=32851 video=960834 autoplay=true]
ಅಹಮದಾಬಾದ್: ತೀವ್ರ ಕುತೂಹಲ ಕೆರಳಿಸಿದ್ದ ಗುಜರಾತ್ ವಿಧಾನಸಭೆಯ 2ನೇ ಹಂತದ ಚುನಾವಣೆಯ (Gujarat Election) ಪ್ರಚಾರ ಇಂದು ಅಂತ್ಯವಾಗಲಿದೆ. ಮತದಾರರನ್ನು ಓಲೈಸಿಕೊಳ್ಳಲು ಅಭ್ಯರ್ಥಿಗಳು ಕೊನೆಯ ಹಂತದ ಪ್ರಯತ್ನ ನಡೆಸಿದ್ದಾರೆ.
ಆಡಳಿತಾರೂಢ ಬಿಜೆಪಿ (BJP), ಪ್ರತಿಪಕ್ಷ ಕಾಂಗ್ರೆಸ್ (Congress) ಮತ್ತು ಅರವಿಂದ್ ಕೇಜ್ರಿವಾಲ್ (Avind Kejriwal) ನೇತೃತ್ವದ ಆಮ್ ಆದ್ಮಿ ಪಕ್ಷ (AAP) ಸೇರಿದಂತೆ ಸುಮಾರು 60 ರಾಜಕೀಯ ಪಕ್ಷಗಳ 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2ನೇ ಹಂತದ ಮತದಾನದ ಭಾಗವಾಗಿರುವ 93 ವಿಧಾನಸಭಾ ಕ್ಷೇತ್ರಗಳು ಅಹಮದಾಬಾದ್, ವಡೋದರಾ ಮತ್ತು ಗಾಂಧಿನಗರ ಸೇರಿದಂತೆ ಉತ್ತರ ಮತ್ತು ಮಧ್ಯ ಗುಜರಾತ್‌ನ 14 ಜಿಲ್ಲೆಗಳ ವ್ಯಾಪ್ತಿಯಲ್ಲಿವೆ. ಇದನ್ನೂ ಓದಿ: ಮಂತ್ರಾಲಯ ರಾಯರ ದರ್ಶನ ಪಡೆದ ಶಿವಣ್ಣ ದಂಪತಿ
2ನೇ ಹಂತದ ಚುನಾವಣೆ ನಡೆಯಲಿರುವ ಪ್ರಮುಖ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಘಟ್ಲೋಡಿಯಾ ಕ್ಷೇತ್ರ, ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ವಿರಾಮಗಾಮ್ ಕ್ಷೇತ್ರ ಮತ್ತು ಗಾಂಧೀನಗರ ದಕ್ಷಿಣದಿಂದ ಅಲ್ಪೇಶ್ ಠಾಕೂರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಡಿಸೆಂಬರ್ 1 ಮತ್ತು 2 ರಂದು ಅಹಮದಾಬಾದ್‌ನಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ರೋಡ್‌ಶೋಗಳನ್ನು ನಡೆಸಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರು. ಇಂದು ಬಿಜೆಪಿ ಸ್ಟಾರ್ ಪ್ರಚಾರಕರು ಹಲವು ರೋಡ್‌ಶೋಗಳು ಮತ್ತು ಚುನಾವಣಾ ರ‍್ಯಾಲಿ ನಡೆಸಿ ಪ್ರಚಾರ ಮಾಡಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಧೋಲ್ಕಾ, ಮಹುಧಾ ಮತ್ತು ಖಂಭತ್ ಪಟ್ಟಣಗಳಲ್ಲಿ ಚುನಾವಣಾ ರ‍್ಯಾಲಿಗಳನ್ನು ನಡೆಸಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಉತ್ತರ ಗುಜರಾತ್‌ನ ಮೊಡಾಸಾ ಮತ್ತು ಸಿದ್ಧಾಪುರ ಪಟ್ಟಣಗಳಲ್ಲಿ ರೋಡ್‌ಶೋಗಳನ್ನು ನಡೆಸಿದ್ದಾರೆ. ಆ್ಯಪ್ ಮತ್ತು ಕಾಂಗ್ರೆಸ್ ನಾಯಕರು ಕೊನೆಯ ಕ್ಷಣದ ಪ್ರಚಾರ ನಡೆಸಿ, ಅಭ್ಯರ್ಥಿಗಳ ಪರ ಮತ ಯಾಚಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಗುಜರಾತ್‌ನಲ್ಲಿ (Gujarat Election) ಕಳೆದ 27 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) 13 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಬಳಿಕ ಪ್ರಧಾನಿ ಹುದ್ದೆ ಅಲಂಕರಿಸಿದರು. ನರೇಂದ್ರ ಮೋದಿ ಗೈರಿನಲ್ಲೂ ಗುಜರಾತ್‌ನಲ್ಲಿ ಬಿಜೆಪಿ ಪ್ರಬಲ ಹಿಡಿತ ಹೊಂದಿದ್ದು, ಈ ಬಾರಿಯೂ ಅಧಿಕಾರಕ್ಕೆ ಬರುವ ಉಮೇದಿನಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಗುಜರಾತ್ ರಾಜಕಾರಣದಿಂದ ಹೊರ ಬಂದು ಎಂಟು ವರ್ಷಗಳು ಕಳೆದರೂ ಅವರ ಜನಪ್ರಿಯತೆ ಗುಜರಾತ್‌ನಲ್ಲಿ ಒಂದಿಷ್ಟೂ ಕಡಿಮೆಯಾಗಿಲ್ಲ. ಈಗಲೂ ಮೋದಿ ಅಪಾರ ಪ್ರಮಾಣದ ಜನಮನ್ನಣೆ ಹೊಂದಿದ್ದಾರೆ. ಇದಕ್ಕೆ ಅವರ ಅವಧಿಯಲ್ಲಿನ ಐದು ಯೋಜನೆಗಳು ಕಾರಣ ಎನ್ನಲಾಗಿದ್ದು, ಈ ಯೋಜನೆಗಳು ದೇಶದಲ್ಲಿ ಗುಜರಾತ್ ಮಾಡೆಲ್ ಎನ್ನುವ ಟ್ರೆಂಡ್ ಹುಟ್ಟುಹಾಕಿದೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಇಂದು ಮೊದಲ ಹಂತದ ಮತದಾನ – ತವರು ರಾಜ್ಯದಲ್ಲಿ ಮೋದಿ, ಶಾ ಜೋಡಿಗೆ ಅಗ್ನಿ ಪರೀಕ್ಷೆ
ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುಡಿಯುವ ನೀರಿಗಾಗಿ ತಂದ ಯೋಜನೆಗಳು, ಸಾಕ್ಷರತೆ ಪ್ರಮಾಣ ಹೆಚ್ಚಳಕ್ಕೆ ನಡೆದ ಪ್ರಯತ್ನಗಳು, ಮೂಲ ಸೌಕರ್ಯಗಳ ವ್ಯವಸ್ಥೆ ಹಾಗೂ ಡೈರಿ ಉದ್ಯಮಕ್ಕೆ ಬೆಂಬಲ, ಪ್ರವಾಸೋದ್ಯಮಕ್ಕೆ ನೀಡಿದ ಒತ್ತು ಈಗಲೂ ಅವರಿಗೆ ಶ್ರೀರಕ್ಷೆಯಾಗಿದ್ದು ರಾಷ್ಟ್ರ ರಾಜಕಾರಣದಲ್ಲಿ ಗುಜರಾತ್ ಚರ್ಚೆಯ ಕೇಂದ್ರ ಬಿಂದುವಾಗುವಂತೆ ಮಾಡಿದೆ.
ಕುಡಿಯುವ ನೀರಿನ ಕೊರತೆ ನೀಗಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ವೇಳೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೌನಿ ಯೋಜನೆ ಅನುಷ್ಠಾನಗೊಳಿಸಿದರು. ನರ್ಮದಾ ನದಿಯಿಂದ ವಿಶೇಷವಾಗಿ ಸೌರಾಷ್ಟ್ರ ಮತ್ತು ಕಛ್ ಪ್ರದೇಶಗಳಲ್ಲಿ ಕುಡಿಯುವ ನೀರು ಒದಗಿಸಿದರು. ಈ ಯೋಜನೆಯ ಮೂಲಕ 10 ಲಕ್ಷ ಎಕರೆ ಭೂಮಿಯನ್ನು ಮೋದಿ ನೀರಾವರಿ ಮಾಡಿದರು. ಯೋಜನೆ ಅಡಿ ಸೌರಾಷ್ಟ್ರ ಪ್ರದೇಶದಲ್ಲಿ 1,370 ಕಿಮೀ ನೀರಿನ ಪೈಪ್‌ಲೈನ್‌ಗಳು ಹಾಕುವುದು ಪೂರ್ಣಗೊಂಡಿವೆ ಮತ್ತು 1,150 ಕಿಮೀ ಉದ್ದದ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ಒಂದು ಮಡಿಕೆ ನೀರಿಗಾಗಿ ಕಿಲೋ ಮೀಟರ್ ನಡೆಯಬೇಕಿದ್ದ ಜನರ ಪರಿಸ್ಥಿತಿ ಸುಧಾರಿಸಿದೆ. ಇದನ್ನೂ ಓದಿ: ಲೈವ್ ಸ್ಟ್ರೀಮ್ ನಡೆಸುತ್ತಿರುವಾಗಲೇ ಕೊರಿಯಾದ ಯುವತಿಗೆ ಮುಂಬೈನಲ್ಲಿ ಕಿರುಕುಳ – ಇಬ್ಬರು ಅರೆಸ್ಟ್
ನರ್ಮದಾ ನದಿಗೆ ಕಾಲುವೆ, ಉಪ ಕಾಲುವೆಗಳನ್ನು ಹೆಚ್ಚಿಸಿದೆ. ಕಾಲುವೆಗಳ ಜಾಲ ಒಟ್ಟು 17 ಜಿಲ್ಲೆಗಳಲ್ಲಿ 71,748 ಕಿಮೀ ಉದ್ದವನ್ನು ಹೊಂದಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಇತ್ತೀಚೆಗೆ ಗುಜರಾತ್‌ನ ಕಚ್ ಶಾಖಾ ಕಾಲುವೆಯನ್ನು ಉದ್ಘಾಟಿಸಿದರು. ಇದು ಪಶ್ಚಿಮ ಗುಜರಾತ್‌ನ ಕೊನೆಯ ಮೈಲಿಯನ್ನು ನರ್ಮದಾ ನದಿಯ ನೀರಿನಿಂದ ಮಧ್ಯ ಗುಜರಾತ್‌ನಲ್ಲಿ 750 ಕಿಮೀ ದೂರದಲ್ಲಿ ಸಂಪರ್ಕಿಸುತ್ತದೆ. ಇದಲ್ಲದೆ ಸರ್ದಾರ್ ಸರೋವರ ಅಣೆಕಟ್ಟು ಗುಜರಾತ್‌ನ 15 ಜಿಲ್ಲೆಗಳಲ್ಲಿನ 73 ತಾಲೂಕುಗಳಲ್ಲಿ 18.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಒಳಗೊಂಡಿರುವ 3,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಾವರಿ ಸೌಲಭ್ಯಗಳನ್ನು ಒದಗಿಸುತ್ತದೆ. ನಾಲ್ಕು ಕೋಟಿಗೂ ಹೆಚ್ಚು ಜನರಿಗೆ ಕುಡಿಯುವ ನೀರು ತಲುಪಿಸಿದೆ. 2019 ರಲ್ಲಿ ಪ್ರಧಾನ ಮಂತ್ರಿಯಾಗಿ ಪ್ರಾರಂಭಿಸಿದ ‘ನಲ್ ಸೇ ಜಲ ಯೋಜನೆ’ ಗುಜರಾತ್‌ನಲ್ಲಿ ಪೂರ್ಣಗೊಂಡಿದ್ದು, ಪ್ರಸ್ತುತ ರಾಜ್ಯದ ಎಲ್ಲಾ ಮನೆಗಳಿಗೆ ಕುಡಿಯುವ ನೀರಿನೊಂದಿಗೆ ಟ್ಯಾಪ್ ಸಂಪರ್ಕವನ್ನು ಹೊಂದಿವೆ.
ಶಿಕ್ಷಣದಲ್ಲಿ ಕ್ರಾಂತಿ
ಗುಜರಾತ್‌ನ ಸಾಕ್ಷರತೆ ಪ್ರಮಾಣವು 2021 ರಲ್ಲಿ 82.5% ರಷ್ಟಿದೆ. 2001 ರಲ್ಲಿ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ 69% ರಷ್ಟಿತ್ತು. ಈ ಅವಧಿಯಲ್ಲಿ ಶಿಕ್ಷಣಕ್ಕೆ ನೀಡಿದ ಒತ್ತಿನಿಂದ ಕಳೆದೊಂದು ದಶಕದಲ್ಲಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಅಂಕಿಅಂಶಗಳ ಪ್ರಕಾರ ಗುಜರಾತ್‌ನಲ್ಲಿ 2001 ರಲ್ಲಿ ಸುಮಾರು 17 ಲಕ್ಷ ವಿದ್ಯಾರ್ಥಿಗಳು ಮಾಧ್ಯಮಿಕ ಮತ್ತು ಹೈಯರ್ ಸೆಕೆಂಡರಿ ತರಗತಿಗಳಿಗೆ ದಾಖಲಾಗಿದ್ದರೆ, 2021 ರಲ್ಲಿ ಈ ಸಂಖ್ಯೆ 29 ಲಕ್ಷಕ್ಕೆ ಏರಿದೆ. ಡ್ರಾಪ್‌ಔಟ್ ದರದಲ್ಲೂ ತೀವ್ರ ಇಳಿಕೆ ಕಂಡುಬಂದಿದೆ. 2001 ರಲ್ಲಿ ಗುಜರಾತ್ ಶಾಲೆಗಳಲ್ಲಿ ಡ್ರಾಪ್ಔಟ್ ಪ್ರಮಾಣವು ಪ್ರಾಥಮಿಕದಲ್ಲಿ 25%, ಉನ್ನತ ಪ್ರಾಥಮಿಕದಲ್ಲಿ 52% ಮತ್ತು ಹೈಸ್ಕೂಲ್‌ನಲ್ಲಿ 70% ಇತ್ತು. 2021 ರಲ್ಲಿ ಪ್ರಾಥಮಿಕದಲ್ಲಿ ಕೇವಲ 1%, ಉನ್ನತ ಪ್ರಾಥಮಿಕದಲ್ಲಿ 4.5% ಶೇಕಡಾ ಮತ್ತು ಹೈಸ್ಕೂಲ್‌ನಲ್ಲಿ 23% ಕ್ಕೆ ಇಳಿದಿದೆ. 2002 ರಲ್ಲಿ 21 ವಿಶ್ವವಿದ್ಯಾನಿಲಯಗಳಿದ್ದರೇ 2022 ರಲ್ಲಿ ಇದು 103 ಕ್ಕೆ ಏರಿದೆ. ಇದೇ ಅವಧಿಯಲ್ಲಿ ಕಾಲೇಜುಗಳು 775 ರಿಂದ 3,117 ಕ್ಕೆ ಹೇಗೆ ಏರಿಕೆಯಾಗಿದೆ.
ಶಾಂತಿ ಮತ್ತು ಭದ್ರತೆ
ಗಲಭೆಗಳಿಲ್ಲದ ವಾತಾವರಣ, ಸ್ಥಿರ ಕಾನೂನು ಮತ್ತು ಸುವ್ಯವಸ್ಥೆ, ಭಯೋತ್ಪಾದನೆ ಮುಕ್ತ ವಾತಾವರಣವು ಗುಜರಾತ್‌ನಲ್ಲಿ ಜನರು ಬಿಜೆಪಿಯನ್ನು (BJP) ಬೆಂಬಲಿಸುವ ಮತ್ತೊಂದು ವಿಷಯವಾಗಿದೆ. ಇದು ಚುನಾವಣೆಯ ಸಮಯದಲ್ಲಿ ಪಕ್ಷವು ಆಡಳಿತ ವಿರೋಧಿಯನ್ನು ಸೋಲಿಸುವಂತೆ ಮಾಡುತ್ತದೆ. ಪಿಎಂ ಮೋದಿ ಅವರು ತಮ್ಮ ಪ್ರಸ್ತುತ ಪ್ರಚಾರದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಯುವಕರು ಕಳೆದ 20 ವರ್ಷಗಳಲ್ಲಿ ಯಾವುದೇ ಗಲಭೆಗಳನ್ನು ಹೇಗಿವೆ ಎಂದು ನೋಡಿಲ್ಲ ಮತ್ತು ಭಯೋತ್ಪಾದನೆಯ ಭೀತಿಯಿಂದ ದೂರವಿರಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ. ರಾಜ್ಯಾದ್ಯಂತ ದೊಡ್ಡ ಹೋರ್ಡಿಂಗ್‌ಗಳಲ್ಲಿ ಬಿಜೆಪಿ ಮತ್ತೆ ಮತದಾರರನ್ನು ಆಕರ್ಷಿಸಲು ‘ಸುರಕ್ಷಾ ಮತ್ತು ಶಾಂತಿ’ ಥೀಮ್‌ಗೆ ಒತ್ತು ನೀಡಲಾಗುತ್ತಿದೆ. ಮೋದಿಯವರು ತಮ್ಮ ಭಾಷಣಗಳಲ್ಲಿ ಅಹಮದಾಬಾದ್ ಮತ್ತು ಸೂರತ್‌ನಲ್ಲಿ ಹಿಂದಿನ ಬಾಂಬ್ ಸ್ಫೋಟಗಳನ್ನು ಉಲ್ಲೇಖಿಸಿ ಕೇಂದ್ರದ ಯುಪಿಎ ಸರ್ಕಾರವು ಹೇಗೆ ತನಗೆ ಸಹಕರಿಸಲಿಲ್ಲ ಮತ್ತು ಕಾಂಗ್ರೆಸ್ ಭಯೋತ್ಪಾದನೆಯ ಬಗ್ಗೆ ಮೃದುವಾಗಿದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಶಾಲೆಗೆ ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿ – ನೋ ಎಂಟ್ರಿ ಎಂದ ಶಿಕ್ಷಕರು
ಡೈರಿ ಕ್ರಾಂತಿ
ಭಾರತದ ಒಟ್ಟು ಹಾಲಿನ ಉತ್ಪಾದನೆಯ 1/5 ಭಾಗವು ಗುಜರಾತ್‌ನಲ್ಲಿದೆ. ನರೇಂದ್ರ ಮೋದಿ ಅವರು “ಸಹಕಾರಿ ಮಾದರಿ ಗ್ರಾಮ” ಎಂಬ ಪರಿಕಲ್ಪನೆಯನ್ನು ರಚಿಸುವ ಮೂಲಕ ರಾಜ್ಯದಲ್ಲಿ ಪಶುಸಂಗೋಪನೆ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸಿದರು. ಗುಜರಾತ್‌ನಲ್ಲಿ 35 ಲಕ್ಷ ಹಾಲು ಉತ್ಪಾದಕರನ್ನು ನೇರವಾಗಿ ಮತ್ತು 10 ಲಕ್ಷ ಕಾರ್ಮಿಕರನ್ನು ಪರೋಕ್ಷವಾಗಿ ನೇಮಿಸಿಕೊಳ್ಳಾಗಿದೆ. ಈ ಕ್ಷೇತದಲ್ಲಿ 2020-21ರ ಅವಧಿಯಲ್ಲಿ 39,000 ಕೋಟಿ ವಹಿವಾಟು ನಡೆದಿದೆ. ಮುಂದಿನ ವರ್ಷದ ಇದು 46,000 ಕೋಟಿ ರೂ. ತಲುಪುವ ನಿರೀಕ್ಷೆ ಇದೆ.
ಗುಜರಾತ್‌ನ ಡೈರಿ ಸಹಕಾರಿ ಜಾಲವು ಇಡೀ ಪ್ರಕ್ರಿಯೆಯಲ್ಲಿ ಯಾವುದೇ ಮಧ್ಯವರ್ತಿಯಿಲ್ಲದೆ ಹೆಚ್ಚು ಪ್ರಶಂಸಿಸಲ್ಪಟ್ಟಿದೆ. ಗ್ರಾಹಕರಿಂದ ಪಡೆಯುವ ಹಣದಲ್ಲಿ ಶೇ.70ಕ್ಕೂ ಹೆಚ್ಚು ಹಣ ನೇರವಾಗಿ ರೈತರ ಜೇಬಿಗೆ ಸೇರುತ್ತಿದ್ದು, ಇದರಲ್ಲಿ ಮಹಿಳೆಯರೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಭಾರತದ ಅತಿದೊಡ್ಡ ಡೈರಿ ಸಹಕಾರಿ ಅಮುಲ್ ಗುಜರಾತ್‌ನ ಆನಂದ್‌ನಲ್ಲಿದೆ. ಕಚ್‌ನಲ್ಲಿರುವ ‘ಬನ್ನಿ’ ತಳಿಯ ಎಮ್ಮೆಗಳು ತಮ್ಮ ಹೆಚ್ಚಿನ ಇಳುವರಿ ಮತ್ತು ಹವಾಮಾನ-ನಿರೋಧಕ ಸಾಮರ್ಥ್ಯಗಳಿಂದ ಖ್ಯಾತಿ ಪಡೆದಿವೆ. 35 ಲಕ್ಷ ಹಾಲು ಉತ್ಪಾದಕರಲ್ಲಿ, 36% ಅಂದರೆ 12.5 ಲಕ್ಷ ರೈತರು ಮಹಿಳೆಯರಾಗಿದ್ದಾರೆ. ಈ ಮಹಿಳೆಯರು ನಿರಂತರವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿ
ಗುಜರಾತ್ ಈಗ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು. ಇದರಲ್ಲಿ ಮೋದಿಯವರ ದೂರದೃಷ್ಟಿ ಮತ್ತು ರಾಜ್ಯವನ್ನು ಹಾಟ್ ಸ್ಪಾಟ್ ಮಾಡುವ ಉದ್ದೇಶ ಹೊಂದಿರುವ ಹಲವು ಯೋಜನೆಗಳಿವೆ. ರಾನ್ ಆಫ್ ಕಚ್‌ನಿಂದ ಕೆವಾಡಿಯಾದಲ್ಲಿನ ‘ಏಕತೆಯ ಪ್ರತಿಮೆ’ ವರೆಗೆ, ದ್ವಾರಕಾ-ಸೋಮನಾಥ್-ಅಂಬಾಜಿ ಸರ್ಕ್ಯೂಟ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್‌ನಲ್ಲಿರುವ ವಿಶ್ವದ ಅತಿದೊಡ್ಡ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಜನರನ್ನು ಆಕರ್ಷಿಸುತ್ತಿದೆ. ಮೋದಿ ಅವರು 2006 ರಲ್ಲಿ ಆರಂಭಿಸಿದ ‘ರಣ್ ಉತ್ಸವ’ ಧೋರ್ಡೊದಲ್ಲಿ 100 ದಿನಗಳ ಆಚರಣೆಯಾಗಿ ಬೆಳೆದಿದೆ ಮತ್ತು ಪ್ರತಿ ವರ್ಷ ಭಾರತ ಮತ್ತು ವಿದೇಶಗಳಿಂದ 4-5 ಲಕ್ಷ ಪ್ರವಾಸಿಗರನ್ನು ಇದರಲ್ಲಿ ಭಾಗಿಯಾಗುತ್ತಾರೆ. ಇದನ್ನೂ ಓದಿ: ವೇದಿಕೆಯ ಮೇಲೆ ಚುಂಬಿಸಿದ ವರ – ಮದುವೆ ಮುರಿದು ಠಾಣೆಗೆ ದೂರು ನೀಡಿದ ವಧು
ಗಡಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ನಾಡಬೆಟ್‌ನಲ್ಲಿರುವ ಭಾರತ-ಪಾಕಿಸ್ತಾನ ಗಡಿ ವೀಕ್ಷಣಾ ಕೇಂದ್ರವನ್ನು ‘ಗುಜರಾತ್‌ನ ವಾಘಾ’ ಎಂದು ಅಭಿವೃದ್ಧಿಪಡಿಸಲಾಗಿದೆ. ಅಹಮದಾಬಾದ್‌ನ ಮೊಟೆರಾದಲ್ಲಿ 93 ಲಕ್ಷ ಚದರ ಅಡಿಗಳಲ್ಲಿ ನಿರ್ಮಿಸಲಾಗುತ್ತಿರುವ ‘ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್’ ಗುಜರಾತ್ ಒಲಿಂಪಿಕ್ಸ್ ಮಿಷನ್ ಅನ್ನು ಪ್ರಾರಂಭಿಸಲು ಹಾಗೂ 2036 ರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಗುರಿಯೊಂದಿಗೆ ಹೊಂದಿದೆ. ಸಂಪೂರ್ಣ ಯೋಜನೆಗೆ 4,600 ಕೋಟಿ ವ್ಯಯ ಮಾಡಲಾಗುತ್ತಿದೆ. ಈ ಅಭಿವೃದ್ಧಿ ಯೋಜನೆಗಳು ಪ್ರಧಾನಿಯಾದ ಬಳಿಕವೂ ಮೋದಿ ಅವರ ಇಮೇಜ್ ಹೆಚ್ಚಲು ಕಾರಣವಾಗಿದೆ. ಅವರ ಕಾರಣದಿಂದಲೇ ಗುಜರಾತ್‌ನಲ್ಲಿ ಬಿಜೆಪಿ ಇನ್ನಷ್ಟು ಬಲಿಷ್ಠವಾಗಿದೆ.
Live Tv
[brid partner=56869869 player=32851 video=960834 autoplay=true]
ಗಾಂಧಿನಗರ: ದೇಶದಲ್ಲೇ ನೀವು ಅಪಖ್ಯಾತಿ ಹೊಂದಿದ್ದೀರಿ. ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi), ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಭರಾಟೆ ಜೋರಾಗಿದೆ. ಬಿಜೆಪಿ ಕೇಂದ್ರ ಸಚಿವ ಅಮಿತ್ ಶಾ (Amit Shah) ಕಾಂಗ್ರೆಸ್ (Congress) ವಿರುದ್ಧ ಸತತವಾಗಿ ಹರಿಹಾಯುತ್ತಿದ್ದಾರೆ. ಶುಕ್ರವಾರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ `2002ರಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದ ಶಕ್ತಿಗಳಿಗೆ ಬಿಜೆಪಿ (BJP) ತಕ್ಕ ಪಾಠ ಕಲಿಸಿತು’ ಎಂದಿದ್ದ ಶಾ ಹೇಳಿಕೆ ವಿರುದ್ಧ ಓವೈಸಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ 108 ಅಂಬುಲೆನ್ಸ್‌ನಲ್ಲಿ ಡೀಸೆಲ್ ಖಾಲಿ – ದಾರಿ ಮಧ್ಯೆ ಅಸುನೀಗಿದ ಬಡ ಜೀವ
ಗುಜರಾತಿನ ಜುಹಾಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಅಮಿತ್ ಶಾ ಅವರೇ ನಮಗೆ ಏನು ಪಾಠ ಕಲಿಸಿದ್ದೀರಿ? ಬಿಲ್ಕಿಸ್‌ನ ಅತ್ಯಾಚಾರಿಗಳನ್ನು ಬಿಡುಗಡೆ ಮಾಡೋದು ಪಾಠವೇ? ಬಿಲ್ಕಿಸ್‌ನ 3 ವರ್ಷದ ಮಗಳನ್ನು ಕಣ್ಣೆದುರೇ ಹೊಡೆದು ಕೊಂದವರನ್ನು ಬಿಡುಗಡೆ ಮಾಡುವುದು ಪಾಠವೇ? ಎಹ್ಸಾನ್ ಜಾಫ್ರಿ ಕೊಲ್ಲುವಂತಹ ಪಾಠ ಕಲಿಸಿದ್ದೀರಿ, ಇವೆಲ್ಲವೂ ಪಾಠವೇ? ಇಡೀ ದೇಶದಲ್ಲಿ ನೀವು ಅಪಖ್ಯಾತಿ ಹೊಂದಿದ್ದೀರಿ. ದೆಹಲಿಯಲ್ಲಿ ಕೋಮುಗಲಭೆಗಳು ನಡೆಯುತ್ತಿವೆ. ನೀವು ಯಾವ ಪಾಠ ಕಲಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮುಗ್ಗರಿಸಿ ಬಿದ್ದ ದಿಗ್ವಿಜಯ್ ಸಿಂಗ್
2022ರ ಕೋಮು ದ್ವೇಷದಿಂದ ಬೆಸ್ಟ್ ಬೇಕರಿಯನ್ನು ಸುಟ್ಟುಹಾಕಲಾಯಿತು. ಅದು ಸಾವಿರಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತು. `ಮಿಸ್ಟರ್ ಅಮಿತ್ ಶಾ ಅವರೇ, ನಿಮ್ಮ ಇಂತಹ ಎಷ್ಟು ಪಾಠಗಳನ್ನು ನಾವು ನೆನಪಿನಲ್ಲಿಟ್ಟುಕೊಂಡಿದ್ದೇವೆ. ನಿಮ್ಮಿಂದ ಪಾಠ ಕಲಿಯೋದು ಏನೂ ಇಲ್ಲ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಿದಾಗ ಮಾತ್ರ ನಿಜವಾದ ಶಾಂತಿ ಬಲಗೊಳ್ಳುತ್ತದೆ ಎಂದು ಸಲಹೆ ನೀಡಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆಯು ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ನಡೆಯಲಿದೆ. ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ತನ್ನ 14 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಮೊದಲ ಹಂತದಲ್ಲಿ 89 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಉಳಿದ 93 ವಿಧಾನಸಭಾ ಸ್ಥಾನಗಳಿಗೆ 2ನೇ ಹಂತದ ಮತದಾನ ನಡೆಯಲಿದೆ.
ಅಮಿತ್ ಶಾ ಹೇಳಿದ್ದೇನು?
ಗುಜರಾತ್ ಚುನಾವಣಾ ಪ್ರಚಾರದ ರ‍್ಯಾಲಿಯಲ್ಲಿದ್ದ ಅಮಿತ್ ಶಾ, 2002ರ ಹಿಂಸಾಚಾರದ ಕುರಿತು ಮಾತನಾಡಿದ್ದರು. ಕಾಂಗ್ರೆಸ್ ಪಕ್ಷದ ಸರ್ಕಾರ ಇದ್ದಾಗ ಆಗಾಗ ಕೋಮುಗಲಭೆಗಳು ನಡೆಯುತ್ತಿದ್ದವು. ಆಗಾಗ ಕರ್ಫ್ಯೂ ಹೇರಲಾಗುತ್ತಿತ್ತು, ಕಾನೂನು ಸುವ್ಯವಸ್ಥೆ ಸರಿ ಇರಲಿಲ್ಲ. ಕಾಂಗ್ರೆಸ್ ಆಳ್ವಿಕೆ ಇದ್ದಾಗ ಕೋಮು ಹಿಂಸೆ ನಡೆಯುತ್ತಿತ್ತೆ ಇಲ್ಲವೇ ಹೇಳಿ? 2002ರಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಆಗಿದ್ದಾಗ ಹಿಂಸಾಚಾರದ ಪ್ರಯತ್ನ ನಡೆಯಿತು. ಆಗ ಅವರಿಗೆ ಸರಿಯಾದ ಪಾಠ ಕಲಿಸಲಾಯಿತು. ಅದಾದ ಬಳಿಕ ಒಂದೇ ಒಂದು ಕೋಮು ಹಿಂಸಾಚಾರ ನಡೆದಿಲ್ಲ. ಹಿಂಸೆಯಲ್ಲಿ ತೊಡಗಿದ್ದವರನ್ನು ಉಚ್ಚಾಟಿಸಲಾಯಿತು. ಕರ್ಫ್ಯೂರಹಿತ ಗುಜರಾತ್ ಅನ್ನು ಬಿಜೆಪಿ ಸ್ಥಾಪಿಸಿದೆ ಎಂದು ಶಾ ಹೇಳಿದ್ದರು.
Live Tv
[brid partner=56869869 player=32851 video=960834 autoplay=true]
ಗಾಂಧೀನಗರ: ಬಿಜೆಪಿ (BJP) ಅಧಿಕಾರಕ್ಕೆ ಬಂದಲ್ಲಿ ಮುಂದಿನ ಐದು ವರ್ಷದಲ್ಲಿ 20 ಲಕ್ಷ ಉದ್ಯೋಗಗಳು ಸೃಷ್ಟಿಸಿ, ರಾಜ್ಯದ ಆರ್ಥಿಕತೆಯನ್ನು ಒಂದು ಟ್ರಿಲಿಯನ್‌ನತ್ತ ಕೊಂಡೊಯ್ಯಲಾಗುವುದು ಮತ್ತು ಏಕರೂಪದ ನಾಗರಿಕ ಸಂಹಿತೆ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದೆ.
ಗುಜರಾತ್ ವಿಧಾನಸಭೆ ಚುನಾವಣೆ (Gujarat Assembly polls) ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಸಿಎಂ ಭೂಪೇಂದ್ರ ಪಟೇಲ್ (Bhupendra Patel) ಸಮ್ಮುಖದಲ್ಲಿ ‘ಸಂಕಲ್ಪ ಪತ್ರ’ ಚುನಾವಣಾ ಪ್ರಣಾಳಿಕೆ (Manifesto) ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಜೆ.ಪಿ ನಡ್ಡಾ ಮಹಿಳೆಯರನ್ನು ಸ್ವಾವಲಂಬಿ ಮಾಡುವುದು ನಮ್ಮ ಗುರಿ ಎಂದರು. ಇದನ್ನೂ ಓದಿ: ಜಡೇಜಾ ಟೀಂ ಇಂಡಿಯಾ ಪರ ಆಡಲು ಅನ್‍ಫಿಟ್ – ಬಿಜೆಪಿ ಪರ ಪ್ರಚಾರಕ್ಕೆ ಫಿಟ್
ಸಂಕಲ್ಪ ಪತ್ರದಲ್ಲಿ ಪ್ರಧಾನ ಮಂತ್ರಿ ಆರೋಗ್ಯ ವಿಮೆ ಯೋಜನೆಯನ್ನು 5 ರಿಂದ 10 ಲಕ್ಷಕ್ಕೆ ಹೆಚ್ಚಿಸಲಾಗುವುದು, ನೀರಾವರಿ ಯೋಜನೆಯಲ್ಲಿ 25 ಸಾವಿರ ಕೋಟಿ ವರೆಗೆ ಹೂಡಿಕೆ ಮಾಡಲಾಗುವುದು, 25 ಬಿರ್ಸಾ ಮುಂಡಾ ವಸತಿ ಶಾಲೆಗಳನ್ನು ತೆರೆಯಲಾಗುವುದು. 5 ವರ್ಷದಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು, 2ಸಿ ಫುಡ್ ಪಾರ್ಕ್ ಸ್ಥಾಪಿಸಲಾಗುವುದು, 5 ವರ್ಷಗಳಲ್ಲಿ ಮಹಿಳೆಯರಿಗೆ 1 ಲಕ್ಷ ಉದ್ಯೋಗ ನೀಡಲಾಗುವುದು, ಏಕರೂಪ ನಾಗರಿಕ ಸಂಹಿತೆ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದೆ.
ಶ್ರಮಿಕ್ ಕ್ರೆಡಿಟ್ ಕಾರ್ಡ್‍ನಲ್ಲಿ 2 ಲಕ್ಷದವರೆಗೆ ಸಾಲ, ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟಿ ನೀಡಲಾಗುವುದು, ಕೃಷಿ ಮೂಲಸೌಕರ್ಯ ನಿಧಿಯಡಿ 10 ಸಾವಿರ ಕೋಟಿ ರೂ. ಗುಜರಾತ್‍ನಲ್ಲಿ ವಿನಿಯೋಗಿಸಲಾಗುವುದು ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಇದನ್ನೂ ಓದಿ: ಓಷನ್‍ಸ್ಯಾಟ್, 8 ಇತರೆ ಉಪಗ್ರಹಗಳನ್ನು ಹೊತ್ತ PSLV-C54 ರಾಕೆಟ್ ಉಡಾಯಿಸಿದ ಇಸ್ರೋ
ಡಿಸೆಂಬರ್ 01 ಮತ್ತು 05 ರಂದು ಎರಡು ಹಂತದಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ತವರು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿದ್ದಾರೆ. ಇತ್ತ ಕಾಂಗ್ರೆಸ್ ಅಧಿಕಾರಕ್ಕೆ ಹೋರಾಟ ಆರಂಭಿಸಿದ್ದು, ಮೊದಲ ಬಾರಿಗೆ ಆಪ್ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಡಿಸೆಂಬರ್ 08 ರಂದು ಫಲಿತಾಂಶ ಪ್ರಕಟವಾಗಲಿದೆ.
Live Tv
[brid partner=56869869 player=32851 video=960834 autoplay=true]
ಗಾಂಧೀನಗರ: ಗಾಯಾಳುವಾಗಿ ಟೀಂ ಇಂಡಿಯಾದಿಂದ (Team India) ಹೊರಗುಳಿದಿರುವ ಆಲ್‍ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅನ್‍ಫಿಟ್ ಕಾರಣ ಹೇಳಿ ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಆದರೆ ಅತ್ತ ಗುಜರಾತ್‍ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ (Gujarat Election) ಬಿಜೆಪಿ (BJP) ಪರ ಪ್ರಚಾರ ರ್‍ಯಾಲಿಯಲ್ಲಿ ಭಾಗವಹಿಸಿ ಟೀಕೆಗೆ ಗುರಿಯಾಗಿದ್ದಾರೆ.
ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ (Rivaba Jadega) ಅವರಿಗೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಗುಜರಾತ್‍ನ ಜಾಮ್ನಗರ ಉತ್ತರದಿಂದ (Jamnagar North) ಬಿಜೆಪಿ ಅಭ್ಯರ್ಥಿಯಾಗಿ ರಿವಾಬಾ ಜಡೇಜಾ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಜಡೇಜಾ ಪತ್ನಿ ಪರ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ (Narendra Modi), ಅಮಿತ್ ಶಾ (Amit Shah) ಸೇರಿದಂತೆ ಘಟಾನುಘಟಿ ನಾಯಕರು ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದು, ಇವರೊಂದಿಗೆ ಜಡೇಜಾ ಕೂಡ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಜಡೇಜಾ ಪತ್ನಿಗೆ ಗುಜರಾತ್‍ನ ಜಾಮ್ನಗರ ಉತ್ತರದಿಂದ ಬಿಜೆಪಿ ಟಿಕೆಟ್
ಇದೀಗ ಜಡೇಜಾ ಈ ನಡೆ ಕುರಿತಾಗಿ ಟೀಕೆಗಳು ಕೇಳಿ ಬರುತ್ತಿದೆ. ಟಿ20 ವಿಶ್ವಕಪ್‍ಗೂ (T20 World Cup) ಮುನ್ನ ಏಷ್ಯಾಕಪ್‍ನಲ್ಲಿ (Asia Cup) ಜಡೇಜಾ ಗಾಯಗೊಂಡು ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಆ ಬಳಿಕ ಗಾಯದಿಂದ ಚೇತರಿಕೆ ಕಂಡಿದ್ದು, ಬಾಂಗ್ಲಾದೇಶ ಸರಣಿಗೆ ತಂಡಕ್ಕೆ ಮೊದಲು ಆಯ್ಕೆಯಾಗಿದ್ದರು. ಆದರೆ ಆ ಬಳಿಕ ದಿಢೀರ್ ಆಗಿ ಜಡೇಜಾ ಅನ್‍ಫಿಟ್ ಎಂದು ತಿಳಿಸಿ ವಿಶ್ರಾಂತಿ ಬಯಸಿದ್ದಾರೆ. ಈ ನಡುವೆ ಪತ್ನಿ ಪರ ಪ್ರಚಾರ ರ್‍ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಜಡೇಜಾಗೆ ದೇಶದ ಪರ ಆಡುವುದಕ್ಕಿಂತ ಪತ್ನಿಯ ಪರ ಪ್ರಚಾರ ಹೆಚ್ಚಾಯಿತೇ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅರ್ಜೆಂಟೀನಾಗೆ ಮಾಡು ಇಲ್ಲವೇ ಮಡಿ ಪಂದ್ಯ – ಕತಾರ್ ಕಥೆ ಮುಗಿಯಿತು
ಗುಜರಾತ್‍ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ (Congress), ಎಎಪಿ (AAP) ಸೇರಿ ಎಲ್ಲಾ ಪಕ್ಷಗಳು ಭರದಿಂದ ಪ್ರಚಾರದಲ್ಲಿ ತೊಡಗಿಕೊಂಡಿವೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಗುಜರಾತ್ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗಕ್ಕೆ (ಎನ್‌ಸಿಪಿಸಿಆರ್) ಕಾಂಗ್ರೆಸ್ ದೂರು ನೀಡಿದೆ.
NCPCR के प्रमुख प्रियांक कानूनगो कौन सी कुम्भकर्ण की नींद सो रहे हैं, कहां छुपे बैठे हैं, उन्हें किसका डर है?
आज BJP एक मासूम बच्ची को पीएम मोदी के बगल में खड़ा कर चुनाव प्रचार करवा रही है और प्रियांक काननूगो सो गए हैं।
ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನತೆ ದೂರು ನೀಡಿದ್ದು, ಚುನಾವಣಾ ಆಯೋಗಕ್ಕೂ ದೂರಿನ ಪ್ರತಿ ಸಲ್ಲಿಸಲಾಗಿದೆ. ಗುಜರಾತ್ ಚುನಾವಣೆಯಲ್ಲಿ ಪ್ರಚಾರದ ವೇಳೆ ಬಾಲಕಿಯೊಬ್ಬಳು ಬಿಜೆಪಿ ಅಭಿವೃದ್ಧಿ ಬಗ್ಗೆ ಗುಜರಾತಿಯಲ್ಲಿ ಮಾತನಾಡುತ್ತಿರುವ ವಿಡಿಯೋವನ್ನು ಮೋದಿ ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಪಕ್ಕ ಕುಳಿತು ಬಿಜೆಪಿಯನ್ನು ಹಾಡಿ ಹೊಗಳಿದ ಬಾಲಕಿ – ಶಭಾಶ್ ಅಂದ ಮೋದಿ
ಬಾಲಕಿ ಚುನಾವಣಾ ಪ್ರಚಾರ ಮಾಡಿದ್ದು ಹೇಗೆ?
ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲಿಯೇ ಕುಳಿತುಕೊಂಡು ಬಾಲಕಿಯೊಬ್ಬಳು ಬಿಜೆಪಿ ಕುರಿತಂತೆ ಪದ್ಯವೊಂದನ್ನು ಹಾಡುತ್ತಾ, ಹೊಗಳಿರುವ ವೀಡಿಯೋ ಮಂಗಳವಾರ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಿಜೆಪಿ ಇದನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. ಇದನ್ನೂ ಓದಿ: ಸಾವು-ಬದುಕಿನ ನಡುವೆ ಶಂಕಿತ ಉಗ್ರ ಶಾರೀಕ್ ನರಳಾಟ- ಪೊಲೀಸರಲ್ಲಿ ಆತಂಕ
ಸುಮಾರು 57 ಸೆಕೆಂಡುಗಳಿರುವ ಈ ವೀಡಿಯೋದಲ್ಲಿ `ಬಿಜೆಪಿ, ಬಿಜೆಪಿ, ಬಿಜೆಪಿ, ಎಲ್ಲಿ ನೋಡಿದರೂ ಬಿಜೆಪಿ, ಪ್ರತಿಯೊಂದು ಚರ್ಚೆಯೂ ಬಿಜೆಪಿಯಿಂದಲೇ ಆರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ. ಬಿಜೆಪಿಯನ್ನು ಸೋಲಿಸಲು ಜನ ನಾನಾ ಆಟಗಳನ್ನು ಆಡುತ್ತಿದ್ದಾರೆ ಎಂದು ಗುಜರಾತಿ ಭಾಷೆಯಲ್ಲಿ ಬಾಲಕಿ ಪದ್ಯ ಹಾಡಲು ಶುರು ಮಾಡಿದ್ದಾಳೆ. ಬಿಜೆಪಿಯನ್ನು ಪದ್ಯದ ಮೂಲಕ ಹೊಗಳುವುದನ್ನು ಕೇಳಿದ ಮೋದಿ ಅವರು ಕೊನೆಗೆ ಬಾಲಕಿಗೆ ಶಭಾಶ್ ಎಂದು ಮೆಚ್ಚುಗೆ ವ್ಯಕ್ತಪಡಿಸುವುದನ್ನು ಕಾಣಬಹುದಾಗಿದೆ.
ನಂತರ ಮೋದಿ ಅವರ ಪಕ್ಕದಲ್ಲಿ ಕುಳಿತುಕೊಂಡು ಪದ್ಯ ಹೇಳುವಾಗ ಭಯವಾಗಲಿಲ್ಲವೇ ಎಂಬ ಮಾಧ್ಯಮವೊಂದರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಲಕಿ, ನಾನು ಕೋಣೆಗೆ ಹೋಗುವ ಮೊದಲು ಭಯಗೊಂಡಿದ್ದೆ. ಆದರೆ ಅವರು ನನ್ನ ಅಜ್ಜ ಎಂದು ನಾನು ಭಾವಿಸಿದೆ, ಆಮೇಲೆ ಭಯವಾಗಲಿಲ್ಲ ಎಂದು ಹೇಳಿಕೊಂಡಿದ್ದರು.
Live Tv
[brid partner=56869869 player=32851 video=960834 autoplay=true]