Tag: Gujarat Election Results

  • ಜೋ ಜೀತಾ ವೋ ಹೀ ಸಿಖಂದರ್- ಬಿಜೆಪಿ ಗೆಲುವಿಗೆ  ಸ್ಮೃತಿ ಇರಾನಿ ಹೇಳಿಕೆ

    ಜೋ ಜೀತಾ ವೋ ಹೀ ಸಿಖಂದರ್- ಬಿಜೆಪಿ ಗೆಲುವಿಗೆ  ಸ್ಮೃತಿ ಇರಾನಿ ಹೇಳಿಕೆ

    ನವದೆಹಲಿ: ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯೆ ನೀಡಿದ್ದು, ಜೋ ಜೀತಾ ವೋ ಹೀ ಸಿಖಂದರ್ ಎಂದು ಹೇಳಿದ್ದಾರೆ.

    ಇದು ಅಮಿತ್ ಶಾ ಅವರ ನಾಯಕತ್ವ ಹಾಗೂ ಅಭಿವೃದ್ಧಿಯ ಗೆಲುವು. ನಮ್ಮ ಆಡಳಿತ ಹಾಗೂ ಸಂಘಟನೆಗೆ ಸಿಕ್ಕ ಜಯ ಎಂದು ಹೇಳಿದ್ದಾರೆ. ಬೂತ್ ಮಟ್ಟದಿಂದ ಹಿಡಿದು ಎಲ್ಲಾ ಕಾರ್ಯಕರ್ತರಿಗೆ ಈ ಗೆಲುವನ್ನ ಸಮರ್ಪಿಸಿದ್ದಾರೆ.

    ಬೆಳಗ್ಗೆ ಆರಂಭದ ವೇಳೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟ ಬಗ್ಗೆ ಪ್ರಶ್ನಿಸಿದ್ದಕ್ಕೆ, ಜೋ ಜೀತಾ ವೋ ಹೀ ಸಿಖಂದರ್(ಯಾರು ಗೆಲ್ತಾರೋ ಅವರೇ ರಾಜ)ಎಂದು ನನಗೆ ಅನ್ನಿಸುತ್ತದೆ ಎಂದು ಉತ್ತರಿಸಿದ್ರು. ಇದೇ ವೇಳೆ ಬಿಜೆಪಿ ಕಚೇರಿ ಬಳಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ್ರು.

    ಮೋದಿ ತವರಾದ ಗುಜರಾತ್‍ನಲ್ಲಿ 1995 ರಿಂದಲೂ ಬಿಜೆಪಿ ಸತತವಾಗಿ ಜಯ ಗಳಿಸುತ್ತಾ ಬಂದಿದೆ.

  • ಬಿಜೆಪಿ ಸ್ಥಿತಿ ನೋಡಿದ್ರೆ ಗುಜರಾತ್ ಮಾಡೆಲ್ ಇಲ್ಲ ಎಂಬುದು ಸಾಬೀತಾಗಿದೆ- ದಿನೇಶ್ ಗುಂಡೂರಾವ್

    ಬಿಜೆಪಿ ಸ್ಥಿತಿ ನೋಡಿದ್ರೆ ಗುಜರಾತ್ ಮಾಡೆಲ್ ಇಲ್ಲ ಎಂಬುದು ಸಾಬೀತಾಗಿದೆ- ದಿನೇಶ್ ಗುಂಡೂರಾವ್

    ಬೆಂಗಳೂರು: ಬಿಜೆಪಿಯ ಸ್ಥಿತಿ ನೋಡಿದ್ರೆ ಗುಜರಾತ್ ಮಾಡೆಲ್ ಇಲ್ಲ ಎಂಬುದು ಸಾಬೀತಾಗಿದೆ ಅಂತ  ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಗುಜರಾತ್, ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಇನ್ನೂ ಪೂರ್ತಿ ಫಲಿತಾಂಶ ಬಂದಿಲ್ಲ. ಆದರೂ ನಮ್ಮ ಪಕ್ಷ ಸಾಕಷ್ಟು ಉತ್ತಮ ಸಾಧನೆ ಮಾಡಿದೆ. ಬಿಜೆಪಿಯ ಸ್ಥಿತಿ ನೋಡಿದ್ರೆ ಗುಜರಾತ್ ಮಾಡೆಲ್ ಇಲ್ಲ ಎಂಬುದು ಸಾಬೀತಾಗಿದೆ. ಗುಜರಾತ್ ಚುನಾವಣೆ ರಾಜ್ಯ ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರಲ್ಲ ಅಂದ್ರು.

    ಇವಿಎಮ್ ಟ್ಯಾಂಪರಿಂಗ್ ಬಗ್ಗೆ ನಮಗೆ ಸಂಶಯ ಇದೆ. ಅದನ್ನು ಪರೀಕ್ಷೆಗೆ ಒಳಪಡಿಸಬೇಕು. ಇವಿಎಂ ಬಗ್ಗೆ ಇರುವ ಅನುಮಾನಗಳು ಪರಿಹಾರವಾಗಬೇಕು ಅಂತ ಹೇಳಿದ್ರು.

    ಇತ್ತೀಚಿನ ವರದಿಯ ಪ್ರಕಾರ ಗುಜರಾತ್‍ನಲ್ಲಿ ಒಟ್ಟು 182 ಕ್ಷೇತ್ರಗಳಲ್ಲಿ ಬಿಜೆಪಿ 108 ಹಾಗೂ ಕಾಂಗ್ರೆಸ್ 69 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹಿಮಾಚಲಪ್ರದೇಶದಲ್ಲಿ ಒಟ್ಟು 68 ಕ್ಷೇತ್ರಗಳಲ್ಲಿ ಬಿಜೆಪಿ 43 ಹಾಗೂ ಕಾಂಗ್ರೆಸ್ 22 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

  • ನಾಳೆಯಿಂದ ಕಾಂಗ್ರೆಸ್‍ನವರು ರಸ್ತೆಯಲ್ಲಿ ಓಡಾಡೋದು ಕಷ್ಟ ಆಗುತ್ತೆ – ಬಿಎಸ್‍ವೈ

    ನಾಳೆಯಿಂದ ಕಾಂಗ್ರೆಸ್‍ನವರು ರಸ್ತೆಯಲ್ಲಿ ಓಡಾಡೋದು ಕಷ್ಟ ಆಗುತ್ತೆ – ಬಿಎಸ್‍ವೈ

    ಬೆಂಗಳೂರು: ನಾಳೆಯಿಂದ ಕಾಂಗ್ರೆಸ್‍ನವರು ರಸ್ತೆಯಲ್ಲಿ ಓಡಾಡೋದು ಕಷ್ಟ ಆಗುತ್ತೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಗುಜರಾತ್, ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಡಿಯೂರಪ್ಪ, ಬಹಳ ಸಂತೋಷದ ವಾತಾವರಣ ಇದೆ. ನಮ್ಮ ಮನೆ ತುಂಬ ಜನ ಇದ್ದಾರೆ. ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಈ ಎರಡೂ ಚುನಾವಣೆಯ ಫಲಿತಾಂಶದ ಪರಿಣಾಮ ಏನೆಂಬುದು ಎಲ್ಲಾ ಮಾಧ್ಯಮಗಳಲ್ಲಿ ಬಂದಿದೆ. ಇವತ್ತು ಎರಡೂ ಕ್ಷೇತ್ರಗಳಲ್ಲಿ ಇಂತಹ ಸಾಧನೆ ಮಾಡಿರೋದು ಕರ್ನಾಟಕದಲ್ಲಿ 150 ಕ್ಷೇತ್ರಗಳನ್ನ ಗೆಲ್ಲೋಕೆ ಶಕ್ತಿ ತುಂಬಿದಂತಾಗಿದೆ. ನಾಳೆಯಿಂದ ಕಾಂಗ್ರೆಸ್‍ನವರು ರಸ್ತೆಯಲ್ಲಿ ಓಡಾಡೋದು ಕಷ್ಟ ಆಗುತ್ತೆ ಅಂದ್ರು.

    ನಾಳೆಯಿಂದ ನಮ್ಮ ಪರಿವರ್ತನಾ ಸಮಾವೇಶದಲ್ಲಿ ಯಾವ ರೀತಿ ಜನಸಾಗರ ಸೇರುತ್ತೆ ಅನ್ನೋದು ಕಣ್ಣಾರೆ ನೋಡ್ತೀರಿ. ಮೋದಿ ಅವರ ಎಲ್ಲಾ ಕಾರ್ಯಕ್ರಮಕ್ಕೆ ಗುಜರಾತ್, ಹಿಮಾಚಲಪ್ರದೇಶದಲ್ಲಿ ಮನ್ನಣೆ ಸಿಕ್ಕಿದೆ, ಕರ್ನಾಟಕದಲ್ಲೂ ಮನ್ನಣೆ ಸಿಗುತ್ತೆ. ಕಾಂಗ್ರೆಸ್ ವೈಫಲ್ಯತೆ, ರಾಜ್ಯ ಸರ್ಕಾರದ ವೈಫಲ್ಯತೆ ಎಲ್ಲಾ ಸೇರಿ ನಾವು 150 ಕೇತ್ರಗಳನ್ನ ಗೆಲ್ಲೋಕೆ ಇವೆಲ್ಲವೂ ದೊಡ್ಡ ಶಕ್ತಿ ಕೊಟ್ಟಂತಾಗಿದೆ ಅಂತ ಹೇಳಿದ್ರು.

    ನಾಳೆಯಿಂದ ಕಾಂಗ್ರೆಸ್‍ನವರಿಗೆ ಅವರ ಬಗೆಗಿನ ವಿಶ್ವಾಸವೇ ಕಡಿಮೆಯಾಗಿ, ನಾಯಕತ್ವವೇ ಇಲ್ಲದೆ ತಬ್ಬಲಿಗಳಂತೆ ಅಲೆದಾಡೋ ವಾತಾವರಣ ಉಂಟಾಗೋದನ್ನ ನೀವೇ ನೋಡ್ತೀರ. ಜನರ ಮನಸ್ಸಿನಲ್ಲಿ ಆ ಭಾವನೆ ಇದೆ ಅದ್ನೋದು ಸ್ಪಷ್ಟವಾಗುತ್ತೆ ಅಂದ್ರು.

    https://www.youtube.com/watch?v=lK5P0Liiya4

  • ಗೆದ್ರೆ ಖುಷಿಯಲ್ಲಿ, ಸೋತ್ರೆ ದು:ಖದಲ್ಲಿ ತಿನ್ನೋಣವೆಂದು 2 ಕೆಜಿ ಕಾಣೆ ಮೀನು ತಂದಿಟ್ಟುಕೊಂಡಿದ್ದೇನೆ- ಅಮೀನ್ ಮಟ್ಟು

    ಗೆದ್ರೆ ಖುಷಿಯಲ್ಲಿ, ಸೋತ್ರೆ ದು:ಖದಲ್ಲಿ ತಿನ್ನೋಣವೆಂದು 2 ಕೆಜಿ ಕಾಣೆ ಮೀನು ತಂದಿಟ್ಟುಕೊಂಡಿದ್ದೇನೆ- ಅಮೀನ್ ಮಟ್ಟು

    ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರೋ ಗುಜರಾತ್, ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‍ಮಟ್ಟು ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿದ್ದಾರೆ.

    ಗೆದ್ದರೆ ಗೆದ್ದ ಖುಷಿಯಲ್ಲಿ, ಸೋತರೆ ಸೋತ ದು:ಖದಲ್ಲಿ ತಿನ್ನುವ ಎಂದು ಎರಡು ಕಿಲೋ ಕಾಣೆ ಮೀನು ತಂದಿಟ್ಟುಕೊಂಡಿದ್ದೇನೆ. ಮೀನು ತಿಂದು ಬಿಸಾಡಿದ ಮುಳ್ಳುಗಳಿಗೆ ಕಾಯುತ್ತಿರುವವರನ್ನು ಯಾಕೆ ನಿರಾಶೆ ಪಡಿಸಬೇಕಲ್ವಾ? ಸೋತು ಗೆದ್ದರೆ ಸ್ವಲ್ಪ ಖುಷಿ, ಸ್ವಲ್ಪ ದು:ಖಕ್ಕೆ ಇರಲಿ ಎಂದು ಮಡಿಕೇರಿ ಗೆಳೆಯರು ಕೊಟ್ಟಿರುವ ಸಿಹಿ- ಒಗರಿನ ಅಡಿಕೆ ವೈನ್ ಕೂಡಾ ಇಟ್ಟುಕೊಂಡಿದ್ದೇನೆ ಎಂದು ಅಮೀನ್ ಮಟ್ಟು ಪೋಸ್ಟ್ ಮಾಡಿದ್ದಾರೆ.

    ಭಾರೀ ಕುತೂಹಲ ಮೂಡಿಸುತ್ತಿರುವ ಗುಜರಾತ್ ಚುನಾವಣೆಯ ಫಲಿತಾಂಶಗಳು ನಿಮಿಷ ನಿಮಿಷಗಳಲ್ಲಿ ಬದಲಾಗುತ್ತಿದೆ. ಆರಂಭದ ಮತ ಎಣಿಕೆಯ ವೇಳೆ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದರೆ ನಂತರ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಾರೆ. ಇನ್ನು ಕೆಲವೇ ನಿಮಿಷಗಳಲ್ಲಿ ಸ್ಪಷ್ಟ ಫಲಿತಾಂಶ ತಿಳಿದುಬರಲಿದೆ.