Tag: Gujarat Election 2022

  • ಗುಜರಾತ್‌ ಚುನಾವಣೆ – AAP ಸಿಎಂ ಅಭ್ಯರ್ಥಿಗೆ ಸೋಲು

    ಗುಜರಾತ್‌ ಚುನಾವಣೆ – AAP ಸಿಎಂ ಅಭ್ಯರ್ಥಿಗೆ ಸೋಲು

    ಗಾಂಧಿನಗರ: ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ (Gujarat Election) ಆಮ್‌ ಆದ್ಮಿ ಪಕ್ಷದ (AAP) ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಇಸುದನ್‌ ಗಧ್ವಿ (Isudan Gadhvi) ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲನುಭವಿಸಿದ್ದಾರೆ.

    ಗುಜರಾತ್‌ನಲ್ಲಿ ಎಎಪಿ ಸಿಎಂ ಅಭ್ಯರ್ಥಿಯಾಗಿದ್ದ ಇಸುದನ್ ಗಧ್ವಿ ಅವರು ಖಂಭಾಲಿಯಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ 18,000 ಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ. ಇದನ್ನೂ ಓದಿ: Gujarat Election Result: ಜಿಗ್ನೇಶ್‌ ಮೇವಾನಿಗೆ ಜಯ

    ನಾಲ್ಕನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್‌ನ ಹಾಲಿ ಶಾಸಕ ವಿಕ್ರಮ್ ಮೇಡಂ ಅವರಿಗಿಂತ ಗಾಧ್ವಿ ಮುನ್ನಡೆ ಸಾಧಿಸಿದ್ದರು. ಬಿಜೆಪಿಯ ಮುಲುಭಾಯ್ ಬೇರಾ ಮೂರನೇ ಸ್ಥಾನದಲ್ಲಿದ್ದರು. ಆದರೆ ನಂತರದ ಸುತ್ತಿನ ಮತ ಎಣಿಕೆಯಲ್ಲಿ ಬೇರಾ ತಮ್ಮ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವು ಸಾಧಿಸಿದ್ದಾರೆ.

    ಗುಜರಾತ್‌ನಲ್ಲಿ ಬಿಜೆಪಿ (BJP) ದಾಖಲೆಯ ಗೆಲುವು ಸಾಧಿಸಿದೆ. ಈ ಗೆಲುವಿನ ಭಾಗವಾಗಿ ಗುಜರಾತ್‌ನ 17ನೇ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಭೂಪೇಂದ್ರ ಪಟೇಲ್‌ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೇರಿದ್ದ ಪಟೀದಾರ್ ಚಳುವಳಿಯ ನಾಯಕ ಹಾರ್ದಿಕ್ ಪಟೇಲ್‍ಗೆ ಗೆಲುವು

    Live Tv
    [brid partner=56869869 player=32851 video=960834 autoplay=true]

  • ಗುಜರಾತ್‌ ಚುನಾವಣೆ – ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ ಮೋದಿ

    ಗುಜರಾತ್‌ ಚುನಾವಣೆ – ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ ಮೋದಿ

    ಗಾಂಧೀನಗರ: ಪ್ರಧಾನಿ ಮೋದಿ (Narendra Modi) ತವರು ಗುಜರಾತ್‌ ವಿಧಾನಸಭಾ ಚುನಾವಣೆ (Gujarat Election) ಅಂತಿಮ ಹಂತ ತಲುಪಿದೆ. ಇಂದು 2ನೇ ಹಂತದ ಮತದಾನ ನಡೆಯುತ್ತಿದ್ದು, ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ ಚಲಾಯಿಸಿದರು.

    ಪ್ರಧಾನಿಯವರು ನಿಶಾನ್ ಪಬ್ಲಿಕ್ ಸ್ಕೂಲ್‌ನಲ್ಲಿರುವ ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಕ್ಯೂನಲ್ಲಿ ನಿಂತಿದ್ದ ಜನಸಮೂಹದತ್ತ ಹೋದರು. ನಂತರ ಜನರಿಗೆ ನಮಸ್ಕರಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಇದನ್ನೂ ಓದಿ: ಪ್ರಾಂಶುಪಾಲರಿಗೆ ಜೈಶ್ರೀರಾಮ್ ಎಂದು ಘೋಷಣೆ ಕೂಗಲು ಒತ್ತಾಯಿಸಿದ ABVP ಕಾರ್ಯಕರ್ತರು

    ರಾಜ್ಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮೋದಿ ಮನವಿ ಮಾಡಿದರು. ಇಂದು ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.

    2ನೇ ಹಂತದಲ್ಲಿ 61 ರಾಜಕೀಯ ಪಕ್ಷಗಳ 883 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಮತ್ತು ಎಎಪಿ ಎಲ್ಲ 91 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್‌ 90 ಕ್ಷೇತ್ರದಲ್ಲಿ ಕಣದಲ್ಲಿದೆ. ಇದನ್ನೂ ಓದಿ: ತಾಳಿಕಟ್ಟೋ ಕೊನೆ ಕ್ಷಣದಲ್ಲೇ ಹೃದಯಾಘಾತ – 21ರ ಯುವತಿ ಸಾವು

    2017ರ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಈ ಕ್ಷೇತ್ರಗಳಲ್ಲಿ 51 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್‌ 39 ಹಾಗೂ ಇತರರು 3 ಸ್ಥಾನ ಪಡೆದುಕೊಂಡಿದ್ದರು. ಡಿಸೆಂಬರ್‌ 8ರಂದ ಮತ ಎಣಿಕೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಮೋದಿ ತವರಲ್ಲಿ `ಏಕರೂಪ ನಾಗರಿಕ ಸಂಹಿತೆ’ಗೆ ಸಿದ್ಧತೆ – ಜಾರಿಯಾದ್ರೆ ಎಲ್ಲಾ ಧರ್ಮಗಳಿಗೂ ಒಂದೇ ಕಾನೂನು

    ಮೋದಿ ತವರಲ್ಲಿ `ಏಕರೂಪ ನಾಗರಿಕ ಸಂಹಿತೆ’ಗೆ ಸಿದ್ಧತೆ – ಜಾರಿಯಾದ್ರೆ ಎಲ್ಲಾ ಧರ್ಮಗಳಿಗೂ ಒಂದೇ ಕಾನೂನು

    ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಮೋದಿ (Narendra Modi) ತವರು ಗುಜರಾತ್‌ನಲ್ಲಿ `ಏಕರೂಪದ ನಾಗರಿಕ ಸಂಹಿತೆ’ (UCC) ಜಾರಿ ಸಂಬಂಧ ಬಿಜೆಪಿ ಸರ್ಕಾರ (BJP Government) ಮಹತ್ವದ ತೀರ್ಮಾನ ಪ್ರಕಟಿಸಿದೆ.

    ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಸಲುವಾಗಿ ಸವಿಸ್ತಾರ ಅಧ್ಯಯನ ನಡೆಸಲು ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸವುದಾಗಿ ಘೋಷಿಸಿದೆ. ಇದನ್ನೂ ಓದಿ: ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನ – ತುಮಕೂರಿಗೂ ಲಗ್ಗೆ ಇಟ್ಟ ನಕಲಿ ಭಗವದ್ಗೀತೆ ಪುಸ್ತಕ ಜಾಲ

    ಬಿಜೆಪಿ 2019ರ ಲೋಕಸಭಾ ಚುನಾವಣೆಯ (Elections) ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರೋದಾಗಿ ಭರವಸೆ ನೀಡಿತ್ತು. ಇತ್ತೀಚೆಗೆ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ಸರ್ಕಾರಗಳೂ ಸಂಹಿತೆ ಜಾರಿಗೊಳಿಸಲು ಸಮಿತಿಗಳನ್ನು ರಚನೆ ಮಾಡಿದ್ದವು. ಈ ರಾಜ್ಯಗಳ ಸಾಲಿಗೆ ಇದೀಗ ಗುಜರಾತ್ ಸಹ ಸೇರ್ಪಡೆಯಾಗಿದೆ. ಇದನ್ನೂ ಓದಿ: ಶಾಸಕ ಬೆಲ್ಲದ್‌ ಹೆಸರಿನಲ್ಲಿ ಡೆತ್‌ನೋಟ್‌ ಬರೆದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    ಸಮಿತಿ ರಚನೆ:
    ಏಕರೂಪ ನಾಗರಿಕ ಸಂಹಿತೆ ಅನುಷ್ಠಾನಕ್ಕಾಗಿ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಸಮುತಿಯು 3 ರಿಂದ 4 ಸದಸ್ಯರನ್ನ ಹೊಂದಿರಲಿದೆ. ಚುನಾವಣೆ ನೀತಿ ಸಂಹಿತೆಗೂ ಮುನ್ನವೇ ಈ ಸಂಹಿತೆ ಜಾರಿಯಾಗಲಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ, ಕೇಂದ್ರ ಸಚಿವ ಪುರುಷೋತ್ತಮ ರೂಪಾಲಾ ತಿಳಿಸಿದ್ದಾರೆ. ಇದನ್ನೂ ಓದಿ:  ದೇಗುಲ ಸ್ಫೋಟಿಸಲು ಬಂದಿದ್ದ ಬಾಂಬರ್ – ಸಾಹಿತ್ಯ ಓದಿಕೊಂಡೇ ISIS ಮೂಲಭೂತವಾದಿಯಾಗಿದ್ದ

    ಏನಿದು ಏಕರೂಪ ನಾಗರಿಕ ಸಂಹಿತೆ?
    ಹಿಂದೂ (Hindu), ಮುಸ್ಲಿಂ (Muslims), ಸಿಖ್ಖರು ಸೇರಿದಂತೆ ದೇಶದ ವಿವಿಧ ಧರ್ಮಗಳ ಜನರು ವಿವಾಹ, ಆಸ್ತಿ ಹಂಚಿಕೆ ಸೇರಿ ವಿವಿಧ ಉದ್ದೇಶಗಳೊಗೆ ತಮ್ಮ ಸಮುದಾಯದ ವೈಯಕ್ತಿಕ ಕಾನೂನುಗಳನ್ನು ಪಾಲಿಸುತ್ತಿದ್ದಾರೆ. ಹಾಗಾಗಿ ಎಲ್ಲ ಧರ್ಮದವರಿಗೂ ವಿವಾಹ ವಿಚ್ಛೇದನ, ಅಸ್ತಿ ದತ್ತುಗೆ ಸಂಬಂಧಿಸಿದ ವಿಚಾರಗಳಿಗೆ ಒಂದೇ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆಯಾಗಿದೆ.

    ಸಂಹಿತೆ ಏಕೆ?
    ರಾಜ್ಯದಲ್ಲಿ ಹಿಂದೂ ವಿವಾಹ ಕಾನೂನುಗಳು ಬೇರೆ-ಬೇರೆಯಾಗಿದ್ದು, ವಿವಿಧ ಸಮಸ್ಯೆಗಳಿಗೆ ಕಾರಣವಾಗಿದೆ. ಅಲ್ಲದೇ ಆಯಾ ವೈಯಕ್ತಿಕ ಧರ್ಮಗಳಲ್ಲಿ (Relegions) ಪ್ರತ್ಯೇಕ ನಿಯಮ ಇರುವ ಕಾರಣ. ಆಸ್ತಿ ವ್ಯಾಜ್ಯಗಳೂ ಹೆಚ್ಚಾಗಿವೆ. ಮಹಿಳೆಯರಿಗೆ ಪತಿ ಅಥವಾ ತಂದೆಯ ಆಸ್ತಿಯಲ್ಲಿ ಪಾಲು ಸಿಗುತ್ತಿಲ್ಲ ಎನ್ನುವ ದೂರುಗಳು ಬರುತ್ತಲೇ ಇರುತ್ತವೆ. ಇದೆಲ್ಲದಕ್ಕೂ ಅಂತ್ಯವಾಡಲು ಒಂದೇ ಕಾನುನು ರೂಪಿಸಿ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ತರಲು ಮುಂದಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]