Tag: gujarat election

  • ಚುನಾವಣಾ ಪ್ರಚಾರಕ್ಕೆ ಮೋದಿ ಕಿಕ್‍ಸ್ಟಾರ್ಟ್ – ಅಸಲಿಗೆ ಕಾರ್ಯಕ್ರಮ ಪಟ್ಟಿಯಲ್ಲಿ ರೋಡ್‌ ಶೋ ಇರಲಿಲ್ಲ

    ಚುನಾವಣಾ ಪ್ರಚಾರಕ್ಕೆ ಮೋದಿ ಕಿಕ್‍ಸ್ಟಾರ್ಟ್ – ಅಸಲಿಗೆ ಕಾರ್ಯಕ್ರಮ ಪಟ್ಟಿಯಲ್ಲಿ ರೋಡ್‌ ಶೋ ಇರಲಿಲ್ಲ

    ಹುಬ್ಬಳ್ಳಿ: ರಾಜ್ಯದಲ್ಲಿ ಎಲೆಕ್ಷನ್ ಪ್ರಚಾರಕ್ಕೆ ಇವತ್ತು ಕಿಕ್‍ಸ್ಟಾರ್ಟ್ ಸಿಕ್ಕಿದೆ. ಮತದಾರರನ್ನು ಸೆಳೆಯಲು ಗುಜರಾತ್ ಚುನಾವಣೆಯ (Gujarat Election) ಕೊನೆಯ ಹಂತದಲ್ಲಿ ಬಳಸಿದ್ದ ಅಸ್ತ್ರವನ್ನು, ಕರ್ನಾಟಕದಲ್ಲಿ ಚುನಾವಣೆ (Karnataka Election) ಘೋಷಣೆಗೆ ಮುನ್ನವೇ ಪ್ರಧಾನಿ ಮೋದಿ (PM Narendra Modi) ಪ್ರಯೋಗಿಸಿದ್ದಾರೆ.

    ರಾಷ್ಟ್ರೀಯ ಯುವಜನೋತ್ಸವ (Yuvajanotsava) ಉದ್ಘಾಟಿಸಲು ಹುಬ್ಬಳ್ಳಿಗೆ ಬಂದಿಳಿದ ಪ್ರಧಾನಿ ಮೋದಿ, ಭರ್ಜರಿ ರೋಡ್ ಶೋ (Road Show) ನಡೆಸಿದ್ದಾರೆ. ಅದು ಒಂದೆರಡು ಕಿಲೋಮೀಟರ್ ಅಲ್ಲ. ಬರೋಬ್ಬರಿ 9 ಕಿಲೋಮೀಟರ್ ರೋಡ್‍ ಶೋ ಮಾಡಿದ್ದಾರೆ.

    ವಿಮಾನ ನಿಲ್ದಾಣದಿಂದ ಶುರುವಾದ ರೋಡ್ ಶೋ, ಕಾರ್ಯಕ್ರಮ ನಡೆಯುವ ರೈಲ್ವೇ ಮೈದಾನದವರೆಗೂ ಒಂದು ಗಂಟೆ ಕಾಲ ಸಾಗಿತು. ಮಧ್ಯಾಹ್ನ 3.35ಕ್ಕೆ ಶುರುವಾದ ಮೋದಿ ರೋಡ್ ಶೋ ಸಂಜೆ 4.40ಕ್ಕೆ ಮುಗಿಯಿತು. ಮೋದಿ ರೋಡ್‍ಶೋಗೆ ಭರ್ಜರಿ ಸ್ಪಂದನೆ ಸಿಕ್ಕಿತ್ತು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಾವಿರಾರು ಜನ “ಮೋದಿ ಮೋದಿ” ಎಂದು ಘೋಷಣೆ ಕೂಗಿದರು. ಮಾರ್ಗದುದ್ದಕ್ಕೂ ಮೋದಿಗೆ ಹೂಮಳೆಯ ಸ್ವಾಗತ ಸಿಕ್ಕಿತು. ಅಭಿಮಾನಿಗಳು ಕೇಸರಿ ಬಟ್ಟೆ ಧರಿಸಿ ಮೋದಿ ಭಾವ ಚಿತ್ರ ಹಿಡಿದು ನಿಂತಿದ್ದರು. ಇದನ್ನೂ ಓದಿ: ರನ್‌ವೇ ಸಿದ್ದವಾಗಿದೆ, ಕೌಶಲ್ಯಗಳನ್ನು ಕಲಿತು ಟೇಕಾಫ್‌ ಆಗಿ – ಯುವ ಜನತೆಗೆ ಮೋದಿ ಕರೆ

    ಒಂದು ಗಂಟೆ ಕಾಲ ಮೋದಿ ಕೈಬೀಸುತ್ತಲೇ ಇದ್ದರು. ಯಾವುದೇ ಹಂತದಲ್ಲಿ ಮೋದಿಯಲ್ಲಿ ಒಂದಿನಿತು ದಣಿವು ಕಂಡುಬರಲಿಲ್ಲ. ಈ ರೋಡ್‍ಶೋ ಮೂಲಕ ಅಸೆಂಬ್ಲಿ ಚುನಾವಣೆಯ ಪ್ರಚಾರಕ್ಕೆ ಪ್ರಧಾನಿ ಮೋದಿ ಪರೋಕ್ಷವಾಗಿ ಚಾಲನೆ ನೀಡಿದರು.

    ಅಸಲಿಗೆ ಇಂದಿನ ಮೋದಿ ಕಾರ್ಯಕ್ರಮದಲ್ಲಿ ರೋಡ್ ಶೋ ಬಗ್ಗೆ ಉಲ್ಲೇಖವೇ ಇರಲಿಲ್ಲ. ಕೆಲವರು ಮೋದಿ ರೋಡ್‍ಶೋ ಮಾಡಲಿದ್ದಾರೆ ಅಂದರೆ ಕೆಲವರು ರೋಡ್ ಶೋ ಇಲ್ಲ ಎಂದು ಕೊನೆ ಕ್ಷಣದವರೆಗೂ ಹೇಳುತ್ತಲೇ ಬಂದಿದ್ದರು. ಈ ವಿಚಾರದಲ್ಲಿ ಜಿಲ್ಲಾಡಳಿತವೂ ಗೊಂದಲದಲ್ಲಿ ಇದ್ದಂತೆ ಕಂಡುಬಂತು. ಮೋದಿ ರೋಡ್ ಶೋಗೆ ಸಿಕ್ಕ ಪ್ರತಿಕ್ರಿಯೆ ಕಂಡು ಬಿಜೆಪಿ ಖುಷಿಯಾಗಿದೆ. ಇದನ್ನು ಕಾರ್ಯಕ್ರಮ ವೇದಿಕೆಯಲ್ಲಿ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ, ಪ್ರಧಾನಿ ಮೋದಿಯ ಮುಂದೆಯೇ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗುಜರಾತ್‌ನಲ್ಲಿ ಆಪ್‌ಗೆ ಹಿನ್ನಡೆ – ಬಿಜೆಪಿ ಸಂಪರ್ಕದಲ್ಲಿದ್ದಾರೆ ಐವರು ಶಾಸಕರು

    ಗುಜರಾತ್‌ನಲ್ಲಿ ಆಪ್‌ಗೆ ಹಿನ್ನಡೆ – ಬಿಜೆಪಿ ಸಂಪರ್ಕದಲ್ಲಿದ್ದಾರೆ ಐವರು ಶಾಸಕರು

    ಅಹಮದಾಬಾದ್: ಗುಜರಾತ್‌ ಆಮ್‌ ಆದ್ಮಿ ಪಕ್ಷದ(AAP) ಐವರು ಶಾಸಕರು ಬಿಜೆಪಿ(BJP) ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ.

    ಐದು ಆಪ್‌ ಶಾಸಕರ ಪೈಕಿ ಮೂವರು ಈ ಹಿಂದೆ ಬಿಜೆಪಿ ಪಕ್ಷದಲ್ಲಿದ್ದರು. ಬಿಜೆಪಿಯಿಂದ ಟಿಕೆಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಆಪ್‌ ಸೇರಿದ್ದರು. ಈ ಪೈಕಿ ಭೂಪೇಂದ್ರಭಾಯಿ ಭಯಾನಿ ಈ ವಾರ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ.

    ಬಿಜೆಪಿ ಸೇರ್ಪಡೆ ಕುರಿತ ಪ್ರಶ್ನೆಗೆ, ನಾನು ಬಿಜೆಪಿಗೆ ಸೇರಿಲ್ಲ. ನಾನು ಬಿಜೆಪಿಗೆ ಸೇರಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಜನರ ಜೊತೆ ಕೇಳಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಉತ್ತರಿಸಿದ್ದಾರೆ.

    ವಿರೋಧ ಪಕ್ಷಗಳು ಕಡಿಮೆ ಸ್ಥಾನವನ್ನು ಪಡೆದಿವೆ. ಶಾಸಕನಾಗಿ ವಿರೋಧ ಪಕ್ಷದ ಬೆಂಚಿನಲ್ಲಿ ಕೂರುವುದರಿಂದ ತನಗೆ ಮತ ಹಾಕಿದ ಜನರಿಗೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ನನ್ನ ಕ್ಷೇತ್ರ ರೈತರ ಪ್ರಾಬಲ್ಯವಿರುವ ಪ್ರದೇಶದಲ್ಲಿದೆ. ಅವರ ನೀರಾವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಾನು ಪರಿಹರಿಸಬೇಕಾಗಿದೆ. ಈ ಪ್ರದೇಶದಲ್ಲಿ ಅನೇಕ ವ್ಯಾಪಾರಸ್ಥರಿದ್ದಾರೆ. ನಾನು ಅವರನ್ನೂ ನೋಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಚ್ಚಾ ತೈಲಕ್ಕೆ ಜಿ7 ದೇಶಗಳಿಂದ ದರ ಮಿತಿ – ಭಾರತದ ನಿರ್ಧಾರವನ್ನು ಸ್ವಾಗತಿಸಿದ ರಷ್ಯಾ

    ಗುಜರಾತ್ ಜನರು ನರೇಂದ್ರ ಮೋದಿ ಮತ್ತು ಬಿಜೆಪಿಗೆ ದಾಖಲೆಯ ಜನಾದೇಶವನ್ನು ನೀಡಿದ್ದಾರೆ. ನಾನು ಅದನ್ನು ಗೌರವಿಸುತ್ತೇನೆ. ಮೊದಲು ನಾನು ಬಿಜೆಪಿಯೊಂದಿಗೆ ಇದ್ದೆ ಮತ್ತು ಈಗಲೂ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ ಎಂದರು.

    ಗುಜರಾತ್ ಚುನಾವಣೆಯಲ್ಲಿ(Gujarat Election) ಬಿಜೆಪಿ 156, ಕಾಂಗ್ರೆಸ್ 17, ಆಪ್‌ 5 ಸ್ಥಾನಗಳನ್ನು ಗೆದ್ದುಕೊಂಡಿದೆ. ಮೂವರು ಪಕ್ಷೇತರ, ಒಬ್ಬರು ಸಮಾಜವಾದಿ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗುಜರಾತ್‌ಗೆ ತೆರಳಲಿದ್ದಾರೆ ಬಿಎಸ್‌ವೈ

    ಗುಜರಾತ್‌ಗೆ ತೆರಳಲಿದ್ದಾರೆ ಬಿಎಸ್‌ವೈ

    ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕನ‌ ಆಯ್ಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ(BS Yediyurappa) ಇಂದು ಗುಜರಾತಿನ ಅಹಮದಾಬಾದ್‌ ತೆರಳಲಿದ್ದಾರೆ.

    ಬಿಜೆಪಿ(BJP) ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾಗಿರುವ ಬಿಎಸ್‌ವೈ ಅವರನ್ನು ಮುಖ್ಯಮಂತ್ರಿ ಆಯ್ಕೆ ಸಂಬಂಧ ಬಿಜೆಪಿ ಹೈಕಮಾಂಡ್‌ ವೀಕ್ಷಕರಾಗಿ ನಿಯೋಜನೆ ಮಾಡಿದೆ.

    ಡಿ. 2 ಸೋಮವಾರದಂದು ಭೂಪೇಂದ್ರ ಪಟೇಲ್‌ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು ಎರಡನೇ ಬಾರಿ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಸೇರಿ ಹಲವು ರಾಜ್ಯ ನಾಯಕರೂ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಫಲ ನೀಡಿತು ಚಾಣಕ್ಯ ಜೋಡಿಯ ತಂತ್ರ – ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳೇನು?

    ಗುಜರಾತ್‌ ಚುನಾವಣೆಯಲ್ಲಿ(Gujarat Election) ಬಿಜೆಪಿ 156 ಸ್ಥಾನ ಗೆದ್ದರೆ ಕಾಂಗ್ರೆಸ್‌ 17, ಆಮ್‌ ಆದ್ಮಿ 5, ಸಮಾಜವಾದಿ ಪಕ್ಷ 1, ಇತರರು 3 ಸ್ಥಾನವನ್ನು ಗಳಿಸಿದ್ದಾರೆ. ಈ ಮೂಲಕ 27 ವರ್ಷಗಳ ಆಳ್ವಿಕೆ ನಂತರವೂ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಏಪ್ರಿಲ್ 23 ಅಥವಾ ಮೇ ಮೊದಲ ವಾರದಲ್ಲಿ ರಾಜ್ಯ ಚುನಾವಣೆ: ಶಾಸಕ ಕೆ.ಜಿ ಬೋಪಯ್ಯ

    ಏಪ್ರಿಲ್ 23 ಅಥವಾ ಮೇ ಮೊದಲ ವಾರದಲ್ಲಿ ರಾಜ್ಯ ಚುನಾವಣೆ: ಶಾಸಕ ಕೆ.ಜಿ ಬೋಪಯ್ಯ

    ಮಡಿಕೇರಿ: ಏಪ್ರಿಲ್ 23 ಅಥವಾ ಮೇ ಮೊದಲ ವಾರದಲ್ಲಿ ಕರ್ನಾಟಕ ಚುನಾವಣೆ (Karnataka Election) ನಡೆಯುತ್ತದೆ ಎಂದು ರಾಜ್ಯ ಚುನಾವಣೆ ಬಗ್ಗೆ ಮಾಜಿ ಸ್ಪೀಕರ್, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ (KG Bopaiah) ಸುಳಿವು ನೀಡಿದರು.

    ಗುಜರಾತ್ ಚುನಾವಣೆ (Gujarat Election) ಮುಗಿದ ಬಳಿಕ ಕರ್ನಾಟಕದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯ ಚುನಾವಣೆ ಬಗ್ಗೆ ಮಡಿಕೇರಿಯಲ್ಲಿ (Madikeri) ‌ಮಾತನಾಡಿದ ಅವರು‌, ಏಪ್ರಿಲ್ 23 ಅಥವಾ ಮೇ ಮೊದಲ ವಾರದಲ್ಲಿ ಎಲೆಕ್ಷನ್ ಇದೆ. ನಮಗೆ ಮೊದಲೇ ಗೊತ್ತಿತ್ತು. ಹೀಗಾಗಿ ಕೊಡಗು ಜಿಲ್ಲೆಯಲ್ಲೂ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಪಕ್ಷ ಚುನಾವಣೆಗೆ ಕಾರ್ಯಕರ್ತರು ಸೇರಿದಂತೆ ಎಲ್ಲರೂ ಸನ್ನದ್ಧವಾಗಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತದ ಪ್ರಥಮ 3ಡಿ ಬಯೋಪ್ರಿಂಟಿಂಗ್‌ ಉತ್ಕೃಷ್ಟತಾ ಕೇಂದ್ರಕ್ಕೆ ಸಚಿವ ಅಶ್ವಥ್‌ ನಾರಾಯಣ ಚಾಲನೆ

    ಗುಜರಾತ್ (Gujarat ) ಮಾದರಿಯಲ್ಲಿ ರಾಜ್ಯದಲ್ಲೂ ಹೊಸ ಮುಖಗಳಿಗೆ ಆದ್ಯತೆ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಅದು ಪಕ್ಷದ ನಿರ್ಧಾರ ಇದರ ಬಗ್ಗೆ ಹೆಚ್ಚು ಮಾತಾನಾಡುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಆ್ಯಕ್ಟಿವ್ ಇದ್ದಾರೆ, ರಾತ್ರಿ-ಹಗಲು ಪಕ್ಷಕ್ಕಾಗಿ ಕೆಲಸ ಮಾಡ್ತಿದ್ದಾರೆ: ಸತೀಶ್ ಜಾರಕಿಹೊಳಿ

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಪಕ್ಷ ಡ್ರೈವರ್ ಇಲ್ಲದ ಬಸ್ ಆಗಿದೆ: ಸಿಎಂ ಇಬ್ರಾಹಿಂ

    ಕಾಂಗ್ರೆಸ್ ಪಕ್ಷ ಡ್ರೈವರ್ ಇಲ್ಲದ ಬಸ್ ಆಗಿದೆ: ಸಿಎಂ ಇಬ್ರಾಹಿಂ

    ಕಲಬುರಗಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ (Gujarat Election) ಹೀನಾಯ ಸೋಲು ಅನುಭವಿಸಿರುವ ಕಾಂಗ್ರೆಸ್ (Congress) ಪಕ್ಷ, ಡ್ರೈವರ್ ಇಲ್ಲದ ಬಸ್ ತರಹ ಆಗಿದೆ ಎಂದು ಜೆಡಿಎಸ್ (JDS) ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಲೇವಡಿ ಮಾಡಿದರು.

    ನಗರದ ಐವನ್ ಇ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಗುರುನೂ ಇಲ್ಲ, ಗುರಿಯೂ ಇಲ್ಲ. ಪ್ರಾದೇಶಿಕ ಪಕ್ಷಗಳನ್ನು ಕೊಲ್ಲಲು ಸಾಕಷ್ಟು ಪ್ರಯತ್ನ ಮಾಡಿದ ಕಾಂಗ್ರೆಸ್ ಇಂದು ಹೀನಾಯ ಸೋಲು ಅನುಭವಿಸಿದೆ ಎಂದು ಟೀಕಿಸಿದರು.

    ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಇಡೀ ರಾಜ್ಯಾದ್ಯಂತ ನಡುರಾತ್ರಿ 3 ಗಂಟೆಯಾದರೂ ಹಳ್ಳಿಗಳಲ್ಲಿ ಸ್ವಾಗತ ಕೋರುತ್ತಿದ್ದಾರೆ. ಮೊನ್ನೆ ಶಿರಾದಲ್ಲಿ ಮುಸ್ಲಿಂ ಮಹಿಳೆಯರು ಅದ್ಧೂರಿಯಾಗಿ ಪಂಚರತ್ನ ರಥಯಾತ್ರೆಯನ್ನು ಮಧ್ಯರಾತ್ರಿ 2 ಗಂಟೆಗೆ ಸ್ವಾಗತ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಗುಜರಾತ್‍ನಲ್ಲಿ 7ನೇ ಬಾರಿಗೆ ಬಿಜೆಪಿಗೆ ಅಧಿಕಾರ – ಅಧಿಕೃತ ವಿಪಕ್ಷ ಸ್ಥಾನವನ್ನೂ ಕಳೆದುಕೊಂಡ ಕಾಂಗ್ರೆಸ್

    2024ರ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಅಧಿಕಾರಕ್ಕೆ ಬರಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನೆಲಕಚ್ಚಿಕೊಳ್ಳಲಿವೆ. ಅದೇ ರೀತಿ ಮುಂಬರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸಹ ಸ್ವಂತ ಬಲದ ಮೇಲೆ 100 ಸ್ಥಾನಗಳನ್ನು ದಾಟಿ ಜೆಡಿಎಸ್ ಅಧಿಕಾರ ಪಡೆದು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ದೇಶದ ಹಿತಕ್ಕಾಗಿ ಇನ್ನಷ್ಟು ಕಠಿಣ ನಿರ್ಣಯ : ಮೋದಿ

    ಬಿಜೆಪಿ ಅಂಗಾಂಗಗಳು ಕುಸಿದು ಬಿದ್ದಿದ್ದು, ಈ ಚುನಾವಣೆಯ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಲೆಗೆ ಹೋಗುತ್ತಾರೆ. ಆರ್‌ಎಸ್‌ಎಸ್ ಆಂತರಿಕ ಸರ್ವೇಯ ಪ್ರಕಾರ ಬಿಜೆಪಿ ಪಕ್ಷ 50 ಸ್ಥಾನ ದಾಟುವುದಿಲ್ಲ ಎಂದಿದೆ ಎಂದು ಟೀಕಿಸಿದರು.

    Live Tv
    [brid partner=56869869 player=32851 video=960834 autoplay=true]

  • ದೇಶದ ಹಿತಕ್ಕಾಗಿ ಇನ್ನಷ್ಟು ಕಠಿಣ ನಿರ್ಣಯ : ಮೋದಿ

    ದೇಶದ ಹಿತಕ್ಕಾಗಿ ಇನ್ನಷ್ಟು ಕಠಿಣ ನಿರ್ಣಯ : ಮೋದಿ

    ನವದೆಹಲಿ: ಬಿಜೆಪಿ ಮುಂದಿನ ದಿನಗಳಲ್ಲಿ ದೇಶಕ್ಕಾಗಿ ಕಠಿಣ ನಿರ್ಣಯಗಳನ್ನು ಕೈಗೊಳ್ಳಲಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.

    ನವದೆಹಲಿಯಲ್ಲಿ (NewDelhi) ಬಿಜೆಪಿ (BJP) ಪ್ರಧಾನ ಕಚೇರಿಯಲ್ಲಿ ಗುಜರಾತ್ ಚುನಾವಣಾ (Gujarat Election) ವಿಜಯೋತ್ಸವದ ನೇತೃತ್ವ ವಹಿಸಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ದೆಹಲಿ, ಗುಜರಾತ್ ಮತ್ತು ಹಿಮಾಚಲದ ಜನರಿಗೆ ಧನ್ಯವಾದ ಹೇಳುತ್ತೇನೆ. ಬಿಜೆಪಿಗೆ ದೇಶಾದ್ಯಂತ ಪ್ರೀತಿ ವ್ಯಕ್ತವಾಗುತ್ತಿದೆ. ಗುಜರಾತಿನಲ್ಲಷ್ಟೇ ಅಲ್ಲ, ಉತ್ತರ ಪ್ರದೇಶದ ರಾಂಪುರದ ಉಪಚುನಾವಣೆಯಲ್ಲಿಯೂ ನಾವು ದೊಡ್ಡ ಗೆಲುವು ಸಾಧಿಸಿದ್ದೇವೆ. ಈ ಬಾರಿಯ ಚುನಾವಣೆಗಳಲ್ಲಿ ಜನರು ಪ್ರಜಾಪ್ರಭುತ್ವದ ಹಬ್ಬವನ್ನು ನಿಜವಾಗಿ ಆಚರಿಸಿದ್ದು, ಒಂದೇ ಒಂದು ಬೂತ್‌ನಲ್ಲಿಯೂ ಮರು ಚುನಾವಣೆ ಅಥವಾ ಮರು ಮತದಾನದ ಅವಶ್ಯಕತೆ ಇಲ್ಲದಂತೆ ನೋಡಿಕೊಂಡಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.

    ಬಿಜೆಪಿ ತೆಗೆದುಕೊಳ್ಳುವ ದಿಟ್ಟ ಹಾಗೂ ಕಠಿಣ ನಿರ್ಧಾರದಿಂದಾಗಿ ಈ ದೇಶದ ಜನರು ಬಿಜೆಪಿಯನ್ನು ಇಷ್ಟು ಪ್ರೀತಿಸುತ್ತಾರೆ. ಇದರಿಂದಲೇ ಬಿಜೆಪಿಗೆ ದಿನೇ ದಿನೇ ಬೆಂಬಲ ಹಾಗೂ ನಂಬಿಕೆ ಎರಡು ಹೆಚ್ಚಾಗುತ್ತಿದೆ ಎಂದ ಅವರು, ಗುಜರಾತ್‌ನಲ್ಲಿ ಬಿಜೆಪಿ ಅತ್ಯುತ್ತಮ ಫಲಿತಾಂಶವನ್ನು ಸಾಧಿಸಿದೆ. 25 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಗುಜರಾತ್‌ನ ಜನರು ಬಿಜೆಪಿ ಮೇಲೆ ಇಟ್ಟಿರುವ ನಂಬಿಕೆಯನ್ನು ಹಾಗೇ ಉಳಿಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೇ ಅವರು ಎಲ್ಲಾ ದಾಖಲೆಗಳನ್ನು ಮುರಿದು, ಹೊಸ ಇತಿಹಾಸವನ್ನು ಬರೆದಿದ್ದಾರೆ ಎಂದು ಹೇಳಿದರು.

    ಈ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಎಲ್ಲ ವರ್ಗದ, ಎಲ್ಲ ಜಾತಿ, ಧರ್ಮದ ಜನರು ಒಗ್ಗೂಡಿ ಬಿಜೆಪಿಗೆ ಮತ ಹಾಕಿದ್ದಾರೆ. ಯುವಕರು ಕೂಡ ಬಿಜೆಪಿ ಮೇಲೆ ಮತ ಚಲಾಯಿಸಿದ್ದಾರೆ ಎಂದ ಅವರು, ಗುಜರಾತ್‌ ಸಮಯದಲ್ಲಿ ಈ ಬಾರಿ ನರೇಂದ್ರ ಮೋದಿಯ ದಾಖಲೆಯನ್ನು ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಾಟೇಲ್‌ ಅವರು ಮುರಿಯುತ್ತಾರೆ. ಮೋದಿ ಇದಕ್ಕೆ ಸಹಕರಿಸುತ್ತಾರೆ ಎಂದು ಹೇಳಿದ್ದೆ. ಇದೀಗ ಅದು ನಿಜವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಇಂದು ಭೂಪೇಂದ್ರ ಪಟೇಲ್ ಅವರು ತಮ್ಮ ಸ್ಥಾನವನ್ನು 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಇದು ಅಸಾಧಾರಣವಾಗಿದೆ. 2 ಲಕ್ಷ ಮತಗಳಿಂದ ಅಸೆಂಬ್ಲಿ ಸ್ಥಾನವನ್ನು ಗೆಲ್ಲುವುದು ಲೋಕಸಭಾ ಸ್ಥಾನಗಳಲ್ಲಿ ಹೆಚ್ಚಿನವರಿಗೆ ಆಗುವುದಿಲ್ಲ ಎಂದು ಹೇಳಿದರು. ಪಟೇಲ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

    ಹಿಮಾಚಲ ಜನತೆಗೆ ಧನ್ಯವಾದ ಅರ್ಪಿಸೋದನ್ನು ಮರೆಯಲಿಲ್ಲ. ಹಿಮಾಚಲದಲ್ಲಿ ನಾವು ಕಾಂಗ್ರೆಸ್ಸಿಗಿಂತ ಕೇವಲ 1 ಪರ್ಸೆಂಟ್‌ಗಿಂತ ಕಡಿಮೆ ಮತ ಪಡೆದಿದ್ದೇವೆ. ಆದ್ರೆ ನಾವು ಹಿಮಾಚಲವನ್ನು ಮರೆಯಲ್ಲ. ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡುತ್ತೇವೆ ಎಂದು ಘೋಷಿಸಿದರು. ಇದನ್ನೂ ಓದಿ: 5 ರಾಜ್ಯಗಳ ಉಪ ಚುನಾವಣೆ – ಕಾಂಗ್ರೆಸ್‌, ಬಿಜೆಪಿಗೆ ತಲಾ 2 ಸೀಟ್‌

    ರಾಷ್ಟ್ರದ ಹಿತಕ್ಕಾಗಿ ಹಾಗೂ ಜನತೆಗಾಗಿ ಬಿಜೆಪಿ ಕಾರ್ಯಕರ್ತರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಬಿಜೆಪಿ ಎಲ್ಲಾ ವರ್ಗದವರನ್ನು ಹೊಂದಿದ್ದು, ಮಹಿಳೆ ಹಾಗೂ ಪುರುಷರನ್ನು ಸಮಾನವಾಗಿ ಕಾಣುತ್ತದೆ. ಬಿಜೆಪಿಗೆ ಮಹಿಳೆಯರ ಪ್ರಗತಿಯೇ ಮುಖ್ಯ ಧ್ಯೇಯವಾಗಿದೆ ಎಂದ ಅವರು, ಶಾರ್ಟ್‌ಕಟ್‌ ರಾಜಕೀಯವು ರಾಷ್ಟ್ರವನ್ನು ಹಾನಿಹೊಳಿಸುತ್ತದೆ ಎಂಬುದನ್ನು ಈಗಾಗಲೇ ಜನರು ಅರ್ಥ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರತಿಯೊಂದು ನಿರ್ಧಾರವು ಹಾಗೂ ಯೋಜನೆಯು ದೂರದೃಷ್ಟಿತ್ವವನ್ನು ಹೊಂದಿದೆ. ಇದನ್ನೂ ಓದಿ: ಡಿ.12ರಂದು ಮೋದಿ ಸ್ಟೇಡಿಯಂನಲ್ಲಿ ಪ್ರಮಾಣವಚನ – ಮೋದಿ, ಶಾ ಭಾಗಿ

    Live Tv
    [brid partner=56869869 player=32851 video=960834 autoplay=true]

  • ಹಿಮಾಚಲ ಪ್ರದೇಶದ ಗೆಲುವಿಗೆ ಭಾರತ್ ಜೋಡೋ ಯಾತ್ರೆ ಸಹಾಯ ಮಾಡಿದೆ: ಖರ್ಗೆ

    ಹಿಮಾಚಲ ಪ್ರದೇಶದ ಗೆಲುವಿಗೆ ಭಾರತ್ ಜೋಡೋ ಯಾತ್ರೆ ಸಹಾಯ ಮಾಡಿದೆ: ಖರ್ಗೆ

    ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿಗೆ ರಾಹುಲ್ ಗಾಂಧಿಯವರ (Rahul Gandhi) ಭಾರತ್ ಜೋಡೋ ಯಾತ್ರೆಯು (Bharat Jodo Yatra) ಸಹಾಯ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ತಿಳಿಸಿದರು.

    ಹಿಮಾಚಲ ಪ್ರದೇಶದಲ್ಲಿ (Himachal Pradesh) ಕಾಂಗ್ರೆಸ್ (Congress) ಗೆಲುವು ಸಾಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾರತ್ ಜೋಡೋ ಯಾತ್ರೆ ಬಗ್ಗೆ ಹಿಮಾಚಲ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಹೋದಾಗ ಕೂಡ ಉತ್ತಮ ಸ್ಪಂದನೆ ಸಿಕ್ಕಿತ್ತು. ಹೀಗಾಗಿ ಉತ್ತಮ ಬಹುಮತದಿಂದ ಪಕ್ಷಕ್ಕೆ ಗೆಲುವು ಬಂದಿದೆ ಎಂದು ಅಭಿಪ್ರಾಯಪಟ್ಟರು.

    ಆ ರಾಜ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಪಟ್ಟಿ ಕೊಟ್ಟಿದ್ದೆವು. ಅದಕ್ಕೆ ನಮಗೆ ಅಲ್ಲಿನ ಜನ ಒಗ್ಗೂಡಿಸಿ ಗೆಲ್ಲಿಸಿದ್ದಾರೆ. ಇದರಲ್ಲಿ ಹೆಚ್ಚಿನ ಪಾತ್ರ ಪ್ರಿಯಾಂಕಾ ವಾದ್ರಾದ್ದು ಇದೆ. ಸಾಕಷ್ಟು ರ‍್ಯಾಲಿ, ಸಮಾವೇಶ ಮಾಡಿದ್ದಾರೆ. ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಇದೇ ವೇಳೆ ಗುಜರಾತ್ ಚುನಾವಣೆಯಲ್ಲಿ (Gujarat Election) ಕಾಂಗ್ರೆಸ್ ಸೋಲಿನ ಬಗ್ಗೆ ಮಾತನಾಡಿದ ಅವರು, ಗುಜರಾತ್ ಸೋಲಲು ಕಾರಣ ಸಾಕಷ್ಟು ಇವೆ. ಪಕ್ಷ ಇಷ್ಟು ಕೆಳ ಮಟ್ಟಕ್ಕೆ ಬರಲು ಕ್ಯಾಂಪೇನ್ ಮಾಡಿಲ್ಲ. ಕಳೆದ ಬಾರಿ ಅತೀ ಹೆಚ್ಚು ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದೆವು. ಆದರೆ ಹಲವು ಕಡೆ ಕಡಿಮೆ ಅಂತರದಲ್ಲಿ ಸೋತಿದ್ದೆವು. ಈ ಸಲ ಕೆಲವು ಪಕ್ಷ ಹೊಸದಾಗಿ ಬಂದು ನಮ್ಮ ಮತ ಕೆಡಿಸಿವೆ. ಅಸ್ತಿತ್ವದಲ್ಲಿ ಇಲ್ಲದ ಪಕ್ಷ ಬಂದು ಮತಗಳ ವಿಭಜನೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಗೆದ್ದಿದ್ಹೇಗೆ?

    ಗುಜರಾತ್ ಸೋಲಿಗೆ ವೈಚಾರಿಕವಾಗಿ, ಸೈದ್ಧಾಂತಿಕವಾಗಿ ಕಾರಣವಾಗಿದೆ. ಒಂದು ವರ್ಷದಿಂದ ಮೋದಿ ಪ್ರಚಾರ ಮಾಡಿದ್ದಾರೆ. ಮಣ್ಣಿನ ಮಗ ಅಂತಾ ಹೇಳಿದ್ದು, ದಾಖಲೆಯ ರೋಡ್ ಶೋ, ಮತದಾನದ ದಿನ ನಡೆದುಕೊಂಡು ಬಂದು ಮತದಾನ ಮಾಡಿದ ಗಿಮಿಕ್‍ಗಳು ನಮ್ಮ ಸೋಲಿಗೆ ಕಾರಣವಾಗಿದೆ. ಆದರೆ ಅವರ ಪ್ರಚಾರದ ಹಕ್ಕು ಅವರು ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಹಿಮಾಚಲದಲ್ಲಿ ಕಾಂಗ್ರೆಸ್‌ಗೆ ಅಧಿಕಾರ – ಛತ್ತೀಸ್‌ಗಢಕ್ಕೆ ಶಾಸಕರು ಶಿಫ್ಟ್‌

    Live Tv
    [brid partner=56869869 player=32851 video=960834 autoplay=true]

  • Gujarat Election Result: ಜಿಗ್ನೇಶ್‌ ಮೇವಾನಿಗೆ ಜಯ

    Gujarat Election Result: ಜಿಗ್ನೇಶ್‌ ಮೇವಾನಿಗೆ ಜಯ

    ಗಾಂಧಿನಗರ: ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ್ದ ಯುವ ನಾಯಕ ಜಿಗ್ನೇಶ್‌ ಮೇವಾನಿ(Jignesh Mevani) ಎರಡನೇ ಬಾರಿ ಜಯಗಳಿಸಿದ್ದಾರೆ.

    ಗುಜರಾತ್‌ನ ವಡ್ಗಾಂ ಕ್ಷೇತ್ರದಿಂದ ಕಾಂಗ್ರೆಸ್‌(Congress) ಅಭ್ಯರ್ಥಿ ಮೇವಾನಿಗೆ ಬಿಜೆಪಿ ಅಭ್ಯರ್ಥಿ ಮಣಿಲಾಲ್ ವಘೇಲಾ ಭಾರೀ ಸ್ಪರ್ಧೆ ನೀಡಿದ್ದರು. ಆದರೆ ಅಂತಿಮವಾಗಿ 2 ಸಾವಿರಕ್ಕೂ ಹೆಚ್ಚು ಮತಗಳಿಂದ ಮೇವಾನಿ ವಿಜಯದ ನಗೆ ಬೀರಿದ್ದಾರೆ. ಇದನ್ನೂ ಓದಿ: ಆಪ್‌, ಓವೈಸಿ ಪಕ್ಷ ಕೊಟ್ಟ ಹೊಡೆತಕ್ಕೆ ಕಾಂಗ್ರೆಸ್‌ ಪಲ್ಟಿ

    ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಮೇವಾನಿ ಬಿಜೆಪಿ 19ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು. ಸ್ಪರ್ಧೆ ಮಾಡಿದ ಮೊದಲ ಚುನಾವಣೆಯಲ್ಲೇ ಗೆಲ್ಲುವ ಮೂಲಕ ಸುದ್ದಿಯಾಗಿದ್ದರು. 2021ರಲ್ಲಿ ಮೇವಾನಿ ಕಾಂಗ್ರೆಸ್‌ ಪಕ್ಷ ಸೇರಿದ್ದರು.

    Live Tv
    [brid partner=56869869 player=32851 video=960834 autoplay=true]

  • 1 ತಿಂಗಳ ಹಿಂದೆ ಪಿಯೂಷ್ ಗೋಯಲ್ ಹೇಳಿದ್ದ ಭವಿಷ್ಯ ನಿಜವಾಯ್ತು – ವೀಡಿಯೋ ವೈರಲ್

    1 ತಿಂಗಳ ಹಿಂದೆ ಪಿಯೂಷ್ ಗೋಯಲ್ ಹೇಳಿದ್ದ ಭವಿಷ್ಯ ನಿಜವಾಯ್ತು – ವೀಡಿಯೋ ವೈರಲ್

    ಗಾಂಧಿನಗರ: ತೀವ್ರ ಕುತೂಹಲ ಕೆರಳಿಸಿದ್ದ ಗುಜರಾತ್ ಚುನಾವಣೆಯಲ್ಲಿ (Gujarat Election) ಬಿಜೆಪಿ (BJP) 150ಕ್ಕೂ ಹೆಚ್ಚು ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಪ್ರತಿಪಕ್ಷಗಳನ್ನ ಧೂಳೀಪಟ ಮಾಡಿದೆ.

    ಈ ನಡುವೆ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಗೆಲುವಿನ ಭವಿಷ್ಯ ನುಡಿದಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಸದ್ದು ಮಾಡುತ್ತಿದೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತದ ವೇಳೆ ರಕ್ಷಣೆ ಮಾಡಿದ್ದ ಕಾಂತಿಲಾಲ್‌ಗೆ ಭರ್ಜರಿ ಜಯ

    ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪಿಯೂಷ್ ಗೋಯಲ್ ಅವರು, ಗುಜರಾತ್‌ನಲ್ಲಿ ಬಿಜೆಪಿಗೆ (BJP) ಯಾವುದೇ ಪ್ರತಿ ಸ್ಪರ್ಧಿಯಿಲ್ಲ. ನಾವು ಈ ಬಾರಿ ಗುಜರಾತ್ ಅನ್ನು ದಾಖಲೆಯ ಸ್ಥಾನಗಳೊಂದಿಗೆ ಗೆಲ್ಲೋದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಆಪ್‌, ಓವೈಸಿ ಪಕ್ಷ ಕೊಟ್ಟ ಹೊಡೆತಕ್ಕೆ ಕಾಂಗ್ರೆಸ್‌ ಪಲ್ಟಿ

    ಗುಜರಾತ್ ಚುನಾವಣಾ ಇತಿಹಾಸದಲ್ಲಿ ಕಾಂಗ್ರೆಸ್ 149 ಸ್ಥಾನಗಳನ್ನು ಗೆದ್ದಿರುವುದು ಇದುವೆರಗಿನ ದಾಖಲೆ. ಆದರೆ ಬಿಜೆಪಿ ಈ ಬಾರಿ 150ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನ ಗೆದ್ದು ದಾಖಲೆ ಬರೆಯುತ್ತೆ. ನಾನು ಅಹಂಕಾರದಿಂದ ಈ ಮಾತನ್ನು ಹೇಳುತ್ತಿಲ್ಲ. ಗುಜರಾತ್ ಒಳಾಂಗಣ ಪ್ರವೇಶಿಸಿದ್ದೇನೆ. ಅಲ್ಲಿನ ಜನರ ಮನಸ್ಥಿತಿಯು ಮೋದಿ (Narendra Modi) ಅವರಿಗೆ ಸಂಪೂರ್ಣ ಮೆಚ್ಚುಗೆಯಾಗಿದೆ. ಬಿಜೆಪಿ ಅಧಿಕಾರದಲ್ಲಿ ಮುಂದುವರಿಯೋದನ್ನು ಅಲ್ಲಿನ ಜನರೂ ಎದುರು ನೋಡ್ತಿದ್ದಾರೆ ಎಂದು ಹೇಳಿದ್ದರು.

    ಇದೀಗ ಕಾರ್ಯಕ್ರಮದಲ್ಲಿ ಗೋಯಲ್ ಮಾತನಾಡಿದ್ದ ವೀಡಿಯೋವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಅವರಿಗೆ ಜನ ಮತ ಹಾಕಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಈ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸುಮಾರ 1 ಲಕ್ಷಕ್ಕೂ ಅಧಿಕ ಮಂದಿ ವೀಡಿಯೋ ವೀಕ್ಷಣೆ ಮಾಡಿದ್ದಾರೆ. ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಪ್‌, ಓವೈಸಿ ಪಕ್ಷ ಕೊಟ್ಟ ಹೊಡೆತಕ್ಕೆ ಕಾಂಗ್ರೆಸ್‌ ಪಲ್ಟಿ

    ಆಪ್‌, ಓವೈಸಿ ಪಕ್ಷ ಕೊಟ್ಟ ಹೊಡೆತಕ್ಕೆ ಕಾಂಗ್ರೆಸ್‌ ಪಲ್ಟಿ

    ಗಾಂಧಿನಗರ: ಆಮ್‌ ಆದ್ಮಿ ಪಕ್ಷ(AAP) ಮತ್ತು ಅಸಾದುದ್ದೀನ್‌ ಓವೈಸಿ ಅವರ ಎಐಎಂಐಎಂ ನೀಡಿದ ಹೊಡೆತದಿಂದ ಕಾಂಗ್ರೆಸ್‌(Congress) ಗುಜರಾತ್ ಚುನಾವಣೆಯಲ್ಲಿ(Gujarat Election) ಹೀನಾಯವಾಗಿ ಸೋತಿದೆ.

    2017ರ ಚುನಾವಣೆಯಲ್ಲಿ 77 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್‌ ಈ ಬಾರಿ 20ಕ್ಕಿಂತಲೂ ಕಡಿಮೆ ಸ್ಥಾನ ಪಡೆದಿದೆ.
    ಇದನ್ನೂ ಓದಿ: ಗುಜರಾತ್‌ನಲ್ಲಿ ಆಪ್‌ಗೆ ಬಿಜೆಪಿಯಿಂದಲೇ ಫಂಡಿಂಗ್: ಸಿದ್ದರಾಮಯ್ಯ

    ಹಿನ್ನಡೆ ಹೇಗಾಯ್ತು?
    ಮುಸ್ಲಿ ಮತದಾರರು ಜಾಸ್ತಿ ಇರುವ 17 ಕ್ಷೇತ್ರಗಳಲ್ಲಿ ಪೈಕಿ ಬಿಜೆಪಿ(BJP) 12ರಲ್ಲಿ ಜಯ ಪಡೆದರೆ ಕಾಂಗ್ರೆಸ್‌ 5 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.

    ಕಳೆದ 10 ವರ್ಷದಿಂದ ದರಿಯಾಪುರ ಕ್ಷೇತ್ರವನ್ನು ಕಾಂಗ್ರೆಸ್‌ ಗೆದ್ದುಕೊಂಡು ಬರುತ್ತಿತ್ತು. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಕೌಶಿಕ್‌ ಜೈನ್‌ ವಿರುದ್ಧ ಗ್ಯಾಸುದ್ದೀನ್‌ ಶೇಕ್‌ ಸೋತಿದ್ದಾರೆ.

     

    ಆಮ್‌ ಆದ್ಮಿ ಮುಸ್ಲಿಮ್‌ ಪ್ರಾಬಲ್ಯವಿರುವ 16 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಎಐಎಂಐಎಂ 13 ಕಡೆ ಸ್ಪರ್ಧೆ ನಡೆಸಿತ್ತು. ಈ ಎರಡು ಪಕ್ಷಗಳು ಖಾತೆ ತೆರೆಯದೇ ಇದ್ದರೂ ಕಾಂಗ್ರೆಸ್‌ನ ಮುಸ್ಲಿಮ್‌ ಮತಗಳನ್ನು ಒಡೆಯುವಲ್ಲಿ ಯಶಸ್ವಿಯಾಗಿದೆ.

    ಆಪ್‌ ಹೆಚ್ಚಾಗಿ ನಗರ ಪ್ರದೇಶಗಳನ್ನೇ ಕೇಂದ್ರಿಕರಿಸಿತ್ತು ಮತ್ತು ಕಾಂಗ್ರೆಸ್ ಕಡಿಮೆ ಅಂತರದಲ್ಲಿ ಗೆದ್ದ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿತ್ತು. ಬಿಜೆಪಿ, ಕಾಂಗ್ರೆಸ್ ಬಲಿಷ್ಠವಾಗಿರುವ ಕ್ಷೇತ್ರಗಳನ್ನು ಕೇಂದ್ರಿಕರಿಸದೇ ನೆಪ ಮಾತ್ರಕ್ಕೆ ಸ್ಪರ್ಧೆ ಮಾಡಿತ್ತು. ಅಷ್ಟೇ ಅಲ್ಲದೇ ಬಿಜೆಪಿಗೆ ಕಾಂಗ್ರೆಸ್ ಬದಲು ತಮ್ಮನ್ನು ವಿಪಕ್ಷದಂತೆ ಆಪ್ ಗುರುತಿಸಿಕೊಂಡಿತ್ತು. ಈ ಮೂಲಕ ಬಿಜೆಪಿ ಬದಲಾವಣೆ ಬಯಸುವ ಮತದಾರರನ್ನು ತಲುಪಲು ಆಪ್‌ ಯತ್ನ ಮಾಡಿತ್ತು.

    ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ್ದು ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಅಪರಾಧಿಗಳನ್ನು ಹೂಮಾಲೆ ಹಾಕಿ ಹಿಂದೂ ಸಂಘಟನೆ ಸ್ವಾಗತ ಮಾಡಿತ್ತು. ಅಪರಾಧಿಗಳ ಬಿಡುಗಡೆ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿ “ಸಂಸ್ಕಾರಿ ಬ್ರಾಹ್ಮಣರು” ಎಂದು ಬಣ್ಣಿಸಿದ್ದ ಬಿಜೆಪಿ ನಾಯಕ ಚಂದ್ರಸಿನ್ಹಾ ರೌಲ್ಜಿ ಗೋಧ್ರಾದಲ್ಲಿ ಮುನ್ನಡೆಯಲಿದ್ದಾರೆ. ಈ ಕ್ಷೇತ್ರದಿಂದ 6 ಬಾರಿ ರೌಲ್ಜಿ ಗೆದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]